Facebook

Archive for 2014

‘ಮೌನ’, ಮಾತಾಡಲೇಬೇಕಾದ ನಾಟಕ: ಹೃದಯಶಿವ

  ನಾಗರಾಜ ಸೋಮಯಾಜಿಯವರು ಸಣ್ಣ ಪ್ರಾಯದಲ್ಲಿಯೇ ರಂಗಭೂಮಿಯ ಒಡನಾಟ ಇಟ್ಟುಕೊಂಡವರು. 'ವ್ಯಾನಿಟಿ ಬ್ಯಾಗ್', 'ನರಿಗಳಿಗೇಕೆ ಕೋಡಿಲ್ಲ', 'ಹೀಗೆರಡು ಕಥೆಗಳು' ಸೇರಿದಂತೆ ಒಂದಿಷ್ಟು ನಾಟಕಗಳಲ್ಲಿ ನಟಿಸಿದವರು. ಕಳೆದ ನಾಲ್ಕು ವರ್ಷಗಳಿಂದ ರಂಗಚಟುವಟಿಕೆಗಳನ್ನು ಬೆರಗಿನಿಂದ ನೋಡುತ್ತಾ ಬಂದವರು. ಬಿ.ವಿ.ಕಾರಂತರ ಶಿಷ್ಯೆ ಎನ್.ಮಂಗಳ ಅವರ ಜೊತೆಗಿದ್ದು ಸಾಕಷ್ಟು ರಂಗಾಸಕ್ತಿ ಬೆಳೆಸಿಕೊಂಡವರು. ಇವರು ಈಗ 'ಮೌನ' ನಾಟಕವನ್ನು ನಿರ್ದೇಶಿಸುವಾಗ ಒಂದಿಷ್ಟು ಕುತೂಹಲ ಮೂಡುವುದು ಸಹಜ. 'ಮೌನ' ನಾಟಕ ಇವತ್ತಿನ ದಿನಮಾನಕ್ಕೆ ಅಲ್ಲಲ್ಲಿ ಹತ್ತಿರವೆನಿಸಿದರೂ, ಸ್ವಲ್ಪಮಟ್ಟಿಗೆ ನವ್ಯಕಾಲಘಟ್ಟದ ಕಥನಮಿಡಿತಗಳನ್ನು ಮತ್ತೆ ಮತ್ತೆ ನೆನಪಿಸುವ ವಸ್ತುವನ್ನು […]

ಪಂಜು ಕಾವ್ಯಧಾರೆ

ಕನಸ್ಫುರಣೆ:   ಹಾಡು ಹರಿಯದೆಯೇ ರಾಗ ಸೃಜಿಸಿದೆ  ಮಧುರ ಗಾನಕೆ ಸೆರೆಯಾಗಿ  ಭಾವ ತೊರೆಯದೆಯೇ ಮೌನ ಮಿಡಿದಿದೆ  ಕನಸ ಸಾಲಿಗೆ ಕರೆಯಾಗಿ  ಮಾತು ಹಾಡಾದಾಗ, ಮೌನಭಾವವರಿತಾಗ  ಕಾವ್ಯ ಹೊಮ್ಮಿದ ಪರಿಯಂತೆ  ಕೌತುಕ ಕಾಡಿದ ಹಾಡು ನನ್ನ ಪಾಡು..!   ತುಟಿ ವೊಡೆಯದಲೇ ನಗು ಸುರಿದದಂಗೆ  ಪುಳಕನಿನ್ನಾಟ ನೆನೆದು ಬೆರಗಾಗಿ  ಕಣ್ಣು ಮಿಟುಕದೆಯೇ ನೀರು ಹರಿದಂಗೆ  ವಿರಹ ತಾಳದೆಯೆ ನೋವಾಗಿ ನಗುವತಿಯಾಗಿ ಹನಿಯುರುಳಿದಾಗ  ಸಂವೇದನೆ ಚಿಮ್ಮಿದ ಝರಿಯಂತೆ   ವೇದನೆಯ ಹಾಡು ನನ್ನ ಜಾಡು..!   ಕಾವ್ಯ ಸಾಲಿನ […]

