ದ್ವಿಮುಖ ಪರಿಚಯ: ಅನಿತಾ ನರೇಶ್ ಮಂಚಿ

ಇಡ್ಲಿ ಬೇಯಲಿಟ್ಟು ಚಟ್ನಿಗಾಗಿ ಕಾಯಿ ತುರಿಯುತ್ತಲಿದ್ದೆ. ಪಕ್ಕದ ಮನೆಯ ಪಂಕಜಾಕ್ಷಿ ಅಕ್ಕಾ ಅಂತ ಕರೆದಳು. ಅದರ ಮೊದಲೇ ಅವಳ ಕುಮಾರ ಕಂಠೀರವ ಅಡುಗೆ ಮನೆಗೆ ನುಗ್ಗಿ ಎರಡು ಜ್ಯೂಸಿನ ಲೋಟ ನೆಲಕ್ಕೆಸೆದಾಗಿತ್ತು. ಪುಣ್ಯಕ್ಕೆ ಅದು ಅನ್ ಬ್ರೇಕೇಬಲ್ ಗಳಾದ್ದರಿಂದ ಬಿದ್ದ ಲೋಟ ಎತ್ತಿಟ್ಟು ಅವನ ಕೆಲಸಕ್ಕೆ ಬ್ರೇಕ್ ಹಾಕಿದೆ. ಅಕ್ಕಾ ಸ್ವಲ್ಪ ಹೊತ್ತು ಅವನನ್ನಿಲ್ಲಿ ಬಿಟ್ಟು ಹೋಗ್ತೀನಿ.. ಅಂದಳು ಅವಳು.. ನಾನು ಹೂಂ ಅನ್ನುವ ಮೊದಲೇ ಅವಳ ಕುಮಾರ ಕಂಠೀರವ ನನ್ನ ಮುಖ ನೋಡಿ ಕಿಟಾರನೆ ಕಿರುಚಿ … Read more

ಕರ್ನಾಟಕ ರಾಜ್ಯ ಲಾಟರಿ “ಅಂದು ಡ್ರಾ ” ಇಂದಿಗೆ ಬಹು “ಮಾನ “: ಅಮರ್ ದೀಪ್ ಪಿ.ಎಸ್.

ಇಪ್ಪತ್ತೊಂದರ ವಯಸ್ಸಿನ ಹುಡುಗ, ಅವನ ತಮ್ಮ ಮತ್ತವರ ತಾಯಿ  ಆಗತಾನೇ ಆ ಹುಡುಗನ ತಂದೆಯ ಶವ ಸಂಸ್ಕಾರ, ಕ್ರಿಯಾ ಕರ್ಮಗಳನ್ನೆಲ್ಲಾ ಮುಗಿಸಿ ಮನೆಗೆ ಬಂದು ಕುಳಿತಿದ್ದರು. ಎದು ರಿಗಿದ್ದವರಿಗೆ ಆಡಲು ಮಾತುಗಳು ಖಾಲಿ ಖಾಲಿ.  ತಾಯಿ ಮಕ್ಕಳ ಮುಖಗಳನ್ನು ನೋಡುತ್ತಲೇ ಹಂಗೆ ಅವರ ನೆನಪು ವರ್ಷದಿಂದ ವರ್ಷ ಹಿಂದಕ್ಕೆ, ಮೂವತ್ತು ವರ್ಷಗಳ ಹಿಂದಕ್ಕೆ ಜಾರಿದವು…..  ಅದೊಂದು ಪುಟ್ಟ ಗ್ರಾಮ. ಬಿಸಿಲಿಗೂ ಬರಕ್ಕೂ ಮತ್ತೊಂದು ಹೆಸರಾಗಿದ್ದ ಊರದು. ಆ ಊರಿಗೆ ಒಂದೇ ಮುಖ್ಯ ರಸ್ತೆ ಮೂರು ಬಸ್ ನಿಲ್ದಾಣ. … Read more

ಸರ್…. ಡ್ರಾಪ್ ಪ್ಲೀಸ್!!: ಸಂತೋಷ್ ಕುಮಾರ್ ಎಲ್. ಎಮ್.

