Facebook

Archive for 2013

ಏ ಜಿಂದಗಿ ಗಲೇ ಲಗಾ ಲೇ: ಅಮರ್ ದೀಪ್ ಪಿ. ಎಸ್.

ಒಮ್ಮೊಮ್ಮೆ ಬದುಕು ಹಾಗೆ ರಿವೈಂಡ್ ಆಗಿ ನಮ್ಮನ್ನು ನಾವೇ ನೋಡಿಕೊಂಡರೆ ನಾವು ನಮ್ಮ ಸಣ್ಣ  ಭಯವನ್ನು, ಸಂಕೋಚವನ್ನು ಇನ್ಫೀರೀಯಾರಿಟಿ ಕಾಂಪ್ಲೆಕ್ಸ್ ಎಲ್ಲವನ್ನೂ ಆಗಿಂದಲೇ ದೂರ ಮಾಡಿಕೊಳ್ಳುವ ಒಂದು ಅವಕಾಶವನ್ನು ಹುಡುಕಿಕೊಳ್ಳಲು ವಿಫಲವಾಗಿದ್ದೆವು ಅನ್ನಿಸುತ್ತದೆ. ಒಂದು ವೇಳೆ ಅದಾಗಿದ್ದರೆ ? ಆ ದಿನದಿಂದಲೇ ನಾವು ಮುನ್ನಡೆಯುವ ದಾರಿಯನ್ನು ಸರಿಯಾದ ಕ್ರಮದಲ್ಲಿ ನಡೆಸಲು ಭರವಸೆ ಮೂಡುತ್ತಿತ್ತು.  ಶಾಲಾ ದಿನದಿಂದಲೇ ನಮ್ಮ ಮನಸ್ಸಿನಲ್ಲಿ ಒಂದೊಂದು ಕಲ್ಪನೆಗಳು ಮನೆ ಮಾಡಿರುತ್ತವೆ, ಮತ್ತವು ಕಲ್ಪನೆಗಳು ಮಾತ್ರವೇ ಎಂಬುದೂ ಸಹ ಗೊತ್ತಿದ್ದರೂ ಅವುಗಳು ನೀಡುವ ಬೆಚ್ಚನೆ […]

ಬೆಳದಿಂಗಳ ಕಡಲಲ್ಲಿ ನೆನಪಿನ ಅಲೆಗಳು:ರೇಷ್ಮಾ ಎ.ಎಸ್.

ಬೆಳಿಗ್ಗೆ ನಾಲ್ಕೂವರೆಗೆ ಪ್ರತಿನಿತ್ಯ ಏಳಲೇಬೇಕಾದ ಅನಿವಾರ್ಯುತೆ ನನ್ನದು. ಎಷ್ಟೇ ಕಾಳಜಿ ವಹಿಸಿದರೂ ಒಮ್ಮೊಮ್ಮೆ ತಡವಾಗಿ ಎಚ್ಚರವಾಗಿ ಇಡೀ ದಿನದ ಕಾರ್ಯಕ್ರಮವೆಲ್ಲಾ ಅಸ್ತವ್ಯಸ್ತವಾಗಿ ಸಾಕೋ ಸಾಕಾಗಿ ಹೋಗುವುದೂ ಉಂಟು. ಕೆಲದಿನಗಳ ಹಿಂದೆ ಒಳ್ಳೆಯ ನಿದ್ರೆಯಲ್ಲಿದ್ದಾಗ ಕಾಗೆಗಳ ಕರ್ಕಶ ಕೂಗಿನಿಂದ ಬಡಿದೆಬ್ಬಿಸಿದಂತಾಗಿ ಗಡಬಡಿಸಿ ಕಣ್ಣು ಬಿಟ್ಟೆ. ಕಿಟಕಿಯತ್ತ ನೋಡಿದಾಗ ಬೆಳ್ಳನೆಯ ಬೆಳಕು. ಆಯ್ತು, ಬೆಳಗಾಗೇ ಬಿಟ್ಟಿತು. ಈ ದಿನವೆಲ್ಲ ನನ್ನದು ಹಾಳು. ಹಾಳು ನಿದ್ದೆ ಎಂದು ಶಪಿಸುತ್ತಾ ಗಡಿಯಾರದತ್ತ ನೋಡಿದರೆ ರಾತ್ರಿ ಎರಡು ಗಂಟೆಯಷ್ಟೇ. ಅಚ್ಚರಿಯಿಂದ ಕಿಟಕಿಯ ಬಳಿ ಬಂದುನಿಂತು […]

