ಅಮರ್ ದೀಪ್ ಅಂಕಣ

ನಾನು ನೋಡಿದ ಚಿತ್ರ, ಚೌಕಟ್ಟು ಮೀರಿದ ಶ್ರಮ: ಅಮರ್ ದೀಪ್ ಪಿ.ಎಸ್.

ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅವರ ಶಿವಾಜಿ ಸಿನಿಮಾ ಬಂದಿತ್ತು.  ಅದರಲ್ಲಿ ರಜನಿಕಾಂತ್ ಎಲ್ಲಾ ಆಸ್ತಿ ಕಳಕೊಂಡ ನಂತರ ವಿಲನ್ ಸುಮನ್ ರಜನಿಕಾಂತ್ ಅವರಿಗೆ ಒಂದು ರುಪಾಯಿ ಕಾಯಿನ್ ಎಸೆಯುತ್ತಾನೆ. ಆ ಒಂದು ರುಪಾಯಿ ಕಾಯಿನ್ ಸಿನೆಮಾ ಅಂತ್ಯವಾಗುವವರೆಗೂ ಪದೇ ಪದೇ ಪರದೆ ಮೇಲೆ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ.  ಅದೂ ರಜನಿ ಸ್ಟೈಲಿಶ್ ನಟನೆಯೊಂದಿಗೆ.   ನನಗೆ ಪದೇ ಪದೇ ಆ ಒಂದು ರೂಪಾಯಿಯೇ  ನೆನಪಾಗುತ್ತದೆ.   ಬಿಡಿ, ಸಿನೆಮಾ ಬೇರೆ.  ಜೀವನ ಬೇರೆ. ಒಮ್ಮೊಮ್ಮೆ  ಒಬ್ಬನ […]

ಪಂಚ್ ಕಜ್ಜಾಯ ಲಲಿತ ಪ್ರಬಂಧ

ಹೀಗೊಂದು ಗೆಳೆಯರ ಬಳಗ! (ಅಳಿದುಳಿದ ಭಾಗ?!): ಗುರುಪ್ರಸಾದ ಕುರ್ತಕೋಟಿ

(ನಮ್ಮ ಗೆಳೆಯರ ಬಳಗ ಹಾಗೂ ಅಗಿನ ನನ್ನ ಅನುಭವಗಳ ಬಗ್ಗೆ  ಹಿಂದೊಮ್ಮೆ ಬರೆದಿದ್ದೆ. ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತನಾದೆ. ಅದನ್ನು ಓದಿದ ಕೆಲವು ಗೆಳೆಯರ ಆಗ್ರಹದ ಮೇರೆಗೆ, ಆ ಸಮಯದಲ್ಲಿ ನಮ್ಮ ಜೊತೆಗಿದ್ದ ಇನ್ನೂ ಕೆಲವು ವ್ಯಕ್ತಿಗಳು ಹಾಗೂ ಕೆಲವು ಮೋಜಿನ ಸಂಗತಿಗಳ ಬಗ್ಗೆ ಈಗ ಬರೆದಿದ್ದೇನೆ. ಹಿಂದಿನ ಲೇಖನ ಓದಿಯೇ ಇದನ್ನು ಓದಬೇಕೆಂದೇನು ಇಲ್ಲ. ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! 🙂 ಇಲ್ಲಿದೆ ಅದರ ಲಿಂಕ್  ***** ನಮ್ಮ ಬಳಗದ ಇನ್ನೊಂದು ಅವಿಭಾಜ್ಯ […]

