Facebook

Archive for 2014

ಕಗ್ಗಲಿಪುರದಲ್ಲೊಂದು ಕನ್ನಡ ಸೇನೆ: ಹೃದಯಶಿವ ಅಂಕಣ

ಕಗ್ಗಲಿಪುರದಲ್ಲಿ 'ಕರುನಾಡ ಗಜಕೇಸರಿ ಸೇನೆ'ಯ ಉದ್ಘಾಟನೆ ಇವತ್ತಷ್ಟೇ (ಜುಲೈ 27) ನಡೆಯಿತು. ನನಗೆ ಅಲ್ಲಲ್ಲಿ ಆಗಾಗ ಕಂಡಂಥ ಕೆಲವು ಮುಖಗಳು ಅಲ್ಲಿ ಎದುರಾದವು. ನನಗೆ ಇದ್ದಕ್ಕಿದ್ದಂತೆಯೇ ಒಂದಿಷ್ಟು ನೆನಪುಗಳು ಆವರಿಸಿದವು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವ್ವನ ಅವ್ವ ಹಾಗೂ ಅವ್ವನ ಅಣ್ಣನೊಂದಿಗೆ ಮೊದಲಬಾರಿ ಬೆಂಗಳೂರಿಗೆ ಬರುವಾಗ ಕಗ್ಗಲಿಪುರದ ಮಾರ್ಗವಾಗಿಯೇ ಹಾದುಬಂದಿದ್ದೆ; ಗವಿಪುರದಲ್ಲಿ ನಡೆದ ಸಂಬಂಧಿಕರೆನ್ನಿಸಿಕೊಳ್ಳುವ ಯಾರದೋ ಮದುವೆಗೆ; ಈಗ ಅದೆಲ್ಲ ಅದೇಕೋ ನೆನಪಾಯಿತು. ಅಲ್ಲೇ ಇದ್ದ ಇಬ್ಬರು ಹಳ್ಳಿ ಯುವಕರಲ್ಲಿ ಒಬ್ಬ, "ಪಂಪ್ ಸನ್ಗ್ ಬಂದ್ರಾ ಸಾ?" […]

ಹೆಣ್ಣುಮಕ್ಕಳು ನಿರ್ಭಯರಾಗಿ ಓಡಾಡುವ ಕಾಲ ಮುಗಿದೇ ಹೋಯಿತೇ?: ಕೆ. ಉಷಾ ಪಿ. ರೈ

ನಿರ್ಭಯಳ ಭೀಕರ ಬಲತ್ಕಾರ ನಡೆದ ನಂತರ ’ಬಲಾತ್ಕಾರ’ ಎನ್ನುವ ಪದ ಅಂಕೆ ಸಂಖ್ಯೆಗಳ ಮಿತಿಯನ್ನೂ ಮೀರಿ ಯಾವುದೇ ಸಂಕೋಚವಿಲ್ಲದೆ ಅದೂ ಒಂದು ದಿನ ನಿತ್ಯದ ಬಳಕೆಯ ಶಬ್ಧದಂತೆ ಕಿವಿಗೆ ಬೀಳುತ್ತಲೇ ಇರುತ್ತದೆ. ಇದೇನೂ ಚರಿತ್ರೆಯಲ್ಲೇ ಮೊದಲ ’ಬಲತ್ಕಾರ’ದ ಕೇಸ್ ಅಲ್ಲ. ಆದರೆ ಇಡೀ ದೇಶದ ಜನರು ಒಗ್ಗಟ್ಟಾಗಿ ಪ್ರತಿಭಟಿಸಿದ್ದು ಈ ಘಟನೆಯನ್ನು. ಹಾಗಾಗಿ ಈ ಕೇಸಿಗೆ ಬಲ ಬಂದಿತ್ತು. ಇಡೀ ದೇಶದ ಜನರ ಪ್ರತಿಭಟನೆಯ ನಂತರವೂ ಬಲತ್ಕಾರಗಳು ನಿಲ್ಲಲಿಲ್ಲ. ಅದರ ನಂತರ ಮುಂಬಯಿಯಲ್ಲಿ ನಡೆದ ಶಕ್ತಿಮಿಲ್ ಬಲಾತ್ಕಾರದ […]

