ಅತಿಥಿ ಸಂಪಾದಕರ ನುಡಿ

ನಮಗೆ ನಾಳೆಗಳಿಲ್ಲ, ಏಕೆಂದರೆ ಈ ನೆಲದಲ್ಲಿ ಮಕ್ಕಳಿಗೆ ನಾವು ಭವಿಷ್ಯ ಉಳಿಸುತ್ತಿಲ್ಲ. ಮಹಾಮಾರಿಯೊಂದರಂತೆ ಈ ದಿನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ’ ಮಕ್ಕಳ ಮೇಲಿನ ದೌರ್ಜನ್ಯ’ ಎನ್ನುವ ಮನೋಭಾವದೆಡೆಗೆ ನನ್ನ ಧಿಕ್ಕಾರವಿರಿಸಿಯೇ ಈ ಸಂಚಿಕೆಯನ್ನು ನಿಮ್ಮ ಮುಂದೆ ಇರಿಸಲಾಗಿದೆ. ಜಗತ್ತಿನ ಯಾವ ಮಗುವಿನ ಯಾವುದೇ ನೋವಿಗೂ ಕುಳಿತಲ್ಲೇ ಮಮ್ಮಲ ಮರುಗುವ, ಮಾತ್ರವಲ್ಲ ಮಕ್ಕಳ ಕಣ್ಣೀರು ಒರೆಸಲು ತನ್ನ ಕೈಲಾದಷ್ಟು ಕೆಲಸವನ್ನೂ ಮಾಡುವ ಪಪ್ಪನ ಮಗಳಾಗಿ ಇಂತಹ ವಿಷಯದ ಬಗ್ಗೆ ಸಂಚಿಕೆಯ ಸಂಪಾದಕತ್ವ ನನ್ನ ಪಾಲಿಗೆ ಬಂದದ್ದನ್ನು ಹೆಮ್ಮೆಯಿಂದಲೇ ಸ್ವೀಕರಿಸಿ … Read more

ಮಕ್ಕಳು, ಲೈಂಗಿಕ ದೌರ್ಜನ್ಯ ಮತ್ತು ಕಾನೂನು: ಅಂಜಲಿ ರಾಮಣ್ಣ

ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ದೇಶವು ಸಹಿ ಹಾಕಿ ದಶಕಗಳೇ ಸಂದಿವೆ. ಆದರ ಪ್ರಕಾರ ಮತ್ತು ನಮ್ಮ ಸಂವಿಧಾನದ ಮೂಲ ಆಶಯದಂತೆ ಮಕ್ಕಳ ಸಂರಕ್ಷಣೆ ನಮ್ಮ ಮೂಲಭೂತ ಕರ್ತವ್ಯವೇ ಆಗಿದೆ. ಅದಕ್ಕಾಗಿ ಸರ್ಕಾರಗಳು ಹಲವಾರು ವಿಶೇಷ ಕಾನೂನುಗಳನ್ನು ರಚಿಸಿರುವುದು ಮಾತ್ರವಲ್ಲ ಹಲವಾರು ಯೋಜನೆಗಳನ್ನೂ ರೂಪಿಸಿ ಜಾರಿಗೆ ತಂದಿವೆ. “ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ” ಎಂಬ  ದೂರದೃಷ್ಟಿಯಿಂದ  ಇಲಾಖೆಯ ನೀತಿ, ಯೋಜನೆಗಳು ಮತ್ತು ಕಾರ್ಯಕ್ರಮಗಳು ಮಕ್ಕಳ ಪರಿಪೂರ್ಣ ಅಬಿವೃದ್ಧಿಗಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಇದರಲ್ಲಿ ಮಕ್ಕಳ … Read more

ಮಕ್ಕಳ ಬಾಳಿನ ಬೆಳಕಿನ ಪಂಜು ಆಗೋಣ: ನಟರಾಜು ಎಸ್. ಎಂ.

ಒಂದು ಭಾನುವಾರ ಬೆಳಿಗ್ಗೆ ಗೆಳತಿಯೊಡನೆ ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಕೆ  "  ಇವತ್ತು ಒಂದು ನ್ಯೂಸ್ ನೋಡಿದೆ. ನಾಲ್ಕು ವರ್ಷದ ಹುಡುಗಿಯನ್ನು ಹತ್ತು ವರ್ಷದ ಹುಡುಗ ಅತ್ಯಾಚಾರ ಮಾಡಿದ್ದಾನೆ. ಆ ನ್ಯೂಸ್ ನೆನೆಸಿಕೊಂಡರೆ ಭಯ ಆಗುತ್ತೆ ಜೊತೆಗೆ ನಾವು ಯಾವ ಲೋಕದಲ್ಲಿ ಬದುಕುತ್ತಿದ್ದೇವೆ ಅಂತ ಅನಿಸುತ್ತೆ." ಎಂದು ಹೇಳಿ ಮೌನ ತಾಳಿದಳು. ಅವಳ ಮಾತುಗಳ ಕೇಳಿ ಮನಸ್ಸು ಒಂದು ಶೂನ್ಯ ಭಾವಕ್ಕೆ ಶರಣಾಗಿತ್ತು. ಕಾಕತಳೀಯವೆಂಬಂತೆ ಅಚನಕ್ಕಾಗಿ ಆ ದಿನವೇ ಜಿಲ್ಲಾ ಮಟ್ಟದ "ಮಕ್ಕಳ ಮೇಲಿನ ದೌರ್ಜನ್ಯ ತಡೆ" ಕುರಿತ … Read more

ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಸಾಧ್ಯವೇ ? ಸಾಧುವೇ ?: ರಜನಿ ಆಚಾರ್ಯ

"Every soul is born divine" ಎನ್ನುತ್ತಾರೆ ವಿವೇಕಾನಂದರು. ಈ ಜಗತ್ತಿನಲ್ಲಿ ಹುಟ್ಟುವ ಪ್ರತಿ ಜೀವಿಯೂ ದೈವೀಕತೆಯ ಅಡಕಮುದ್ರೆಯೇ. ಆದರೆ ಆ ದೈವೀಕತೆಯ ರಾಗ ಸುಶ್ರಾವ್ಯವಾಗಿ ಹೊರಹೊಮ್ಮಿಸಲು ಪ್ರತಿ ಜೀವಿಯೂ ಅದಮ್ಯ ಆತ್ಮವಿಶ್ವಾಸದೊಂದಿಗೆ ಶೃತಿ ಸೇರಿಸಲೇಬೇಕು. ಅದಕ್ಕೆ ಮೊದಲ ಮೆಟ್ಟಿಲೇ ಬಾಲ್ಯ. ಪ್ರತಿ ಮಗುವಿನ ಮನಸ್ಸು ಬಾಲ್ಯದಲ್ಲೇ ಸರ್ವಾಂಗೀಣ ಅಭಿವೃದ್ಧಿ ಹೊಂದಿದರೆ ಮಾತ್ರ ಆ ಮಗು ಮುಂದೆ ಒಂದು ಆರೋಗ್ಯಕರ ಮನಸ್ಸನ್ನು ಹೊಂದಿ ದೈವೀಕತೆಯನ್ನು ಸಾಧಿಸುವೆಡೆ  ಎಡೆಯಿಡಬಲ್ಲದೇನೊ ಹಾಗೂ ಪ್ರಸ್ತುತ ಸಮಾಜದ ಸರ್ವತೋಮುಖ ಬೆಳವಣಿಗೆಯ ಕಣ್ಣುಗಳಾಗಿ ರಾಷ್ಟ್ರದ … Read more

ನಾನ್ಯಾವ ಜಾತಿ?: ಹೃದಯಶಿವ

ಅದೇಕೋ ನೆನಪಾಗುತ್ತಿದೆ. ಐದಾರು ವರ್ಷಗಳ ಹಿಂದೆ ನಾನು ಕಂಡ ಆ ನಾಲ್ವರು ಯುವಕರ ತಂಡ. ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲರೂ ಹೆಚ್ಚು ಕಮ್ಮಿ ಇಪ್ಪತ್ತು-ಇಪ್ಪತ್ತೆರಡರ ವಯೋಮಾನದವರು. ಅವರಿವರ ಕೈ ಕಾಲು ಹಿಡಿದು ನಾಲ್ಕು ಕಾಸು ಎತ್ತಿ ಬೆಂಗಳೂರಿನಲ್ಲಿ ತಮ್ಮ ಜಾತಿ ಹೆಸರಿನಲ್ಲಿ ಪುಟ್ಟದೊಂದು ಕಚೇರಿ ಆರಂಭಿಸಿದ್ದವರು. ಚಿಗುರುಮೀಸೆ, ಪ್ರಶಾಂತ ಕಣ್ಣು, ಚೇತೋಹಾರಿ ಮುಖದ ಉತ್ಸಾಹಿ ಹುಡುಗರು. ಕನಕಪುರ, ಮಳವಳ್ಳಿ, ಬನ್ನೂರು ಕಡೆ ಇಂಥವರು ಸಿಗುತ್ತಾರೆ. ಯಾರಿಗೂ ಪುಸ್ತಕಗಳ ನಂಟು ಇದ್ದಂತ್ತಿಲ್ಲ. ನನ್ನನ್ನು ಕಾಣಲೆಂದು ಬಂದರು. "ಈ … Read more

ಮಾನಸಿಕ ಆರೋಗ್ಯಕ್ಕೆ ಬೇಕು ಮಕ್ಕಳ ಹಕ್ಕುಗಳು: ಡಾ. ವಿನಯ ಎ.ಎಸ್.

ಮಕ್ಕಳ ಶೋಷಣೆ ಹಿಂಸೆ ಮತ್ತು ದಬ್ಬಾಳಿಕೆಗೆ ಮುಖ್ಯ ಕಾರಣವೆಂದರೆ ಅವರುಗಳನ್ನು  ವ್ಯಕ್ತಿಗಳೆಂದು ಗುರುತಿಸಿ  ಅವರಿಗೂ ತಮ್ಮದೇ ಅದ ಭಾವನೆಗಳಿರುತ್ತವೆಂದು ಅರಿಯದೆ ಇರುವುದು. ತಾಯಿ ತಂದೆಯರೂ ಸೇರಿದಂತೆ ಬಹಳ ಕಡೆ ಏಟು ಸಿಟ್ಟು ಹಿಂಸೆ ಮಾನಸಿಕ ಒತ್ತಡಕ್ಕೆ ಒಳಗಾಗುವ ಅದರಿಂದ ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡ ಮಕ್ಕಳು ಒರಟಾಗಿ ಬಿಟ್ಟೂ ಅಗೌರವದಿ೦ದ, ಬದುಕಿನೆಡೆಗೆ ನಿರ್ಭಿಡೆಯಿಂದ ವರ್ತಿಸತೊಡಗುತ್ತಾರೆ. ಈ ಪರಿಸ್ಥಿಗೆ ಸಮಾಜದ ನಾವೆಲ್ಲಾ ಹೊಣೆಗಾರರು. ಮಕ್ಕಳನ್ನು ಪ್ರೀತಿ ಅನುಕಂಪ ಗೌರವದಿ೦ದ ಕಾಣುವುದು ನಮ್ಮ ಕರ್ತವ್ಯ. ಹಾಗೆಯೇ ಅವರಿಗೆ ಹಕ್ಕುಗಳ ಬಗ್ಗೆ … Read more

