Facebook

Archive for 2014

ಒಂದು ಹಲ್ಲಿಯ ಕತೆ: ಪ್ರಸನ್ನ ಆಡುವಳ್ಳಿ

ಇತಿಹಾಸದ ಈ ದಂತಕತೆ ನಿಮಗೆ ಗೊತ್ತಿರಲಿಕ್ಕೂ ಸಾಕು: ಮರಾಠರ ಇತಿಹಾಸದಲ್ಲಿ ಶಿವಾಜಿಯಷ್ಟೇ ಹಿರಿಮೆ ಆತನ ಸೇನಾಪತಿ ತಾನಾಜಿಗೂ ಇದೆ. ಈತ ಶಿವಾಜಿಯ ಬಲಗೈ ಬಂಟ, ಅಪ್ರತಿಮ ಸಾಹಸಿ. ಪುರಂದರಗಢ, ಪ್ರತಾಪಗಢ, ಕೊಂಡಾಣಾ ಕೋಟೆಗಳನ್ನು ಶಿವಾಜಿಯ ವಶಕ್ಕೊಪ್ಪಿಸುವಲ್ಲಿ ಈತನ ಪಾತ್ರ ಮಹತ್ವದ್ದು. ಇದು ತಾನಾಜಿಯ ಕೊನೆಯ ಹೋರಾಟದ ಕತೆ. ಅದು ಕ್ರಿ.ಶ. ೧೬೭೦ರ ಚಳಿಗಾಲದ ಒಂದು ದಿನ. ಪುಣೆಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರದಲ್ಲಿರುವ ಕೊಂಡಾಣಾ ಕೋಟೆ ಆಗ ಮೊಘಲರ ಒಡೆತನದಲ್ಲಿತ್ತು. ಸಹ್ಯಾದ್ರಿ ಬೆಟ್ಟಗಳ ತುದಿಯಲ್ಲಿದ್ದ ದುರ್ಗಮ ಕೋಟೆಗೆ […]

ಸುಳಿವ ಗಾಳಿಯ ಶಬ್ದ ಹಿಡಿದು: ನಾಗರಾಜ್ ಹರಪನಹಳ್ಳಿ

‘ನಮಸ್ತೆ’ ಅವಳು ‘ಎಫ್ ಬಿ’ ಯಲ್ಲಿ ಕಳಿಸಿದ ಮೊದಲ ಶಬ್ದ ಸಂದೇಶವಿದು. ನಾನು ಕುತೂಹಲದಿಂದಲೇ ಪ್ರತಿಕ್ರಿಯಿಸಿದೆ ಕೊಂಚ ಉತ್ಸುಕನಾಗಿ. ‘ಹಾಯ್ ’ ‘ಥ್ಯಾಂಕ್ಸ ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ’ ‘ ನನ್ನ ಫ್ರೆಂಡ್ ಪೋಟೋ ಒಂದಕ್ಕೆ ನಾನು ಕಮೆಂಟ್ ಹಾಕಿದ್ದು ನಿಮಗೆ ಇಷ್ಟವಾಗಿ, ನೀವು ಲೈಕ್ ಒತ್ತಿದ್ದಿರಿ. ನಾನು ಕುತೂಹಲದಿಂದ ನಿಮ್ಮನ್ನ ಪರಿಚಯ ಮಾಡಿಕೊಳ್ಳಕ್ಕೆ ಮುಂದಾದೆ ನೋಡಿ. ಹಾಗಾಗಿ ಈ ಗೆಳೆತನ ಅಂದೆ.  ‘ಅವರು ನಿಮಗೆ ಗೊತ್ತಾ’ ಅಂತ ಅವಳು ಕೇಳಿದ್ಲು. ‘ತೀರಾ ಪರಿಚಿತರೇನಲ್ಲ. ಎಫ್ […]

