Facebook

Archive for 2014

ಲೇಖನಗಳ ಆಹ್ವಾನ

ಸಹೃದಯಿಗಳೇ,  "ಅಸ್ಪೃಶ್ಯತೆ" ಕುರಿತ ನಿಮ್ಮ ಅನುಭವಗಳನ್ನು, ಚಿಂತನೆಗಳನ್ನು, ಕತೆ, ಕವಿತೆ, ಲೇಖನಗಳ ರೂಪದಲ್ಲಿ ಪಂಜುವಿಗೆ ಕಳುಹಿಸಿಕೊಡಿ.. ನಿಮ್ಮ ಬರಹಗಳು ದಿನಾಂಕ 11.04.2014 ರ ಒಳಗೆ ನಮಗೆ ತಲುಪಲಿ. ನಮ್ಮ ಈ ಮೇಲ್ ವಿಳಾಸ editor.panju@gmail.com, smnattu@gmail.com ಪಂಜು ಬಳಗದ ಪರವಾಗಿ ನಟರಾಜು

ನಾಯಿ ನಕ್ಕಿದ್ದು ಯಾಕೆ?!: ಗುರುಪ್ರಸಾದ ಕುರ್ತಕೋಟಿ

ಹೊಟ್ಟೆ ಹಸಿವೆಯಿಂದ ಗುರುಗುಡುತ್ತಿತ್ತು. ಯಾಕಿವತ್ತು ಇನ್ನೂ ತಟ್ಟೆಯ ಸಪ್ಪಳವೇ ಇಲ್ಲಾ? ನಾಲಿಗೆ ಹೊರ ಚಾಚಿ, ಮುಚ್ಚಿರುವ ತಲಬಾಗಿಲನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ತಲೆಯ ಮೇಲೆ ಸುಡುತ್ತಿರುವ ಸೂರ್ಯನ ಶಾಖವನ್ನು ತಾಳಲಾರದೇ ತನ್ನ ಗೂಡಿನೆಡೆಗೆ ಕುಂಯ್ ಗುಡುತ್ತಾ ರಾಜಾ ವಾಪಸ್ಸಾದ. ಗೂಡಿನಲ್ಲಿ ತಾಪ ಇನ್ನೂ ಜಾಸ್ತಿಯಿತ್ತು. ತಾನು ಆ ಮನೆಯನ್ನು ಸೇರಿದ್ದು ಚಿಕ್ಕ ಕುನ್ನಿಯಾಗಿದ್ದಾಗ. ತನ್ನ ಅಮ್ಮ ಟ್ರಕ್ಕಿನಡಿಯಲ್ಲಿ ಸಿಕ್ಕಿ ಸತ್ತು ತಾನು ತಬ್ಬಲಿಯಾದಾಗ, ಮುದ್ದಾಗಿದ್ದೆನೆಂದೋ ಅಥವಾ ಮುಂದೆ ಮನೆ ಕಾಯುವೆನೆಂದೋ ತನ್ನನ್ನು ಮನೆಗೆ ತಂದು ಸಾಕಿದ್ದು ಈ ಮನೆಯ […]