ವಿದೇಶದಲ್ಲಿ ಮಕ್ಕಳ ಹಕ್ಕುಗಳು- ಸ್ಥಿತಿಗತಿ: ಶಶಿ ರಾವ್

ಆಸ್ಟ್ರೇಲಿಯಾ ಮದುವೆಯನ್ನು ಒಂದು ಬಂಧನವೆಂದು ಅಷ್ಟಾಗಿ ಇಷ್ಟಪಡದ ದೇಶ. ಇಲ್ಲಿ ಮಗುವಿಗಾಗಿ ಮದುವೆಯೇ ಆಗಬೇಕಿಲ್ಲ, ಸಾಮಾನ್ಯವಾಗಿ ಇಲ್ಲಿನ ಜನ ಡಿಫ್ಯಾಕ್ಟೋ ಅಥವಾ ಬರಿಯ ಪಾರ್ಟನರ್ಸ್ ಆಗಿಯೇ ಬಹಳಷ್ಟು ವರ್ಷ ಜೊತೆಯಲ್ಲಿ ಕಳೆಯುತ್ತಾರೆ. ಸರಿ ಸುಮಾರು ೪/೫ ವರ್ಷಗಳ ನಂತರ ಕೂಡುಜೀವನದಲ್ಲಿ ಬೇಸರ ಬಂದೊಡನೆ ಪರಸ್ಪರ ಒಪ್ಪಂದದಿಂದಲೋ, ಕಚ್ಚಾಡುತ್ತಲೋ ಬೇರೆಯಾಗುತ್ತಾರೆ. ಈ ಮಧ್ಯೆ ಒಂದೆರಡು ಮಕ್ಕಳ ಹೆತ್ತಿರುತ್ತಾರಾದ್ದರಿಂದ ಆ ಮಕ್ಕಳನ್ನು ಒಂದು ವಸ್ತುವಿನಂತೆ ಪರಿಗಣಿಸಿ ಅವುಗಳ ಲಾಲನೆ ಪಾಲನೆ, ಬೆಳೆಯುವ ಸ್ಥಳ, ಯಾರೊಡನೆ ಬೆಳೆಯ ಬೇಕೆಂಬುದೆಲ್ಲ ಪರಸ್ಪರ ಚರ್ಚೆಯಿಂದಲೋ … Read more

ಮಕ್ಕಳ ಸಹಾಯಕ್ಕೆ ಸದಾ ಸಿದ್ದ ನಾವು ಮತ್ತು 1098: ರೂಪ ಸತೀಶ್

ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ.  ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ.  ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ.  ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ.  ಚೈತ್ರ … Read more

ಮಕ್ಕಳ ಹಕ್ಕುಗಳ ಬಗ್ಗೆ ಸಾಮಾನ್ಯರ ತಿಳುವಳಿಕೆ ಏನು ?

          ಶ್ರೀಮತಿ ವೀಣಾ ಶಿವಣ್ಣ ಹೇಳುತ್ತಾರೆ, “ನನಗೆ ತಿಳಿದ ಮಟ್ಟಿಗೆ ಮಕ್ಕಳಿಗೆ ತಾವು ಬದುಕಲು ಬೇಕಾಗುವ ಒಳ್ಳೆಯ ಸೌಕರ್ಯ (ಊಟ, ಬಟ್ಟೆ, ಮಲಗಲು ಬೆಚ್ಚನೆಯ ಹಾಸಿಗೆ, ಆಟಿಕೆಗಳು), ಅವರು ಪಡೆದುಕೊಳ್ಳುವ ವಿದ್ಯಾಭಾಸ ಹಾಗೂ ಆರೋಗ್ಯ ಚೆನ್ನಾಗಿರಿಸಲು ಬೇಕಾಗುವ ವೈದ್ಯಕೀಯ ವ್ಯವಸ್ಥೆಯನ್ನು ಮಕ್ಕಳ ಹಕ್ಕುಗಳು ಎನ್ನಬಹುದು. ಹಾಗೆಯೇ ಮಕ್ಕಳು ಯಾವುದೇ ರೀತಿಯ ದೌರ್ಜನ್ಯ, ದುರುಪಯೋಗ, ಪಕ್ಷಪಾತದಿಂದ ರಕ್ಷಣೆ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎನ್ನುವುದನ್ನು ಓದಿ ತಿಳಿದುಕೊಂಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾಗುವ … Read more

