Facebook

Archive for 2015

ಬ್ಲಾಕ್ ಎಂಡ್ ಲೈಪ್ ಕಲರ್ ಫುಲ್ ಕನಸು ಕಾಣುತ್ತದೆ: ಅಜ್ಜೀಮನೆ ಗಣೇಶ

“Holi is the day to express love with colors. It is a time to show affection. All the colors that are on you are of love!” ಬಣ್ಣಗಳಲ್ಲೂ ಒಲವಿನ ಒಲುಮೆಯನ್ನೆ ಕಾಣುತ್ತಾನೆ ಕ್ರೇಜಿ ಗುರು ಓಶೋ… ಹೋಳಿ ಬಗ್ಗೆ ಏನಾದ್ರು ಬರೆಯಿರಿ, ಅಂತ ಪಂಜುವಿನ ನಟರಾಜು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ಸಹ ಮತ್ತದೆ ..ಓಶೋ..ಕಾರಣ ಸಿಂಪಲ್.. ಕೈಲಿರೋ ಹಿಡಿ ಬಣ್ಣವನ್ನು ಎದುರಿದ್ದವರ ಮುಖಕ್ಕೆ ಎರಚಿ, ಅವರ […]

ಬೆಳಕು ಮತ್ತು ಅದರೊಂದಿಗೆ ಜೀವನದ ತಳುಕು: ರೋಹಿತ್ ವಿ. ಸಾಗರ್

ಬಹಳ ಹಿಂದಿನಿಂದಲೂ ಮಾನವನ ಕುತೂಹಲವನ್ನು ಅತಿಯಾಗಿ ಕೆರಳಿಸುತ್ತಿರುವ ವಿಷಯಗಳಲ್ಲಿ ಬೆಳಕು ಸಹ ಒಂದು. ನಮ್ಮ ಜೀವನದಲ್ಲಿ  ವಿವಿಧ ಮಜಲುಗಳಲ್ಲಿ ವಿವಿಧ ರೀತಿ-ನೀತಿಗಳಲ್ಲಿ ಬೆಳಕು ನಮ್ಮೊಂದಿಗೆ ಬೆರೆತು ಹೋಗಿದೆ. ಜೊತೆಗೆ ಅವೆಲ್ಲವಕ್ಕೂ ಸಂಬಂಧಪಟ್ಟ ವಿವಿಧ ಪ್ರಶ್ನೆಗಳನ್ನೂ ನಮ್ಮಲ್ಲಿ ಹುಟ್ಟು ಹಾಕುತ್ತಿದೆ. ಬೆಳಕಿನಲ್ಲಿ ಹಸಿರಾದ ಎಲೆ ಹಸಿರಾಗಿಯೇ ಏಕೆ ಕಾಣುತ್ತದೆ ? ಆಕಾಶ ಹಗಲಿನಲ್ಲಿ ನೀಲಿಯಾಗಿ ಬೆಳಗ್ಗೆ ಮತ್ತು ಸಂಜೆ ಕೆಂಪಾಗಿ ಹಾಗೂ ರಾತ್ರಿಯಲ್ಲಿ ಕಪ್ಪಾಗಿ ಕಾಣುವುದೇಕೆ ? ಎಂಬ ಎಷ್ಟೋ ಪ್ರಶ್ನೆಗಳು ನಮ್ಮ ನಿಮ್ಮೆಲ್ಲರ ಮನಗಳಲ್ಲಿ ಹುಟ್ಟುತ್ತವೆಯಾದರೂ, ಉತ್ತರ […]

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆವವಳೂ: ಅನಿತಾ ನರೇಶ್ ಮಂಚಿ

ಹೆಸರು ಕೇಳಿ ಮಾರ್ಚ್ ಎಂಟು ಬಂದೇ ಬಿಡ್ತಲ್ಲಾ ಅಂದುಕೊಳ್ಳಬೇಡಿ. ನಾನಂತೂ ಮಹಿಳೆಯರ ದಿನಾಚರಣೆಯನ್ನು ಒಂದು ದಿನಕ್ಕೆ ಆಚರಿಸುವವಳಲ್ಲ. ಎಲ್ಲಾ ದಿನವೂ ನಮ್ಮದೇ ಅಂದ ಮೇಲೆ ಆಚರಣೆಯ ಮಾತೇಕೆ?  ಸಮಯವೇ ಇಲ್ಲದಷ್ಟು ಗಡಿಬಿಡಿಯಲ್ಲಿರುವಾಗ  ಪ್ರೀತಿ ತುಂಬಿದ ಮಾತುಗಳನ್ನು ಕೇಳಿ ಯಾವಾಗೆಲ್ಲ ಮನಸ್ಸು ಉಲ್ಲಾಸವಾಗುತ್ತೋ ಆ ಎಲ್ಲಾ ದಿನಗಳು ನನ್ನವೇ ಅಂದುಕೊಂಡಿದ್ದೇನೆ. ಈಗ ಮೈನ್ ಮುದ್ದಾ ಕ್ಕೆ ಬರೋಣ. ಸುಮ್ಮನೆ ಅಲ್ಲಿಲ್ಲಿ ಅಲೆಯುವಾಟ ಯಾಕೆ ಬೇಕು?  ತಿಂಡಿಗೆ ಏನು ಮಾಡೋದು?  ಇದೊಂದು ಎಲ್ಲಾ ಮನೆಯ ಗೃಹಿಣಿಯರಿಗೆ ಕಾಡುವ ಮಿಲಿಯನ್ ಡಾಲರ್ […]

