Facebook

Archive for 2015

ನಾಯಿಮರಿಯ ಇಂಗ್ಲೀಷೂ.. ಕೇಶಣ್ಣನ ಹಲ್ಲು ಸೆಟ್ಟೂ..: ಅನಿತಾ ನರೇಶ್ ಮಂಚಿ

ಮಕ್ಕಳಿಗೆ ಯಾವಾಗಲೂ ಮನುಷ್ಯರಿಗಿಂತ ಪ್ರಾಣಿಗಳೇ ಇಷ್ಟವಾಗುವುದು. ಇನ್ನೂ ನಡೆಯಲು ಬಾರದ ಪುಟ್ಟು ಮಕ್ಕಳನ್ನು ಕೇಳಿ ನೋಡಿ. ’ಮನೆಯಲ್ಲಿ ಆಡಲಿಕ್ಕೆ ಆಟದ ಸಾಮಾನು ಕೊಡ್ತೀನಿ, ತಿನ್ನೋದಿಕ್ಕೆ ತಿಂಡಿ ಕೊಡ್ತೀನಿ’ ಎಂದೆಲ್ಲಾ ಗೋಗರೆದರೂ ಬಾರದಿರುವ ಮಕ್ಕಳು ’ಮನೆಯಲ್ಲಿ ನಾಯಿ ಮರಿ ಇದೆ, ಬೆಕ್ಕಿನ ಮರಿ ಇದೆ, ಪುಟಾಣಿ ಉಂಬೆ ಕರು ಇದೆ ಬರ್ತೀಯಾ’ ಅಂದ ಕೂಡಲೇ ಅಮ್ಮನ ತೆಕ್ಕೆ ಬಿಡಿಸಿಕೊಂಡು ಚಾಚಿರುವ ನಮ್ಮ ಕೈಗೆ ಹಾರುತ್ತವೆ. ಬೇರೆಯವರ ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ನೋಡಿ ಸಂತಸ ಪಡುವುದೇನೋ ಸರಿ. ಆದರೆ ನಮ್ಮಲ್ಲೂ […]

ಸೂರ್ಯನ ಸುತ್ತುವ ಗ್ಲೋಬು ಮತ್ತು ನ್ಯೂಟನ್ನಿನ ಸೇಬು: ರೋಹಿತ್ ವಿ. ಸಾಗರ್

ಮೊನ್ನೆ ಹತ್ತಿರದ ಪ್ರಾಥಮಿಕ ಶಾಲೆಯೊಂದರ ಬಳಿ ಹೋಗುತ್ತಿದ್ದೆ, ಮೈದಾನದಲ್ಲಿ ‘ಸೂರ್ಯ’ ಎಂಬ ಫಲಕ ಹಿಡಿದ ಒಬ್ಬ ಹುಡುಗ ನಿಂತಿದ್ದ, ಆ ಶಾಲೆಯ ಮೇಷ್ಟ್ರು ಕೈಯಲ್ಲಿ ಒಂದು ಗ್ಲೋಬು ಹಿಡಿದು ಆ ಹುಡುಗನ ಸುತ್ತಾ ಸುತ್ತುತ್ತಿದ್ದರು ಉಳಿದವರು ಅವರಿಬ್ಬರನ್ನೇ ಬಾಯಿ ಕಳೆದುಕೊಂಡು ನೋಡುತ್ತಾ ನಿಂತಿದ್ದರು ನಾನೂ ಅವರನ್ನು ಸೇರಿಕೊಂಡೆ. ಅವರೇಕೆ ಹಾಗೆ ಮಾಡುತ್ತಿದ್ದಾರೆ ಎಂದು ಆ ಕ್ಷಣ ಅರ್ಥವಾಗಲಿಲ್ಲ, ಆಮೇಲೆ ವಿಷಯ ಹೊಳೆಯಿತು, ಗ್ರಹಗಳ  ಚಲನೆಯ ಬಗ್ಗೆ ಪಾಠ ಮಾಡಲು ಆ ಶಿಕ್ಷಕ ಈ ಚಟುವಟಿಕೆಯನ್ನು ಮಾಡಿಸುತ್ತಿದ್ದರು.  ಈಗ […]

ಲಿನಕ್ಸ್ install ಮಾಡೋದು ಹೇಗೆ ?: ಪ್ರಶಸ್ತಿ ಪಿ.

