Facebook

Archive for 2014

ಸಣ್ಣ ಕಾಕಾ, ಕಂಡಕ್ಟರ್ ಲೈಸೆನ್ಸು ಮತ್ತು ಖಯಾಲಿ: ಅಮರ್ ದೀಪ್ ಪಿ. ಎಸ್.

ಶಾಲಾ ದಿನಗಳ ನಗುವಿಗೆ, ಗೇಲಿಗೆ, ಕಾಲೆಳೆಯಲು ಯಾರಾದರೂ ಒಬ್ಬರು  ಇರುತ್ತಾರೆ. ಕಾಲು ಉಳುಕಿ ಬೀಳುವವರು ಸಹ.  ಓದು ಹತ್ತಿದರೆ ಹಿಂದೆ ನೋಡದಂತೆ ಓಡುತ್ತಲೇ, ಓದುತ್ತಲೇ ಒಂದು ಘಟ್ಟ ತಲುಪಿ ಬಿಡುತ್ತಾರೆ. ಅರ್ಧಂಬರ್ಧ ಓದಿದವರು ಅಲ್ಲಲ್ಲೇ ಇರುವ ಅವಕಾಶಗಳನ್ನು ಉಪ ಯೋಗಿಸಿಕೊಂಡು ದುಡಿಯುತ್ತಾರೆ. ಸ್ವಂತ ಅಂಗಡಿ, ದುಡಿಮೆ, ಮುಂಗಟ್ಟು ಇದ್ದವರು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ.  ಆಗ  ನಮ್ಮ ಊರಿನಲ್ಲಿ ಇದ್ದದ್ದೇ ಆರೆಂಟು  ಸರ್ಕಾರಿ ಶಾಲೆಗಳು, ಮತ್ತು ಖಾಸಗಿ ಶಾಲೆಯೆಂದರೆ ಒಂದು ಖಾಸಗಿ  ಶಿಕ್ಷಣ ಸಂಸ್ಥೆ,  ಶಿಸ್ತಿಗೆ ಹೆಸರಾಗಿದ್ದ ಶಾಲೆ. […]

ಕನ್ನಡೋದ್ಧಾರ!: ಗುರುಪ್ರಸಾದ್ ಕುರ್ತಕೋಟಿ

ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ […]

ಡೊಂಕು ಬಾಲದ ನಾಯಕರು: ಅನಿತಾ ನರೇಶ್ ಮಂಚಿ

’ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ’ ಎಂದು ಅಡುಗೆ ಮನೆಯಲ್ಲಿ ಪಲ್ಯ ತಳ ಹತ್ತದಂತೆ ಸೌಟಿನಲ್ಲಿ ತಾಳ ಹಾಕುತ್ತಾ ನನ್ನ ಧ್ವನಿಗೆ ನಾನೇ ಮೆಚ್ಚಿಕೊಳ್ಳುತ್ತಾ ಹಾಡುತ್ತಿದ್ದೆ.ಅಷ್ಟರಲ್ಲಿ ’ಅಮ್ಮಾ’ ಎಂದಿತು ಕಂದನ ಕರುಳಿನ ಕರೆಯೋಲೆ. ನಾನೇ ಹಾಡುತ್ತಿದ್ದ ಲಾಲಿ ಹಾಡು ಕೇಳಲಾಗದೇ ಬೇಗನೇ ನಿದ್ರಿಸಿ ದೊಡ್ಡವನಾದ ನನ್ನ ಕರುಳ ಕುಡಿಯಲ್ಲವೇ ಎಂದು ಹಾಡನ್ನು ಮುಂದುವರಿಸಿದೆ.  ಅಮ್ಮಾ.. ಡೊಂಕು ಬಾಲದ ನಾಯಕರು ಅಂದರೆ ಯಾರು ಎಂದ. ಅವನ ಪ್ರಶ್ನೆಗೆ ಸರಳವಾಗಿ ’ನಾಯಿ’ ಎಂದು ಉತ್ತರ ಕೊಟ್ಟೆ. ತಕ್ಷಣ ನಾಲಿಗೆ ಕಚ್ಚಿಕೊಂಡೆ. […]