ದೀಪದ ದೆವ್ವ (ದೆವ್ವದ ಕಥೆಗಳು – ಭಾಗ ೩):ಗುರುಪ್ರಸಾದ್ ಕುರ್ತಕೋಟಿ

(ಇದು ಸಂಗೀತಾ ಕೇಶವ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದ ಕತೆ) ನಾನಾಗ ಪೀಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ನಾವಿದ್ದದ್ದು ನನ್ನ ಊರಾದ ಚಿಕ್ಕೋಡಿಯಲ್ಲಿ. ಅದು ಬೆಳಗಾವಿ ಜಿಲ್ಲೆಯಲ್ಲಿದೆ. ಹವಾಮಾನದ ವಿಷಯದಲ್ಲಿ ಅದಕ್ಕೂ ಬೆಳಗಾವಿಗೂ ಏನೂ ವ್ಯತ್ಯಾಸವಿರಲಿಲ್ಲ. ಅದು ಆಗಿನ ಸಂಗತಿ. ಈಗ ಬಿಡಿ ಬೆಳಗಾವಿಯ ಹವಾಮಾನವೂ ಪ್ರಕೃತಿ ವೈಪರಿತ್ಯಕ್ಕೆ ಬಲಿಯಾಗಿ ಹದಗೆಟ್ಟಿದೆ. ಆಗೆಲ್ಲಾ ಬೆಳಗಾವಿಯಲ್ಲಿ ಮಳೆ ಯಾವ ಪರಿ ಸುರಿಯುತ್ತಿತ್ತೆಂದರೆ… ಸುರಿಯುತ್ತಿತ್ತು ಅಷ್ಟೆ! ಒಮ್ಮೆ ಶುರುವಾಯಿತೆಂದರೆ ನಿಲ್ಲುವ ಮಾತೆ ಇರಲಿಲ್ಲ. ಚಿಕ್ಕೋಡಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ […]

ಒಲವೇ ಬಾಡಿಗೆ ಮನೆಯ ಲೆಕ್ಕಾಚಾರ:ಅಮರದೀಪ್ ಅಂಕಣ

ಹೊರಗೆ ಜೋರು ಮಳೆ.  ಮನೆ ತುಂಬಾ ತಟಕ್ ತಟಕ್ ಎಂದು ಸೋರಿದ ಮಳೆ ಹನಿಗಳು ಹೊರಡಿಸುವ ಪ್ಯಾಥೋ ಸಾಂಗಿನ ತುಣುಕು ಸಂಗೀತ.  ಮನೆ ಮಾಳಿಗೆಯ  ಹೊಗೆ ಗೂಡಿನ ಬಾಯಿಗೆ ತಗಡು ಮುಚ್ಚುವುದನ್ನು ಮರೆತಿದ್ದಳು ಮುದುಕಿ.  ಫಕ್ಕನೇ ನೋಡಿ ಮೊಮ್ಮಗನಿಗೆ ಹೇಳಿದಳು.  ಹುಡುಗ ಹತ್ತಲೋ ಬೇಡವೋ ಎಂಬಂತೆ ನೋಡಿದ; ಹಣ್ಣಣ್ಣು  ಮುದುಕಿ ತನ್ನ ಅಳಿದುಳಿದ ಹಲ್ಲುಗಳನ್ನು ಜೋಪಾನ ಮಾಡಿಟ್ಟು ಕೊಂಡು ದಿನ ದೂಡುವಂತೆ ಗೋಚರಿಸುತ್ತಿದ್ದ ಏಣಿಯ ಪರಿಸ್ಥಿತಿ.   ಹಂಗೂ ಹಿಂಗೂ ಸವ್ಕಾಶಿ ಹತ್ತಿ ಮಾಳಿಗೆ ನೋಡಿದರೆ ಏನಿತ್ತು? […]