ಪಂಜು ಹೋಳಿ ಕಾವ್ಯ ಧಾರೆ

ಹಿಗ್ಗಿನ ಹೋಳಿ ಶೋಭಿಸುತಿದ್ದವು ಮೊಗಗಳು ಬಣ್ಣಗಳ ಸಮ್ಮಿಲನದಿಂದ, ಬೆಳಗುತಿದ್ದವು ಕಣ್ಣುಗಳು ಅಂತರಾಳದಲ್ಲಿರುವ ಆನಂದದಿಂದ, ಥಳಿಥಳಿಸುತಿದ್ದವು ತೊಯ್ದ ಉಡುಪುಗಳು ರಂಗುರಂಗಿನ  ಲೇಪನದಿಂದ. ಎಲ್ಲಾ ದಿನಗಳಲ್ಲಿದ್ದಂತೆ ಆತುರವಿರಲಿಲ್ಲ, ಮಕ್ಕಳಿಗೆ ಶಾಲೆಯ ಗೋಜಿರಲಿಲ್ಲ, ವಯಸ್ಕರಿಗೆ ವೃತ್ತಿಯ ಲಕ್ಷ್ಯವಿರಲಿಲ್ಲ, ವೃದ್ಧರಿಗೆ ಸಂಕೋಚವಿರಲಿಲ್ಲ, ಮಕ್ಕಳಾಗಿದ್ದರು ಎಲ್ಲಾ ಪ್ರಕೃತಿಯ, ಎರಚುತ್ತಾ ರಂಗುರಂಗಿನ ಓಕುಳಿಯ. ಭೇದವಿರಲಿಲ್ಲ ಜಾತಿ, ಮತ, ವರ್ಗಗಳ, ಸುಳಿವಿರಲಿಲ್ಲ ಕಷ್ಟ ಕಾರ್ಪಣ್ಯಗಳ, ಎಲ್ಲರೂ ಭಾಗ್ಯವಂತರು ಅಲ್ಲಿ, ಹಿಗ್ಗಿನ ಸುಗ್ಗಿಯ ಸೊಬಗಿರುವಲ್ಲಿ, ಹಂಚುತಿದ್ದರು ಸಿಹಿ ಸಂತೋಷಗಳ, ಹಚ್ಚುತ್ತಾ ರಂಗುರಂಗಿನ ಬಣ್ಣಗಳ. ಉರಿಸಲಾಗಿತ್ತು ಅಗ್ನಿ ಈಗಾಗಲೇ, ಚಂದಿರನ […]

