Facebook

Archive for 2014

ಬಾಡಿಗೆ ಮನೆಗಾಗಿ ಬಾಡಿದ ಮನಗಳು….: ಸಂತೋಷ ಗುಡ್ಡಿಯಂಗಡಿ

೧೯೧೮ರಲ್ಲಿ ನಾನು ಭಾರತಕ್ಕೆ ಮರಳಿ ಬಂದೆ. ನಾನು ಬರೋಡಾ ರಾಜ್ಯದ ಹಣಕಾಸಿನ ಸಹಾಯದಿಂದ ಉಚ್ಛ ಶಿಕ್ಷಣ ಪಡೆದವನಾದ್ದರಿಂದ ಒಪ್ಪಂದಕ್ಕೆ ಅನುಗುಣವಾಗಿ ಆ ರಾಜ್ಯಕ್ಕೆ ನನ್ನ ಸೇವೆಯನ್ನು ಸಲ್ಲಿಸಬೇಕಾಗಿತ್ತು. ಹೀಗಾಗಿ ಭಾರತಕ್ಕೆ ಮರಳಿದ ಕೂಡಲೇ ನೇರವಾಗಿ ಬರೋಡಾಕ್ಕೆ ಬಂದೆ. ಯುರೋಪ್ ಮತ್ತು ಅಮೆರಿಕೆಯಲ್ಲಿನ ಐದು ವರುಷಗಳ ವಾಸ್ತವ್ಯವು ನಾನು ಅಸ್ಪೃಶ್ಯನೆಂಬ ಪ್ರಜ್ಞೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಬರೋಡಾದಲ್ಲಿ ’ವಿಶಿ’ ಎಂದು ಕರೆದುಕೊಳ್ಳುವ ಹಿಂದೂ ಹೋಟೆಲ್ಲುಗಳು ಇದ್ದದ್ದು ನನಗೆ ತಿಳಿದಿದ್ದವು. ಅವು ನನಗೆ ಪ್ರವೇಶ ನೀಡಲಾರವು. ಅವುಗಳಲ್ಲಿ ಪ್ರವೇಶಿಸಲು ಇದ್ದ ಒಂದೇ […]

ತಾತನ ಗೋರಿ ಮತ್ತು ನೆನಪುಗಳು: ಹೃದಯಶಿವ ಅಂಕಣ

ದಟ್ಟ ಮೌನ ಕವಿದಿದೆ. ತಾತನ ಗೋರಿಯ ಪಕ್ಕದಲ್ಲಿ ಕುಳಿತು ಸುತ್ತಲೂ ದಿಟ್ಟಿಸಿದರೆ ಹಸಿರು ಹೊಲಗಳು, ಬೆಟ್ಟದ ನೆತ್ತಿಗೆ ಮುತ್ತುಗರೆವ ಕೆಂಪುಮೋಡಗಳು, ಸುತ್ತಣ ಮರಗಳ ಗೂಡುಗಳಲ್ಲಿನ ಹಕ್ಕಿಮರಿಗಳು ಚಿಲಿಪಿಲಿಗುಟ್ಟುತ್ತಿವೆ, ತಣ್ಣನೆ ಸಂಜೆಯ ಹೊತ್ತು. ಸೂರ್ಯ ನನಗೆ ಟಾಟಾ ಹೇಳುತ್ತಿದ್ದಾನೆ ಅನ್ನಿಸುತ್ತಿದೆ. ಆಕಾಶದಗಲ ಹಕ್ಕಿಗಳು ಚಿತ್ರ ಬಿಡಿಸಿದಂತೆ ಹಾರುತ್ತಿವೆ. ಪಡುವಣ ಕೆಂಪಾಗುತ್ತಿದೆ. ತಲೆಯ ಮೇಲೆ ಹುಲ್ಲುಹೊರೆ ಹೊತ್ತ ವ್ಯಕ್ತಿ ಒಂದು ಜೊತೆ ಎತ್ತಿನೊಂದಿಗೆ ಊರ ಕಡೆ ಹೊರಟಿದ್ದಾನೆ. ಒಂದು ಜಿಂಕೆಯೋ, ಸಾರಂಗವೋ ಕಣ್ಣೆದುರೇ ಛಂಗನೆ ಹಾರಿದಂತೆ ಭಾಸ, ತುಸು ದೂರದಲ್ಲೇ […]

ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.

