Facebook

Archive for 2015

ಹನಿ ನೀರಿಗೆ ಸಮುದ್ರದಷ್ಟು ಪ್ರೀತಿ ..: ಅನಿತಾ ನರೇಶ್ ಮಂಚಿ

 ಇಡೀ ಮಳೆಗಾಲ  ಇವರು ಬಾರದೇ ಇದ್ದಾಗ ಸಿಟ್ಟು ಉಕ್ಕೇರುತ್ತಿತ್ತು. ಅಲ್ಲಾ.. ದೂರದಲ್ಲಿ ಕಂಡರೂ ಗುರುತಿಲ್ಲದವರಂತೆ ಕತ್ತು ಕೊಂಕಿಸಿ, ಮುಖ ಕುಣಿಸಿ ಮಾಯವಾಗುತ್ತಿದ್ದರಲ್ಲದೇ ಮನೆ ಕಡೆಗೆ ಸುಳಿಯುತ್ತಿರಲಿಲ್ಲ.. ಎಷ್ಟು ಸೊಕ್ಕು ಅಂದುಕೊಂಡರೂ ಹಾಗೇನಿರಲಾರದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಲೂ ಇದ್ದೆ. ಅಯ್ಯೋ.. ನಿಮಗೆ ಇವರು ಯಾರು ಅಂತ ಮೊದಲು ಪರಿಚಯ ಮಾಡಿಕೊಡದೆ ನನ್ನ ಗೋಳು ತೋಡ್ಕೊಳ್ತಾ ಇದ್ದೀನಲ್ಲಾ.. ಇವರು ಅಂದರೆ ಹಕ್ಕಿಗಳು ಸ್ವಾಮೀ.. ಮಳೆಗಾಲದಲ್ಲಿ ಹೊರಗೆ ನೀರಿನ ಲಭ್ಯತೆ ಇರುವ ಕಾರಣ ಇವರ ಹಾರಾಟ ಕೂಗಾಟವೆಲ್ಲಾ ದೂರದಲ್ಲೇ […]

ಕಣ್ಣರಿಯದ ವಿಜ್ಞಾನ, ಈ ನ್ಯಾನೋ ತಂತ್ರಜ್ಞಾನ: ರೋಹಿತ್ ವಿ. ಸಾಗರ್

ಆಟೋ ರಿಕ್ಷಾಗಳ ರೀತಿ ಸದ್ದು ಮಾಡುತ್ತಾ, ಹಳ್ಳಿಯಿಂದ ದಿಲ್ಲಿವರೆಗಿನ ರಸ್ತೆಗಳಲ್ಲಿ ಇಲಿಮರಿಗಳಂತೆ ಓಡಾಡುತ್ತಿರುವ, ಹೆದ್ದಾರಿಗಳಲ್ಲಿ ಇನ್ನೇನು ಲಾರಿಗಳ ಅಡಿಯಲ್ಲೇ ದಾಟಿ ಬಿಡುತ್ತವೇನೋ ಎಂಬ ಕಲ್ಪನೆಗಳನ್ನ ಹುಟ್ಟುಹಾಕಿದ ನ್ಯಾನೋ ಎಂಬ ಕಾರುಗಳ ಬಗ್ಗೆ ಖಂಡಿತವಾಗ್ಯೂ ಕೇಳಿಯೇ ಇರುತ್ತೀರಿ. ಆ ಕಾರಿನ ಆಕಾರ ಕುಬ್ಜ ರೀತಿಯದ್ದು ಎಂಬುದನ್ನು ಸಾರಿ ಹೇಳಲಿಕ್ಕೆ ನ್ಯಾನೋ ಎಂಬ ಹೆಸರನ್ನು ಟಾಟಾ ಕಂಪನಿ ಬಳಸಿಕೊಂಡಿತು. ಗ್ರೀಕ್ ಬಾಷೆಯ ಪದವಾಗಿರುವ ಈ ’ನ್ಯಾನೊ’ದ ಅರ್ಥ ’ಕುಬ್ಜ’ ಎಂದು, ಆದರೆ ನಮ್ಮ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ […]