ಕಥಾಲೋಕ ಪಂಜು-ವಿಶೇಷ

ಲಿಂಗೇರಿ ವಿಜಿಯ ಗುಟ್ಟು: ವಾಸುಕಿ ರಾಘವನ್

ತನ್ನ ಅಜ್ಜನ ಭಾವಚಿತ್ರದ ಮುಂದೆ ನಿಂತಿದ್ದ ವಿಜಿಯ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. "ಅಜ್ಜ, ನಿನ್ನ ಮಾತು ನಿಜ ಆಯ್ತು  ನೋಡು. ನೀನು ಹೇಳ್ತಿದ್ದ ಆ ದಿನ ಇವತ್ತು ಬಂತು" ಅಂದವನ ಕಣ್ಣಂಚು ಸ್ವಲ್ಪ ತೇವಗೊಂಡಿತ್ತು. ಅಜ್ಜ ಪಟ್ಟ ಕಷ್ಟಕ್ಕೆ, ಅನುಭವಿಸಿದ ನಿರಾಶೆ, ಅವಮಾನ, ಮೂದಲಿಕೆ ಇವೆಲ್ಲದಕ್ಕೂ ಒಂದು ಚಿಕ್ಕ ಸಮಾಧಾನ ಅನ್ನುವಂತೆ ಇತ್ತು ಆ ದಿನ. ವಿಜಿಯ ದೆಸೆಯಿಂದ ಲಿಂಗೇರಿ ಅನ್ನುವ ಆ ಪುಟ್ಟ ಹಳ್ಳಿಯ ಹೆಸರು ಜಗತ್ತಿನಾದ್ಯಂತ ಹರಡಿತ್ತು. ಯಾವುದೋ ಟಿವಿ ಚಾನಲ್ಲಿನವರು "ವಸ್ತ್ರ ಜಾದೂಗಾರ […]

ವಿಜ್ಞಾನ-ಪರಿಸರ

ಆನೆ ಜೀವನ: ಅಖಿಲೇಶ್ ಚಿಪ್ಪಳಿ

ಮೆಕ್ಸಿಕೊ ದೇಶದ ಪ್ರಜೆಯೊಬ್ಬ ದೊಡ್ಡ ಸೂಟ್‌ಕೇಸಿನಲ್ಲಿ ೫೫ ಆಮೆಗಳನ್ನು ಮತ್ತು ೩೦ ಬಣ್ಣದ ಓತಿಗಳನ್ನು ಸಾಗಿಸುವಾಗ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಾನೆ. ಮೆಕ್ಸಿಕೊ ಸಿಟಿಯಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ ಬಾರ್ಸಿಲೋನಕ್ಕೆ ಈ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ಅಲ್ಲಿಯ ಪತ್ರಿಕೆಗಳಲ್ಲಿ ವರದಿಯಾಗಿದೆ. ೫೦ ರಿಂದ ೬೦ ಸಾವಿರ ಪೌಂಡ್ ಬೆಳೆಬಾಳುವ ಈ ಪ್ರಾಣಿಗಳಲ್ಲಿ ಮೂರು ಆಮೆಗಳು ಸತ್ತು ಹೋಗಿದ್ದವು. ಮತ್ತೊಂದು ಹಾರುವ ಓತಿ ಗರ್ಭ ಧರಿಸಿತ್ತು ಎಂಬುದನ್ನು ಅಲ್ಲಿನ ವನ್ಯಜೀವಿ ತಜ್ಞರು ಹೇಳಿದ್ದಾರೆ. […]

ಕಥಾಲೋಕ

ನಮ್ಮ ದೇವರು: ಜೈಕುಮಾರ್.ಹೆಚ್.ಎಸ್

ದೇಶದ ಪ್ರತಿಷ್ಟಿತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆವರಣವದು. ದಟ್ಟ ಅರಣ್ಯವನ್ನು ನೆನಪಿಸುವ ದೇಶೀಯ ಮರಗಿಡಗಳಷ್ಟೇ ಅಲ್ಲದೆ ವಿವಿಧ ದೇಶಗಳ ಸಸ್ಯಸಂಪತ್ತನ್ನು ಹೊಂದಿದ್ದು, ಎಂಥಹ ಕಡುಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತಾ ನಳನಳಿಸುವ ಆವರಣವದು. ನೂರಾರು ಎಕರೆಯಷ್ಟು ಹರಡಿರುವ ಆವರಣದಲ್ಲಿ ವಿಜ್ಞಾನ ಪ್ರಯೋಗಾಲಯಗಳು, ಕ್ಲಾಸ್ ರೂಮುಗಳು, ವಿದ್ಯಾರ್ಥಿ ನಿಲಯಗಳು, ಕ್ಯಾಂಟೀನ್‌ಗಳು, ವಿಜ್ಞಾನಿಗಳ ವಸತಿ ನಿಲಯಗಳು ಯೋಜಿತ ರೀತಿಯಲ್ಲಿ ವಿಶ್ವದರ್ಜೆಗೆ ಸರಿಸiನಾಗಿ ಅರಣ್ಯದಂಥಹ ಆವರಣದಲ್ಲಿ ಅಡಗಿ ಕುಳಿತಂತಿವೆ.  ಅದೊಂದು ದಿನ ಮಧ್ಯಾಹ್ನದ ಹೊತ್ತು ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಸಾಗುತ್ತಿದ್ದಾರೆ. […]

