Facebook

Archive for 2014

ನಿಮ್ಮ ಸಾಹಿತ್ಯಕ್ಕೆ ಆಡಿಯೋ ರೂಪ ಕೊಡಿ…

ಮೊನ್ನೆ ಓದಲು ಸಿಕ್ಕ ಗೆಳೆಯರೊಬ್ಬರ ಪುಸ್ತಕದಲ್ಲಿ ಇಂಗ್ಲೀಷ್ ಕವಿತೆಯೊಂದರ ಸಾಲಿತ್ತು. ಆ ಕವಿತೆಯ ಸಾಲು ತುಂಬಾ ಇಷ್ಟವಾದ ಕಾರಣ ಪೂರ್ಣ ಕವಿತೆಗಾಗಿ ಗೂಗಲ್ ಸರ್ಚ್ ಮಾಡಿದೆ. ಆ ಕವಿತೆ poetry foundation ಎಂಬ ವೆಬ್ ತಾಣದಲ್ಲಿ ಓದಲು ಸಿಕ್ಕಿತು. ಓದಲು ಸಿಕ್ಕಿದ ಕವಿತೆಯ ಜೊತೆಗೆ ಆಡಿಯೋ ಫೈಲ್ ಸಹ ಇತ್ತು. ಆ ಫೈಲ್ ಕ್ಲಿಕ್ ಮಾಡಿ ಕೇಳಿದೆ. ಇದೇ ತರಹದ ಪ್ರಯೋಗವನ್ನು ಪಂಜುವಿನಲ್ಲಿ ಯಾಕೆ ಮಾಡಬಾರದು ಎಂದುಕೊಂಡಿದ್ದೇ ನನ್ನ ಹತ್ತಿರವಿದ್ದ ಹಾಡೊಂದರ ಫೈಲ್ ಅನ್ನು ಪಂಜುವಿಗೆ ಅಪ್ […]

ಉಳಿತಾಯ: ಅನಿತಾ ನರೇಶ್ ಮಂಚಿ

ಅತ್ತ ಕಡೆಯಿಂದ ಚಿಕ್ಕಿಯ ಫೋನ್. ಹೇಗಿದ್ದರೂ ಅರ್ಧ ಗಂಟೆಗಿಂತ ಕಮ್ಮಿ ಮಾತನಾಡಿ ನಮಗಿಬ್ಬರಿಗೂ ಗೊತ್ತೇ ಇಲ್ಲ. ’ಲೈನಲ್ಲಿರು ಬಂದೇ’ ಎಂದು ಕೂಗಿ ಅಡುಗೆ ಮನೆಗೆ ನುಗ್ಗಿ ಸ್ಟವ್ ಆಫ್ ಮಾಡಿ, ಪಕ್ಕದ ಕೋಣೆಯ ಫ್ಯಾನ್ ನಿಲ್ಲಿಸಿ ಮತ್ತೆ ಲ್ಯಾಂಡ ಫೋನಿನ ರಿಸೀವರ್ ಕೈಯಲ್ಲಿ ಹಿಡಿದು ಲ್ಯಾಂಡಾದೆ. ನಮ್ಮ ಪಕ್ಕದ ಮನೆಯ ದನಗಳಿಗೆ ತಿನ್ನಲು ಹಾಸನದಿಂದ ತರಿಸಿದ ಒಣ ಹುಲ್ಲಿನ ಬಣ್ಣದಿಂದ ಹಿಡಿದು ಮೊನ್ನೆ ನಮ್ಮನೆ ನಾಯಿಯ ಬಾಯಿಗೆ ಸಿಕ್ಕಿ ಸತ್ತ ಹೆಗ್ಗಣದ ಬಾಲದವರೆಗಿನ ಕಥೆ ನನ್ನ ಕಡೆಯಿಂದ […]

ಪಂಜು ಕಾವ್ಯಧಾರೆ

ದೇವನೊಲಿದ ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ- 'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ' ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ ಪ್ರಾರ್ಥಿಸಿದೆ ದೇವರಿಗೆ-  'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ' ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ […]

ಸನ್ಯಾಸಿಯ ಮಗು: ಗಣೇಶ್ ಖರೆ

"ಅವ್ವಾ.. ಅವ್ವಾರ ತಿನ್ನಾಕ ಒಸಿ ನೀಡ್ರೀ.. ಹೂಟ್ಟಿ ಹಸಿದೈತಿ ಎನಾರ ಕೊಡ್ರಿ ಮನಿಗೆ ಒಳ್ಳೆದಾಕೈತಿ…" ಬೆಳಿಗ್ಗೆ ಮುಂಚಾ ಅಂಗಳದಾಗ ಅನಾಮಧೇಯ ಧ್ವನಿ ಕೇಳಾಕತ್ತಿತ್ತು. "ಬೆಳಿಗ್ಗೆ ಆಗೋ ಪುರುಸೊತ್ತಿಲ್ಲ ಮನಿ ಬಾಗಿಲನಾಗ ಬಂದು ಬೇಡಾಕ್ ಸುರು ಆತು" ಅಂತ ಬಯ್ಕೋತ ಸೀತವ್ವ ಸಿಟ್ನಾಗ ಹೊರಗಡೆ ಮುಖಾನೂ ಹಾಕ್ದೆ ಹಿತ್ತಲಮನಿ ಕಡಿಗೆ ಹೋದ್ಲು..  "ಉಳದಿದ್ದು ಬಳದಿದ್ದು ಎನಾರ ನಡಿತೈತಿ, ಒಸಿ ನೀಡ್ರಿ ಹೊಟ್ಟಿ ಹಸದೈತಿ ಕೊಡೋರಿಗೆಲ್ಲಾ ಸಿಕ್ಕಪಟ್ಟೆ ಕೊಟ್ಟೀರಿ, ದೇವ ಧರ್ಮಾ ಎಲ್ಲಾ ಮಾಡೀರಿ ನನಗೂ ತುಸಾ ನೀಡ್ರಿ, ಕೂಸಿಲ್ಲದ […]

ಬೆಳಕಿನ ಕಡೆಗೆ: ಸುಮನ್ ದೇಸಾಯಿ

ಭಾಳ ವರ್ಷದ್ದ ಮ್ಯಾಲೆ ನಮ್ಮ ಅಮ್ಮನ ತವರೂರಾದ ಹಳ್ಳಿಗೆ ಹೊಗಬೇಕಾದ ಪ್ರಸಂಗ ಬಂತು. ಸಣ್ಣಂದಿರತ ಅಲ್ಲೆ ಆಡಿ ಬೆಳೆದು ದೊಡ್ಡವರಾದ ಸಿಹಿ ನೆನಪುಗಳ ಗಂಟನ ಇತ್ತು. ಊರು ಹೇಂಗೆಂಗ ಹತ್ರ ಬರಲಿಕತ್ತು ಹಂಗಂಗ ಹಳೆನೆನಪುಗಳು ತಾಜಾ ಆಗಲಿಕ್ಕತ್ತುವು. ಊರು ಅಂದಕೂಡಲೆ ಪ್ರೀತಿಯ ಗೆಳತಿ ಸುಧಾ ನೆನಪಾಗಲಿಕತ್ತಳು.  ಗಂಡ, ಮನಿ ಮಕ್ಕಳು ಸಂಸಾರ ಅಂತ ನಂದೆ ಆದಂಥಾ ಲೋಕದೊಳಗ ಮುಳುಗಿ ಹೋಗಿದ್ದೆ. ಹಿಂಗಾಗಿ ಊರಿನ ಯಾವ ಸುದ್ದಿಗೊಳು ಗೊತ್ತಾಗ್ತನ ಇರಲಿಲ್ಲ. ಆವಾಗೊಮ್ಮೆ ಇವಾಗೊಮ್ಮೆ ಊರಿನ ಸುದ್ದಿ ಕಿವಿಗೆ ಬಿಳತಿದ್ವು. […]

ನೂರರ ಕಸಾಪ ತೊಡಬೇಕಾಗಿರುವ ರೂಪ: ಪ್ರದೀಪ್ ಮಾಲ್ಗುಡಿ

ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಯ ಉದ್ದೇಶದಿಂದ ೦೫/೦೫/೧೯೧೫ರಂದು  ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದಿಗೆ ಕಸಾಪಗೆ ೯೯ ವರ್ಷಗಳು ತುಂಬಲಿವೆ. ಅಂದಿನ ಉದ್ದೇಶಗಳೆಲ್ಲ ಇಂದಿಗಾದರೂ ಈಡೇರಿದೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಈ ಸಮಯದಲ್ಲಿ ೨೩ ಅಧ್ಯಕ್ಷರ ಅವಧಿ ಮುಗಿದು, ೨೪ನೆಯವರು ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆಯನ್ನು ಹೊರತು ಪಡಿಸಿದರೆ […]

ನಾರಾಣಾಚಾರಿ ಕಾಂಪೌಂಡಿನ ಅತೃಪ್ತ ಆತ್ಮ ಮತ್ತು ನಾನು: ಅಮರ್ ದೀಪ್ ಪಿ.ಎಸ್.

ನಿಮ್ ಹೆಸರೇನ್ ಸರ?  ಯಾವ್ ಊರು? ಈ ಊರಿಗೆ  ಬಂದ್ ಎಷ್ಟ್ ವರ್ಸಾತು? … ಮದ್ವೆ ಆಗೇದೋ? ಎಷ್ಟು ಮಕ್ಳು ?  ಹೀಗೆ ಒಬ್ಬ ಮುದುಕ ಎನ್ಕ್ವೈರಿ ಮಾಡುತ್ತಿದ್ದ.  ಯಜ್ಮಾನ, ನಾನ್ ಪರೀಕ್ಷೆಗೆ ಕುಂತಿಲ್ಲೋ ಯಪ್ಪಾ, ಒಂದೊಂದ್ ಪ್ರಶ್ನೆ ಕೇಳು ಅಂದೆ.   "ಆತು ಹೇಳಪಾ" ಅಂದ.   ಆ ವಯಸ್ಸಾದ ಮುದುಕ ಬರೀ ಒಂದು ಪಂಜೆ, ಮೇಲೊಂದು  ಬನೀನು ಹೆಗಲ ಮೇಲೊಂದು ಟವೆಲ್ ಹಾಕಿ ಕೊಂಡು ಬಸವಣ್ಣ ಸರ್ಕಲ್ ಬಳಿಯ ಸೈಕಲ್ ಶಾಪ್ ಕಟ್ಟೆಗೆ ಕೂತು ವಿಚಾರಿಸುತ್ತಿದ್ದ.  ನೋಡುತ್ತಿದ್ದಂತೆಯೇ […]

ಬಾಳೇಕಾಯಿ ರಂಗಪ್ಪನ ಕತೆಗಳು: ಪ್ರಶಸ್ತಿ ಪಿ.

ಬಾಳೇ ಹಣ್, ಬಾಳೇ ಹಣ್.. ನೇಂದ್ರ ಬಾಳೆ, ಮೈಸೂರ್ ಬಾಳೆ, ಪುಟ್ ಬಾಳೆ, ಏಲಕ್ಕಿ ಬಾಳೆ, ವಾಟ್ ಬಾಳೆ.ಬಾಳೆ ಹಣ್.. ಬಾಳೇ ಹಣ್.. ಬೀದಿ ಬೀದಿ ಕೂಗಿ ಕೂಗಿ ರಂಗಪ್ಪನ ಬಾಳೇ ಹಣ್ಣಾಗಿಹೋಗಿತ್ತು. ಈ ಬಾಳೇ ಹಣ್ಣಿನ ಕೂಗು ಸಂಜೆ ಹೊತ್ತಿಗೆ ಬರ್ತಾ ಇದ್ರೆ ಬೀದಿ ಹುಡುಗ್ರೆಲ್ಲಾ ಆ ಗಾಡಿಗೆ ಮುತ್ತಾ ಇದ್ರು. ರಂಗಪ್ಪನ ಮನೆಯೂ ಈ ಬೀದಿಯ ಹತ್ರವೇ ಇದ್ದಿದ್ರಿಂದಲೋ, ಆ ಬೀದಿಯ ಚಿಳ್ಳೆ ಪಿಳ್ಳೆ ಹುಡುಗ್ರ ಜೊತೆ ಮಾತಾಡೋದ್ರಲ್ಲಿ ಸಿಗೋ ಅದಮ್ಯ ಸುಖಕ್ಕೋಸ್ಕರವೋ ಗೊತ್ತಿಲ್ಲ […]

ವಿಚಿತ್ರಗಳು-ವಿಕೃತಿಗಳು: ಅಖಿಲೇಶ್ ಚಿಪ್ಪಳಿ

ಈ ಮನುಷ್ಯರಲ್ಲಿ ಜಾತಿಯನ್ನು ಯಾರು ಹುಟ್ಟು ಹಾಕಿದರೋ? ಎಲ್ಲರೂ ಉಸಿರಾಡುವುದು ಗಾಳಿಯನ್ನೇ! ತಿನ್ನುವುದು ಅನ್ನ, ಕುಡಿಯುವುದು ನೀರು. ಆದರೂ ಜಾತಿ-ತಾರತಮ್ಯ, ಮೇಲು-ಕೀಳು ಎಲ್ಲಾ ಹೊಲಸುತನದ ಪರಮಾವಧಿ. ಸರ್ಕಾರಗಳೂ ತಮ್ಮ ಲಾಭಕ್ಕೋಸ್ಕರ ಜಾತಿಯನ್ನು ಪೋಷಿಸುವ ವ್ಯವಸ್ಥಿತ ಕಾರ್ಯವನ್ನು ಮಾಡುತ್ತವೆ. ಶಾಲೆಗೆ ಸೇರಿಸುವಾಗಲೇ ಜಾತಿಯನ್ನು ನಮೂದಿಸಬೇಕು ಕಡ್ಡಾಯವಾಗಿ. ಇರಲಿ, ಮನುಷ್ಯ ಸಮಾಜದ ವಿಕೃತಿಗಳು ಕಾಲಕ್ರಮೇಣದಲ್ಲಿ ಸುಧಾರಿಸಬಹುದು ಎಂಬ ಆಶಾವಾದವನ್ನು ಇಟ್ಟುಕೊಳ್ಳೋಣ. ಪ್ರಾಣಿ-ಪಕ್ಷಿ ಪ್ರಪಂಚದಲ್ಲೂ ಕೋಟಿಗಟ್ಟಲೆ ಪ್ರಭೇದಗಳಿವೆ. ಹಲವು ಪ್ರಭೇದಗಳು ಪರಿಸರಕ್ಕೆ, ಸಮಾಜಕ್ಕೆ ಉಪಕಾರವನ್ನು ಮಾಡಿದರೆ, ಕೆಲವು ಪ್ರಭೇದಗಳು ಹಾನಿಯನ್ನುಂಟು ಮಾಡುತ್ತವೆ. […]

ಕ್ಲಬ್: ಎಚ್.ಕೆ.ಶರತ್

ಅದೊಂದು ಸಾದಸೀದಾ ಬಿಲ್ಡಿಂಗು. ಹಗಲಲ್ಲಿ ಹಾಗೆ ಸುಮ್ಮನಿರುತ್ತೆ. ಬೆಳಕು ತೆರೆಮರೆಗೆ ಸರಿದು ಕತ್ತಲ ಕಾರುಬಾರು ಶುರುವಾದರೆ, ಅದು ವಿಶಿಷ್ಟ ಬಣ್ಣ ಬಳಿದುಕೊಂಡು ಬಿಡುತ್ತೆ. ಆ ಬಣ್ಣ ಹಗಲಿಗೆ ಅಪರಿಚಿತ. ಆ ಬಿಲ್ಡಿಂಗಿನ ಕಾಂಪೌಂಡಿನೊಳಕ್ಕೆ ಕತ್ತಲು ಕವಿದಂತೆಲ್ಲಾ ವಾಹನಗಳು ಬಂದು ನಿಲ್ಲುತ್ತವೆ. ವಯಸ್ಸಾದರೂ ಮನೆಯಲ್ಲಿ ಮುದುರಿಕೊಂಡು ಕೂರಲು ಬಯಸದ ಅಥವಾ ಹಾಗೆ ತೆಪ್ಪಗಿರುವುದು ತಮ್ಮ ಜಾಯಮಾನಕ್ಕೆ ಒಗ್ಗುವುದಿಲ್ಲ ಎಂದು ತೀರ್ಮಾನಿಸಿದ ವಯೋವೃದ್ಧರು ವಾಹನಗಳ ಮೇಲೇರಿ ಅಲ್ಲಿಗೆ ಬರುತ್ತಾರೆ. ತುಂಬಾ ಗೌರವಾನ್ವಿತರಂತೆ ಕಾಣುವ ದಿರಿಸು ತೊಟ್ಟುಕೊಂಡು ಬಂದಿರುವ ಅವರು, ಹೊರಜಗತ್ತಿಗೆ […]