ಕನ್ನಡವೇ ನಿತ್ಯ: ಸ್ಮಿತಾ ಅಮೃತರಾಜ್

ನಾವು ಎಲಿಮೆಂಟರಿ ಶಾಲೆಗೆ ಹೋಗುವ ಹೊತ್ತಿಗೆ ಅಲ್ಲೊಂದು ಇಲ್ಲೊಂದರಂತೆ ಅಕ್ಕಪಕ್ಕದ ಊರುಗಳಲ್ಲಿ  ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಗಳು ಹಣಕಿ ಹಾಕುತ್ತಿದ್ದವಷ್ಟೆ. ಉಳ್ಳವರು ಹಾಗು  ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಗೆ  ಸೇರಿಸಬೇಕೆಂಬ ಮಹಾತ್ಕಾಂಕ್ಷೆ ಹೊತ್ತ ಹೆತ್ತವರ ಮಕ್ಕಳಿಗೆ ಮಾತ್ರ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ನೊಳಕ್ಕೆ ಹೊಕ್ಕು ಲಯ ಬದ್ಧವಾಗಿ ಇಂಗ್ಲೀಷ್ ಪ್ರಾರ್ಥನೆಯನ್ನು  ಉಸುರುವ ಭಾಗ್ಯ. ನಾವೆಲ್ಲಾ ಬರೇ ಕಾಲಿನಲ್ಲಿ. ಹೆಚ್ಚೆಂದರೆ ಹವಾಯಿ ಚಪ್ಪಲನ್ನು ತೊಟ್ಟು ಬಲು ದೂರದಿಂದ ನಡೆದು ಕೊಂಡೇ ಬರುವಾಗ,  ಅವರುಗಳೆಲ್ಲಾ ಗರಿ ಗರಿ … Read more

ಮಾರ್ಚ್ ತಿಂಗಳು, ವಿಶ್ವ ಅರಣ್ಯ ಮತ್ತು ಜಲ ದಿನ: ಅಖಿಲೇಶ್ ಚಿಪ್ಪಳಿ

ಮಾರ್ಚ್ ತಿಂಗಳೆಂದರೆ ಹಣಕಾಸಿನ ವರ್ಷ ಮುಗಿಯುವ ತಿಂಗಳು. ಭೂಮಿಯ ಮೇಲೆ ಬದುಕುವ ಎಲ್ಲಾ ಜನರು ಹಣದ ಮೇಲೆ ಅವಲಂಬಿತರಾಗಿದ್ದಾರೆ. ಯಾವ ಬ್ಯಾಂಕಿಗೆ ಹೋದರು ಎಲ್ಲರೂ ಬ್ಯುಸಿ ಮತ್ತು ಬಿಸಿ. ಲೆಕ್ಕಪರಿಶೋಧಕರಿಗೆ ಕೈತುಂಬಾ ಕೆಲಸ. ಸರ್ಕಾರದ ಛಪ್ಪನ್ನಾರು ಇಲಾಖೆಗಳು ಮಾರ್ಚ್ ಕೊನೆಯ ಹಂತದಲ್ಲಿ ಬ್ಯುಸಿ ತನ್ಮಧ್ಯೆ ಚುನಾವಣೆಯ ಕಾವು ವಾತಾವರಣದ ಕಾವು ಸೇರಿ ಜನಜೀವನ ಅಸ್ತ್ಯವಸ್ತವಾಗಿದೆ. ಮಾರ್ಚ್ ತಿಂಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ದುತ್ತೆಂದು ಉದ್ಬವಿಸಿದೆ. ಮಾರ್ಚ್ ತಿಂಗಳ 21ನೇ ತಾರೀಖು ವಿಶ್ವ ಅರಣ್ಯ ದಿನ. ಈ ತಿಂಗಳಲ್ಲಿ … Read more

