Facebook

Archive for 2014

ಖಾಜಾ ಪಾಷಾನ ನಸೀಬು ಮತ್ತು ಗುಡ್ಡದ ಮೇಲಿನ ಗೆಸ್ಟ್ ಹೌಸ್: ಅಮರ್ ದೀಪ್ ಪಿ.ಎಸ್.

ಅಂಗೈ ನೋಡಿಕೊಂಡೆ.  ವಾಹ್ ಮೇರೆ ನಸೀಬ್?  ಇದೇ ಡಿಶ್ ಕೇಬಲ್ ನನ್ನ ಜೀವನದ ಹೈಸಿಯತ್  ಬದಲಾಯಿಸಿಬಿಡುತ್ತಾ ? ಈಗ ನನ್ನ ಕೈಯಲ್ಲಿ ಹರಿದಾಡುತ್ತಿರುವ ದುಡ್ಡು ನೋಡಿದರೆ ಹಾಗೆ ಅನ್ನಿಸುತ್ತೆ. ಮುಂದೆ ಗೊತ್ತಿಲ್ಲ.  ಆದರೆ ಇದೇ ಸ್ಪೀಡಲ್ಲಿ ನಾನೇನಾದರೂ ದುಡ್ಡು ಮಾಡಿದರೆ ಒಂದಿನ ನಾನು ನನ್ನ ಸ್ವಂತಕ್ಕೆ ಮಕಾನ್ ಮಾಡ್ಕೊಬೋದು, ಮತ್ತು  ಜೀರ್ಣವಾಗಿಸಿ ಹೂ….. ಮತ್ತೇನಿದೆ ನಿನ್ನ ತಾಕತ್ತಿಗೆ ನನ್ನ ಚೀಲ ತುಂಬಿಸಲು ಎನ್ನುವಂತೆ ಸವುಂಡೆ ಮಾಡದೇ ಸಂಕಟ ನೀಡುವ ಪೇಟ್ ಕಾ ಸವಾಲ್ ಹಮೇಶಾ  ಇದ್ದೇ ಇರುತ್ತೆ.  […]

ಹೀಗೊಂದು ಗೆಳೆಯರ ಬಳಗ!: ಗುರುಪ್ರಸಾದ ಕುರ್ತಕೋಟಿ

ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!  "ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… […]

ಆ ಅವಳು..: ಸುಧಾ ಚಿದಾನಂದಗೌಡ

“ಇಲ್ರೀ, ಇದೊಂದ್ ವಿಷ್ಯದಾಗ ತಲಿ ಹಾಕಬ್ಯಾಡ್ರೀ..” “ಸರಿಯವ್ವಾ, ನಿನ್ನ ಬಂಧುಬಳಗ, ಕುಲಸ್ಥರು, ದೈವಸ್ಥರು ಹೇಳಿದ್ದಕ್ಕೇ ನೀ ಒಪ್ಪಿಲ್ಲ. ಇನ್ನು ನನ್ನ ಮಾತಿಗೆ ಒಪ್ಪಿಕ್ಯಂತೀ ಅಂತ ನಾ ಏನೂ ಅನ್ಕಂಡಿಲ್ಲ. ಆದ್ರ ದುರ್ಗಾಶಕ್ತಿ ಅಂತ ಒಬ್ಬಾಕಿ ಅದಾಳ ನೋಡು, ಆಕೀದು ಅಭಿಪ್ರಾಯ ಕೇಳಬೇಕಲ್ಲಾ..” “ಅಂದ್ರ, ದುರುಗಮ್ಮನ ಗುಡೀಮುಂದ, ಪೂಜಾರಪ್ಪನೆದುರಿಗೆ ಹಾರ ಹಿಡ್ಕೊಂಡು ನಿಂದ್ರು ಅಂತ ಹೇಳಾಕ್ಹತ್ತೀರಿ ಹೌದಿಲ್ಲೋ..? ಆತು ಬಿಡ್ರೀ..ನಂಗೇನ್ ಅಭ್ಯಂತರ ಇಲ್ಲ. ನೋಡು ಪೂಜಾರಣ್ಣ, ಇದಾ ಮಂಗಳವಾರ ಹೂವಿನಹಾರ ತಗೊಂಡು ಗುಡಿ ಮುಂದ ಶರಣಾಗ್ತೀನಿ. ಅದೇನ್ ಮಾತು […]

ಗುಡುಗುಮ್ಮ ಬಂದಾ: ಅಖಿಲೇಶ್ ಚಿಪ್ಪಳಿ

ಗುಡುಗುಮ್ಮ ಬಂದ ಹೆಡಿಗೆ ತಂದಾ ಅಕ್ಕಿ ಬ್ಯಾಡಂತೆ ಭತ್ತ ಬ್ಯಾಡಂತೆ ನೀನೇ ಬೇಕಂತೆ!!! ಇಂತದೊಂದು ದಾಟಿಯನ್ನು ಹೇಳಿ ಅಳುವ ಮಕ್ಕಳನ್ನು ಸಂತೈಸುವ ಪ್ರಯತ್ನವನ್ನು ಮಲೆನಾಡಿನ ಹಳ್ಳಿಗಾಡುಗಳಲ್ಲಿ ಕಾಣಬಹುದಿತ್ತು. ನಮಗೂ ಈ ಹಾಡನ್ನು ಹೇಳಿ ಹೆದರಿಸಿ ಸಂತೈಸುತ್ತಿದ್ದದು ನೆನಪು. ಬೇಸಿಗೆ ಬೇಗೆಯಲ್ಲಿ ಬೇಯುತ್ತಾ ಸೂರ್ಯನಿಗೆ ಶಾಪ ಹಾಕುತ್ತಾ, ತಣ್ಣನೆಯ ಪಾನೀಯಗಳನ್ನು ಹೀರುತ್ತಾ, ಮೈಯೆಲ್ಲಾ ಬೆವರು, ನೀರಿದ್ದವರು ಎರೆಡೆರೆಡು ಸ್ನಾನ ಮಾಡುತ್ತಾ, ಮತ್ತೆ ಬೆವರುವ ಪರಿ, ಮಳೆಯಾದರೂ ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸುವ ಕೋಟ್ಯಾಂತರ ಮನಸ್ಸುಗಳ ಆರ್ತ ಕೇಳಿ ಮೇಲೇರಿದ […]

ಕಾತರಿಸುವ ನಿರೀಕ್ಷೆಗಳಲಿ ಬದುಕಿನ ಮೆಟ್ಟಿಲು: ಪದ್ಮಾ ಭಟ್.

       ಎಸ್.ಎಸ್.ಎಲ್.ಸಿ, ಹಾಗೂ ಪಿ.ಯೂಸಿ ಪರೀಕ್ಷೆಗಳೆಲ್ಲಾ ಮುಗಿದು, ಸಿ.ಇ.ಟಿ ಯೂ ಮುಗಿಯಿತು.. ರಜೆಯೆಲ್ಲಾ ಅರ್ಧ ಖಾಲಿಯಾಗುತ್ತಾ ಬಂತು. ಕಾತರಿಯಿಂದ ಕಾಯುತ್ತಿದ್ದ ಮನಸುಗಳಿಗೆ ಇನ್ನೇನು ರಿಸಲ್ಟಿನ ಭಯ. ಒಂದು ಕಡೆ ತಾನೇ ಇಡೀ ಶಾಲೆಗೆ, ಕಾಲೇಜಿಗೆ ಮೊದಲ ರ್‍ಯಾಂಕ್ ಬಂದೇ ಬರುತ್ತೇನೆಂಬ ಭರವಸೆಯ ಮನಸ್ಸುಗಳಿದ್ದರೆ, ಇನ್ನೊಂದು ಕಡೆ ಅಯ್ಯೋ ದೇವರೆ ಇದೊಂದು ಸಲ ಪಾಸ್ ಮಾಡಪ್ಪ ಎಂದು ಬೇಡಿಕೊಳ್ಳುವ ಮನಸುಗಳು.. ಬದುಕಿನ ಒಂದೊಂದು ಮೆಟ್ಟಿಲುಗಳನ್ನೇ ಹತ್ತುತ್ತಾ ಹತ್ತುತ್ತಾ ಗುರಿಮುಟ್ಟುವ ತವಕದಲ್ಲಿ ಯುವಜನತೆಯು ದಾರಿಯನ್ನು ಹುಡುಕುತ್ತಿದೆ.. ಆಯ್ಕೆ […]

ಮೂರು ಕವಿತೆಗಳು: ಶಿವಕುಮಾರ ಸಿ., ಕುಸುಮ ಆಯರಹಳ್ಳಿ, ನೇಮಿನಾಥ ತಪಕೀರೆ

ನಾ ಕಟ್ಟುವದಿಲ್ಲ ನಾ ಕಟ್ಟುವದಿಲ್ಲ….. ತಾಜ್ ಮಹಲ ನಿನ್ನ ಜಾತ್ರೆಯಲ್ಲಿ ತೂಗುವ ತೊಟ್ಟಿಲು ಹರಿದಾಡುವ ಬೊ೦ಬೆ  ಸದ್ದು, ಸಿಳ್ಳೆಗಳೆಲ್ಲಾ ನಾನಾಗಿದ್ದರೂ.. ಬದುಕ ಕಚ್ಚೆ ಸಿಗದ ತಿರುಕ ನಾ ಕಟ್ಟುವದಿಲ್ಲ….. ಚಾರ್ ಮಿನಾರ್ ಮನಕೆ ಕ೦ಬದ ಕೊರತೆ ಕೆಸರು ಹಾದಿ ಕಲ್ಲು ಮುಳ್ಳು ಬೆಚ್ಚಿ ಬಿದ್ದಾಗಲೊಮ್ಮೆ ಪ್ರೇರಣೆಯ ಹಣತೆ ನೀನು ದಾರಿಹೋಕ ನಾನು ನಾ ಕಟ್ಟುವದಿಲ್ಲ ಕವಿತೆ ಕೊಸರಾಡುವ ಕಲ್ಪನೆ ಹೆಸರಿಗೂ ಸಿಗದ ನಗು ಉಸಿರಾಟಕ್ಕು ಬಿಗಿದ ನೋವು ಕಟ್ಟಿದ್ದೇನೆ…… ಅಲ್ಲೊ೦ದು ಗೂಡ ನಿನ್ನ ಹೆಸರಿಗೊ೦ದು ನಗು ಕೊಸರಿಗೊ೦ದು […]

ವಾರದ ಸಿನಿಮಾ ಟೂ ಸ್ಟೇಟ್ಸ್: ಪ್ರಶಸ್ತಿ ಪಿ.

ಕಾದಂಬರಿಯಾಧಾರಿತ ಚಿತ್ರಗಳೆಂದ್ರೆ ಅವೆಲ್ಲಾ ಕಲಾತ್ಮಕ ಚಿತ್ರಗಳು. ನಿರ್ಮಾಪಕನ ರೊಕ್ಕ ಖಾಲಿ ಮಾಡಿ ನಿರ್ದೇಶಕನಿಗೊಂದು ಅವಾರ್ಡ್ ತರಬಹುದೇ ಹೊರತು ಪ್ರೇಕ್ಷಕರ ಮನಗೆಲ್ಲೋ ಮಾತಿಲ್ಲ ಅನ್ನೋದು ಸಾಮಾನ್ಯ ಜನರ ಮಾತು. ಕನ್ನಡದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ಹಿಂದಿಯಲ್ಲಿ ಪಹೇಲಿಯಂತಹ ಸಿನಿಮಾಗಳು ಸೋತಿದ್ರೂ ಆಗೋಂದೀಗೊಂದು ಕಾದಂಬರಿಯಾಧಾರಿತ ಚಿತ್ರಗಳು ಸಖತ್ ಹಿಟ್ಟಾಗುತ್ತವೆ. ಆ ಸಾಲಲ್ಲಿ ಇಂಗ್ಲೀಷಿನಲ್ಲಿ ನೆನಪಾಗೋದು ಡಾನ್ ಬ್ರೌನಿನ ಐದು ಕಾದಂಬರಿಯಾಧಾರಿತ ಸಿನಿಮಾಗಳು. ಹಿಂದಿಯಲ್ಲಿ ಚೇತನ್ ಭಗತ್. ಅಮೀರ್ ಖಾನಿನ ತ್ರೀ ಈಡಿಯಟ್ಸೆಂಬ ಸಿನಿಮಾ ಬಂದಾಗ ಆ ಸಿನಿಮಾ ಚೇತನ್ ಭಗತ್ತಿನ […]

ಸಾಮಾನ್ಯ ಜ್ಞಾನ (ವಾರ 26): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:- ೧.    ಜವಹರ್‌ಲಾಲ್ ನೆಹರು ಅವರು ರಾಜಸ್ಥಾನದ ನಾಗೂರ್‌ನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು? ೨.    ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು? ೩.    ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು? ೪.    ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು? ೫.    ರಾಜ್ಯ ವಿಧಾನ ಸಭೆಯಲ್ಲಿ ೧೯೮೦-೮೧ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು? ೬.    ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಎರಡನೇಯ ರಾಜ್ಯ […]

ತರಾವರೀ ತರ್ಕ ಮತ್ತು ಹಾಸ್ಯ (ಕೊನೆಯ ಭಾಗ): ಎಂ.ಎಸ್.ನಾರಾಯಣ.

ಇಲ್ಲಿಯವರೆಗೆ ಚಕ್ರ ತರ್ಕದ ಉದಾಹರಣೆಗಳು ನಿಜಕ್ಕೂ ಬಹಳ ಸ್ವಾರಸ್ಯಕರವಾಗಿರುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ. ೧. ನನ್ನ ಮನೆಯಲ್ಲಿ ನಾನೇ ಯಜಮಾನ, ಹಾಗೆ ಹೇಳಲು ನನಗೆ ನನ್ನ ಹೆಂಡತಿಯ ಅನುಮತಿಯಿದೆ. ೨. ಬೈಬಲ್ಲಿನಲ್ಲಿರುವುದೆಲ್ಲಾ ಸತ್ಯ. ಹಾಗಂತ ಬೈಬಲ್ಲಿನಲ್ಲೇ ಹೇಳಿದೆ.                   ೩. ಈ ಮುಂದಿನ ಹೇಳಿಕೆ ಸುಳ್ಳು. ಹಿಂದಿನ ಹೇಳಿಕೆ ನಿಜ. ೪. ಸಿಗರೇಟು ಬಿಡುವುದು ಬಲು ಸುಲಭ, ನಾನು ಹಲವಾರು ಬಾರಿ ಬಿಟ್ಟಿದ್ದೇನೆ.  ೫. ವೆಂಕನಿಗೆ […]

ಗಯೆಯೊ-ಮಾಯೆಯೊ: ಸುಮನ್ ದೇಸಾಯಿ

ಮೊನ್ನೆ ಕಾಶಿಯಾತ್ರೆಗೆ ಹೋದಾಗ, ಪಿತೃಕಾರ್ಯ ಮಾಡಿಸಲಿಕ್ಕಂತ ’ಗಯಾ’ ಕ್ಷೇತ್ರಕ್ಕ ಹೋದ್ವಿ. ಅಲ್ಲೆ ದೂರ ದೂರದಿಂದ ಬಂದ ಜನರನ್ನ ನೋಡಿ ಆಶ್ಚರ್ಯ ಆಗಿತ್ತು. ’ಗಯಾ ತೀರ್ಥ’ ಅಂತ ಕರೆಸಿಕೊಳ್ಳೊ ಈ ಕ್ಷೇತ್ರದೊಳಗ ಪಿತೃಗಳನ್ನುದ್ದೇಶಿಸಿ ಶ್ರಾದ್ಧ ದಾನಾದಿಗಳನ್ನ ಮಾಡೊದರಿಂದ ಪಿತೃದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತಿ ಆಗ್ತದ, ಮತ್ತ ಅವರು ಸಂತುಷ್ಟರಾಗಿ ಆಯುರಾರೋಗ್ಯ, ಐಶ್ವರ್ಯಾದಿಗಳನ್ನ ಕೊಡ್ತಾರಂತ ಪ್ರತೀತಿ ಅದ.        ಉರಿಯೊ ಬಿಸಿಲೊಳಗ, ’ಗಯೆಯ’ ಆ ಮಹಾಸ್ಮಶಾನದೊಳಗ ಸುತ್ತಲು ಸುಡುವ ಚಿತೆಗಳ ನಡುವ ಕಾಲುರಿ ಸಹಿಸಿಕೊಳ್ತಾ, ಶ್ರಾದ್ಧಾದಿಕರ್ಮಗಳನ್ನ ಮಾಡಲಿಕ್ಕಂತ […]