Facebook

Archive for 2014

ಕರ್ಮ ಕಾದಂಬರಿ ವಿಮರ್ಶೆ: ಗಣೇಶ್ ಖರೆ, ಪ್ರಶಾಂತ್ ಭಟ್

ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ… ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು […]

ನೋವೊಂದು ಬಳಿ ಬಂದು .. : ಅನಿತಾ ನರೇಶ್ ಮಂಚಿ

ದೊಡ್ಡಪ್ಪನ ಮನೆಯೊಳಗೆ ಕರ್ಫ್ಯೂ ವಿಧಿಸಿದಂತಿದ್ದ ವಾತಾವರಣ. ದೊಡ್ಡಮ್ಮ ಮತ್ತು ಅತ್ತಿಗೆಯರ ಸಂಭಾಷಣೆಯೆಲ್ಲಾ ಸನ್ನೆಯಲ್ಲೇ ಸಾಗುತ್ತಿತ್ತೇ ವಿನಃ ಸ್ವರ ಹೊರ ಬರುತ್ತಿರಲಿಲ್ಲ. ಅಣ್ಣಂದಿರು ಅಲ್ಲಲ್ಲಿ ತಮ್ಮ ಕೆಲಸದಲ್ಲಿ ತೊಡಗಿದಂತೆ ಕಂಡರೂ   ಅವರ ಗಮನವೆಲ್ಲಾ ಈಸೀಚೇರಿನಲ್ಲಿ ಕುಳಿತ ದೊಡ್ಡಪ್ಪನ ಕಡೆಯೇ ಇತ್ತು. ಅವರೊ ಇತ್ತಲಿನ ಪರಿವೆಯಿಲ್ಲದೆ  ಕೈಯನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಎತ್ತಲಾಗದೇ ಕೆಳಗೆ ಹಾಕುವುದು ಮಾಡುತ್ತ ಕುಳಿತಿದ್ದರು. ಕಣ್ಣಿನಲ್ಲಿ ಶೂನ್ಯ ಭಾವ.  ಮನೆಯೆಲ್ಲಾ ಮೌನದಲ್ಲಿ ಮುಳುಗಿ ಯಾವುದೋ ಶೋಕವನ್ನು ನಿರೀಕ್ಷಿಸುವಂತೆ ಇತ್ತು. ನನ್ನ ಆಗಮನ ಎಲ್ಲರ ಮೊಗದಲ್ಲೂ ನಗೆರೇಖೆಯನ್ನು […]

ಅಂತರ್ಜಾಲದ ಖೆಡ್ಡಾಗಳು ಮತ್ತು ಕಾಟಕೊಡೋ ಕುಕ್ಕಿಗಳು: ಪ್ರಶಸ್ತಿ. ಪಿ.

ದಿನ ಬೆಳಗಾದಾಗ ಮುಖ ತೊಳೆಯೋ ಮುನ್ನವೇ ವಾಟ್ಸಾಪು ಮೆಸೇಜು ನೋಡ್ಲಿಲ್ಲ ಅಂದ್ರೆ ರಾತ್ರೆಯೊಳಗೆ ಒಮ್ಮೆಯೂ ಫೇಸ್ಬುಕ್ಕು ಹೊಕ್ಕಿಲ್ಲ ಅಂದ್ರೆ ನಮ್ಮ ಆ ದಿನವೇ  ಅಪೂರ್ಣವಾದ ಭಾವ !. ಈ ಅಂತರ್ಜಾಲದಲ್ಲಿ ನಾವು ಎಷ್ಟು ಮುಳುಗಿ ಹೋಗಿದ್ದೇವೆ ಅಂದ್ರೆ ಕಾಲ್ಪನಿಕ ಜಗತ್ತೇ ಸರ್ವಸ್ವವೂ ಆಗಿ ಇಲ್ಲೇ ಕೃಷಿ ಮಾಡೋದ್ರಿಂದ(farm villa), ಓಡೋವರೆಗೆ(temple run) ನಿಜಜೀವನದ ಎಲ್ಲವನ್ನೂ ಅನುಕರಿಸೋ ತಂತ್ರಾಂಶಗಳನ್ನು ಬರೆದು ಅವುಗಳಲ್ಲೇ ಮುಳುಗಿ ಹೋಗಿ ಒಂಥರಾ ಕಾಲ್ಪನಿಕ ಜಗತ್ತಲ್ಲೇ ಕಳೆದುಹೋಗಿದ್ದೇವೆ. ಒಂದು ವಾರ ಫೇಸ್ಬುಕ್ಕಲ್ಲಿ ದಿನಾ ರಾತ್ರಿ ಹರಟಿದವ […]