ಮೊದಲ ಸಲಾ: ಅನಿತಾ ನರೇಶ್ ಮಂಚಿ

 ಏನೇ ಹೇಳಿ.. ಜೀವನದಲ್ಲಿ  ಮೊದಲ ಸಲ ಎನ್ನುವುದು ಪ್ರತಿಯೊಬ್ಬನ ಮನಸ್ಸಿನಲ್ಲಿಯೂ ವಿಶೇಷವಾಗಿಯೇ ನೆನಪಿರುತ್ತದೆ. ಮೊದಲ ಸಲ ಶಾಲೆಯ ಮೆಟ್ಟಿಲು ಹತ್ತಿದ್ದು, ಮೊದಲ ಸಲ ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದು, ಮೊದಲ ಸಲ ಯಾರಿಗೂ ಕಾಣದಂತೆ ಅಮ್ಮನ ಸೀರೆ ಉಟ್ಟದ್ದು, ಹುಡುಗರಾದರೆ ಸೊಂಟದಿಂದ ಜಾರುವ ಭಯವಿದ್ದರೂ ಅಪ್ಪನ ಪಂಚೆಯನ್ನುಟ್ಟು ದೊಡ್ಡವನಾದಂತೆ ಮೆರೆದದ್ದು, ಇಷ್ಟೇ ಏಕೆ ಮೊದಲ ಸಲ ಯಾರೊಡನೆಯೋ ಕಣ್ಣೋಟ ಕೂಡಿದ್ದು, ಕನಸಾಗಿ ಕಾಡಿದ್ದು.. ಯಾವುದನ್ನೇ ಹೇಳಲಿ ಮೊದಲ ಸಲ ಎನ್ನುವುದು ನಮಗೆ ನೆನಪಾದಂತೆ ಮನಸ್ಸಿಗೆ ಮುದ ನೀಡುವುದಂತೂ … Read more

ರಸ್ತೆ ಅಪಘಾತವೂ ಪರಿಹಾರದ “ಮಾರ್ಗ” ವೂ: ಅಮರ್ ದೀಪ್ ಪಿ.ಎಸ್.

ಆಗತಾನೇ ರಾಜಣ್ಣ ಹಳೇ ಹಗರಿಬೊಮ್ಮನಹಳ್ಳಿ ದಾಟಿ ರಸ್ತೆಯ ಎಡಕ್ಕಿರುವ ಧಾಭಾದಲ್ಲಿ ಏಕಾಂತದ   ಮೇಜಿನ ಮೇಲೆ ಗ್ಲಾಸಿನಿಂದ ಬ್ಲೆಂಡರ್ ಸ್ಪ್ರೈಡ್  ಕೊನೆಯ ಸಿಪ್ಪು ಗುಟುಕರಿಸಿ ಕೆಳಗಿಟ್ಟು ಇನ್ನೇನು ಎದ್ದೇಳಬೇಕು, ಆಗ ರಾಜಣ್ಣನ ಫೋನು ರಿಂಗಣಿಸಿತು. ದೇವಾ  ಕರೆ ಮಾಡಿದ್ದ.  ಆಗ ಸಮಯ ರಾತ್ರಿ ಹನ್ನೊಂದುವರೆ ಆಗಿತ್ತು.  ದ್ವನಿಯಲ್ಲಿ ಗಾಬರಿ ಇತ್ತು. "ಅಣ್ಣಾ, ನನ್ನ ಡ್ರೈವಿಂಗ್ ಲೈಸೆನ್ಸ್ ಇದ್ದ ವಾಲೆಟ್ ಕಳೆದು ಹೋಗಿದೆ."  ಅಂದ. ನಿಶೆಯಲ್ಲಿ ರಾಜಣ್ಣ ಧಾಭಾದ ಹೊರಗೆ ಬರುತ್ತಾ "ಈಗೇನ್ ಹೊಸಾದು ಕೊಡುಸ್ಲೆನಲೇ"  ಎಂದು ಗದರಿ … Read more

