Facebook

Archive for 2014

ಒಂದು ತಲ್ಲಣದ ಸಂಜೆ: ಹೃದಯಶಿವ

ಅದೊಂದು ಮಾಮೂಲಿ ದಿನ… ಆ ಸಂಜೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಎಂದೋ ಹಾಡು ಬರೆದು ಮರೆತು ಹೋಗಿದ್ದ ಸಿನಿಮಾವೊಂದರ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕಾಗಿ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಆ ಚಿತ್ರದ ನಿರ್ದೇಶಕರು ಫೋನ್ ಮಾಡಿ ಆಹ್ವಾನಿಸಿದ್ದರು; ಪತ್ರಕರ್ತರ, ಟಿವಿ ಮಾಧ್ಯಮದವರ ಮುಂದೆ ನಿಂತು ಆ ಚಿತ್ರಕ್ಕಾಗಿ ನಾನು ಬರೆದಿದ್ದ ಹಾಡುಗಳ ಬಗ್ಗೆ ಒಂದೆರಡು ಮಾತಾಡಿ ವೇದಿಕೆ ಮೇಲೆ ಇರಬಹುದಾದವರ ಜೊತೆ ಸಿಡಿ ಹಿಡಿದುಕೊಂಡು ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಕೆಲಸ. ಇಷ್ಟಕ್ಕೂ ನಾನು ನೆಟ್ಟಗೆ ಸಿನಿಮಾ ಹಾಡು […]

ಮೊದಲು ಮಾನವನಾಗು: ಅನಿತಾ ನರೇಶ್ ಮಂಚಿ

ಶಾಲೆಯಿಂದ ಫೋನ್ ಬಂದಿತ್ತು. ಇವತ್ತು ಶಾಲಾವಾಹನ ಹಾಳಾದ ಕಾರಣ ಸರ್ವಿಸ್ ಬಸ್ಸಿನಲ್ಲೇ ಮಕ್ಕಳನ್ನು ಕಳಿಸ್ತಾ ಇದ್ದೀವಿ.. ಟಕ್ಕನೆ ಫೋನ್ ಕಟ್ಟಾಯಿತು.  ಅಯ್ಯೋ.. ಪಾಪ ಸಣ್ಣವನು.. ಸರ್ವಿಸ್ ಬಸ್ಸಿನಲ್ಲಿ ಹೇಗೆ ಬರ್ತಾನೆ ಎಂಬ ಆತಂಕ ನನ್ನದು. ನಾನೇ ಹೋಗಿ ಕರೆತರಬಹುದು ಆದರೆ ಅಷ್ಟರಲ್ಲೇ ಅವನು ಬೇರೆ ಬಸ್ಸಿನಲ್ಲಿ ಹೊರಟು ಬಿಟ್ಟಿದ್ದರೆ..  ಶಾಲೆಗೆ ಫೋನ್ ಮಾಡಿ ವಿಚಾರಿಸೋಣ ಅಂತ ಡಯಲ್ ಮಾಡಿದರೆ ಅದು ಎಂಗೇಜ್ ಸ್ವರ ಬರುತ್ತಿತ್ತು. ಎಲ್ಲಾ ಮಕ್ಕಳ ಮನೆಗಳಿಗೂ ಸುದ್ದಿ ಮುಟ್ಟಿಸುವ ಅವಸರದಲ್ಲಿ ಅವರಿದ್ದರೇನೋ..  ಮನೆಯಿಂದ ಶಾಲೆಗೆ […]

ತಿಮ್ಮನ ಹುಚ್ಚು!: ಮಂಜು ಹಿಚ್ಕಡ್

ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ […]

