Facebook

Archive for 2014

ಭಯದ ಆ ರಾತ್ರಿ: ನಾಗರಾಜ್ ಹರಪನಹಳ್ಳಿ.

ಹಳವಂಡ ಕನಸು. ಅದ್ಹೇನೋ ಸಮಾರಂಭ. ಹೋದಲೆಲ್ಲಾ ಚಿವುಟಿದಂತೆ; ದೇಹದ ಎದೆ ಹಾಗೂ ಕಿಬ್ಬೊಟ್ಟೆ ಭಾಗಕ್ಕೆ ಯಾರೋ ತಿವಿದಂತೆ. ತಿವಿಯುವ ಕೈ ಮತ್ತು ಮುಖ ಮಾತ್ರ ಅಸ್ಪಷ್ಟ. ಕಿರುಕುಳ ಮುಂದುವರಿದಂತೆ, ಅದರಿಂದ ತಪ್ಪಿಸಿಕೊಂಡ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಂತೆ ಅದೆಂಥದೋ ಭಾರ ಎನಿಸುವ ಕನಸು. ಯಾರೋ ವೆಹಿಕಲ್  ಪಾರ್ಕಿಂಗ್ ಗೇಟ್ ತೆರದಂತೆ ಸದ್ದು. ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಎದೆಯ ಮೇಲೆ ಕೈಯಿಟ್ಟು ಮಲಗಿದ್ದಕ್ಕೋ ಏನೋ…ಇರಬೇಕು. ಕೆಟ್ಟ ಕನಸು. ಬೆಡ್ ರೂಂ ಲೈಟ್ ಹಾಕಿದ. ಕೋಣೆಯಲ್ಲಿ ಆತನ ಜೊತೆ ಇರುವುದು […]

ಪ್ರೇಮದುತ್ಕಟತೆಯ ಅನಂತ ಹುಡುಕಾಟ: ಸಚೇತನ

ಉತ್ಕಟ ಪ್ರೇಮದ ಪ್ರಾತಿನಿಧಕವಾಗಿ ಹಲವಾರು ಸಿನಿಮಾಗಳು ಬಂದು ಹೋಗಿವೆ. ದುರಂತ ಪ್ರೇಮಕ್ಕೆ ಸಿನಿಮಾದ ರೂಪದಲ್ಲಿ  ಪರಂಪರಾಗತ ಸಾಕ್ಷಿ ಎನ್ನುವಂತೆ ನಾವು ಟೈಟಾನಿಕ್ ಸಿನಿಮಾವನ್ನು ನೋಡಿದ್ದೇವೆ, ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಥರದ ಭಾರತೀಯ ಶೈಲಿಯ ಪ್ರೇಮದ ಹಂಬಲ ಮತ್ತು ತ್ಯಾಗವನ್ನು  ಕಂಡಿದ್ದೇವೆ.  ಆದರೆ ಸಿನಿಮಾವೊಂದರಲ್ಲಿನ ಪ್ರೇಮದ ಉತ್ಕಟತೆ ತೆರೆಯಾಚೆಗೆ ಸಾಗಿ ಪ್ರೇಕ್ಷನಲ್ಲಿ ಆಳಕ್ಕಿಳಿದು ನೆನಪಿನಲ್ಲಿ ಉಳಿಯುವದು,  ಪ್ರೀತಿಸಿದ ಪಾತ್ರಗಳೆರಡರ  ನಡುವಿನಲ್ಲಿ ಅತೀ ಆರ್ದವಾದ ಸಂಬಂಧವೊಂದು ಸಾಧ್ಯವಾದಾಗ ಹಾಗೂ ಅದಕ್ಕೆ ಪೂರಕವಾಗಿ  ಕ್ಯಾಮರಾ ಕಣ್ಣಿನಲ್ಲಿ  ಸೆರೆಯಾದಾಗಲೇ.   […]