ಅಲ್ಲೂರಿಯ ಒಡಲುರಿ ಇನ್ನೂ ಆರಿಲ್ಲ…!: ಅಜ್ಜಿಮನೆ ಗಣೇಶ್

ನಮಗೆ ನೀರು ಬೇಡ, ರಸ್ತೆ ಬೇಡ, ಮನೆಯೂ ಬೇಡ, ಸ್ವಾತಂತ್ರ್ಯದ ಗುರುತಿನ ಒಂದೇ ಒಂದು ಪತ್ರ ಬೇಡ. ನಿಮ್ಮ ಸವಲತ್ತುಗಳು ನಿಮಗೆ ಇರಲಿ. ನಮ್ಮನ್ನ ಬದುಕಲು ಬಿಡಿ. ಕಾಡು ಕಾಯುವವರು ನಾವು ನಮಗೆ ಸಾಮಾಜಿಕ ನ್ಯಾಯ ಕೊಡಿ. ಹಸಿರುಟ್ಟ ಹಾಡಿಯಲ್ಲಿ, ನೆಮ್ಮದಿಯ ಬದುಕಿಗಾಗಿ ಹಾತೊರೆಯುತ್ತಿರುವ ಆದಿವಾಸಿಗಳ ಅಹವಾಲಿದು..ಬದಕಲು ಬಿಡಿ ಅಂತ ಅಂಗಲಾಚುತ್ತಿರುವ ಪರಿಯಿದು…ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತ್ವಾರಣಾ. ಶೋಷಣೆ ವಿರುದ್ಧದ  ಈ ಹಾಡು ಮಲೆನಾಡ  ಮಡಿಲೊಳಗೆ ಹರಡಿದ ಕಾಡು ದರಲೆ ಮೇಲೆ ನೆತ್ತರ ಹರಿಸಿದ್ದು, … Read more

ಚೈತ್ರದ ಯುಗಾದಿ ಸಂಭ್ರಮ: ಸುಮನ್ ದೇಸಾಯಿ

ಮಾಸಗಳೊಳಗ ಮೊದಲನೆ ಮಾಸ ಚೈತ್ರ ಮಾಸ, ಅದರೊಳಗ ಬರೊ ಸಂವತ್ಸರದ ಮೊದಲನೆ ಹಬ್ಬ ಯುಗಾದಿ. ಯುಗಾದಿ ಅಂದಕೂಡಲೆ ನೆನಪಾಗೊದು, ಬೇವು ಬೆಲ್ಲ. ಈ ಬೇವು ಬೆಲ್ಲದ ಸಂಪ್ರದಾಯ ಯಾವಾಗ ಶುರು ಆತೊ ಗೊತ್ತಿಲ್ಲಾ, ಆದ್ರ ಭಾಳ ಅರ್ಥಪೂರ್ಣ ಪದ್ಧತಿ ಅದ. ಜೀವನದಾಗ ಬರೋ ಸುಖ-ದುಖಃ ಸಮಾನಾಗಿ ತಗೊಂಡು, ಧೈರ್ಯಾದಿಂದ ಎನಬಂದ್ರುನು ಎದರಸಬೇಕು ಅನ್ನೊ ಸಂದೇಶವನ್ನ ಸಾರತದ.  ಚೈತ್ರ ಮಾಸ ಅಂದ್ರ ಫಕ್ಕನ ನೆನಪಾಗೊದು ಹಸಿರು, ಯಾಕಂದ್ರ ಚಳಿಗಾಲದಾಗ ಬರಡಾಗಿ ನಿಂತ್ತಿದ್ದ ಗಿಡಾ, ಮರಾ, ಬಳ್ಳಿಗೊಳು ಚಿಗುರೊ ಕಾಲಾ. ನಂಗಿನ್ನು … Read more

