ಮರೆಯಾಗುತ್ತಿರುವ ಜಾನಪದ ಸೊಗಡು: ಸುಮನ್ ದೇಸಾಯಿ

  ಇಂದಿನ ದಿವಸಗಳೊಳಗ ನವ್ಯಕಾವ್ಯಗಳ ಆರ್ಭಟಗಳ ಅಡಿಯೊಳಗ ಜಾನಪದ ಕಾವ್ಯಗಳ ಸೊಗಡು ಮರಿಯಾಕ್ಕೊತ ಹೊಂಟದ. ಈ ಜನಪದ ಸಿರಿ ಹೆಚ್ಚಾಗಿ ಹಳ್ಳಿಗೊಳೊಳಗ ನೋಡಲಿಕ್ಕೆ ಸಿಗತದ. ಹಳ್ಳಿಗಳೊಳಗ ಜೀವನ ಶೂರುವಾಗೊದ ಈ ಜನಪದ ಸೊಗಡಿನ ಹಾಡುಗಳಿಂದ. ಹಳ್ಳಿ ಜನರಲ್ಲೆ ಅಕ್ಷರಜ್ಞಾನ ಇಲ್ಲಂದ್ರು ಜೀವನದ ಅನುಭವಗೊಳ ಲಾಲಿತ್ಯವನ್ನ ಪದಕಟ್ಟಿ ಹಾಡುವ ಕಲೆ ಇರ್‍ತದ. "ಮುಂಝಾನೆ ಎದ್ದು ನಾ ಯಾರನ್ನ ನೆನೆಯಲಿ" ಅಂತ ದೈವಿಕ ಭಾವನೆಯಿಂದ ದಿನ ನಿತ್ಯದ ಬದುಕಿನ ಬಂಡಿ ಎಳಿಲಿಕ್ಕೆ ಅನುವಾಗ್ತಾರ. ದೈನಂದಿನ ಕೆಲಸಗಳಿಗೆ ಜಾನಪದದ ಸಾಹಿತ್ಯದ ರೂಪ ಕೊಟ್ಟು … Read more

ಚದುರಂಗ: ಡಾ. ಗವಿಸ್ವಾಮಿ

ಇಂಟರ್ ಕಾಲೇಜ್ ಚೆಸ್ ಪಂದ್ಯಾವಳಿಯ ಅಂತಿಮ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗುವುದರಲ್ಲಿತ್ತು. ಆಗಲೇ ಆಸೀನನಾಗಿದ್ದ ಎದುರಾಳಿಯ ಕೈಕುಲುಕಿ ನನ್ನ ಛೇರಿನ ಮೇಲೆ ಕುಳಿತೆ. ಗಾಂಭೀರ್ಯದ ಉಳಿಯಿಂದ ಕೆತ್ತಿದಂತೆ ಕಾಣುತ್ತಿದ್ದ ಅವನ ಮುಖಚರ್ಯೆ ನನ್ನಲ್ಲಿ ದಿಗಿಲು ಹುಟ್ಟಿಸಿತು. ಸೋಲಿನ ಭಯ ಆವರಿಸಿತು. ನೀನು ಫೈನಲ್ಲಿಗೆ ತಲುಪಿರುವುದೇ ದೊಡ್ಡ ಸಾಧನೆ.. ಯುವ್ ಹ್ಯಾವ್ ನಥಿಂಗ್ ಟು ಲೂಸ್.. ಗೋ ಎಂಡ್ ಎಂಜಾಯ್ ಯುವರ್ ಗೇಮ್ ಎಂದು ನಮ್ಮ ಲೆಕ್ಚರರ್ ಹೇಳಿದ್ದು ಮನಸ್ಸಿನಲ್ಲಿತ್ತು. ಹೌದು.ನಾನು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಇತರರನ್ನು ಮೆಚ್ಚಿಸುವುದಕ್ಕಾಗಿ … Read more

