Facebook

Archive for 2014

ದೇವರ ಹೆಣ ನಿಮಗೆ ಇಷ್ಟ ಅಲ್ವಾ?: ನಟರಾಜು ಎಸ್. ಎಂ.

ಒಂದೂರಲ್ಲಿ ಒಂದು ಗಟ್ಟಿಮುಟ್ಟಾದ ಆರೋಗ್ಯವಂತ ಹಸು ಕಾಡಿಗೆ ಮೇಯಲು ಹೋಗಿ ಇದ್ದಂಕ್ಕಿದ್ದಂತೆ ಕಾಡಿನಲ್ಲೇ ಸತ್ತು ಹೋಗಿರುತ್ತದೆ. ತನ್ನ ಮಾವನ ರೇಡಿಯೋ ರಿಪೇರಿಯ ಕಲೆಯನ್ನು ಒಬ್ಬ ಹುಡುಗ  ತದೇಕಚಿತ್ತದಿಂದ ನೋಡುತ್ತಾ ಕುಳಿತ್ತಿರುತ್ತಾನೆ. ಯಾರೋ ಬಂದು ಹಸು ಸತ್ತು ಹೋಗಿರುವ ಸುದ್ದಿಯನ್ನು ಆ ಹುಡುಗನ ಮಾವನಿಗೆ ತಿಳಿಸಿದಾಗ ಆ ಹುಡುಗನ ಮಾವ "ಮಗ, ತಗೋಳು ಸೈಕಲ್ ನ." ಎಂದು ಹೇಳಿ ಮನೆ ಒಳಗೆ ಹೋದವನು ಒಂದು ಚೂರಿ, ಮಚ್ಚು, ಕುಡ್ಲು, ಹಾಗು ಎರಡು ಪ್ಲಾಸ್ಟಿಕ್ ಚೀಲದೊಂದಿಗೆ ಮನೆಯಿಂದ ಹೊರಗೆ ಬರುತ್ತಾನೆ. […]

ಸುಷ್ಮಾ: ಕುಸುಮ ಆಯರಹಳ್ಳಿ

ಸುಮಾರು ಹನ್ನೆರಡು ವರ್ಷಗಳೇ ಕಳೆದಿರಬೇಕು. ಅದರೂ ಈ ಘಟನೆ ಮಾತ್ರ ನನ್ನ ಮನಸಿನಲ್ಲಿ ಇಂದಿಗೂ ಹಸಿ ಹಸಿಯಾಗಿದೆ. ಹತ್ತನೇ ಕ್ಲಾಸಿನವರೆಗೂ ಚಾಮರಾಜನಗರದ ಅಜ್ಜಿಮನೆಯಲ್ಲಿ ಬೆಳೆದ ನಾನು ಆಗಷ್ಟೇ ಅಪ್ಪ,ಅಮ್ಮನನ್ನೂ, ಸ್ವಂತ ಹಳ್ಳಿಯನ್ನೂ, ಪಿಯುಸಿಯನ್ನೂ ಸೇರಿದ್ದೆ. ಸುತ್ತಮುತ್ತಲ ಹಳ್ಳಿಗಳಿಗೆ ಇದ್ದದ್ದು ಅದೊಂದೇ ದೇವಲಾಪುರದ ಪಿಯು ಕಾಲೇಜು. ಬುದ್ದಿವಂತರೂ, ಒಂದಷ್ಟು ಸಾಹಿತ್ಯಾಸಕ್ತಿಯೂ ಇದ್ದ ಸುತ್ತಲ ಹಳ್ಳಿ ಹುಡುಗ-ಹುಡುಗಿಯರಲ್ಲಿ ತುಂಬ ಜನ ಇದೇ ಬ್ಯಾಚಲ್ಲಿದ್ದರು. ಹೆಚ್ಚೆಂದರೆ 100 ಜನ ವಿಧ್ಯಾರ್ಥಿಗಳಿದ್ದ, ಎರಡೇ ಕ್ಲಾಸಿನ ಆ ಕಾಲೇಜಿನಲ್ಲಿ ನಾವು ಚರ್ಚಾಸ್ಪರ್ಧೆ ಮುಂತಾದವಕ್ಕೆ ದೀಪ […]