ಸವಿ ನೆನಪುಗಳ ಪ್ರಥಮ ಮಿಲನಗಳ ಮೀರುವುದ್ಹೇಗೆ: ಷಡಕ್ಷರಿ ತರಬೇನಹಳ್ಳಿ

ಶಾಲೆಯ ಮೆಟ್ಟಿಲು ತುಳಿದ ಮೊದಲ ದಿನ ಇನ್ನೂ ನೆನಪಿದೆ. ನನ್ನನ್ನು ತನ್ನ ಬುಜದ ಮೇಲೊತ್ತು ಜೇಬು ತುಂಬಾ ಚಾಕಲೇಟು ತುಂಬಿಕೊಂಡು ಶಾಲೆಗೆ ಬಿಡುವ ಮುನ್ನ ನನ್ನ ಸೋದರ ಮಾವ ಹೇಳಿದ ಮಾತು ಮರೆಯದಂತೆ ನೆನಪಿದೆ. “ಸಾರ್ ನಮ್ಮುಡುಗನಿಗೆ ಯಾವ ಕಾರಣಕ್ಕೂ ಹೊಡೆಯಬೇಡಿ. ಅವನು ಮನೆಗೆ ಹೋಗಲು ಹಠ ಹಿಡಿದರೆ ತಗೊಳ್ಳೀ ಈ ಚಾಕಲೇಟ್ ಅವನಿಗೆ ಕೊಡಿ. ಆಯ್ತೇನೋ ಬಾಬು, ನೀನು ಹೇಳಿದಂತೆಯೇ ಇವರಿಗೆ ಹೇಳಿದ್ದೀನಿ. ಸರೀನಾ ಇವತ್ತಿನಿಂದ ನೀನು ಬೆಳಗೆಲ್ಲಾ ಇಲ್ಲೇ ಇರಬೇಕು ಗೊತ್ತಾಯ್ತಾ? ಆಗಲಿ ಎಂದು […]

ಟೇಮು ಅಂದ್ರೆ ಟೇಮು: ಅನಿತಾ ನರೇಶ್ ಮಂಚಿ

ಒಂದು ಕೈಯಲ್ಲಿ ಕೋಕೋಕೋಲಾ ಮತ್ತು ರಿಮೋಟ್ ಕಂಟ್ರೋಲರನ್ನು ಬ್ಯಾಲೆನ್ಸ್ ಮಾಡುತ್ತಾ  ಇನ್ನೊಂದು ಕೈಯಲ್ಲಿ ಅಂಗೈ ತುಂಬುವಷ್ಟು ಚಿಪ್ಸನ್ನು ಹಿಡಿದುಕೊಂಡು ನೆಟ್ಟ ಕಣ್ಣಿನಲ್ಲಿ ಟಿ ವಿ ಯಲ್ಲಿ ತೋರಿಸುತ್ತಿದ್ದ ಫಿಟ್ ನೆಸ್ ಕಾರ್ಯಕ್ರಮವನ್ನು ಸೋಫಾದ ಮೇಲೆ ಮಲಗು ಭಂಗಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಸಮಯದಲ್ಲಿ  ’ಅವ್ವಾ ಲಂಗರು ಕೊಡಿ’ ಅಂದಳು ನಮ್ಮ ಮನೆಯ ಹೊಸ  ಸಹಾಯಕಿ. ಇದ್ದಕ್ಕಿದ್ದ ಹಾಗೆ ಕೇಳಿದ  ಅವಳ ಮಾತು ಕಿವಿಯೊಳಗೆ ಹೊಕ್ಕರೂ ಅರ್ಥವಾಗದೇ ಕಣ್ಣುಗಳನ್ನು ಟಿ ವಿ ಯ ಕಡೆಯಿಂದ ಬಲವಂತವಾಗಿ ತಿರುಗಿಸಿ ಅತ್ತ ಕಡೆ […]

ಜರ್ನಿ, ದಾರಿಯೊಂದೇ ಮೂರು ಸಂಗತಿಗಳು: ಅಮರ್ ದೀಪ್ ಪಿ.ಎಸ್.

ಸಂಜೆ ನಾಲ್ಕು ಇಪ್ಪತ್ತಕ್ಕೆ ಹುಬ್ಬಳ್ಳಿಯಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಲ್ಲಿ ದೆಹಲಿಗೆ  ನಮ್ಮ ಪ್ರಯಾಣವಿತ್ತು. ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಟಿಕೆಟ್ ಕನ್ಫರ್ಮ್ ಆಗಿತ್ತು.  ಇನ್ನೊಂದು ಇಲ್ಲ.  ಆಗಿಲ್ಲದ್ದೇ ನಂದು.   ನಮ್ಮ ಸ್ನೇಹಿತರೊಬ್ಬರ ಜೊತೆ ಹೋಗಿದ್ದೆ. ಆ ದಿನ ಬೆಳಗಾಂ ದಾಟಿದ ನಂತರ ಟಿ. ಸಿ. ಟಿಕೆಟ್ ಕನ್ಫರ್ಮ್ ಮಾಡಿ ಪಕ್ಕದ ಬೋಗಿಯಲ್ಲಿ ಸೀಟು ಕೊಟ್ಟಿದ್ದ.  ರಾತ್ರಿ ಎಂಟಾಗುತ್ತಿದ್ದಂತೆ ಆ ವರ್ಷದಲ್ಲೇ ಜ್ವರ ಕಾಣಿಸಿಕೊಳ್ಳದ ನನಗೆ ಜ್ವರ ಏರಿ ಓಡುವ ರೈಲಲ್ಲಿ ಪೇಚಿಗೆ ಹತ್ತಿತ್ತು.  ನನ್ನಲ್ಲಿದ್ದ […]