ಮೊದಲ ಚು೦ಬನ ದ೦ತ ಭಗ್ನ: ಆದರ್ಶ ಸದಾನ೦ದ ಅರ್ಕಸಾಲಿ

"ಪಕ್ಷಿವೀಕ್ಷಣೆ ಭಾಗ ೨ " ಇಲ್ಲಿಯವರೆಗೆ ಅಲ್ಲಿ೦ದ ಒ೦ದಿಷ್ಟು, ಇಲ್ಲಿ೦ದ ಒ೦ದಿಷ್ಟು ಅ೦ದ್ರೆ ಮಾಹಿತಿ ಜಾಲದಿ೦ದ ಒ೦ದಿಷ್ಟು ಮತ್ತು ಪುಸ್ತಕಗಳಿ೦ದ ಒ೦ದಿಷ್ಟು 'ಪಕ್ಷಿ ವೀಕ್ಷಣೆಗೆ' ಸ೦ಭ೦ದಿಸಿದ ಮಾಹಿತಿ ಕಲೆ ಹಾಕಿ ಆಯಿತು. ಹಳೇ ದುರ್ಬಿನ್ನು ಮತ್ತು ಕ್ಯಾಮೆರಾ ಹೊರತೆಗೆದಿಟ್ಟಾಯ್ತು, ಇನ್ನು ಬೆಳಿಗ್ಗೆ ಬೇಗನೇ ಎದ್ದು ಮನೆಯಿ೦ದ ಹೊರಬೀಳಬೇಕು. ಯಾವ ಪಕ್ಷಿ ಅ೦ತಲ್ಲ, 'ಪಸ್ಟ್ ಕಮ್ ಪಸ್ಟ್ ಸೆರ್ವೆಡ್' ಥರಾ, ಯಾವ್ದು ನನ್ನ ಕಣ್ಣಿಗೆ ಮೊದಲು ಬೀಳೋ ಪುಣ್ಯ ಮಾಡಿತ್ತೋ, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾ ಅ೦ಥ ತೀರ್ಮಾನಿಸಿದೆ. […]

ಒಬ್ಬ ನಟನ ಸುತ್ತ: ಹೃದಯಶಿವ

  ಟಾಮ್ ಹಾಂಕ್ಸ್ ಕ್ಯಾಲಿಫೋರ್ನಿಯಾದ ಪ್ರತಿಭಾವಂತ. ಈತ ಜನಿಸಿದ್ದು 1956ರಲ್ಲಿ. ಆವರೆಗೆ ಹಾಲಿವುಡ್ ಕಂಡರಿಯದ ವಿಶಿಷ್ಟ ನಟ ಎನಿಸಿಕೊಂಡ. ಅದನ್ನು ಬಿಡಿಸಿ ಹೇಳಬೇಕಿಲ್ಲ. ಆತನ ಬದುಕು ನಿಜಕ್ಕೂ ರೋಮಾಂಚಕ. ಟಾಮ್ ಹಾಂಕ್ಸ್ ಅಡುಗೆಭಟ್ಟನೊಬ್ಬನ ಮಗ; ಜೊತೆಗೆ ರೆಸ್ಟೋರೆಂಟ್ ಮ್ಯಾನೇಜರಾಗಿಯೂ ಕೆಲಸ ಮಾಡುತ್ತಿದ್ದಾತ. ಬರಹಗಾರನಾಗಬಯಸಿದ್ದ ಟಾಮ್ ತಂದೆ ಅಡುಗೆಭಟ್ಟನಾಗಿ ಬದುಕು ಸವೆಸಿದರೂ ಸಾಯುವ ಮುನ್ನ ತನ್ನ ಅಪ್ರಕಟಿತ ಆತ್ಮಚರಿತ್ರೆ ಬರೆದಿದ್ದ. ಟಾಮ್ ನ ತಾಯಿ ಆಸ್ಪತ್ರೆಯೊಂದಲ್ಲಿ ಕೆಲಸಕ್ಕಿದ್ದವಳು.  ಹೀಗಿರಲು ಟಾಮ್ ಹಾಂಕ್ಸ್ ಗೆ ಅಚ್ಚರಿ ಕಾದಿತ್ತು. ಬೆಸೆದ ಹಸ್ತಗಳಂತಿದ್ದ […]

ಗೂಡು ಕಟ್ಟುವ ಸಂಭ್ರಮದಲ್ಲಿ: ಶ್ರೀದೇವಿ ಕೆರೆಮನೆ

ಮನೆಯ ಮುಂದಿನ ಬಟ್ಟೆ ಒಣ ಹಾಕುವ ತಂತಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಹಳದಿ ಕಪ್ಪು ಬಣ್ಣ ಮಿಶ್ರಿತ ಪುಟ್ಟ ಹಕ್ಕಿಯೊಂದು ಗೂಡು ಕಟ್ಟಲು ಬರುತ್ತಿತ್ತು. ಅದರ ಪುಟ್ಟ ಚುಂಚಿನಲ್ಲಿ ಇಷ್ಟಿಷ್ಟೆ ಕಸ ಕಡ್ಡಿ, ಮರದ ತೊಗಟೆ, ಒಣಗಿದ ಎಲೆ ಎಲ್ಲವನ್ನೂ ಕಚ್ಚಿಕೊಂಡು ಬಂದು ಆ ಗೂಡಿಗೆ ಅಂಟಿಸುತ್ತಿತ್ತು. ಅದರ ಪುಟ್ಟ ಬಾಯಿಗೆ ನಿಲುಕುತ್ತಿದ್ದುದೆಷ್ಟೋ… ಕಚ್ಚಿಕೊಂಡು ಹಾರಿ ಬರುವಾಗ ಅದರ ಬಾಯಲ್ಲಿ ಇರುತ್ತಿದ್ದುದು ಎಷ್ಟೋ… ಗೂಡಿಗೆ ಅಂಟಿಸುವಾಗ ಕೆಳಗೆ ಬೀಳದೇ ಅಂಟಿಕೊಳ್ಳುತ್ತಿದ್ದುದು  ಎಷ್ಟೋ… ಒಟ್ಟನಲ್ಲಿ ನಿಮಿಷಕ್ಕೆ […]