ಮಹಿಳೆ, ಮಗು , ಕಾನೂನು..: ಮಮತಾ ದೇವ

ಮಹಿಳೆಯರಿಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿ ಗತಿ ಸಮಾಜದ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶಗಳಲ್ಲೂ ಸುಧಾರಣೆಯನ್ನು ಕಂಡಿಲ್ಲ.ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೂ ದೌರ್ಜನ್ಯ ಹೆಚ್ಚುತ್ತಿರುವುದು  ಅಪಾಯಕಾರಿಯೆನಿಸುತ್ತಿದೆ. ಮಹಿಳೆ ಇನ್ನೂ ಎರಡನೇ ದರ್ಜೆ ಪ್ರಜೆಯಾಗಿಯೇ ಉಳಿದಿದ್ದಾಳೆ. ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಪುರುಷನಿಗೆ ಸಮಾನಳಾಗಿದ್ದರೂ, ಮಹಿಳೆಗೆ ಸುರಕ್ಷತೆಯ ವಾತಾವರಣ ಎಲ್ಲೆಲ್ಲೂ ಇಲ್ಲ.ಇಂದಿನ 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳು ಭದ್ರತೆ, ಸುರಕ್ಷತೆಗಳಿಂದ ವಂಚಿತರಾಗುತ್ತಿದ್ದಾರೆ.ಕಾನೂನು ಎಲ್ಲ ದೇಶದಲ್ಲೂ ಒಂದೇ ಆಗಿಲ್ಲ. ಕೆಲವು ದೇಶಗಳಲ್ಲಿ  ಮಹಿಳೆಯರಿಗೆ […]

ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.

ಮಕ್ಕಳನ್ನು ನೋಡುತ್ತಲೇ ಕೆಲವರು ಹೇಳುತ್ತಿರುತ್ತಾರೆ;  "ಹುಡುಗ ಭಾಳ ಚುರುಕದಾನ, ಮುಂದ್ ಚಲೋತ್ನಾಗಿ ಓದಿ ಬುದ್ಧಿವಂತನಾಗ್ತಾನ, ನೀವೇನ್ ಕಾಳಜಿ ಮಾಡಬ್ಯಾಡ್ರಿ"  ಆ ಬುದ್ಧಿವಂತಿಕೆ, ಚುರುಕು, ತಲೆಗೆ ಹತ್ತುವ ಓದು ಎಲ್ಲಾ ಓಕೆ.  ಆದರೆ, ನಾನು ನೋಡಿದ ಸ್ವತಃ ನೋಡಿ  ಅನುಭವಿಸಿದಂತೆ ಕೆಲವು ಸ್ನೇಹಿತರಲ್ಲಿ ಯು- ಟರ್ನ್ ತೆಗೆದುಕೊಂಡಿರುತ್ತಾರೆ.  ಒಂದೋ ದಡ್ಡತನದಿಂದ ಜಾಣತನದೆಡೆಗೆ ಇಲ್ಲವೇ ಬುದ್ಧಿವಂತಿಕೆಯಿಂದ  ದಡ್ಡರ ಸಾಲಿಗೆ.  ಸೋಮಾರಿತನ ಬಿಟ್ಟು ಸಮಯ,ದುಡಿಮೆ, ಜಾಣ್ಮೆ ಎಲ್ಲದರ ಕಡೆ ಪ್ರಜ್ಞಾಪೂರ್ವಕವಾಗಿ ಬಿಹೇವ್ ಮಾಡುವುದು.  ಈ ಮಧ್ಯೆ ಓದಿನ ಹಂತದಲ್ಲೇ  ಚೂರು ಮೈ […]

ನಾಲ್ಕು ಕವಿತೆಗಳು: ವೆಂಕಟೇಶ್ ನಾಯಕ್, ಶಿವಕುಮಾರ ಚನ್ನಪ್ಪನವರ, ಗುರು ಪ್ರಸಾದ್, ರಾಣಿ ಪಿ.ವಿ.

ಬೆಳೆ ಕಳೆ ನನ್ನ ಬೆಳೆ, ನನ್ನ ಕಳೆ ನನ್ನದೇ ಹೊಲದಲ್ಲಿ ನಾನೇ ಭಿತ್ತಿದ ಬೀಜ ಸದಾವಕಾಶದಲ್ಲಿ ಬೆಳೆದು ಕಳೆ ಇಲ್ಲದ ಬೆಳೆ ಕನಸು ಕಂಡಿದ್ದು ನಿಜ ಮಣ್ಣಿದು, ಕಪ್ಪಿರಲಿ ಕೆಂಪಿರಲಿ ಖಂಡಿತ ಚಿಗುರುವುದು ಕಳೆ ನೀರಾಕಿದ್ದು ನಾನೇ ಬೆಳೆಗೆ, ಇಂಗಿತ. ಅದರೊಡನೆ ಬೆಳೆದದ್ದು ಕಳೆ ಇಂದು, ಬೆಳೆಗಾತ್ರಕ್ಕೆ ಬೆಳೆದ ಕಳೆ ಅಲ್ಲಿ ಕೆಸರು ತುಂಬಿದ ಕೊಳೆ ಈಗ ಪಿಕಾಸಿ ಹಿಡಿದು ಹೊಲದ ಬದಿಯಲ್ಲಿ ನಿಂತ ನಾನು ತಲೆಯಲ್ಲಿ ಸಾಕದಿದ್ದರೂ ಬದುಕುವ ಹೇನು   ರಭಸದಲಿ ತೆಗೆಯ ಬೇಕೆಂದಿರುವೆ […]