‘ಸಲೀ೦’ರಿಗೊ೦ದು ಸಲಾಮ್: ಆದರ್ಶ ಸದಾನ೦ದ ಅರ್ಕಸಾಲಿ

'ಚುಕ್' ಏರ್-ಗನ್ ನಿ೦ದ ಹೊಡೆದ ಹೆಸರುಕಾಳಿನಷ್ಟಿನ ಕಬ್ಬಿಣದ ಗು೦ಡು ಗುಬ್ಬಚ್ಚಿಗಾತ್ರದ ಪಕ್ಷಿಗೆ ತಾಗಲು ಹಿ೦ಜರಿಯಲಿಲ್ಲ. ಎರ್-ಗನ್ ಗಳಿ೦ದ ಹೊಡೆದ ಬುಲ್ಲೆಟ್ಟುಗಳು 'ದುಡ್೦' ಅ೦ತ ಸದ್ದು ಮಾಡುವುದಿಲ್ಲ. ಅದಕ್ಕಾಗಿಯೇ ಇವನ್ನು ಹಕ್ಕಿ ಹೊಡೆಯಲಿಕ್ಕೆ ಉಪಯೋಗಿಸುತ್ತಾರೆ. ಹತ್ತು ವರ್ಷದ ಬಾಲಕ ಏರ್-ಗನ್ನಿ೦ದ ಗುರಿಯಿಟ್ಟು ಹೊಡೆದಾಗ, ಗುರಿ ತಪ್ಪದೇ, ಕಬ್ಬಿಣದ ಚಿಕ್ಕ ಗು೦ಡು ತಾಕಿ ಪಕ್ಷಿ ಕೆಳಗೆ ಬಿತ್ತು. ಪಕ್ಷಿಯನ್ನು ಕೈಗೆತ್ತಿಕೊ೦ಡು ಮಾಮೂಲಿಯ೦ತೆ ಮನೆಯ ಬಾಣಸಿಗ 'ನನ್ನೂ' ನಿಗೆ ಕೊಡುವ ಮು೦ಚೆ, ಗಮನವಿಟ್ಟು ನೋಡಿದಾಗ, ಇದು ಸಾಧಾರಣವಾದ ಗುಬ್ಬಚ್ಚಿಯಲ್ಲ, ಕತ್ತಿನ ಕೆಳ […]

ರೋಮಾಂಚನಗೊಳಿಸಿದ ’ರಕ್ತರಾತ್ರಿ’ ಪ್ರಯೋಗ ಲೇಖನ : ಹಿಪ್ಪರಗಿ ಸಿದ್ಧರಾಮ

  ಯುದ್ಧ ವಿರೋಧಿ ಮತ್ತು ಕ್ರೌರ್ಯತೆಯ ಪರಮಾವಧಿಯನ್ನು ಮನಕಲಕುವಂತೆ ಬಿಂಬಿಸುವ ಕಂದಗಲ್ಲ ಹಣಮಂತರಾಯರ ಸರಿ ಸುಮಾರು ಇಪ್ಪತ್ತು ನಾಟಕಗಳಲ್ಲಿಯೇ ಹೆಚ್ಚು ಜನಪ್ರಿಯ ಕೃತಿ ’ರಕ್ತರಾತ್ರಿ’ ನಾಟಕ ಪ್ರದರ್ಶನವನ್ನು ಇತ್ತೀಚೆಗೆ ಗದಗಯ್ಯ ಹಿರೇಮಠ ನಿರ್ದೇಶನದಲ್ಲಿ ಕಲಾವಿದ ಸಿ.ಎಸ್.ಪಾಟೀಲಕುಲಕರ್ಣಿಯವರ ೬೦ನೇ ವರ್ಷದ ಷಷ್ಟ್ಯಬ್ದಿ ಆಚರಣೆಯ ಸಂದರ್ಭದಲ್ಲಿ ಹವ್ಯಾಸಿ, ವೃತ್ತಿ ರಂಗಭೂಮಿಯ ಕಲಾವಿದರು ಧಾರವಾಡದಲ್ಲಿ ಅಭಿನಯಿಸಿದರು. ಹೊರಗೆ ಅಕಾಲಿಕ ಮಳೆಯ ತುಂತುರು ಹನಿಯ ವಿಪರೀತ ತಣ್ಣನೆಯ ವಾತಾವರಣವಿದ್ದರೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ’ಎಲೆ ಉತ್ತರೆ, ದಿನ ಮೂರು ಕಳೆಯುವುದರೊಳಗಾಗಿ […]

ಪ್ರೀತಿಸಿ ಬಿದ್ದ ಯುವಜನರೇ ಭೇಷ್!: ಅಕ್ಷಯ ಕಾಂತಬೈಲು

                  ಪ್ರೀತ್ಸೇ… ಪ್ರೀತ್ಸೇ… ಕಣ್ಣುಮುಚ್ಚಿ ನನ್ನೆ ಪ್ರೀತ್ಸೆ ಎಂಬ ಹಾಡಿನಂದದಿ ಪ್ರೀತಿಸಿ ಬಿದ್ದ ಯುವಜನರೇ ನಿಜಕ್ಕೂ ನೀವೇ ಭೇಷ್! ಯಾಕೆ ಗೊತ್ತುಂಟಾ; ಕೆಲವರಿಗೆ ಆ ಸುಖ ಮತ್ತು ಯಾತನೆ ಲಭಿಸಿಲ್ಲ. ಪ್ರೇಮ ಜೀವನವ ಸಾಂಗವಾಗಿ ನಡೆಸುತ್ತಿರುವಾಗ ಹಠಾತ್ತನೆ ಯಾವುದೋ ಒಂದು ಕಾರಣಕ್ಕೆ ನೀವು -ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈಕೊಟ್ಟರೆಂದು ದೇವದಾಸನ ಥರ ಆಗಿ, ಆಕಾಶವೇ ಹರಿದುಬಿತ್ತು ಅಂದುಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಅರ್ಧಕ್ಕೆ […]

