Facebook

Archive for 2014

ಜೀವನದ ಕೆಲವು ಪುಟಗಳಿಂದ

ಆಕೆ ಜಾರಿ ಬಿದ್ದಾಗೆಲ್ಲಾ ಆಕೆಗಿಂತ ಹೆಚ್ಚು ನೋವಾಗುವುದು ನನಗೆ. ಆಕೆ ನಸು ನಗುತ್ತಾಳೆ. ನಾನು ಪೆಚ್ಚು ಪೆಚ್ಚಾಗಿ ನಗುತ್ತೇನೆ. ಮದುವೆಯಾದ ಮೊದಲು – ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ. ಕತ್ತಲಾಗಿತ್ತು. ಅದು ಹಳ್ಳಿ. ಹೊಸ ಮದು ಮಗ ಮದುಮಗಳು ಕೈ ಕೈ ಹಿಡಿದುಕೊಂಡು ಹೋಗುವಾಗ, ಯಾರೋ ತಮಾಶೆ ಮಾಡಿದರು. ಆಕೆ ಕೈ ಕೊಸರಿಕೊಂಡು ನಡೆದಳು. ಅದು ಒಂದು ಕ್ಷಣ ಮಾತ್ರ. ಬಿದ್ದ ಸದ್ದು. ಹಿಂದೆ ನೋಡಿದರೆ ಆಕೆ ಬಿದ್ದಿದ್ದಾಳೆ. ಇಂದಿಗೂ ಆ ಘಟನೆ ನೆನೆದಾಗ, ಆಕೆಯ ಅಸಾಹಯಕತೆಯ […]

ಆಪ್ತ ರಕ್ಷಕ!: ಗುರುಪ್ರಸಾದ ಕುರ್ತಕೋಟಿ

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ…  ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ […]

ಆಟಿಸಂ ಅನ್ನೋ ಸಂಕೀರ್ಣ ಮನೋ ಅವಸ್ಥೆ: ಪ್ರಶಸ್ತಿ

ದೈಹಿಕ ಅಂಗವೈಕಲ್ಯ ಅನ್ನೋದು ಮೇಲುನೋಟಕ್ಕೆ ಕಂಡುಬರುತ್ತೆ. ಆದ್ರೆ ಮಾನಸಿಕ ಅಂಗವೈಕಲ್ಯ ? ಕಣ್ಣೆದ್ರೇ ಇದ್ರೂ ಗೊತ್ತಾಗಲ್ಲ.  ಏ ಅವನ್ಯಾಕೆ ಅಷ್ಟು ದೊಡ್ಡದಾಗಿ , ಎಳೆದೆಳೆದು ಮಾತಾಡ್ತಾನೆ, ದೇಹ ನೋಡಿದ್ರೆ ಅಷ್ಟು ವಯಸ್ಸಾದಂತಿದೆ ಆದ್ರೆ ಬುದ್ದಿ ಮಾತ್ರ ಇನ್ನೂ ಬೆಳೆದಿಲ್ಲವಾ ಅನ್ನುವಂತಹಾ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ.  ಇದ್ದಕ್ಕಿದ್ದಂಗೆ ಜಗಳಕ್ಕೆ ಬಂದು ಬಿಡ್ತಾನೆ ಮಾರಾಯ ಅವ. ಸ್ವಲ್ಪ ಹುಷಾರಾಗಿರು ಅಂತಿದ್ದ ಹೊಸದಾಗಿ ಪೀಜಿಗೆ ಬಂದವನ ಬಗ್ಗೆ ಗೆಳೆಯ. ಹೂಂ. ಅವನು ಆಟಿಸಂ ಇಂದ ಒದ್ದಾಡ್ತಾ ಇದಾನೆ . ನಿನ್ನೆ ಸಿಕ್ಕಾಗ […]

ಮನಸ್ಸಿದೆ! ಕನಸಿದೆ! ಅನುಕಂಪ ಬೇಡ, ಅವಕಾಶ ಕೊಡಿ: ಪಾ.ಮು. ಸುಬ್ರಮಣ್ಯ, ಬ.ಹಳ್ಳಿ.