ಕಂಪ್ಯೂಟರನ್ನು ಹೆಚ್ಚೆಚ್ಚು ಬಳಸೋರಿಗೆ ಲಿನಕ್ಸೆನ್ನೋದು ಪರಿಚಿತವಾದ್ರೂ ಹೊಸದಾಗಿ ಬಳಸೋರಿಗೆ ಅದ್ರ ಬಗ್ಗೆ ಇಲ್ಲದ ಭಯ ಇರ್ಬೋದು.ಏ ಲಿನಕ್ಸು ಸಿಕ್ಕಾಪಟ್ಟೆ ಕಷ್ಟ ಮಾರಾಯ, ಎಲ್ಲದಕ್ಕೂ ಕಮಾಂಡ್ ಕೊಡ್ತಾ ಕೂರ್ಬೇಕು ಅಂತ ಓಬಿರಾಯನ ಕಾಲದಲ್ಲಿ ಯಾರೋ ಹೇಳಿದ್ದನ್ನೇ ನಂಬಿಕೊಂಡು ಕೂರೋರು ಅದ್ರಲ್ಲಿ ಎಷ್ಟು ಪ್ರತಿಶತ ಸತ್ಯವಿದೆ ಅಂತ ಪರೀಕ್ಷಿಸಲೂ ಹೋಗೋಲ್ಲ. ಕಂಪ್ಯೂಟರ್ ಕೊಳ್ಳುವಾಗ ಕೆಲವೇ ಕೆಲವು ಕಂಪ್ಯೂಟ್ರುಗಳ ಜೊತೆಗೆ ಮಾತ್ರ ಒರಿಜಿನಲ್ ವಿಂಡೋಸ್ ಬರುತ್ತೆ. ಉಳಿದಿದ್ದೆಲ್ಲಾ ಪೈರೇಟೆಡ್ ಅಥವಾ ಕಳ್ಳಮಾಲು ! ಚೈನಾ ಬಜಾರ್ಗೆ ಹೋಗಿ ಒಂದು ಕಳ್ಳಮಾಲಿನ ಶರ್ಟೋ […]

ಹರಕೆ ತೀರಿತ್ತು…! (ಮೊದಲ ಭಾಗ) : ಸಾವಿತ್ರಿ ವಿ. ಹಟ್ಟಿ

ದೀಪಿಕಾ ಮೇಲೆದ್ದು ಕುಳಿತಳು. ಎಷ್ಟೊ ಹೊತ್ತು ನಿದ್ರೆ ಬಾರದೆ ಸೆಖೆ ಸೆಖೆ ಎಂದು ಒದ್ದಾಡುತ್ತಲೆ ಇದ್ದ ಪತಿ ನಾಗರಾಜ ಅದೇ ದನೇ ನಿದ್ರೆ ಹೋಗಿದ್ದ. ಗಡಿಯಾರದ ಕಡೆ ನೋಡಿದಳು. ಆಗಲೆ ಮಧ್ಯರಾತ್ರಿ. ಪಕ್ಕದಲ್ಲಿ ಮಕ್ಕಳು ಲೋಕದ ಯಾವ ಚಿಂತೆಯ ಸೋಂಕೂ ಇಲ್ಲದೆ ಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ನಿದ್ರೆ ಸನಿಹವೂ ಸುಳಿಯುತ್ತಿಲ್ಲ. ಅವಳ ಒಡಲು ಬೆಂಕಿಗೆ ಆಹುತಿಯಾಗಿ ದಗದಗಿಸುತ್ತಿದೆ. ಕಟು ಸತ್ಯ ಸಂಗತಿಯನ್ನು ತಿಳಿದುಕೊಂಡಾಗಲೆ ಎದೆ ಬಿರಿದು ಎರೆಭೂಮಿ ಬಾಯಿ ಬಿಟ್ಟಂತಾಗಿದೆ. ಕಣ್ಣುಗಳಲ್ಲಿ ಆ ಮದ್ಯಾಹ್ನದವರೆಗೂ ನಳನಳಿಸುತ್ತಿದ್ದ […]

ಅಲ್ಲಿ ಮಾವಿಗೆ ಮರಣದಂಡನೆ – ಇಲ್ಲಿ ಕಾಡೆಮ್ಮೆ ಕರುವಿನ ದುರಂತ: ಅಖಿಲೇಶ್ ಚಿಪ್ಪಳಿ

ನೈಸರ್ಗಿಕ ಸಂಪತ್ತನ್ನು ಬರಿದು ಮಾಡಲು ಯಾರೆಲ್ಲಾ, ಏನೆಲ್ಲಾ ದಾರಿಗಳನ್ನು ಹುಡುಕುತ್ತಾರೆ. ಪಶ್ಚಿಮಘಟ್ಟಗಳ ಕಾಡನ್ನು ಬರಿದು ಮಾಡಲಾಗಿದೆ. ಅಳಿದುಳಿದ ಅರಣ್ಯವನ್ನು ನುಂಗಿ ನೊಣೆಯುವ ಹಂತಕ್ಕೆ ಸರ್ಕಾರವೇ ಬಂದು ನಿಂತಿದೆ. ನಮ್ಮ ಘನ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, ನೀಲಗಿರಿ, ಅಕೇಶಿಯಾದ ಕೆಲವು ತಳಿಗಳು, ಅಡಕೆ-ತೆಂಗಿನ ಮರಗಳು, ನಿಂಬೆ-ಪೇರಳೆ ಗಿಡ, ಕಾಫಿ ಗಿಡ, ಹಳದಿ ಬಿದಿರು, ಹೆಬ್ಬೇವು, ಶಮೆಗಳ ಹೀಗೆ ಒಟ್ಟು 26 ಗಿಡ-ಮರಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದರಿಂದ ವಿನಾಯತಿ ನೀಡಲಾಗಿದೆ. ಅಂದರೆ, ಅರಣ್ಯ […]