ಕಾಡುಪೇಟೆಯ ಕತೆ: ಪ್ರಶಸ್ತಿ

ಬರೆಯಹತ್ತಿದ್ರೆ ಒಂದು ಕಾದಂಬರಿಯಾಗೋವಷ್ಟು ವಿಷಯ ದಕ್ತಿತ್ತೇನೋ ಅವರ ಪ್ರೇಮಕತೆಯಲ್ಲಿ. ಅದು ಸ್ನೇಹವಾ ಪ್ರೇಮವಾ ಅನ್ನೋ ಸಂದಿಗ್ದತೆಯಲ್ಲಿ ಅವನಿದ್ದರೆ ಅದಕ್ಕೊಂದು ಹೆಸರಿಡಲೇಬೇಕಾದ ಅನಿವಾರ್ಯತೆಯಲ್ಲೋ, ಅರ್ಜೆಂಟಿನಲ್ಲೋ ಅವಳಿರಲಿಲ್ಲ. ಸ್ನೇಹವೆಂದರೆ ಖುಷಿಪಟ್ಟು, ಪ್ರೇಮವೆಂದರೆ ಬೇಸರಪಡುವಳೂ ಅಲ್ಲ  ಅವಳು. ಸಮಾಜದ ಕಟ್ಟುಪಾಡುಗಳಿಗೆ ಗೌರವವಿದ್ದರೂ ಯಾರನ್ನೋ ತೃಪ್ತಿಪಡಿಸಲು ಮನ ಮನಗಳ ಭಾವಕ್ಕೊಂದು ಚೌಕಟ್ಟು ಹಾಕೋಕೆ ವೈಯುಕ್ತಿಕ ವಿರೋಧವಿದ್ದರೂ ತನ್ನ ಅವನ ನಡುವಿನ ಮಾತುಕತೆಗಳಿಗೆ ಯಾರೋ ಒಂದು ಸಂಬಂಧದ ಹೆಸರಿಟ್ಟರೆ ಯಾವ ಅಭ್ಯಂತರವೂ ಇರಲಿಲ್ಲ ಅವಳಿಗೆ. ಯಾರನ್ನಾದರೂ ತೀರ ಹಚ್ಚಿಕೊಂಡು ಅವರು ದೂರವಾಗೋ ಕಾಲನ ಆಘಾತಗಳು […]

ಅವನ ಮೌನದಲಿ ನಾನು ಧ್ವನಿಸಬೇಕಿದೆ: ಪದ್ಮಾ ಭಟ್, ಇಡಗುಂದಿ.

ಕನಸುಗಳನೊಮ್ಮೆ ಹರವಿ ಕುಳಿತೆ.. ಸಾಲಾಗಿ ಕಂಡುಕೊಂಡೆ ಅವನ ಬಗೆಗಿನ ಕನಸುಗಳನ್ನು.. ಇಷ್ಟರ ವರೆಗೆ ಎಷ್ಟೋ ಜನರು ಕೇಳಿದಾರೆ.. ನಿಂಗೆ ಬಾಯ್ ಫ್ರೆಂಡ್ ಇಲ್ವಾ? ಅಂತ..ಇಲ್ಲಾ ಅಂತ ನಾ ಹೇಳಿದ್ದಕ್ಕೆ , ನೀನು  ವೇಸ್ಟ್ ಅಂತ ಅವಳ್ಯಾರೋ ಹೇಳಿದಾಗ ನನಗೇನು ಬೇಸರವಾಗಲಿಲ್ಲ.. ಏಕೆಂದರೆ ಅಪ್ಪ ಅಮ್ಮನ ಮುದ್ದು ಮಗಳು ನಾನು.. ಅವರು ಹೇಳಿದಂತೆ ಕೇಳುವುದು ಇಷ್ಟ.. ಬಹುಶಃ ನನ್ನ ಹುಡುಗನನ್ನು ದೇವರು ತುಂಬಾ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿರಬಹುದೇನೋ..ಅದಕ್ಕೇ ಅವನು ಇನ್ನೂ ಕನಸಾಗಿಯೇ ಉಳಿದದ್ದು.. ಊಹೂಂ ಅದೇ ಹಳೇ ಕಾಲದಂತೆ […]

