Facebook

Archive for 2014

ಪತ್ರ: ಗಣೇಶ್ ಖರೆ

ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ..  ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು… ಹಲ್ಲೋ ಸರ್… ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ […]

ನನಗೂ ನಿನಗೂ ಅಂಟಿದ ನಂಟಿನ: ಪ್ರವೀಣ

ಆತ ಮರೆತುಹೋದಾಗಲೆಲ್ಲ ಆಕೆ ನೆನಪು ಮಾಡಿಕೊಡುತ್ತಾಳೆ.  ಅದು ಬಾನು, ಇದು ಭುವಿ, ಅವ ಚಂದ್ರ, ಇವ ರವಿ, ಇದು ಇರುವೆ ಸಾಲು, ಅದು ಕುಡಿಯುವ ಹಾಲು. ಆ ದಿನ ರೈಲಿನಲ್ಲಿ ಅವಳು ಎಲ್ಲೋ ಪ್ರಯಾಣಿಸುವಾಗ ಆತ ಮೊದಲ ಬಾರಿಗೆ ಕಂಡಿದ್ದ.  ಕೊಳಕು ಅರಿವೆ, ಜಿಡ್ಡುಗಟ್ಟಿದ ಕೂದಲು, ಮಹಾ ದುರ್ಗಂಧ ಸೂಸುತ್ತ ಬಾಗಿಲ ಬಳಿ ಮುದುಡಿ ಕುಳಿತಿದ್ದ.  ಆತ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರಿಂದ ಅವಳು ಬೆದರಿ, ಬೇರೆಡೆ ದೃಷ್ಟಿ ತಿರುಗಿಸಿ ಬಾತರೂಮು ಹೊಕ್ಕು ಹೊರಬಂದಳು.  ವಾಪಸು ಬರುವಾಗ […]

ಬುಲ್-ಬುಲ್ ಮಾತಾಡಕಿಲ್ವಾ!?: ಆದರ್ಶ ಸದಾನ೦ದ ಅರ್ಕಸಾಲಿ

ಇಲ್ಲಿಯವರೆಗೆ      ಪಕ್ಷಿವೀಕ್ಷಣೆ ಭಾಗ-೪ "ಯಾಕ್ ಲೆ, ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿಯಲ್ಲಾ !?" "ಇವತ್ತ್ ಅಮವಾಸ್ಯ, ನೀನು ಸ್ನಾನ ಮಾಡಿ ಪ್ರೆಶ್ ಇರ್ತಿ ಅ೦ತ ಫೋನ್ ಮಾಡ್ದೆ!" "ನಾವು ನಿನ್ನಗ೦ಲ್ಲ ಲೇ, ದಿನಾಲೂ ಜಳ್ಕಾ (ಸ್ನಾನ) ಮಾಡ್ತೀವಿ" " ಗೊತ್ತೈತಿ ಬಿಡು, ಹಾಸ್ಟೆಲಿನ್ಯಾಗ ನೀ ಬರಿ ಹುಣ್ಣುಮೆ-ಅಮವಾಸ್ಯೆ ಲೆಕ್ಕಾಚಾರ ಹಾಕಿ ಸ್ನಾನ ಮಾಡವ !! ಆದ್ರೂ ..ಅದೇನು ಮಾರಾಯ, ಯಾವಗ್ ನೋಡಿದ್ರೂ ಪ್ರೇಶ್ ಇರ್ತಿದ್ದೆ . ಅದೇನ್ ಸೆಕ್ರೆಟ್ ಅ೦ತ ನಮ್ಗೂ ಹೇಳಲಾ? " […]

ಮಕ್ಕಳೆದುರಿ​ಗೆ ಮತ್ತು ಮಕ್ಕಳಾಗುವ ಮುನ್ನ: ಅಮರ್ ದೀಪ್ ಪಿ.ಎಸ್.