ಇರುವೆ ಮತ್ತು ಮಿಡತೆ: ಜೆ.ವಿ.ಕಾರ್ಲೊ

ಮೂಲ ಕತೆ: ‘The Ant and the Grasshopper’  ಲೇಖಕರು: ಡಬ್ಲ್ಯು.ಸಾಮರ್‌ಸೆಟ್ ಮ್ಹಾಮ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ನಾನು ಸಣ್ಣವನಿದ್ದಾಗ ಫ್ರೆಂಚ್ ಲೇಖಕ ಫೊಂಟೇಯ್ನಾನ ಕೆಲವು ನೀತಿ ಕತೆಗಳನ್ನು ಉರು ಹಚ್ಚಿಕೊಳ್ಳುವುದು ಕಡ್ಡಾಯವೆಂಬಂತ್ತಿತ್ತು. ಈ ಕತೆಗಳಲ್ಲಿ ಅಡಗಿರುವ ನೀತಿಯನ್ನು ನಮ್ಮ ಮನದಟ್ಟಾಗುವಂತೆ ನಮ್ಮ ಹಿರಿಯರೂ ವಿವರಿಸುತ್ತಿದ್ದರು. ಈ ಕತೆಗಳಲ್ಲಿ ನನಗೆ ಬಹಳ ಇಷ್ಟವಾದ ಕತೆ ’ಇರುವೆ ಮತ್ತು ಮಿಡತೆ’ಯದು. ಈ ಅಸಮಾನತೆಯ ಜಗತ್ತಿನಲ್ಲಿ ಕ್ರಿಯಾಶಾಲಿಗಳಿಗೆ ಜಯ, ಸೋಮಾರಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ತುಂಬಾ ಸೊಗಸಾಗಿ ಈ ಕತೆಯಲ್ಲಿ ಚಿತ್ರಿಸಲಾಗಿದೆ. ವಸಂತ […]

ಓತಿ ಮೊಟ್ಟೆಯಿಟ್ಟ ಕತೆ: ಅಖಿಲೇಶ್ ಚಿಪ್ಪಳಿ

ಹೊಸ ಮನೆ ಕಟ್ಟಿಕೊಂಡು ವಾಸವಾಗಿ ಸುಮಾರು ೨ ತಿಂಗಳು ಕಳೆದವು. ಕೃಷಿಯಿಂದ ವಿಮುಖವಾಗುತ್ತಿರುವ ಹೊತ್ತಿನಲ್ಲಿ ಮರಳಿ ಮಣ್ಣಿಗೆ ಹೋಗಿದ್ದು ಹೊಸ-ಹೊಸ ಅನುಭವಗಳನ್ನು ನೀಡುತ್ತಿದೆ. ಈಗ ಕಟ್ಟಿಕೊಂಡಿರುವ ಹೊಸ ಮನೆಯ ಹಿಂಭಾಗದಲ್ಲಿ ಸುಮಾರು ೨೦ ಗುಂಟೆಯಷ್ಟು ಜಾಗದಲ್ಲಿ ದಟ್ಟವಾದ ಅರಣ್ಯ ರೂಪುಗೊಂಡಿದೆ. ಅಗಣಿತ ಸಂಖ್ಯೆಯಲ್ಲಿ ಸಸ್ಯಗಳ ಸಂಖ್ಯೆ ವೃಧ್ದಿಸಿದೆ. ನೂರಾರು ಕಾಡಿನ ಮೇಲ್ಮನೆ ಸದಸ್ಯರು ದಿನಾ ಬೆಳಗ್ಗೆ ಸಂಗೀತ ನೀಡುತ್ತವೆ. ಹನುಂತರಾಯರ ಸಂತತಿಯೂ ಬಂದು ತಮ್ಮ ಹಕ್ಕನ್ನು ಚಲಾಯಿಸಲು ಬಯಸುತ್ತಿವೆ. ಅಳಿದು ಹೋದವೆಂದುಕೊಂಡ ಕ್ಯಾಸಣಿಲು ತನ್ನ ಉದ್ದವಾದ ಸುಂದರ […]

ಆಯ ತಪ್ಪಿದ್ರೆ ಅಪಾಯ: ಎಂ.ಎಸ್.ನಾರಾಯಣ.