   ನಾವು ಯಾರಿಗೇನೂ ಕಮ್ಮಿ ಇಲ್ಲ.  ಯಾರ ಹಂಗೂ ನಮಗಿಲ್ಲ.  ನಮಗೂ ಒಂದು ಮನಸ್ಸಿದೆ. ಕನಸಿದೆ. ಬದುಕಿದೆ. ಅಸಹಾಯಕತೆಯ ಅನುಕಂಪದಲೆಯಲ್ಲಿ ಮುಳುಗಿಸಿ, ಕಾರುಣ್ಯಧಾರೆಯಲ್ಲಿ ತೇಲಿಸುವ ಅಗತ್ಯವಿಲ್ಲ.  ನಮಗೆ ಅವಕಾಶ ಕೊಡಿ.  ’ಆಗುವುದಿಲ್ಲ’ ಎಂಬುದನ್ನೆಲ್ಲಾ ’ಆಗಿಸಿ’ ಬಿಡುತ್ತೇವೆ.  ಪ್ರತಿಯೊಬ್ಬ ವಿಕಲಚೇತನರಲ್ಲಿ ಕಂಡು ಕೇಳಿ ಬರುವ ದೃಢ ವಿಶ್ವಾಸದ ನುಡಿಗಳಿವು.   ವಿಕಲಚೇತನರೆಂದರೆ ಸಮಾಜದಲ್ಲಿ ಅವಗಣನೆಗೆ ಒಳಗಾಗಿ ಅವರಿಗೆ ತಮ್ಮದೇ ಆದ ಸ್ವಂತಿಕೆ ಇಲ್ಲದಂತಹ ಸ್ಥಿತಿಗೆ ತಂದು ಬಿಟ್ಟಿದ್ದೇವೆ.   ಯಾರೀ ವಿಕಲಚೇತನರು?  ’ಅಂಗವಿಕಲ’ ಎಂಬ ಪದಕ್ಕೆ ಪರ್ಯಾಯವಾಗಿ ಇಂದು […]

ವಿಶೇಷ ಮಕ್ಕಳ ಪೋಷಣೆಯೂ ಘಾಸಿಗೊಳಿಸುವ ಮತಾಂಧತೆಯೂ: ಅಮರ್ ದೀಪ್ ಪಿ.ಎಸ್.

ಮಕ್ಕಳು ದೇವರ ಸಮಾನ ಅಂತಾರೆ.   ಅಂಥ ಮಕ್ಕಳು ಹುಟ್ಟಿದ ಸಮಯದಿಂದ ಹಿಡಿದು ಬೆಳೆದು ನಾಲ್ಕು ಹೆಜ್ಜೆ ಇಟ್ಟು ನಾಲ್ಕು ತೊದಲು ಮಾತಾಡುವಂತಾಗುವಷ್ಟರಲ್ಲಿ ತಂದೆ ತಾಯಿಯರು ಅದೆಷ್ಟೇ ಮೊಂಡರು, ಸಿಡುಕರು, ದುಡುಕರು, ಗತ್ತು ಗೈರತ್ತಿನವರಿದ್ದರೂ ಮಕ್ಕಳ ಮುಂದೆ ಮೊಳಕಾಲೂರಿ “ಬಾಲೇ ಕಂದಾ, ಬಾರೇ ಬಂಗಾರಿ, ಹೌದಾ ಚಿನ್ನು, ನನ್ ಸೋನು, ಮೈ ಸ್ವೀಟಿ ಅಂತೆಲ್ಲಾ ಕರೆದು ಮುದ್ದು ಮಾಡದೇ ಬೇರೆ ಕಾರಣವೇ ಇಲ್ಲದಂತೆ ರಿಲೇಟ್ ಆಗಿಬಿಡುತ್ತಾರೆ.  ಅದು ದೊಡ್ಡವರನ್ನು ಬೆಂಡ್ ಮಾಡಲು ಮಕ್ಕಳಿಗಿರುವ ಶಕ್ತಿಯೂ ಹೌದು ಮತ್ತು […]

ಅಸಾಧ್ಯವೆಂಬುದು ಇಲ್ಲ: ಮಾಲಾ

ಮನುಜ ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ನಿದರ್ಶನ ಶಿಲ್ಪಿ ಬಡೆಕ್ಕಿಲ ಶಾಮಸುಂದರ ಭಟ್. ಬಡೆಕ್ಕಿಲ ಕೃಷ್ಣ ಭಟ್ ಹಾಗೂ ಸರಸ್ವತೀ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಶಾಮಸುಂದರ ಎರಡು ವರ್ಷ ಆಗಿದ್ದಾಗಲೇ ಪೋಲಿಯೋ ರೋಗಕ್ಕೆ ತುತ್ತಾದ. ಒಂದು ಕಾಲು ದುರ್ಬಲವಾಗಿ ಕೃಶವಾಯಿತು. ಇದರಿಂದ ವಿದ್ಯಾಭ್ಯಾಸವೂ ಕುಂಠಿತವಾಯಿತು. ಮನೆಯಲ್ಲೇ ಅಕ್ಷರಾಭ್ಯಾಸದಲ್ಲಿ ತೊಡಗಿದ. ತಂದೆ ವೈದ್ಯರು. ಮೊದಲಿಗೆ ದ.ಕ. ಜಿಲ್ಲೆಯ ವಿಟ್ಲದಲ್ಲಿ, ತದನಂತರ ಪುತ್ತೂರಿನಲ್ಲಿ ವಾಸ. ಅಲ್ಲಿ ಶಾಮಸುಂದರ (೧೯೬೯-೭೫) ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡಲು ತೊಡಗಿದ. ಯಾರಿಂದಲೂ […]

ಬದುಕ ಪ್ರೀತಿಗೆ…ಅದರ ರೀತಿಗೆ…: ಭಾಗ್ಯ ಭಟ್

  ಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ ಪಕ್ಕದವರನ್ನೆಲ್ಲಾ ಫ್ರೆಂಡ್ಸ್ ಮಾಡ್ಕೋಬೇಕು ಅಂತನ್ನೋ catagory ಅವ್ಳು.  ಆ ಮುಗ್ಧ ಕಂಗಳ ಜೊತೆ ಮಾತಿಗೆ ಕೂರಲೇ ಬೇಕಂತ ನಿರ್ಧರಿಸಿ ಸುಮ್ಮನೆ ಎದುರು ಮನೆಯ ಗೇಟ್ ದಾಟಿ ಒಳಗಡೆ ಹೋದೆ  ಬರ್ತೀಯಾ ಪುಟ್ಟಾ ಆಟ ಆಡೋಣ ಅಂತ ಕೇಳಿಕೊಂಡು .ಅವ ಸುಮ್ಮನೆ ನಕ್ಕು ನೀವು ಆಟ ಆಡೋದನ್ನ ನೋಡೋದೆ ಖುಷಿ ನಂಗೆ […]

ಐರನ್ ಬಾಕ್ಸ್: ಪ್ರಜ್ವಲ್ ಕುಮಾರ್

(ಕಾಲ್ಪನಿಕ) ರಾತ್ರಿ ಒಂದು ಘಂಟೆ. ಶನಿವಾರವಾದ್ದರಿಂದ ಲ್ಯಾಪ್-ಟಾಪ್ ನಲ್ಲಿ ಯಾವುದೋ ಫಿಲಂ ನೋಡಿಕೊಂಡು ಮಲಗಿ ಒಂದರ್ಧ ಘಂಟೆ ಆಗಿ ನಿದ್ರೆ ಕಣ್ಣಿಗೆ ಹತ್ತುತ್ತಿತ್ತಷ್ಟೆ. ಪಕ್ಕದ ಕೋಣೆಯಿಂದ 'ಢಬ್' ಅಂತ ಏನೋ ಬಿದ್ದ ಸದ್ದು. ನಾವಿದ್ದ ಮನೆ 1ಬಿ.ಹೆಚ್.ಕೆ. ಅಂದ್ರೆ ಒಂದು ಕೋಣೆ, ಇನ್ನೊಂದು ಹಾಲ್, ಅದಕ್ಕೆ ಅಂಟಿಕೊಂಡಿರುವ ಅಡುಗೆಮನೆ ಮತ್ತು ಬಾತ್ರೂಮ್. ಆ ಮನೇಲಿ ನಾನು, ಮತ್ತೆ ನನ್ನ ಫ್ರೆಂಡು ಮುರಳಿ ಅಂತ ಇಬ್ರೂ ಒಟ್ಟಿಗೆ ಇರ್ತಾ ಒಂದು ವರ್ಷದ ಮೇಲಾಗಿತ್ತು. ರಾತ್ರಿ ನಾನು ಹಾಲ್ ನಲ್ಲಿ […]

ಹಾರಲಾರದ ಹಾಡುವ ಹಕ್ಕಿ: ಗುಂಡೇನಟ್ಟಿ ಮಧುಕರ

ಮನುಷ್ಯನಿಗೆ  ಯಾವುದಾದರೊಂದು ಅವಯವಗಳಿಲ್ಲದಿದ್ದರೂ ನಡೆಯುವುದಿಲ್ಲ. ಕಣ್ಣು, ಕಿವಿ, ಮೂಗು, ಕಾಲು, ಕೈ ಹೀಗೆ ಎಲ್ಲ ಅವಯವಗಳೂ ಬೇಕೇ ಬೇಕು ಆದರೆ ಯಾವುದೋ ಒಂದು ಕಾರಣದಿಂದ ಇವುಗಳಲ್ಲಿಯವುಗಳಿಂದ ವಂಚಿತನಾದ ವ್ಯಕ್ತಿ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತಾನೆ. ಸಮಾಜದಲ್ಲಿ ಕೀಳರಿಮೆ ಮನೋಭಾವವನ್ನು ಬೆಳೆಸಿಕೊಳ್ಳುವವರೇ ಹೆಚ್ಚು. ಆದರೆ ಎರಡೂ ಕಾಲಿಲ್ಲದೆಯೇ ಸುಮಾರು ನಾಲ್ಕು ದಶಕಗಳನ್ನು ಕಳೆದಿರುವ ವಿನಾಯಕ ಮುತಾಲಿಕ ದೇಸಾಯಿಯವರು ಇಂಥವರಿಗೆ ಹೇಳುವ ಕಿವಿಮಾತೇನೆಂದರೆ. ಜೀವನದಲ್ಲಿ ಉತ್ಸಾಹವೆನ್ನುವುದು ಅತಿ ಮಹತ್ವದ ವಸ್ತು. ಜೀವನೋತ್ಸಾಹವನ್ನು  ಕಳೆದುಕೊಂಡಿರುವವ  ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹುಟ್ಟಿದ ತಪ್ಪಿಗೆ […]

ಫ್ರೀಡಾ ಕಾಹ್ಲೋ: ಬದುಕು, ಬವಣೆ ಮತ್ತು ಬಣ್ಣಗಳು: ಪ್ರಸಾದ್ ಕೆ.

"ಇಲ್ಲಿಂದ ಹೊರಬಿದ್ದವಳೇ ಮೂರು ಕೆಲಸಗಳನ್ನು ಮಾಡಬೇಕಿದೆ ನನಗೆ. ಪೈಂಟಿಂಗ್, ಪೈಂಟಿಂಗ್ ಮತ್ತು ಪೈಂಟಿಂಗ್"  ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು, ನೋವನ್ನೆಲ್ಲಾ ದೇಹದ ಮೂಲೆಮೂಲೆಯಲ್ಲೂ ಆವರಿಸಿಕೊಂಡು ಮೆಕ್ಸಿಕೋದ ಆಸ್ಪತ್ರೆಯ ವಾರ್ಡೊಂದರಲ್ಲಿ ಮಲಗಿದ್ದ ಹೆಣ್ಣೊಬ್ಬಳು ಹೇಳಿದ ಮಾತಿದು. ಈ ಚಿತ್ರಕಲಾವಿದೆಯ ಹೆಸರು ಫ್ರೀಡಾ ಕಾಹ್ಲೋ. ಪಿಕಾಸೋ ಮತ್ತಿತರ ದಿಗ್ಗಜರ ಸಮಕಾಲೀನಳಾದಳೂ ಕೂಡ ತನ್ನ ಜನ್ಮಭೂಮಿ ಮೆಕ್ಸಿಕೋದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಕಲಾಲೋಕದಲ್ಲಿ ಮೂಡಿಸಿದವರು ಫ್ರೀಡಾ. ತನ್ನ ದೇಹವನ್ನು ಮತ್ತು ಮನಸ್ಸಿನಲ್ಲಾ ಮಡುಗಟ್ಟಿ ಆವರಿಸಿದ್ದ ನೋವುಗಳೊಂದಿಗೆ ಜೀವನದುದ್ದಕ್ಕೂ ಹಟಬಿಡದೆ […]