Facebook

Archive for 2015

ಲೈಕು ಕಾಮೆಂಟುಗಳಲ್ಲಿ ಮರೆಯಾದ ಲೈಫು: ಪ್ರಶಸ್ತಿ ಪಿ.

ಮೊನ್ನೆ ವಾಟ್ಸಾಪಲ್ಲೊಂದು ವೀಡಿಯೋ ನೋಡ್ತಿದ್ದ್ರೆ. ಒಬ್ಬ ಸಮುದ್ರದಲ್ಲಿ ಮುಳುಗೋಕೆ ಅಂತ ಕಡಲಮಧ್ಯದಲ್ಲಿ ತಯಾರಾಗಿ ಕೂತಿರ್ತಾನೆ. ಮೀನುಗಳು ಅವನ ಕಡಲ ವಸ್ತ್ರ ತೊಟ್ಟ ಕಾಲಿಗೆ ಮುತ್ತಿಕ್ಕುತಿರುತ್ವೆ. ಆದ್ರೆ ಅವ ತನ್ನ ಸ್ಮಾರ್ಟ್ ಫೋನಲ್ಲಿ ಏನೋ ಮಾಡೋದ್ರಲ್ಲಿ ಬಿಸಿ ! ಇನ್ನೊಬ್ಬ ಟಾಯ್ಲೆಟ್ಟಲ್ಲಿ ತಾನು ಬಂದ ಕೆಲಸವನ್ನೇ ಮರೆತು ಸ್ಮಾರ್ಟ್ ಫೋನಲ್ಲಿ ಮುಳುಗಿ ಅದನ್ನಲ್ಲಿ ಬೀಳಿಸಿಕೊಳ್ತಾನೆ. ಮತ್ತೊಬ್ಬಳು ಆಯಿಲ್ ಮಸಾಜ್ ಮಾಡಿಸ್ಕೊಳ್ಳೋಕೆ ಅಂತ ಬಂದ ಪೇಷಂಟನ್ನೂ ಮರೆತು ತನ್ನ ಸ್ಮಾರ್ಟ್ ಫೋನಲ್ಲಿ ಮುಳುಗಿರ್ತಾಳೆ. ಉದಾಹರಣೆಗಳು ಹೀಗೇ ಮುಂದುವರೆದು ಇಷ್ಟೆಲ್ಲಾ ಹಚ್ಚಿಕೊಳ್ಳುವಿಕೆ(addiction) […]

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾಪ್ರಭುವಿನ ಮಕ್ಕಳು ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ. ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು. ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು. “ಹೊಸ […]

ಬಣ್ಣದ ಸಂಜೆ: ಪ್ರಸಾದ್ ಕೆ.

ಬಾನಿನಲ್ಲಿ ಬಣ್ಣಗಳು ಮಾತಾಡತೊಡಗಿದ್ದವು.  ಹೋಳಿ ಹಬ್ಬದ ಸಂಜೆ. ಅವನು ಒಂದರ ಹಿಂದೊಂದು ಸಿಗರೇಟುಗಳನ್ನು ಸುಡುತ್ತಾ ಸುಮ್ಮನೆ ಸಮುದ್ರವನ್ನು ದಿಟ್ಟಿಸುತ್ತಿದ್ದ. ಮಾತನಾಡುವುದಕ್ಕೇನೂ ಇಲ್ಲವೆಂಬಂತೆ ಅವಳೂ ತುಟಿ ಬಿಚ್ಚಲಿಲ್ಲ. ಹನ್ನೊಂದು ವರ್ಷಗಳ ಸುದೀರ್ಘ ಅವಧಿಯ ನಂತರ ಇಬ್ಬರೂ ಆಕಸ್ಮಿಕವಾಗಿ ಪಣಂಬೂರಿನ ಸಮುದ್ರತಟದಲ್ಲಿ ಎದುರುಬದುರಾಗಿದ್ದರು. ಅವನು ಸರಕಾರಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಅವಳು ನಗರದಲ್ಲಿ ತಳವೂರುತ್ತಿರುವ ದಂತ ವೈದ್ಯೆ. ಅಂದಹಾಗೆ ಇಬ್ಬರೂ ಒಂದಾನೊಂದು ಕಾಲದಲ್ಲಿ ಪ್ರೇಮಿಗಳು.  ಎಷ್ಟು ಚೆನ್ನಾಗಿದ್ದ ಇವ ಥೇಟು ಶಾರೂಖನಂತೆ, ಚಾಕ್ಲೇಟು ಬಾಯ್ ಇಮೇಜ್ ಇದ್ದ ಹುಡುಗ. ಒಣಕಲಾಗಿ ಹೋಗಿದ್ದಾನೆ. […]