ಮೋವ: ಅಖಿಲೇಶ್ ಚಿಪ್ಪಳಿ

    ಆಕಾಶದಿಂದ ೮೦ ಕಿ.ಮಿ. ವೇಗದಲ್ಲಿ ಇಳಿದು ತನ್ನ ಬಲಿಷ್ಟವಾದ ಕೊಕ್ಕಿನಿಂದ ಹದಿನೈದಡಿ ಎತ್ತರದ ಗಿಡದ ಎಲೆಗಳನ್ನು ಮೇಯುತ್ತಿದ್ದ ೧೨ ಅಡಿ ಎತ್ತರದ ದೈತ್ಯ ಪಕ್ಷಿಯ ಹಿಂಭಾಗಕ್ಕೆ ಬಲವಾಗಿ ಕುಕ್ಕುತ್ತದೆ. ೮ನೇ ಮಹಡಿಯಿಂದ ಬೀಳುವ ಬೂದಿಯ ಇಟ್ಟಿಗೆಯಷ್ಟು ವೇಗವಾಗಿ ಅಪ್ಪಳಿಸಿದ ಹೊಡೆದಕ್ಕೆ ದೈತ್ಯ ಪಕ್ಷಿ ಧರಾಶಾಯಿಯಾಗುತ್ತದೆ. ಮಾರಣಾಂತಿಕವಾದ ಗಾಯದಿಂದ ರಕ್ತ ಬಸಿದು, ಬಲಿ ಅಸುನೀಗುತ್ತದೆ. ಬಲಿಗಿಂತ ಸುಮಾರು ೧೫-೨೦ ಪಟ್ಟು ಚಿಕ್ಕದಿರುವ ಹಾಸ್ತಸ್ ಎಂಬ ಹೆಸರಿನ ಗಿಡುಗಕ್ಕೆ ಮುಂದಿನ ಒಂದು ವಾರ ಬೇರೆ ಬೇಟೆ ಬೇಕಿಲ್ಲ. […]

ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ.. ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.   “ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು.  ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ […]

ಆರಭಿ: ಅಭಿಲಾಷ್ ಟಿ.ಬಿ.

         ಉರಿ ಬಿಸಿಲು, ಬೇಸಿಗೆ ರಜ, ಮೇ ತಿಂಗಳ ಮೊದಲ ವಾರದಲ್ಲೇ ಸೂರ್ಯ ತನ್ನ ದರ್ಪವನ್ನು ತೋರುಸುತ್ತಿದ್ದಾನೆ. ಬೆಳ್ಳಿಗ್ಗೆ ಒ೦ಭತ್ತುಮುಕ್ಕಾಲು ಘ೦ಟೆ, ಲಕ್ಷ್ಮೀ ಆ೦ಟಿ ಆಫೀಸ್ಗೆ ಹೊರಡುವ ಸಮಯ. ಬಿಸಿಲು ಹೆಚ್ಚು ತಾಕದಿರಲಿ ಎ೦ದು ನೀಲಿ ಬಣ್ಣದ ಛತ್ರಿಯನ್ನು ಹಿಡಿದು ಗೇಟ್ ಬಾಗಿಲಿಗೆ ಬೀಗ ಹಾಕುತ್ತಿದ್ದರು. ಮಹಡಿ ಮೇಲಿನ ಗ್ರಿಲ್ ಸ೦ಧಿಯಿ೦ದ ಇಣುಕಿ, "ಅಮ್ಮ, ಬರ್ತಾ ಸಾಯ೦ಕಾಲ ಬಾಲ್ ಐಸ್ ಕ್ರೀಮ್ ತರುತ್ತೀಯಾ" ಎ೦ದು ಒಂದು ಮಗು ಮುದ್ದಾಗಿ ಕೇಳಿತು. ಮುಖದಲ್ಲಿ ಆತುರದ ಭಾವನೆ […]

ಮೂವರ ಕವಿತೆಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ, ಕು.ಸ.ಮಧುಸೂದನ್

ಕೊಳದ ದಡ ಬೇಟೆ ಸಲುವಾಗಿ ಧ್ಯಾನಸ್ಥ ಕೊಕ್ಕರೆ ಬುದ್ಧನಲ್ಲ ~•~ ತಂಗಾಳಿಯ ಹಾದಿ ಚಲಿಸಿದೆ ಪರಿಮಳ ಹಾರಿತು ಚಿಟ್ಟೆ ಉದುರಿದವು ಹಣ್ಣೆಲೆಯ ~•~ ಪಶ್ಚಿಮ ಶಿಖರದ ಮೇಲೆ ನೇಸರನ ಜಾರುಬಂಡಿ ಮುಂಜಾಗ್ರತೆಗೆ ಮಡಿಲು ತೆರೆದಳು ಇಳೆ ~•~ ಆಷಾಡದ ಗಾಳಿ ತರಗೆಲೆಗೆ ಕಲಿಸಿದೆ ಓಟ ~•~ ಜೇಡದ ಮನೆ ಮುರಿಯಲು ಹೋಗಿ ನೊಣ ಬಲೆಯೊಳಗೆ ಬಲಿ ~•~ ಮಲಗಿರುವ ಸೂರ್ಯನಿಗೆ ಮುಂಜಾನೆ ಸುಪ್ರಭಾತ ಕೊಕ್ ಕೊಕ್ ಕೋ ~•~ ಬೆತ್ತಲೆ ಚಂದಿರ ಬೆತ್ತಲೆ ಮರ ಕತ್ತಲ ಉಡುಗೆ […]