ಹೋಳಿ ಹಬ್ಬ: ಅಖಿಲೇಶ್ ಚಿಪ್ಪಳಿ

ಹೋಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಖುಷಿ ಯುವಕ-ಯುವತಿಯರಲ್ಲಿ ಕಂಡು ಬರುತ್ತಿದೆ. ಕಾಮಣ್ಣನನ್ನು ಸುಡಲು ತಯಾರಿಯಾಗಿದೆ. ಬಣ್ಣಗಳನ್ನು ತಟ್ಟೆಗಳಲ್ಲಿ ಪೇರಿಸಿಟ್ಟಾಗಿದೆ. ಹೋಳಿ ಹಬ್ಬದ ಧಾರ್ಮಿಕ ಆಯಾಮವೇನೇ ಇರಲಿ, ಸಾಂಸ್ಕ್ರತಿಕ ವೈವಿಧ್ಯವೂ ಬದಿಗಿರಲಿ. ಹೋಳಿ ಹಬ್ಬದಿಂದ ಪರಿಸರಕ್ಕೇನು ಪೆಟ್ಟು ಎಂಬುದನ್ನು ನೋಡುವುದಕ್ಕೂ ಮೊದಲು ನಕಾರಾತ್ಮಕ ಭಾವನೆಯನ್ನು ತೋರ್ಪಡಿಸುವಾಗ, ಅಹಂಕಾರವನ್ನು ಸೊಕ್ಕನ್ನು ಮುರಿಯುವ ಮನೋಗತವನ್ನು ವ್ಯಕ್ತಪಡಿಸುವಾಗ ನಾಳೆ ಇದೆ ಹೋಳಿ ಹಬ್ಬ ಎನ್ನುವುದು ರೂಡಿಯಲ್ಲಿದೆ. ಕೆಟ್ಟದ್ದನ್ನು ವೈಭವೀಕರಿಸುವ ಮನೋಭಾವವೂ ಈ ಮಾತಿನಲ್ಲಿದೆ. ಸರ್ಕಾರಗಳಿಗೆ ಭರಪೂರ ಹಣ ಬೇಕು. ಬಲ್ಲಿದರಿಂದ ಹಣ … Read more

ಪತ್ರ ಬರೆಯಲಾ: ಅನಿತಾ ನರೇಶ್ ಮಂಚಿ

ಅದೊಂದು ಕಾಲವಿತ್ತು.. ಅದನ್ನು ಕಾಯುವಿಕೆಯಲ್ಲಿನ ಪರಮ ಸುಖದ ಕಾಲ ಅಂತ ಕರೆದರೂ ಸರಿಯೇ. ಕಾಯುವಿಕೆ  ಅನಿವಾರ್ಯವಾದ ಕಾರಣ ’ತಾಳುವಿಕೆಗಿಂತನ್ಯ ತಪವು ಇಲ್ಲ’ ಎಂದುಕೊಂಡೇ ಎಲ್ಲರೂ ಆ ಸುಖವನ್ನು ಅನುಭವಿಸುತ್ತಿದ್ದರು. ಹೇಳಲಾರದ  ಚಡಪಡಿಕೆ, ಕಣ್ಣೋಟ ದೂರ ದಾರಿಯ ಕಡೆಗೇ.. ಕಾಲುಗಳು ನಿಂತಲ್ಲಿ ನಿಲಲರಿಯದೇ ಅತ್ತಿಂದಿತ್ತ ಇತ್ತಿಂದತ್ತ.. ಕಿವಿಗಳು ಅವನ ಹೆಜ್ಜೆಯ ಸಪ್ಪಳದ ಸದ್ದಿಗಾಗಿ ಹಾತೊರೆಯುತ್ತಾ.. ನಿಜಕ್ಕೂ ಅದು ರಾಮನ ಬರುವಿಕೆಗಾಗಿ ಕಾದಿರುವ  ಶಬರಿಯ ಧ್ಯಾನದಿಂದ ಕಡಿಮೆಯದ್ದೇನು ಅಗಿರಲಿಲ್ಲ.  ಏನಿರಬಹುದು ಇದು ಎಂಬ ಕುತೂಹಲವೇ..  ’ವಸಂತ ಬರೆದನು ಒಲವಿನ ಓಲೆ … Read more

ಮೂರು ಕವಿತೆಗಳು: ಅನಿಲ ತಾಳಿಕೋಟಿ, ಸ್ವರೂಪ್ ಕೆ., ಎಂ.ಎನ್. ನವೀನ್ ಕುಮಾರ್.