ರಂಗ್ ರಂಗಿನ ಹೋಳಿಹಬ್ಬದ ಹಿನ್ನೆಲೆ : ಶುಭರಾಣಿ. ಆರ್

ನಮ್ಮ ಭಾರತ ದೇಶದಾದ್ಯಂತ  ಸಡಗರದಿಂದ   ಆಚರಿಸಲ್ಪಡುವ  ರಂಗು ರಂಗಿನ ಹಬ್ಬ  ಹೋಳಿಹಬ್ಬ. ಮಾಘ -ಫಾಲ್ಗುಣ ಮಾಸಗಳ ಶಶಿರ ಋತು  ಮುಗಿದು ಚೈತ್ರ ಮಾಸ ವಸಂತ ಋತು  ಕಾಲಿಡುವಾಗ ಹೊಸಚಿಗುರು ಮೂಡಿ,ಹೂಗಳು  ಅರಳಿನಿಂತು  ನಲಿಯುವಾಗ ನಾವುಗಳು  ಸಂತಸದಿಂದ  ರಂಗಿನಾಟವನ್ನು  ಆಡಲು ತೊಡಗುತ್ತೇವೆ. ಪಾಲ್ಗುಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ  ದಿನದಂದು ಹೋಳಿಹಬ್ಬವನ್ನು  ಆಚರಿಸಲಾಗುತ್ತದೆ.  ಈ ಹಬ್ಬವನ್ನು  ಒಂದೊಂದು ರಾಜ್ಯದಲ್ಲೂ  ಅದರದೆಯಾದ  ನಾಮಾವಳಿಗಳಿಂದ ಆಚರಿಸುವರು. ನಮ್ಮಲ್ಲಿ  "ಹೋಳಿಹಬ್ಬ, ಕಾಮನ ಹಬ್ಬ  ಅಥವಾ ಕಾಮದಹನ ,ರಂಗಿನ ಹಬ್ಬ(ಬಣ್ಣಗಳ ಹಬ್ಬ ) "ಎನ್ನುತ್ತೇವೆ, […]

ಕಾಮಣ್ಣನ ಮಕ್ಕಳು: ಆದರ್ಶ ಸದಾನ೦ದ ಅರ್ಕಸಾಲಿ

ಎ೦.ಬಿ.ಬಿ.ಎಸ್ ನ ಎರಡನೆಯ ಪರ್ವಕ್ಕೆ(phase) ಕಾಲಿಟ್ಟ ಕಾಲ. ಒಟ್ಟು ಒ೦ದೂವರೆ ವರ್ಷದ ಮೂರು ಪರ್ವಗಳಿರುತ್ತವೆ. ಮೊದಲನೆಯ ಪರ್ವದಲ್ಲಿ ಹೊಸ ವಾತಾವರಣಕ್ಕೆ ಹೊ೦ದಿಕೊ೦ಡು, ಹೊಸ-ಹೊಸ ವಿಷಯಗಳನ್ನು ಅರಿತು ತಿಳಿದುಕೊಳ್ಳುವ ಸಾಹಸದಲ್ಲಿ ಸವೆದರೆ, ಎರಡನೆಯ ಪರ್ವ ಇದರ ತದ್ವಿರುದ್ದವಾಗಿ ಮಜಾ ಮತ್ತು ಉಡಾಳತನದಲ್ಲಿ ಕಳೆಯುತ್ತದೆ. ಇದು ತಲೆಮಾರುಗಳಿ೦ದ ಬ೦ದ ಕಟ್ಟುನಿಟ್ಟಾದ ಪದ್ದತಿ. ಮೊದಲನೆಯ ಪರ್ವದಲ್ಲಿ ಅನುಭವಿಸಿದ ಹಿ೦ಸಾಜನಕ ಸ್ಥಿತಿಗಳನ್ನು ( ಸೀನಿಯರ್ ಗಳ ರಾಗಿ೦ಗ್ ನಿ೦ದ ಹಿಡಿದು ವೈವಾ(viva)ದಲ್ಲಿ ಸರ್ ಗಳ ರಾಗಿ೦ಗ್ ) ಮರೆಯಲು, ಅದಾಗಲೇ ದೇಹದಲ್ಲಿ ತಮ್ಮ […]

ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ: ಸಚಿನ್ ಎಂ. ಆರ್.

ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು […]

ಹೋಳಿ ಹಬ್ಬದಲ್ಲಿ ‘ಹಾಲಕ್ಕಿ ಗೌಡರ ಸುಗ್ಗಿ ರಂಗು’: ಎಸ್. ಎಸ್. ಶರ್ಮಾ

ಉತ್ತರ ಕನ್ನಡ ಜಿಲ್ಲೆಯ ಜಾನಪದ ಮತ್ತು ಪಾರಂಪರಿಕ ವಿಶೇಷತೆ ಕರ್ನಾಟಕ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣನೀಯ ಜನಸಂಖ್ಯೆಯಲ್ಲಿರುವ ಹಾಲಕ್ಕಿ ಜನಾಂಗದವರು ಆಚರಿಸುವ ಹೋಳಿಯಲ್ಲಿ ಕಲೆ, ಜಾನಪದ, ಸಂಸ್ಕೃತಿಯ ಜೊತೆಗೆ ಪರಂಪರೆಯ ಸೊಗಡು ವಿಜ್ರಂಭಿಸುವುದನ್ನು ಇಂದಿಗೂ ನೋಡಬಹುದು. ಹೋಳಿಯನ್ನು ಸುಗ್ಗಿ ಸಂಭ್ರಮವಾಗಿ ಊರಿಂದೂರಿಗೆ ಕುಣಿದು ಕುಪ್ಪಳಿಸಿ ರಂಗಾಗುವ 'ರಂಗುರಂಗಿನ' ಹಾಲಕ್ಕಿ ಗೌಡರುಗಳು ಇಲ್ಲಿನ ಬದುಕಿನಲ್ಲಿ ಅಚ್ಚೊತ್ತಿದ ಹೆಜ್ಜೆಗಳ ಕಿರು ಪರಿಚಯ ಇಲ್ಲಿದೆ.  ಕರಾವಳಿ, ಬಯಲುಸೀಮೆ ಹಾಗೂ ಮಲೆನಾಡು ಈ ಮೂರೂ ನಿಸರ್ಗ ಸಹಜ ಲಕ್ಷಣಗಳನ್ನು ಒಳಗೊಂಡಿರುವ ಉತ್ತರ […]

