Facebook

Archive for 2014

ಮಠ: ಹೃದಯಶಿವ

  ಜವರಯ್ಯ ದಡಾರನೆ ಎದ್ದು ಕುಳಿತ. ತನ್ನ ಪುಟ್ಟ ಮೊಮ್ಮಗ ಬೆನ್ನ ಮೇಲೆ ಕುಣಿಯುತ್ತಿರುವಂತೆ ಕನಸು ಕಂಡು ಒಮ್ಮೆಲೇ ಎಚ್ಚರಗೊಂಡಿದ್ದ. ಆದರೆ ಅಲ್ಲಿ ಯಾವ ಮೊಮ್ಮಗನೂ ಇಲ್ಲ. ಮಠದ ದೀಪಗಳ ಬೆಳಕು ಇರುಳನ್ನು ಹಗಲಾಗಿಸಿತ್ತು. ತನ್ನ ಪಕ್ಕದಲ್ಲೇ ಹರಿದ ಚಾಪೆಯ ಮೇಲೆ ಒಂದಿಷ್ಟು ಸಾಧುಗಳು ಮಲಗಿದ್ದರು. ಅವರು ಎಲ್ಲೆಲ್ಲಿಂದಲೋ ಬಂದು ಸದ್ಯಕ್ಕೆ ಇಲ್ಲಿ ನೆಲೆಸಿದ್ದರು. "ಈ ಜಲ್ಮ ಇರೋಗಂಟ ಈ ಹಟ್ಟಿ ಕಡೆ ತಲೆ ಹಾಕುದ್ರೆ ಕೇಳಮ್ಮಿ" ಜವರಯ್ಯ ಹೆಂಡತಿಗೆ ಸವಾಲು ಹಾಕಿ ಬಂದಿದ್ದ, "ಈ ಹಟ್ಟೀಲಿ […]

ನಿರ್ಮೋಹಿ: ಲಕ್ಷ್ಮೀಶ.ಜೆ.ಹೆಗಡೆ

                                                                                                       "ತೋಡಾರ್,ಮಿಜಾರ್, ಎಡಪದವು, ಗಂಜಿಮಠ, ಕೈಕಂಬ, […]

ಕನ್ಯಾ ಕೊಡ್ತೀವಿ, ವರ ಹೆಂಗೇ?: ಅಮರ್ ದೀಪ್ ಪಿ.ಎಸ್.

ವಿಷ್ಣುವರ್ಧನ್ ಅಭಿನಯದ ಒಂದು ಸಿನೆಮಾ ಬಂದಿತ್ತು." ನೀನು ನಕ್ಕರೆ ಹಾಲು ಸಕ್ಕರೆ"ಅಂತ.    ಅದರಲ್ಲಿ ಒಬ್ಬರಲ್ಲಾಂತ ನಾಲ್ಕು ನಾಲ್ಕು ಜನ ಹಿರೋಯಿನ್ ಗಳು.  ವಿಷ್ಣುವರ್ಧನ್ ಜೊತೆ  ಒಬ್ಬರಿಗೂ ಒಂದೊಂದು ಡುಯೆಟ್ ಸಾಂಗ್, ಕಾಮಿಡಿ ಎಲ್ಲಾ ಇದೆ.   ಕೊನೆಗೆ ವಿಷ್ಣುವರ್ಧನ್ ಗೆ  ಒಂದು ಹುಡುಗೀನು ಸಿಗಲ್ಲ. ಆ ಸಿನೆಮಾದಲ್ಲಿ ಹುಡುಗ ಓದಿರೋನು, ಒಂದಷ್ಟು ಆಸ್ತಿ ಇರುತ್ತೆ.  ಕಡಿಮೆ ಅಂದ್ರೆ ಅವನ ಬಾಳಿ ನಲ್ಲಿ ಒಂದು ಹುಡುಗಿ ಎಂಟ್ರಿ ಮತ್ತು ಅವನ ಮದುವೆ. ಅದು ಸಿನೆಮಾದಲ್ಲಿ ಕಡೆಗೂ ಆಗೋದಿಲ್ಲ ಅನ್ಸುತ್ತೆ. ಸಿನೆಮಾ ನೋಡಿ ತುಂಬಾ […]