ಆಮೆಗತಿಯ ನ್ಯಾಯಪುರಾಣ: ಅಖಿಲೇಶ್ ಚಿಪ್ಪಳಿ ಅಂಕಣ

ಭಾರತದ ಪ್ರಜಾಪ್ರಭುತ್ವ ಸಂವಿಧಾನ ವಿಶೇಷವಾದದು. ಇಲ್ಲಿನ ಕಾನೂನಿನಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ಇಚ್ಚೆಯಿದೆ. ದೌರ್ಜನ್ಯವನ್ನು ತಡೆಯಲು, ಅಶಕ್ತರಿಗೆ, ಮಹಿಳೆಯರಿಗೆ ಹೀಗೆ ಎಲ್ಲರಿಗೂ ಸಮಾನ ನ್ಯಾಯ ಸಿಗುವಂತೆ ಆಗಬೇಕು ಎನ್ನುವ ಆಶಯವಿದೆ. ನ್ಯಾಯ ಕೊಡಲು ನ್ಯಾಯದೇವರಿದ್ದಾರೆ. ಪರ-ವಿರೋಧ ವಾದಿಸಲು ನ್ಯಾಯವಾದಿಗಳಿದ್ದಾರೆ. ಆದರೂ ನ್ಯಾಯ ಸಿಗುವುದು ವಿಳಂಬವಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ಚಿಕ್ಕ-ಪುಟ್ಟ ವ್ಯಾಜ್ಯಗಳನ್ನು ಪರಿಹರಿಸಲು ತ್ವರಿತ ನ್ಯಾಯಾಲಯಗಳಿವೆ. ಒಂದೊಂದು ಘಟನೆಗಳಿಗೆ ಸಂಬಂಧಿಸಿದಂತೆ ವಾದಿಸಲು ನುರಿತ ವಕೀಲರ ಪಡೆಯಿದೆ. ಹಿಡಿದ ಪೋಲಿಸರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಲ್ಲ ನಿಷ್ಣಾತರು […]

ಸಾಮಾನ್ಯ ಜ್ಞಾನ (ವಾರ 11): ಮಹಾಂತೇಶ್ ಯರಗಟ್ಟಿ

೧    ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು? ೨    ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ? ೩    ಬೌದ್ದರ ಸಂಕೇತದಲ್ಲಿ ಕಾಣಬರುವ ಚಕ್ರ  ಏನನ್ನು ಸೂಚಿಸುತ್ತದೆ? ೪    ಭಾರತದಲ್ಲಿ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ ಯಾರು? ೫    ಭಾರತೀಯ ಚಿತ್ರರಂಗದ ರೂವಾರಿ, ಎಂದು ಯಾರನ್ನು ಕರೆಯುತ್ತಾರೆ? ೬    ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು? ೭    ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು? ೮    ಭಾರತದಲ್ಲಿ […]