ಜೇ.ಸಿ.ಬಿ!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು.  …ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ […]

ಮೂರು ಕವಿತೆಗಳು: ಸಂತೋಷಕುಮಾರ ಸೋನಾರ, ಲಕ್ಷ್ಮೀಕಾಂತ ಇಟ್ನಾಳ, ನಳಿನಾಕ್ಷಿ ಹೀನಗಾರ್

ಅಪ್ಪ ಬೆಂಕಿ ಉಗುಳುವ ಕಣ್ಣು| ಘರ್ಜಿಸುವ ದನಿ| ಹೃದಯ ಸೂಕ್ಷ್ಮ | ಒಮ್ಮೊಮ್ಮೆ ಉಗ್ರ ಪ್ರತಾಪಿ | ಮಗದೊಮ್ಮೆ ಮಗುವಿನ ಮನಸ್ಸು|  ಅರ್ಥಕ್ಕೆ ನಿಲುಕದಾ ನನ್ನ ಅಪ್ಪ ನೆನಪಾಗುತ್ತಾರೆ !   ಏನೀ ಪ್ರಶ್ನೆಗಳು? ಈ ಹಳೆಯ ಕಾಲದ ಮಂದಿ| ಏನೇನೋ ಕೇಳುವರು ದೊಡ್ಡ ವೈದ್ಯರಿಗೇ ಪ್ರಶ್ನೆ | ಈ ನರ್ಸುಗಳು |  ಬಿಳಿ ಬಟ್ಟೆ ವೈದ್ಯರು ಕಂಡಾಪಟ್ಟೆ ಓದಿದವರು|  ಆತನ ಪ್ರಶ್ನೆಗಳಿಗೆ ಉತ್ತರಿಸಲಾರರು ಅದಕ್ಕೆ ಅಪ್ಪ ನೆನಪಾಗುತ್ತಾರೆ ! ಇನ್ನೂ ಈ ಮಕ್ಕಳು ಮರಿಗಳು? ಚಿಕ್ಕವರಿದ್ದಾಗ […]

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾದವ ಯುವ ಸನ್ಯಾಸಿಯೊಬ್ಬ ಜ್ಞಾನೋದಯದ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆಂದು ಗುರುಗಳು ಒಂದು ದಿನ ಘೋಷಿಸಿದರು. ಈ ವಾರ್ತೆ ಸಂಭ್ರಮಕ್ಕೆ ಕಾರಣವಾಯಿತು. ಯುವ ಸನ್ಯಾಸಿಯನ್ನು ನೋಡಲು ಕೆಲವು ಸನ್ಯಾಸಿಗಳು ಹೋದರು. “ನಿನಗೆ ಜ್ಞಾನೋದಯವಾಗಿದೆ ಎಂಬ ಸುದ್ದಿ ಕೇಳಿದೆವು. ಅದು ನಿಜವೇ?” ಕೇಳಿದರು ಸನ್ಯಾಸಿಗಳು. “ಅದು ನಿಜ,” ಉತ್ತರಿಸಿದ ಯುವ ಸಂನ್ಯಾಸಿ. “ಈಗ ನೀನು ಹೇಗಿರುವೆ?” ವಿಚಾರಿಸಿದರು ಸಂನ್ಯಾಸಿಗಳು. “ಎಂದಿನಂತೆ ದುಃಖಾರ್ತ,” ಪ್ರತಿಕ್ರಿಯಿಸಿದ ಯುವ ಸಂನ್ಯಾಸಿ ***** ೨. ಸಭ್ಯಾಚಾರ ಒಂದು ದಿನ ಆ ಪ್ರಾಂತ್ಯದ ಆಡಳಿತದ ಜವಾಬ್ದಾರಿ […]

ಕಿರು ಲೇಖನಗಳು: ಕುಮಾರಿ ವರ್ಷಾ

ಪರಿವರ್ತನೆ ಒಂದು ಊರಲ್ಲಿ ಪುಟ್ಟ ಎಂಬ ಹುಡುಗ ಇದ್ದ.ಇವನು ಆ ಊರಿನ ಕಿಲಾಡಿ ಕಿಟ್ಟ ಮುಂಜಾನೆಯಿಂದ ಸಂಜೆಯವರೆಗೆ ಆಟ ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಇವನ ತಂದೆ ತಾಯಿಯೂ ರೈತಾಪಿ ಜನರು.ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮತ್ತೇ ರಾತ್ರಿನೇ ಮನೆಗೆ ಬರುತ್ತಿದ್ದರು. ಹೀಗಾಗಿ ಅವರಿಗೆ ಮಗ ಏನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಿಲ್ಲ. ಪಾಲಕರು ಯಾವಾಗಲೂ ತಮ್ಮ ಮಕ್ಕಳು ಆದರ್ಶ ವ್ಯಕ್ತಿಗಳಾಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ಪುಟ್ಟನ ತಂದೆ ತಾಯಿಯೂ ಸಹ, ತಮ್ಮ […]