ವಾಸ್ತವದಲ್ಲಿ ನಮ್ಮ ಮಕ್ಕಳು: ನಾಗಸಿಂಹ ಜಿ. ರಾವ್

''ಭಾರತದ ಶೇಖಡಾ ೮೦% ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿನ ಮಕ್ಕಳ ಮೇಲಾಗುವ ದೌರ್ಜನ್ಯ, ಶೋಷಣೆಗೆ ವಿರುದ್ದವಾಗಿ ಕಠಿಣ ಕಾನೂನು ಇರುವುದರಿಂದ ಮಕ್ಕಳ ಮೇಲಾಗುವ ಅಪರಾಧಗಳು, ಕಿರುಕುಳಗಳು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ, ಕಡ್ಡಾಯ ಹಾಗು ಉಚಿತ ಶಿಕ್ಷಣ ಜಾರಿ ಮಾಡಿರುವುದರಿಂದ ೬ ರಿಂದ ೧೪ ವರುಷದೊಳಗಿನ ಮಕ್ಕಳೆಲ್ಲರೂ ಶಾಲೆಯಲ್ಲೇ ಇರುವುದರಿಂದ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ಕಮ್ಮಿಯಾಗಿದೆ" ಈ ಎಲ್ಲಾ ಅದ್ಬುತ ವಿಚಾರಗಳು ನಮ್ಮ ದೇಶ ವಿಶ್ವ ಸಂಸ್ಥೆಗೆ ೨೦೧೧ರಲ್ಲಿ … Read more

ಟಿ.ವಿ. ಶೋಗಳಲ್ಲಿ ನಮ್ಮ ಮಕ್ಕಳು: ಅಸ್ತಿತ್ವ ಲೀಗಲ್ ಟ್ರಸ್ಟ್

ಒಂಭತ್ತು ವರ್ಷದ ಆ ಮಗು ಆಫೀಸಿನೊಳಗೆ ಬಂದಾಗ ವಿದ್ಯುತ್ ಸಂಚಾರವಾದಂತೆ ಪಟ ಪಟ ಮಾತಾಡುತ್ತಾ ಸುತ್ತ ತಿರುಗುತ್ತಿದ್ದಳು. ಆ ಹುಡುಗಿ ಸಿನಿಮಾ ನಟನೆಗಾಗಿ ರಾಜ್ಯಪ್ರಶಸ್ತಿ ಪಡೆದ ಪುಟಾಣಿ ಪ್ರತಿಭೆ ಅದು ‘ನಾಳೆ ಶೂಟಿಂಗ್ ಇದೆ. ನನ್ನದೇ ಮೇನ್ ರೋಲ್. ಐದು ಕಾಸ್ಟ್ಯೂಂ ಬದಲಾಯಿಸಬೇಕು. ಅಪ್ಪಾ ಸಾಕಾಗ್ಹೋಗತ್ತೆ. ಪರವಾಗಿಲ್ಲ, ಮೇನ್ ರೋಲ್ ಅಂದ್ರೆ ಇದೆಲ್ಲ ಇದ್ದೇ ಇರುತ್ತಲ್ವಾ?.. ಹೀಗೆ ಆ ಮಗು ಏನೇನೋ ಮಾತಾಡ್ತಿತ್ತು. ಆ ವಯಸ್ಸಿಗೆ ಏನನಿಸುತ್ತೆ ಮತ್ತು ಏನು ಮಾತಾಡಬೇಕು ಅನ್ನೋ ಅರಿವೂ ಇಲ್ಲದ ವಯಸ್ಸು. … Read more

ಅಣ್ವಾಸುರನ ಬೂದಿ ಮತ್ತು ವಿಶ್ವ ಅಣು ಪರೀಕ್ಷೆ ವಿರೋಧಿ ದಿನಾಚರಣೆ: ಅಖಿಲೇಶ್ ಚಿಪ್ಪಳಿ

ಆಧುನಿಕ ಮಾನವನ ಯೋಚನೆಗಳು, ವರ್ತನೆಗಳು ಎಲ್ಲವೂ ಸ್ವಾರ್ಥದಿಂದ ಕೂಡಿದೆ. ತಕ್ಷಣದ ಲಾಭಕ್ಕಾಗಿ ಏನು ಮಾಡುವುದಕ್ಕೂ ತಯಾರು. ಒಟ್ಟಾರೆ ಬಹುಸಂಖ್ಯಾತರ ಆಲೋಚನೆಗಳು ಸದ್ಭುದ್ದಿಯಿಂದ ಕೂಡಿದೆ ಎನಿಸುವುದಿಲ್ಲ. ಮೊನ್ನೆ ಸ್ನೇಹಿತರೊಬ್ಬರು ಕಾಫಿ ಕುಡಿಯೋಣ ಬನ್ನಿ ಎಂದು ಕರೆದರು. ಅರ್ಧರ್ಧ ಕಾಫಿ ಕುಡಿದು ಮುಗಿಯುವಷ್ಟರಲ್ಲಿ ಮಳೆ ಬಂತು. ಅದೂ ಮಳೆಗಾಲ ಶುರುವಾದ ಮೇಲೆ ತುಂಬಾ ಅಪರೂಪಕ್ಕೆ ಬಂದ ಮಳೆ. ಕಾಫಿಗೆ ಕರೆದೊಯ್ದ ಸ್ನೇಹಿತರಿಗೆ ಅಸಹನೆ ಶುರುವಾಯಿತು. ಥೂ! ಎಂತಾ ಮಳೆ ಮಾರಾಯ್ರೆ?. ಇವರಿಗೆ ಕಾಫಿ ಕುಡಿದ ತಕ್ಷಣ ತಮ್ಮ ಕೆಲಸಕ್ಕೆ ಹೋಗಬೇಕಿತ್ತು. … Read more