ಫೆಬ್ರವರಿ 16, 27, ಏಪ್ರಿಲ್ 24, ಡಿಸೆಂಬರ್ 25, ಆಗಸ್ಟ್ 15, ಜನವರಿ 26, ಹೀಗೆ ಸುಮಾರು ದಿನಗಳು ಒಬ್ಬೊಬ್ಬರಿಗೆ ಒಂದೊಂದು ಮರೆಯಲಾರದ ದಿನವಾಗಿರುತ್ತೆ.  ಮದುವೆಯದೋ.  ಹುಟ್ಟುಹಬ್ಬದ್ದೋ… ರಾಷ್ಟ್ರೀಯ ಹಬ್ಬ ಅದು ಬಿಡಿ ಎಲ್ಲರಿಗೂ ಹಬ್ಬವೇ. ಒಮ್ಮೊಮ್ಮೆ ಆ ದಿನಗಳಿಗೆ ಅಂಟಿಕೊಂಡು ಒಂದೊಂದು ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಘಟನೆಗಳು  ಸೇರಿರುತ್ತವೆ. ಹೆಚ್ಚು ಓದಿರದ ನಮ್ಮವ್ವನ ವಯಸ್ಸಿನವರಿಗೆ  "ನನ್ನ  ಹುಟ್ಟಿದ ದಿನಾಂಕ ಯಾವ್ದವ್ವ?" ಅಂತೇನಾದ್ರೂ ಕೇಳಿದ್ರೆ, ಗೊತ್ತಿಲ್ಲೆಪ್ಪಾ, ಆದ್ರ ನೀ ಹುಟ್ಟಿದ್ ಎಲ್ಡು ದಿನಕ್ಕೆ ಕಾರ ಹುಣ್ಣಿವಿ ಇತ್ನೋಡೆಪ್ಪ. […]

ಗಂಧದ ಘಮ..: ಅನಿತಾ ನರೇಶ್ ಮಂಚಿ

ತಲೆಬರಹ ನೋಡಿ ಇದರಲ್ಲೇನಿದೆ ವಿಶೇಷ, ’ತನ್ನನ್ನೇ ತೇದು ಪರಿಮಳವನ್ನು ಲೋಕಕ್ಕೆ ಕೊಡುವ ತ್ಯಾಗಜೀವಿ ತಾನೇ ಗಂಧ’ ಅಂತೀರಲ್ವಾ..ಹೌದು ಸ್ವಾಮೀ ನಾನು ಅದನ್ನು ಅಲ್ಲ ಅನ್ನಲಿಲ್ಲ.. ಆದ್ರೆ ಗಂಧ ತನ್ನನ್ನು ತೇಯಬೇಕಾದರೆ ಎಷ್ಟು ಜೀವ ತೇಯುತ್ತದೆ ಅಂತಾದ್ರು ನಿಮಗೆ ಗೊತ್ತಾ.. ಅದೊಂದು ದೊಡ್ಡ ಕಥೆ.. ಹೇಳ್ತೀನಿ ಕೇಳಿ..   ನನ್ನಣ್ಣನ ಮನೆ ಅಂದರೆ ಅದೊಂದು ಸಸ್ಯ ಭಂಡಾರ. ನಮ್ಮೂರಾದ ಕರಾವಳಿಯಲ್ಲಿ ಬೆಳೆಯದ ಹಲವು ಸಸ್ಯಸಂಕುಲಗಳು ಮಲೆನಾಡಿನ ಅವನ ತೋಟದಲ್ಲಿ ನಳನಳಿಸುತ್ತಿರುತ್ತದೆ. ನಾನೋ ’ಕಂಡದ್ದೆಲ್ಲಾ ಬೇಕು…… ಭಟ್ಟನಿಗೆ’ ಅನ್ನೋ ಜಾತಿ. […]