ಪ್ರಶಸ್ತಿ ಅಂಕಣ

ಬ್ಲಾಗುಗಳ ಲೋಕದಲ್ಲಿ: ಪ್ರಶಸ್ತಿ ಪಿ.

ಮುಂಚೆಯೆಲ್ಲಾ ಸಾಹಿತಿಯೆಂದ್ರೆ ಅವ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವಿತೆಯನ್ನೋ, ಸಾಹಿತ್ಯಪ್ರಕಾರವನ್ನೂ ಪ್ರಸ್ತುತಪಡಿಸುವವನು, ಒಂದು ಖಾದಿ ಜುಬ್ಬ, ಜೋಳಿಗೆಯೊಂದಿಗೆ ತಿರುಗಾಡುವವನು ಎಂಬೆಲ್ಲಾ ಕಲ್ಪನೆಗಳಿರುತ್ತಿದ್ದವು.ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಈ ಪರಿಕಲ್ಪನೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ಪುಸ್ತಕಗಳ ಮೂಲಕವೇ ಜನರ ಮನಗೆಲ್ಲುತ್ತಿರುವ ಹಿಂದಿನ ಜಮಾನಾದ ಸಾಹಿತಿಗಳೊಂದಿಗೆ, ಒಂದೇ ಒಂದು ಪುಸ್ತಕವನ್ನು ಬರೆಯದಿದ್ದರೂ ತಮ್ಮ ಜಮಾನಾದ ಗೆಳೆಯರ ಬಳಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ಪೀಳಿಗೆಯ ಸಾಹಿತಿಗಳ ಉಗಮವಾಗುತ್ತಿರುವಂತೆ ಕಾಣುತ್ತಿದೆ. ಕವಿ, ಸಾಹಿತ್ಯ ಸಮ್ಮೇಳನಕ್ಕಾಗಿ ತಮ್ಮ ಸಮಯ ಮೀಸಲಿಡುವಷ್ಟು ಪುರುಸೊತ್ತಿನವರಲ್ಲ ಈ ಎರಡನೇ ಪೀಳಿಗೆಯವರು. ನವ್ಯ, […]

ಲಲಿತ ಪ್ರಬಂಧ

ಸಮೃದ್ಧ ಬದುಕಿಗೆ ಸೂತ್ರಗಳು !: ಎಸ್.ಜಿ.ಶಿವಶ೦ಕರ್

ಬೆ೦ಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನು೦ಗಿರುವುದು ಕ೦ಡು ಅಚ್ಚರಿಗೊ೦ಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎ೦ಬ ಯೋಚನೆ ಬ೦ತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು!  ವಾಹನ ಸಮುದ್ರದ ನಡುವೆ ಒ೦ದು ಕ್ಷುದ್ರ ವಾಹನದ೦ತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕ೦ಡರು! ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎ೦ಬ ಆತ೦ಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿ೦ದಿನಿ೦ದ ಜೋರಾಗಿ ಹಾರನ್ ಕೇಳಿತು. […]