ಮಾನವ ಮತ್ತು ಪ್ರಕೃತಿಯ ಅವಿನಾಭಾವ ಆಚರಣೆ ಹೋಳಿ ಹುಣ್ಣಿಮೆ: ಬೆಳ್ಳಾಲ ಗೋಪಿನಾಥ ರಾವ್

ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳಲ್ಲಿ ಹಬ್ಬ ಹರಿದಿನಗಳು ಮಾನವತೆ ಸ್ನೇಹ ಸೌಹಾರ್ದತೆಯ ಪ್ರತೀಕ. ಅಂತಹ ಸೌಹಾರ್ದತೆಯ ಹಬ್ಬ ಈ ಹೋಳಿ ಹುಣ್ಣಿಮೆ. ಶಿಶಿರದ ಚಳಿಗಾಲ ಮುಗಿದು ಚಿಗುರ ಚೈತ್ರದ ವಸಂತ ಋತು ಆರಂಭವಾಗುವ ಕಾಲ. ಸಕಲ ಜೀವ ರಾಶಿಗಳಲ್ಲಿ ಚೈತನ್ಯ ಚಿಲುಮೆ ಉಕ್ಕಿಸೋ ಮಾಸವಿದು. ಮಾಮರ ಚಿಗುರೊಡೆದು ಕೋಗಿಲೆಯ ದನಿ ಮೂಡುವ ಪವಿತ್ರ ಕಾಲದಲ್ಲೇ ಈ ಹೋಳಿ ಅಥವ ಹೋಲಿ ಹಬ್ಬ ಆಚರಿಸಲ್ಪಡುತ್ತದೆ. ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ವಿಭಿನ್ನ ಚಿತ್ರ ವಿಚಿತ್ರವಾಗಿ ಆಚರಿಸೋ ಹಬ್ಬವಿದು. ನಮ್ಮಲ್ಲಿನ […]

ಅವಳೊಡನೆ ಕೊನೇ ಹೋಳಿ…: ಸಖ್ಯಮೇಧ

ಅವಳ ಕೆನ್ನೆಯ ಗುಳಿ ತುಂಬಾ ಬಣ್ಣ ಬಳಿದ ಆ ಕೊನೇ ಹೋಳಿ ನೆನೆದರೇ ಮನದಲ್ಲಿ ವಿಷಾದದ ಗಾಳಿ ಏಳುತ್ತದೆ. ಏಕೆಂದರೆ ಅದೇ ಕೊನೆ, ಬಣ್ಣದ ಹೋಳಿಯೂ ಅವಳೊಡನೆ ದೂರಾಯಿತು….ಹೋಳಿಯ ತಲೆಬುಡ ತಿಳಿದಿರದಿದ್ದರೂ ಅದೊಂದು ನಿರೀಕ್ಷೆಯ ಹಬ್ಬ. ಬಟ್ಟಲುಕಂಗಳ ಆ ಹುಡುಗಿಯ ನುಂಪು ಕೆನ್ನೆಗಳಿಗೆ ಮೃದುವಾಗಿ ಬಣ್ಣ ಸವರಿ ಕಂಗಳಲ್ಲಿ ಮೂಡುವ ಬೆಳಕು ಕಾಣಲೆಂದು ಕಾತರಿಸಿದ ಹಬ್ಬ. ಜೊತೆಗೆ ಓರಗೆಯವರ ಜತೆಗೂಡಿ ಬಣ್ಣದ ಲೋಕದಲ್ಲಾಡುತ್ತಾ ಕಳೆದು ಹೋಗುವ ಸಂತಸ … ಅಪ್ಪನ ಕಿಸೆಯಿಂದ ಎಗರಿಸುವುದಲ್ಲದೇ ಶಾಲೆಗೆ ನಡೆದುಕೊಂಡೇ ಹೋಗಿ […]