ಚುಟುಕಗಳು: ಮಂಜು ಎಂ. ದೊಡ್ಡಮನಿ

1 ಒಲವಿನ ನೋಟಿಗೆ ಕನಸುಗಳ ಚಿಲ್ಲರೆ ಕೊಟ್ಟ ಹುಡುಗಿ.. ನನ್ನ ಹೃದಯವನೆಂದು ಕ್ರಯಕ್ಕೆ ಪಡೆಯುತ್ತಿಯ..? 2 ನಿನ್ನೆದುರು ನಾ ಹಾಕುವ ಕಣ್ಣಿರಿಗೆ ಬೆಲೆ ಸಿಗದಿದ್ದರೂ ಚಿಂತೆಯಿಲ್ಲ ಆ ಕಣ್ಣುಗಳ ಕಣ್ಣಿರಿಗೆ ನೀನೆಂದು ಕಾರಣಳಾಗಬೇಡ..! 3 ನನ್ನೆದೆಗೆ ಗುಂಡಿಡುವ ಮೊದಲು ಗುರಿಯನ್ನೊಮ್ಮೆ ಸರಿಯಾಗಿ ನೋಡು ಗುಂಡುಗಳು ನಿನ್ನೆದೆಯ ಹೊಕ್ಕಾವು..! 4 ಸಾಧನೆಗಳ ಸಾಧಕರ ಜೀವನವ ಓದುವಾಗ ಬೆನ್ನುಡಿಯಲ್ಲಿ ಸಿಕ್ಕಿದ್ದು ; ಬರೀ ನೋವು ಸಂಕಟ ಬಡತನ ಮತ್ತು ಅವಮಾನಗಳ ಬೃಹತ್ ಗಂಟು..! 5 ನನ್ನ ಹೃದಯದ ಗೋಡೆಗಳಿಗೆ ನೀನೆ […]

ಹೀಗೊಂದು ಪ್ರಲಾಪ: ಅಖಿಲೇಶ್ ಚಿಪ್ಪಳಿ

ಮೊನ್ನೆ ಮುಂಜಾನೆ ಗಣ್ಯರೊಬ್ಬರು ಕೆಲಸದ ಮೇಲೆ ನೋಡಲು ಬರುವವರಿದ್ದರು, ಗಣ್ಯರಿಗೆ ಒತ್ತಡಗಳಿರುತ್ತವೆ ಹಾಗೂ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗದಿರುವುದು ಅಚ್ಚರಿಯ ವಿಷಯವಲ್ಲ. ೫-೧೦ ನಿಮಿಷದಲ್ಲಿ ಬರುತ್ತಾರೆ ಎಂಬುದನ್ನು ಗಣ್ಯರ ಸಹಾಯಕ ಜಂಗಮವಾಣಿಯ ಮುಖಾಂತರ ತಿಳಿಸುತ್ತಿದ್ದ. ಸರಿ ಮತ್ತೇನು ಮಾಡಲು ತೋಚದೆ, ರಸ್ತೆಗೆ ಬಂದು ನಿಂತೆ. ಮುಂಜಾನೆಯ ಹಕ್ಕಿಗಳ ಕಲರವದ ನಡುವೆ ನಾನೇನು ಕಡಿಮೆಯೆಂಬಂತೆ ಪುಟ್ಟ ಇಣಚಿಯೊಂದು ನಿರ್ಕಾಯ್ ಮರವನ್ನು ಜಿಗಿ-ಜಿಗಿದು ಏರುತಿತ್ತು. ನಗರದ ಹೊಲಸನ್ನು ಸ್ವಚ್ಚ ಮಾಡುವ ಪ್ರಯತ್ನದಲ್ಲಿ ಕಾಗೆಗಳ ಸಂತತಿ ಮಗ್ನವಾಗಿದ್ದವು. ಕೈವಾರದಿಂದ ಗೀರಿದಷ್ಟು ಕರಾರುವಕ್ಕಾದ […]

ಸಾಮಾನ್ಯ ಜ್ಞಾನ (ವಾರ 22): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು ೨೧ ರಿಂದ ೧೮ಕ್ಕೆ ವರ್ಷಕ್ಕೆ ಇಳಿಸಲಾಯಿತು? ೨.    ರಾಜಾಸಂಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? ೩.    ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? ೪.    ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು? ೫.    ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು? ೬.    ಗೋಬರ್ ಗ್ಯಾಸ್‌ನಲ್ಲಿರುವ ಅನಿಲ ಯಾವುದು? ೭.    ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು? ೮.   […]