ಹಳ್ಳಿಗಳಲ್ಲಿ ಹಿಂದೆ ವೈದ್ಯರಿಗಿಂತ ಅನುಭವಸ್ಥರಾಗಿ ಸೂಲಗಿತ್ತಿಯರು ಗರ್ಭಿಣಿ ಹೆಂಗಸರಿಗೆ ಮನೆಯಲ್ಲೇ ನಾರ್ಮಲ್ ಹೆರಿಗೆ ಮಾಡಿಸಿ ಕೂಸು ಬಾಣಂತಿಯನ್ನು ಎರೆದು ನೀರು ಹಾಕಲು ಬರುತ್ತಿದ್ದರು.    ಹೊರಗೆ ಗಂಡ, ಉಳಿದವರು ಕಾತರದಿಂದ ಕಾಯುತ್ತಿದ್ದರೆ, ಒಳಗೆ ಗರ್ಭಿಣಿ ಹೆಂಗಸು ನೋವು ತಿನ್ನುತ್ತಿರುತ್ತಾಳೆ.   ಒಂದು ಕ್ಷಣ ನೋವು ತಿನ್ನುವ ಸದ್ದು ನಿಂತಿತೋ? ಮತ್ತೊಂದು ಕೂಗು ಕೇಳುತ್ತದೆ.  ಈಗ ಹುಟ್ಟಿದ್ದು ಹೆಣ್ಣೋ? ಗಂಡೋ? ಎನ್ನುವ ಕಾತರ.   ಹೊರಗಡೆ ಬಂದ ಮೊದಲ ಹೆಂಗಸು ಮಗು ಯಾವುದೆಂದು ತಿಳಿಸಿ ಮತ್ತೆ ಒಳ ನಡೆಯುತ್ತಾಳೆ. […]

ಕನಸು: ದಿವ್ಯ ಆಂಜನಪ್ಪ

'ಕನಸು', ಕೇಳಲೆಷ್ಟು ಸುಮಧುರ!. ಕನಸೆಂಬುದು ಯಾರಿಗಿಲ್ಲ? ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸು ಹುಟ್ಟುತ್ತಾ ಕಾಡುತ್ತಲೇ ಇರುವುದು. ಕನಸು ಕಾಣದ ಮನಸ್ಸು ಸಾಧ್ಯವೇ? ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಿದ್ದರೆ ಬದುಕಲಿ ಸೊಗಸೇ ಇರುತ್ತಿರಲಿಲ್ಲ. ಬದುಕು ಎಂದಾಗ ಅದರೊಳಗಿನ ಸೋಲು ಗೆಲುವುಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಸೋಲು ಗೆಲುವುಗಳು ಎಂಬ ಅಂಶಗಳು ಹುಟ್ಟಿಕೊಳ್ಳಲೂ ಮತ್ತೂ ಈ ಕನಸುಗಳೇ ಕಾರಣ. ಆದರೂ ಎಲ್ಲರೂ ಕನಸಿನ ದಾಸರೇ. ''ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ; ಕನಸೇ ಇಲ್ಲದ ದಾರಿಯಲಿ ಹೇಗೆ […]

ಮೂರು ಕವಿತೆಗಳು: ಕಡಲ ಬೇಟೆಗಾರ, ರಮೇಶ್ ನೆಲ್ಲಿಸರ, ದಿನೇಶ್ ಚನ್ನಬಸಪ್ಪ

ಅವಳೆಂದರೆ,,, ಅದ್ಯಾವುದೋ ಒಂದು ಹೊತ್ತಿನ ಮೌನ, ಮತ್ತೆಲ್ಲಿಂದಲೋ ತೂರಿ ಬಂದ ನಿಲ್ಲದ ಮಾತು,, ಮಚ್ಚೆಯ ಜೊತೆಜೊತೆಗೆ ಚೆಲುವಿನ ಗುಳಿಕೆನ್ನೆ, ಮರೆತಾಗ ಹೆಚ್ಚಾಗೇ ನೆನಪಾಗೊ ಏನೋ ಒಂದು ಗುರುತು. ಅವಳೆಂದರೆ,,, ಹಾಳಾದ ಸಂಜೆಯನೇ ರಂಗೇರಿಸೊ ಬೆಳಕು, ಮತ್ತನ್ನೆ ಬಗಲಲ್ಲೇ ಎತ್ತಿಟ್ಟುಕೊಂಡು ಬೀಸೋ ತಂಗಾಳಿ,, ನಿಧಾನ ಗತಿಯಲಿ ಏರಿಇಳಿಯೊ ರಂಗು, ಕಡಲಿನೆದೆಮೇಲೆ ಪ್ರತಿಫಲಿಸೋ ಅರೆನೀಲಿಮೋಡದ ಸಂದಿಗೊಂದಿಯ ಬಿಳಿ. ಅವಳೆಂದರೆ,,, ತುಂತುರು ಮತ್ತೆ ಚಳಿ ಹಿಡಿಸೊ ಆಷಾಡದ ಮಳೆ,, ನೆನೆವಾಗ ಕಾರಣವಿರದೇ ಮನಸೊಳಗೆ ಮೂಡೋ ಸಂಭ್ರಮ, ಜ್ವರದಮೂಲಕ ಕಾಡುವ ಹೊಸ ರಗಳೆ. […]

ಜಾತ್ರಿ ಜೊತಿಗಿನ ನೆನಪಿನ ಬುತ್ತಿ (ಭಾಗ 2): ನಾರಾಯಣ ಬಾಬಾನಗರ

ಇಲ್ಲಿಯವರೆಗೆ ರೊಕ್ಕಾ ಕಳಕೊಂಡ ಸುದ್ದಿ ಓದಾಕ ರೆಡಿಯಾಗಿ ಬಂದು ನೀವು ಕುಂತದ್ದ ರೀತಿ ನೋಡಿದರ…ನನ್ನ ಮ್ಯಾಲೆ ಎಷ್ಟು ಕನಿಕರ ನಿಮಗೈತಿ ಅನ್ನೂದು ತೋರಿಸಿಕೊಡತೈತಿ…ಹೋಗಲಿ ಬಿಡ್ರಿ…ಈ ಸಲ ‘’ಖರೇ ಖರೋ’’(ಈ ಶಬ್ದದ ಅರ್ಥ ದಯವಿಟ್ಟು ಡಿಕ್ಸನರಿಯೊಳಗ ಹುಡುಕಬ್ಯಾಡ್ರಿ,ನಿಮಗ ತಿಳದರ ಸಾಕು-ಅರ್ಥ ಹುಡುಕಿ ಅನರ್ಥ ಆಗುದು ಬ್ಯಾಡಂತ ನನ್ನ ಆಶೆ)ನನ್ನ ರೊಕ್ಕ ಹೆಂಗ ಹೋತು ಅನ್ನೂದು ಹೇಳೇ ಹೇಳತೀನಿ ನನ್ನನ್ನ ದಯವಿಟ್ಟು ನಂಬ್ರಲ್ಯಾ…. ಹಂಗ ನಮ್ಮ ಪಟಾಲಮ್ ಆ ಇಬ್ಬರೊಳಗಿನ ಹುಡುಗರೊಳಗ ಒಬ್ಬನ ಮುಂದ ಹೋಗಿ ನಿಂತಿವಿ.ಆ ಹುಡುಗ ಶುರು […]

ಮೌನ ಕ್ಯಾನ್ವಾಸಿನಲ್ಲೊಂದು ಕುಸುರಿ – ಬಾರನ್: ಸಚೇತನ ಭಟ್

ಮಧ್ಯ ಪ್ರಾಚ್ಯದ ವಿಶಿಷ್ಟ ದೇಶ ಇರಾನ್, ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ಇರಾನಿನ ಭಾಷೆಯಾದ ಪರ್ಷಿಯಾ ಭಾಷೆಯಲ್ಲಿ ತಯಾರಾಗುವ ಸಿನಿಮಾಗಳಿಗೆ, ಅಲ್ಲಿನ ಪ್ರಸಿದ್ಧ ಜಮಖಾನದ ಸೂಕ್ಷ್ಮ ಕುಸುರಿ ಕೆಲಸದ ಪ್ರಭಾವವಿದೆ. ಜಗತ್ತಿನ ೩೦ ಪ್ರತಿಶತ ಜಮಾಖಾನಗಳು ಇರಾನಿ ಜನರ ಪಳಗಿದ ಕುಸುರಿಯಲ್ಲಿ ನೇಯಲ್ಪಡುತ್ತವೆ ಹಾಗೂ ಜಮಖಾನದೆಡೆಯಲ್ಲೆ ಬೆಳೆದ ಇರಾನಿನ ಸಿನಿಮಾ ಜಗತ್ತು,  ಜಮಖಾನದ ಕುಸುರಿಯಷ್ಟೇ ಅದ್ಭುತವಾದ ಚೆಂದನೆಯ ಆಪ್ತವಾದ ಮೆತ್ತಗಿನ ಮೋಹಕವಾದ ಸರಳವಾದ ಕಲಾಕೃತಿಯನ್ನು  ಪರದೆಯಲ್ಲಿ ಮೂಡಿಸಿಬಿಡುತ್ತದೆ.  ಇರಾನಿ ಸಿನಿಮಾಗಳ ಜೀವಾಳವೆಂದರೆ ಸರಳತೆ […]

ಸ್ವಚ್ಛ ಭಾರತ ಮತ್ತು ನಾವು : ಪ್ರಶಸ್ತಿ

ಎರಡು ವಾರದ ಹಿಂದೆ. ಆಫೀಸಿಂದ ಮನೆಗೆ ನಡ್ಕೊಂಡು ಬರ್ತಾ ಇದ್ದೆ. ಐಟಿಪಿಎಲ್ಲಿನ್ ಗ್ರಾಫೈಟ್ ಸಿಗ್ನಲ್ಲಿಂದ ಕುಂದಲಹಳ್ಳಿ ಗೇಟಿಗೆ ಬರೋ ರಸ್ತೆ. ಎಡಭಾಗದ ಫುಟ್ಪಾತಲ್ಲಿ ಬರ್ತಿದ್ದೋನಿಗೆ ಏನೋ ಚಿತ್ತಾರ ಬರೆದ ಹಾಗೆ ಕಾಣ್ತು ಗೋಡೆ ಮೇಲೆ. ಹೌದು. ಸಖತ್ತಾದ ಚಿತ್ರ(ಚಿತ್ರ ೧). ಅಕ್ಟೋಬರ್ ಎರಡನೇ ತಾರೀಖಿಂದ ಶುರುವಾದ ಸ್ವಚ್ಛ ಭಾರತ ಅಭಿಯಾನದ ಪ್ರಭಾವವಾ ಇದು ಅನಿಸ್ತು. ಹ್. ಒಂದೆರಡು ದಿನ ಚೆನ್ನಾಗಿ ಇಟ್ಟಿರ್ತಾರೆ. ಒಂದ್ನಾಲ್ಕು ದಿನ ಆಗ್ಲಿ.ಮತ್ತೆ ಇದೇ ತರ ಆಗಿರತ್ತೆ. ಬದಲಾಗಬೇಕಿದ್ದುದು ಜನರ ಮನೋಭಾವ. ಒಬ್ರಿಬ್ರು ಹಿಂಗೆ […]

ನಾಟ್ಯೋತ್ಪತ್ತಿ: ಕೆ.ಪಿ.ಎಂ.ಗಣೇಶಯ್ಯ

ಭವದ್ಭಿಃ ಶುಚಿಭಿರ್ಭೂತ್ವಾ ತಥಾವಹಿತಮಾನಸೈಃ|  ಶ್ರೂಯತಾಂ ನಾಟ್ಯವೇದಸ್ಯ ಸಂಭವೋ ಬ್ರಹ್ಮನಿರ್ಮಿತಃ| -ನಾಟ್ಯಶಾಸ್ತ್ರ  ನಾಟ್ಯದ ಉತ್ಪತ್ತಿ ಎಂಬುದು ಹೇಗಾಯ್ತು? ನಾಟ್ಯ ವಿಶಾರದ ಭರತಮುನಿಯನ್ನು ಆತ್ರೇಯ ಮೊದಲಾದ ಋಷಿಗಳು ಪ್ರಶ್ನಿಸಿದರು. ಪೂರ್ವದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಕೃತಯುಗ ಮುಗಿದು ವೈವಸ್ವತ ಮನ್ವಂತರದ ತ್ರೇತಾಯುಗ ಆರಂಭವಾಗುವ ಮಧ್ಯಂತರದಲ್ಲಿ ಜನರು ಕಾಮಲೋಭಗಳಲ್ಲಿ ಅಸಭ್ಯರಾಗಿ ವರ್ತಿಸುತ್ತಿದ್ದರು. ಇಂದ್ರನನ್ನು ಮುಂದೆ ಮಾಡಿಕೊಂಡ ದೇವತೆಗಳು ಬ್ರಹ್ಮನಲ್ಲಿಗೆ ಬಂದು ವೇದಗಳು ಶೂದ್ರಜಾತಿಗಳಿಗೆ ನಿಷಿದ್ಧವಾದುದರಿಂದ ಎಲ್ಲ ಜಾತಿ (ವರ್ಣ)ಗಳಿಗೆ ಲಭ್ಯವಾಗುವಂತಹ ಐದನೆಯ ವೇದವನ್ನು ರಚಿಸುವಂತೆ ಭಿನ್ನವಿಸಿದರು. ಅದರಂತೆ ಬ್ರಹ್ಮನು ಋಗ್ವೇದದಿಂದ ಸಂಭಾಷಣೆಗಳಿಂದ ಕೂಡಿದ […]