ಚುಟುಕಗಳು: ಶ್ರೀನಿಧಿ ಟಿ.ಕೆ., ವಿನೋದ್ ಕುಮಾರ್

1.     'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?       ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?       ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ       ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ? 2.     ಅಣ್ಣನೊಡನೆ ನನಗೂ ಇ೦ದಿನಿ೦ದ ಶಾಲೆ       ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!       ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು … Read more

ಅಡುಗೆ ಮನೆ ಪುರಾಣ: ಅನಿತಾ ನರೇಶ್ ಮಂಚಿ

ಅಡುಗೆ ಮನೆ ಆದ್ರೇನು ಹೂವಿನ ಕುಂಡ ಇಟ್ರೆ ಬೇಡ ಅನ್ನುತ್ತದೆಯೇ? ಒಂದು ಕಿಟಕಿ ಹೂವಿನ ಕುಂಡದಿಂದ ಅಲಂಕೃತಗೊಂಡಿದ್ದರೆ ಇನ್ನೊಂದು ಬದಿಯ ಕಿಟಕಿ ಕರೆಂಟ್ ಹೋದರೆ ಕೈಗೆ ಪಕ್ಕನೆ ಸಿಗಬೇಕಾಗಿರುವ ಎಣ್ಣೆಯ ಕಾಲು ದೀಪದಿಂದ ಕಂಗೊಳಿಸುತ್ತಿತ್ತು. ಸ್ಟವ್ವಿನ  ಒಂದು ಪಕ್ಕದ ಶೆಲ್ಫಿನಲ್ಲಿ ಅಡುಗೆಗೆ ಅಗತ್ಯವಾದ ಸಾಂಬಾರ ಪದಾರ್ಥಗಳು,ಇನ್ನೊಂದು ಕಡೆ ಸೌಟಿನಿಂದ ಹಿಡಿದು ಚಮಚದವರೆಗೆ ಚಾಕುವಿನಿಂದ ಹಿಡಿದು ಕತ್ತಿಯವರೆಗೆ ಸಿಗುವಂತಿತ್ತು. ಕೆಳಭಾಗದ ನಾಲ್ಕು ಕಪಾಟುಗಳಲ್ಲಿ ಈಳಿಗೆ ಮಣೆ ಮೆಟ್ಟುಗತ್ತಿ, ಪಾತ್ರೆಗಳು, ಬೇಗ ಹಾಳಾಗದಿರುವ ತರಕಾರಿಗಳಾದ ಆಲೂಗಡ್ಡೆ ಈರುಳ್ಳಿಗಳು ಆಟವಾಡುತ್ತಿದ್ದವು. ವರ್ಷಪೂರ್ತಿಯ … Read more

ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸುವಲ್ಲಿ ನಮ್ಮದಿರಲಿ ಜವಾಬ್ದಾರಿ !: ವಿದ್ಯಾಶಂಕರ ಹರಪನಹಳ್ಳಿ

"ಅಪ್ಪಾ! ರೆಡ್ ಸಿಗ್ನಲ್… ನೀ ಗಾಡಿ ನಿಲ್ಸ್ಲೇ ಇಲ್ಲಾ!", "ಅಪ್ಪಾ ರಸ್ತೆ ಮಧ್ಯದಲ್ಲಿ ಕ್ರಾಸ್ ಮಾಡಬೇಡ… ಝಿಬ್ರಾ ಕ್ರಾಸಿಂಗ್ ಬಳಸಬೇಕು…", "ಅಮ್ಮಾ! ಕಸ ಪಕ್ಕದ ಖಾಲಿ ಸೈಟಿಗೆ ಹಾಕಬಾರದು, ನಮ್ ಟೀಚರ್ ಹೇಳಿದ್ದಾರೆ ಡಸ್ಟ್ ಬಿನ್ನಲ್ಲಿ ಹಾಕು!", "ಟಿವಿ ನೋಡಬೇಡ ಅಂತಿರಾ, ಮತ್ತೆ ನೀವು ಮಾತ್ರ ನೋಡಬಹುದಾ?", "ಅಪ್ಪಾ ಹೆಲ್ಮೆಟ್ ಹಾಕ್ಕೋ… ಪೊಲೀಸ್ ಹಿಡಿತಾರೆ!"… ಹೀಗೆ ಮಕ್ಕಳ ಪ್ರಶ್ನೆಗಳು ಮುಗಿಯುವುದೇ ಇಲ್ಲ. ಅವರ ಬಹುತೇಕ ಪ್ರಶ್ನೆಗಳು ದೊಡ್ಡವರ, ತಂದೆತಾಯಂದಿರ ನಿರ್ಲಕ್ಷಕ್ಕೆ ಒಳಗಾಗುವುದೇ ಹೆಚ್ಚು. ವಸ್ತುಸ್ಥಿತಿ ಹೀಗಿರುವಾಗ ಮಕ್ಕಳಲ್ಲಿ … Read more

ಶಾಲೆಯಲ್ಲಿನ ಶಿಕ್ಷೆಯೂ ದೌರ್ಜನ್ಯವೇ: ಡಾ. ಚೈತ್ರ ಕೆ.ಎಸ್.