                                      ಮೊನ್ನೆ  ವಾರಾಂತ್ಯಕ್ಕೆ ಗೆಳಯರೆಲ್ಲರೂ ಮೈಸೂರಿನ ನಮ್ಮ ಹಳೆಯ ಅಡ್ಡಾ, ವಿಶ್ವನ ಕ್ಯಾಂಟೀನಿನಲ್ಲಿ ಸೇರಿದ್ದೆವು. ಆಗಷ್ಟೇ ನಮ್ಮನ್ನು ಸೇರಿಕೊಂಡ ಹರೀಶ, “ಇವತ್ತಿನ್ ಬಿಲ್ ನಂದ್ಕಣ್ರಪ್ಪಾ, ಕೊನೇಗೂ ಶ್ರೀರಾಂಪುರ್ದಲ್ಲಿ ಒಂದ್ ಥರ್ಟೀಫ಼ಾಟೀ ತೊಗೊಂಡೇಬಿಟ್ಟೇ ಕಣ್ರೋ, ಬ್ಯಾಂಕ್ಲೋನ್ಗೋಡಾಡ್ತಿದೀನಿ, ಒಂದೊಳ್ಳೆ ಮುಹೂರ್ತ ನೋಡಿ ಗುದ್ಲೀ ಪೂಜೆ ಮಾಡ್ಸೋದೊಂದೇ ಬಾಕಿ ನೋಡಿ” ಅಂತ ಗುಡ್ನ್ಯೂಸ್ ಕೊಟ್ಟೇಬಿಟ್ಟ. ಎಲ್ರೂ […]

ದಾಂಡೇಲಿ ದೋಣಿಯಾನ: ಪ್ರಶಸ್ತಿ ಪಿ.

ಗೆಳೆಯನ ಮದುವೆಗೆ ಬೆಳಗಾವಿಯ ಚಿಕ್ಕೋಡಿಗೆ ಹೋಗಬೇಕೆಂದಾಗ ಪ್ರವಾಸ ಪ್ರಿಯನಾದ ನಾನು ಸಹಜವಾಗೇ ಜೈಯೆಂದಿದ್ದೆ.  ಮದುವೆಯ ಮುಂಚಿನ ದಿನ ದಾಂಡೇಲಿಗೆ ಹೋಗಿ ಅಲ್ಲಿನ ಕಾಳೀ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡೋಣ ಅಂದಾಗೆಂತೂ ತಗೋ, ಸ್ವರ್ಗಕ್ಕೆ ಮೂರೇ ಗೇಣು. ಗೆಳೆಯರ ಬಾಯಲ್ಲಿ ಈ ರಿವರ್ ರಾಫ್ಟಿಂಗ್ ಬಗ್ಗೆ ಹಲವು ಸಲ ಕೇಳಿದ್ದವನಿಗೆ ಅದನ್ನೊಮ್ಮೆ ನೋಡಬೇಕೆಂಬ ಬಯಕೆ ಮುಂಚಿಂದಲೂ ಇತ್ತೆಂದು ಬೇರೆ ಹೇಳಬೇಕಿಲ್ಲವೆಂದುಕೊಂಡು ಮುಂದುವರೆಯುತ್ತೇನೆ. .ಶುಕ್ರವಾರ ಸಂಜೆ ಐದುಮುಕ್ಕಾಲಕ್ಕೆ ಮೆಜೆಸ್ಟಿಕ್ಕಿಂದ ಹುಬ್ಬಳ್ಳಿಯ ಟ್ರೈನು. ಆಫೀಸಿಂದ ನಾಲ್ಕಕ್ಕೇ ಹೊರಟರೂ ಬೆಂದಕಾಳೂರಿನ ಟ್ರಾಫಿಕ್ಕಿಗೆ ಸಿಲುಕಿ […]

ಡುಮ್ಮಾ-ಡುಮ್ಮಿ (ಆಡಿಯೋ ಕತೆ): ಸುಮನ್ ದೇಸಾಯಿ

ಈ ಪುಟ್ಟ ಕತೆಯನ್ನು ಸುಮನ್ ದೇಸಾಯಿಯವರು ಮಕ್ಕಳಿಗಾಗಿ ಬರೆದು ಮತ್ತು ಆ ಕತೆಯನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ.  ಈ ಕತೆಯನ್ನು ಅವರ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… Suman Desai- Dumma Dummi ಹಿಂಗೊಂದ ಊರಾಗ ಡುಮ್ಮಾ-ಡುಮ್ಮಿ ಇದ್ರಂತ. ಡುಮ್ಮಗ ಒಂದಿನಾ ದ್ವಾಸಿ ತಿನಬೆಕನಿಸ್ತಂತ. ಆವಾಗ ಆಂವಾ […]