ಒಂದು  ಸುಮಾರು 15 ವರ್ಷಗಳ ಹಿಂದೆ ಮೈಸೂರಿನಲ್ಲಿ PUC ಓದುತ್ತಿದ್ದ ಸಂದರ್ಭ. ಅಪ್ಪ ನನಗೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಬೈಸಿಕಲ್ಲು ಮುರಿದು ಮೂಲೆ ಸೇರಿತ್ತು. ಅದರ ರಿಪೇರಿಗೂ ನೂರು ರೂಪಾಯಿ ಇಲ್ಲದ ಪರಿಸ್ಥಿತಿ. ಕಾಲೇಜು ಶುರುವಾಗುತ್ತಿದ್ದುದೇ ಒಂಭತ್ತು ಗಂಟೆಗೆ. ಮೊದಲ ಪಿರಿಯಡ್ ಮುಂಗೋಪಿ ಮತ್ತು ಮಹಾಸಿಡುಕ ಪ್ರೊಫೆಸರ್ ಸಾಂಬಶಿವಯ್ಯನವರದ್ದು. ಆದ್ದರಿಂದ ಅವರು ಕ್ಲಾಸಿಗೆ ಪ್ರವೇಶವಾಗುವ ಮೊದಲೇ ಎಲ್ಲರೂ ಒಳಗಿರಬೇಕಿತ್ತು. ಲೇಟಾಗಿ ಬಂದವರಿಗೆ ಮರದ ಸ್ಕೇಲಿನ ಬಿಸಿಯೇಟು. ಬರದೆ ಹೋದವರ ಮನೆಗೆ absence report. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ … Read more

ಸಾಮಾನ್ಯ ಜ್ಞಾನ (ವಾರ 17): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು? ೨.    ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದವರು ಯಾರು? ೩.    ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾವುವು? ೪.    ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು? ೫.    ಹಿಂದೂ ಸ್ತ್ರೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ? ೬.    ಮೊದಲ ಪ್ರನಾಳ ಶಿಶುವಿನ ಹೆಸರೇನು? ೭.    ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ … Read more

ವಿಜ್ಞಾನ ದಿನ: ಅಖಿಲೇಶ್ ಚಿಪ್ಪಳಿ

ಪ್ರತಿವರ್ಷ ಫೆಬ್ರವರಿ ೧೪ರಂದು ಪ್ರೇಮಿಗಳ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಬೇಕೆಂಬ ಕೂಗು ಇದೆ. ಪ್ರೇಮಿಗಳ ದಿನಾಚರಣೆಯಿಂದ ಸರಿಯಾಗಿ ೧೪ ದಿನಗಳ ನಂತರ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಾರೆ. ದಿ.ಚಂದ್ರಶೇಖರ ವೆಂಕಟ ರಾಮನ್ ಎಂಬ ಭಾರತದ ವಿಜ್ಞಾನಿ ೧೯೨೮ರಲ್ಲಿ ಸಂಶೋಧಿಸಿದ ಬೆಳಕಿನ ?? ಕ್ಕೆ ೧೯೩೦ರಲ್ಲಿ ನೋಬೆಲ್ ಪ್ರಶಸ್ತಿ ಸಿಕ್ಕಿತು. ಭೌತಶಾಸ್ತ್ರದ ಈ ಅಮೋಘ ಸಾಧನೆ ಇವತ್ತಿಗೂ ವಿಜ್ಞಾನ ಕ್ಷೇತ್ರದಲ್ಲೊಂದು ಮೈಲಿಗಲ್ಲು ಎಂದು ದಾಖಲಾಗಿದೆ. ಈ ಮಹಾನ್ ವಿಜ್ಞಾನಿಯ ನೆನಪಿಗಾಗಿ ಭಾರತ ಸರ್ಕಾರ … Read more

ಮೂವರ ಕವಿತೆಗಳು: ರಾಘವೇಂದ್ರ ಹೆಗಡೆಕರ್, ಸಂಗೀತ ರವಿರಾಜ್, ಷಡಕ್ಷರಿ ತರಬೇನಹಳ್ಳಿ

— ಗೋಡೆ — ನನಗಾಗಿ   ಅಗೆದ ಯಾರದೋ ಭೂಮಿಯಲ್ಲಿ ಇನ್ನಾರೋ ಮಲಗಿದ್ದರಂತೆ ಪಾಪ.  ನೆಲದ ಮೇಲೆ ಎಲ್ಲ ಹಂಚಿಕೊಂಡವರು ನಾವು-  ಮಾಡಿ ಭಾಗ . ಗೊತ್ತೇ  ಇರಲಿಲ್ಲ ಇದ್ದರೂ ಇರಬಹುದು  ಇಂಥದೊಂದು ಜಾಗ. ಸಮಾಧಿ ಸ್ತಿತಿಯಲ್ಲಿ  ಅವಿತು ಕುಳಿತವನ  ಗಾಢ ಮೌನದ  ಸದ್ದುಗಳು . ಅರೆ  ಪಕ್ಕದಲ್ಲೇ  ಚಿರ ನಿದ್ರೆಯಲ್ಲಿದ್ದಾಳೆ ಚಿನ್ನದಂತ ಹುಡುಗಿ ಇವಳೇ ಬೆಳಿಗ್ಗೆ ಬೆರಳ ತೋರಿದವಳು  ಸ್ನೇಹದ ಹಸ್ತ ಚಾಚಿ . ಇಲ್ಲಿ ಮಣ್ಣಿನ ಒಳಗೆ ಗೋಡೆಗಳೇ ಇಲ್ಲ . -ರಾಘವೇಂದ್ರ  ಹೆಗಡೆಕರ್ … Read more

ಒಂದು ಹಳೆಯ ಪತ್ರ: ವೀರ್ ಸಂತೋಷ್

ದಿನಾಂಕ ೧೪ ಫೆಬ್ರವರಿ ೨೦೧೩ ಪ್ರೀತಿಯ  ಹೆಸರು  ಹೇಳಲಾಗದವಳೇ/ಪಲ್ಲವಿ, ಧನ್ಯವಾದಗಳು. ಖಾಲಿ ಹಾಳೆಯಂತಿದ್ದ ನನ್ನನ್ನು ಎಲ್ಲರೂ ಓದುವಂತಹ ಕೃತಿಯನ್ನಾಗಿ ಮಾಡಿದ ನಿನಗೆ ಪ್ರೀತಿಪೂರ್ವಕ ಧನ್ಯವಾದಗಳು. ಇದು ನಾನು ನಿನಗಾಗಿ ಬರೆಯುತ್ತಿರುವ ೩೬೫ನೇ ಪತ್ರ. ನಿನ್ನೆ ಬರೆಯುವಾಗಿದ್ದ ಪ್ರೇಮ, ಅದೇ ಉತ್ಕಟತೆಯೊಂದಿಗೆ ಇದನ್ನೂ ನಿನಗೆ ಅರ್ಪಿಸುತ್ತಿದ್ದೇನೆ. ನಿನ್ನ ಭಕ್ತನ ಈ ಕಿರು ಕಾಣಿಕೆಯನ್ನು ಸ್ವೀಕರಿಸುತ್ತೀಯಲ್ಲವೇ? ಆಯ್ತು ಕೋಪ ಮಾಡ್ಕೋಬೇಡ. ಹೀಗೆಲ್ಲಾ ಹುಚ್ಚು ಪ್ರೇಮಿಯಂತೆ ಮಾತಾಡೋದು ನಿನಗೆ ಇಷ್ಟವಿಲ್ಲ ಅನ್ನೋದು ನೆನಪಿದೆ. ಅದೆಲ್ಲಾ ಒತ್ತಟಿಗಿರಲಿ. ಇವತ್ತು ಫೆಬ್ರವರಿ ೧೪. ವ್ಯಾಲೆಂಟೈನ್ಸ್ … Read more

ಚಿಕ್ಕಮಗಳೂರ ಟ್ರಿಪ್ಪು: ಪ್ರಶಸ್ತಿ ಪಿ.

ಮುಳ್ಳಯ್ಯನ ಗಿರಿಗೆ ಹೋಗ್ಬೇಕನ್ನೋದು ಬಹುದಿನದ ಕನಸು. ಆದ್ರೆ ಬೆಂಗ್ಳೂರಿಂದ ೨೫೦ ಚಿಲ್ರೆ ಕಿಲೋಮೀಟ್ರು ಅನ್ನೋ ಕಾರಣಕ್ಕೆ ಮತ್ತೆ ಒಂದಿನ ಅದೊಂದಕ್ಕೇ ಹೋಗ್ಬರೋಕಾಗಲ್ಲ. ಎರಡು ದಿನಕ್ಕೆ ಬೆಂಗ್ಳೂರಿಂದ ಗಾಡಿ ಮಾಡಿಸ್ಕೊಂಡೋದ್ರೆ ಬರೀ ಹೋಗ್ಬರೋ ಚಾರ್ಜೇ ಜಾಸ್ತಿ ಆಗತ್ತೆ, ಎರಡು ದಿನಕ್ಕೆ ಯಾರು ಬರ್ತಾರೋ, ಯಾರು ಬರೋಲ್ವೋ ಅನ್ನೋ ಹಲವು ಸಂದೇಹಗಳಲ್ಲೇ ಕನಸು ಮುರಿದುಬೀಳ್ತಿತ್ತು. ಕೊನೆಗೂ ಹರಿ ಹರಿ ಅಂತ ಸಡನ್ನಾಗಿ ಶುಕ್ರವಾರ ಸಂಜೆ ಪ್ಲಾನು ಪಕ್ಕಾ ಆಗಿ ಶುಕ್ರವಾರ ರಾತ್ರೆ ಒಂದೂಮುಕ್ಕಾಲಿಗೆ ಮುಳ್ಳಯ್ಯನಗಿರಿಗೆ ಹೊರಟೇಬಿಟ್ವಿ. ಚಿಕ್ಕಮಗಳೂರು ಅಂದ್ರೆ ಸೀತಾಳಯ್ಯನಗಿರಿ, … Read more

