Facebook

Archive for 2014

ಧ್ವಜ ಹಾರಿ ಪಾರಿವಾಳವಾಗಿ: ಪ್ರವೀಣ

೬೭ನೆಯ ಸ್ವಾತಂತ್ರ್ಯ ದಿನಾಚಾರಣೆಯ ಬೆಳಿಗ್ಗೆ ಎಂಟೂವರೆಗೆ ಕಣ್ಣೂರಿನ ಇತಿಹಾಸದಲ್ಲಿ ಅಸ್ತಿತ್ವವೇ ಇಲ್ಲದ ಜಾಲಪ್ಪ ಹೀಗೆ ಏಕಾಏಕಿ ಗೊಂದಲದಲ್ಲಿ ಸ್ಥಿಮಿತ ಕಳೆದುಕೊಂಡ ಜನಜಂಗುಳಿಯಲ್ಲಿ ಗೂಳಿಯಂತೆ ನುಗ್ಗಿ ತೋರಿದ ಧೈರ್ಯಕ್ಕೆ, ಮೆರೆದ ಸಾಹಸಕ್ಕೆ ಪೊಲೀಸ್ ಕೈಕೋಳ ತೊಡಿಸಿದರೆ ಊರಜನತೆ ಕರತಾಡನ ಜಯಕಾರಗಳಲ್ಲಿ ದುಮುದುಮಿಸಿತು.   ಜಾಡರ ಜಾಲಪ್ಪನ ಕೈಗೆ ಪೊಲೀಸರು ಕೈಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆಯೋಪಾದಿಯಲ್ಲಿ ಅವನನ್ನು ಎಳೆದೊಯ್ಯುತ್ತಿದ್ದಾರೆಂಬ ಸುದ್ದಿ ಶರವೇಗದಲ್ಲಿ ಊರಿನ ಮೂಲೆಮೂಲೆಗಳಲ್ಲಿ ತಲುಪಿದರೆ ಅವನ ಜೋಕುಗಳನ್ನು ಗುಲಾಬ ಜಾಮೂನಿನಂತೆ ನುಂಗಿ ನಕ್ಕು ನಲಿದವರೂ ನಂಬುತ್ತಿರಲಿಲ್ಲ, ಬೆಳಿಗ್ಗೆ ಭಾಂಡೆ […]

ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ: ಹೃದಯಶಿವ

ಅನಂತಮೂರ್ತಿಯವರ ಕುರಿತು ಒಂದಿಷ್ಟು ಧ್ಯಾನಿಸುವ ಸಮಯವಿದು. ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ. ಬರೋಬ್ಬರಿ ಎಂಭತ್ತೊಂದು ವರ್ಷ ಬಾಳಿದ ತುಂಬುಜೀವನ ಅವರದು; ನಮಗೆಲ್ಲ ಗುರುವಿನಂತಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಯಾವುದಾದರು ಸಮಸ್ಯೆ ಎದುರಾದಾಗ ಅನಂತಮೂರ್ತಿ ಏನು ಹೇಳುತ್ತಾರೆ ಎಂದು ಕಾತರಿಸುತ್ತಿದ್ದೆವು. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಇನ್ನು ಸಾಧ್ಯವಿಲ್ಲ. ಅವರು ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ನಾವು ಆತಂಕಗೊಳಗಾಗುತ್ತಿದ್ದೆವು. ಅವರಿಲ್ಲದ ಈ ಶೂನ್ಯವನ್ನು ತುಂಬಿಕೊಳ್ಳಲು ಈಗ ಸ್ವಲ್ಪ ಕಷ್ಟವಾಗುವುದಂತೂ ನಿಜ. ಅವರ ಮುಪ್ಪು, ವಿವಾದಗಳಿಂದ ಜರ್ಜರಿತವಾದ ಕವಿಮನಸು, ಟೀಕಾಕಾರರ ಮಾತುಗಳಿಂದ ನೊಂದುಹೋದ ಮುದಿಜೀವ- […]