ಚುಟುಕಗಳು: ವಾಸುಕಿ ರಾಘವನ್

1  ರಾಯಲ್ ಫ್ಯಾಮಿಲಿಯಲ್ಲಿ ಹುಟ್ಟಿತು ಕಂದಮ್ಮ  ಇಟ್ಟರು ಮುದ್ದಾದ ಹೆಸರು ಸೀಮಾ ಅಂತ  ನೆಲೆಸಿದ್ದರೇನಂತೆ ತೆಲಂಗಾಣದಲ್ಲಿ  ಪ್ರಸಿದ್ಧಿಯಾಗಿದ್ದಾಳೆ ಇಂದು ರಾಯಲ್-ಸೀಮಾ ಅಂತ! 2  ಗಂಡ ಹೆಂಡತಿ ಇಬ್ಬರೇ ಖುಷಿಯಾಗಿದ್ರೆ  ನಮ್ಮ ಸಮಾಜಕ್ಕೇನು ಯೂಸು? ಅದಿಕ್ಕೆ ಮೂಗು ತೂರಿಸ್ಕೊಂಡ್ ಬರ್ತಾರೆ  ಯಾವಾಗ ಹ್ಯಾಪಿ ನ್ಯೂಸು? 3  ಅದೆಷ್ಟು ತಾರತಮ್ಯ ಹೆಂಗಸರೆಡೆಗೆ ನಮ್ಮ ಈ ಸಮಾಜದಲ್ಲಿ ಅಡುಗೆಯವರೆಲ್ಲ ಕೂಗುತ್ತಿದ್ದರು "ಸಾರ್ ಗೆ ಅನ್ನ? ಸಾರ್ ಗೆ ಅನ್ನ?" ಕೇಳುವುದಕೆ ಒಬ್ಬನೂ ಇರಲಿಲ್ಲ ನಿಮಗೇನು ಬಡಿಸಲಿ ಮೇಡಮ್ ಅಂತ! 4  ನಾನು … Read more

ಮೂಢನಂಬಿಕೆ: ಕೆ.ಟಿ.ರಘು

ಈ ಪ್ರಶ್ನೆಗೆ ಉತ್ತರ ನೀಡುವುದು ತುಸು ಶ್ರಮದಾಯಕ ಎನ್ನಿಸುವ ನಿಜ. ಮೂಢನಂಬಿಕೆ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಇದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ತನ್ನ ಸ್ವರೂಪವನ್ನು ಬದಲಿಸುತ್ತಾ ಸಾಗುತ್ತಿದೆ. ಒಂದು ಕಾಲದ ನಂಬಿಕೆಗಳು ಇನ್ನೊಂದು ಕಾಲಕ್ಕೆ ಸುಳ್ಳೆಂಬುದು ಈ ವೈಜ್ಞಾನಿಕ ಯುಗದ ಜಗತ್ತು ಸಾಬೀತುಪಡಿಸಿದೆ. ಇಂದಿನ ಯುಗದಲ್ಲಿಯೂ ಸಹ ಹಿಂದಿನ ಕಾಲದ ಕೆಲವು ನಂಬಿಕೆಗಳನ್ನು ಅನುಸರಿಸುವುದನ್ನು ಮೂಢನಂಬಿಕೆ ಎನ್ನಬಹುದು. ಮೂಢನಂಬಿಕೆಗಳು ಸಾಮಾಜಿಕವಾಗಿ ಬೆಳೆದುಬಂದ ಅನಿಷ್ಟ ಪಿಡುಗುಗಳು. ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಅವನ ಮುಂದೆ ಎಲ್ಲರೂ … Read more

ಹೆಸರಿಡದ ಕತೆಯೊಂದು (ಭಾಗ 3): ಪ್ರಶಸ್ತಿ ಪಿ.