ಆಧುನಿಕ ಮಹಿಳೆಯರು ಶಿಲುಬೆಗೇರುವ ಪರಿ: ಶ್ರೀದೇವಿ ಕೆರೆಮನೆ

ನಾನು ಸೀತೆಯಷ್ಟು ಸಹಿಷ್ಣು, ಸರ್ವ ಸಹನೆಯವಳಲ್ಲ. ಅವಶ್ಯಕತೆ ಉಂಟಾದಲ್ಲಿ ನಾನು ವಿಪ್ಲವ ಮಾಡ ಬಲ್ಲೆ… ಪ್ರತಿ ಹಿಂಸೆಯನ್ನೂ ಮಾಡಬಲ್ಲೆ. ಕಳೆದ ಎರಡು ತಿಂಗಳಿಂದ ಡಾ. ಪ್ರತಿಭಾ ದೇವಿಯವರು ಬರೆದ, ಮೂತಿದೇವಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ’ಯಾಜ್ಞಸೇನಿ’ ಕೃತಿಯನ್ನು ಗೌತಮ ಗಾಂವಕರರು ನನ್ನ ಕೈಗಿಟ್ಟಾಗಿನಿಂದ ಕನಿಷ್ಟ ಸಾವಿರ ಸಲ ಈ ವಾಕ್ಯವನ್ನು ಓದಿದ್ದೇನೆ. ಆಸ್ವಾದಿಸಿದ್ದೇನೆ. ಒಳಗೊಳಗೇ ಈ ವಾಕ್ಯವನ್ನು ಮಥಿಸಿದ್ದೇನೆ, ಈ ವಾಕ್ಯವನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನವನ್ನೂ ಮಾಡಿದ್ದೇನೆ. ಬಹುಶಃ ಮಹಿಳಾ ವಾರಾಚರಣೆಯ ಈ ಸಂದರ್ಭದಲ್ಲಿ ಈ ಮಾತು ಕೇವಲ […]

ಕಾನನದ ನೀರವತೆಯ ನಡುವೆ ರೈಲು ಹಳಿಗಳ ಮೇಲೊಂದು ಪಯಣ (ಭಾಗ 1): ನಿಶಾಂತ್ ಜಿ.ಕೆ.

ನಡೆದೂ ನಡೆದೂ ಸುಸ್ತಾಗಿತ್ತು ಆಗಲೇ ಸುದೀರ್ಘ ಐದು ಘಂಟೆಗಳ ಕಾಲದ ದುರ್ಗಮ ಹಾದಿ ಸವೆದು ಹೋಗಿತ್ತು, ಅಬ್ಬಾ ಇನ್ನು ನಡೆಯಲಾಗುವುದಿಲ್ಲ ಎಂದು ಏದುಸಿರು ಬಿಡುತ್ತಾ ಕೂತಾಗ ಮೈ ತಾಗಿದ ತಣ್ಣನೆಯ ಮುತ್ತಿನಂತ ಮಂಜಿನ ಹನಿ ಸ್ಪೂರ್ತಿ ನೀಡಿ ಮತ್ತೆ ಮುಂದಡಿಯಿಡಲು ಸಹಕರಿಸಿತ್ತು. ಹಾಗೆಯೇ ಇನ್ನು ಸ್ವಲ್ಪ ದೂರ ಕ್ರಮಿಸಿದ ನಂತರ ಸಿಕ್ಕ ಸೌಂದರ್ಯದ ಗಣಿ ಆರು ಘಂಟೆಗಳ ಕಾಲದ ಹಿಂದಿನ ದುರ್ಗಮ ಹಾದಿಯಲ್ಲಿ ಸಾಗಿದ ಆಯಾಸವನ್ನೆಲ್ಲಾ ಮರೆಸಿ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತ್ತು.  ಅಯ್ಯೋ ಇದೇನಿದು ಕಥೆ ಸ್ಟಾರ್ಟ್ ಮಾಡೋಕು […]

ಹೆಸರಿಡದ ಕತೆಯೊಂದು (ಭಾಗ 4): ಪ್ರಶಸ್ತಿ ಪಿ.

