Facebook

Archive for 2014

ಮೇರಿ ಕೋಮ್‌ಳ ಹಾದಿಯಲ್ಲಿ: ಗಿರಿಜಾಶಾಸ್ತ್ರಿ, ಮುಂಬಯಿ

ಹೆಣ್ಣುಮಕ್ಕಳು ತಮ್ಮ ಪರ್ಸುಗಳಲ್ಲಿ ಪೆಪ್ಪರ್- ಸ್ಪ್ರೇ ಗಳನ್ನೋ ಖಾರದ ಪುಡಿಗಳನ್ನೋ ಸದಾ ಇಟ್ಟುಕೊಂಡು ಓಡಾಡಬೇಕು ಎಂದು ಮಹಾರಾಷ್ಟ್ರದ ಮಂತ್ರಿಯೊಬ್ಬರು ಸಲಹೆಯಿತ್ತಿದ್ದರು. ಗಾಂಧೀಜಿಯವರೂ ಕೂಡ ರಾಷ್ಟ್ರೀಯ ಆಂದೋಳನದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಉದ್ದೇಶಿಸಿ, ನಿಮಗೆ ದೇವರು ಹಲ್ಲು ಮತ್ತು ಉಗುರುಗಳನ್ನು ಕೊಟ್ಟಿಲ್ಲವೇ? ನಿಮ್ಮ ಮರ್ಯಾದೆಗೆ ಸಂಚಕಾರ ಒದಗಿ ಬರುವ ಸಂದರ್ಭದಲ್ಲಿ ನೀವು ಅಹಿಂಸಾ ತತ್ವವನ್ನು ಪಾಲಿಸಬೇಕಾದ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಅಭಿಪ್ರಾಯಪಟ್ಟಿದ್ದರು. ಇತ್ತೀಚೆಗೆ ಮರಾಠಿಗರಲ್ಲಿ ಬಹಳ ಜನಪ್ರಿಯರಾದ, ಕನ್ನಡದ ಬಹುದೊಡ್ಡ ಕಾದಂಬರಿಕಾರರೊಬ್ಬರು, ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ ವಿಚಾರ ಸಂಕಿರಣವೊಂದರಲ್ಲಿ ’ಗಂಡಸು […]

ಒಂದು ಫ್ರೆಂಡ್ ರಿಕ್ವೆಸ್ಟ್: ಹೃದಯಶಿವ

ಫೇಸ್ ಬುಕ್ಕಿನಲ್ಲಿ ಅವಳು ಕಳಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಕಂಡೊಡನೆ ಇವನೊಳಗೆ ಅಚ್ಚರಿ ಹಾಗೂ ಆತಂಕದ ಭಾವನೆಗಳು ಒಟ್ಟೊಟ್ಟಿಗೇ ಉದ್ಭವಿಸಿದವು. ಮೂರು ವರ್ಷಗಳ ಸುದೀರ್ಘ ಅಂತರದ ಬಳಿಕ ಆಕೆ ಮತ್ತೆ ಹತ್ತಿರವಾಗುತ್ತಿದ್ದಾಳೆ. ಕನ್ಫ಼ರ್ಮ್ ಬಟನ್ ಒತ್ತಿಬಿಡ್ಲಾ? ಹಲವು ಜಿಜ್ಞಾಸೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸಂಭವ ಎದುರಾಗಬಹುದು. ತಾನಿಲ್ಲದ ಜಗತ್ತಿನಾಚೆ ಬರೋಬ್ಬರಿ ಮೂರು ವರ್ಷ ಬದುಕಿ, ಮುನಿಸು, ಕೋಪ, ಹಠ ಇತ್ಯಾದಿಗಳನ್ನು ಮರೆತು ಬರುತ್ತಿದ್ದಾಳೆ. ಆಕೆಯನ್ನು ಹೇಗೆ ಸ್ವೀಕರಿಸಲಿ? ಗೊಂದಲದಿಂದಲೇ ಕನ್ಫ಼ರ್ಮ್ ಬಟನ್ ಒತ್ತಿದ. ಒಂದು ತಣ್ಣನೆ ಸಂಜೆ ಆನ್ ಲೈನಿನಲ್ಲಿದ್ದಾಗ ವಿಸ್ಮಯವೆಂಬಂತೆ […]

