ಇಲ್ಲಿ ಎಲ್ಲವೂ ಬದಲಾಗುತ್ತದೆ: ನಟರಾಜು ಎಸ್. ಎಂ.

2006 ರ ಮೇ ತಿಂಗಳ 11ನೇ ದಿನ ಕೋಲ್ಕತ್ತಾದಲ್ಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಅಂದು ನಾನು ಓದುತ್ತಿದ್ದ ನ್ಯೂಸ್ ಪೇಪರ್ ನ ಮುಖಪುಟದಲ್ಲಿ ನಗುತ್ತಿರುವ ಬುದ್ಧದೇವ್ ಭಟ್ಟಾಚಾರ್ಯರ ಮುಖವನ್ನು ಕಾರ್ಟೂನ್ ಮಾಡಿ ನೂರಾ ಎಪ್ಪತ್ತೈದು ಬಾರಿ ಪ್ರಿಂಟ್ ಮಾಡಿದ್ದರು. 175 ಅಂದು ಸಿಪಿಎಂ ಪಕ್ಷ ಪಡೆದಿದ್ದ ಒಟ್ಟು ಸೀಟುಗಳ ಸಂಖ್ಯೆಯಾಗಿತ್ತು. ಸಿಪಿಎಂನ ವಿರೋಧಪಕ್ಷವಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ ಕಾಂಗ್ರೆಸ್ ಕೇವಲ 30 ಸೀಟುಗಳನ್ನು ಪಡೆದಿತ್ತು. ಒಟ್ಟು 294 ಸೀಟುಗಳಿರುವ ಬೆಂಗಾಳದ ವಿಧಾನ ಸಭೆಯಲ್ಲಿ … Read more

ಆಡಿಯೋ ಸಹಿತ ಪಂಜು ಕಾವ್ಯಧಾರೆ

ಕನ್ನಡ ನಾಡಿನಲಿ  ಶ್ರೀಗಂಧದ ನಾಡಿನಲಿ ಸಹ್ಯಾದ್ರಿಯ ಗೂಡಿನಲಿ ಕಾವೇರಿಯ ಮಡಿಲಿನಲಿ ನನ್ನದೊಂದು ಪುಟ್ಟ ಗುಡಿಸಲು ಕನ್ನಡ ನುಡಿಯು ಮಿನುಗುವುದಲ್ಲಿ ಹಸಿರು ತೋರಣದೊಲು ಹಸಿರನುಟ್ಟ ಭುವನಗಿರಿ ಮುಡಿಯಲಿಟ್ಟು ನವಿಲುಗರಿ ಹಕ್ಕಿಗೊರಲ ತಬ್ಬಿ ಹಿಡಿದು ಚಂದಿರನ ಗಿಲಕಿ ಬಡಿದು ನನ್ನ ಹ್ರುದಯ ಕನ್ನಡವನೆ ಮಿಡಿಯುವುದು ನನ್ನ ಮಡದಿ ಮತ್ಸ್ಯಕನ್ಯೆ ಬಳೆಯ ಸದ್ದು ಗೆಜ್ಜೆನಾದ ಅಡಿಗಡಿಗೂ ಕನ್ನಡ ಸುತನ ಪ್ರವರ ತೊದಲು ನುಡಿಯಲಿ ಸವಿಜೇನು ಕನ್ನಡ ನಮ್ಮ ಮನೆಯ ಅಂಗಳದಿ ಪ್ರಜ್ವಲಿಪುದು ಕನ್ನಡ ರಾಷ್ಟ್ರನುಡಿ ರಾಜನುಡಿ ಯಾವುದಾದರೇನು ದಾಯಾದಿಗಳ ನುಡಿಯ ನಡೆಯು … Read more

ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ: ಭಾಗ್ಯ ಭಟ್

ಎಲ್ಲಿ ನೋಡಿದರಲ್ಲಿ ಹಸಿರ ಸೊಬಗು… ದಾರಿಯುದ್ದಕೂ ಮನವ ಮುದ್ದಿಸೋ ತಂಪು ಗಾಳಿಯ ಇಂಪು… ತಿಳಿ ನೀಲ ಆಗಸದಿ ಮೆರವಣಿಗೆ ಹೊರಡೋ ಮೋಡಗಳು… ಚಂದದ ಊರಿದು, ಪಕ್ಕಾ ಮಲೆನಾಡ ತಂಪ ಉಣಬಡಿಸೋ ಕಾಫೀ ನಾಡು. ಅದೆಷ್ಟೋ ಚಂದದ ಬೆಟ್ಟ ಗುಡ್ಡಗಳಿಂದ ಕಣ್ಮನ ತಣಿಸುತಿರೋ ಚಿಕ್ಕಮಗಳೂರ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕಲ್ಲತಗಿರಿಗಳ ಸುತ್ತೋ, ನಿಸರ್ಗದ ಅಚ್ಚರಿಗಳ ಸಮೀಕರಿಸೋ ಸಣ್ಣದೊಂದು ಭಾಗ್ಯ ಸಿಕ್ಕಿದ್ದು ಇಲ್ಲಿಗೆ ಬಂದು ವರ್ಷವೊಂದಾದ ಮೇಲೆ.. ಇಲ್ಲಿ ದಕ್ಕಿದ್ದ, ಪಡೆದುಕೊಂಡ ಚಂದದ ಅನುಭವಗಳ ಪದಗಳಲಿ ಹಿಡಿಯೋದು ಕಷ್ಟವೇನೋ…. ಈ … Read more

ನಿಯತ್ತಿನ ಘರ್ಷಣೆ: ಪಾರ್ಥಸಾರಥಿ ಎನ್.

ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,ತಂಗಿ ಓದುತ್ತ ಕುಳಿತಿರಬಹುದು. ಆದಿನದ ಮಟ್ಟಿಗೆ ಕೆಲಸವೇನು ಬಾಕಿ ಇರಲಿಲ್ಲ. ಸರಿ ಹೊರಡೋಣವೆಂದು ಎದ್ದು ನಿಂತ. ಅವನ ಸ್ನೇಹಿತ ಶ್ರೀನಾಥ ಇವನತ್ತ ನೋಡಿದ, ಏನು ಹೊರಟೆ ಅನ್ನುವಂತೆ. ಇಬ್ಬರೂ ಸೇರಿ ದೂರದ ಆ ನಾಡಿನಲ್ಲಿ ಮನೆ ಮಾಡಿದ್ದರು.  "ನಾನು ಹೊರಟಿರುತ್ತೇನೆ"  ಗುರು ನುಡಿದ,  ಶ್ರೀನಾಥನತ್ತ ನೋಡುತ್ತ.  ಶ್ರೀನಾಥ … Read more

ಹಂಗುಗಳಾಚೆಯ ’ಪಾಪಿ’ ಪದ್ಯಗಳು: ಜ್ಞಾನೇಂದ್ರ ಕುಮಾರ್

ಯಾವ ವಿಮರ್ಶಕನ ಪುತ್ಥಳಿಯನ್ನೂ  ಯಾವ ಊರ ಸರ್ಕಲಿನಲ್ಲೂ ಇಡುವುದಿಲ್ಲ – ಅನ್ನುತ್ತಲೇ ವಿಮರ್ಶೆಯ ಹಂಗಿನಾಚೆ ಬರೆಯುತ್ತಿರುವವರು ತಾವು ಎಂದು ಘೋಷಿಸಿಕೊಳ್ಳುವ ಕವಿ ಚಕ್ರವರ್ತಿ ಚಂದ್ರಚೂಡ್, ಪದ್ಯ ಹೆಣಿಗೆಯ ಖಚಿತ ಚೌಕಟ್ಟುಗಳಾಚೆಯೇ ನಿಂತು ಬರೆಯುತ್ತಿರುವವರು. ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿಯವರ "ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)" ಕವನ ಸಂಕಲನ ಇದಕ್ಕೊಂದು ನಿದರ್ಶನ.  * ಇಲ್ಲಿನ ಪದ್ಯಗಳನ್ನು ಓದುವಾಗ ಸಾವಿನ ಮನೆಯ ಚಟುವಟಿಕೆಯಂತೆ ವಿಲಕ್ಷಣ ಅನುಭವ ಉಂಟಾಗುತ್ತದೆ. ಅದೊಂದು ಬಗೆಯ ಸತ್ಯದ ಮುಖಾಮುಖಿ, ನಿರಾಕರಿಸುತ್ತಲೇ ಒಪ್ಪಿಕೊಳ್ಳುವ ಬಗೆ ಹಾಗೂ ನಮಗೂ … Read more

ಹಾಡಿನಲ್ಲಿ ಭಾವಗಳ ಸಂಗಮವಿದೆ: ಪದ್ಮಾ ಭಟ್.

ಹುದುಗಲಾರದ ದುಃಖ ಹುದುಗಿರಿಸಿ ನಗೆಯಲ್ಲಿ ನಸು ನಗುತ ಬಂದೆ ಇದಿರೋ.. ಇನಿತು ತಿಳಿಯದ ಮೂಢನೆಂದು ಬಗೆದೆಯೋ ನನ್ನ. ಹೀಗೆ ಕಿವಿ ಮೇಲೆ ಬೀಳುತ್ತಿರುವ ಹಾಡನ್ನು ಕೇಳುತ್ತಾ ..ನಮಗೆ ನಾಳೆ ಪರೀಕ್ಷೆ ಎನ್ನೋದನ್ನೇ ಮರೆತು ಬಿಟ್ಟಿದ್ದೆ..ಪುಸ್ತಕವನ್ನು ಮಡಚಿ ಬದಿಗಿಟ್ಟು ಕೇಳುತ್ತ ಕೂರುವುದೊಂದೇ ಕೆಲಸ..ಈ ಹಾಡುಗಳು ಎಂತಹ ವಿಚಿತ್ರ ಅಲ್ವಾ? ಮನಸಿನ ಒಂದಷ್ಟು ದುಃಖವನ್ನು ನೋವನ್ನು ಮರೆಯಿಸುವ ಶಕ್ತಿಯಿದೆ. ಭಾವಗೀತೆಗಳನ್ನು ಕೇಳುವಾಗ ನನ್ನ ಬಗ್ಗೆಯೇ ಬರೆದಿದ್ದಾರೆಯೋ ಎನ್ನಸುವಷ್ಟು ಹತ್ತಿರದಿಂದ ಅನುಭವಿಸಿದ್ದುಂಟು.. ಅದೇ ಆ ಒಂಟಿ ರೂಂನಲ್ಲಿ ಹಾಡಿನ ನೆನಪುಗಳ ಕಲರವಗಳಿವೆ.. … Read more

ಕಾಳಮಂಜಿ ಗುಡ್ಡ, ಉರಿಸೆಖೆ ಮತ್ತು ಆಹಾರಭದ್ರತೆ: ಅಖಿಲೇಶ್ ಚಿಪ್ಪಳಿ

ಅರೆಮಲೆನಾಡಿನ ಸ್ನೇಹಿತರೊಬ್ಬರು ಮಲೆನಾಡಿಗೆ ಬಂದಿದ್ದರು. ಸಾಗರದಂತಹ ಮಲೆನಾಡಿನಲ್ಲಿ ಈ ಪರಿ ಸೆಖೆಯಿದೆ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ. ಇದಕ್ಕೇನು ಕಾರಣ ಎಂದು ಕೇಳಿದರು. ಇದನ್ನು ಸ್ವಲ್ಪ ಸುತ್ತಿ-ಬಳಸಿ ಹೇಳುವುದು ಒಳ್ಳೆಯದು ಎಂದು ತೋರುತ್ತದೆಯೆಂಬ ಕಾರಣಕ್ಕೆ ಉದಾಹರಣೆಯನ್ನು ನೀಡುವುದು ಅನಿವಾರ್ಯವಾಯಿತು.  ೧೯೭೪-೭೫ರಷ್ಟು ಹಿಂದಿನ ಘಟನೆಯಿದು. ಲಿಂಗನಮಕ್ಕಿಯಿಂದ ಎ.ಬಿ.ಸೆಟ್‌ವರೆಗೆ ಹಾಗೆಯೇ ಎ.ಬಿ.ಸೆಟ್‌ನಿಂದ ಲಿಂಗನಮಕ್ಕಿಯವರೆಗೆ ನೀರು ಸಾಗಣೆಗಾಗಿ ಒಂದು ಚಾನೆಲ್ ನಿರ್ಮಿಸುವ ಯೋಜನೆ ತಯಾರಾಯಿತು.  ಈ ಯೋಜನೆಗೆ ಸೆಂಟ್ರಲ್ ಆಡಿಟ್ ಚಾನೆಲ್ ಎಂದು ಹೆಸರಿಡಲಾಯಿತು. ಈಗಿನ ಹಾಗೆ ತಂತ್ರಜ್ಞಾನ ಮುಂದುವರೆದು ಆಧುನಿಕ ರಾಕ್ಷಸ … Read more

ಈರಬದ್ದೇವ್ರು ಮತ್ತು ಇದ್ದೂ ಇರಬಾರದಂಥ ಭಕ್ತಿ: ಅಮರ್ ದೀಪ್ ಪಿ.ಎಸ್.

"ಭಾವದಲೊಬ್ಬ ದೇವನ ಮಾಡಿ….  ಮನದಲ್ಲೊಂದು ಭಕ್ತಿಯ ಮಾಡಿ  ಕಾಯದ ಕೈಯಲಿ ಕಾರ್ಯವೂ ಉಂಟೆ? ವಾಯಕೆ ಬಳಲುವರು ನೋಡ …..  ಎತ್ತನೇರಿ ಎತ್ತನರಸುವರು  ಎತ್ತ ಹೋದರಯ್ಯ ..ಗ಼ುಹೇಶ್ವರ….. "  ಅಲ್ಲಮ ಪ್ರಭು ಅವರ ವಚನ ಸಾಹಿತ್ಯವನ್ನು ನನ್ನ ಮೆಚ್ಚಿನ  ಹುಡುಗನೊಬ್ಬ  ಹಾಡುವುದನ್ನು ಆಗಾಗ  ಕೇಳುತ್ತಲೇ ಇದ್ದೆ.. ಅದು ಈ ಬರಹಕ್ಕೆ ಎಷ್ಟರ ಮಟ್ಟಿಗೆ ಹೊಂದುತ್ತದೋ ಇಲ್ಲವೋ ಗೊತ್ತಿಲ್ಲ.. ಆದರೆ ಈ  ಬರಹ ಬರೆಯುವ ಹೊತ್ತಿಗೆ ಈ ಹಾಡು ನನ್ನನ್ನ್ನು ಬಹುವಾಗಿ ಕಾಡಿದ್ದಂತೂ ಸತ್ಯ.   ಹೊಸಪೇಟೆ ದಾಟಿ ಮರಿಯಮ್ಮನಹಳ್ಳಿ … Read more

ಹಾದಿ ದೂರವಿದೆ ಇನ್ನೂ, ಭವ್ಯ ಭಾರತಕ್ಕೆ: ಪ್ರಶಸ್ತಿ ಪಿ.

ಮುಂದುವರೆಯೋ ಮುನ್ನವೇ ಹೇಳಿಬಿಡುತ್ತೇನೆ. ಇದು ಬರಹಕ್ಕೆ ಕೇಸರಿ, ಹಸಿರು ಅಥವಾ ಇನ್ಯಾವುದೇ ಬಣ್ಣ ಬಳಿಯೋ ಪ್ರಯತ್ನವಲ್ಲ. ಕಮಲ, ಹಸ್ತ, ಆನೆ, ಕತ್ತಿ, ಪೊರಕೆ ಅಥವಾ ಇನ್ಯಾವುದೇ ಚಿನ್ನೆ ತೊಡಿಸೋ ಪ್ರಯತ್ನವಲ್ಲ.  ಧರ್ಮ, ರಾಜ್ಯ, ಪಕ್ಷಗಳೆಂಬ ಬೇಧಗಳ ಹೊರಬಂದು ವಾಸ್ತವದ ಅನಿವಾರ್ಯತೆಗಳೇನಿದೆಯೆಂಬುದನ್ನು ಬಿಂಬಿಸೋ ಅಗತ್ಯವಷ್ಟೇ .ಮೂವತ್ತು ವರ್ಷಗಳ ಕಿಚಡಿ ಸರ್ಕಾರಗಳ ನಂತರ ಕೊನೆಗೂ ಭಾರತಕ್ಕೊಂದು ಸುಭದ್ರ ಸರ್ಕಾರ ಸಿಕ್ಕಿದೆ. ಕಾಂಗ್ರೆಸ್ಸಾಗಲಿ, ಭಾಜಪಾವೇ ಆಗಲಿ. ಆದ್ರೆ  ಸದಾ ಸ್ಟ್ರೈಕೇ ಮಾಡೋ ಕಮ್ಯೂನಿಸ್ಟು, ಮಾರ್ಕಿಸ್ಟು, ಲೆಫ್ಟಿಸ್ಟುಗಳ ಕಾಲು ಹಿಡಿಯೋ ಕರ್ಮದ ಚಿತ್ರಾನ್ನ … Read more

ಸಾಮಾನ್ಯ ಜ್ಞಾನ (ವಾರ 28): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು? ೨.    ಕನ್ನಡ ವಡ್ಸ್‌ವರ್ತ್‌ರೆಂದು ಖ್ಯಾತರಾದವರು ಯಾರು? ೩.    ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪೆನಿ ಯಾವುದು? ೪.    ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು? ೫.    ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು? ೬.    ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ? ೭.    ಭಾರತ ಸರ್ಕಾರವು ರೂರಲ್ ಎಲ್‌ಕ್ಟ್ರಿಫಿಕೇಶನ್ ಕಾರ್ಪೋರೇಷನ್‌ನ್ನು (ಖಇಅ) ಸ್ಥಾಪಿಸಲಾದ ವರ್ಷ ಯಾವುದು? ೮.   … Read more

ಕೊಡಬಹುದ್ದಾದ್ದದ್ದು ದುಡ್ಡು ಒಂದನ್ನ?: ಹೇಮಲತಾ ಪುಟ್ಟನರಸಯ್ಯ

ಫೇಸ್ಬುಕ್ ನಲ್ಲಿ ಒಂದು ಫೋಟೋ ಚಿಂದಿ ಆಯುವ ಕೆಳಸ್ಥರದ  ಹೆಂಗಸು ತನಗೆ ದಕ್ಕಿದ ಒಂದು ಹೊತ್ತಿನ ಊಟವನ್ನು ಬೀದಿ ನಾಯಿಯೊಂದಿಗೆ ಹಂಚಿಕೊಂಡು ತಿನ್ನುತ್ತಿರುವುದು.  ಎಂತವರಿಗೂ ಕಾಡುವ ಚಿತ್ರ. ಈ ತರದ ಸನ್ನಿವೇಶವನ್ನು ಕಣ್ಣಾರೆ ಹಲವು ಬಾರಿ ನೋಡಿರ್ತಿವಿ.  ಜೊತೆಜೊತೆಗೆ ಮನೆಗೆ ಬಂದ ನೆಂಟರಿಗೆ ಬಾಯಿ ಮಾತ್ತಲ್ಲಾದರು  ಊಟ ಮಾಡಿ ಎನ್ನದ, ತಿಂಡಿ ಮನೆಯವರಿಗಷ್ಟೇ ಎಂದು ಎತ್ತಿಟ್ಟುಕೊಂಡ ಪೈಸೆ ಟು ಪೈಸೆ ಜನರನ್ನು ಅನುಭವ ಮಾಡಿಕೊಂಡಿರ್ತೀವಿ.  ಫೇಸ್ಬುಕ್ ನಲ್ಲಿ  ಫೋಟೋ ಶೇರ್ ಮಾಡಿದಾಕ್ಷಣ ನಾವು generous ಆಗಿಬಿಟ್ವಿ ಅಂತೇನು ಆಗಬೇಕಿಲ್ಲ … Read more

ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳೋತ್ಸವ ಕಾರ್ಯಕ್ರಮ: ವಿಶ್ವನಾಥ ಕೆ.ಎಂ.

ಸಾರ್ವಜನಿಕ ಶಿಕ್ಷಣ ಶಿಕ್ಷಣ ಯಾದಗಿರಿ, ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್‌ನ ಅಡಿಯಲ್ಲಿ ಯಾದಗಿರಿ  ತಾಲೂಕಿನ ಆಯ್ದ ಶಾಲೆಗಳಲ್ಲಿ ಇದೀಗ ಮಕ್ಕಳೋತ್ಸವ ಎನ್ನುವ  ವಿನೂತನ ಬೇಸಿಗೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ.  ಕಾರ್ಯಕ್ರಮದ ಹಿನ್ನಲೆ ಮಕ್ಕಳಿಗೆ ಶಾಲೆಯ ಬಗ್ಗೆ ಆಸಕ್ತಿ ಮೂಡಿಸುವುದು. ಶಾಲಾ ವಾತವರಣದಲ್ಲಿ ಮಕ್ಕಳಿಗೆ ಉತ್ತಮ ಶಾಲೆಯ ಕಲ್ಪನೆ ಕೊಡುವುದು. ಹೊರಗಿನ ಪ್ರಪಂಚಕ್ಕೆ ಮಕ್ಕಳ ಜ್ಞಾನವನ್ನು ಬೆಳೆಸುವುದು. ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವುದು. ವಿವಿಧ ರೀತಿಯ ಹಬ್ಬಗಳ ಬಗ್ಗೆ ಮಾಹಿತಿ ನೀಡುವುದು. ದಿನ ವಿಶೇಷಗಳ … Read more

ಪಥ್ಥರ್ ದಿಲವಾಲೆ ಫಡ್ಡು (ಗುಂಡಪಂಗಳಾ): ಸುಮನ್ ದೇಸಾಯಿ

ಹೋದವಾರ ಸಂಜಿಮುಂದ ನಮ್ಮ ತಮ್ಮ ತನ್ನ ಗೆಳೆಯಾ ರಮ್ಯಾ(ರಮೇಶ)ನ್ನ ಕರಕೊಂಡ ನಮ್ಮನಿಗೆ ಬಂದಿದ್ದಾ. ಅವತ್ತ ರವಿವಾರಾ ಮುಂಝಾನೆ ದ್ವಾಸಿ ಮಾಡಿದ್ದೆ. ಇನ್ನು ಹಿಟ್ಟು ಉಳದಿತ್ತು. ನನ್ನ ತಮ್ಮಾ ಅಕ್ಕಾ ಹಸಿವ್ಯಾಗಲಿಕತ್ತದ ಎನರೆ ಮಾಡಿಕೊಡು ಅಂದಾ ಅದಕ್ಕ ನಾ " ತಡಿ ಮುಂಝಾನಿದು ಹಿಟ್ಟ ಅದ ಬಿಸಿ ಬಿಸಿ ಫಡ್ಡ ಮಾಡಿಕೊಡತೇನಿ ಅಂದೆ" ಅದಕ್ಕ ಅವನ ಗೇಳೆಯಾ ಘಾಬರ್ಯಾಗಿ "ಅಕ್ಕಾರ ನಿಮಗ ಕೈ ಮುಗಿತೇನಿರಿ ನೀವ ಎನ್ಕೊಟ್ರು ತಿಂತೇನಿ ಆದ್ರ ಫಡ್ಡ ಮಾತ್ರ ಕೋಡಬ್ಯಾಡ್ರಿ ಅಂದು ಮಾರಿ ಹುಳ್ಳಗ … Read more