ಕ್ಯಾನ್ಸರ್ ಕಾಯಿಲೆ ಹಾಗೆಯೇ ಇದೆ ಅದರ ವೈದ್ಯನಿಗೆ ಪ್ರಶಸ್ತಿ ಸಿಕ್ಕಿದೆ…

ಜಾತೀಯತೆ ನಮ್ಮ ಸಮಾಜಕ್ಕಂಟಿದ ಕ್ಯಾನ್ಸರ್ ತರಹದ ಮಾರಕ ಕಾಯಿಲೆ ಎಂದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಆ ಕಾಯಿಲೆಯನ್ನು ನಮ್ಮ ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟವರಿಗಿಂತ ಈ ಸಮಾಜದ ತುಂಬ ಜನರ ಬುದ್ದಿ ಮತ್ತು ಮನಸ್ಸುಗಳಲ್ಲಿ ಅದನ್ನು ಎಷ್ಟು ಸಾಧ್ಯವೋ ಅಷ್ಟು ಹರಡಬೇಕು ಎನ್ನುವವರ ಸಂಖ್ಯೆ ಈ ದಿನಗಳಲ್ಲಿ ಜಾಸ್ತಿ ಎಂದರೆ ತಪ್ಪಾಗಲಾರದು. ಒಂದೆಡೆ ಹಾಗೆ ಜಾತೀಯತೆಯನ್ನು ಹರಡಿ ಇಡೀ ಸಮಾಜವನ್ನೇ ರೋಗಗ್ರಸ್ತ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುವವರ ಮಧ್ಯೆ ಈ … Read more

ವೀರ್ ಸಂತೋಷ್ ರವರ ರೆಡಿ ಟು ಫಾಲ್ ಇನ್ ಲವ್: ಶರತ್ ಚಕ್ರವರ್ತಿ

ಪುಸ್ತಕ ವಿಮರ್ಶೆ ಬರೆಯುವ ನನ್ನ ಮೊದಲ ಪ್ರಯತ್ನ,   ಪುಸ್ತಕ: ರೆಡಿ ಟು ಪಾಲ್ ಇನ್ ಲವ್ (ಇಂಗ್ಲೀಷ್) ಬರಹಗಾರ: ವೀರ್ ಸಂತೋಷ್.   ಪ್ರಿಯ ಸಂತೋಷ್ (Veer Santhosh)   ಸಿಡ್ನಿ ಶೆಲ್ಡಾನ್ ನಂತಹ ಮಹಾನ್ ಕಾದಂಬರಿಕಾರನ ಪುಸ್ತಕಗಳು ನನಗೆ ಉಡುಗೊರೆಗಳಾಗಿ ಬಂದಾಗ ಅವುಗಳನ್ನು ಸೀದಾ ನನ್ನ ಕಪಾಟಿನಲ್ಲಿ ತುರುಕಿ, ಮತ್ತೆಂದು ತೆರೆದು ನೋಡುವ ಉತ್ಸಾಹವನ್ನೇ ತೋರದ ನಾನು ನಿನ್ನ ಪುಸ್ತಕ 'Ready to fall in love' ಅನ್ನು ಕೊಂಡು ತಂದಿದ್ದೇನೆ. ಸಾಮಾನ್ಯವಾಗಿ ಇಂಗ್ಲೀಷ್ … Read more

ಇಬ್ಬರ ಕವಿತೆಗಳು : ಎಂ.ಎಂಸ್. ಕೃಷ್ಣಮೂರ್ತಿ, ಮೋಹನ್. ಡಿ.