ದೋಸೆ ದೋಸ್ತಿ : ಪ್ರಶಸ್ತಿ ಅಂಕಣ

  ರಜಾ ದಿನ ಭಾನುವಾರ ಅಂದ್ರೆ ಎಚ್ಚರಾಗೋದು ಹೊಟ್ಟೆಯಿಂದ್ಲೇ. ಮುಖಕ್ಕೆ ಬಿಸಿಲು ಬಿದ್ರೂ ಎಚ್ಚರಾಗದ ದೇಹವನ್ನ ಹುಟ್ಟೋ ಹೊಟ್ಟೆ ಹಸಿವು ಎಬ್ಬಿಸಿಬಿಡುತ್ತೆ. ಹಂಗೇ ಎದ್ದು ಹೊರಗಿಣುಕಿದ್ರೆ ಎದುರಿನ  ತೆಂಗಿನ ಮರದ ಮೇಲಿನ ಕಾಗೆ ಗುಡ್ಮಾರ್ನಿಂಗ್ ಅಂತ ಕೂಗ್ತಾ ಇದ್ದುದು ನಂಗೇನಾ ಅನಿಸುತ್ತೆ. ತಿರುಗೋ ಭೂಮಿಗಿಲ್ಲದ ರಜೆ, ಸುತ್ತೋ ಬಸ್ಸಿಗಿಲ್ಲದ ರಜೆ , ಅಹಮಿಗಿಲ್ಲದ , ಹಸಿವಿಗಿಲ್ಲದ ರಜೆ ನಿಂಗೇಕೋ ಬೆಪ್ಪೇ ? ಜಗವೆಲ್ಲ ಎದ್ದಿರಲು ಮಲಗಿರುವೆ ಸಿದ್ದ ಅಂತ ನಂಗೆ ಬಯ್ಯೋಕೆ ಶುರು ಮಾಡಿತ್ತಾ ಗೊತ್ತಿಲ್ಲ. ಎಲ್ಲಾ […]

ಹಳೆ ಅಂಗಿ ತೆಗೆದು ಹೊಸ ಅಂಗಿ ಹಾಕ್ಕಂಡಂಗೆ!: ಸಂತೆಬೆನ್ನೂರು ಫೈಜ್ನಟ್ರಾಜ್

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ…… ಸಾಹಿತ್ಯ ಅರ್ಥವಾಗದೇ ಇದ್ದ ವಯಸ್ಸಿನಲ್ಲಿ ಗುನುಗಿಕೊಳ್ಳುತ್ತಿದ್ದ ಹಾಡು.ವಸಂತ ಒಬ್ಬ ವ್ಯಕ್ತಿ, ಆತ ಎಲೆ ಮೇಲೆ ಲೆಟರ್ ಬರೆದ ಅಂತಾನೆ ಅರ್ಥೈಸಿಕೊಂಡಿದ್ದು! ವಸಂತ ಬಂದ ಚೈತ್ರಾಳ ಜೊತೆ….ವಾವ್ ಏನು ಖುಷಿ ಅಲ್ವಾ?ಮರ-ಗಿಡ-ಬಳ್ಳಿಗಳೆಲ್ಲವೂ ಮೈ ಚಕ್ಳ ಬಿಟ್ಕಂಡು ಬಕ್ಕಬರ್ಲಾಗಿ ಬಾಳೋ ಅಥವಾ ಸಾಯೋ ಟೈಮಿಗೆ ಈ ಜೋಡೀನ್ ನೋಡಿ ಮತ್ತೆ ಮೈಕೈ ತುಂಬ್ಕಂಡ್ ಮೊದಲ್ನೇ ಸರ್ತೀ ಮದ್ವೆಯಾಗೋ ಹುಡುಗ್ನಂಗೆ ಸಿಂಗಾರಗೊಳ್ತವೆ ಅಂದ್ರೆ ಅದಕ್ಕೆ ಚೈತ್ರ ಕಾರಣನೋ,ವಸಂತನೋ ಗೊತ್ತಿಲ್ಲ! ಎದೆಯ […]

