Facebook

Archive for 2014

ದೇಹವೆಂಬೋ ಮೋಟುಗೋಡೆಯ ಮೀರಿ..: ಮೌಲ್ಯ ಎಂ.

                                                       ಕವಿತೆ ಆತ್ಮದ ನಾದ. ಅದ್ಯಾಕೆ ದೇಹದ ಮೇಲೆಯೇ ಉರುಳಿಸುತ್ತಾರೋ.? ಅಂಗಾಂಗಕ್ಕೂ, ಅಂತರಂಗಕ್ಕೂ ಪರದೆ ತೀರ ಕಲಸಿ ಹೋಗುವಷ್ಟು ತೆಳುವಾ..? ಯಾಕೆ ಈವತ್ತಿನ ಪದ್ಯಗಳು ಕೇವಲ Anotomical description ಗಳಾಗುತ್ತಿವೆ? ಲಜ್ಜೆ ಈವತ್ತಿನ ದಿನಮಾನಕೆ ಒಂದು ಅನಗತ್ಯ ಸಂಗತಿಯೇ? ಅಥವಾ […]

ಶಂಕರ್ ನಾಗ್ ಇನ್ನು ಬದುಕ್ಕಿದ್ದಾರೆ: ಮುಕುಂದ್ ಎಸ್..

"ನಲಿವ ಗುಲಾಬಿ ಹೂವೇ…" ಎಂದು ಪಕ್ಕದಲ್ಲಿದ್ದ ಗೆಳೆಯ ಒಂದೇ ಸಾಲನ್ನು ಮಂತ್ರದಂತೆ ಪಠಿಸುತ್ತಿದ್ದ. ನಾನು ಅವನನ್ನು ಎಚ್ಚರಿಸಿ, "ಕೇಳಿಸಿಕೊಳ್ಳೋ, ಶಂಕರಣ್ಣನ ಹೆಂಡ್ತಿ ಮಾತಾಡ್ತಿದ್ದಾರೆ" ಎಂದೆ. ಅವನಿಗೆ ನನ್ನ ಮಾತು, ಅರುಂಧತಿನಾಗ್ ರವರ ಮಾತು ಎರಡೂ ಬೇಡವಾಗಿತ್ತು. ಅವನಿಗೆ ಶಂಕರ್ ನಾಗ್ ನೆನಪು ಆ ಸಂಜೆಗೆ ಸಾಕಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಡಿವಿಸ್ ಕಾಲೇಜಿನಲ್ಲಿ ಹುಡುಗ-ಹುಡುಗಿಯರನ್ನು ಉದ್ದೇಶಿಸಿ, "ಆ ಹುಡುಗನ ಹೆಸರಲ್ಲಿ ಒಂದು ರಂಗಮಂದಿರವನ್ನು ಕಟ್ಟಬೇಕು. ನನ್ನ ಹತ್ತಿರ ಯೋಜನೆ ತಯಾರಾದ ಮೇಲೆ ಮತ್ತೆ ನಿಮ್ಮ ಮುಂದೆ ಬಂದು, […]

ಹೋಳಿಗೆಯೂ … ಹಳೇ ಪೇಪರ್ರೂ ..: ಅನಿತಾ ನರೇಶ್ ಮಂಚಿ

ಚಿಕ್ಕಮ್ಮ ಬಂದು ಗುಟ್ಟಿನಲ್ಲಿ ಎಂಬಂತೆ ನನ್ನನ್ನು ಕರೆದು ಹೋಳಿಗೆ ಕಟ್ಟು ಕಟ್ಟಿಡ್ತೀಯಾ.. ಎಂದಳು. ಚಿಕ್ಕಪ್ಪನ ಕಡೆಗೆ ನೋಡಿದೆ. ಐವತ್ತು, ಮತ್ತೊಂದು ಹತ್ತು  ಎಂಬಂತೆ ಸನ್ನೆ ಮಾಡಿದರು.  ಸರಿ .. ನಮ್ಮ ಬಳಗ ಸಿದ್ದವಾಯ್ತು. ಈ ರಹಸ್ಯ ಕಾರ್ಯಕ್ಕೆಂದೇ ಒಂದು ಪುಟ್ಟ ಕೋಣೆಯಿತ್ತು. ನಾವಲ್ಲಿಗೆ ಸೇರಿ  ಕಾಲು ಚಾಚಿ ಕುಳಿತುಕೊಂಡೆವು.  ಅಲ್ಲೇ ಇದ್ದ ಚಿಕ್ಕಪ್ಪನ ಮಗ ನಮ್ಮ ಸಹಾಯಕ್ಕೆ ಸಿದ್ಧನಾದ.  ಪೇಪರ್ , ಪ್ಲಾಸ್ಟಿಕ್ ಕವರ್, ಹೋಳಿಗೆಯ ಗೆರಸೆ ತಂದಿಡು ಎಂದೆವು.  ಎಲ್ಲವೂ ಒಂದೊಂದಾಗಿ ನಮ್ಮೆದುರು ಪ್ರತ್ಯಕ್ಷವಾಯಿತು.   […]

ನೊಬೆಲ್ ಪ್ರಶಸ್ತಿ – ೨೦೧೪: ಜೈಕುಮಾರ್. ಹೆಚ್. ಎಸ್.

ಭೌತವಿಜ್ಞಾನ: ನೀಲಿ ವರ್ಣದ ಬೆಳಕು ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ಕಡಿಮೆ ವಿದ್ಯುತ್‌ನಿಂದ ಹೆಚ್ಚಿನ ಬೆಳಕು ನೀಡುವ ದೀಪಗಳಿಗಾಗಿ ಶೋಧನೆ ನಿರಂತರವಾಗಿ ನಡೆಯುತ್ತಲೇ ಇದೆ. ೨೦ ನೇ ಶತಮಾನದಲ್ಲಿ ಇನ್‌ಕ್ಯಾಂಡಿಸೆಂಟ್ ಎಂದು ಕರೆಯಲಾಗುವ ಬಲ್ಬ್ ಗಳದೇ ಪಾರುಪತ್ಯ. ಇಂದಿಗೂ ನಮ್ಮ ಬಹುತೇಕ ಮನೆಗಳಿಂದ ಇವು ಕಣ್ಮರೆಯಾಗಿಲ್ಲ. ಇದರಲ್ಲಿ ಟಂಗಸ್ಟನ್ ಫಿಲಮೆಂಟ್ ಇದ್ದು, ಫಿಲಮೆಂಟ್ ಕಾದ ನಂತರ ಬೆಳಕನ್ನು ನೀಡಲಾರಂಭಿಸುತ್ತವೆ. ಆಮೇಲೆ ಟ್ಯೂಬ್‌ಲೈಟ್ (ಪ್ಲೋರೋಸೆಂಟ್) ದೀಪಗಳು ಬಂದವು. ಇದರಲ್ಲಿ ಪಾದರಸದ ಅನಿಲದ ಬಾಷ್ಪಗಳು ವಿದ್ಯುತ್ ಸರಬರಾಜಿನಿಂದ ಕಾದು ರಂಜಕದ ಕೋಟಿಂಗ್‌ನ್ನು […]

ನಿಮ್ಮ ಗಮನಕ್ಕೆ…

ಅದ್ವೈತ ಪ್ರಕಾಶನ, ಬೆಂಗಳೂರು ಇವರು ಪ್ರಥಮ ಬಾರಿಗೆ ಕನ್ನಡ ಕವಿತೆಗಳ ಆಂಡ್ರಾಯ್ಡ್ ಆ್ಯಪ್ ಒಂದನ್ನು ಅಭಿವೃದ್ದಿ ಮಾಡಿದ್ದಾರೆ. ಈ ಆಂಡ್ರಾಯ್ದ್ ಆ್ಯಪ್ ಅನ್ನು ಗೂಗಲ್ ಸ್ಟೋರ್ಸ್ ನಲ್ಲಿ ಉಚಿತವಾಗಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ನಲ್ಲಿ 25 ಕನ್ನಡ ಕವಿಗಳ ಸುಮಾರು 75 ಕವಿತೆಗಳು ಓದಲು ಸಿಗುತ್ತವೆ. ಈ ಕವಿತೆಗಳಿಗೆ ಪೂರಕವಾಗುವಂತೆ ಉತ್ತಮ ರೇಖಾಚಿತ್ರಗಳು ಸಹ ಈ ಆ್ಯಪ್ ನಲ್ಲಿ ನೋಡಲು ಲಭ್ಯವಿವೆ.  ವಿದ್ಯಾಶಂಕರ್ ಹರಪನಹಳ್ಳಿಯವರ ನೇತೃತ್ವದಲ್ಲಿ ಮೂಡಿಬಂದಿರುವ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಮಾಹಿತಿ […]

ಇಂಗು ತೊಂಡೆ ಇದ್ದರೆ…: ಮಾಲಾ

ಅಂಗಡಿಯಿಂದ ತರಕಾರಿ ತರುವುದು ಬಲು ಸುಲಭ. ಕೈಯಲ್ಲಿ ದುಡ್ಡಿದ್ದರೆ ಸಾಕು. ಆದರೆ ತರಕಾರಿ ಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಹಿತ್ತಲಲ್ಲಿ ತರಕಾರಿ ಬೆಳೆಯಲು ಎಷ್ಟೋ ಸಲ ನಾನೂ ಪ್ರಯತ್ನಿಸಿದ್ದೆ. ಹಳ್ಳಿಯಿಂದ ಪೇಟೆಗೆ ಬಂದ ನಾನು ಕೆಲವಾರು ವರ್ಷ ಮಣ್ಣಿನ ನಂಟು ಬೆಳೆಸಿದ್ದೆ. ಬೀನ್ಸ್, ಬೆಂಡೆ, ಬದನೆ ಬೀಜ ಹಾಕಿ ಅದು ಸಸಿಯಾಗಿ ಅರಳಿ ನಿಂತಾಗ ಸಂಭ್ರಮಿಸಿದ್ದೆ. ಕೇವಲ ಒಂದೆರಡು ಕಾಯಿ ಬಿಟ್ಟು ಅದನ್ನೇ ಖುಷಿಯಿಂದ ಅಡುಗೆ ಮಾಡಿ ತಿಂದದ್ದು ಇತ್ತು. ನಾವೇ ಬೆಳೆದ ತರಕಾರಿ ತಿನ್ನುವಾಗ […]

“ಭವಿಷ್ಯ”ದ ಜಗುಲಿಕಟ್ಟೆ​ಯಲ್ಲಿ ಅನಿರೀಕ್ಷಿತ​ವಾಗಿ ಕುಳಿತು: ಅಮರ್ ದೀಪ್ ಪಿ.ಎಸ್.

ತಮಾಷೆ ಅನ್ನಿಸಿದರೂ ಕಿವಿಗೆ ಬಿದ್ದ ಒಂದು ಪ್ರಸಂಗ ಹೇಳಿಬಿಡುತ್ತೇನೆ.  ಒಂದಿನ ಸಂಜೆ ಪೂರ್ಣ ಬೆಳಕಿಲ್ಲದ  ದೊಡ್ಡ ಅಂಕಣದ ಕೋಣೆಯಲ್ಲಿ ಅಲ್ಲೊಂದು ಇಲ್ಲೊಂದು ದೀಪ ಹಚ್ಚಿಟ್ಟಂತಿದ್ದ  ಬೆಳಕಲ್ಲಿ  ಕುಳಿತು ಗುಸು ಗುಸು ಮಾತಾಡುವ ಮಂದಿ ಮಧ್ಯೆ ಅತ್ತಿಂದಿತ್ತ ತಿರುಗುವ ಹುಡುಗನೊಬ್ಬ. ಮಾತಾಡುವ ಗುಂಪಿನಲ್ಲಿ ಒಬ್ಬ ಧಡೂತಿ ಮನುಷ್ಯನೊಬ್ಬ   ಹುಡುಗನನ್ನು ಕರೆದು "ಏನ್ ತಮ್ಮಾ ನಿನ್ ಹೆಸ್ರು?" ಕೇಳಿದ.   ಈ ಹುಡುಗ "ಬಿರಾದರ" ಅಂದ.  "ಸರಿ, ಈ  ತುಂಡು ಪೇಪರ್ ಮೇಲೆ ನಿನ್ ಹೆಸ್ರು ಬರ್ದು ಸೈನ್ […]

ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿರುವ ಮಾದಕ ವಸ್ತುಗಳು: ಸುವರ್ಣ ಶಿ. ಕಂಬಿ

  "ಇಂದಿನ ಮಕ್ಕಳೇ ನಾಳಿನ ಪ್ರಜೆಗಳು", "ಇಂದಿನ ಯುವಕರೇ ನಾಳಿನ ನಾಗರಿಕರು" ಎನ್ನುವ ಮಾತು ಸತ್ಯ. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳ ಕೈಯಲ್ಲಿದೆ. ಯುವಶಕ್ತಿ ದೇಶದ ಶಕ್ತಿಯಾಗಿದೆ. ನಾಡಿನ ಆಸ್ತಿಯಾದ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಒಯ್ಯುವ ಗುರುತರ ಜವಾಬ್ದಾರಿ ತಂದೆ-ತಾಯಿ, ಶಿಕ್ಷಕರ, ಸಮಾಜದ, ಸರಕಾರದ ಮೇಲಿದೆ. ಇದು ಆಧುನಿಕ ಯುಗ. ಮನುಷ್ಯ ವೈಜ್ಞಾನಿಕ, ವೈಚಾರಿಕ, ತಂತ್ರಜ್ಞಾನ, ವೈದ್ಯಕೀಯ ಮುಂತಾದವುಗಳಿಗೆ ಸಂಬಂಧಿಸಿದಂತೆ ತುಂಬಾ ಮುಂದುವರೆದಿದ್ದಾನೆ. ಅನೇಕ ಸಂಶೋಧನೆಗಳನ್ನು […]

ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ

ಜಾತ್ರೆ ಅಂದರ..ನಿಮಗೆ ಏನ ನೆನಪಾಗತೈತಿ?ಹಿಂಗ ನಿಮಗ ಯಾರರ ಕೇಳಿದರ..ಮಿಠಾಯಿ ಮಾರುವ ಅಂಗಡಿ,ಫುಗ್ಗಾ ಮಾರುವವನು ಬಲೂನಿಗೆ ಗಾಳಿ ತುಂಬುವ ಮುಖ,ಆಟಿಕಿ ಸಾಮಾನುಗಳನ್ನು ಹರಡಿಕೊಂಡು ಕುಳಿತ ಅಜ್ಜಿ,ಬಣ್ಣದ ಶರಬತ್ ಮಾರಕೋತ ನಿಂತವನ ಕೂಗು,ಎಣ್ಣಿಯೊಳಗ ಭಜಿ ಕರಕೋತ ಕುಂತವಳು ಒಂದ ಕೈಯಿಂದ ಕಡಾಯಿಯೊಳಗ ಭಜಿ ಕರೀತಿದ್ದರ ಇನ್ನೊಂದ ಕೈಯಿಂದ ಹಂಗ ಹಣೀ ಮ್ಯಾಲಿಂದ ಕೆಳಗ ಇಳೀತಿದ್ದ ಬೆವರನ್ನ ಒರಿಸಿಕೊಂತ ಕುಂತ ಚಿತ್ರಗಳು….ಅಬ್ಬಾ ಜನ ಜಂಗುಳಿ!! ಅಂಥಾದರಾಗ ಅವ್ವನ ಜೊತಿ ಜಾತ್ರಿಗಿ ಬಂದ ಪುಟ್ಟ ಪೋರಿ ತನ್ನ ಅವ್ವಳಿಂದ ತಪ್ಪಿಸಿಕೊಂಡು ರೊಯ್ಯನೆ ಅಳಕೋತ […]

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ವಾಮನ ಕುಲಕರ್ಣಿ, ಅಕ್ಷಯ ಕಾಂತಬೈಲು

ಅಸ್ಪೃಶ್ಯರು ಎಲೆಗಳುದುರಿದ ಒಣ ಕೊಂಬೆಗೆ ಜೋಡಿ ಬಾವಲಿ ಜೋತು ಬಿದ್ದಂತೆ ಎದ್ದು ಕಾಣುವ ನಿನ್ನ ಪಕ್ಕೆಲುಬುಗಳಿಗೆ ಬತ್ತಿ ಹೋದ ಸ್ಥನಗಳು ನನ್ನ ಬೆರಳುಗಳೂ ಅಂತೆಯೇ ಎಲುಬಿನ ಚೂರುಗಳಿಗೆ ತೊಗಲುಡಿಸಿದಂತೆ  ಮಾಂಸಲವೇನಲ್ಲ ನಮ್ಮಿಬ್ಬರ ಮಿಲನ ರಮ್ಯವಲ್ಲ; ನವ್ಯ ಮಾಂಸಖಂಡಗಳ ಪ್ರಣಯದಾಟವಲ್ಲ ಅದು, ಮೂಳೆ-ತೊಗಲಿನ ಸಂಘರ್ಷ! *** ವಿದ್ಯುತ್ತಂತಿ ಸ್ಪರ್ಶಿಸಿ ಸತ್ತ  ಬಾವಲಿಯ ರೆಕ್ಕೆಯನ್ನು ತೆಂಗಿನ ಚಿಪ್ಪಿಗೆ ಬಿಗಿದು ಕಟ್ಟಿ ರಚಿಸಿದ ಪುಟ್ಟ ಡೋಲು ಬಾರಿಸುತ್ತಿದ್ದಾನೆ ನನ್ನ ಮುದ್ದು ಮಗ ಸವೆದ ಪಕ್ಕೆಲುಬುಗಳಂತಿರುವ ಚೋಟುದ್ದ ಬೆತ್ತಗಳಿಂದ ಬಾವಲಿಯ ರೆಕ್ಕೆಗೆ ಬಡಿಯುವಾಗ […]