ವೈಭವದ ಕೂಟ-ಪ್ಯಾಶನ್ನಿನ ಊಟ ? :ಪಾ.ಮು.ಸುಬ್ರಮಣ್ಯ

ಹಾಗೇ ಸುಮ್ಮನೇ ಏನಾದರೊಂದು ಬರೆಯಬೇಕೆಂದು ಮನಸ್ಸು ತವಕಪಡುತ್ತಿತ್ತು. ವಿಷಯಕ್ಕಾಗಿ ಮನದ ಗಾಳಿಪಟವನ್ನು ಹರಿಯಬಿಟ್ಟೆ.  ಪಟ ನೇರವಾಗಿ ಒಂದು ಅದ್ದೂರಿ ಕಾರ್ಯಕ್ರಮವೊಂದರ ನಡುವೆ ನಿಂತಿತು.  ಸುತ್ತಲೂ ಕಣ್ಣಾಡಿಸಿದೆ.  ವೈಭವಪೂರ್ಣವಾದ ಕಾರ್ಯಕ್ರಮ. ಯಾರೋ ಹಣದಧಿಪತಿಗಳೇ ಈ ಕಾರ್ಯಕ್ರಮದ ಆಯೋಜಕರೆಂದು ಮೇಲ್ನೋಟಕ್ಕೆ ಅನ್ನಿಸಿತು.  ಯಾರಾದರೆ ನನಗೇನು?  ನನಗೆ ಬೇಕಾಗಿರುವ ವಿಷಯ ಸಿಕ್ಕರೆ ಸಾಕು, ಎಂದಂದುಕೊಂಡು ಹುಡುಕತೊಡಗಿದೆ.  ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ವಿಚಾರಗಳಲ್ಲಿ ತೊಡಗಿದ್ದಾರೆನ್ನಿಸಿತು.  ನನ್ನನ್ನಾರು ಗಮನಿಸಲಿಲ್ಲ.  ಮನದ ಪಟ ಅಲೆದಾಟಕ್ಕಿಳಿದಾಗ ಕೇಳಿಯೇಬಿಟ್ಟಿ.  ’ಇಲ್ಲಿ ನನಗೇನು ಕೆಲಸ? ನನ್ನನ್ನು ಇಲ್ಲಿಗೇಕೆ ಕರೆತಂದೆ? […]

ಮೂರು ಕವನಗಳು: ಸಂತೇಬೆನ್ನೂರು ಫೈಜ್ನಟ್ರಾಜ್, ಜಾನ್ ಸುಂಟಿಕೊಪ್ಪ, ಎಸ್. ಕಲಾಲ್

ದ್ವಿಪದಿಗಳು ಕುಡಿದ ಅಮಲಿನಲ್ಲಿಲ್ಲ ಸಖಿ ನೀನಿಲ್ಲ ಎಂಬುದೊಂದು ನೋವೆನಿಸಿಲ್ಲ ನನಗೆ         ಹೆಜ್ಜೆ ಇಟ್ಟಲ್ಲೆಲ್ಲಾ ಮುರಿದ ಹಪ್ಪಳ         ಸದ್ದು ಪುಡಿಯಾದ ಕನಸುಗಳು ಜೀವ ಬಿಟ್ಟವು ನನಗೂ ಎಚ್ಚರ ಇದೆ ನೆನಪಿರಲಿ ಕುಡಿದರೇನು ಮರೆವಲ್ಲ ಹಳೇ ಮೆಲುಕು!         ನಡೆ ನಡೆದಂತೆ ದಾರಿ ಹಿಂದೆ ಅಷ್ಟೆ;         ಹಿಂದಿನದು ಬಿಟ್ಟಿಲ್ಲ ಜೊತೆಗೆ ಅಚ್ಚರಿ ಕನಸ ಚರಂಡಿ ದಾಟಲು ದರ್ದಿದೆ ಸಭ್ಯರೆಲ್ಲಾ ನನ್ನ ಅವಸ್ಥೆಯೆಡೆ ಕಣ್ ನೆಟ್ಟಿದ್ದಾರೆ!         ಹಗಲಿನಲಿ ಹಾಡಾಗಿ […]