ರಸ್ತೆ ರಾಗ: ಅಖಿಲೇಶ್ ಚಿಪ್ಪಳಿ

ಯಾವುದೋ ಕೆಲಸದ ಮೇಲೆ ಸೊರಬ ತಾಲ್ಲೂಕಿನ ಒಂದು ಊರಿಗೆ ಹೋಗುವುದಿತ್ತು. ಆ ರಸ್ತೆಯಲ್ಲಿ ಹೋಗದೆ ಮೂರ್‍ನಾಲ್ಕು ತಿಂಗಳು ಕಳೆದಿತ್ತು. ವಾಪಾಸು ಬರುವಾಗ ರಸ್ತಯ ಬದಿಯಲ್ಲಿ ಏನೋ ಬದಲಾವಣೆಯಾದಂತೆ ಕಂಡು ಬಂತು. ಗಮನಿಸಿದಾಗ ಲೋಕೋಪಯೋಗಿ ಇಲಾಖೆಯ ಕರಾಮತ್ತು ಬೆಳಕಿಗೆ ಬಂತು. ರಸ್ತೆಗಳಿಗೆ ದೇಶದ ನರನಾಡಿಗಳು ಎಂದು ಕರೆಯುತ್ತಾರೆ. ಒಂದು ದೇಶದ ಅಭಿವೃದ್ದಿಯನ್ನು ಮನಗಾಣಬೇಕಾದರೆ ಆ ದೇಶದ ರಸ್ತೆಗಳ ಗುಣಮಟ್ಟವನ್ನು ನೋಡಬೇಕು ಎನ್ನುವ ಜನಜನಿತ ಅಭಿಪ್ರಾಯವಿದೆ. ರಸ್ತೆಗಳಲ್ಲೂ ಸುಮಾರು ವಿಧಗಳಿವೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ […]

ಮೂವರ ಕವಿತೆಗಳು: ಬಸವರಾಜ ಕದಮ್, ರಮೇಶ್ ನೆಲ್ಲಿಸರ, ತ.ನಂ.ಜ್ಞಾನೇಶ್ವರ

ಪ್ರೀತಿಯ ಹೆಜ್ಜೆಗಳು : ಪ್ರೀತಿಯ  ನಿನ್ನ  ಹೆಜ್ಜೆಗಳು ನನ್ನ  ಹೃದಯದ ಒಳಗೆ ಗೆಜ್ಜೆ  ಕಟ್ಟಿಕೊಂಡು  ಕುಣಿಯುತ್ತಿದೆ ಪ್ರೇಮದ ತಾಳದ  ಸದ್ದು ಮನಸ್ಸಿಗೆ  ಮುದಕೊಡುತ್ತದೆ. ಪ್ರೀತಿಯ ಅನುಭವ : ನಿನ್ನ  ಕಾಲಿಗೆ  ಚುಚ್ಚಿದ ಮುಳ್ಳನ್ನು  ಪ್ರೀತಿಯಿಂದಲೇ  ಮುಳ್ಳಿಗೂ  ನನಗೂ  ನೋವಾಗದೆ ತೆಗೆಯುವಾಗ  ಅಲ್ಲೊಂದು  ಪ್ರೀತಿಯ  ಅನುಭವವೇ ಬೇರೆ ….!!! ಹೊಸತನ : ನೀ ಬರೆದ ರಂಗೋಲೆ ಅಂಗಳದ  ಅಲಂಕಾರವೇ  ಬದಲಾಗಿ ಹೊಸತನ  ತಂದಿದೆ  ಒಂದೊಂದು  ಚುಕ್ಕೆಗಳ ಸಾಲುಗಳು  ನನ್ನ  ಹೃದಯದಲ್ಲಿ  ಚಿತ್ತಾರ ಮೂಡಿಸಿದೆ.. ನಗು : ಗೆಳತಿ, ನಿನ್ನ […]

ಸಾಮಾನ್ಯ ಜ್ಞಾನ (ವಾರ 53): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು? ೨.    ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು? ೩.    ಹೇಮಾವತಿ ನದಿಯ ಉಗಮ ಸ್ಥಳ ಯಾವುದು? ೪.    ಭಾರತ ಸರಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು? ೫.    ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು? ೬.    ಸೀತಾತನಯ ಇದು ಯಾರ ಕಾವ್ಯನಾಮ? ೭.    ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ? ೮.    ಮಜ್ಜಿಗೆಯಲ್ಲಿ ಇರುವ ಆಮ್ಲ […]