ಜಾಗತಿಕರಣದಲ್ಲಿ ಮಹಿಳೆಯ ಸ್ಥಿತಿ-ಗತಿ: ಸುಮನ್ ದೇಸಾಯಿ

             ಜಾಗತಿಕರಣ ಪ್ರವೇಶಿಸಿದ ಈ ಹೊತ್ತನೊಳಗ ಭಾರತದ ಮಹಿಳೆಯರ ಸ್ಥಿತಿಗತಿಯೊಳಗ  ಇತ್ಯಾತ್ಮಕ ಬದಲಾವಣೆಗಳಾಗ್ಯಾವೆನು ಅನ್ನೊ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗೊದೆಯಿಲ್ಲಾ. ಯಾಕಂದ್ರ ಜಾಗತಿಕರಣ ಯಜಮಾನ ಸಂಸ್ಕೃತಿಯನ್ನ ಪೋಷಿಸಲಿಕತ್ತದ. ಗಂಡಸಿಗೆ ಮುಕ್ತವಾದ ವಾತಾವರಣ ಕಲ್ಪಿಸಿಕೊಟ್ಟು, ಹೆಣ್ಣನ್ನ ಮತ್ತದೆ ಹಳೆಯ ಚೌಕಟ್ಟಿನೊಳಗ ಕೂಡಿಸೊ ಪ್ರಯತ್ನ ನಡದದ.  ನಮ್ಮ ದೇಶದ ಬಹಳಷ್ಟು ಕಾನೂನು ಮತ್ತ ಕಾಯಿದೆಗಳು ಶೋಷಿತರ, ಮಹಿಳೆಯರ ಪರವಾಗಿ ಅವ ಆದ್ರ ಅವೆಲ್ಲಾ ಕಾಗದದ ಮ್ಯಾಲಿನ ಹುಲಿಗಳಾಗಿನ ಉಳಕೊಂಡಾವ. ಸಂವಿಧಾನ ಬಂದು ಇಷ್ಟು … Read more

ಹಿತಶತ್ರುಗಳು: ಶುಭಾ ಆರ್.

ಶತ್ರು  ಎಂದರೆ ಒಬ್ಬ ವ್ಯಕ್ತಿ   ನಮ್ಮ ಯಶಸ್ಸನ್ನು ನೋಡಿ ಸಹಿಸದೆ ಇರುವವನು. ಸದಾ ನಮ್ಮ ಮೇಲೆ ದ್ವೇಷ ಕಾರುವವನು. ಆತ  ಎಚ್ಚರಿಕೆ ಕರೆಗಂಟೆಯಂತಿದ್ದು  ನಾವೂ  ಸದಾ ಜಾಗೃತ ರಾಗಿರುವಂತೆ ಮಾಡುವವನು. ಸಾಮಾನ್ಯವಾಗಿ  ಒಬ್ಬ ವ್ಯಕ್ತಿಯ ಗುಣಮಟ್ಟ ಅವನ ಶತ್ರುವಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹಿತೈಷಿ ಎಂದರೆ  ಸದಾ ಇನ್ನೊಬ್ಬರ ಒಳಿತನ್ನು, ಯಶಸ್ಸನ್ನು ಬಯಸುವವನು. "ಹಿತ ಶತ್ರು" ಎಂದರೆ  ನಮ್ಮೊಳಗಿದ್ದು ನಮ್ಮವನಲ್ಲದವರು. ಜೊತೆಯಲ್ಲಿಯೇ ಇದ್ದು  ಮುಂದೆ ಬೆಣ್ಣೆಯಂತಹ  ಮಾತುಗಳನ್ನಾಡಿ ಹಿಂದೆ ಬೆನ್ನಿಗೆ ಚೂರಿ ಹಾಕುವವರು. ನಮಗೆ ಗೊತ್ತಿಲ್ಲದೇ … Read more