ಹುಡುಕಾಟ: ಅನಿತಾ ನರೇಶ್ ಮಂಚಿ ಅಂಕಣ

ನೈಲ್ ಕಟ್ಟರ್ ಎಲ್ಲಿದೇ ..ಎಂದು  ಮೂರನೇ ಸಾರಿ ನಮ್ಮ ಮನೆಯ ಲಾಯರ್ ಸಾಹೇಬ್ರ ಕಂಠ ಮೊಳಗಿತು. ಈ ಸಲವೂ ಹುಡುಕಿ ಕೊಡದಿದ್ರೆ ಹೊಂಬಣ್ಣದ ಮೈಯ ನವಿಲು ಬಣ್ಣದ ಬಾರ್ಡರಿನ ಸೀರೆಯ ಅಹವಾಲು ಡಿಸ್ ಮಿಸ್ ಆಗುವ ಭಯದಲ್ಲಿ ನಿಲ್ಲೀ ಹುಡುಕಿ ಕೊಡ್ತೀನಿ ಅಂದೆ.. ಸತ್ಯ ಹರಿಶ್ಚಂದ್ರನ ಆಣೆಯಾಗಿಯೂ ಅದು ಎಲ್ಲಿದೆ ಅಂತ ನನಗೆ ತಿಳಿದಿರಲಿಲ್ಲ. ನಮ್ಮ ಮನೆಯಲ್ಲಿರುವ ಸ್ಥಿರ ವಸ್ತುಗಳಿಗೂ ಕೈ ಕಾಲು ಬಂದು ಅವು ಚರ ವಸ್ತುಗಳಾಗಿ ಸಿಕ್ಕ ಸಿಕ್ಕ ಕಡೆ ಹೋಗಿ ಸಿಗಬೇಕಾದಾಗ ಸಿಗದೇ […]

ಗಾಂಧೀ ಬಾಂಧವ್ಯ: ಎಸ್. ಜಿ. ಸೀತಾರಾಮ್, ಮೈಸೂರು.

ಗಾಂಧೀ ಎಂದೊಡನೆ ಜನರು ಗಾಂಧೀಜೀಯವರನ್ನು ನೆನೆದು ಸುಮ್ಮನಾಗುವರೇ ಹೊರತು, ಅವರ ಗಾಂಧೀ ನಾಮಧಾರಿ ಬಂಧುಗಳನ್ನಾಗಲೀ ಅಥವಾ ಗಾಂಧೀ ನಾಮದ ಮೂಲವನ್ನಾಗಲೀ ಸಾಮಾನ್ಯವಾಗಿ ಹುಡುಕಲೆತ್ನಿಸುವುದಿಲ್ಲ. ಹಾಗೆ ಹುಡುಕಲು ಹೊರಟಲ್ಲಿ, ಗಾಂಧೀ ಎಂಬುವ ಪದ ಗಂಧ ಎಂಬ ಶಬ್ದದಿಂದ ಬಂದಿದ್ದು, ಗಂಧದ ವ್ಯಾಪಾರಿಗಳನ್ನು ಹೀಗೆ ಕರೆಯುತ್ತಿದ್ದರೆಂಬುದನ್ನು ತಿಳಿದು ಶುರುವಿನಲ್ಲೇ ಅಚ್ಚರಿಯಾಗುತ್ತದೆ. ಹಾಗೆಯೇ ಮುಂದುವರಿದರೆ, ಗಾಂಧೀಜೀಯವರಿಗೆ ಮುಂಚೆಯೇ ಇನ್ನೊಬ್ಬ ವಿಶ್ವವಿಖ್ಯಾತ ಗಾಂಧೀ ಇದ್ದರೆಂದು ತಿಳಿದು ಕುತೂಹಲ ಮತ್ತಷ್ಟು ಕೆರಳುತ್ತದೆ. ಇವರೇ ಬ್ಯಾರಿಸ್ಟರ್ ಮತ್ತು ಬಹುಧರ್ಮ ವಿದ್ವಾಂಸ ವೀರ್‌ಚಂದ್ ರಾಘವ್‌ಜೀ ಗಾಂಧೀ (೧೮೬೪-೧೯೦೧). […]

ಸಂಸಾರ ಸಾರ: ಮಂಜು ಹಿಚ್ಕಡ್

ಟಕ್, ಟಕ್, ಟಕ್ ಎಂದು ಕೇಳಿ ಬರುವ ಜನರ ಹೆಜ್ಜೆಗಳ ಸಪ್ಪಳ. ಗುಂಯ್, ಗುಂಯ್, ಗುಂಯ್ ಎಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಶಬ್ಧ. ಆಗೊಮ್ಮೆ ಈಗೊಮ್ಮೆ ಕೊಂಯ್, ಕೊಂಯ್, ಕೊಂಯ್ ಎಂದು ಕೇಳಿ ಬರುತ್ತಿದ್ದ ಅಂಬ್ಯೂಲನ್ಸ್ ಸಪ್ಪಳ. ಅಲ್ಲಲ್ಲಿ ಆಗಾಗ ಕೇಳಿ ಬರುತ್ತಿದ್ದ ಜನರ ಪಿಸುಮಾತುಗಳು. ಒಮ್ಮೊಮ್ಮೆ ಅಲ್ಲೊಬ್ಬರು, ಇಲ್ಲೊಬ್ಬರು ಅಳುವ ಸಪ್ಪಳ. ಇವೆಲ್ಲಾ ಆಗಾಗ ಕೇಳಿ ಬರುತ್ತಲೇ ಇದ್ದುದರಿಂದ ಇಂದಾದರೂ ಸ್ವಲ್ಪ ಹೊತ್ತು ನಿದ್ದೆ ಮಾಡಬೇಕೆಂದುಕೊಂಡು ಮಲಗಿದ ಸುಮಾಳಿಗೆ ನಿದ್ದೇನೆ ಹತ್ತಿರ ಸುಳಿಯುತ್ತಿರಲಿಲ್ಲ. ತಾನು ಮಲಗಿ […]