ಸಾಮಾನ್ಯ ಜ್ಞಾನ (ವಾರ 7): ಮಹಾಂತೇಶ್ ಯರಗಟ್ಟಿ

            1. ಭಾರತ ರತ್ನ ಪಡೆದ ಮೊದಲಿಗ ಯಾರು? 2. ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು? 3. ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು? 4. ಅಬ್ದುಲ್ ಕಲಾಂರ ಪೂರ್ಣ ಹೆಸರೇನು? 5. ಭಾರತದ ವಿಸ್ತೀರ್ಣವೆಷ್ಟು? 6. ಟೆಸ್À್ಟ ಕ್ರಿಕೆಟ್‍ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು? 7. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾದ ಪ್ರಥಮ ಭಾರತೀಯ ಯಾರು? […]

ಪೂಗ ಪುರಾಣ: ಅಖಿಲೇಶ್ ಚಿಪ್ಪಳಿ ಅಂಕಣ

ಅಡಕೆಯಿಂದ ಹೋದ ಮಾನ ಆನೆ ಕೊಟ್ಟರೂ ಬರದು ಎಂಬುದೊಂದು ಮಾತಿದೆ. ಅಂದರೆ ಒಂದು ಅಡಕೆಯನ್ನು ಕದ್ದೊಯ್ದರೆ ತಿರುಗಿ ಆನೆಯನ್ನೇ ವಾಪಾಸು ಕೊಟ್ಟರೂ ಹೋದ ಮಾನ ವಾಪಾಸು ಬರುವುದಿಲ್ಲ. ದಿನೇ ದಿನೇ ಸಾಮಾನ್ಯ ಜನರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈ ಬಿಗಡಾಯಿಸುವಿಕೆಗೆ ಕಾರಣ ಬೆಲೆಯೇರಿಕೆ, ಬಿಸಿಯೇರಿಕೆ, ಸರ್ಕಾರದ ನೀತಿ ಇತ್ಯಾದಿಗಳು. ಅತ್ಯಂತ ಸಂಪದ್ಭರಿತ ನಾಡು ಮಲೆನಾಡು. ಪಶ್ಚಿಮಘಟ್ಟಗಳ ಸೊಬಗು ಎಂತವರನ್ನೂ ಆಕರ್ಷಿಸುತ್ತದೆ. ಜೀವಿವೈವಿಧ್ಯದ ತವರೂರು ಈ ಮಲೆನಾಡು. ಪ್ರಕೃತಿದತ್ತವಾಗಿ ಅತ್ಯಂತ ಸುರಕ್ಷಿತ ಪ್ರದೇಶವೂ ಹೌದು. ಸುನಾಮಿಯ ಭಯವಿಲ್ಲ. ಚಂಡಮಾರುತವಿಲ್ಲ. ಜ್ವಾಲಾಮುಖಿಗಳಿಲ್ಲ. […]

ಪಿನ್ನಿ-ಪಲ್ಲು ಪ್ರಹಸನ: ಸುಮನ್ ದೇಸಾಯಿ ಅಂಕಣ

  ಪಿನ್ನಿ ಮಾಡಿಕೊಟ್ಟ ದಪ್ಪ ದಪ್ಪ ಥಾಲಿಪೆಟ್ಟಿನ ನಾಷ್ಟಾ ಗಡದ್ದಾಗಿ ತಿಂದು ಪೆಪರ್ ಓದಕೊತ ಕುತಿದ್ದಾ ಪಲ್ಲ್ಯಾ (ಪಲ್ಲಣ್ಣ). ಅಲ್ಲೆ ಅವನ ಬಾಜುಕ್ಕ ಪಿನ್ನಿ ಸಾಕಿದ್ದ ನಾಯಿ “ ಬ್ರೌನಿ “ ನು ಕೂತು ತುಕಡಿಸ್ಲಿಕತ್ತಿತ್ತು. ಒಬ್ಬರಿಗೊಂದ ಇನ್ನೊಬ್ಬರಿಗೊಂದ ಎಲ್ಲೆ ಬ್ಯಾರೆ ಬ್ಯಾರೆ ಮಾಡೊದಂತ, ಪಿನ್ನಿ ನಾಯಿಗು ಮತ್ತ ಪಲ್ಲ್ಯಾಗು ಒಂದಸಲಾ ದಪ್ಪ ದಪ್ಪನ್ನು 4 ಥಾಲಿಪೆಟ್ಟ ಮಾಡಿ ತಿನ್ನಿಸಿ ಕೈಬಿಟ್ಟಿದ್ಲು. ಗಡದ್ದ ಹೊಟ್ಟಿ ತುಂಬಿದ್ರಿಂದ ನಾಯಿಗು ಮೈ ವಝ್ಝಾ ಆಗಿ ಅಲ್ಲೆ ಮೆತ್ತನ್ನ ಕಾರ್ಪೇಟ್ ಮ್ಯಾಲೆ […]

