ಮನೆಯ ಮೂಲೆ: ಅನಿತಾ ನರೇಶ್ ಮಂಚಿ

  ಕೋಣೆ ಅನ್ನುವುದು ಹೆಚ್ಚಿನೆಲ್ಲಾ ಮನೆಗಳಲ್ಲಿ ಚೌಕವೋ ಆಯತವೋ ಇರುವುದರಿಂದ ಒಂದು ಕೋಣೆಗೆ ನಾಲ್ಕು ಮೂಲೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಒಂದೆರಡು ಹೊರ ಜಗತ್ತಿಗೆ ತೆರೆದಿದ್ದರೆ ಮತ್ತುಳಿದವು ತಮ್ಮನ್ನು ಮಂಚವೋ, ಮೇಜೋ, ಕುರ್ಚಿಯೋ ಹೀಗೇ ಯಾವುದಾದರೂ ವಸ್ತುಗಳಿಂದ ಆವರಿಸಿಕೊಂಡಿರುತ್ತವೆ. ಇವುಗಳೇ ಮನೆಯ ಅತ್ಯದ್ಭುತ ಸ್ಥಳ ಎಂದು ನನ್ನ ಅಭಿಪ್ರಾಯ. ಇವುಗಳು ಮುಚ್ಚಿಟ್ಟುಕೊಂಡಿರುವ ರಹಸ್ಯಗಳೇ ಹಾಗಿರುತ್ತವೆ.   ಪಕ್ಕನೆ ಮನೆ ಒಳಗೆ ನುಗ್ಗಿದವರಿಗೆ ಕಾಣಬಾರದ, ಕಸ,  ಕಸಬರಿಕೆ, ಬಿಸುಡಲು ಮನಸ್ಸಿಲ್ಲದ ಹಳೆಯ ಬಟ್ಟೆಯ ಗಂಟು, ಮುರಿದ ಪಾತ್ರೆ ಪಡಗಗಳು, … Read more

ರಾಮಂದ್ರ: ಹರಿ ಪ್ರಸಾದ್

ರಾಮಮಂದಿರ ಅಂದರೆ ಏನೇನೋ ಚಿತ್ರಗಳು ಮೂಡುವ ಈ ಕಾಲದಲ್ಲಿ, ನನಗಂತೂ ನಮ್ಮ ಸೋದರತ್ತ್ತೆ  ಊರಿನ ಮಧ್ಯದಲ್ಲಿದ್ದ ರಾಮಮಂದಿರವೇ ಕಣ್ಮುಂದೆ ಬರುತ್ತದೆ. ಸುಮಾರು ನೂರೈವತ್ತು ಮನೆಗಳ ಪುಟ್ಟ ಊರದು. ನನ್ನ ಬಾಲ್ಯ ಬಹುಪಾಲು ಕಳೆದಿದ್ದು ಆ ಊರಿನಲ್ಲೆ. ನನ್ನ ಬಾಲ್ಯದ ಅನೇಕ ಚಟುವಟಿಕೆಗಳು ಅದರ ಸುತ್ತಮುತ್ತ ಹರಡಿಹೋಗಿವೆ. ಆದ್ದರಿಂದ ಆ ಚಿತ್ರ ಮನಸಿನಿಂದ ಹೋಗಲೊಲ್ಲದು. ಕೆಮ್ಮಣ್ಣು ಗೋಡೆಯ ಅದರ ಒಳಭಾಗದಲ್ಲಿ ಇಪ್ಪತ್ತು ಜನ ಕೂರುವಷ್ಟು ಜಾಗ. ಈಚೆ ಪಡಸಾಲೆಯಲ್ಲಿ ಒಳಕ್ಕಿಂತ ತುಸು ಚಿಕ್ಕದಾದ ಜಾಗ. ಬೀದಿಭಾಗಕ್ಕೆ ಮರ ಮತ್ತು … Read more

ಹಾದಿಗಳಿಲ್ಲದ ಬದುಕು: ರೇಷ್ಮಾ ಎ.ಎಸ್.

ಆಕೆ ನನ್ನ ಸಹೋದ್ಯೋಗಿ ಮಾತ್ರವಲ್ಲದೆ ನನ್ನ ಆತ್ಮೀಯ ಗೆಳತಿಯೂ ಆಗಿದ್ದಾಕೆ. ವಯಸ್ಸಿನಲ್ಲಿ ನನಗಿಂತ ಸಾಕಷ್ಟು ಹಿರಿಯಳಾಗಿದ್ದರೂ ಸ್ನೇಹಕ್ಕೇನೂ ಕೊರತೆ ಇರಲಿಲ್ಲ. ತಂದೆಯನ್ನು ಕಳೆದುಕೊಂಡು ವಯಸ್ಸಾದ ತಾಯಿ, ಚಿಕ್ಕ ತಂಗಿಯೊಡನಿರುತ್ತಿದ್ದ ಆಕೆ ಸಾಧಾರಣ ರೂಪವಂತೆಯಾಗಿದ್ದರೂ ಉದ್ಯೋಗಸ್ಥಳಾದ್ದರಿಂದ ಮದುವೆಯಾಗಲು ಮುಂಬರುತ್ತಿದ್ದ ಗಂಡುಗಳಿಗೇನೂ ಕೊರತೆ ಇರಲಿಲ್ಲ. ಎಲ್ಲ ಸರಿ ಇದೆಯಲ್ಲ ಎಂದು ಉಳಿದವರಿಗೆಲ್ಲ ಅನಿಸುತ್ತಿದ್ದರೂ ಆಕೆ ಕೊನೆಯಲ್ಲಿ ಏನಾದರೂ ಒಂದು ಕಾರಣ ನೀಡಿ ಮದುವೆ ನಿರಾಕರಿಸಿ ಬಿಡುತ್ತಿದ್ದಳು. ಒಬ್ಬ ವರನಂತೂ ನಮಗೆಲ್ಲ ತುಂಬಾ ಸೂಕ್ತನಾದವನು ಎಂದೆನಿಸಿದ್ದು ಆಕೆ ಏನೋ ನೆವ ತೆಗೆದು … Read more

ಪವನ್ ಒಡೆಯರ್ ಸಂದರ್ಶನ ಲೇಖನ: ಗುಂಡೇನಟ್ಟಿ ಮಧುಕರ

ಇತ್ತೀಚೆಗೆ ಬೆಳಗಾವಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ’ಪ್ರೀತಿ ಗೀತಿ ಇತ್ಯಾದಿ’  ಚಿತ್ರದ ಚಿತ್ರಕರಣ ನಡೆದಿತ್ತು. ಈ ಚಿತ್ರದ ನಾಯಕ ಪ್ಯಾರೆ ಆಗಬಿಟ್ಟೈತೆ ಪವನ ಒಡೆಯರ. ಗೋವಿಂದಾಯ ನಮಃ ಚಿತ್ರದಲ್ಲಿಯ ಆ ಉರ್ದು ಮಿಶ್ರಿತ ಹಾಡು ನನಗೆ ಮತ್ತೆ ಮತ್ತೆ ಕೇಳುವಂತೆ ಮಾಡಿತ್ತು. ಅದನ್ನು ಬರೆದಿರುವವರು ಪವನ ಒಡೆಯರ ಎಂದು ತಿಳಿದಾಗ ಅಚ್ಚರಿಪಟ್ಟಿದ್ದೆ. ಇಷ್ಟೊಂದು ಕಿರುವಯಸ್ಸಿನಲ್ಲಿ ಇಂತಹ ಒಂದು ಒಳ್ಳೆಯ ಸಾಹಿತ್ಯವನ್ನು ನೀಡಿರುವ ಪವನನ್ನನ್ನು ಭೇಟಿಯಾಗಿ ಮಾತನಾಡಬೇಕೆಂದು ಅಂದೇ ಅಂದುಕೊಂಡಿದ್ದೆ. ಅನಂತರ ಹಲವಾರು ಬಾರಿ ಸಂದರ್ಶನ ಮಾಡುವ … Read more

ಸಾಮಾನ್ಯ ಜ್ಞಾನ (ವಾರ 9): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ’ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು? ೨.    ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು? ೩.    ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು? ೪.    ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು? ೫.    ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು? ೬.    ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ? ೭.    ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು? ೮.    ಭಾರತದಲ್ಲಿ ಶಹನಾಯಿ ವಾದ್ಯಕ್ಕೆ … Read more

ಹೊಸ ವರುಷ ಹರುಷವೇ!?: ಅಖಿಲೇಶ್ ಚಿಪ್ಪಳಿ ಅಂಕಣ

ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷ ಪ್ರಾರಂಭವಾಗಿದೆ. ಜನವರಿ ೨೦೧೪. ಕಾಲಚಕ್ರದಡಿಯಲ್ಲಿ ಸುತ್ತಿ ಮತ್ತೊಮ್ಮೆ ಹೊಸವರುಷದ ಹರುಷದಲ್ಲಿ ಮಿಂದೆದ್ದು, ಹೊಸ ಸವಾಲುಗಳಿಗೆ, ಹೊಸ ಸಾಧನೆಗಳಿಗೆ ನಿಧಾನವಾಗಿ ಜಗತ್ತು ತೆರೆದುಕೊಳ್ಳುತ್ತಿದೆ. ಪ್ರತಿದೇಶವೂ ತಾನು ಮುಂದುವರೆದ ರಾಷ್ಟ್ರವಾಗಬೇಕು ಎಂದು ಹಂಬಲಿಸುತ್ತದೆ. ಈ ಹಂಬಲಿಕೆಯನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸಿಕೊಂಡು, ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡುತ್ತವೆ. ಹಿಂದಿನ ವರ್ಷದ ವೈಫಲ್ಯಗಳೇನು ಎಂಬುದನ್ನು ಪಟ್ಟಿ ಮಾಡಿ ಪ್ರಚುರಪಡಿಸಲು ವಿವಿಧ ಕ್ಷೇತ್ರಗಳಲ್ಲಿ ತಜ್ಞರ ಪಡೆಯೇ ಇದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಲು ಆಯಾ ಕ್ಷೇತ್ರದ ವಿಜ್ಞಾನಿಗಳು ತಮ್ಮ ಶ್ರಮವನ್ನು ಧಾರೆಯರೆಯುತ್ತಾರೆ. … Read more

ಮೂವರ ಕವಿತೆಗಳು: ಅನುಪಮಾ ಎಸ್. ಗೌಡ, ಆಶಾದೀಪ, ಪವಿತ್ರ ಸತೀಶ್ ಕುಮಾರ್

ಬರೆಯುತ್ತೇನೆ ನಾನು  ಹೆತ್ತವರ ಕಂಬನಿಯ  ನೋವನು ಕುರಿತು   ಅತ್ಮಸಾಕ್ಷಿ ಇಲ್ಲದವರ ಮೇಲೆ  ಮಣ್ಣಿಗಾಗಿ ಬಡಿದಾಡುವ  ಬಂಧುಗಳ ಕುರಿತು ಬರೆಯುತ್ತೇನೆ ನಾನು  ಸನ್ಯಾಸತ್ವ ಪಡೆದವರ ಮೇಲೆ  ವ್ಯಾಮೋಹ ಬಿದಡಿರುವುದನು ಕುರಿತು  ಅವರಲ್ಲಿರುವ ಕ್ರೋದ  ನಯವಂಚನೆಯ ಕುರಿತು  ಬರೆಯುತ್ತೇನೆ ನಾನು  ಆತ್ಮನಾನು ಪರಮಾತ್ಮತಂದೆ   ಅನ್ನುವವರ ಮೇಲೆ  ತನ್ನದಲ್ಲದನ್ನು ತನ್ನದೆಂದು  ವಾದಿಸುವವರ ಕುರಿತು  ಮಣ್ಣಾಗುವಾಗ ಬಿಡಿಗಾಸಿರದೆ  ಬರಿಗೈಯಲ್ಲಿ ಹೋಗುವ  ಪ್ರತಿಯೊಬ್ಬರ ಎಣಿಸಿ -ನಗೆಮಲ್ಲಿಗೆ  ಅನುಪಮ ಎಸ್  ಗೌಡ            ನಿರೀಕ್ಷೆ ಕೊಡವದಿರಿ ನನ್ನ … Read more

ಹೊಟ್ಟೆ!:ಪ್ರಶಸ್ತಿ ಪಿ.ಸಾಗರ

                  "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ.." ಅನ್ನೋ ಪುರಂದರದಾಸರ ಕೀರ್ತನೆ ನೆನಪಾಗುತ್ತಿತ್ತು. ಇದಕ್ಕೆ ಕಾರಣ ನಿನ್ನೆ ರಾತ್ರೆ ಗೆಳೆಯನ ಮನೆಗೆ ಹೋಗಿ ಅವನ ಅನಿರೀಕ್ಷಿತ ಒತ್ತಾಯಕ್ಕೆ ಮಣಿದು ಹತ್ತಿದ ನಳಪಾಕಕ್ಕೂ ಬಯ್ಯಲಾರದೇ ಹೋದ ಅರ್ಧ ತುಂಬಿದ ಹೊಟ್ಟೆಯೋ ಇಂದು ಬೆಳಗ್ಗೆಯ ಗಡಿಬಿಡಿಯ ತಿಂಡಿಯೋ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ದಕ್ಕಿದ ಅರೆಹೊಟ್ಟೆ ಮೊಸರನ್ನವೋ ಗೊತ್ತಿಲ್ಲ. ಮಧ್ಯಾಹ್ನ ಹನ್ನೆರಡಾಗೋವಷ್ಟರಲ್ಲೇ ತನ್ನ ಇರುವ ಸಾರುತ್ತಿದ್ದ ಹೊಟ್ಟೆ ಟ್ರಿಪ್ಪು ಟ್ರಿಪ್ಪೆಂದು ಹುಚ್ಚನಂತೆ … Read more

ಛೂಕು ಭೂಕು ರೈಲು: ಸುಮನ್ ದೇಸಾಯಿ

ಮಧ್ಯಾಹ್ನ ೧.೩೦ ಆಗಿತ್ತು, ಮಂತ್ರಾಲಯದ ರೇಲ್ವೆ ಸ್ಟೆಷನ್ನ್ಯಾಗ ಗುಲಬರ್ಗಾಕ್ಕ ಹೋಗೊ ಟ್ರೇನಿನ ಸಲುವಾಗಿ ಕಾಯಕೊತ ನಿಂತಿದ್ವಿ. ಮಂತ್ರಾಲಯದಾಗ ರಾಯರ ಸನ್ನಿಧಿಯೊಳಗ ಹೆಂಗ ಮೂರ ದಿನಾ ಕಳದ್ವು ಗೊತ್ತಾಗಲೆಯಿಲ್ಲಾ. ರಾಯರ ಸನ್ನಿಧಿ ಅಂದ್ರ ಅಮ್ಮನ ಮಡಿಲಿನ್ಯಾಗ ಮಲ್ಕೊಂಡಷ್ಟ ಹಿತಾ ಇರತದ.ಮನಸ್ಸು ಪ್ರಶಾಂತ ಇರತದ. ವಾಪಸ ಊರಿಗೆ ಹೋಗ್ಲಿಕ್ಕೆ ಮನಸಾಗಲಾರದ ಒಲ್ಲದ ಮನಿಸಿನಿಂದ ಸ್ಟೇಷನ್ನಿಗೆ ಬಂದ ನಿಂತಿದ್ವಿ. ಮುಂಬೈಕ್ಕ ಹೋಗೊ ಟ್ರೇನ್ ಬಂತು ನಾವು ಲೇಡಿಸ್ ಬೋಗಿಯೊಳಗ ಹತ್ತಿದ್ವಿ. ಬೋಗಿ ಪೂರ್ತಿ ಖಾಲಿನ ಇತ್ತು. ನಮ್ಮ ಫ್ಯಾಮಿಲಿಯವರ ಮಾತ್ರ ಇದ್ವಿ. … Read more

ಬಾಲ್ಯದ ಮೆಚ್ಚಿನ ಚಿತ್ರಗಳು: ವಾಸುಕಿ ರಾಘವನ್ ಅಂಕಣ

ನಿಮಗೆ ಬಾಲ್ಯದಲ್ಲಿ ತುಂಬಾ ಇಷ್ಟವಾಗಿದ್ದ ಸಿನಿಮಾಗಳನ್ನ ಜ್ಞಾಪಿಸಿಕೊಳ್ಳಿ. ಈಗ ನಿಮಗೆ ಅವು ಅಂಥ ವಿಶೇಷವೇನಲ್ಲ ಅನ್ನಿಸಬಹುದು, ಆದರೂ ಅವು ಮನಸ್ಸಿಗೆ ಬಹಳ ಹತ್ತಿರವಾಗಿರುತ್ತವೆ. ಅವು ಶ್ರೇಷ್ಠ ಕಲಾಕೃತಿಗಳೇ ಆಗಬೇಕೆಂದಿಲ್ಲ. ನೋಡಿದಾಗಿನ ನಮ್ಮ ಮನಸ್ಥಿತಿಯೋ, ಜೊತೆಗಿದ್ದ ಗೆಳೆಯರೋ, ಇನ್ಯಾವುದೋ ಕಾರಣಗಳಿಂದಲೋ ಅವು ಸ್ಮರಣೀಯವಾಗಿರುತ್ತವೆ. ನನ್ನ ಬಾಲ್ಯದ ಮೆಚ್ಚಿನ ಹತ್ತು ಚಿತ್ರಗಳನ್ನು ಪಟ್ಟಿಮಾಡಲು ಪ್ರಯತ್ನಿಸಿದ್ದೇನೆ. ಇವೇ ಹತ್ತು ಅತ್ಯಂತ ಪ್ರಮುಖ ಚಿತ್ರಗಳಾ ಗೊತ್ತಿಲ್ಲ, ಈ ಕ್ಷಣದಲ್ಲಿ ಜ್ಞಾಪಕ ಬಂದ ಹತ್ತು ಚಿತ್ರಗಳು ಇವು.  ಧ್ರುವತಾರೆ ನನಗೆ ನೆನಪಿರುವಂತೆ ನಾನು ನೋಡಿದ … Read more

ಜೀವನ ದರ್ಶನ (ಕೊನೆಯ ಭಾಗ): ಪಾರ್ಥಸಾರಥಿ. ಎನ್.

          (ಇಲ್ಲಿಯವರೆಗೆ…) ಮನುಷ್ಯನ ಮನವೇ ಹಾಗೇ ಧರ್ಮ , ಹಣ , ಅಧಿಕಾರ ಇವುಗಳನ್ನೆಲ್ಲ ಕಂಡರೆ ವಿಭ್ರಮೆಗೆ ಒಳಗಾಗುತ್ತೆ. "ಇಲ್ಲಿ ಮಾತು ಬೇಡ , ಸರಿಯಾಗಲ್ಲ, ಹೀಗೆ ನಡೆಯುತ್ತ ಹೋದರೆ ನಮ್ಮ ತೋಟ ಸಿಗುತ್ತೆ ಬಾ ಅಲ್ಲಿ ಹೋಗೋಣ" ಎನ್ನುತ್ತ ಹೊರಟ. ರಸ್ತೆಯ ಅಕ್ಕಪಕ್ಕ ಅಂಗಡಿಗಳು ಇದ್ದವು,  ಅವುಗಳಲ್ಲೆಲ್ಲ ತೆಂಗಿನಕಾಯಿ, ಎಳ್ಳೆಣೆಯ ಪೊಟ್ಟಣಗಳು, ಕಪ್ಪುವಸ್ತ್ರ, ದೀಪಗಳು, ವಿವಿದ ಪುಸ್ತಕಗಳು, ತುಳಸಿಹಾರದ ಅಂಗಡಿಗಳು ಇಂತಹುವುಗಳೆ, ಎಲ್ಲ ಕಡೆ ತುಂಬಿರುವ ಜನ. ಅಂಗಡಿಯಲ್ಲಿರುವ ಕೆಲವರು … Read more

ಸ್ನೇಹ ಭಾಂದವ್ಯ (ಕೊನೆಯ ಭಾಗ): ನಾಗರತ್ನಾ ಗೋವಿಂದನ್ನವರ

        (ಇಲ್ಲಿಯವರೆಗೆ…) ರಾಜೇಶ ಇನ್ನು ಮನೆಗೆ ಬಂದಿರಲಿಲ್ಲ. ಆಗ ಪದ್ಮಮ್ಮ ರೇಖಾಳಿಗೆ ಬಾರಮ್ಮ ಬಾ ನಿನ್ನಿಂದ ಒಂದು ಉಪಕಾರ ಆಗಬೇಕಾಗಿದೆ ಎಂದಳು. ನಮ್ಮ ರಾಜೇಶ ಸುಧಾಳ ನೆನಪಲ್ಲೆ ಹುಚ್ಚನ ಹಾಗಾಗಿದ್ದಾನೆ. ನಿನ್ನ ಮಾತಿಗೆ ಆತ ಗೌರವ ಕೊಡುತ್ತಾನೆ ದಯವಿಟ್ಟು ಅವನಿಗೆ ಮೊದಲಿನ ರಾಜೇಶ ಅಗೋಕೆ ಹೇಳಮ್ಮ. ಇದ್ದ ಒಂದು ವಂಶದ ಕುಡಿನು ದ್ವೇಷಿಸೋಕೆ ಕಲಿತಿದ್ದಾನೆ. ಏನು ಮಾಡಬೇಕು ಅಂತ ತಿಳಿತಿಲ್ಲಾ ಎಂದರು ಪದ್ಮಮ್ಮ. ಆದರೆ ಅಂದು ಎಷ್ಟು ಹೊತ್ತಾದರು ರಾಜೇಶ ಬಾರದಿರುವುದನ್ನ ಕಂಡು … Read more

ಕಲೆಯನಲ್ಲದೆ ಶಿಲ್ಪಿ ಶಿಲಯನೇಂ ಸೃಷ್ಟಿಪನೆ?: ಡಾ. ಬಿ.ಆರ್.ಸತ್ಯನಾರಾಯಣ

          ತುಂಬಾ ಹಿಂದೆ ಒಬ್ಬ ದರೋಡೆಕಾರನಿದ್ದ. ದಾರಿಯಲ್ಲಿ ಬಂದವರನ್ನು ಅಡ್ಡಗಟ್ಟಿ ಅವರನ್ನು ಕೊಂದು ಅವರಲ್ಲಿದ್ದುದದ್ದನ್ನು ದೋಚಿ, ಅದರಲ್ಲಿಯೇ ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ಸಾಕಿಕೊಂಡಿದ್ದನಂತೆ! ಒಂದು ದಿನ ನಾರದನೇ ಆ ದುಷ್ಟನ ಕೈಗೆ ಸಿಕ್ಕಿಹಾಕಿಕೊಂಡುಬಿಡುತ್ತಾನೆ. ಇನ್ನೇನು ಕೊಲ್ಲಬೇಕು ಅನ್ನುವಷ್ಟರಲ್ಲಿ ನಾರದ ’ಅಯ್ಯಾ ಕೊಲ್ಲುವುದು ಹೇಗಿದ್ದರೂ ಕೊಂದುಬಿಡುತ್ತೀಯಾ. ಅದಕ್ಕೂ ಮೊದಲು ನನ್ನದೊಂದು ಪ್ರಶ್ನೆಗೆ ಉತ್ತರ ಕೊಟ್ಟುಬಿಡು. ಹೀಗೆ ಸಿಕ್ಕಸಿಕ್ಕವರನ್ನೆಲ್ಲಾ ಕೊಲ್ಲುವುದು ಪಾಪವಲ್ಲವೆ? ಈ ನಿನ್ನ ಪಾಪಕ್ಕೆ ಪಾಲುದಾರರು ಯರ್‍ಯಾರು?’ ಎಂದು ಪ್ರಶ್ನಿಸಿದ. ಆಗ … Read more

ಸ್ಪಿರಿಟ್ಟು, ಲಾವಾರಸ ಮತ್ತು ಮದುವೆ: ಅಮರ್ ದೀಪ್ ಪಿ. ಎಸ್.

                ಮೊನ್ನೆ ಶ್ರೀವಲ್ಲಭ ಆರ್ . ಕುಲಕರ್ಣಿ  ಇವರ "ಹೀಗೊಂದು ವಧು ಪರೀಕ್ಷೆ" ಲಲಿತ ಪ್ರಬಂಧ ಓದುತ್ತಿದ್ದೆ… ಹೌದೌದು ಅನ್ನಿಸಿಬಿಟ್ಟಿತ್ತು.  ನನಗೀಗ ಅಪಘಾತವಾಗಿ ಕ್ಷಮಿಸಿ  ಮದುವೆಯಾಗಿ ೧೧ ವರ್ಷ.. ಹನ್ನೊಂದು ವರ್ಷದ ಹಿಂದೆ ನಾನು ವಧು ಪರೀಕ್ಷೆಗೆ ಹೋದದ್ದು… ಒಂದಲ್ಲ ಅಂತ ಒಂಬತ್ತು. ಒಮ್ಮೆ ಗದಗ ಜಿಲ್ಲೆಯ ಯಾವುದೋ ಊರಿಗೆ ಕನ್ಯಾ ನೋಡಲು ಹೋಗಿದ್ದೆವು. ದಾರಿಯಲ್ಲಿ ಹೋಗುತ್ತಾ ಜವಳಿ ಅಂಗಡಿ ಕಿರಾಣಿ ಅಂಗಡಿ ಎಲ್ಲಾ ನೋಡಿದೆ… "ವೈನ … Read more