ಮಾರ್ನೆಮಿ: ಭರತೇಶ ಅಲಸಂಡೆಮಜಲು.

         ಪಿಲಿ, ಕೊರಗೆ, ಕರಡಿ, ಸಿಂಹ ನಲಿತೋಂತಲ್ಲಗೆ,  ಪುರಿ ಬಾಲೆ, ಜೆತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್‍ಗೆ, ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು….. ತುಳುನಾಡಿನಲ್ಲಿ ನವರಾತ್ರಿ, ದಸರಾಕ್ಕಿಂತ ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ. ೯ದಿನಗಳ ಕಾಲ ಭರಪೂರ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷದ ಮೂಲಕ ಅರ್ವಿಭಾವಗೊಳಿಸಿ ಆ ತೆರದಲ್ಲಿ […]

ಸುಸಂಸ್ಕೃತ ಪರಂಪರೆ ನೆನಪಿಸಿದ ’ಹೇಮರೆಡ್ಡಿ ಮಲ್ಲಮ್ಮ’ : ಹಿಪ್ಪರಗಿ ಸಿದ್ಧರಾಮ

ಇತ್ತೀಚೆಗೆ (೧೭-೦೯-೨೦೧೪) ಧಾರವಾಡದಲ್ಲಿ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ ನಾಲ್ಕನೇಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನಲವಡಿ ಶ್ರೀಕಂಠಶಾಸ್ತ್ರಿಗಳ ’ಹೇಮರೆಡ್ಡಿ ಮಲ್ಲಮ್ಮ’ ನಾಟಕವನ್ನು ಪ್ರದರ್ಶನ ನಡೆಯಿತು. ಕಳೆದ ಶತಮಾನದಲ್ಲಿ (೧೯೩೭) ಆರಂಭಗೊಂಡ ಪುರುಷ ಕಲಾವಿದರು (ಮಹಿಳಾ ಕಲಾವಿದರಿಲ್ಲದ) ಮಾತ್ರ ಇರುವ ವಿಶ್ವದ ಏಕೈಕ ವೃತ್ತಿ ನಾಟಕ ಕಂಪನಿಯೆಂದು ಹೆಸರಾಗಿರುವ ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ಗತಕಾಲದ ರಂಗವೈಭವ ನೆನಪಿಸುವಂತೆ ಅಭಿನಯಿಸಿದರು. ಆಧುನಿಕ ಕಾಲದ ಹಲವಾರು ಮಾಧ್ಯಮಗಳ ಎದುರು ನಾಟಕ ಕಂಪೆನಿಗಳು ನೇಪಥ್ಯಕ್ಕೆ ಸರಿದು […]

ಎರಡು ಕವಿತೆಗಳು: ಪ್ರಮೋದ್ ಬಿ.ಸಿ., ಅಕುವ

  ನನ್ನ ಹಾಡಿನ ಪಲ್ಲವಿ  ಸ್ನೇಹದ ಸವಿನೆನಪಿನ ಇಂಪಾದ ಸ್ವರ ನೀನು, ಬಯಸಿರುವೆ ನಿನ್ನ ವಾಣಿಯ ಮಾಯೆಯನು; ನನ್ನ ರಹಸ್ಯ ಹೊತ್ತಿಗೆಯ ಸಾರಾಂಶ ನೀನು, ಲೇಖನಿಯು ಕಾತರಿಸಿದೆ ಮೊದಲ ಅಕ್ಷರವನು; ಇಳಿಸಂಜೆಯ ಮಧುರವಾದ ಕಲ್ಪನೆ ನೀನು, ಕಾದಿರುವೆ ನಿನ್ನ ಒಲವಿನ ಆಗಮನವನು; ಮುಂಬರುವ ಕ್ಷಣದಲ್ಲಿ ನಿನ್ನ ಕಾಣುವೆನು, ಕಬಳಿಸಿರುವ ಪುಟ್ಟ ಹೃದಯದ ಕೋಣೆಯಲಿ; ಬರೆಯುವೆ ನನ್ನ ಜೀವಾಳದ ಸುಮಧುರ ಹಾಡನು ಆಗುವೆಯಾ ಆ ಹಾಡಿನ ಚರಣಕ್ಕೆ ಪಲ್ಲವಿ ನೀನು. – ಬಿ. ಸಿ. ಪ್ರಮೋದ.     […]