ಪವಾಡ?: ಗುರುಪ್ರಸಾದ ಕುರ್ತಕೋಟಿ

(ಅತೀಂದ್ರಿಯ ಅನುಭವದ ಕಥೆಗಳು – ಭಾಗ ೫): ಈ ಸಲ ಒಂದು ಚಿಕ್ಕ ಘಟನೆಯಾ ಬಗ್ಗೆ ಹೇಳುತ್ತೇನೆ. ಇದು ನನ್ನ ಅಜ್ಜ (ಅಮ್ಮನ ತಂದೆ) ಅವರಿಗಾದ ಅನುಭವ. ಸುಮಾರು ಐದು ದಶಕಗಳ ಹಿಂದೆ ನಡೆದದ್ದು. ಆಗ ನನ್ನಜ್ಜ ಮಧ್ಯ ವಯಸ್ಕ. ಅವರ ಹೆಂಡತಿ, ಅಂದರೆ ನನ್ನ ಅಜ್ಜಿ, ರಾಘವೇಂದ್ರ ಸ್ವಾಮಿಗಳ ಭಕ್ತಳು. ಅಂತಿಂಥ ಭಕ್ತಳಲ್ಲ, ಘನಘೋರ ಭಕ್ತಳು! ರಾಯರ ಬಗ್ಗೆ ಅವಳಿಗೆ ಸಿಕ್ಕಾಪಟ್ಟೆ ನಂಬಿಕೆ. ಅದೇ ರೀತಿಯಾಗಿ ಅವರ ಸೇವೆಯನ್ನೂ ಚಾಚು ತಪ್ಪದೇ ಮಾಡುತ್ತಿದ್ದಳು. ಅದು ಪೂಜೆ-ಪುನಸ್ಕಾರವೋ, […]

ಸಮರ್ಥ ಶಿಕ್ಷಕ, ರಾಷ್ಟ್ರ ರಕ್ಷಕ: ಹೊರಾ.ಪರಮೇಶ್

ನಮ್ಮ ಭೂಮಂಡಲದಲ್ಲಿ ಜೀವಿಗಳು ಸೃಷ್ಟಿಯಾದಾಗಿನಿಂದಲೂ 'ಚಿಂತನ-ಮಂಥನ' ಕ್ರಿಯೆಯು ನಡೆಯುತ್ತಲೇ ಬಂದಿದೆ. ಅಂದರೆ, ಹೊಸ ವಿಷಯಗಳ ಬಗ್ಗೆ ಕುತೂಹಲ, ಹುಡುಕಾಟ, ಆವಿಷ್ಕಾರಗಳು ಸಾಗುತ್ತಲೇ ಸಾಮಾನ್ಯ ಬುದ್ಧಿ ಶಕ್ತಿಯು ಅಸಾಮಾನ್ಯ ಅನ್ವೇಷಣೆಗಳಿಗೆ ನಾಂದಿ ಹಾಡಿರುವುದರಿಂದಲೇ ಇಂದು ಜಗತ್ತು ಅತ್ಯಾಧುನಿಕ ಕಾಲ ಘಟ್ಟಕ್ಕೆ ತಲುಪಿದೆ. ಒಂದು ವೇಳೆ ಮಾನವನಲ್ಲಿ ಈ "ಮಂಥನ" ಕಾರ್ಯ ಆಗದೇ ಇದ್ದಿದ್ದರೆ, ಇಂದು ವಿದ್ಯುತ್ ಸೌಲಭ್ಯವಾಗಲೀ, ಸಾರಿಗೆ-ಸಂಪರ್ಕ ಸಾಧನಗಳಾಗಲೀ, ಹರಿಯುವ ನೀರಿನ ಸದುಪಯೋಗವಾಗಲೀ, ಐಷಾರಾಮೀ ಬದುಕಿನ ಸೌಕರ್ಯಗಳಾಗಲೀ, ವೈಜ್ಞಾನಿಕ ಆವಿಷ್ಕಾರಗಳಾಗಲೀ ಯಾವುವೂ ಆಗುತ್ತಿರಲಿಲ್ಲ. ಇತಿಹಾಸದ ಪುಟಗಳು ನಮಗೆ […]