ಶನಿ-ಮನ್ಮಥ ಯೋಗ: ಎಸ್.ಜಿ. ಸೀತಾರಾಮ್

ಮನ್ಮಥ ಮತ್ತು ಶನಿ ಎಂಬ ಎರಡು ಅತ್ಯುಜ್ವಲ ಶಕ್ತಿಗಳು ಡಿಕ್ಕಿ ಹೊಡೆದಿರುವುದರಿಂದಾಗಿ, ಪ್ರಸಕ್ತ ಶಾಲೀವಾಹನ ಶಕೆ ೧೯೩೮ರಲ್ಲಿ, ಅತಿವಿರಳ ಶನಿ-ಮನ್ಮಥಯೋಗ ಒದಗಿಬಂದಿದೆ. ಇದರಿಂದಾಗಿ ಕೆಲವು ವಿಲಕ್ಷಣ ಬೆಳವಣಿಗೆಗಳಾಗಲಿದ್ದು, ಅತ್ಯಾಶಾವಾದಿಗಳಿಂದಾಗಿ ಉಗಾದಿಯು ’ಉಗ್ರಾದಿ’ಯೇ ಆಗಿ ಬಿಡಬಹುದು ಎಂದು ಕೆಲವು ಆಶಂಕವಾದಿಗಳು ನುಡಿಯತೊಡಗಿದ್ದಾರೆ. ಇದನ್ನು ಕೇಳಿ, ಮೊದಲೇ ಬೇಸಿಗೆಯ ಬೇಗೆಯಿಂದ ಬೇಸತ್ತು ಬೆವರುತ್ತಿರುವ ಪ್ರಜೆಗಳ ಬೇನೆಬೇಗುದಿಗಳು ಮತ್ತಷ್ಟು ಹೆಚ್ಚಾಗಿವೆ. ಹಾಗಾಗಿ, ಇಂದಿನ ಉಷ್ಣಾವರಣದಿಂದ ಪ್ರಜೆಗಳಿಗೆ ಒಂದಿನಿತು ಇನಿದಂಪು ನೀಡಬೇಕೆಂದು, ಶನಿ-ಮನ್ಮಥಯೋಗ ಕುರಿತಂತೆ ಇಲ್ಲೊಂದು  ಕಾಕದೃಷ್ಟಿಯನ್ನೀಯಲಾಗಿದೆ. ಈ ಸಂವತ್ಸರದ ಸ್ವಾರಸ್ಯಗಳಲ್ಲಿ, ಮನ್ಮಥ […]

ಹೂವ ತೋಟದ ಕತೆ: ಪ್ರಶಸ್ತಿ ಪಿ.

ಭಾವಗಳ ತೋಟದಲ್ಲೊಂದು ಹೂವ ಬಯಸಿದ ಮನಕೆ ಆ ಹೂವೊಂದು ಮಾಲೆ ಸೇರಿದ ದಿನ ಬಹಳ ಬೇಸರ. ಹೂವಾಗೋ ಸಮಯದಲ್ಲಿ ಮೊಗ್ಗಾಗುತ್ತಿದ್ದ ಭಾವಗಳೆಲ್ಲಾ ಯಾವಾಗ ನವಿರಾಗಿ ಹೂವಾದವೋ ಗೊತ್ತೇ ಆಗದಂತೆ ಕಳೆದುಹೋಗಿತ್ತಲ್ಲ ಕಾಲ. ಮೊಗ್ಗಾಗಿದ್ದ ಜೀವಗಳೆಲ್ಲಾ ಹೂವಾಗಿ ಒಂದೊಂದಾಗಿ ತೋಟದಿಂದ ಖಾಲಿಯಾಗುತ್ತಿದ್ದರೂ ಮಾಲೆಯಾದರೆ ಆ ಹೂವೊಂದಿಗೇ ಆಗಬೇಕೆಂಬ ಕನಸು ಬೇಸಿಗೆಯ ಬೆವರಂತೆ ಹೆಚ್ಚಾಗುತ್ತಲೇ ಇತ್ತು.ಇನ್ನೊಂದು ಹೊಸ ಮಾಲೆ, ಎನ್ನೆಷ್ಟು ಸಮಯದಲ್ಲಿ ನನ್ನದಿರಬಹುದೆನ್ನುತ್ತಾ ಸುಮ್ಮನೇ ದಿಟ್ಟಿಸಿದವನಿಗೊಮ್ಮೆ ದಿಗ್ರ್ಭಾಂತಿ. ಬಯಕೆ ಬೇಸಿಗೆಯಲ್ಯಾವ ಮಾಯೆಯಲ್ಲಿ ಮಳೆ ಬಂತೋ, ಗೊತ್ತೇ ಆಗದಂತೆ ಕನಸಿನಾಕೃತಿ ಕರಗಿಸಿದ […]