ಸಂಬಂಧ: ಡಾ. ಗವಿ ಸ್ವಾಮಿ

ಬೆಂಗಳೂರಿನ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಹೆಲ್ಪರ್ ಆಗಿದ್ದ ಇಪ್ಪತ್ತರ ವಯಸ್ಸಿನ ಸ್ವಾಮಿ ತನ್ನ ತಾತ ನಿಂಗಣ್ಣನ ಸಾವಿನ ಸುದ್ದಿ ತಿಳಿದು ಊರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ ಮೂರು ಘಂಟೆಯಾಗಿತ್ತು. ನೆತ್ತಿಯ ಮೇಲೆ ಕಾರ್ಮೋಡಗಳು ಕವಿಯುತ್ತಿದ್ದವು. ಮೂರು ಮಂದಿ ತುರಾತುರಿಯಲ್ಲಿ ನಿಂಗಣ್ಣನನ್ನು ಎತ್ತಿ ತಂದು ಬಿಳಿಪಲ್ಲಕ್ಕಿಯ ಒಳಗೆ ಕೂರಿಸಿದರು. ಅತ್ತಿತ್ತ ವಾಲಾಡುತ್ತಿದ್ದ ಕುತ್ತಿಗೆಗೆ ಮೆಟರೆಕಡ್ಡಿ ಕೊಟ್ಟು ಸರಿ ಮಾಡಿದರು. ಸ್ವಾಮಿ ಒಮ್ಮೆ  ಕೆಳಗೆ ಬಾಗಿ ತಾತನನ್ನು ಕಣ್ತುಂಬಿಕೊಂಡ. ತಾತನ  ಒಟ್ಟು ಆಕಾರದಲ್ಲಿ ಏನೋ ಒಂದು ಕೊರತೆಯಿದೆ ಅನ್ನಿಸಿತು . ಯೆಸ್. ತಾತನ […]

ಬಸವಣ್ಣನಿಂದ ಭಗೀರಥನವರೆಗೆ: ಕೆ. ಆರ್. ಹರಿಪ್ರಸಾದ್

ಈ ಶೀರ್ಷಿಕೆ ಓದಿ ಇದೇನಿದು ವಿಚಿತ್ರವಾಗಿದೆ? ಅಂತ ನಿಮಗೆ ಅನ್ನಿಸಿದರೆ, ನಿಮ್ಮ ಅನಿಸಿಕೆ ಸರಿಯಾಗೇ ಇದೆ. ಒಬ್ಬ ಚಾರಿತ್ರಿಕ ಮನುಷ್ಯ, ಮತ್ತೊಬ್ಬ ಪುರಾಣಪುರುಷ. ಇವರಿಗೆ ಹೇಗೆ ಸಂಬಂಧ ಅನ್ನುವ ನಿಮ್ಮ ಪ್ರಶ್ನೆಗೆ ಉತ್ತರವನ್ನು ಒಂದು ಸಾಲಿನಲ್ಲಿ ಹೇಳಲು ಕಷ್ಟ. ಅರ್ಥಾತ್ ನೀವು ಮುಂದೆ ಓದಲೇಬೇಕು. ನಮ್ಮದೊಂದು ಗೆಳೆಯರ ಬಳಗವಿದೆ. ನಾವು ಅದರ ಮೂಲಕ ನಾಟಕ, ಪ್ರತಿಭಟನೆ, ಜಾಥಾ, ಪ್ರಕಟಣೆ ಇತ್ಯಾದಿ ಏನೇನೋ ಮಾಡುತ್ತಿರುತ್ತೇವೆ. ಈ ಏನೇನೋ ಮಾಡುವ ನಮಗೆ ರಂಗಭೂಮಿ ಪ್ರಧಾನ ಮಾಧ್ಯಮ. ಒಮ್ಮೆ ನಾವು ಬಸವಣ್ಣನ […]

ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ: ವಿಶ್ವನಾಥ ಕಂಬಾಗಿ

ಬಹುಶಃ ಮನುಷ್ಯನಿಗೆ ಇನ್ನೊಂದೆರಡು ಮೆದುಳುಗಳೇನಾದರು ಇದ್ದಿದ್ದರೆ ಇಡೀ ಪೃಥ್ವಿ  ಎರಡಂತಸ್ತಿನ ಜಗತ್ತಾಗುತ್ತಿತ್ತು. ಯಾವ ಒಂದು  'ಅರಿವು' ಇರದೇ ಇರುವಾಗಿನ ಮನುಷ್ಯ ಪ್ರಾಣಿಯನ್ನು ಊಹಿಸಿಕೊಂಡಾಗ ಕಾಲ, ಸ್ಥಳ ಎರಡೂ ನಿಜಕ್ಕೂ ಶುಭ್ರವಾಗಿದ್ದವೆನೋ? ಎಂದೆನಿಸುತ್ತದೆ. ಆಗ ಮನುಷ್ಯ ಕೂಡ ಇತರೆ ಪ್ರಾಣಿಯಂತೆ ತಾನೂ ಒಂದು ಪ್ರಾಣಿ. ಎಲ್ಲರೊಳೊಂದಾಗಿ ಬದುಕಿದ ಆತ ಎಲ್ಲರಂತೆಯೇ ಬೆಳೆಯುತ್ತಿದ್ದ. ಎಲ್ಲದರ ಮಧ್ಯ ಎಲ್ಲವೂ ಆಗಿದ್ದ ಈ ಪ್ರಾಣಿಯ ಮೆದುಳು ಗಡ್ಡೆಯಲ್ಲಿ ಅದೆಂತಹ ನರಗಳು ಕವಲೊಡೆದು ಬೆಳೆದವೋ! ಆತನ ಇರುವಿಕೆಗೂ ಇತರೇ ಪ್ರಾಣಿಗಳ ಇರುವಿಕೆಯ ಮಧ್ಯ ಒಂದು […]

ಆ ..ಊ.. ಔಚ್.. ಗಾಯಬ್: ಅನಿತಾ ನರೇಶ್ ಮಂಚಿ

ಇದ್ದಕ್ಕಿದ್ದಂತೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ  ಯಾವುದೇ ಘನ ಗಂಭೀರ ಕಾರಣಗಳಿಲ್ಲದೆ ನನ್ನ ಬಲದ  ಕೈಯ ತೋರು ಬೆರಳಿನಲ್ಲಿ ನೋವು ಕಾಣಿಸಿಕೊಂಡಿತು. ನೋವು ಎಂದರೆ ಅದೇನು ಅಂತಹ ಸಹಿಸಲಸಾಧ್ಯವಾದ ಭಯಂಕರ ನೋವೇನೂ ಅಲ್ಲ. ಆದರೆ ದಿನವಿಡೀ ನಾನಿದ್ದೇನೆ ಎಂದು ಹಣಕಿ ಇಣುಕಿ ಹೋಗುತ್ತಿತ್ತು. ಹೀಗೆ ನೋವುಗಳು ಎಲ್ಲೇ ಪ್ರಾರಂಭವಾದರೂ ನಾನು ಅದರ ಇತಿಹಾಸವನ್ನು ಕೆದಕಲು ಹೊರಡುತ್ತೇನೆ. ಅವುಗಳ ಹುಟ್ಟು, ಬೆಳವಣಿಗೆಗಳ ಬಗ್ಗೆಯೇ ಕುತೂಹಲ ನನಗೆ. ಹಾಗಾಗಿ ನೋವು ಶುರು ಆದದ್ದು  ಹೇಗೆ, ಯಾವಾಗ, ಎಷ್ಟು ಗಳಿಗೆಗೆ, ಮುಂತಾದವುಗಳಿಗೆ ಉತ್ತರ […]