ಸಂಬಂಧಗಳ ಸುಳಿಯಲ್ಲಿ ’ಬೇರಿಲ್ಲದವರು’: ಹಿಪ್ಪರಗಿ ಸಿದ್ಧರಾಮ

ನಗರದಲ್ಲೊಂದು ಚಿಕ್ಕ ಮತ್ತು ಚೊಕ್ಕದಾದ ಕುಟುಂಬ. ಆಧುನಿಕ ಕಾಲದ ಸಕಲೆಂಟು-ಸೌಕರ್ಯಗಳು ಇರುವ ಆ ಕುಟುಂಬದ ಯಜಮಾನ ಸರಕಾರದ ಇಲಾಖೆಯೊಂದರಲ್ಲಿ ಇಂಜನೀಯರ್ ಮತ್ತು ಆತನ ಪತ್ನಿಯೂ ಸಹ ಆಧುನಿಕ ಕಾಲದ ಸುಶಿಕ್ಷಿತೆ ಮತ್ತು ಸರಕಾರಿ ಶಾಲೆಯ ಶಿಕ್ಷಕಿಯಾಗಿ ನೌಕರಿ ಮಾಡುತ್ತಿದ್ದಾಳೆ. ಇಂತಿಪ್ಪ ಕೈತುಂಬ ಸಂಬಳದ ಉದ್ಯೋಗಸ್ಥ ದಂಪತಿಗಳಿಗೆ ಹದಿಹರೆಯದ ಮಗ ಮತ್ತು ಮಗಳು ಇದ್ದಾರೆ. ಮನೆಯಲ್ಲಿಯೂ ಎಲ್ಲವೂ ಇದೆ ಆದರೆ ಶಾಂತಿ-ಸಮಾಧಾನ-ಹೊಂದಾಣಿಕೆ-ಅರ್ಥ ಮಾಡಿಕೊಳ್ಳುವಂತಹ ಸಾಮಾಜಿಕ ಅಂಶಗಳು ಅವಶ್ಯವಾಗಿ ಇರಬೇಕಾದುದೇ ಇಲ್ಲ. ಇರುವ ನಾಲ್ವರಿಗೂ ತಮ್ಮದೇ ಆದ ಅವಸರ, ಉದ್ವೇಗ, […]

ಸುದ್ದಿಯಾಗದ ಸುದ್ದಿಗಳ ಹಿಂದೆ: ಪ್ರಶಸ್ತಿ

ಪ್ರಚಾರ ಅನ್ನೋದು ಯಾರಿಗೆ ಬೇಡ ಹೇಳಿ ? ಯಾರಿಗೂ ಒಂದು ಜೊತೆ ಬಟ್ಟೆ ಕೊಟ್ಟಿದ್ರಿಂದ ಹಿಡಿದು ಮತ್ಯಾರಿಗೋ ಐದು ರೂಪಾಯಿ ದಾನ ಮಾಡಿದವರೆಗೆ ನಿತ್ಯದ ತಿಂದುಂಡು ಮಲಗೋದ್ರ ಹೊರತಾಗಿ ಮಾಡಿದ ಒಳ್ಳೇ ಕೆಲ್ಸಗಳನ್ನ ನಾಲ್ಕು ಜನರೊಂದಿಗೆ ಹಂಚಿಕೋಬೇಕು ಅನ್ನೋ ಹಂಬಲ ನಮಗೆ. ಅದನ್ನ ಮಾಡಿದೆ, ಇದನ್ನ ಮಾಡಿದೆ ಹೇಳಿಕೊಳ್ಳೋ ಮೂಲಕ ಬೇರೆಯವ್ರ ದೃಷ್ಟಿಯಲ್ಲೊಂದು ಒಳ್ಳೇ ಸ್ಥಾನ ಪಡೆಯೋದು ಸಾಮಾನ್ಯರ ಬಯಕೆಯಾದ್ರೆ  ಏನೆಲ್ಲಾ ಮಾಡ್ತಿದ್ರೂ ಯಾರ ಕಣ್ಣಿಗೂ ಬೀಳದೇ ತಣ್ಣಗಿದ್ದು ಬಿಡೋ ಜನಗಳದ್ದು ಮತ್ತೊಂದು ಗುಂಪು. ತಮ್ಮ ಜೀವನವನ್ನೇ […]