ಭರವಸೆಯ ಬಣ್ಣದ ಬದುಕು: ಸೀಮಾ ಶಾಸ್ತ್ರಿ

ಧೂಳಿನಿಂದ ಹಳೆಯದಾಗಿದ್ದ ಬೀದಿ ದೀಪವು ಅದರ ಕೆಳಗೆ ಕುಳಿತಿದ್ದ ಆ ಯುವ ಗುಂಪಿನ ಮನದಂತೆ ಮಬ್ಬಾಗಿತ್ತು… ಕತ್ತಲೆಯಲ್ಲಿ ಎಲ್ಲವೂ ಅಸ್ಪಷ್ಟ… ಅಲ್ಲಿದ್ದ ಗೆಳೆಯ ಗೆಳತಿಯರ ಗುಂಪು ಮನದಲ್ಲಿದ್ದ ದುಗುಡವನ್ನು ಹಂಚಿಕೊಳ್ಳುತ್ತಿದ್ದರು. ಊರಿನಲ್ಲಿದ್ದ ಸಾಮಾಜಿಕ ಅನಿಷ್ಟವಾದ ಕೋಮು ಜಗಳದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತಿದ್ದರು. "ಶಿವನೂ ದೇವರೇ, ಅಲ್ಲನೂ ದೆವರೇ ಅಲ್ಲವೇ?  ಅವರೇನು ವೈರಿಗಳಲ್ಲವಲ್ಲ… ಆದರೆ ಅವರನ್ನು ಅನುಸರಿಸೋ ಈ ಹುಲುಮಾನವರಲ್ಲಿ ಯಾಕೆ ಈ ರೀತಿ ?" ಸಲ್ಮಾನ್ ಹೇಳಿದ.  " ನನ್ನ ಪ್ರಕಾರ ಹೇಳೊದಾದ್ರೆ… ಯಾರಿಗೆ […]

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೧೦): ಅಖಿಲೇಶ್ ಚಿಪ್ಪಳಿ

(ಕೊನೆಯ ಕಂತು) ಈ ಲೇಖನ ಮಾಲೆಯಲ್ಲಿ ಎರಡೂ ವರದಿಯ ಹಲವು ವಿಚಾರಗಳನ್ನು ವಿವರವಾಗಿ ನೋಡಲಾಗಿದೆ. ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರಿಗೆ ವರದಿಯ ಪ್ರಾಮಾಣಿಕ ನೋಟ ಬೇಕಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು, ಹೂಡಿಕೆದಾರರು ಹಾಗೂ ರಾಜಕಾರಣಿಗಳು ಸೇರಿಕೊಂಡು ವರದಿಯನ್ನು ತಿರುಚಿ ಜನರನ್ನು ತಪ್ಪ ದಾರಿಗೆ ಎಳೆಯುತ್ತಿದ್ದಾರೆ. ದೂರದೃಷ್ಟಿಯಿಂದ ಯೋಚಿಸುವುದಾದರೆ, ಮಾಧವ ಗಾಡ್ಗಿಳ್ ವರದಿಯು ಹೆಚ್ಚು ಜನಸ್ನೇಹಿ ಹಾಗೂ ಪರಿಸರಸ್ನೇಹಿಯಾಗಿದೆ. ಮಾಧವ ಗಾಡ್ಗಿಳ್ ವರದಿಗೆ ವ್ಯಾಪಕ ವಿರೋಧ ಎದುರಾಗಿದ್ದರಿಂದ, ಈ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಜನಸ್ನೇಹಿ ಹಾಗೂ ಪರಿಸರಸ್ನೇಹಿಗೊಳಿಸುವ ಅಂಶಗಳನ್ನು […]

ಸಾಧಕರ ಶ್ವಾಸ, ಆತ್ಮವಿಶ್ವಾಸ: ಹೊರಾ.ಪರಮೇಶ್ ಹೊಡೇನೂರು

          ವಿದ್ಯಾರ್ಥಿ ಜೀವನದಲ್ಲಿ ಕಲಿಕಾ ಫಲವನ್ನು ಯಶಸ್ವಿಯಾಗಿ ಪಡೆಯಲು ಅಗತ್ಯವಾಗಿ ಬೇಕಾದ ಅಂಶಗಳಲ್ಲಿ ಪ್ರಮುಖವಾದದ್ದು 'ಆತ್ಮವಿಶ್ವಾಸ'. ಎಷ್ಟೇ ಬುದ್ಧಿ ಶಕ್ತಿ, ತಾರ್ಕಿಕ ಸಾಮರ್ಥ್ಯ, ಸೃಜನಶೀಲ ಸ್ವಭಾವ ಹೊಂದಿದ್ದರೂ ಆತ್ಮವಿಶ್ವಾಸ ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. "ಮೇಕೆದಾಟು"ವಿನ ಬಗ್ಗೆ ಗೊತ್ತಲ್ವ. ಹಿಂದೊಮ್ಮೆ ಅಲ್ಲಿ ಮೇಕೆಗಳನ್ನು ಮೇಯಿಸುತ್ತಿರುವಾಗ, ಒಂದು ಮೇಕೆಯು ಕಾಲುವೆಯ ಆಚೆ ಬದಿಯಲ್ಲಿ ಇದ್ದ ಹಸಿರು ಸೊಪ್ಪನ್ನು ತಿನ್ನುವ ಆಸೆ ಉಂಟಾಗಿ, ಅಗಲವಾದ ಆ ಕಾಲುವೆಯನ್ನು ಅಗಾಧವಾದ ಆತ್ಮವಿಶ್ವಾಸದಿಂದ ಒಂದೇ ನೆಗೆತಕ್ಕೆ ಜಿಗಿದು ದಾಟಿ ತನ್ನ […]

ಸಾಮಾನ್ಯ ಜ್ಞಾನ (ವಾರ 68): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ಮೈಸೂರು ಯದು ವಂಶದ ೨೭ನೇ ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು? ೨.    ಇತ್ತೀಚೆಗೆ ೭೫ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ ಕರ್ನಾಟಕದ ಜಿಲ್ಲೆ ಯಾವುದು? ೩.    ಲೇಸರ್ (LASER)ನ ವಿಸ್ತೃತ ರೂಪವೇನು? ೪.    ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? ೫.    ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ಯಾವುದು? ೬.    ಸುಜನ ಇದು ಯಾರ ಕಾವ್ಯ ನಾಮವಾಗಿದೆ? ೭.    ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ ಅಂಗಗಳು ಯಾವುವು? ೮.   […]