ಸಮಾನತೆಗಾಗಿ ರಾಮಕೃಷ್ಣ ಗರ್ಭದ ಕಲ್ಲಾದ ಬುದ್ದ ಬಸವಳಿದು ಬಿದ್ದ ಅಲ್ಲಮ ಮೆಲ್ಲನೆದ್ದು ಹೋದ ಮೋಹನದಾಸನಾಶಿಸುತ್ತ ಅಸುನೀಗಿದ ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ ಮಳೆ ಸುರಿಯಿತು ಮರುಭೂಮಿಯ ಮೇಲೆ  ಕೊಳೆ ಬೆಳೆಯಿತು ಮನುಜರರಿವಿನೊಳಗೆ ಬರಬೇಕಾದವರೆಲ್ಲಾ ಬಂದು ಹೋದರು ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು. ನ ಹನ್ಯತೆ ಅಸಮಾನತೆ  ಕೊಲ್ಲಬಂದವರೆಲ್ಲಾ ಕಾಲವಾದರೂ ಕಾಲೂರಿಕೊಂಡ ಕೊಳೆತದ ನಾತ ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ ಮನೆ ಮನೆಗಳಲ್ಲಿ ಮುದುಡಿದ ಮನಗಳು ತೆರೆ … Read more

ತುಂಬಿದ ಕೊಡ… (ಒಂದು ನೈಜಕಥೆಯ ಸುತ್ತ): ಸಂದೇಶ್ ಎಲ್.ಎಮ್.

ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿನಲ್ಲಿ ಹೆಚ್ಚಿನ ಮಂದಿ ರಜೆ ಅಥವಾ ವಾರಾಂತ್ಯದಲ್ಲಿ  ಕಾಲ ಕಳೆಯಬೇಕೆಂದು ಬಯಸುವುದು ಮನೆಯಲ್ಲಷ್ಟೇ. ದೈನಂದಿನ ಚಟುವಟಿಕೆಗಳಲ್ಲಿ ಟ್ರಾಫಿಕ್, ತಲೆ ಬಿಸಿ, ಕೆಲಸದ ಗಡಿಬಿಡಿ ಇತ್ಯಾದಿ ಜಂಜಾಟಗಳಿಂದ ಬೇಸತ್ತವರಿಗೆ ರಜೆ ಎಂದರೆ ಹಬ್ಬದಷ್ಟೇ ಸಂಭ್ರಮ.  ರಜೆ ಸಿಕ್ಕಮೇಲೆ ಕೇಳಬೇಕೆ? ಹೆಂಡತಿ, ಮಕ್ಕಳು, ಸ್ನೇಹಿತರು, ಉಳಿದ ಕೆಲಸಗಳು, ಅಬ್ಬಾ ಪ್ಲಾನ್ ಮಾಡುವುದೇ ಬೇಡ, ನೀರು ಕುಡಿದಷ್ಟೇ ಸಲೀಸಾಗಿ ಮುಗಿದು ಹೋಗುವಂತದ್ದು. ಇಂತಹ ಸಂತೋಷದ ದಿನಗಳಲ್ಲಿ ನಮ್ಮ ಕವಿ ಮಹಾಶಯರು ತಮ್ಮ ಚೊಚ್ಚಲ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು … Read more

ಬೋಳು ತಲೆಯ ಅಪ್ಪ ಮತ್ತೆರಡು ಪ್ರಸಂಗಗಳು: ಅಮರ್ ದೀಪ್ ಪಿ.ಎಸ್.

ಆ  ಅಂಗಡಿ ತುಂಬಾ ಸಿನೆಮಾ ತಾರೆಯರ ಫೋಟೋಗಳು. ಬಗೆ ಬಗೆ ಸ್ಟೈಲ್ ನಲ್ಲಿ ನಿಂತ ಕಾರು, ಬೈಕು, ಕುದುರೆ ಹೀಗೆ ಒಂದೊಂದು ಸವಾರಿಯಲ್ಲಿ ನಿಂತ, ಓಡಿಸುವ  ಹೀರೋಗಳು. ಇನ್ನು ಹಿರೋಯಿನ್ನುಗಳ ಫೋಟೋಗಳಿಗೆ ಲೆಕ್ಕ ಇಲ್ಲ. ಅಲ್ಲಲ್ಲಿ ಹರಡಿ ಚೆಲ್ಲಾಪಿಲ್ಲಿಯಾದ ದಿನಪತ್ರಿಕೆಗಳ ತುಂಬಾ ಸಹ ಬರೀ ಸಿನೆಮಾಗಳ ಪೋಸ್ಟರ್.  ಕೆಲವೇ ಕೆಲವು ಪುಟಗಳು ಮಾತ್ರ ಪ್ರಾಪಂಚಿಕ ವಿದ್ಯಮಾನವುಳ್ಳದ್ದು ಆಗಿರುತ್ತಿದ್ದವು. ಸುತ್ತಲು ಕನ್ನಡಿಗಳ ಸಾಲು.  ಒಂದು ಮೂಲೆಯಲ್ಲಿ ಮೊದಲೆಲ್ಲ ರೇಡಿಯೋ ಟೇಪ್ ರೆಕಾರ್ಡರ್ ಇರುತ್ತಿದ್ದವು, ಇತ್ತೀಚೆಗೆ ಟಿ. ವಿ. ಗಳು. … Read more

ಹೆಸರಿಡದ ಕಥೆಯೊಂದು (ಭಾಗ 1): ಪ್ರಶಸ್ತಿ ಪಿ.