ನಾಡ ಹಬ್ಬ ಉಡುಪಿ ಪರ್ಯಾಯ: ವೆಂಕಟೇಶ್ ಪ್ರಸಾದ್

ದೇವಾಲಯಗಳ ನಾಡು , ಅನ್ನಬ್ರಹ್ಮನ ಬೀಡು ಉಡುಪಿಯಲ್ಲಿ ದೀಪಾವಳಿ ತಿ೦ಗಳ ನ೦ತರ ಶ್ರೀ ಕೃಷ್ಣನಿಗೆ ನಿತ್ಯ ಉತ್ಸವಗಳ ಸ೦ಭ್ರಮ.  ಶ್ರೀ ಕೃಷ್ಣ ಮುಖ್ಯಪ್ರಾಣರ ಉತ್ಸವ ಮೂರ್ತಿಗಳು ಅಲ೦ಕೃತ ತೇರುಗಳಲ್ಲಿ ವಿರಾಜಮಾನರಾದರೆ ಭಜಕರು ರಥಬೀದಿಯ ಸುತ್ತ ತೇರನ್ನೆಳೆದು ಕೃತಾರ್ಥರಾಗುತ್ತಾರೆ. ಈ ಉತ್ಸವಗಳಲ್ಲಿ ಮುಖ್ಯವಾದುದು ಜನವರಿ ತಿ೦ಗಳಲ್ಲಿ ಬರುವ ಮಕರಸ೦ಕ್ರಾ೦ತಿ ಉತ್ಸವ ಅ೦ದು ಏಕ ಕಾಲಕ್ಕೆ ಮೂರು ತೇರುಗಳನ್ನೆಳೆದು ಉಡುಪಿಗೆ ಉಡುಪಿಯೇ ಸ೦ಭ್ರಮಿಸುತ್ತದೆ. ಮರುದಿನ ಹಗಲು ಹೊತ್ತಿನಲ್ಲಿ ನಡೆಯುವ ಚೂರ್ಣೋತ್ಸವ ಅಥವಾ ಸುವರ್ಣೊತ್ಸವಕ್ಕೂ ಅಷ್ಟೇ ಸ೦ಖ್ಯೆ ಯಲ್ಲಿ ಜನ ಸೇರುತ್ತಾರೆ. […]

ಎಡಸೊಕ್ಕು: ಹಿಪ್ಪರಗಿ ಸಿದ್ದರಾಮ್

'ಯೇನಪಾ…ತಮ್ಮಾ, ನಿನ್ನ ಹಂತ್ಯಾಕ ಮೊಬೈಲ್ ಐತೇನು?' ಆ ವಯಸ್ಸಾದ ಹಿರಿಯರು ಕೋರ್ಟ್ ಒಂದರ ಆವರಣದಲ್ಲಿ ನನಗೆ ಕೇಳಿದಾಗ, 'ಯಾಕ್ರಿ ಅಮ್ಮಾರ…ಈಗಿನ ಕಾಲದಾಗ ಮೊಬೈಲ್ ಇಲ್ಲದವರು ಯಾರರ ಇರ್ತಾರೇನ್ರೀ ನೀವ ಹೇಳ್ರೀ?' ಅಂತ ತಮಾಷೆಯೊಂದಿಗೆ ಗೌರವಪೂರ್ವಕವಾಗಿ ನಾನಂದೆ. 'ಹಂಗಲ್ಲೋ ನನ್ನ ಬಾಳಾ, ಮುಂಜಾಲಿಂದ ನಮ್ಮ ವಕೀಲರು ಬರ್ತಾರಂತ ಕಾಯಾಕತ್ತೀನಿ, ಪೋನ್ ಮಾಡಿದರ ರಿಸೀವ ಮಾಡಂಗಿಲ್ಲಾಗ್ಯಾರ…ನಿನ್ನ ಮೊಬೈಲ್ ಪೋನಿನಿಂದ ಅವರಿಗೆ ಹಚ್ಚಿ ಕೊಡು' ಎಂದು ಅರವತ್ತರ ವಯೋಮಾನದ ಆಸುಪಾಸಿನ ಆ ಹಣ್ಣು-ಹಣ್ಣು ಮುದಿಜೀವ ವಿನಂತಿಸಿಕೊಂಡಾಗ ಮನ ಕರಗಿತು. ಆದರೆ ಆ […]