ಅಪ್: ವಾಸುಕಿ ರಾಘವನ್ ಅಂಕಣ

“ಪಿಕ್ಸಾರ್ ಅನಿಮೇಷನ್ ಸ್ಟುಡಿಯೊಸ್” ನಿರ್ಮಾಣದಲ್ಲಿ 2009ರಲ್ಲಿ ಬಿಡುಗಡೆಯಾದ ಚಿತ್ರ “ಅಪ್”. ಮತ್ತೆ ಮತ್ತೆ ನೋಡಿದಾಗಲೂ ಅಷ್ಟೇ ರಂಜನೀಯವೆನಿಸುವ ಚಿತ್ರ ಇದು. ಕಾರ್ಲ್ ಮತ್ತು ಎಲ್ಲೀ ಇಬ್ಬರೂ ಬಾಲ್ಯದಿಂದಲೇ ಸಾಹಸಪ್ರಿಯರು, ಪ್ರಕೃತಿಯನ್ನು ಇಷ್ಟಪಡುವವರು. ಎಲ್ಲೀಗೆ ದಕ್ಷಿಣ ಅಮೆರಿಕಾದ ದಟ್ಟ ಕಾಡುಗಳ ನಡುವೆ ಇರುವ “ಪ್ಯಾರಡೈಸ್ ಫಾಲ್ಸ್” ಅನ್ನುವ ಸುಂದರ ಜಲಪಾತದ ಬಳಿ ತನ್ನ ಮನೆ ಇರಬೇಕೆಂಬ ಕನಸು. ಮುಂದೆ ಇವರಿಬ್ಬರೂ ಮದುವೆಯಾಗುತ್ತಾರೆ. ಆದರೆ ಜೀವನ ಪೂರ್ತಿ ಏನೇನೋ ತಾಪತ್ರಯಗಳ ಕಾರಣದಿಂದ ಅಲ್ಲಿಗೆ ಪ್ರವಾಸ ಹೋಗಲು ಆಗುವುದೇ ಇಲ್ಲ. ವಯಸ್ಸಾಗುವ […]

ಆದದ್ದೆಲ್ಲಾ ಒಳಿತೇ ಆಯಿತು: ಎಂ. ಎಸ್. ನಾರಾಯಣ.

ಇತ್ತೀಚೆಗೆ ನಾನೂ ಮತ್ತು ನನ್ನ ಮಡದಿ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಬಿಡದಿಯ ಬಳಿ ದುರದೃಷ್ಟವಶಾತ್ ಭಾರೀ ರಸ್ತೆ ಅಪಘಾತಕ್ಕೊಳಗಾಗಿಬಿಟ್ಟೆವು. ನಮ್ಮ ಗಾಡಿಯೂ, ನಮ್ಮಿಬ್ಬರ ಬಾಡಿಗಳೂ ಚೆನ್ನಾಗಿಯೇ ಜಖಂಗೊಳಾಗಾದುವು. ನಮ್ಮಿಬ್ಬರಿಗೂ, ಮೂಲಾಧಾರವಾದ ಬೆನ್ನು ಮೂಳೆಗೇ ಪೆಟ್ಟು ಬಿದ್ದು ನನ್ನ ಹೆಂಡತಿಗೊಂದು ದೊಡ್ಡ ಶಸ್ತ್ರಚಿಕಿತ್ಸೆಯೂ ಮಾಡಿಸಬೇಕಾಗಿ ಬಂತು. ನನ್ನ ಹೆಮ್ಮೆಯ ಸ್ನೇಹವರ್ತುಲದ ಇನ್ನಿಲ್ಲದ ಸಹಕಾರ ಹಾಗೂ ಬೆಂಬಲದಿಂದ ನಾವು ಆ ಭೀಕರ ಸನ್ನಿವೇಶದಿಂದ ಬಹುಬೇಗ ಪಾರಾಗಿ ಹೊರಬರಲು ಸಾಧ್ಯವಾಯಿತೆಂಬುದನ್ನು ನಾನಿಲ್ಲಿ ಹೇಳಲೇಬೇಕು. ಈ ಸಂಧರ್ಭದಲ್ಲಿ ನಾವು ಪಟ್ಟ ಬೇಗೆ ಬವಣೆಗಳ […]