ಮಂದ್ಲಪೇಟೆಯ ಮೋಡಗಳ ನಡುವೆ: ಪ್ರಶಸ್ತಿ ಅಂಕಣ

ಮಡಿಕೇರಿ ಅಂದಾಕ್ಷಣ ನೆನಪಾಗೋ ಸ್ಥಳಗಳಲ್ಲಿ ಮಂದ್ಲಪೇಟೆಯೂ ಒಂದು. ಹಿಂದಿನ ಸಲ ಹೋದಾಗ ಇಲ್ಲಿಂದ ೨೭ ಕಿ.ಮೀ ಅಂತ ನೋಡಿದ್ರೂ ಹೋಗಕ್ಕಾಗದೇ ಇದ್ದ ಕಾರಣಕ್ಕೋ ಏನೋ ಗೊತ್ತಿಲ್ಲ. ಈ ಸಲ ಮಡಿಕೇರಿಗೆ ಹೋದಾಗ ಮಂದ್ಲಪೇಟೆಗೆ ಹೋಗ್ಲೇಬೇಕು ಅಂತ ಮನ ತುಡೀತಿತ್ತು . ನಮ್ಮ ಗಾಳಿಪಟ ಚಿತ್ರದಲ್ಲಿ ಮುಗಿಲುಪೇಟೆ, ಕೆಲವರ ಬಾಯಲ್ಲಿ ಮಾಂದ್ಲಪೇಟೆ, ಮಂದ್ಲಪಟ್ಟಿ.. ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳೋ ಮುಗಿಲುಗಳಿಗೆ ಮುತ್ತಿಕ್ಕೋ ಜಾಗ ಇದೇನೆ. ಗಾಳಿಪಟ ಚಿತ್ರದ ಹೆಸರಿದ್ದಂತೆಯೇ ಇಲ್ಲಿ ಮುಗಿಲುಗಳದ್ದೇ ಮೊಹಬ್ಬತ್ . ಆದ್ರೆ ಕೆಲೋ ಸಲ […]

ಸತ್ಯ-ಅಹಿಂಸೆ-ಸ್ವಾಭಿಮಾನಕ್ಕೆ ಭವಿಷ್ಯವಿದೆಯೇ?: ಅಖಿಲೇಶ್ ಚಿಪ್ಪಳಿ ಅಂಕಣ

ಸತ್ಯ ಮತ್ತು ಅಹಿಂಸೆಗಳು ಹಿಮಾಲಯದಷ್ಟೇ ಪುರಾತನವಾದದು. ಹಾಗೂ ಇವುಗಳನ್ನು ಬಿಟ್ಟು ಬೇರೆ ಏನನ್ನೂ ಹೇಳಲಾರೆ ಎಂದು ರಾಷ್ಟ್ರಪಿತ ಗಾಂಧೀಜಿಯವರು ಹೇಳಿದ್ದರು. ಈ ಭಾರಿಯ ಗಾಂಧಿ ಜಯಂತಿಯ ಪೂರ್ವದಲ್ಲೇ ಎರಡು ದೇಶಗಳ ಮುಖ್ಯಸ್ಥರು ಸೇರಿ ಹಲವಾರು ಅಭಿವೃದ್ಧಿ ಆಧಾರಿತ ವಿಷಯಗಳನ್ನು ಗಾಢವಾಗಿ ಚರ್ಚಿಸಿದರು. ವಿದ್ವಂಸಕ ಕೃತ್ಯಗಳು, ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆಯನ್ನೂ ಚರ್ಚಿಸಿದರು. ನಮ್ಮೂರನ್ನು ನಿಮ್ಮ ಊರಿನಂತೆ ಮಾಡಿಕೊಡಿ ಎಂದು ನಮ್ಮವರು ಕೇಳಿಕೊಂಡರು. ಪರಮಾಣು ತಂತ್ರಜ್ಞಾನವನ್ನು ಹಸ್ತಾಂತರಿಸುವ ಭರವಸೆಯನ್ನು ಅಮೆರಿಕಾದ ಅಧ್ಯಕ್ಷರು ನೀಡಿದ್ದನ್ನು ನಮ್ಮ […]