ನಾಲ್ಕು ಕವಿತೆಗಳು: ವೈ.ಬಿ.ಹಾಲಬಾವಿ, ಮೌಲ್ಯ ಎಂ., ಸಾಬಯ್ಯ ಸಿ.ಕಲಾಲ್, ಶೀತಲ್ ವನ್ಸರಾಜ್

ಪ್ರೀತಿ ಬೆರೆಸೋಣ… ಹೇಳುವುದು ಬಹಳಷ್ಟಿದೆ ಏಳುತ್ತಿಲ್ಲ ನಾಲಿಗೆ ಸೀಳಲ್ಪಟ್ಟಿದೆ ಹೊಲಿಯಲ್ಪಟ್ಟಿವೆ ತುಟಿಗಳು ಆದರೂ; ಮಾತಾಡೋಣ ಬಾ ಗೆಳಯ ನಮ್ಮ ಎದೆಗಳಿಂದ ನೂತ ನೋವಿನ ಎಳೆಗಳಿಂದ… ಕೇಳುವುದು ಬಹಳಷ್ಟಿದೆ ಸುರಿದ ಸೀಸ ಇನ್ನೂ ಆರಿಲ್ಲ ಕಿವುಡಾಗಿವೆ ಕಿವಿಗಳು ಪಿಸುಗುಡುತ್ತಿವೆ ಸನಾತನ ಗೋಡೆಗಳು ಆದರೂ; ಆಲಿಸೋಣ ಬಾ ಗೆಳಯ ನಮ್ಮ ಎದೆಬಡಿತದ ಸದ್ದುಗಳಿಂದ… ನೋಡುವುದು ಬಹಳಷ್ಟಿದೆ ಕುರುಡಾಗಿವೆ ಕಣ್ಣುಗಳು ನೆಟ್ಟ ಅವರ ಕ್ರೂರ ನೋಟಗಳಿಂದ ಆದರೂ; ಬೆಸೆಯೋಣ ಬಾ ಗೆಳೆಯ ನಮ್ಮ ಅಂತರಂಗದ ನೋಟಗಳನ್ನು ಎದೆಗೂಡಿನಲ್ಲಿ ಬಚ್ಚಿಟ್ಟ ಕನಸುಗಳಿಂದ… ನಡೆಯುವುದು […]

ಸಾಮಾನ್ಯ ಜ್ಞಾನ (ವಾರ 23): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು ಯಾವ ದೇಶದ ಉಡವಣಾ ಕೇಂದ್ರದಿಂದ ಹಾರಿಬಿಡಲಾಯಿತು? ೨.    ಪಂಜಾಬ್ ರಾಜ್ಯವಾಗಿ ಆಸ್ತಿತ್ವಕ್ಕೆ ಬಂದ ವರ್ಷ ಯಾವುದು? ೩.    ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು? ೪.    ಮೊದಲ ಭಾರತ – ಪಾಕ್ ಯುದ್ಧ ನಡೆದಾಗ ಭಾರತದ ಕಮಾಂಡರ್ ಆಗಿ ಸೇವೆಯಲ್ಲಿದ್ದ ಕನ್ನಡಿಗ ಯಾರು? ೫.    ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಲ್ಲಿದೆ? ೬.    ೧೯೫೭-೫೮ರ ಅವಧಿಯಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಒಟ್ಟುಗೂಡಿ ಭೂಮಿ ಮತ್ತು ಪರಿಸರಗಳ ಅಧ್ಯಯನ ನಡೆಸಿದರು. […]

ಹಲೋ ಡಾಕ್ಟರ್: ಅಮರ್ ದೀಪ್ ಪಿ.ಎಸ್.