ಗುರುರಾಯರು ತಪವ ಗೈದ ಪಂಚಮುಖಿ ಸುಕ್ಷೇತ್ರ: ಹೊರಾ. ಪರಮೇಶ್ ಹೊಡೇನೂರು

ಪವಿತ್ರ ಗಂಗೆ ತುಂಗಭದ್ರಾ ನದಿ   ತೀರದಲ್ಲಿ ಶ್ರೀ ಗುರು ಸಾರ್ವಭೌಮರು ಮಂತ್ರಾಲಯದಲ್ಲಿ ಐಕ್ಯಗೊಂಡ ನಂತರ ಆ ಪುಣ್ಯ ಬೃಂದಾವನ ನಾಡಿನಾದ್ಯಂತ ದೈವಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿ ಬೆಳೆದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಗಾಣಧಾಳ ಗ್ರಾಮದ ಹೊರ ಭಾಗದಲ್ಲಿ ಅದೇ ಗುರುರಾಯರು 16ನೇ ಶತಮಾನದಲ್ಲಿ ಸುಮಾರು 12 ವರ್ಷಗಳ ಸುದೀರ್ಘ ತಪಸ್ಸು ಮಾಡಿ ಪಂಚಮುಖಿ ಆಂಜನೇಯ ಸ್ವಾಮಿಗಳ ದರ್ಶನ ಭಾಗ್ಯ ಪಡೆದ ಪವಿತ್ರ ಭೂಮಿಯು ಇಂದು 'ಪಂಚಮುಖಿ ಪ್ರಾಣದೇವರ ಗುಡಿ' ಎಂದೇ ಖ್ಯಾತಿ […]

ಥ್ರೀರೋಜಸ್ ಕಥೆ (ಕೊನೆಯ ಭಾಗ): ಸಾವಿತ್ರಿ ವಿ. ಹಟ್ಟಿ

ಇಲ್ಲಿಯವರೆಗೆ ಇದಾದ ನಂತರ ಮತ್ತೊಮ್ಮೆ ಅವರ ಕಾಲೇಜಿನ ಹತ್ತಿರ ಹೋಗಲು ನಾವು ಸಮಯ ಹೊಂಚುತ್ತಿದ್ದೆವು. ಬನ್ನಿಹಬ್ಬದ ದಿನ ಭೆಟ್ಟಿ ಮಾಡಬೇಕೆಂದುಕೊಂಡರೂ ಸರಿ ಅನ್ನಿಸಲಿಲ್ಲ. ಏಕೆಂದರೆ ಅಂದು ಬಾನುವಾರ. ಝಡ್ ಪಿಯ ಸಲಹೆಯ ಮೇರೆಗೆ ಶನಿವಾರ, ಅವರ ವಿರಾಮದ ಅವಧಿಯಲ್ಲಿ ಅವರನ್ನು ಭೆಟ್ಟಿ ಮಾಡಿದ್ದೆವು. ಪರಸ್ಪರರು ಬನ್ನಿ ಹಂಚಿಕೊಂಡು ಖುಷಿಯಾಗಿ ಹರಟಿದೆವು. ಪಿ.ಯು ದಿನಗಳನ್ನು ಸ್ಮರಿಸಿಕೊಂಡು ನಕ್ಕೆವು. ಮಾತಿನ ಮಧ್ಯೆ ಮದುವೆ ವಿಷಯಕ್ಕೆ ಬಂದಾಗ ವಂದನಾ ಓದು, ನೌಕರಿ ಆದ ನಂತರವೇ ಮದುವೆ ಆಗುವುದಾಗಿಯೂ, ತನ್ನ ತಂದೆ ತಾಯಿಗೂ […]