ಇರಲಿರಲಿ ಈ ಗರ್ಭ ಪ್ರಸವಕ್ಕಿನ್ನೂ ಒಂಬತ್ತು ದಿನ ಒಂಬತ್ತು ನಿಮಿಷ ಒಂಬತ್ತು ಘಳಿಗೆಗಳಿವೆಯಂತೆ ಏದುಸಿರು ನಿಟ್ಟಿಸುರಿನೊಂದಿಗೆ ಮಿಳಿತವಾಗಿದೆ ಗರ್ಭ ಕಟ್ಟುವುದು ಒಂದು ಅಮೃತ ಘಳಿಗೆಯಂತೆ ಸತ್ತ ವೀರ್ಯದ ಜೋತೆಗೆ ಒಂದೇ ಒಂದು ಗೆದ್ದ ವೀರ್ಯ ಕಾದು ಕುಳಿತ ಅಂಡಾಣು ಕೂಡುವಿಕೆಗೆ ಮಹೂರ್ತವಿಟ್ಟುಕೊಂಡಿರಬೇಕಂತೆ ಮನಸ್ಸು ಮನಸ್ಸು ಒಂದಾಗಿ ಆದರೆ ನನ್ನದು ಕೊಳಕು ಮನಸ್ಸಿನ, ಅವನ ದೇಹ ಮುಗಿಬಿದ್ದು ತೆವಲು ತಿರಿಸಿಕೊಳ್ಳಲು ತೊಟ್ಟಿಯೊಳಗೆ ಸುರಿವ ಕೊಳಕಿನಂತೆ ಸ್ರವಿಸಿ ಬಿಟ್ಟ ವೀರ್ಯಧಾರೆ ಮನಸ್ಸು, ದೇಹವನ್ನು ಕಿತ್ತು ತಿಂದು ಅತ್ಯಾಚಾರ ಮಾಡಿಟ್ಟುಬಿಟ್ಟ ಆ … Read more

ಅಸ್ತಿತ್ವ : ಪ್ರಸಾದ್.ಡಿ.ವಿ.

ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ … Read more

ದೇವನೂರು ಪೋಸ್ಟ್ : ಹರಿ ಪ್ರಸಾದ್

ಶ್ರೀ ದೇವನೂರ ಮಹಾದೇವ ಅವರಿಗೆ,   ಆ ದಿನ ನಿಮ್ಮ ಸಂಪಾದಕತ್ವದಲ್ಲಿ ಪ್ರಜಾವಾಣಿ ವಿಶೇಷ ಸಂಚಿಕೆ ತಂದಿದೆ ಅಂತ ಮೈಸೂರಿಂದ ಫೋನ್ ಮಾಡಿದ ಪ್ರಸಾದ್‌ಕುಂದೂರಿಯು  ಹೇಳಿದನು. ಆಗ ನಾನು  ಊರಿನಲ್ಲಿದ್ದೆ. ಕಳೆದ ೧೫ ವರ್ಷಗಳಿಂದ ಊರಿಗೆ ಪರಕೀಯನಾಗಿದ್ದು, ಈಗ ೬ ತಿಂಗಳಿನಿಂದ ಊರಿನವನಾಗಲು ಕಷ್ಟಪಡುತ್ತಿರುವ ಕಾಲದಲ್ಲಿ ನೀವೊಂದು ಸಂಚಿಕೆ ಮಾಡಿದ್ದೀರ ಅನ್ನೋದೆ ಉತ್ಸಾಹವಾಯಿತು. ಇಲ್ಲಿ ಊರಲ್ಲಿದ್ದಾಗ ಕಾಲ, ದಿನಾಂಕಗಳು ಪರಿವೆಗೇ ಬರುವುದಿಲ್ಲ. ಆವತ್ತು ಅಂಬೇಡ್ಕರ್ ಜಯಂತಿ ಅಂತ ಕೂಡ ಮರ್‍ತುಹೋಗಿತ್ತು. ಅಂಬೇಡ್ಕರ್ ಜಯಂತಿ ಅಂದಾಗೆಲ್ಲ ’ಯಾವ ಕುಲವಯ್ಯ … Read more

ಇಬ್ಬರ ಚುಟುಕಗಳು: ಪೂರ್ಣಿಮಾ.ಬಿ., ಮಂಜುನಾಥ್.ಪಿ.

ಅವಳಿಗೆ ಹೇಳಬೇಕೆಂದು ಪೋಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು. ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ. ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ. ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿಳಿದಾಕ್ಷಣ ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು. ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು. ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು. ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ ಅವಳ … Read more