ಎಂಟು ವರ್ಷದ ವರುಣ್‍ಗೆ ಎರಡು ದಿನದಿಂದ ಕೈ ಬೆರಳು ಊದಿ ಕೆಂಪಾಗಿದೆ. ಬರೆಯಲು, ತಿನ್ನಲು ಬೆರಳು ಮಡಚಲಾಗದ ಸ್ಥಿತಿ. ಕಾರಣ, ಹೋಂ ವರ್ಕ್ ಮಾಡಿಲ್ಲ ಎಂದು ಡಸ್ಟರ್‍ನಿಂದ ಟೀಚರ್ ಹೊಡೆದಿದ್ದು. ಆರು ವರ್ಷದ ಭಾವನಾ, ಶಾಲೆ ಎಂದರೆ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾಳೆ. ಎದ್ದೊಡನೆ ಗಲಾಟೆ-ಕಿರುಚಾಟ -ಹಠ. ಅವಳ ಎಲ್ಲಾ ತೊಂದರೆಗೆ ಮೂಲ ಶಾಲೆಯಲ್ಲಿ ಪದೇ ಪದೇ `ನೋಡೋಕೆ ಕರಿತಿಮ್ಮಿ, ಓದೋದ್ರಲ್ಲೂ ದಡ್ಡಿ' ಎಂದು ಹಂಗಿಸುವ ಟೀಚರ್. ಕೆಳಜಾತಿಗೆ ಸೇರಿದ ಹತ್ತು ವರ್ಷದ ರಂಗಿಗೆ ಶಾಲೆ ಬಿಟ್ಟ ನಂತರ … Read more

ದೂರ ತೀರಕೆ ಹೋದರೇತಕೆ?: ಅಮರ್ ದೀಪ್ ಪಿ.ಎಸ್.

ಜಮೀಲ್ ಅಹ್ಮದ್… ನನಗಿಂತಲೂ ಕನಿಷ್ಠ ಎಂಟು ಹತ್ತು ವರ್ಷವಾದರೂ ಹಿರಿಯ..  1992ರಿಂದ  1996ರವರೆಗೆ ನಾನು ನೋಡಿದಂತೆ ಕೇವಲ ನಾಲ್ಕು ನೂರು ರೂಪಾಯಿಗಳ ಸಂಬಳದ ಕೆಲಸವನ್ನು ಮಾಡುತ್ತಿದ್ದ. ಅದು ಬಿ. ಕಾಂ. ಪದವಿ ಕೈಯಲ್ಲಿಟ್ಟುಕೊಂಡು. ನಾನು ನನ್ನ ಓದು ಮುಗಿಸಿ ಯಾವುದೋ   ಎನ್. ಜಿ. ಓ ಒಂದರಲ್ಲಿ ಮಾರ್ಚ್ 1996 ರಲ್ಲಿ ಸಾವಿರ ರೂಪಾಯಿಯ ಸಂಬಳದ ಕೆಲಸಕ್ಕೆ ಸೇರಿಕೊಂಡಿದ್ದೆ. ಅದೇ ಕಚೇರಿಯಲ್ಲಿ ಖಾಲಿ ಇದ್ದ ಆಫೀಸ್ ಬಾಯ್ ಕೆಲಸಕ್ಕೆ ರೂ. ೬೦೦ ಗಳ ಸಂಬಳ ಕೊಡುತ್ತೇವೆಂದಿದ್ದರು. ದಿನ … Read more

ಮಳೆ ಮಾತುಗಳಲ್ಲಿ: ಪ್ರಶಸ್ತಿ ಪಿ.

ಬೇಸಿಗೆಯ ಬೇಗೆಯಲ್ಲಿ ಬೆಂದ ನಗರದ ಜನಗಳಿಗೀಗ ಮಳೆಯ ತಂಪು. ಭೋರ್ಗರೆವ ಮಳೆಗೆ ಎಂಥಾ ಮಳೆಗಾಲವಪ್ಪಾ ಅನಿಸಿಬಿಡುವಂತ ಮಲೆನಾಡಿಗರಿಗೂ ಈ ಸಲ ತಡವಾದ ಮಳೆ ಕೊಂಚ ತಲೆಬಿಸಿ ತಂದಿದ್ದುಂಟು. ಮೊದಲ ಮಳೆಗೆ ಖುಷಿಯಾಗಿ ನಾಟಿಗೆ ಅಣಿಮಾಡಿದವರು, ಗಾಬರಿಯಾಗಿ ಕೊಳೆ ಔಷಧಿ ಹೊಡೆಸಿದವರು ಮತ್ತೆ ಒಂದು ವಾರವಾದರೂ ಮಳೆಯ ಸುಳಿವಿಲ್ಲದಿದ್ದಾಗ ಗಾಬರಿಯಾಗಿದ್ದು ಸಹಜವೇ. ನಾಟಿಗೆಂದು ಉತ್ತ ನೆಲವೆಲ್ಲಾ ಮತ್ತೆ ಬಿಸಿಲಿಗೆ ಒಣಗೋಕೆ ಶುರುವಾಗಿತ್ತು. ಬಿಸಿಲ ಝಳಕ್ಕೆ ಕೊಳೆಯೌಷಧಿ ಹೊಡೆಸಿಕೊಂಡ ಮರದ ತಲೆಯೆಲ್ಲಾ ಸುಡತೊಡಗಿದ್ವು. ಒಂತರಾ ಬಿಸಿಲಲ್ಲಿ ಬೆಂಕಿ ಹಾಕಿದಂಗೆ ಮರಗಳಿಗೀಗ. … Read more

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಸಾಧ್ಯತೆಗಳು: ಡಾ.ವಾಣಿ ಕಂಟ್ಲಿ

ಮಕ್ಕಳೆಂದರೆ ಯಾರು ಅಂದುಕೊಂಡ ಕೂಡಲೇ ಮಕ್ಕಳೆಂದರೆ ದೇವರು, ಕುಸುಮಗಳು, ಉತ್ಸಾಹದ ಚಿಲುಮೆಗಳು, ಬದುಕು, ಸಮಾಜ ನೀಡಿರುವ ಹಲವಾರು ಗುಣವಿಷೇಶಣಗಳು ನೆನಪಾಗುತ್ತವೆ. ನಮಗೆಲ್ಲಾ ಮಕ್ಕಳೆ ಸರ್ವಸ್ವ, ಮಕ್ಕಳಿಗಾಗಿ ನಿನ್ನನ್ನು ಸಹಿಸುತ್ತಿದ್ದೇನೆ ಎನ್ನುವ ಜನರು ಹೆಚ್ಚಿನ ಸಂಖ್ಯೆಯಲ್ಲಿಯೇ ಸಿಗುತ್ತಾರೆ. ಮಕ್ಕಳಿಗಾಗಿ ಇತರರನ್ನು ಸುಲಿದು, ಕೊಂದು ಬಾಚಿ ತಿಂದವರೂ ಇದ್ದಾರೆ.  ಮಕ್ಕಳಿಗಾಗಿ ಕದ್ದು, ಭ್ರಷ್ಟರಾಗಿ, ವಂಚಕರಾಗಿ ಆಸ್ತಿಮಾಡಿದವರೆಷ್ಟಿಲ್ಲ. ಮಗಳ ಮದುವೆಗೆಂದು, ವರದಕ್ಷಿಣೆಗೆಂದು ಸಾಲಸೋಲಮಾಡಿ, ಮನೆಮಾಡಿ ದಿವಾಳಿಯಾದವರೆಷ್ಟಿಲ್ಲ. ಮಗಳು ಓಡಿಹೋದಳೆಂದು, ಮಗ ಸಾಕಲಿಲ್ಲವೆಂದು ಕೊರಗಿ ಸೊರಗಿದವರೆಷ್ಟಿಲ್ಲ. ಸಮಾಜದಲ್ಲಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಮಾತ್ರ … Read more

ಮಕ್ಕಳು ಮತ್ತು ಯುದ್ಧ ನೀತಿಯ ಒಂದು ಪುಟ: ರುದ್ರೇಶ್ವರ ಸ್ವಾಮಿ

`ಮಕ್ಕಳು ಮತ್ತು ಯುದ್ಧ ನೀತಿ’- ಈ ಶೀರ್ಷಿಕೆಯನ್ನು ಓದುತ್ತಿದ್ದಂತೆ, ಇಲ್ಲಿ ಏನೋ ಒಂದು ಗೊಂದಲವಿದೆ ಅನ್ನಿಸುತ್ತದೆ. ಒಂದೇ ಗುಂಪಿಗೆ ಸೇರದ ಯಾವುದೋ ಒಂದು ಹೊರಗಿನದು ಇಲ್ಲಿ ಬಂದು ಈ ಗೊಂದಲ ಸೃಷ್ಟಿಸಿದಂತೆ ಕಂಡುಬರುತ್ತದೆ- ಮೊಸರಲ್ಲಿ ಕಲ್ಲು ಸಿಕ್ಕ ಹಾಗೆ. ಮಕ್ಕಳಿಗೂ ಯುದ್ಧಕ್ಕೂ ಯಾವ ಬಾದರಾಯಣ ಸಂಬಂಧ?  ಆದರೆ ಆಳದಲ್ಲಿ ಅದರ ಕಥೆ ಬೇರೆಯದೇ ಆಗಿದೆ. ಮಕ್ಕಳು ಮತ್ತು ಯುದ್ಧ (ನೀತಿ)- ಇದು ಎಂತಹ ವೈರುಧ್ಯಗಳುಳ್ಳ ಸಮಸ್ಯೆ. ಈ ವೈರುಧ್ಯವನ್ನು, ಬದುಕಿನ ಈ ಅಣಕವನ್ನು ನಾವು ಆಳಕ್ಕಿಳಿಯದೆ ಅರ್ಥಮಾಡಿಕೊಳ್ಳುವುದು … Read more