ಕಾವ್ಯಧಾರೆ

ಆಲಿಸ್ ವಾಕರ್ ಳ ಮೂರು ಕವಿತೆಗಳು: ರಮೇಶ್ ಮೇಗರವಳ್ಳಿ

 *ಆಲಿಸ್ ವಾಕರ್* ಅಮೇರಿಕಾದ ಜಾರ್ಜಿಯಾದ ಈಟಾನ್ಟನ್ ನಲ್ಲಿ ೯ – ೨ – ೧೯೪೪ ರ೦ದು ಜನಿಸಿದ ಆಲಿಸ್ ವಾಕರ್ ಅಮೇರಿಕಾದ ಸುಪ್ರಸಿದ್ಧ ಕಾದ೦ಬರಿಗಾರ್ತಿ, ಕಥೆಗಾರ್ತಿ, ಕವಯತ್ರಿ, ಪ್ರಬ೦ಧಗಾರ್ತಿ ಮತ್ತು ಹೋರಾಟಗಾರ್ತಿ.  ಅವಗಢವೊ೦ದರಲ್ಲಿ ಒ೦ದು ಕಣ್ಣನ್ನು ಕಲೆದುಕೊ೦ಡ ಆಲಿಸ್ ವಾಕರ್ ಳಿಗೆ ಆಗಾಧವಾದ ಓದಿನ ಹಸಿವು. ಸಾರಾ ಲಾರೆನ್ಸ್ ಕಾಲೇಜ್ ಮತ್ತು ಸ್ಪೆಲ್ಮನ್ ಕಾಲೇಜ್ ಗಳಲ್ಲ್ಲಿ ಶಿಕ್ಷಣ ಪಡೆದ ಆಲಿಸ್ ವಾಕರ್ ಳ ಸುಪ್ರಸಿಧ್ಧ ಕಾದ೦ಬರಿ "The color purple" ಗೆ ಪ್ರತಿಷ್ಠಿತ  ಪುಲಿಟ್ಸರ್ ಬಹುಮಾನ ಮತ್ತು […]

ಕಾಮನ ಬಿಲ್ಲು

ನಮ್ಮ ಬಳಿ ಇಲ್ಲದಿರುವುದಕ್ಕೆ: ಪದ್ಮಾ ಭಟ್

ಹೈಸ್ಕೂಲು ದಿನಗಳಲ್ಲಿ ಆ ಪದ್ಯ ಓದಿದ ನೆನಪು.. ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು. ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು ಎಂಬ ಪದ್ಯದ ಹೆಸರು ಇಕ್ಕಳ ಎಂದು.. ಹೌದಲ್ವಾ.. ನಮಗೆ ಕಳೆದುಹೋಗಿದ್ದೇ ಚನ್ನಾಗಿರುತ್ತದೆ..ಚಿಕ್ಕವರಿರುವಾಗ ದೊಡ್ಡವರಾಗುವ ಕನಸುಗಳು. ದೊಡ್ಡವರಾದ ಮೇಲೆ ಬಾಲ್ಯವೇ ಚನ್ನಾಗಿತ್ತೆಂಬ ಮನಸು.. ಪ್ರತೀದಿನವೂ ಪ್ರತೀಕ್ಷಣವೂ ಸಿಗದೇ ಇರುವುದೇ ಒಳ್ಳೆಯದೆಂಬ ಮರೀಚಿಕೆ ನಮಗೆ.. ಸಿಗದಿರುವ ದ್ರಾಕ್ಷಿ ಹುಳಿಯೇ ಎಂದು ನರಿಯಂತೆ ನಾವಂದುಕೊಳ್ಳುವುದಿಲ್ಲ. . ಸಿಗದೇ ಇರುವುದೇ ಚನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ ಅಲ್ವಾ..? ಬೇರೆಯವರು ಹಾಕಿಕೊಂಡ ಬಟ್ಟೆಯೇ ಚನ್ನಾಗಿರುತ್ತದೆ.. […]