ಪ್ರಶಸ್ತಿ ಪಿ. ಸಾಗರ ಬರೆದ ಕತೆ: ಸುದೇಷ್ಣೆ

ಏ ಎಲ್ಲಾದ್ರೂ ಟ್ರಿಪ್ ಹೋಗೋಣ್ವಾ ? ಬೆಂಗ್ಳೂರಿಗೆ ಬಂದು ತುಂಬಾ ದಿನ ಆಯ್ತು ಕಣೋ. ಏನೂ ನೋಡಿಲ್ಲ ಸರಿಯಾಗಿ.  ಹೂಂ. ಸರಿ. ಎಲ್ಲಿಗೆ ?  ಅರೆ, ವಾರ ವಾರ ಕಾಲಿಗೆ ಚಕ್ರ ಕಟ್ಕೊಂಡವ್ನ ತರ ತಿರ್ಗೋದು ನೀನು. ಬೈಕಂತೆ, ಕಾರಂತೆ. ಬಸ್ಸಂತೆ. ಆ ಫೇಸ್ಬುಕ್ಕನ್ನೇ ಮಿನಿ ಹಾರ್ಡುಡಿಸ್ಕು ಮಾಡೋ ಅಷ್ಟು ಫೋಟೋ ತುಂಬ್ಸಿದ್ದೀಯ. ನಂಗೆ ಕೇಳ್ತಿಯಲ್ಲೋ ಎಲ್ಲೋಗದು ಅಂತ. ನೀನು ಹೋಗಿರೋ ಜಾಗಗಳಲ್ಲೇ ಯಾವ್ದಾದ್ರೂ ಹೇಳೋ. ಊಂ… ನಿಂಗೆ ಎಷ್ಟೊತ್ತಿನ ಪ್ರಯಾಣ ಆಗಿರ್ಬೇಕು ? ಒಂದೆರಡು ಘಂಟೆ […]

ಗಾಂಧಿ: ನಾ.ಧನಪಾಲ

ಮೂಲ: ತೆಲುಗು ಕತೆ ಲೇಖಕರು: ಸಲೀಂ, ಕನ್ನಡಕ್ಕೆ: ನಾ. ಧನಪಾಲ ಪ್ರಮುಖ ಸಾಪ್ತಾಹಿಕದಲ್ಲಿ ಗಾಂಧಿ ಬರೆದ ಲೇಖನವನ್ನು ಓದಿ ಮುಗಿಸಿದೊಡನೆ ಕಣ್ಣುಗಳು ಒದ್ದೆಯಾದವು.  ಅರಣ್ಯವನ್ನು ನಂಬಿಕೊಂಡು ಬದುಕುತ್ತಿರುವ ಬುಡಕಟ್ಟಿನವರ ಏಳು ಬೀಳುಗಳನ್ನು ಎಷ್ಟು ಚೆನ್ನಾಗಿ ಬರೆದಿದ್ದನೋ ?  ಬಹಳ ಹೃದ್ಯವಾಗಿ. . . !  ಮನಸ್ಸನ್ನು ಕಲಕುವಂತಿದೆ. ಹಾಗೆ ಬರೆಯಲು ಗಾಂಧಿಯಂತಹ ಮಾನವತಾವಾದಿಗೆ ಮಾತ್ರವೇ ಸಾಧ್ಯ.  ಗಾಂಧಿ ತಾನು ನಂಬಿರುವ ತನ್ನ ಸಿದ್ಧಾಂತಗಳಿಗಾಗಿ ಪ್ರಾಣಾರ್ಪಣೆಗಾದರೂ ಸಿದ್ಧನಿರುವ ಧೀಮಂತ ವ್ಯಕ್ತಿ.  ಕರ್ನಾಟಕದಲ್ಲಿ ಆತನಿಗೆ ಬಹಳ ಅಭಿಮಾನಿಗಳಿದ್ದಾರೆ.   ಮಾನವತೆಯನ್ನು […]