ಮನುಕುಲದ ಅವಸಾನ ಹತ್ತಿರವಾಗುತ್ತಿದೆಯೇ?: ಅಖಿಲೇಶ್ ಚಿಪ್ಪಳಿ ಅಂಕಣ

ಭೂಮಿಯ ಮೇಲೆ ಒಂದು ತರಹದ ವೈರಸ್ ಸೃಷ್ಟಿಯಾಗಿದೆ. ಈ ವೈರಸ್‌ಗಳು ಮನುಷ್ಯನ ದೇಹವನ್ನು ಹೊಕ್ಕು ಅವಾಂತರ ಮಾಡಿ ಕ್ರಮೇಣ ಸಾಯಿಸುತ್ತವೆ. ಸತ್ತ ಹೆಣಗಳು ಮತ್ತೆ ಎದ್ದು ಕೂತು ದೆವ್ವಗಳಾಗಿ ಪರಿವರ್ತನೆ ಹೊಂದಿ ಉಳಿದ ಮನುಷ್ಯರನ್ನು ಕಾಡುತ್ತವೆ. ಈ ತರಹದ ಕಥಾವಸ್ತುವನ್ನು ಹರವಿಕೊಂಡು ನಿರ್ಮಿಸಲಾದ ಅಮೇರಿಕಾದ ಒಂದು ಪ್ರಸಿದ್ಧ ಧಾರಾವಾಹಿಯ ಹೆಸರು ದಿ ವಾಕಿಂಗ್ ಡೆಡ್. ಈ ಧಾರಾವಾಹಿಯು ಅತ್ಯಂತ ಪ್ರಸಿದ್ಧಿಯನ್ನು ಪಡೆದು ದಾಖಲೆ ನಿರ್ಮಿಸಿದೆ. ಕಾಲ್ಪನಿಕವಾಗಿ ಸೃಷ್ಟಿಸಲಾದ ಈ ಘಟನೆಗಳು ನಿಜವಾಗಲೂ ನಡೆಯುತ್ತವೆಯೇ? ಮನುಕುಲದ ಅವಸಾನ ಸನಿಹವಾಗುತ್ತಿದೆಯೇ? […]

ಪಂಚಮಿ ಹಬ್ಬಾ ಉಳದಾವ ದಿನ ನಾಕ, ಅಣ್ಣಾ ಬರಲೇಯಿಲ್ಲಾ ಕರಿಯಾಕ: ಸುಮನ್ ದೇಸಾಯಿ

ಶ್ರಾವಣ ಮಾಸಾ ಬಂತಂದ್ರ ಅತ್ತಿ ಮನ್ಯಾಗಿನ ಹೆಣ್ಣಮಕ್ಕಳಿಗೆ ಎನೊ ಒಂಥರಾ ಹುರಪಿರತದ,ಪಂಚಮಿ ಹಬ್ಬಕ್ಕ ತವರುಮನಿಗೆ ಹೋಗೊ ಸಂಭ್ರಮದಾಗ ಭಾಳ ಖುಷಿಲೆ ತನ್ನ ಕರಿಲಿಕ್ಕೆ ಬರೊ ಅಣ್ಣ ಅಥವ ತಮ್ಮನ ದಾರಿಕಾಯಕೊತ,     "ಪಂಚಮಿ ಹಬ್ಬಾ ಉಳದಾವ ದಿನ ನಾಕ,,,  ಅಣ್ಣಾ ಬರಲೇಯಿಲ್ಲಾ ಕರಿಯಾಕ……….." ಅಂತ ತನ್ನೊಳಗ ತಾನ ಹಾಡು ಹಾಡಕೊತ,ತವರುಮನ್ಯಾಗಿನ್ ಪಂಚಮಿ ಹಬ್ಬದ ಸಂಭ್ರಮನ ತನ್ನ ಗೆಳತ್ಯಾರಿಗೆ ಹೆಳ್ಕೊತಿರತಾಳ."  "ನನ್ನ ತವರಲ್ಲಿ ಪಂಚಮಿ ಭಾರಿ,.  ಮಣ ತೂಕದ ಬೆಲ್ಲಾ ಕೊಬ್ಬರಿ,. ಅಳ್ಳು ಅವಲಕ್ಕಿ, ತಂಬಿಟ್ಟು ಸೂರಿ,,. […]

ಮೂರು ಕವಿತೆಗಳು: ಕಾವ್ಯ ಪ್ರಿಯ, ಬಸವರಾಜ್ ಕದಮ್, ರಾಣಿ ಪಿ.ವಿ.

ಬ್ಯಾಚುಲರ್ ಫುಡ್ಸ್.. ಬೆಳಗಾಗುತ್ತಲೆ ಎದ್ದೊಡನೆ ಏನಾಗುವುದು ನನಗೇಕೊ ಮೊದಲು ಹಸಿವಾಗುವುದು ಊರಿನಲ್ಲಿದ್ದಾಗ ತಿ೦ಡಿ ತಯಾರಾಗುತ್ತಿದ್ವು ಹೊಟ್ಟೆ ತು೦ಬ ತಿ೦ದು ಅಡ್ಡಾಡುತ್ತಿದ್ದೆವು… ಇ೦ದಿನ ಪರಿಸ್ತಿತಿ ಬದಲಾಗಿಹುದು ರಾತ್ರಿ ಮನೆಗೆ ಬ೦ದರೂ ಕೇಳರಾರಿಹರು ಊಟ ತಿ೦ಡಿ ಉಪಚಾರದ ಮಾತೆಲ್ಲಿಹುದು ಪಿಜಾ ಅ೦ಗಡಿಯವನಿಗೆ ವ್ಯಾಪಾರ ಜೋರು… ಇದಕ್ಕೆ ಬೇಕೊ೦ದು ಶಾಶ್ವತ ಪರಿವಾರವು ಯೊಚಿಸಿ ನೊಡಿದೆ ಎನಿಹುದು ದಾರಿಯೂ ಅಡಿಗೆ ಮಾಡುವುದು ನನಗೆ ಸುಲಭವು ಲೇಟಾದರೂ ಹಚ್ಚುವೆನು ಒಲೆಯ ದಿನವೂ…. ಬೆಳಗಿನ ತಿ೦ಡಿಗೆ ಕಾರ್ನ್ ಫ್ಲೇಕ್ಸು ಮಧ್ಯಾನ ಕ್ಯಾ೦ಟೀನ ಮಿನಿ ಮೀಲ್ಸು ಸ೦ಜೆ […]

ಸಾಮಾನ್ಯ ಜ್ಞಾನ (ವಾರ 39): ಮಹಾಂತೇಶ್ ಯರಗಟ್ಟಿ

೧)    ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ  ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? ೨)    ಸತ್ಯಕಾಮ ಇದು ಯಾರ ಕಾವ್ಯನಾಮ ? ೩)    ಬಾ೦ಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು ? ೪)    ಕೃಷ್ಣನದಿಯ ಉಗಮಸ್ಥಳ ಯಾವುದು ? ೫)    ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕ೦ಡುಹಿಡಿದವರು ಯಾರು ? ೬)    ಐಎಸ್‌ಐ (ಇ೦ಡಿಯನ್ ಸ್ಟಾಂಡರ್ಡ್ ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ ಯಾವುದು? ೭)    ನೀರಿನಲ್ಲಿ ಆಮ್ಲಜನಕವವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅ೦ಗ ಯಾವುದು ? […]