ನಂಬಿಕೆ ಮತ್ತು ಜೀವನ: ಜಯಪ್ರಕಾಶ್ ಪುತ್ತೂರು

ಜೀವಿಗಳಲೆಲ್ಲಾ ಶ್ರೇಷ್ಠ ಮಾನವ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಈ ನಂಬಿಕೆ ಅನ್ನುವುದು ಇದ್ದೇ ಇದೆ. ಮತ್ತೆ ಮನುಷ್ಯರಾದ ನಮಗೆ ಇದು ಸಾಮಾನ್ಯವೇ ಅಲ್ಲವೇ. ಜೀವನ ನಿಂತಿರುವುದೇ ನಂಬಿಕೆಯ ಮೇಲೆ ಹಾಗಂತ ನಂಬಿಕೆಯೇ ಜೀವನ ಆಗಲಾರದು ಅನ್ನೋದು ಸತ್ಯ. ಮನುಷ್ಯ ಸಂಘ ಜೀವಿ ಅದಕ್ಕೆ ಕಾರಣ ಹಲವಾರು ಇದ್ದರೂ ನಂಬಿಕೆಯೇ ಮೊದಲು ಹೊರತು ಬೇರಾವ ಮ್ಯಾಜಿಕ್ ಅಂತೂ ಅಲ್ಲ ಅನ್ನೋದು ಸತ್ಯ. ಸಾಮಾಜಿಕವಾಗಿ ಬದುಕುವುದು ಅವಶ್ಯಕವೇ ಆಗಿದ್ದರೂ ಅನಿವಾರ್ಯವೇನಲ್ಲ. ನಂಬಿಕೆಯು ಸೃಷ್ಟಿಸಿರುವ ಬುನಾದಿಯ ಮೇಲೆ […]

ಅಧ್ಯಕ್ಷ ಅಧ್ಯಕ್ಷ: ಪ್ರಶಸ್ತಿ

ಹೇ. ಯಾವ್ದಾದ್ರೂ ಮೂವಿಗೆ ಹೋಗನ ಕಣೋ ಸುಮಾರು ದಿನ ಆಯ್ತು . ಸರಿ, ಸಿಂಗಂ ರಿಟರ್ನ್ಸ್ ಗೆ ಹೋಗೋಣ್ವಾ ? ಇಲ್ಲಪ್ಪ. ನಾ ಬರೋಲ್ಲ. ಎಕ್ಸ್ ಪ್ಯಾಂಡಬಲ್ ೩ ? ಇಲ್ಲೋ. ಅಂಜಾನ ? ಊಹೂಂ. ಮತ್ಯಾವ ಮೂವಿಗೆ ಬರ್ತಿಯೋ ನೀನು ? ನಾನು ಥಿಯೇಟ್ರಿಗೆ ಹೋಗಿ ನೋಡೋದು ಅಂದ್ರೆ ಕನ್ನಡ ಮೂವಿಗಳ್ನ ಮಾತ್ರ ಕಣ್ರೋ. ಹೋ. ಕನ್ನಡ ಇಂಡಸ್ಟ್ರಿ ಉದ್ದಾರ ಮಾಡ್ತಿದೀಯ ಅನ್ನು ಅನ್ನೋ ಕಾಲೆಳತದ ದಾಟಿ ಮುಗಿಯೋ ಮೊದ್ಲೇ ಅದಕ್ಕೊಂದು ತೇಪೆ ಹಚ್ಚಿದೆ. ಅಧ್ಯಕ್ಷಕ್ಕೆ […]

ಕೊಲ್ಲುವ ರಸ್ತೆಗಳ ಪುರಾಣ: ಅಖಿಲೇಶ್ ಚಿಪ್ಪಳಿ

ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಕಾನಳ್ಳಿಯಿಂದ ತನ್ನ ಗಂಡ ಮತ್ತು ಎರಡು ಮುದ್ದು ಮಕ್ಕಳನ್ನು ಕರೆದುಕೊಂಡು ಹೈಸ್ಕೂಲ್ ಮಾಸ್ತರಾದ ತನ್ನ ಅಣ್ಣನಿಗೆ ರಾಖಿ ಕಟ್ಟಲು ಮೊಬೈಕಿನಲ್ಲಿ ಹೊರಟಿದ್ದ ಅಂಗನವಾಡಿ ಟೀಚರ್ ದಾರಿ ಮಧ್ಯದಲ್ಲಿ ಗುಂಡಿ ಹಾರಿದ ಬೈಕಿನಿಂದ ಬಿದ್ದು ತಲೆಗೆ ಏಟಾಗಿ ಸತ್ತೇ ಹೋದಳು. ಹಾಲು ಕುಡಿಯುವ ಮಗುವಿಗೆ ಏನೂ ಆಗಲಿಲ್ಲ. ಆಕೆಗಿನ್ನೂ ಇಪ್ಪತ್ತೇಳು ವರ್ಷವಾಗಿತ್ತಷ್ಟೆ. ಕಳಪೆ ಕಾಮಗಾರಿಯಿಂದಾದ ಹೊಂಡ ಚಿಕ್ಕ ಮಕ್ಕಳನ್ನು ತಬ್ಬಲಿ ಮಾಡಿತು. ಹೀಗೆ ದೇಶದಲ್ಲಿ ನಿತ್ಯವೂ ಸಾವಿರಾರು ಸಾವು ಸಂಭವಿಸುತ್ತದೆ. ಇದರಲ್ಲಿ ದೂರುವುದು […]