ಮಿಥೇನ್ ಎಂಬ ಟೈಬಾಂಬ್ ಟಿಕ್.. ಟಿಕ್…: ಅಖಿಲೇಶ್ ಚಿಪ್ಪಳಿ

ತೇನವಿನಾ ತೃಣಮಪಿ ನ ಚಲತಿ ಎನ್ನುವ ಮಾತು ಭಗವಂತನಿಗಿಂತ ಚೆನ್ನಾಗಿ ವಿದ್ಯುಚ್ಛಕ್ತಿಗೇ ಅನ್ವಯವಾಗುತ್ತದೆ. ಯಾಕೆಂದರೆ ವಿದ್ಯುತ್ತಿಲ್ಲದಿದ್ದರೆ ಇಂದು ಜೀವನವೇ ಇಲ್ಲ. ಮನುಷ್ಯ ಇದ್ದೂ ಸತ್ತಂತೆ. ಮನೆಯೊಳಗಿನ ತೃಣವೂ ಕಸದ ಬುಟ್ಟಿಗೆ ರವಾನೆಯಾಗಲು ವಿದ್ಯುತ್ ಬೇಕು. ಇಂದು ವಿದ್ಯುತ್ ಎಂಬ ಮಹಾಮಾಂತ್ರಿಕನಿಲ್ಲದೆ ಜೀವಪ್ರವಾಹವೇ ನಿಶ್ಚಲ. ಶಿಶುವಾಗಿ ಹುಟ್ಟುವಾಗಿನಿಂದ ಹಿಡಿದು ಹೆಣವಾಗಿ ಉರಿದು ಬೂದಿಯಾಗುವವರೆಗೂ ವಿದ್ಯುತ್ ಬೇಕೇಬೇಕು. ಶಿಶು ಹುಟ್ಟುವಾಗ, ಅದು ಆಪರೇಷನ್ ಥಿಯೇಟರ್ ಆಗಿರಲಿ, ಬಾಣಂತಿ ಕೋಣೆಯಗಿರಲಿ ವಿದ್ಯುತ್ ಬೇಕು. ಹುಟ್ಟಿದ ಮಗುವೂ ಕೂಡ ಅಮ್ಮ, ನೀನಲ್ಲದಿದ್ದರೆ ನಾನಿದ್ದೇನು, […]

ತಾಯಿಯ ಮಮತೆ: ಲೋಕೇಶಗೌಡ ಜೋಳದರಾಶಿ

ಕಮಲಮ್ಮನಿಗೆ ಮೋಹನ ಒಬ್ಬನೆ ಮಗ. ಚಿಕ್ಕ ವಯಸ್ಸಿನಲ್ಲೆ ಗಂಡನ ಕಳೆದುಕೊಂಡ ಕಮಲಮ್ಮ ತನ್ನ ಮಗನನ್ನು ತುಂಬ ಕಷ್ಟದಲ್ಲಿ ಸಾಕಿ ಸಲುಹಿ ದೊಡ್ಡವನನ್ನಾಗಿ ಬೆಳೆಸಿದಳು. ಅವಳು ಕೂಲಿ ಕೆಲಸದ ಜೊತೆ ಅಕ್ಕಪಕ್ಕದ ಮನೆಗಳಲ್ಲಿ ಮನೆಕೆಲಸಗಳನ್ನ ಮಾಡಿ ಮೋಹನನನ್ನು ಹತ್ತನೆಯ ತರಗತಿಯವರೆಗೆ ಓದಿಸಿ ನಂತರ, ಅವನನ್ನು ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಓದಲು ಸೇರಿಸಿದಳು. ಮೋಹನ ಕಾಲೇಜು ಸೇರಿದ ನಂತರ ತಾಯಿಗೆ ವಾರಕ್ಕೆ ಒಂದು ಪತ್ರ ಬರೆಯುತ್ತಿದ್ದ. ಕಾಲಕ್ರಮೇಣ ತಾಯಿಗೆ ಪತ್ರ ಬರುವುದು ಕಮ್ಮಿಯಾಯಿತು. ಇದರಿಂದ ತಾಯಿಯ […]