ಅರ್ಧ: ಪ್ರಶಸ್ತಿ ಅಂಕಣ

ಅರೆಬೆಂದ ತರಕಾರಿ, ಅಡ್ಡಗೋಡೆಯ ಮೇಲಿಟ್ಟಂತೆ ಅರ್ಧ ಪೂರ್ತಿ ಮಾಡಿದ ಮಾತು, ಒಂದೇ ಹೃದಯವೆನ್ನುವಂತಿದ್ದಾಗ ದೂರಾದ ಎರಡು ಅರ್ಧಗಳು, ಅರ್ಧಾಂಗಿ ದೂರಾಗಿ ವಿರಹವೇದನೆಯಿಂದ ಬಳಲುತ್ತಿರೋ ಉಳಿದರ್ಧ..  ಹೀಗೆ ಅರ್ಧವೆನ್ನೋದು ಕೊಡೋ ವೇದನೆ ಅಷ್ಟಿಷ್ಟಲ್ಲ. ಅರೆಬರೆದ ಕವನವೋ, ಕತೆಯೋ ಮುಗಿಸಲಾಗದಿದ್ದರೆ ನನ್ನನ್ನು ಶುರುವಾದರೂ ಯಾಕೆ ಮಾಡಿದೆಯೋ ಎನ್ನುವಾಗ ಆಗೋ ನರಳಾಟವೂ ಕಮ್ಮಿಯಲ್ಲ , ಅರೆಕ್ಷಣದಲ್ಲಿ ಒಲಿಂಪಿಕ್ ಪದಕ ತಪ್ಪಿದಾಕೆ, ಅರೆಕ್ಷಣ ಮೈಮರೆತಿದ್ದೆ ಜೀವನವೇ ಹಾಳಾಯ್ತು ಅನ್ನೋ ವ್ಯಕ್ತಿ, ಅರೆಕ್ಷಣ ನಿದ್ರೆ ತೂಕಡಿಸಿತ್ತಷ್ಟೇ.. ಎಚ್ಚೆತ್ತುಕೊಳ್ಳೋದ್ರಲ್ಲಿ ಅನಾಹುತ ಘಟಿಸಿಹೋಗಿತ್ತು ಅನ್ನೋ ಡ್ರೈವರುಗಳು ಆ […]

ಜೀವನ ದರ್ಶನ (ಭಾಗ 1): ಪಾರ್ಥಸಾರಥಿ. ಎನ್.

ಊರಿಗೆ ಬಂದು ಇಪ್ಪತ್ತು ವರ್ಷಗಳೆ ಕಳೆದಿತ್ತು. ಮೊದಲಿಗೆ ಅಪ್ಪ ಅಮ್ಮನಿರುವವರೆಗೂ ಇದ್ದ ಆಕರ್ಷಣೆ ಈಗೇನು ಇರಲಿಲ್ಲ. ಅಲ್ಲದೆ ನಾನು ಊರು ಬಿಟ್ಟು ಊರೂರು ಸುತ್ತತ್ತ ಹೆಂಡತಿ ಮಕ್ಕಳೊಡನೆ ಓಡಾಡಿದ್ದೆ ಆಯಿತು, ಸರಕಾರಿ ಚಾಕರಿಯೆ ಹಾಗೆ ಬಿಡಿ.  ಈಗ ಮತ್ತೆ ಕರ್ನಾಟಕಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಮನೆ ಮಾಡಿ ಆರು ತಿಂಗಳಾಗುತ್ತ ಬಂದು, ಹುಟ್ಟಿದ ಊರನ್ನು ನೋಡಬೇಕೆಂಬ ಆಸೆ ಪ್ರಭಲವಾಯಿತು. ಅಲ್ಲಿ ಇದ್ದವನು ಅಣ್ಣನೊಬ್ಬನೆ. ಒಂದಿಷ್ಟು ವ್ಯಾಪಾರ ಅದು ಇದು ಎಂದು ