ಮನೆಯ ಅಂಗಳದಲ್ಲಿ ರಂಗವಲ್ಲಿ ಬಿಡಿಸಿ: ಸಚಿನ್ ನಾಯ್ಕ ಅಂಕೋಲ

ಹೃದಯದಲ್ಲಿ  ಪುಟ್ಟ ಪುಟ್ಟ ಕನಸುಗಳ ಅರಮನೆ ಕಟ್ಟಿ ಬದುಕಿನುದ್ದಕ್ಕೂ ನನ್ನೊಡನೆ ಅಲ್ಲೇ ಇರುವ ಭರವಸೆಗೆ ನಗು ನಗುತ್ತಲೇ ಒಪ್ಪಿಗೆಕೊಟ್ಟ  ನಿನಗಾಗಿ                                          ನಿನ್ನವನಿಂದ…. ನೋಡು ಹೊರಗಡೆ ; ಆಕಾಶದಲ್ಲಿ ಇಂದು ಪೂರ್ಣಚಂದ್ರ…. ನೆಲದ ಮೇಲೆಲ್ಲಾ ಅವನ ಹಾಲು ಬೆಳಕು…. ಜೀsss ಎನ್ನೋ ಮರದ ಮೇಲೆ  ಎಂದೂ ಕಾಣದಂತೆ ಅದೃಶ್ಯವಾಗೇ ಇರುವ ಜಿರಲೆಗಳ … Read more

ರೆಡಿ ಸ್ಟೆಡಿ ಪೋ!: ಗುರುಪ್ರಸಾದ ಕುರ್ತಕೋಟಿ

ಅವತ್ತಿನ ದಿನದಲ್ಲೇನು ಹೇಳಿಕೊಳ್ಳುವಂತಹ ವಿಶೇಷತೆಯಿರಲಿಲ್ಲ. ಪ್ರತಿದಿನದಂತೆ ಅವತ್ತೂ ಬೆಳಗಾಗಿತ್ತು, ವೆಂಕಣ್ಣ  ಎಂದಿನಂತೆ ಬಲ ಮಗ್ಗಲಲ್ಲೇ ಎದ್ದಿದ್ದ! ಅವನ ಹೆಂಡತಿ ಎಂದಿನಂತೆ ಅವತ್ತು ಕೂಡ ಇನ್ನೂ ಎದ್ದಿರಲಿಲ್ಲವಾದ್ದರಿಂದ, ಹಲವು ಬಗೆಯ ರಾಸಾಯನಿಕಗಳ ಆಗರವೆಂದು ಗೊತ್ತಿದ್ದೂ ಕೂಡ ಚಹಾ ಎನ್ನುವ ಕಷಾಯದ ವಿಷವನ್ನು ತನ್ನ ಕೈಯಾರೆ ಕುದಿಸಿಕೊಂಡ. ಎಷ್ಟಂದ್ರೂ ನಮಗೆ ಬೇಕಾದ ವಿಷವನ್ನು ನಾವೇ ಆರಿಸಿಕೊಳ್ಳಬೇಕೆಂದು ಹಿರಿಯರು ಹೇಳಿಬಿಟ್ಟಿದ್ದಾರಲ್ಲ! ಯಾಂತ್ರಿಕವಾಗಿ ಇತರ ಪ್ರಾತಃ ಕರ್ಮಗಳಿಗೂ ಮುಕ್ತಿಯನ್ನು ಕರುಣಿಸಿದ್ದ. ಹಿಂದಿನ ದಿನ ನೋಡಿದ್ದ ನಾಟಕದ ಪಾತ್ರವೊಂದು ಅವನ ತಲೆಯಲ್ಲಿ ಇನ್ನೂ ಗುಂಯ್ … Read more

ವಿಚ್ಚೇದನಾ ಪ್ರಕರಣ ಕಾರ್ಯಕ್ರಮದ ನಂತರ: ಅಮರ್ ದೀಪ್ ಪಿ.ಎಸ್.

ಚೆಂದನೆಯ ಕಥಾವಸ್ತುವುಳ್ಳ ಸಿನೆಮಾಗಳು ಹಿಂದೆ  ನೂರು ದಿನ ಪ್ರದರ್ಶನ ಕಾಣುವುದು ಮಾಮೂಲಾಗಿತ್ತು. ಸತತ ಇಪ್ಪತ್ತೈದನೇ ವಾರ, ಐವತ್ತನೇ ವಾರ,  ಒಂದು ವರ್ಷ,  ಎರಡು ವರ್ಷದ ದಾಖಲೆ ಪ್ರದರ್ಶನದ ಸಂಭ್ರಮ.  ಮೊನ್ನೆ ಮೊನ್ನೆ ಒಂದು ಹಿಂದಿ ಸಿನೆಮಾ ಬರೋಬ್ಬರಿ ಒಂದು ಸಾವಿರ ವಾರ ಪ್ರದರ್ಶನ ಕಂಡು ಅದೇ ಸಿನಿಮಾದೊಂದಿಗೆ ಆ ಸಿನಿಮಾ ಥಿಯೇಟರ್ ಮುಚ್ಚಲಾಯಿತು. ಇತ್ತೀಚಿನ ಸಿನೆಮಾಗಳು ವಾರಗಳ ಲೆಕ್ಕದ ಬದಲು ದಿನದ ಲೆಕ್ಕದಲ್ಲಿ ಪ್ರದರ್ಶನ ಕಂಡ ಬಗ್ಗೆ   “ಇಪ್ಪತ್ತೈದನೇ ದಿನ”  “ಐವತ್ತನೇ ದಿನ” “ನೂರನೇ ದಿನ” … Read more

ಜ್ಯೋತಿಷ್ಯದ ದುರುಪಯೋಗ: ಶ್ರೀನಿವಾಸ್ ಪ್ರಭು

ಜ್ಯೋತಿಷ್ಯ  ಎಂಬ ಪದ ಹುಟ್ಟಿದ್ದು ಸೂರ್ಯನನ್ನು ಕೇಂದ್ರೀಕರಿಸಿ. ಸೂರ್ಯನನ್ನು ಪ್ರಧಾನವಾಗಿರಿಸಿ ಇತರ ಗ್ರಹಗಳು ಸುತ್ತುವ ವಾಗ ಚಂದ್ರನ  ಮೇಲೆ ಬೀಳುವ ಸೂರ್ಯನ ಬೆಳಕಿನ ಛಾಯಾ ಬಿಂಬ ಆರೋಹ ಮತ್ತು ಅವರೋಹ ಪರಿಕ್ರಮದಲ್ಲಿ ಪುನರಾವರ್ತನೆ ಯಾಗುವ ದಿನದ ಗಣಿತ. ಮನುಕುಲ ಭೂಮಿಯ ಮೇಲೆ ಹುಟ್ಟಿದಂದಿನಿಂದ ಆಕಾಶಕಾಯದಲ್ಲಿ ಕಾಣುವ ಸೂರ್ಯ, ಚಂದ್ರ, ನಕ್ಷತ್ರ ಹಾಗೂ ಇತರ ಆಕಾಶ ಕಾಯಗಳ ಬಗ್ಗೆ ಕೂತೂಹಲಗೊಂಡು, ಕೆಲವು ಬುದ್ಧಿವಂತ ಸನ್ಯಾಸಿಗಳು ಸಂಶೋಧನೆ ಮಾಡುತ್ತಾ, ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಪರಿಯನ್ನು ಲೆಕ್ಕ ಹಾಕತೊಡಗಿ … Read more

ಚೊಕ್ಕ ಕತೆಗಳು: ಮಾಧವ ಡೋಂಗ್ರೆ

1.ಸಂಸಾರ ಆತ ಸ್ಥಿತಪ್ರಜ್ಞ. ಆಕೆ ಚಂಚಲೆ. ಆದರೂ ಅವರದು ಬಿಡಲಾರದ ಅನುಬಂಧ.  ಆಕೆ ಆತನನ್ನು ಖುಶಿಪಡಿಸಲು ದಿನವೂ ಆತನಲ್ಲಿ ಬಂದು ಅವನಲ್ಲಿ ಸೇರುತ್ತಾಳೆ. ಆದರೆ ಕೆಲವೊಮ್ಮೆ ನಿತ್ರಾಣಳಾಗಿ ನಡುದಾರಿಯಲ್ಲೆ ಬಿದ್ದುಹೋಗುತ್ತಾಳೆ. ಅವನಾದರೋ ಇದ್ಯಾವುದರ ಪರಿವೆ ಇಲ್ಲದೆ ನಿಶ್ಚಲನಾಗಿದ್ದು ತನ್ನ ತಪಸ್ಸನ್ನಾಚರಿಸುತ್ತಾನೆ. ಇನ್ನೊಂದು ಆಯಾಮದಲ್ಲಿ ಆತ ಆಕೆಗಾಗಿ ಕ್ಷಣಕ್ಷಣವೂ ಹಾತೊರೆಯುತ್ತಿರುತ್ತಾನೆ. ಆಕೆಯ ಬರುವಿಕೆ ಗೊತ್ತಿದ್ದರೂ ಸುಮ್ಮನೆ ಮುನಿಸಿಕೊಳ್ಳುತ್ತಾನೆ. ಆದರೆ ಆಕೆ ಬಂದರೂ, ಬರದಿದ್ದರೂ ಅವರಿಬ್ಬರ ಮಕ್ಕಳನ್ನು ಜೊಪಾನವಾಗಿ ನೋಡಿಕೊಂಡು, ರಾತ್ರಿಯಾದಂತೆ ಮಕ್ಕಳನ್ನು ಮಲಗಿಸಿ ಅವಳಿಗೊಸ್ಕರ ಕಾಯತೊಡಗುತ್ತಾನೆ. ಆತನ ಹೆಸರು … Read more

ಮೂವರ ಕವಿತೆಗಳು: ಗಿರಿ, ರಘುನಂದನ ಹೆಗಡೆ, ಪಾ.ಮು.ಸುಬ್ರಮಣ್ಯ ಬ.ಹಳ್ಳಿ.

ಕಾಡುವ ನೆನಪಿನ ಹಿಂದೆ ನೂರೊಂದು ಚಡಪಡಿಕೆ ಒಂದೊಂದು ತಿರುವಲು ನಿನ್ನ ನಗುವಿನ ಪಳೆಯುಳಿಕೆ ಕಂಡೂ ಕಾಣದೆ ಕತ್ತಲಿನ ಮೂಲೆಯಲಿ ಕಂಪಸೂಸಿದ ನಿನ್ನ ಬೆಳದಿಂಗಳಂತ ನಸುನಗೆ ಸುಮ್ಮನೆ ಪ್ರೇಮಿಸುತಿದ್ದ ನನ್ನ ಕವಿಯನಾಗಿ ಮಾಡಿದ್ದು ನೀನಾ? ನಿನ್ನ ನೆನಪಾ? ಹೇಳು, ದಯವಿಟ್ಟು ಹೇಳು ಕನಸಲಿ ಬಂದು ಕನವರಿಸುವಂತೆ ಮಾಡಿದ್ದು ನೀನಾ? ನಿನ್ನ ಮುಂಗುರಳಾ? – ಗಿರಿ         ಮೂಲ ಮರೆತವನ ಹುಡುಕಾಟ ಅಂಗಳದಿಂದ ಹತ್ತು ಹೆಜ್ಜೆ ಎತ್ತಿಟ್ಟರೆ ನೆರಳು ಬಿಸಿಲು ಆಟವಾಡುವ ಮನೆ ಉಸ್ಸೆಂದು ಹಗುರಾಗಿ … Read more

ತಿರಸ್ಕಾರ (ಭಾಗ 2): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ) … ಹುಡುಗಿ ಅವನಿಗೆ ಒಂದು ಮುತ್ತು ಕೊಟ್ಟಿದ್ದರೆ ಅವನು ಸುಮ್ಮನೇ ಹೊರಟುಹೋಗಿ ಈ ಅನಾಹುತ ಜರುಗುತ್ತಿರಲಿಲ್ಲವೇನೋ? ನೆಲಕ್ಕುರುಳಿದ್ದ ರೈತನ ಮೇಲೆ ಅವನ ದೃಷ್ಟಿ ಹರಿದು ಅವನಿಗೆ ನಗು ಬಂದಿತು. ಹಾಗೆಯೇ ಹೆಂಗಸಿನೆಡೆಗೆ ನೋಡಿದಾಗ ಅವಳಿನ್ನೂ ಕಂಪಿಸುತ್ತಿದ್ದಳು. ಹುಡುಗಿಯ ನಂತರ ತನ್ನ ಸರದಿ ಎಂದು ಅವಳು ಭಾವಿಸಿರಬೇಕು! ಯಾಕೆ ಹೆಂಗ್ಸೇ ಅಳ್ತಾ ಇದ್ದೀಯಾ? ಇದು ಇವತ್ತಲ್ಲ ನಾಳೆ ಜರುಗಲೇ ಬೇಕಿತ್ತು. ಅವನು ಹಿಂಬದಿಯ ಜೇಬಿನಿಂದ ಪರ್ಸನ್ನು ಹೊರತೆಗೆದು, ತೆಗೋ ಇದರಲ್ಲಿ ನೂರು ಫ್ರಾಂಕುಗಳಿವೆ. ನಿನ್ನ ಮಗಳಿಗೊಂದು ಡ್ರೆಸ್ … Read more

ಘಟ್ಟ ಉಳಿಸುವ ವರದಿಗೆ ಅಗ್ನಿಸ್ಪರ್ಷ: ಅಖಿಲೇಶ್ ಚಿಪ್ಪಳಿ

ಭಾನುವಾರ ರಜಾದಿನ. ಬಂಧುಗಳೊಬ್ಬರ ಮನೆಯಲ್ಲಿ ಅದೇನೋ ವಿಶೇಷ ಕಾರ್ಯಕ್ರಮವಿತ್ತು, ಮುಗಿಸಿಕೊಂಡು ಬರುವಾಗ ಸಂಜೆ ೫ ಗಂಟೆ. ಪೇಟೆ ಸುಮಾರು ೫ ಕಿ.ಮಿ. ದೂರವಿತ್ತು. ಬರುವ ರಸ್ತೆಯಲ್ಲಿ ವಿಪರೀತ ಹೊಗೆ ತುಂಬಿಕೊಂಡಿತ್ತು. ನಮ್ಮ ಮುಂದೆ ಸಾಗುತ್ತಿದ್ದ ಕಾರು ಮುಂದೆ ರಸ್ತೆ ಕಾಣದೆ ನಿಂತಿತ್ತು. ನೋಡಿದರೆ, ರಸ್ತೆಯ ಪಕ್ಕದ ಕಾಡಿಗೆ ಬೆಂಕಿ ಹಚ್ಚಿದ್ದರು. ಗಾಳಿಯಿಲ್ಲದ ಕಾರಣ ಹೊಗೆ ನಿಧಾನಕ್ಕೆ ಮೇಲ್ಬಾಗದ ರಸ್ತೆಯಲ್ಲಿ ತುಂಬಿಕೊಂಡು ರಸ್ತೆಯನ್ನೇ ಬಂದ್ ಮಾಡಿ ಹಾಕಿತ್ತು. ಅಪಾಯವೇನು ಇರಲಿಲ್ಲವಾದರೂ, ರಸ್ತೆಯೇ ಕಾಣುತ್ತಿರಲಿಲ್ಲ. ಬೈಕಿನಲ್ಲಿ ಮುಂದೆ ಸಾಗಿದವನಿಗೆ ಉಸಿರು … Read more

ಬರವಣಿಗೆಯ ಶನಿವಾರವೂ ಜೋಗಿಯವ್ರ ಕಾಲಂಬರಿಯೂ: ಪ್ರಶಸ್ತಿ.ಪಿ.

ಕನಸೊಳಗೊಂದು ಕನಸು, ಅದರೊಳಗೆ ಮತ್ತೊಂದು, ಅದರೊಳಗೆ ಇನ್ನೊಂದು ಕನಸು. ಹೀಗೆ ಕನಸೊಳಗೆ ಕನಸ ಬಿತ್ತುತ್ತಲೇ ವಾಸ್ತವ ಕನಸುಗಳ ಪರಿವೆಯಿಲ್ಲದೇ ಕಥೆ ಕಟ್ಟುತ್ತಾ  ಸಾಗುವ ಸಿನಿಮಾವೊಂದಿದೆ ಇಂಗ್ಲೀಷಲ್ಲಿ,inception ಅಂತ. ವಾಸ್ತವ ಕನಸುಗಳ ಅರಿವಿಲ್ಲದಂತೆ ಸಾಗುವ ಅದಮ್ಯ ಪರಿಯದು. ಅದೇ ತರ ವಿಮರ್ಶೆಯ ಬಗ್ಗೆ ವಿಮರ್ಶೆ ಬರದ್ರೆ ? ಕತೆಗಾರನೊಬ್ಬನ ಕತೆ ಹುಟ್ಟಿದ ಬಗ್ಗೆಯೇ, ಕಥಾಸಂಕಲನದಲ್ಲಿ ಬಂದ ಕತೆಗಳ ಬಗ್ಗೆಯೇ ಒಂದು ಕತೆ ಬಂದ್ರೆ ? ಪಂಪಕಾವ್ಯದಲ್ಲಿ ಬರುವ ಕರ್ಣನ ಬಾಯಲ್ಲಿ ಬರುವ ಭಾನಾಮತಿಯ ದ್ಯೂತದ ಪ್ರಸಂಗದ ಬಗ್ಗೆ ಬರೆದ … Read more

ಬದುಕ್ ಸಾಯ್ರಿ: ಪ್ರವೀಣ್ ಎಸ್ ಕುಲಕರ್ಣಿ

    ಥತ್ತೇರಿಕೆ…!ಮತ್ತೆ ಫೇಲಾಗ್ ಬಿಟ್ನಾ. . ಚೆನ್ನಾಗೆ ಬರೆದಿದ್ನಲ್ಲ. . ಯಾಕೋ ಈ ದೇವರದು ಅತಿಯಾಯ್ತು. . ನನ್ನ ಸುಖವಾಗಿ ಬದುಕಲು ಬಿಡಲೇಬಾರದು ಅಂತ ಇದ್ರೆ ಯಾಕ್ ಹುಟ್ಟಿಸಿದ್ನೋ, ಮನೆಗೆ ಹೋಗಿ ಏನು ಮುಖ ತೋರಿಸೋದು. . . ಏನು. . . ?ಮತ್ತೆ ಲಾಸಾ. . . ಸರ್ಯಾಗ್ ನೋಡಿ ಹೇಳೋ, ಈ ಸಲಾ ಹೆಚ್ಚು ಕಮ್ಮಿ ಆದ್ರೆ ನಾನಷ್ಟೇ ಅಲ್ಲಾ ಅಪ್ಪ ಅಮ್ಮ ಹೆಂಡ್ತಿ ಮಕ್ಕಳು ಎಲ್ರೂ ಸೇರಿ ನೇಣು ಹಾಕ್ಕೋಬೇಕಾಗುತ್ತೆ. . … Read more

ನೆಮ್ಮದಿಯೆಂಬುದೊಂದು ಭಾವ..: ಪದ್ಮಾ ಭಟ್

ಮಧ್ಯಾಹ್ನದ ಬಿಸಿಲಿನಲ್ಲಿ , ಛತ್ರಿ ಹಿಡಿದು ಒಂದಷ್ಟು ದೂರ ಸಾಗಿದ್ದೆ. ರಸ್ತೆ ಬದಿಯಲ್ಲಿ ಟೆಂಟು ಹಾಕಿಕೊಂಡು , ಅರ್ಧ ಹರಿದ ಬಟ್ಟೆಯಲ್ಲಿದ್ದ ಹೆಂಗಸೊಬ್ಬಳು ರೊಟ್ಟಿ ಸುಡುತ್ತಿದ್ದರೆ,  ಪಕ್ಕದಲ್ಲಿಯೇ ಇದ್ದ ಮರಳು ರಾಶಿಯಲ್ಲಿ ಅವಳ ಇಬ್ಬರು ಮಕ್ಕಳು ಆಟವಾಡುತ್ತಿದ್ದರು.. ಆ ನಗುವು ಬಡತನವನ್ನೆಲ್ಲಾ ಮರೆಮಾಚಿತ್ತು. ಖುಷಿಯಿಂದಿರಲು ದುಡ್ಡು  ಬೇಕೆಂಬುದಿಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳುವಂತಿತ್ತು.. ಸ್ವಲ್ಪ ಹೊತ್ತು ಅಲ್ಲಿಯೇ  ನಿಂತು ನೋಡುತ್ತಿದ್ದವಳಿಗೆ ಎಲ್ಲಾ ಇದ್ದೂ ಖುಷಿಯಿಂದಿರಲು ಸಾಧ್ಯವಿಲ್ಲ.. ಏನೂ ಇಲ್ಲದೇ ಇರುವ ಇವರು ಅದೆಷ್ಟು ನಗುತ್ತಿದ್ದಾರಲ್ಲ ಎಂದೆನಿಸಿದ್ದು ಸುಳ್ಳಲ್ಲ.  … Read more

ಸಾಮಾನ್ಯ ಜ್ಞಾನ (ವಾರ 55): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು? ೨.    ನ್ಯಾಕೋ (NACO)ನ ವಿಸ್ತೃತ ರೂಪವೇನು? ೩.    ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು? ೪.    ಧರ್ಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ? ೫.    ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೬.    ಬರ್ಲಾಂಗ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ? ೭.    ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು? ೮.    ಭಾರತದ ರಾಷ್ಟ್ರಪತಿ … Read more