ಅದೊಂದು ಓಣಿಯಲ್ಲಿ ಆಗಾಗ ವಯಸ್ಸಿನ ಹುಡುಗರ ನಡುವೆ ಹಾಕ್ಯಾಟ, ಜಗಳ ನಡೆಯುತ್ತಿದ್ದವು. ಮತ್ತೇನಿಲ್ಲ, ರಜಾ ದಿನ ಬಂತೆಂದರೆ, ಹಬ್ಬ ಹರಿದಿನಗಳು ಬಂದವೆಂದರೆ, ಇಲ್ಲವೇ ಮದುವೆ ಸೀಜನ್ನು ಇದ್ದರೆ ಹೀಗೆ… ಅಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟು ಆಡುವ ಖಯಾಲಿ ಅವರಿಗೆ. ಅಲ್ಲಿಗೆ ಇಸ್ಪೀಟು ಆಡುವವರು ಮಾತ್ರವೇ ಆಲ್ಲ ಆಡದವರೂ ಸಹ ಇರುತ್ತಿದ್ದರು. ಹಿಂದೆ ಸಾಲ ಕೊಟ್ಟು ಆಡಿಸಲು, ಇಸ್ಪೀಟು  ಆಡಲು ಹುರಿದುಂಬಿಸಿ ಮತ್ತೆ ಮತ್ತೆ ಸಾಲಗಾರರನ್ನಾಗಿಸಲು ಅಷ್ಟೇ.  ಅದಿದ್ದದ್ದೇ ಬಿಡಿ. ಅದಲ್ಲ ನಾನು ಹೇಳುತ್ತಿದ್ದುದು ಹೀಗೆ ಆಡುತ್ತಿದ್ದ ವಯಸ್ಸಿನ […]

ಹೆಸರಿಡದ ಕತೆಯೊಂದು (ಭಾಗ 5): ಪ್ರಶಸ್ತಿ ಪಿ.

ಇಲ್ಲಿಯವರೆಗೆ:  ಕಿಟ್ಟಿ-ಶ್ಯಾಮ ಶಾರ್ವರಿ-ಶ್ವೇತರಿಗೆ ಬಾಲ್ಯದಿಂದಲೂ ಸ್ನೇಹ. ಕಿಟ್ಟಿ ಹತ್ತಕ್ಕೆ ಓದು ನಿಲ್ಲಿಸಿ ಗ್ಯಾರೇಜ್ ಸೇರಿದ್ರೆ ಉಳಿದವರೆಲ್ಲಾ ಓದು ಮುಂದುವರೆಸಿ ಬೇರ್ಬೇರೆ ಕೆಲಸ ಹಿಡಿಯುತ್ತಾರೆ. ಕೆಲಸವಿಲ್ಲದ ಶ್ಯಾಮನ ಒದ್ದಾಟದ ದಿನಗಳು ಮುಗಿದು ಕೊನೆಗೂ ಒಂದು ಕೆಲಸವೊಂದು ಸಿಕ್ಕಿದೆ ಅವನಿಗೆ. ಶಾರ್ವರಿಗೆ ಕಾಲೇಜಲ್ಲೇ ಒಂದು ಕಂಪೆನಿಯಲ್ಲಿ ಆಯ್ಕೆಯಾಗಿದ್ದರೆ ಶ್ವೇತ ಬಾನುಲಿ ಉದ್ಘೋಷಕಿಯಾಗುವತ್ತ ಹೆಜ್ಜೆ ಹಾಕುತ್ತಾಳೆ. ಹಿಂಗೆ ಗೆಳೆಯರದ್ದು ಒಂದೊಂದು ದಿಕ್ಕು, ಒಂದೊಂದು ಗುರಿ. ಕಾಲೇಜಲ್ಲಿದ್ದ ಶ್ಯಾಮ-ಶಾರ್ವರಿಯ ನಡುವಿನ ಸಮಾನ ಮನಸ್ಥಿತಿ, ಆಕರ್ಷಣೆಗಳು ಅವರನ್ನು ಬದುಕಿನೋಟದಲ್ಲಿ ಒಂದು ಮಾಡುತ್ತಾ ಅಥವಾ ಬದುಕನ್ನೇ […]