ಇಲ್ಲಿಯವರೆಗೆ ಧನಸಂಪಾದನೆಯಲ್ಲಿ ಮಧ್ಯಮ ವರ್ಗವೂ, ಧಾರಾಣತನದಲ್ಲಿ ಕಡುಬಡವರೂ ಆಗಿದ್ದ ಕುಟುಂಬವೊಂದರಲ್ಲಿ ಹುಟ್ಟಿದ ಮೇಧಾವಿ ಶ್ಯಾಮ. ಧನಸಂಪಾದನೆಯಲ್ಲಿ ಬಡವರಾಗಿದ್ದರೂ ಹೃದಯ ವೈಶಾಲ್ಯತೆಯಲ್ಲಿ ಶ್ರೀಮಂತರಾಗಿದ್ದ ಕುಟುಂಬದಲ್ಲಿ ಹುಟ್ಟಿದವ ಶ್ಯಾಮನ ಚಡ್ಡೀ ದೋಸ್ತ ಕಿಟ್ಟಿ. ಕಿಟ್ಟಿ ಹೈಸ್ಕೂಲಿಗೇ ವಿದ್ಯೆಗೆ ಶರಣು ಹೊಡೆದು ಪೇಟೆಯ ಗ್ಯಾರೇಜು ಸೇರಿದ್ರೆ ಶಾಲೆಯ ಟಾಪರ್ರಾಗಿದ್ದ ಶ್ಯಾಮ ಮುಂದೆ ಓದೋ ಛಲದಿಂದ ಡಿಗ್ರಿವರೆಗೂ ಮುಟ್ಟಿದ್ದ. ಡಿಗ್ರಿಯಲ್ಲಿ ಶ್ಯಾಮನ ಕಣ್ಣಿಗೆ ಬಿದ್ದ ಹುಡುಗಿ ಶಾರ್ವರಿ. ಇಬ್ಬರ ಹಲವು ವಿಚಾರಧಾರೆಗಳು ಹೊಂದುತ್ತಿದ್ದರಿಂದ್ಲೋ ಏನೋ ಇಬ್ಬರಲ್ಲೂ ಏನೋ ಆಕರ್ಷಣೆ.. ಅದು ಪ್ರೀತಿಯೆಂದಲ್ಲ. ಏನೋ […]

ಕಾಲದ ಚಕ್ರವು ತಿರುಗುವುದೊ ಜ್ವಾಕಿ,, ಮುಪ್ಪೆಂಬ ಶೈಶವ ಬರುವುದೊ ನಕ್ಕಿ: ಸುಮನ್ ದೇಸಾಯಿ

    ರವಿವಾರ ಸಂಜಿಮುಂದ ವಾಕಿಂಗ್‌ಗೆಂತ ಪಾರ್ಕಿಗೆ ಹೋಗಿದ್ದೆ. ಅಲ್ಲೆ ಒಂದ ಬೆಂಚಿನ ಮ್ಯಾಲೆ ವಯಸ್ಸಾದ ಇಬ್ಬರು ಅಜ್ಜಾ-ಅಜ್ಜಿ ಕೂತಿದ್ರು. ದಿನಾ ನೋಡತಿದ್ದೆ ಅವರನ್ನ. ಅವರನ್ನ ನೋಡಿ ಒಂಥರಾ ಖುಷಿನು ಆಗತಿತ್ತು. ಇಳಿವಯಸ್ಸಿನ್ಯಾಗ ಒಬ್ಬರಿಗೊಬ್ಬರು ಜೊಡಿಯಾಗಿ ದಿನಾ ಈ ಹೊತ್ತಿನ್ಯಾಗ ಆ ಪಾರ್ಕಿಗೆ ಬರತಿದ್ರು. ಅವತ್ತ ಅವರನ್ನ ಮಾತಾಡ್ಸಬೇಕನಿಸಿ ಹತ್ರ ಹೋಗಿ ಮಾತಾಡಿಸಿದೆ. ನಾ ಹಂಗ ಅವರ ಹತ್ರ ಹೋಗಿ ಮಾತಾಡ್ಸಿದ್ದು ಆ ದಂಪತಿಗಳಿಗೆ ಭಾಳ ಖುಷಿ ಆತು. ಹತ್ರ ಕೂಡಿಸಿಕೊಂಡು ಭಾಳ ಅಂತಃಕರಣದಿಂದ ಮಾತಾಡ್ಸಿದ್ರು. ಅವರ […]