“ಕುರು” ವರನ ಕರುಳು ಕರಗಿತು: ಅಮರ್ ದೀಪ್ ಅಂಕಣ

ಯಾವುದೋ ಸಿನೆಮಾ ನೋಡುತ್ತಿರುತ್ತೇವೆ, ಇನ್ಯಾವುದೋ ಕಥೆ ನೆನಪಾಗುತ್ತೆ.  ಯಾರದೋ ಜೊತೆ ಮಾತಾಡುತ್ತಿರುತ್ತೇವೆ ಇನ್ಯಾರದೋ ಮಾತಿನ ವರಸೆ ನೆನಪಾಗುತ್ತೆ.   ಯಾವುದೋ ಹಾಡು ಗುನುಗು ತ್ತಿರುತ್ತೇವೆ, ಮತ್ಯಾವುದೋ ದುಃಖ ಎದೆಗಿಳಿಯುತ್ತೆ. ಸುಖದ ಕ್ಷಣಗಳು ಕೆಲವನ್ನೇ ಮಾತ್ರ ಜ್ನಾಪಿಸುತ್ತವೆ.    ನಮ್ಮಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ.   ಅದನ್ನು ಯಾವ ಹಂತದಲ್ಲಿ ಚಿವುಟಿ ದಾಟಬೇಕು ಅನ್ನುವುದರಲ್ಲಿ ನಮ್ಮ ಜಾಣತನ ಇರುತ್ತೆ.  ದುರಂತವೆಂದರೆ,  ಆ ಸಮಯಕ್ಕೆ ಅಂತ ಜಾಣತನಕ್ಕೆ ಕಿವುಡು ಮತ್ತು ಮೂಗತನ  ಆವರಿಸಿರುತ್ತದೆ.   ಆಗಲೇ ನಾವು […]

ಮಂಗಳಪ್ರಿಯನೊಬ್ಬನ ಮಮಕಾರದ ಮಾತುಗಳು: ಪ್ರಶಸ್ತಿ ಅಂಕಣ

ನಮ್ಮ ಉಪಗ್ರಹ ಮಂಗಳನ ಮೇಲಿಳಿದಂದು ಮೂಡಿದ ಖುಷಿ ಮುಖಹೊತ್ತಿಗೆಯಲ್ಲಿನ್ನೂ ಇಳಿದಂತಿಲ್ಲ. ಮತ್ತೆ ಮತ್ತೆ ಮಂಗಳನದೇ ಸುದ್ದಿ, ಚರ್ಚೆಗಳಿಲ್ಲಿ. ಮಂಗಳನ ಮೇಲೆ ಮೊದಲ ಪ್ರಯತ್ನದಲ್ಲೇ ಕಾಲಿಟ್ಟ ಮೊದಲ ದೇಶ ನಮ್ಮದು ಎಂಬ ಹೆಮ್ಮೆ ಪಟ್ಟ ಜನರೆಷ್ಟೋ , ಮೂಲಭೂತ ಉದ್ದೇಶಗಳ ಸಾಕಾರವೇ ಸಂದೇಹವಿರೋ ಯೋಜನೆಗೆ ನಾನೂರೈವತ್ತು ಕೋಟಿ ಸುರಿದದ್ದು ಹುಚ್ಚಾಟದ ಪರಮಾವಧಿಯೆಂದು ಗೋಳಿಟ್ಟ ಜನರೂ ಅಷ್ಟೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಭಕ್ಕೆ ನೆಗೆವ ರಾಕೆಟ್ಟುಗಳ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಸುವ ವಿಜ್ಞಾನಿಗಳ ವಿಚಾರಹೀನತೆಯ ಬಗ್ಗೆ ಹಿಗ್ಗಾಮುಗ್ಗಾ ಖಂಡಿಸಿದ ಬುದ್ದಿಜೀವಿಗಳು, ಆ […]