ಪಂಚಮಹಾಸಾಗರದ ಐದು ಕೊಳೆಗುಂಡಿಗಳು: ಅಖಿಲೇಶ್ ಚಿಪ್ಪಳಿ ಅಂಕಣ

(ಭೂಮಂಡಲದ ಶೇ ೭೦ ಭಾಗ ನೀರಿನಿಂದ ಸುತ್ತುವರೆದಿದೆಯಾದ್ದರಿಂದ ಅಷ್ಟೂ ನೀರನ್ನೂ ಸೇರಿಸಿ ಒಂದೇ ಮಹಾಸಾಗರ ಎನ್ನಬಹುದು. ಆದರೂ ದೇಶಗಳು ತಮ್ಮ ಗಡಿಗಳಿಗೆ ಅನುಸಾರವಾಗಿ ೫ ಮಹಾಸಾಗರಗಳನ್ನು ಗುರುತಿಸಿಕೊಂಡಿದ್ದಾರೆ. ೧. ಪೆಸಿಫಿಕ್ ಮಹಾಸಾಗರ ೨. ಅಟ್ಲಾಂಟಿಕ್ ಮಹಾಸಾಗರ ೩. ಹಿಂದೂ ಮಹಾಸಾಗರ ೪. ಅಂಟಾರ್ಟಿಕ್ ಮಹಾಸಾಗರ ಮತ್ತು ಆರ್ಕ್‌ಟಿಕ್ ಮಹಾಸಾಗರ) ಮೊನ್ನೆ ಸೋಮವಾರ ಅಂದರೆ ದಿನಾಂಕ:೨೧/೦೭/೨೦೧೪ರ ಬೆಳಗ್ಗೆ ತೋಟದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುವಾಗ ಅಪ್ಪಟ ಭೂಮಿಪುತ್ರನ ಜಂಗಮವಾಣಿಯಿಂದ ಕರೆ ಬಂತು ಎಂದು ಮನೆಯಿಂದ ಕೂಗಿದರು. ಈ ಭೂಮಿಪುತ್ರನ ದೂರವಾಣಿ […]

ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಡಗಿರುವ ರಾಜಕೀಯ…! : ನಂದಿಕೇಶ್. ಬಾದಾಮಿ

         ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರೆಂದು ಪಿಂಚಣಿ ಪಡೆಯುತ್ತಿರುವವರ ವಿವರವನ್ನು ಗಮನಿಸಿದರೆ, ಕಲೆಯ ಗಾಳಿ;ಗಂಧ ಗೊತ್ತಿರದವರೆ ಬಹುಪಾಲು ಆ ಪಟ್ಟಿಯಲ್ಲಿ ತುಂಬಿಕೊಂಡಿದ್ದಾರೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ/ಕಿ ಪ್ರಶಸ್ತಿ ಪಡೆದವರ ವಿವರವನ್ನು ಪರಿಶೀಲಿಸಿದರೆ ಅದರಲ್ಲೂ ಕೂಡಾ ರಾಜಕೀಯ ದುರ್ವಾಸನೆಯ ಘಾಟು ಮೂಗಿಗೆ ಅಮರಿಕೊಳ್ಳುತ್ತದೆ. ಇನ್ನು ಬಹುತೇಕ ಪ್ರಶಸ್ತಿ ಪುರಸ್ಕಾರಗಳಂತೂ ರಾಜಕೀಯ ಕರಿನೆರಳಿನಲ್ಲಿಯೇ ವಿತರಣೆಯಾಗುತ್ತಿವೆ. ಮೊನ್ನೆಮೊನ್ನೆಯಷ್ಟೆ ಹಿರಿಯ ಸಾಹಿತಿ ಕುಂ. […]