ಹೊಟ್ಟೆ ಗಟ್ಯಾ, ಸೊಂಟ ಗಟ್ಯಾ? (ಅಳಿದುಳಿದ ಭಾಗ): ಸೂರಿ ಹಾರ್ದಳ್ಳಿ

ಇಲ್ಲಿಯವರೆಗೆ ಇದು ಮುಗಿದ ನಂತರ ಸಿಹಿ ತಿಂಡಿಯ ಸರದಿ. ಸುಮಾರಾಗಿ ಒಬ್ಬಟ್ಟು ಇದ್ದೇ ಇರುತ್ತದೆ. ಒಬ್ಬಟ್ಟು ಎಂದರೆ ಹೋಳಿಗೆ, ಇಂಗ್ಲಿಷಿನವರು ಕುಲಗೆಡಿಸಿ ಹೇಳಿದ ಸ್ವೀಟ್ ಚಪಾತಿ. ಎಷ್ಟೋ ಕನ್ನಡ ಪದಗಳಿಗೆ ಇಂಗ್ಲಿಷಿನ ಪದಕೋಶದಲ್ಲಿ ಶಬ್ದಗಳೇ ಇಲ್ಲ. ಅವುಗಳಲ್ಲಿ ಮುಖ್ಯವಾಗಿ ಮಡಿ, ಮೈಲಿಗೆ, ಸೂತಕ, ಮುಸುರೆ ಇತ್ಯಾದಿ. ಇವು ಏನೆಂದು ಕೇಳಬೇಡಿ, ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ! ಸಿಹಿ ತಿಂಡಿಗಳಲ್ಲಿ ಒಬ್ಬಟ್ಟು ಮಾತ್ರವೇ ಮೇಲೆ ಒಂದಿಷ್ಟು ಸಕ್ಕರೆ ಹಾಕಿಸಿಕೊಳ್ಳುತ್ತದೆ. ಕಾಯಿ, ಸಕ್ಕರೆ, ಬೇಳೆ ಒಬ್ಬಟ್ಟು ಮಾಡಿದರೆ ಅದರ ಮೇಲೆ […]

ಮಹದಾನಂದ: ಉಮೇಶ ಕ. ಪಾಟೀಲ

                   ಭೂಮಿಯ ಮೇಲೆ ಸಹಸ್ರ ಕೋಟಿ ಜೀವರಾಶಿಗಳು ಇವೆ. ಇವೆಲ್ಲ ಜೀವಿಗಳಿಗೆ ಸುಖ, ದು:ಖ, ಸಂತೋಷ, ಆನಂದ ಇರಲೇಬೇಕು. ಅದರಲ್ಲಿಯೂ ಮನುಷ್ಯನು ಪ್ರತಿಯೊಂದು ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಲು ಬಯಸುತ್ತಾನೆ. ಆನಂದ ಅಥವಾ ಮಹದಾನಂದ ಅಂದರೆ ವಿಶೇಷ ಆನಂದ, ಅತಿಶಯ ಆನಂದ, ದೊಡ್ಡ ಆನಂದ, ಈ ಆನಂದವು ಯಾವಾಗ ಯಾರಿಗೆ, ಯಾವ ಕಾರಣದಿಂದ ಬರುತ್ತದೆ ಎನ್ನುವದನ್ನು ನಿಶ್ಚಿತವಾಗಿ ಹೇಳಲು ಬರುವದಿಲ್ಲ. ಉದಾಹರಣೆಗೆ-ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವುದರಿಂದ  ಆನಂದ […]

ಮಕ್ಕಳ ಪದ್ಯಗಳು: ಹೃದಯಶಿವ

೧)ಶುಭೋದಯ  __________________ ದಿನಾ ನಾನು ಶಾಲೆಗೆ  ಹೋಗುವಂಥ ವೇಳೆಗೆ  ಹಾದಿಬದಿಯ ಬೇಲಿಯು  ಮುಡಿದು ನಿಂತ ಹೂವಿಗೆ  ಹೇಳುವೆ ಶುಭೋದಯ ಹೊಳೆದಂಡೆಯ ಬಂಡೆಗೆ  ಒರಗಿನಿಂಥ ಜೊಂಡಿಗೆ  ರೆಕ್ಕೆಗೆದರಿ ಹಾರುವ  ಹಚ್ಚಹಸಿರು ಮಿಡತೆಗೆ  ಹೇಳುವೆ ಶುಭೋದಯ ಎತ್ತರೆದೆಳನೀರಿಗೆ  ಹತ್ತುವಂಥ ಅಳಿಲಿಗೆ  ಪುಟ್ಟ ಮೂರುಗೆರೆಗಳ   ಅದರ ಮುದ್ದುಬೆನ್ನಿಗೆ ಹೇಳುವೆ ಶುಭೋದಯ ಹಾಲ್ದುಂಬಿದ ತೆನೆಗೆ ಕೊಕ್ಕಿಡುವಾ ಹಕ್ಕಿಗೆ  ತೊಟ್ಟಿಲಾಗಿ ತೂಗುವ  ತಾಯಿಯಂಥ ಪೈರಿಗೆ  ಹೇಳುವೆ ಶುಭೋದಯ  ಬೆಳ್ಳಿಯಂಥ ಬೆಳಗಿಗೆ  ಚಿನ್ನದಂಥ ಕಿರಣಕೆ  ಬದುಕಿರುವ ತನಕವೂ  ಬದುಕುಳಿಯುವ ಚಿತ್ರಕೆ  ಹೇಳುವೆ ಶುಭೋದಯ ೨)ಗುಂಡನ […]

ಕಿರು ಪ್ರಬಂಧಗಳು: ರುಕ್ಮಿಣಿ ಮಾಲ, ಸಿರಾ ಸೋಮಶೇಖರ್

    ಬೆನ್ನಚೀಲ ೧೯೭೫ರ ದಶಕದಲ್ಲಿ ಬೆನ್ನಿಗೆ ಹಾಕುವ ಚೀಲ ಅಷ್ಟಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರಲಿಲ್ಲ. ಶಾಲೆಗೆ ಮಕ್ಕಳು ಉದ್ದಕೈ ಇರುವ ಬಟ್ಟೆಚೀಲ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೇ ಕೆಲವು ಮಂದಿ ಬಳಿ ಬೆನ್ನಚೀಲ ಇರುತ್ತಿದ್ದ ಕಾಲವದು. ನನಗೆ ಆಗ ಬೆನ್ನಿಗೆ ಹಾಕುವ ಚೀಲ ಬೇಕು ಎಂಬ ಆಸೆ ಪ್ರಬಲವಾಗಿ ಇತ್ತು. ಅದರಲ್ಲಿ ಪುಸ್ತಕ ಹಾಕಿ ಶಾಲೆಗೆ ತೆಗೆದುಕೊಂಡು ಹೋಗಬೇಕು ಎಂಬ ಕನಸು ಕಾಣುತ್ತಿದ್ದೆ. ಆದರೆ ನನ್ನಲ್ಲಿ ಆ ಚೀಲವೇ ಇರಲಿಲ್ಲ. ಉದ್ದ ಕೈ ಇರುವ ಬಟ್ಟೆ ಚೀಲವನ್ನೇ […]

ವಿಶ್ವ ಜನಸಂಖ್ಯಾ (ಸ್ಪೋಟ!) ದಿನಾಚರಣೆ – ಜುಲೈ ೧೧: ಅಖಿಲೇಶ್ ಚಿಪ್ಪಳಿ

ತುಂಬಾ ನೇರವಾಗಿ ಹೇಳಬೇಕೆಂದರೆ, ನೊಣ, ಸೊಳ್ಳೆ, ಇಲಿ-ಹೆಗ್ಗಣ, ತಿಗಣೆ, ಉಣ್ಣಿ, ಊಜಿನೊಣ ಇತ್ಯಾದಿಗಳು ಈ ಸೃಷ್ಟಿಯ ರಾಕ್ಷಸ ರೂಪಗಳು. ಇವುಗಳನ್ನು ಸಂಹಾರ ಮಾಡಲು ಯಾವುದೇ ಆಯುಧಗಳಿಲ್ಲ. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕ ಬಲ್ಲ ಸಾಮರ್ಥ್ಯವನ್ನು ಈ ರಾಕ್ಷಸ ರೂಪಿಗಳು ಹೊಂದಿವೆ. ಯಾವುದೇ ರಾಸಾಯನಿಕಗಳಿಂದಲೂ ಇವುಗಳನ್ನು ನಾಶ ಮಾಡಲು ಆಗದು. ಇವುಗಳ ಸಂಖ್ಯೆಯೂ ಅಧಿಕ. ಇದೇ ಸಾಲಿಗೆ ಇನ್ನೊಂದು ಜೀವಿ ಸೇರ್ಪಡೆಯಾಗಿದೆ. ಅದೇ ಆಧುನಿಕ ಮಾನವ. ಕಳೆದೊಂದು ಶತಮಾನದಲ್ಲಿ ತನ್ನ ಸಂಖ್ಯೆಯನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸಿಕೊಂಡು ಭೂಮಿಯ […]

ಭವಿಷ್ಯ ಭಾರತದಲ್ಲಿ ವಿಜ್ಞಾನದ ಏಳಿಗೆ: ಪ್ರಸನ್ನ ಗೌಡ

ಪ್ರೊ. ಸಿ. ಎನ್. ಆರ್. ರಾವ್ ಭಾಷಣ ಆಧಾರಿತ ಲೇಖನ  ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ನಾಯಕರನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ವಾದುದ್ದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇಶದ ಭವಿಷ್ಯ ನಿಂತಿದೆ. ನಮ್ಮ ನೆರೆಯ ರಾಷ್ಟ್ರ ಚೀನಾದ ಜೊತೆ ನಮ್ಮ ದೇಶವನ್ನು ಹೋಲಿಸಿ ನೋಡಿದರೆ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆ ತುಂಬಾ ಕಡಿಮೆ ಇದೆ. ದಿನೆ ದಿನೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಿದಂತೆಲ್ಲ ದೇಶದ ಅಭಿವೃದ್ದಿ ತನಗೆ […]

ನಮಸ್ಕಾರ….ನಮಸ್ಕಾರ: ಹೊರಾ.ಪರಮೇಶ್

'ನಮಸ್ಕಾರ' ಈ ಸಂಬೋಧನಾ ಶಬ್ದವನ್ನು ಬಳಸದಿರುವ ಅಥವಾ ಕೇಳದಿರುವ ಯಾವುದೇ ವ್ಯಕ್ತಿ ಅಥವಾ ಕನ್ನಡಿಗ ಇಲ್ಲವೆಂದೇ ಭಾವಿಸಿದ್ದೇನೆ.ಆಂಗ್ಲ ಭಾಷಾ ಪ್ರೇಮಿಗಳು ಗುಡ್ ಮಾರ್ನಿಂಗ್ ; ಆಫ್ಟರ್ ನೂನ್, ಗುಡ್ ನೈಟ್ ಎಂದು ಹೇಳಿದರೂ ಅದರ ಅಂತರಾರ್ಥದ ಭಾವ 'ನಮಸ್ಕಾರ'ವೇ ಆಗಿದೆ.ಈ ಶಬ್ದದ ಹರವು ಸಾಗರದಷ್ಟು ವಿಶಾಲವಾದುದಾಗಿದೆ.ವಿವಿಧ ಸಂದರ್ಭಗಳಲ್ಲಿ ವಿಧ ವಿಧ ಅರ್ಥವಂತಿಕೆಯನ್ನು ಹೇಗೆಯ ಪಡೆದುಕೊಂಡಿದೆ ಎಂಬುದರ ಸುತ್ತ ಮುತ್ತ ಸುತ್ತಾಡಿ ಬರುವ ಉದ್ದೇಶ ನನ್ನದು.ಅದಕ್ಕೂ ಮುಂಚೆ ನಮಸ್ಕಾರ ಎಂದರೇನು? ಎಂದು ನೋಡಿಬಿಡೋಣ. ಸಾಕು ಸುಮ್ನಿರ್ರಿ, 'ನಮಸ್ಕಾರ' ಅಂದ್ರೆ […]