ನಮ್ಮ ಪುರಾಣಗಳಲ್ಲಿ ನಮ್ಮ ಮಕ್ಕಳು: ದತ್ತ ರಾಜ್

ಹದಿನೆಂಟು ಪುರಾಣಗಳು ಹಾಗೂ ಅವುಗಳ ಉಪಪುರಾಣಗಳು ಭಾರತೀಯ ಇತಿಹಾಸಗ್ರಂಥಗಳೇ ಆಗಿದ್ದರೂ  ಕೆಲವು ಪುರಾಣಗಳಲ್ಲಿ ಪರಸ್ಪರ ವಿರೋಧಗಳಿರುವುದರಿಂದ, ಅನೇಕ ಪ್ರಕ್ಷಿಪ್ತತೆಗಳು ಇರುವುದರಿಂದ ಅವುಗಳನ್ನು ಸಂಪೂರ್ಣವಾಗಿ ಸತ್ಯವಾದ ಇತಿಹಾಸಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ರಾಮಾಯಣ ಮತ್ತು ಮಹಾಭಾರತ ಇವೆರಡನ್ನುಯಥಾರ್ಥ ಇತಿಹಾಸ ಗ್ರಂಥಗಳು ಎಂದು ಗುರುತಿಸಲಾಗಿದೆ. ಈ ಇತಿಹಾಸ ಪುರಾಣಗಳನ್ನು ಅವಲೋಕಿಸಿದಾಗ  ಪ್ರಾಚೀನ ಭಾರತದ ಜನರು ಎಂತಹ ಜೀವನ ನಡೆಸುತ್ತಿದ್ದರು.  ಸಮಾಜದ ಆರ್ಥಿಕ-ಪಾರಿವಾರಿಕ ಸ್ಥಿತಿಗತಿಗಳು ಹೇಗಿದ್ದವು ಎನ್ನುವುದು ಅರಿವಿಗೆ ಬರುತ್ತದೆ. ಪ್ರಾಚೀನ ಭಾರತದಲ್ಲಿಯೂ ಮಕ್ಕಳ ಮೇಲೆ ಇಂದಿನಂತೆ ದೌರ್ಜನ್ಯಗಳು ನಡೆಯುತ್ತಿದ್ದವಾ..?  ಆಗಿನ ಕಾಲದ … Read more

ಮಕ್ಕಳ ಹಕ್ಕುಗಳ ರಕ್ಶಣೆಯಲ್ಲಿ ಮಾಧ್ಯಮದ ಪಾತ್ರ: ಜ್ಯೋತಿ ಇರವರ್ತೂರು

ಇತ್ತೀಚೆಗೆ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದ್ರೆ ಮಕ್ಕಳಿಗೂ ಹಕ್ಕುಗಳು ಇದೆಯಾ ಅನ್ನಿಸುತ್ತೆ. ತಮ್ಮವರಿಂದ, ಸಮಾಜದಿಂದ ಹೀಗೆ ತಮ್ಮ ಹಕ್ಕುಗಳೇನೆಂದು ಅರಿವು ಮೂಡುವ ಮುನ್ನ ಕನಸುಗಳ ಬಣ್ಣ ಕಳೆದುಕೊಳ್ಳುತ್ತಾರೆ ಈ ಚಿಣ್ಣರು. ಇಂತಹ ಸಂದರ್ಭದಲ್ಲಿ ಅರಿವು ಮೂಡಿಸಿ ಅವರ ಭವಿಷ್ಯ ದಾರಿ ಅರ್ಥಪೂರ್ಣವಾಗಿಸಲು ಮಾಧ್ಯಮದ ಪಾತ್ರ ಬಹಳ ದೊಡ್ಡದು.  ಶಾಲೆಯಲ್ಲಿ ಪುಟ್ಟ ಬೆನ್ನಿಗೆ ಬೆಟ್ಟದ ಹೊರೆ, ಬದುಕಿನ ಬಣ್ಣ ಕಳೆದುಕೊಂಡ ಬಾಲಕಾರ್ಮಿಕರು ;  ಕಾಫಿ ಕುಡಿಯಲೆಂದು ಹೋಟೇಲಿಗೆ ಹೋದಾಗ ಟೇಬಲ್ ಒರೆಸುವ ಪುಟ್ಟ ಕಂದನನ್ನು ನೋಡಿ ನಿಮ್ಮ … Read more

ಸಾಮಾನ್ಯ ಜ್ಞಾನ (ವಾರ 37): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ವಿಶ್ವ ವಿಖ್ಯಾತ ವರ್ಣ ಚಿತ್ರಕಾರ ಮತ್ತು ಶಿಲ್ಪಿ ಪಾಬ್ಲೊ ಪಿಕಾಸೋ ಯಾವ ದೇಶದವರು? ೨.    ಕೃಷ್ಣರಾಜ ಸಾಗರದಲ್ಲಿರುವ ವಿಶ್ವೇಶ್ವರಯ್ಯ ನಾಲೆಗಿದ್ದ ಮೊದಲ ಹೆಸರು ಯಾವುದು? ೩.    ಸಾಮಾನ್ಯ ತಾಪದಲ್ಲಿ ದ್ರವ ಸ್ಥಿತಿಗೆ ಬರುವ ಲೋಹಗಳು ಯಾವುವು? ೪.    ಕರ್ನಾಟಕದಲ್ಲಿ ’ನೀರ್‌ಸಾಬ್’ ಎಂದು ಪ್ರಖ್ಯಾತರಾಗಿದ್ದ ವ್ಯಕ್ತಿ ಯಾರು? ೫.    ದೆಹಲಿಯ ಮೆಟ್ರೋ ರೈಲ್ವೆಯ ಶಿಲ್ಪಿ ಯಾರು? ೬.    ಇರಾನ್ ದೇಶಕ್ಕಿದ್ದ ಮೊದಲ ಹೆಸರು ಯಾವುದು? ೭.    ಅರಬ್ಬಿ ಸಮುದ್ರ ಸೇರುವ ಭಾರತದ ದೊಡ್ಡನದಿ ಯಾವುದು? ೮.   … Read more