ನಂಜು ನುಂಗಿ ನಕ್ಕಾತ : ರಮೇಶ್ ಕುಲಕರ್ಣಿ

ಬೆಳಗಿನ ಜಾವ ಮೂರು ಗಂಟೆಗೆ ಇರಬಹುದು, ನನ್ನ ಸೆಲ್ ಫೋನ್ ವೈಬ್ರೇಶನ್ ಮೋಡಲ್ಲಿ ಪತರಗುಟ್ಟುತ್ತಿತ್ತು. ಕರೆಯನ್ನು ಕಟ್ ಮಾಡಿದರೂ ಆ ಕಡೆಯ ಕರೆ ಬರುತ್ತಲೇ ಇತ್ತು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ನಾನು ಫೋನನ್ನು ರಿಸೀವ್ ಮಾಡಿ “ಹರಿ ಓಂ..” ಅಂದೆ. ಆ ಕಡೆಯಿಂದ ನನ್ನ ಮಿತ್ರ ಶಶಿಕುಮಾರ್ ಕಂಪಿಸುವ ಧ್ವನಿಯಲ್ಲಿ “ಸರ್ ಸ್ವಲ್ಪ ನಮ್ಮ ಮನೆಹತ್ರ ಬರ್ತೀರಾ? ನಿಮ್ಮ ಹತ್ರ ಮಾತಾಡಬೇಕು, ಬೇಗ ಬನ್ನಿ ಸಾರ್ ಎನ್ನುತ್ತಲೇ ಫೋನ್ ಕರೆಯನ್ನು ಕಟ್ ಮಾಡಿದರು. ನನ್ನ ಆತ್ಮೀಯ … Read more

ತಪ್ಪಿತಸ್ಥರಿಗೆ ಮರಣದಂಡನೆಯೊಂದೇ ಶಿಕ್ಷೆಯೇ? :ರುಕ್ಮಿಣಿ ಎನ್.

ಕಳೆದ ಡಿಸೆಂಬರ್ ನಲ್ಲಿ ನಡೆದ ದೆಹಲಿ ಅತ್ಯಾಚಾರ ಕೇಸು ಎಲ್ಲರ ಮನದಲ್ಲೂ ಹಸಿಗೋಡೆಯ ಮೇಲೆ ಹರಳು ನೆಟ್ಟಂತಿದೆ. ಸುದ್ದಿ ಹರಡುತ್ತಿದ್ದಂತೆ, ಅತ್ಯಾಚಾರಿಗಳ ವಿರುದ್ಧ ಕೇಳಿ ಬಂದ ಮಾತುಗಳು: “ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು”, “ಲಿಂಗ ನಿಷ್ಕ್ರಿಯಗೊಳಿಸಬೇಕು”. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ತಮ್ಮ ತಪ್ಪಿನ  ಅರಿವಾಗಬಲ್ಲುದೆ? ತಪ್ಪನ್ನು ತಿದ್ದಿಕೊಳ್ಳಲು ಅವಕಾಶಗಳೇ ಇಲ್ಲವೇ? ಅವರುಗಳು ಮಾಡಿದ್ದು ದೊಡ್ಡ ತಪ್ಪು ನಾನು ಒಪ್ಪುವೆ. ಆದರೆ, ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡದೆ ಮರಣದಂಡನೆ ವಿಧಿಸುವುದು ಅದೆಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ. ನಮ್ಮ … Read more

ನನ್ನೊಳಗಿನ ಗುಜರಾತ…!!! ಭಾಗ-5 : ಚಿನ್ಮಯ್ ಮಠಪತಿ

ನಾವು ಹುಟ್ಟಿಬಿಟ್ಟಿದ್ದೇವೆ ಮನುಷ್ಯರಾಗಿ. ವೇದ ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರಲ್ಲವೆ? ಮನುಷ್ಯ ಜನ್ಮ ದೊಡ್ಡದು ಎಂದು?  ಯಾಕೆ, ಪ್ರಪಂಚದೆಲ್ಲ ಪ್ರಾಣಿಗಳಂತೆಯೇ ಒಂದೇ ಪ್ರಾಕೃತಿಕ ರೀತಿ ನೀತಿಗಳಂತೆ ಜನಿತ, ಈ ನಮ್ಮ ಮನುಜ ಕುಲಕ್ಕೆಷ್ಟೇ ಬೇರೆ ಯಾವ ಅನ್ಯ ಜೀವಿಗೂ ಸಿಗದಂತಹ ಮಾನ್ಯತೆ , ಗೌರವ ! ಸೃಷ್ಟಿ ಕರ್ತನಿಂದ ವಿಶೇಷ ಸ್ಪರ್ಶದ ಜೊತೆಗೆ, ಸುಂದರ ಆಕಾರ ಅವತಾರ!.  ಪಾಪ, ದೇವರ ದಡ್ಡತನದಿಂದಲೇ ನಾವು “ಹೋಮೊಶೆಪಿಯ್” ನಿಂದ ಹಲವಾರು ರೂಪ ರೇಶಗಳನ್ನು ದಾಟಿ, ಇವತ್ತು ಯಂತ್ರಮಾನವ (ರೋಬೊಟ್) ಹಂತಕ್ಕೆ ತಲುಪಿದ್ದೇವೆ … Read more