(ಇಲ್ಲಿಯವರೆಗೆ) ಕಾಲೇಜು ದಿನಗಳಿಂದ್ಲೂ ಭಾಷಣ, ಚರ್ಚೆ ಅಂತೆಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಶಾರುಗೆ ತನ್ನ ಡಿಗ್ರಿ ಮುಗಿದ ಮೇಲೆ ತಾನೂ ಒಂದು ಕೆಲಸ ಮಾಡ್ಬೇಕಾ ಅನ್ನೋ ಕಲ್ಪನೆಯೇ ಬೇಸರ ತರಿಸುತ್ತಿತ್ತು. ಕಾಲೇಜಲ್ಲಿ ಪ್ಲೇಸ್ಮೆಂಟಂತ ಬಂದು ತನ್ನ ಗೆಳತಿಯರೆಲ್ಲಾ ಒಬ್ಬೊಬ್ಬರಾಗಿ ಆಯ್ಕೆಯಾಗೋಕೆ ಶುರುವಾದಾಗ ತಾನೂ ಆಯ್ಕೆಯಾಗಿದ್ರೆ ಅನ್ನಿಸೋಕೆ ಶುರುವಾಗಿತ್ತು. ಆದ್ರೆ ಅನಿಸಿದ್ದೇ ಬಂತು. ಆ ಸೀಸನ್ನೇ ಮುಗಿದೋದ್ರೂ ಕೆಲಸ ಅನ್ನೋದು ಸಿಕ್ಕಿರಲಿಲ್ಲ.  ಯಾಕಾದ್ರೂ ಕೆಲ್ಸ ಕೆಲ್ಸ ಅಂತ ಹುಡುಕ್ತಾರೋ , ತಾನೆಂತೂ ಆರಾಮಾಗಿದ್ದುಬಿಟ್ತೀನಿ ಅಂತ ಹಿಂದಿನ ವರ್ಷ ಅಂದುಕೊಂಡಿದ್ದ ನಿರ್ಣಯಗಳೆಲ್ಲಾ … Read more

ಓಯಸಿಸ್: ನಿನಾದ (ಭಾಗ 4)

ಅಷ್ಟು ಹೊತ್ತಿಗೆ ನಿಶಾಂತ್ ಕರೆ ಮಾಡಿ ಹೇಳಿದ ತಡೆ  ಹಿಡಿದ ವೇತನ ಬಿಡುಗಡೆ ಆಗಿದೆ. ಯಾವ್ ಯಾವ್ದಕ್ಕೆ ಎಷ್ಟು ಎಂದು ವಿಲೇವಾರಿ  ಹೇಳು. ಮೊದಲು ಆ ಜೈನ್  ಗೆ ಫೋನ್ ಮಾಡಿ ಹೇಳು, ಹೇಳಿದ್ರೆ ಆವಾ ನಂಬೋಲ್ಲ ನಿನ್ನೆ ಅಕೌಂಟ್ ಗೆ  ಹಾಕಿದ ಹಣ ವಾಪಸು ಮಾಡಬೇಕು. ಸರಿ ಈಗಲೇ ಹೇಳುವೆ ನೀ ವಾಪಾಸು  ಮಾಡಿ ಬಿಡು. ಎಂದು ನಿಶಾಂತ್ ಹೇಳಿ ಕರೆಯನ್ನು ಮುಗಿಸಿದ. ಅಲ್ಲಿಗೆ ಒಂದು ವಿಲೇವಾರಿ ಆಯಿತು. ಅಂತೂ ಚಿಂತೆಯ ಮೂಟೆ ಹೊತ್ತು ಬಂದು ಎಲ್ಲ … Read more

ಸಾಮಾನ್ಯ ಜ್ಞಾನ (ವಾರ 21): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ೨೦೧೪ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧೀಕೃತವಾಗಿ ಘೋಷಿಸಿತು? ೨.    ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು? ೩.    ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? ೪.    ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು? ೫.    ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭಾದ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು? ೬.    ಹೆಚ್.ಐ.ವಿ ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ … Read more