ಹೇ ಹೋಳಿಗೊಂದಿನ ರಜಾ ಹಾಕಕ್ಕೆ ಹೇಳೇ ಆ ಸೋಮು ಮತ್ತವನ ಗ್ಯಾಂಗಿಗೆ. ಅವ್ರನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಸಮಯ ಆಯ್ತು. ಸಿಗೋಣಂತೆ ಬಣ್ಣದ ಹಬ್ಬದಲ್ಲಿ…ತಮ್ಮೆಂದಿನ ಪಾನಿ ಪುರಿ ಅಡ್ಡಾದಲ್ಲಿ ಫುಲ್ ಜೋಷಲ್ಲಿ ಮಾತಾಡ್ತಾ ಇದ್ಲು ಶ್ವೇತ ತನ್ನ ಗೆಳತಿ ಶಾರ್ವರಿಯೊಂದಿಗೆ. ಬೇರೆಯವ್ರು ರಜಾ ಹಾಕಿದ್ರು ಹಾಕ್ಬೋದೇನೋ ಆದ್ರೆ ಆ ಶ್ಯಾಮಂದೇ ಡೌಟು ಕಣೇ ಅಂದ್ಲು ಶಾರ್ವರಿ.ಡೌಟಾ ? ಯಾಕೆ ಅಂತ ಕಣ್ಣರಳಿಸಿದ್ಲು ಶ್ವೇತ  ಹೋಳಿಗಾ ? ಒಂದಿಡೀ ದಿನಾನಾ ಅಂತಾನೆ . ಒಂದಿನ ಕೆಲಸಕ್ಕೆ ಹೋಗ್ಬೇಡ ಅಂದ್ರೆ ಲಬೊ … Read more

ನಾ ಕ೦ಡ ಹಾಗೆ “ವ೦ಶವೃಕ್ಷ” : ಸುಮತಿ ಮುದ್ದೇನಹಳ್ಳಿ

ಎಸ್.ಎಲ್, ಭೈರಪ್ಪನವರ ಜನಪ್ರಿಯ ಕಾದ೦ಬರಿ ಆಧಾರಿತ ಸಿನೆಮಾ, "ವ೦ಶವೃಕ್ಷ" (1971) ತನ್ನ ಕಾಲಕ್ಕೆ ಹೊಸ ಅಲೆಯ ಚಿತ್ರ. ಹೊಸ ಅಲೆಯ ಚಿತ್ರ ಅನ್ನಿಸುವುದು ಪ್ರಚಲಿತ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುವ, ಕ೦ದಾಚಾರಗಳನ್ನು ಪ್ರಶ್ನಿಸುವ, ಪ್ರತಿಮೆಯಾಧರಿಸಿ ಕಥೆ ತೆರೆದಿಡುವ ರೀತಿಗೆ.  ಈ ಬರಹ ಪೂರ್ಣ ಪ್ರಮಾಣದ ವಿಮರ್ಶೆಯಾಗಲು ನಾನು ಭೈರಪ್ಪನವರ ಸ೦ಬ೦ಧಿತ ಕಾದ೦ಬರಿ ಓದಬೇಕಿತ್ತು ಅನ್ನುವುದನ್ನು ಮೊದಲೇ ನಿಮ್ಮಲ್ಲಿ ಒಪ್ಪಿಕೊಳ್ಳುತ್ತೇನೆ, ಕಾದ೦ಬರಿ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ.  ದೊಡ್ಡ ಕಾದ೦ಬರಿಯೊ೦ದನ್ನು ಸಿನೆಮಾ ಮಾಡಲು ಒಳ್ಳೆಯ ಎಡಿಟರ್ ಬೇಕು: ಕಥೆಯ ಹ೦ದರವನ್ನ … Read more

ಓಯಸಿಸ್: ನಿನಾದ (ಭಾಗ 3)