ಗಾಂಧೀಜಿಯವರ ಅಹಿಂಸಾ ತತ್ವ: ರವಿ ತಿರುಮಲೈ

ಆಧುನಿಕ ಪ್ರಪಂಚದ ಚರಿತ್ರೆಯಲ್ಲಿ ಗಾಂಧೀಜಿಯವರ ' ಅಹಿಂಸೆ '  'ಅಸಹಕಾರ' ಮತ್ತು 'ಸತ್ಯಾಗ್ರಹ' ದ ಭಾವನೆ, ಸಿಧ್ಧಾಂತ ಅಥವಾ ತತ್ವಗಳು ಪ್ರಧಾನವಾಗಿ  ಎದ್ದು ಕಾಣುತ್ತವೆ. ಈ ಸಿಧ್ಧಾ೦ತಗಳು , ಭಾರತೀಯರಿಗೆ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಹೂಡಿದ ಆಂದೋಲನದಲ್ಲಿ, ಸ್ಪೂರ್ತಿ, ಆತ್ಮ ವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದ್ದವು.    ಭಾರತದಲ್ಲಿ ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನವನ್ನು ಹುಟ್ಟು ಹಾಕುವವರೆಗೆ, ಪ್ರಪಂಚದಲ್ಲಿ ನಡೆದ ಎಲ್ಲಾ ಹೋರಾಟಗಳೂ, ಆಂದೋಲನಗಳೂ, ಮತ್ತು ದಂಗೆಗಳೂ ಹಿಂಸೆಯಿಂದ ಕೂಡಿದ್ದಾಗಿದ್ದವು. ಭಾರತೀಯ ಸ್ವಾತಂತ್ರ ಚಳುವಳಿಯು ಅಹಿಂಸೆಯನ್ನೇ … Read more

ಗರಂ ಹವಾ : ವಾಸುಕಿ ರಾಘವನ್

ನಮ್ಮ ದೇಶಕ್ಕೆ ತುಂಬಾ ದೊಡ್ಡ ಇತಿಹಾಸ ಇದೆ. ಆದರೆ ಅದಕ್ಕೆ ನ್ಯಾಯ ಒದಗಿಸುವಷ್ಟು ಸಂಖ್ಯೆಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಚಿತ್ರಗಳು ಬಂದಿಲ್ಲ. ನಮ್ಮವೇ ಚಾರಿತ್ರಿಕ ಘಟನೆಗಳು, ರಾಜಕೀಯ ಸನ್ನಿವೇಶಗಳು, ಪ್ರಸಿದ್ಧ ವ್ಯಕ್ತಿಗಳು ನಮ್ಮ ನಿರ್ದೇಶಕರನ್ನು ಪ್ರೇರೇಪಿಸಿದ್ದು ಕಡಿಮೆ. ನಮ್ಮ ಗಾಂಧಿಯ ಬಗ್ಗೆ ಚಿತ್ರ ಮಾಡಲು ರಿಚರ್ಡ್ ಅಟ್ಟೆನ್ಬರೋ ಬರಬೇಕಾಯ್ತು. ಮಂಗಲ್ ಪಾಂಡೆ, ಭಗತ್ ಸಿಂಗ್, ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರ ಬಗ್ಗೆ ಒಂದೋ ಎರಡೋ ಚಿತ್ರಗಳು. ನಮ್ಮಲ್ಲಾಗಿರೋ ಯುದ್ಧಗಳ ಬಗ್ಗೆ ಡಾಕ್ಯುಮೆಂಟರಿ ಥರದಲ್ಲಿ ಒಂದೊಂದು ಚಿತ್ರ ಅಷ್ಟೇ. … Read more