ಸಮಾಜಮುಖಿ ಆಶಯ ಮತ್ತು ಸಾಹಿತ್ಯದ ಸಾರ್ಥಕತೆ: ಡಾ.ಪ್ರಕಾಶ ಗ.ಖಾಡೆ

ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ. ನಿತ್ಯ ಪರಿವರ್ತನಾ ಶೀಲವಾದ ಸಮಾಜವು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಕೊಂಡಿಯಾಗಿದೆ. ವ್ಯಕ್ತಿಗಳ ಸಂಬಂಧಗಳು ವಿವಿಧ ರೀತಿಯಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಸಾಮಾಜಿಕ ಬದಲಾವಣೆ ಎಂದರೆ ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆ ಎಂಬುದಾಗಿದೆ. ಈ ಬದಲಾವಣೆಗಳು ಸರ್ವವ್ಯಾಪಕವಾದುದರಿಂದ ನಾವು ಸಮಾಜವನ್ನು ನಿತ್ಯ ಪರಿವರ್ತನಾಶೀಲವೆಂದು ಕರೆಯುತ್ತೇವೆ. ಸಾಹಿತ್ಯ ಒಂದರ್ಥದಲ್ಲಿ ಜನಜೀವನದ ಪ್ರತಿಬಿಂಬ ಎಂಬ ಮಾತಿದೆ. ಒಬ್ಬ ಅಥವಾ ಹಲವರ ಸೃಜನಶೀಲವಾದ ಮನಸ್ಸಿನ ಅಭಿವ್ಯಕ್ತಿ ಸಾಹಿತ್ಯವಾಗಿ ಅದು ಸಹೃದಯದಲ್ಲಿ ವ್ಯಾಪಕವಾಗುತ್ತದೆ. ಸಾಹಿತ್ಯದ […]

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ: ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

          ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ ಗುಡಿಗೋಪುರಗಳ ಎಮಗೆ ಇತ್ತು ತೆರೆಯ ಮರೆಗೆ ಸರಿದು ಹೋದ ಮಹಾಮಹಿಮ ಶಿಲ್ಪಿ ಜನರ ಕೊಡುಗೆ ಏನು ಅಲ್ಪವೇ? ಕವಿ ಸೌರ್ವಭೌಮರಿಗೂ ಎದಿರು ಸ್ಪರ್ಧೆ ನೀಡುವಂತ ಶಿಲ್ಪಕಲಾ ಪ್ರತಿಭೆ ಇದ್ದೂ ಇತಿಹಾಸದಿ ಮೆರೆಯಲಿಲ್ಲ ವೀಣೆವಾದ್ಯದೆದುರು ವೇಣು ಮಿಗಿಲಿದ್ದರೂ ಮಿಂಚದಲ್ಲ ಇಂದಿನ ಶೋದನೆಯೊಳಲ್ಲು ಜಕಣ ಡಕಣರಾರು […]

ವಿಸ್ಮಯಭರಿತ ವಿರಾಟ ವಿಶ್ವ (ಕೊನೆಯ ಭಾಗ): ನಾರಾಯಣ ಎಂ.ಎಸ್.

ಇಲ್ಲಿಯವರೆಗೆ ಸಿನಿಮಾ ಎಂದಾಗ ನೆನಪಾಯ್ತು. ನೀವು ‘ಅನಿಮಲ್ಸ್ ಆರ್ ಬ್ಯೂಟಿಫ಼ುಲ್ ಪೀಪಲ್’ ಅನ್ನೋ ಚಿತ್ರ ನೋಡಿದ್ದೀರಾ? ನೋಡಿಲ್ಲದಿದ್ದರೆ ಖಂಡಿತಾ ನೋಡಿ. ಎಲ್ಲರೂ ನೋಡಲೇಬೇಕಾದ ಚಿತ್ರವದು. ಆ ಚಿತ್ರದಲ್ಲಿ, ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ ಹನಿ ಗೈಡ್ ಹಕ್ಕಿ ಮತ್ತು ಹನಿ ಬ್ಯಾಡ್ಜರ್ ಅಥವಾ ರಾಟೆಲ್ ಎನ್ನುವ ಪ್ರಾಣಿಯ ಜೊತೆಗಿನ ಸಿಂಬಯೋಸಿಸ್ಸಿನ ಸಂಬಂಧವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಹನಿ ಗೈಡ್ ಹಕ್ಕಿಗೆ ಜೇನುತುಪ್ಪ ಮತ್ತು ರಸವತ್ತಾದ ಜೇನುಮೇಣವೆಂದರೆ ಎಲ್ಲಿಲ್ಲದ ಆಸೆ. ಜೇನು ಹುಳುಗಳು ರಹಸ್ಯವಾಗಿ ಸಂದಿಗೊಂದಿಗಳಲ್ಲಿ ಕಟ್ಟಿರುವ ಜೇನುಗೂಡುಗಳನ್ನು […]