ಒಗ್ಗರಣೆ: ಅನಿತಾ ನರೇಶ್ ಮಂಚಿ

ಮಿಕ್ಸಿಯೊಳಗೆ ಅಕ್ಕಿ ಮತ್ತು ಉದ್ದಿನಬೇಳೆಗಳು ಮರುದಿನದ ಇಡ್ಲಿಗಾಗಿ ಯಾವುದೇ ಡಯಟ್ ಮಾಡದೇ ಸಣ್ಣಗಾಗುತ್ತಿದ್ದವು. ನನ್ನ ಮಿಕ್ಸಿಯೋ .. ಹೊರಗೆ ಸೂಪರ್ ಸೈಲೆಂಟ್ ಎಂದು  ಕೆಂಪು ಪೈಂಟಿನಲ್ಲಿ ಬರೆಯಲ್ಪಟ್ಟದ್ದು. ಅದು ಎಂತಹ ಮೌನಿ ಎಂದರೆ ಪಕ್ಕದಲ್ಲಿ ಬಾಂಬ್ ಸ್ಪೋಟವಾದರೂ ಅದರ ಸದ್ದಿಗೆ ಕೇಳುತ್ತಿರಲಿಲ್ಲ. ಇದರಿಂದಾಗಿ ನೂರು ಮೀಟರ್ ದೂರದಲ್ಲಿದ್ದ ಪಕ್ಕದ ಮನೆಯವರಿಗೂ ಬೆಳಗ್ಗಿನ ತಿಂಡಿಗೆ ನಾನು ಚಟ್ನಿ ಮಾಡದಿದ್ದರೆ ತಿಳಿದುಬಿಡುತ್ತಿತ್ತು. ಇದರ ಸದ್ದಿಗೆ ಪ್ರಪಂಚದ ಉಳಿದೆಲ್ಲಾ ಸದ್ದುಗಳು ಮೌನವಾಗಿ ಹೊರಗಿನಿಂದ ಇವರು ಒಂದು ಗ್ಲಾಸ್ ಕಾಫೀ ಎನ್ನುವುದೋ , […]

ನ್ಯಾನೊ ದ್ರವ; ವಿಜ್ಞಾನಿಗಳಲ್ಲಿ ಹುಟ್ಟಿಸಿರುವ ಕೌತುಕತೆಯ ಮಾಯದ್ರವ: ಪ್ರಸನ್ನ ಗೌಡ

ನೀವು ನ್ಯಾನೊ ಕಾರ್ ಬಗ್ಗೆ ಕೇಳಿದ್ದೀರಿ, ನ್ಯಾನೊ ಸಿಮ್ ಬಗ್ಗೆ ಕೇಳಿರಬಹುದು ಆದರೆ ನ್ಯಾನೊ ದ್ರವದ ಬಗ್ಗೆ ಕೇಳಿದ್ದೀರಾ?. ಏನಿದು ನ್ಯಾನೊ ದ್ರವ (Nanofluid) ಎಂದು ನಿಮ್ಮಲ್ಲಿ ಕೌತುಕತೆ ಹುಟ್ಟುವುದು ಸಹಜ.  ನಾವು ಬಳಸುವ ದಿನನಿತ್ಯದ ಹಲವಾರು ಉಪಕರಣಗಳಾದಂತಹ ರೆಫ್ರೀಜಿರೇಟರ್, ಎಸಿ/ಏರ್‌ಕಂಡಿಷನ್, ಲ್ಯಾಪ್‌ಟಾಪ್/ಕಂಪ್ಯೂಟರ್ ಹಾಗೂ ಕಾರ್ ರೇಡಿಯೇಟರ್‌ಗಳಲ್ಲಿ ಶಾಖವರ್ಗಾವಣೆಯಾಗುವುದನ್ನು ಗಮನಿಸಿದ್ದಿರಾ?.  ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳಲ್ಲಿ ಕೂಲಿಂಗ್ ಪ್ಯಾನ್ ಬಳಸುವುದರಿಂದ ಗಾಳಿಯಿಂದ ಶಾಖವರ್ಗಾವಣೆಯಾಗುತ್ತದೆ. ರೆಫ್ರೀಜಿರೇಟರ್‌ನಲ್ಲಿ ಸಿ.ಎಫ್.ಸಿ(ಕ್ಲೋರೊ ಪ್ಲೋರೊ ಕಾರ್ಬನ್) ಎಂಬ ರಾಸಯನಿಕ ದ್ರವವನ್ನು ಮತ್ತು ಕಾರ್ ರೇಡಿಯೇಟರ್‌ನಲ್ಲಿ ನೀರನ್ನು ಬಳಸಿ ಶಾಖವರ್ಗಾವಣೆ […]

ದೆವ್ವದ ಮನೆ: ಗುರುಪ್ರಸಾದ ಕುರ್ತಕೋಟಿ

(ಇದು ನನ್ನ ತಂದೆ ಶಶಿಕಾಂತ ಕುರ್ತಕೋಟಿ ಅವರಿಗೆ ಆದ ಒಂದು ಅನುಭವ, ಅವರೇ ಹೇಳಿದ್ದು. ಮೂಲ ಕತೆಗೆ ಧಕ್ಕೆ ಬರದಂತೆ, ಓದಿಸಿಕೊಂಡು ಹೋಗಲಿ ಅಂತ ಸಲ್ಪ ಮಸಾಲೆ ಬೆರೆಸಿದ್ದೇನೆ. ಅದು ಅಜೀರ್ಣಕ್ಕೆ ಕಾರಣವಾಗಲಿಕ್ಕಿಲ್ಲವೆಂಬ ನಂಬಿಕೆ ನನ್ನದು!) ಕಣ್ಣು ತೆರೆದಾಗ ನಾನು ಆಸ್ಪತ್ರೆಯಲ್ಲಿದ್ದೆ. ಕೈಗೆ ಸಲಾಯಿನ್ ಹಚ್ಚಿದ್ದರು. ನನ್ನ ಹೃದಯದ ಬಡಿತ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಕಣ್ಣಿಗೆ ಕತ್ತಲೆ ಬಂದಿದ್ದಷ್ಟೆ ನನಗೆ ನೆನಪು. ಆಮೇಲೇನಾಯ್ತು? ಯಾರು ನನ್ನನ್ನಿಲ್ಲಿ ತಂದದ್ದು ಒಂದು ನನಗೆ ಅರ್ಥವಾಗುತ್ತಿಲ್ಲ.  "ಸರ್ ಕಣ್ಣು ತಗದ್ರು!" ಅಂತ […]

ಕೆಂದಳಿಲು-ಚೆಂದದಳಿಲು: ಅಖಿಲೇಶ್ ಚಿಪ್ಪಳಿ

ಮಾರ್ಚ್ ೨೦ ೨೦೧೪ ರಾತ್ರಿ ಖ್ಯಾತ ಪೆರ್ಡೂರು ಮೇಳದ ಯಕ್ಷಗಾನ ಸಾಗರ ಸಮೀಪದ ಕರ್ಕಿಕೊಪ್ಪದಲ್ಲಿ.  ಸಂಜೆಯಾದ ಮೇಲೆ ಮತ್ತಿಕೊಪ್ಪದಿಂದ ಒಳದಾರಿಯಲ್ಲಿ ಕರ್ಕಿಕೊಪ್ಪ ತಲುಪಲು ಬಹಳ ಹೊತ್ತು ಬೇಕಾಗಿಲ್ಲ. ದಟ್ಟ ಕಾನನದ ಕಚ್ಚಾರಸ್ತೆಯಲ್ಲಿ ಹೊರಟರೆ ೨ ಕಿ.ಮಿ. ತಲುಪಲು ಬರೀ ಅರ್ಧಗಂಟೆ ಸಾಕು. ಆಟ ಶುರುವಾಗುವುದು ಹೇಗೂ ೧೦ ಗಂಟೆಗೆ ತಾನೆ. ಊಟ ಮುಗಿಸಿಯೇ ಹೊರಡುವುದೆಂಬ ತೀರ್ಮಾನದಲ್ಲಿದ್ದ ಆದಿತ್ಯ. ಸೆಕೆಂಡ್ ಪಿ.ಯು.ನಲ್ಲಿ ಪಾಸಾಗದೇ ಅನಿವಾರ್ಯವಾಗಿ ಕರ್ಕಿಕೊಪ್ಪದಲ್ಲೇ ಗ್ಯಾರೇಜ್ ಸೇರಿ ಹೆಸರು ಮಾಡಿದ್ದ ಆದಿತ್ಯ ಕೈ ತೊಳೆದು ಊಟಕ್ಕೆ ಕೂರಬೇಕು […]

ಪಂಜು ಕಾವ್ಯಧಾರೆ

  ಆಗಷ್ಟೇ … ಸ್ನಾನ ಮುಗಿಸಿ, ತಿಂಡಿ ತಿಂದು  ಒಂದರ್ಧ ಗಂಟೆ ನಿದ್ರಿಸಿದರೆ ಹೇಗೆ…? ಆಯಾಸದ ಮೈಮನಸ್ಸಿಗೂ… ಕೊಂಚ ಆರಾಮ ಆನಂತರ ಆಸ್ಪತ್ರೆಗೆ ಹೋದರಾಯ್ತೆಂದು  ಹಾಸಿಗೆಯ ಮೇಲೆ ಹಾಗೆಯೇ….  ಮೈ ಚೆಲ್ಲಿ  ಇನ್ನೇನು ಮಲಗಿ ವಿಶ್ರಮಿಸಬೇಕು ಒಮ್ಮೆಲೇ… ಬಾಗಿಲ ದಬ ದಬ ಬಡಿವ ಸದ್ದು ಜೊತೆಗೆ ಕಾಲಿಂಗ್ ಬೆಲ್ ನ ಜೋರು ಶಬ್ಧ  ಹಾಳಾದ್ದು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ ಅಭೀ… ಅಭೀ… ಹೋಗಿ ನೋಡ ಬಾರದೆ ಕರೆದರೂ… ಇವಳ ಸುಳಿವಿಲ್ಲ, ಉತ್ತರವಿಲ್ಲ ಐದು ತಿಂಗಳ ಗರ್ಭಿಣಿ ಬೇರೆ, ಎಲ್ಲಿ […]

ಉತ್ತರವಿಲ್ಲದ ಪ್ರಶ್ನೆಗಳ ಹಿಂದೆ: ಪ್ರಶಸ್ತಿ. ಪಿ.

ಪೀಠಿಕೆ: ಪ್ರೀತಿಯೋ ದ್ವೇಷವೋ ಕವಿತೆಯಾಗೋದುಂಟು. ತಿರಸ್ಕಾರ, ನೋವುಗಳು ಕವಿತೆಯ ಮಿತಿ ದಾಟಿ ಕತೆಗಳಾಗೋದೂ ಉಂಟು. ಆದ್ರೆ ನಿಜಜೀವನದ ನೋವಿಗೊಂದು ಮಾತಿನ ರೂಪ ಸಿಕ್ಕರೆ ? ವಿದ್ಯಾರ್ಥಿಯೊಬ್ಬ ತನ್ನ ಇಂಟರ್ನಲ್ಸು, ಎಕ್ಸಾಮುಗಳನ್ನೇ ಕತೆಯ ವಸ್ತುವಾಗಿಸಿದ್ರೆ ?  ಡಾಕ್ಟರೊಬ್ಬ ತನ್ನ ಆಪರೇಷನ್ನುಗಳ ಸುತ್ತ, ಕಂಪ್ಯೂಟರ್ ಉದ್ಯೋಗಿಯೊಬ್ಬ ತನ್ನ ಜೀವನ ಶೈಲಿಯ ಬಗ್ಗೆ, ಆಟಗಾರನೊಬ್ಬ ತಾನು ಈಗಿನ ಹಂತಕ್ಕೆ ಬರಲು ಕಷ್ಟಪಟ್ಟ ಬಗ್ಗೆಯೋ ಬರದ್ರೆ ? ಸದ್ಯಕ್ಕಂತೂ ಗೊತ್ತಿಲ್ಲ. ರಕ್ತದಾನ ಮಾಡಲೆಂದು ಹೋಗಿ, ಇತ್ತ ಸಂಜೆಯ ತಿಂಡಿಯೂ ಇಲ್ಲದೇ, ಅತ್ತ ಬಸ್ಸೂ […]

ದ್ರೌಪದಿಗೇಕೆ ಪತಿಗಳೈವರು??: ಸುಮನ್ ದೇಸಾಯಿ

ನಮ್ಮ ಭಾರತದ ಸಂಸ್ಕೃತಿಯು ಬಹಳಷ್ಟು ಪುರಾಣ, ಪುಣ್ಯ ಕಥೆಗಳ ನೆಲೆಗಟ್ಟಿನ ಮ್ಯಾಲೆ ನಿಂತದ. ಪ್ರಾಚೀನ ಪೌರಾಣಿಕ ಕಾಲದೊಳಗಿನ ವಿಚಾರಗಳನ್ನ ಸೂಷ್ಮವಾಗಿ ಪರಿಶೀಲಿಸಿದಾಗ ಎಲ್ಲ ಘಟನೆ, ಅವತಾರಗಳ ಹಿಂದೆನು ಒಂದೊಂದು ಉದ್ದೇಶದ ನಿಮಿತ್ತ ಕಾಣಿಸ್ತದ. ಒಂದೊಂದ ಘಟನೆನು ಮುಂದ ದೊಡ್ಡದೊಂದು ಇತಿಹಾಸನ ಸೃಷ್ಠಿ ಮಾಡೇದ. ಒಂದೊಂದು ಮಹಾ ಇತಿಹಾಸದ ಹಿಂದ ಕಥೆ, ಉಪಕಥೆಗಳ ಜೋಡಣೆಯ ಹಂದರನ ಅದ. ಮೂಲಪೂರುಷನ ಅವತಾರದ ಹಿಂದನು ಒಂದೊಂದು ನಿಮಿತ್ತನ ಅದ ಅನ್ನೊದು ಜಗಪ್ರಸಿದ್ಧ. ಒಂದ ದಿನಾ ಹಿಂಗ ಕೂತಾಗ ಯೋಚನೆ ಬಂತು ಅದೇನಂದ್ರ […]