ಪಂಜು-ವಿಶೇಷ

ಮರೆಯುವುದನ್ನು ಮರೆಯುವ ಬಗೆ ಹೇಗೆ?: ಹೊರಾ.ಪರಮೇಶ್

"ಮರೆವು" ಎಂಬುದು ಜ್ಞಾನಾಸಕ್ತರಿಗೆ ಅದರಲ್ಲೂ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶತ್ರುವಂತೆ ಕಾಡುತ್ತದೆ.ಪ್ರತಿಯೊಬ್ಬರಿಗೂ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಈ "ಮರೆವು" ಉಂಟಾಗಿ ಕೆಲವೊಮ್ಮೆ ಅವಮಾನ, ಮತ್ತೆ ಕೆಲವೂಮ್ಮೆ ಅಪಘಾತ ಇನ್ನೂ ಕೆಲವು ಸಾರಿ ಆನಂದವನ್ನೇ ಉಂಟು ಮಾಡುತ್ತದೆ.ಅದಕ್ಕೆ ಮನೋವಿಜ್ಞಾನಿಗಳು "ಮರೆವು ಮನುಷ್ಯನಿಗೆ ವರವೂ ಹೌದು ಶಾಪವೂ ಹೌದು" ಎಂದಿದ್ದಾರೆ.             ನಿಜ ನಮ್ಮ ಮೆದುಳಿನಲ್ಲಿ ನಮ್ಮ ಪಂಚೇ೦ದ್ರಿಯಗಳಿಂದ ಪಡೆದ ಅನುಭವಗಳೆಲ್ಲವನ್ನು ದಾಖಲಿಸುವ ಸಾಮರ್ಥ್ಯ ಇರುತ್ತದೆ.ಆದರೆ ಆ ಧಾರಣ ಸಾಮರ್ಥ್ಯವು […]

ಸುಮ್ ಸುಮನಾ ಅಂಕಣ

ನನ್ನೊಳಗಿನ ಗೆಳತಿ: ಸುಮನ್ ದೇಸಾಯಿ

    ಅದೊಂದು ಸುಂದರ ಸಂಜೆ. ಪಾರ್ಕಿನೊಳಗ ಅವರಿಗಾಗಿ ಕಾಯಿಕೊಂಡು ಕೂತಿದ್ದೆ. ಇಗೀಗಷ್ಟೆ ಅವರ ಪರಿಚಯ ಆಗಿತ್ತು. ದಿನಾಲು ವಾಕಿಂಗ್ ಬರ್ತಿದ್ರು. ಸುಮಾರು ೫೩ ರ ಅಂಚಿನ ಅವರು, ಅದ್ರ ಹಂಗ ಅನಿಸ್ತಿದ್ದಿಲ್ಲ. ನಲವತ್ತೈದರ ಆಸು ಪಾಸು ಅನಿಸ್ತಿತ್ತು. ತಿಳಿಯಾದ ಬಣ್ಣ, ಸ್ವಲ್ಪ ಕೋಲೆನ್ನಬಹುದಾದ ಮುಖ, ಕಂಡು ಕಾಣದಂತೆ ನಗುವ ಕಣ್ಣುಗಳು, ಧೀಮಂತ ಮುಖಕ್ಕೆ ಒಪ್ಪುವ ಕನ್ನಡಕ. ಸ್ನೆಹಮಯವಾದ ಸಂಯಮದಿಂದ ಕೂಡಿದ ಮಾತುಗಳು. ಇತ್ತೀಚಿಗ್ಯಾಕೊ ಮನಸ್ಸಿಗೆ ಹತ್ತರ ಆಗ್ಲಿಕತ್ತಿದ್ರು. ಆವತ್ತ ಅವರನ್ನ ನೋಡಿದ ಮೊದಲ ದಿನ, ನನ್ನ […]

ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 30): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧)    ಮೇ – ೨೬ – ೨೦೧೪ ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ? ೨)    ಇತ್ತಿಚೆಗೆ ನಡೆದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ ? ೩)    ಪೋಲಿಯೋ ನಿರ್ಮೂಲನೆಯ ಹರಿಕಾರ ಎಂಬ ಖ್ಯಾತಿ ಪಡೆದ ಡಾ||ಹರ್ಷವರ್ಧನ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿದೆ ? ೪)    ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ […]