Facebook

Archive for 2014

ತಾಳಿ ಕಟ್ಟಿದ ಶುಭ ವೇಳೆ ….ಕೊರಳಲ್ಲಿ ಅದ್ಯಾವ ಮಾಲೆ?: ಅಮರ್ ದೀಪ್ ಪಿ.ಎಸ್.

ಅದೊಂದು ಅದ್ಭುತವಾದ ಸಿನೆಮಾ.  "ಬೆಂಕಿಯಲ್ಲಿ ಅರಳಿದ ಹೂ "   ಬಹುಶಃ 1983 ರಲ್ಲಿ ಬಂದ ಕೆ. ಬಾಲ ಚಂದರ್ ಅವರ ನಿರ್ಧೇಶನದ ಸಿನೆಮಾ ಅದು.  ತನ್ನೊಳಗಿನ ವೈಯುಕ್ತಿಕ ಆಸೆ ಮತ್ತು ಬದುಕಿನ ಕನಸು ಗಳನ್ನು ಅದುಮಿಟ್ಟುಕೊಂಡು ತನ್ನ ಕುಟುಂಬದವರ ಹಿತಕಾಗಿಯೇ ತಾನು ತನ್ನ ನಗುವನ್ನು ಜೀವಂತವಾಗಿಟ್ಟು ದುಡಿಯಲು ಸಿಟಿ ಬಸ್ಸು ಹತ್ತುವುದರಲ್ಲೇ ಕೊನೆಗೊಳ್ಳುವ ಸಿನೆಮಾದಲ್ಲಿ ಸುಹಾಸಿನಿ ಎಂಬ ಚೆಲುವೆ ತನ್ನ ಕಣ್ಣಲ್ಲೇ ನಗುವನ್ನು  ಮತ್ತು ನಗುವಿನಲ್ಲೇ ದುಃಖವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.  ನಿಜ ಬದುಕಿನ ಹಲವರ ಸನ್ನಿವೇಶಗಳನ್ನು […]

ಬೆಳದಿಂಗಳ ನೋಡ: ಉಮೇಶ್ ದೇಸಾಯಿ

:೧: ಕಮಲಾಬಾಯಿ ನಿರಾಳವಾದರು ಎರಡು ದಿನಗಳಿಂದ ಬಹಳ ತಳಮಳಿಸಿದ್ದರು. ತಾವು ನೋಡಿದ ವಿಷಯ ಮೊದಲು ಯಜಮಾನರಿಗೆ ತಿಳಿಸಿದ್ದರು. ಅವರ ನೀರನ ಪ್ರತಿಕ್ರಿಯೆ ಅವರನ್ನು ನಿರುತ್ಸಾಹಗೊಳಿಸಿದರಲಿಲ್ಲ. ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದೂ ನೋಡುತ್ತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ಅದರಲ್ಲೂ ತಮ್ಮ ಪ್ರೀತಿಯ ಮಂಗಲಾಳ ಮಗಳು ತಪ್ಪು ಹಾದಿ ತುಳಿಯುತ್ತಿದ್ದಾಳೆ. ಇದರ ಬಗ್ಗೆ ಮಂಗಲಾಳಿಗೆ ಹೇಳಲೇಬೇಕು ಎಂದು ನಿರ್ಧರಿಸಿದರು. ಆಗಿದ್ದಿಷ್ಟೆ… ಎರಡು ದಿನದ ಹಿಂದಿನ ಮಧ್ಯಾಹ್ನ ಕಮಲಾಬಾಯಿ ಅಪಾರ್ಟಮೆಂಟಿನ ಮುಂದಿನ ಲಾನ್‌ನಲ್ಲಿ ಕುಳಿತಾಗ, ಮುಖ್ಯ ರಸ್ತೆಯ ತಿರುವಿಗೆ ಬೈಕ್ […]

ತಕರಾರಿನ ತರಕಾರಿ-ತಲೆನೋವಿನ ಎಳನೀರು: ಅಖಿಲೇಶ್ ಚಿಪ್ಪಳಿ

ಅತಿಸಾರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಚಿತ್ರದುರ್ಗದ ಖಾಸಗಿ (ಹೆಸರು ನೆನಪಿಲ್ಲ) ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿನ ತಜ್ಞವೈದ್ಯರು ಒಂದು ವಾರ ಆತನಿಗೆ ಸೂಕ್ತ ಚಿಕಿತ್ಸೆ ನೀಡಿ ಬಿಡುಗಡೆ ಮಾಡುತ್ತಾರೆ. ಅತಿಸಾರದಿಂದ ಬಳಲಿದ ರೋಗಿಗೆ ಹೆಚ್ಚು-ಹೆಚ್ಚು ದ್ರವರೂಪದ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಹಾಗೆಯೇ ಎಳನೀರನ್ನು ಹೆಚ್ಚು ಸೇವಿಸಿ ಎಂದೂ ಸಲಹೆ ನೀಡುತ್ತಾರೆ. ಬಿಡುಗಡೆಯಾಗಿ ಹೋದ ರೋಗಿ ಮೂರನೇ ದಿನಕ್ಕೆ ಮತ್ತೆ ವಾಪಾಸು ಬರುತ್ತಾನೆ. ಈ ಬಾರಿ ಇನ್ನೂ ಹೆಚ್ಚು ಸುಸ್ತಿನಿಂದ ಬಳಲಿರುತ್ತಾನೆ. ಮುಖ ಬಿಳಿಚಿಕೊಂಡಿರುತ್ತದೆ. ಚಿಕಿತ್ಸೆಯಲ್ಲಿ ಏನೂ ವ್ಯತ್ಯಾಸ ಆಗಿರುವುದಿಲ್ಲ ಎಂದು […]

ದೆಲ್ಲಿ ಚಲೋ .. : ಪ್ರಶಸ್ತಿ ಪಿ.

ಹೆಂಗಿದ್ರೂ ರಜೆಯಿದ್ಯಲ್ಲ ಬಾರೋ, ಉತ್ತರ ಭಾರತ ಸುತ್ತಬಹುದು ಅಂತ ಮೀರತ್ತಿನಲ್ಲಿದ್ದ ಮಾವ ಕರೆದಾಗ ದೇಶ ಸುತ್ತಬೇಕೆಂಬ ಬಯಕೆ ಗರಿಗೆದರಿ ನಿಂತಿತ್ತು. ದೇಶ ಸುತ್ತಬೇಕೆಂಬ ಮನ ಚಲೋ ದಿಲ್ಲಿ ಎಂದು ಹೊರಟು ನಿಂತಿತ್ತು. ದೆಲ್ಲಿಗೆಂದು ಹೊರಟಿದ್ದೆಂತು ಹೌದು. ಆದರೆ ಬೆಂಗಳೂರಿಂದ ದಿಲ್ಲಿಗೆ  2,153 ಕಿ.ಮೀಗಳ ಪಯಣ ಸುಲಭದ್ದೇನಲ್ಲ. ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನಗೆ ಮುಂದೊಮ್ಮೆ ಅದೇ ರೈಲಿನಲ್ಲಿ ದಿನಗಟ್ಟಲೇ ಪಯಣಿಸುವ ಭಾಗ್ಯ ಸಿಗುತ್ತೆ ಅಂತ ಕನಸಲ್ಲೂ ಅನಿಸಿರಲಿಲ್ಲ. ಯಾಕೆಂದರೆ ದೆಲ್ಲಿಗೆ […]

ಮತ್ತೊಂದಿಷ್ಟು ವರುಷ ಸಿಗಲಾರೆಯಾ?: ಪದ್ಮಾ ಭಟ್

                  ಸರಿಯಾಗಿ ಲೆಕ್ಕ ಹಾಕಿದ್ರೆ ಇನ್ನು ಒಂದು ತಿಂಗಳು  ಮಾತ್ರ ನಾ ನಿನ್ ಜೊತೆ ಇರೋದು..ಆಮೇಲೆ  ನೆನಪುಗಳಷ್ಟೆ.. ಏನೇ ಹೇಳು ನಿನ್ನನ್ನು ತುಂಬಾ ಮಿಸ್ ಮಾಡ್ಕೋಳ್ತೀನಿ ಕಣೇ.. ಎಂದು ರೂಂ ಮೇಟ್ ಶ್ರೇಯಾ ಹೇಳುತ್ತಿದ್ದರೆ, ನಾ ನನ್ನ ಪಾಡಿಗೆ ಅಷ್ಟೊಂದು ಲಕ್ಷ್ಯವಿಲ್ಲದೇ ಯಾವುದೋ ಪುಸ್ತಕವನ್ನು ಓದುತ್ತ ಕುಳಿತಿದ್ದೆ.. ಹೂಂ.. ಕಣೇ ನಾನೂ ನಿನ್ ಮಿಸ್ ಮಾಡ್ಕೊಳ್ತೀನಿ ಅಂತಾ ಬಾಯಿಂದ ಮಾತು ಬಂದರೂ ಓದುವ ಪುಸ್ತಕದ ಕಡೆಗೇ […]

ಮೂರು ಕವಿತೆಗಳು: ಶಿದ್ರಾಮ ತಳವಾರ್, ವೆಂಕಟೇಶ ನಾಯಕ್, ಲೋಕೇಶಗೌಡ ಜೋಳದರಾಶಿ

ನಾನೊಂದು ಖಾಲಿ ಸೀಸೆ ನಾನೊಂದು ಖಾಲಿ ಸೀಸೆ ಈಗ ನಾ 'ನೊಂದೆ', ಮತ್ತು ತರುವ ಮದಿರೆ ತುಂಬಿಹೆ ನನ್ನೊಳು ಪೂರ್ತಿ, ಬರೀ ಮೈಗಷ್ಟೇ ಮತ್ತು; ಮತ್ತೇನಿಲ್ಲ ದಾಹದಿ ಮದಿರೆಯ ದಾಸರು ಕೊಂಡು ಹೀರಿದರೆಲ್ಲ ನನ್ನೊಳ ಮತ್ತು ; ಮತ್ತೇನೂ ಅಷ್ಟೇ ಮತ್ತೇನಿಲ್ಲ, ದಾಹದಿ ಹೀರಿ ಮೋಹದಿ ಇವರು ಮುತ್ತಿಕ್ಕಿ ಮತ್ತೆಲ್ಲ ಹೀರಿ ಮತ್ತೂ ಮುತ್ತಿಕ್ಕಿ; ಕೊನೆಗೊಮ್ಮೆ ಬಿಸಾಕಿದರೆನ್ನ ಬೀದಿಯಲಿ ಅಷ್ಟೇ ನನ್ನೊಳು ಮತ್ತೇನಿಲ್ಲ, ತೂರಾಡುತಲಿ ಕೂಗಾಡುತಲಿ ಬೈಯುತಲಿ ನನ್ನನೂ; ಬೈಸಿಕೊಳುತಲಿ ತಮ್ಮನೂ ಕಕ್ಕುತಿಹರು ಮನದೊಳಗಣ ಕಿಚ್ಚನು ಇಷ್ಟೇ […]

ಸಾಮಾನ್ಯ ಜ್ಞಾನ (ವಾರ 24): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು :  ೧.    ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು? ೨.    ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ? ೩.    ಗಾಂಧಿ ೧೯೧೯ರಲ್ಲಿ ನವ ಜೀವನ್ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು? ೪.    ಮಹಿಳೆಯರು ಒಲಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ? ೫.    ಟೆಲಿಫೋನ್ ಕಂಡು ಹಿಡಿದವರು ಯಾರು? ೬.    ಮೃತ ಸಮುದ್ರ (ಡೆಡ್‌ಸೀ) ಯಾವ ದೇಶದಲ್ಲಿದೆ? ೭.    ಅಮೇರಿಕಾದ ಸಿಲಿಕಾನ್ ವ್ಯಾಲಿ ಎಂಬುದು ಏತಕ್ಕೆ […]

ಇಂತಿ: ಬಸವರಾಜು ಕ್ಯಾಶವಾರ

ಪ್ರೀತಿಯ ಚಂದ್ರು,   ಕಳೆದ ಹತ್ತು ವರ್ಷಗಳಿಂದ್ಲೂ ದಿನವೂ ಪುಸ್ತಕ ತೆಗೆದು ಮತ್ತೆ ಮತ್ತೆ ನೋಡ್ತಾನೇ ಇದ್ದೀನಿ, ಆದರೆ ನೀನು ಕೊಟ್ಟ ನವಿಲುಗರಿ ಮರಿ ಹಾಕಿಲ್ಲ. ಆದ್ರೆ ಇವತ್ತಲ್ಲ ನಾಳೆ ಅದು ಮರಿ ಹಾಕುತ್ತೆ ಅಂತ ಕಾಯುತ್ತಿದ್ದೇನೆ. ವಿಶೇಷ ಅಂದ್ರೆ ನಮ್ಮಿಬ್ಬರ ನಡುವೆ ಇದ್ದ ಗೆಳೆತನ ಮಾಗಿ ಪ್ರೇಮದ ಮರಿ ಹಾಕಿದೆ.   ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲೂ ಹಳ್ಳಿಯ ಆ ಹೈಸ್ಕೂಲಿನ ದಿನಗಳು, ನಮ್ಮಿಬ್ಬರ ಬಾಲ್ಯದ ಸಂತಸದ ಕ್ಷಣಗಳು ಮತ್ತೆ ಮತ್ತೆ ನೆನಪಾಗ್ತಿವೆ. ನನ್ನ ಕೋಣೆ ತುಂಬೆಲ್ಲಾ […]

ಸುಖದ ವ್ಯಾಧಿ: ಸುಮನ್ ದೇಸಾಯಿ

ಮುಂಝಾನೆ ನಸುಕಿನ್ಯಾಗ ಮೂಲಿಮನಿ ನಿಂಗವ್ವನ ಕೋಳಿ ಕೂಗಿದ್ದ ಕೇಳಿ ’ಪಾರು’ ಗ ಎಚ್ಚರಾತು. ದಿನಾ ಹಿಂಗ ಒದರಿ ಒದರಿ ತಂಗಳ ನಿದ್ದಿ ಕೆಡಸತಿದ್ದ ಕೋಳಿಗೆ ಹಿಡಿಶಾಪಾ ಹಾಕಿ ಮತ್ತ ಹೊಚಕೊಂಡ ಮಲಗತಿದ್ದ ಪಾರು, ಇವತ್ತ ಹಂಗ ಮಾಡಲಿಲ್ಲ. ಆವತ್ತ ತನ್ನ ಪ್ರೀತಿಯ ಅಕ್ಕನ ಊರಿಗೆ ಹೋಗೊದಿತ್ತು. ಲಗು ಲಗು ಎದ್ದು ಮಾರಿ ತೊಳಕೊಂಡು, ಅಡುಗಿ ಮನಿಗೆ ಬಂದ್ಲು. ಆಗಲೆ ಅವ್ವ ಮಗಳ ಊರಿಗೆ ಬುತ್ತಿಗೆಂತ ರೊಟ್ಟಿ, ಪಲ್ಯಾ, ಸಜ್ಜಿಗಿ ವಡಿ, ಕೆಂಪಖಾರ, ಮೊಸರನ್ನ ಎಲ್ಲಾ ಮಾಡಿ ಮುಗಿಸಿ, […]

ತರಾವರೀ ತರ್ಕ ಮತ್ತು ಹಾಸ್ಯ: ಎಂ.ಎಸ್. ನಾರಾಯಣ

‘ತರ್ಕ ಅಂದ್ರೇನಪ್ಪಾ?’ ಎಂದು ಬೆಳಬೆಳಗ್ಗೇನೇ ರಾಗ ಎಳೆದಳು ಮೊದಲ ಪೀಯೂಸಿ ಕಲಿಯುತ್ತಿರುವ ನನ್ನ ಮಗಳು.  ಹಾಗೆಲ್ಲಾ ಅವಳು ಸುಮ್ಮ ಸುಮ್ಮನೆ ಏನನ್ನೂ ಕೇಳುವುದಿಲ್ಲವೆಂದರಿತಿದ್ದ ನಾನು ಓದುತ್ತಿದ್ದ ಪೇಪರಿನಿಂದ ತಲೆಯೆತ್ತದೆ ‘ಯಾಕೇ?’ ಅಂದೆ. ‘ಕನ್ನಡಾ ಮ್ಯಾಮ್ ಅಸೈನ್ಮೆಂಟ್ ಕೊಟ್ಟೀದಾರಪ್ಪ, ತರ್ಕದ ಬಗ್ಗೆ ಎಸ್ಸೆ ಬರ್ಕೊಂಡೋಗ್ಬೇಕು’ ಎಂದುಲಿಯಿತು ಕಾನ್ವೆಂಟಿನಲ್ಲಿ ಕಲಿತ ನನ್ನ ಕನ್ನಡದ ಕಂದ.  ‘ತರ್ಕ ಅಂದ್ರೆ ಲಾಜಿಕ್ಕು ಕಣಮ್ಮಾ’ ಎಂದೊಡನೆ ಅಸಡ್ಡೆಯಿಂದ ‘ಓ, ಲಾಜಿಕ್ಕಾ…?’ ಎಂದವಳೇ ಪ್ರಬಂಧ ಬರೆಯಲು ಸಿದ್ಧತೆ ನಡೆಸತೊಡಗಿದಳು. ಸೀದಾ ಲ್ಯಾಪ್ಟಾಪ್ ತೆಗೆದವಳೇ ಇಂಟೆರ್ನೆಟ್ಟಿನಲ್ಲಿ ‘ಎಸ್ಸೇಸ್ […]