ಅಪರಿಗ್ರಹ: ಅಖಿಲೇಶ್ ಚಿಪ್ಪಳಿ ಅಂಕಣ

ಸೆಪ್ಟೆಂಬರ್ ತಿಂಗಳೆಂದರೆ ಮಳೆಗಾಲ ಹಿಂದಾಗಿ ಚಳಿಗಾಲ ಅಂಬೆಗಾಲಿಕ್ಕುತ್ತಾ ಬರುವ ಕಾಲ. ರೈತರಿಗೂ ಸುಗ್ಗಿಯ ಪೂರ್ವತಯಾರಿ ಮಾಡಿಕೊಳ್ಳುವ ಕಾಲ. ಸತತ ಮಳೆಯಿಂದ ನಲುಗಿ ಮಾಸಿದ ಭೂತಾಯಿ ಆಭರಣಗಳು ಮತ್ತೆ ನಳನಳಿಸುವ ಕಾಲ. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚಗಿನ ಕಾಫಿ ಹೀರುವ ಮಜವೇ ಬೇರೆ. ಮಣ್ಣಿನೊಳಕ್ಕೆ ಸೇರಲಾರದ ಎರೆಹುಳುಗಳು ಕಟ್ಟಿರುವೆಗಳ ದವಡೆಗೆ ಬಲಿಯಾಗುವ ಕಾಲ.  ಸೆಪ್ಟೆಂಬರ್ ತಿಂಗಳಲ್ಲಿ ಶಿಶು ಕ್ಯಾನ್ಸರ್ ಜಾಗೃತಿ, ಗರ್ಭಕೋಶದ ಕ್ಯಾನ್ಸರ್ ಜಾಗೃತಿ ಹೀಗೆ ವಿವಿಧ ರೀತಿಯ ಕ್ಯಾನ್ಸರ್ ಕುರಿತಾದ ಜಾಗೃತಿಗೊಳಿಸುವ ತಿಂಗಳು. ಪಾಶ್ಚ್ಯಾತ್ಯ ದೇಶಗಳಲ್ಲಿ ಬೇಸಿಗೆ […]

ನಾಲ್ಕು ಕವಿತೆಗಳು: ಕಾವ್ಯ ಪ್ರಿಯ, ದಿನೇಶ್ ಚನ್ನಬಸಪ್ಪ, ಅಕ್ಷತಾ ಕೃಷ್ಣಮೂರ್ತಿ, ಸುಚಿತ್ರ ಕೆ.

ಮರೆಯಲಾಗದು !!! ಅ೦ದೇಕೊ ಘಾಸಿಗೊ೦ಡ ಮನ ಮತ್ತೆ ಚೇತರಿಸಿಕೊಳ್ಳಲಿಲ್ಲ ಪ್ರಯತ್ನಗಳು ಹಲವು ಆದವೆಲ್ಲ ವ್ಯರ್ಥವು….. ಎಲ್ಲ ದುಃಖಗಳ ಮರೆತರೂ ಅದೊ೦ದೆ ನೆನಪು ಅದೇಕೊ ತಿಳಿಯದು ಮಾಸುತಿಲ್ಲ ಆ ಗಾಯವು…. ಅಷ್ಟಿತ್ತಾ ಘಾಸಿಯ ತೀವ್ರತೆ ಅ೦ದೇಕೊ ತಿಳಿಯಲಿಲ್ಲಿ ಸಿಹಿಯ೦ತಿತ್ತು ಆ ಮರೆಯಲಾಗದ ಮಮತೆಯು… ಮರೆತೆನೆ೦ದರೆ ಸುಳ್ಳು ಮರೆಯದಿದ್ದರೆ ಅದು ಕಹಿಯಾದ ಸತ್ಯವು ಸಾಯಿಸದೇ ಸುಡುತಿಹುದು…. — ಕಾವ್ಯಪ್ರಿಯ ***** ಬೆಳಕಾಗುವ ಮೊದಲೇ ಕತ್ತಲೆಯ ಮುಸುಕು, ಶುರುವಾಗುವ ಮೊದಲೇ ಕೊನೆಯಾಗುವ ಕೊರಗು, ಅರಳುವ ಮೊದಲೇ ಬಾಡಿಹೋಗುವ ಕುರುವು, ಒಲವೇ ನೀ […]

ಸಾಮಾನ್ಯ ಜ್ಞಾನ (ವಾರ 47): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ? ೨.    ಅಯೋಧ್ಯ ಯಾವ ನದಿಯ ದಡದ ಮೇಲಿದೆ? ೩.    ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? ೪.    ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? ೫.    ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? ೬.    ಶಕುಂತಲೆಯ ಮಗ ಭರತನ ಮೊದಲ ಹೆಸರೇನು? ೭.    ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು? ೮.    ಭಾರತದ ರಾಷ್ಟ್ರೀಯ ಕಾಂಗ್ರೆಸ್‌ಗೆ […]