ಇಲ್ಲಿಯವರೆಗೆ ಮಾರನೆ ದಿನ ಲ್ಯಾಂಡ್ ಲಾರ್ಡ್ಗೆ ಫೋನ್ ಮಾಡುವಾಗ ನೀವು  ಬರೋಕೆ ರೆಡಿ ಆದ್ರೆ ಹೇಳಿ. ಇನ್ನು ಒಂದು ವಾರದಲ್ಲಿ ಎಲ್ಲ ದಾಖಲೆಗಳು ಸರಿ ಆಗುತ್ತೆ ಅಂದು ಹೇಳಿದರು. ಬರುವ ವಾರ ಬರೋದು  ಕಷ್ಟ. ಬರುವ ತಿಂಗಳು ಬರುವೆವು ಅಂದು ಹೇಳಿದ ನಿಶಾಂತ್ . ಆದರೆ ಅದೇ ಸಮಯಕ್ಕೆ ನಿಶಾಂತ್ ನ ವೀಸಾ ವಿಷಯ ದುತ್ತನೆ ಎದುರು ಬಂದು ಸಧ್ಯಕ್ಕೆ ಊರು ಬಿಡುವ ಹಾಗೆ ಇರಲಿಲ್ಲ. ಹೀಗಾಗಿ ದೀಪಾವಳಿ ಕಳೆದು ಬರುವುದಾಗಿ ಹೇಳಿದರು. ಈ ನಡುವೆ ಜೈನ್ … Read more

ಸಾಮಾನ್ಯ ಜ್ಞಾನ (ವಾರ 19): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:  ೧.    ೨೦೧೪ ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ ? ೨.    ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ? ೩.    ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ? ೪.    ೨೦೧೪ರಲ್ಲಿ ನಡೆದ ಏಷ್ಯಾ ಕಫ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು? ೫.    ಜನವರಿ ೩೦ ೨೦೧೩ ರಂದು ಗುಜಾರಾತ್ ಕೆನ್ಸವಿಲ್ ಜಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು? ೬.    ಓಡಿಸಾ ರಾಜ್ಯದ ಆಡಳಿತ ಭಾಷೆ … Read more

ಕೋತಿಗಳು ಸಾರ್ ಕೋತಿಗಳು: ಎಂ. ಎಸ್. ನಾರಾಯಣ.

ಕೆಲವು ನಿಜಕ್ಕೂ ಅದ್ಭುತವಾದ ದೃಷ್ಟಾಂತಗಳಿವೆ. ಬಹುಶಃ ಇವು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹಸ್ತಾಂತರಗೊಂಡಿರಬಹುದೆಂದು ಭಾವಿಸುತ್ತೇನೆ. ಮನುಕುಲದ ಒಟ್ಟಾರೆ ವಿವೇಕವನ್ನು ಒಳಗೊಂಡಿರುವ ಈ ದೃಷ್ಟಾಂತಗಳಿಗೆ ಜನರನ್ನು ಸ್ಫೂರ್ತಿಸಿಂಚನದಲ್ಲಿ ತೋಯಿಸಿ ಧನಾತ್ಮಕವಾಗಿ ಪ್ರಚೋದಿಸುವ ಅಗಾಧವಾದ ಶಕ್ತಿಯಿರುವುದು ಸುಳ್ಳಲ್ಲ. ಈ ಅಂಕಣದ ಮೂಲಕ ಅಂತಹ ಒಂದೆರಡು ದೃಷ್ಟಾಂತಗಳನ್ನು ಕನ್ನಡದ ಓದುಗರೊಂದಿಗೆ ಹಂಚಿಕೊಳ್ಳಲು ಸಂತಸವಾಗಿದೆ. ಇಲ್ಲಿ ಚರ್ಚಿಸಲಾಗಿರುವ ಪರಿಕಲ್ಪನೆಗಳು ವಿಶೇಷವಾಗಿ ನಮ್ಮ ಯುವ ಜನತೆಗೆ, ತಮ್ಮ ವೃತ್ತಿಜೀವನದ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲು ಮಾರ್ಗದರ್ಶನ ಮಾಡುವ ದಾರಿದೀಪವಾಗಬಹುದು. ಭಾರತದಲ್ಲಿ ಕೋತಿಗಳನ್ನು ಹಿಡಿಯುವ ಸ್ವಾರಸ್ಯಕರವಾದ ಪ್ರಾಚೀನ … Read more