ಮೂವರ ಕವನಗಳು: ಗಣೇಶ್ ಖರೆ, ಶ್ರೀದೇವಿ ಕೆರೆಮನೆ, ಲಕ್ಷ್ಮೀಶ ಜೆ.ಹೆಗಡೆ

ಮಸಣದ ಹೂವು:   1.ವಿಕೃತ ಕಾಮಿಗಳ ಕಾಮದಾಹಕೆ ಬಲಿಯಾದ ಹುಡುಗಿಯ ಗೋರಿಯ ಮೇಲಿನ ಹೂವಲ್ಲೂ ಅದೇ ಮುಗ್ಧ ನಗು… ಆದರೆ ಇಲ್ಯಾರೂ ಹೊಸಕುವವರಿಲ್ಲ. 2.ಇಂದು  ಮಸಣದಲ್ಲೂ ನೀರವ ಮೌನ ಆಕೆ ಬಂದಿದ್ದಾಳೆ ಕಾಮುಕರ ಕಾಮಕ್ರೀಡೆಗೆ ಪ್ರಾಣತೆತ್ತು. 3.ಹೆಣ್ಣೊಡಲ ಮಾತು… ಯಾರ ಭಯವಿಲ್ಲ ನನಗೆ ಹುಟ್ಟಿಬಂದರೆ ಮಸಣದ ಹೂವಾಗಿ. 4.ಹೆಣ್ಣು ಸುರಕ್ಷಿತ ಒಂದು ತಾಯಿಯ  ಗರ್ಭದಲ್ಲಿ, ಇನ್ನೊಂದು  ಮಸಣದ  ಗೋರಿಗಳಲ್ಲಿ. 5.ಮಸಣದಲ್ಲಿ  ನನ್ನವಳ  ಗೋರಿಯ ಮೇಲೆ ಅರಳಿದ್ದ ಹೂವೂ ನನ್ನ ನೋಡಿ ನಕ್ಕಿತ್ತು ಅವಳು ನಕ್ಕಂತೆ. 6.ಎಷ್ಟಿದ್ದರೂ ಏನಿದ್ದರೂ […]

ನೆನಪುಗಳೆಂಬ ಬುತ್ತಿಗಳು: ಪದ್ಮಾ ಭಟ್, ಇಡಗುಂದಿ.

                          ಮನಸಿನ ಪುಟವ ತಿರುವಿ ಹಾಕಿದಾಗ ಒಂದಷ್ಟು ನೆನಪಿನ ಬುತ್ತಿಗಳು.. ದುಃಖವಾದಾಗ ಅಂದು ಸಂತಸ ಪಡುತ್ತಿದ್ದ ನೆನಪುಗಳು..ಎಲ್ಲವನ್ನೂ ಮರೆಯುತ್ತೇನೆ ಕಹಿದಿನಗಳನ್ನು ಎಂದುಕೊಳ್ಳುತ್ತಲೇ, ಮನಸ್ಸಿನ ಇನ್ಯಾವುದೋ ಮೂಲೆಯಲ್ಲಿ  ಅದರ ತುಣುಕು ಇರದೇ ಇರುವುದಿಲ್ಲ..ನೆನಪುಗಳೇ ಹಾಗೆ.. ಒಮ್ಮೆಮ್ಮೆ ಬದುಕನ್ನು ಅರಳಿಸುತ್ತೆ. ಮತ್ತೊಮ್ಮೆ ದುಃಖದ ಘಟನೆ ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ.. ಮನೆಯ ಪಕ್ಕದ ರೋಡಿನಲ್ಲಿ ಜೋಳ ಮಾರುವ ಅಜ್ಜನಿಂದ ಹಿಡಿದು, ಬದುಕನ್ನು ಸಿಹಿಯಾಗಿಸಿದ […]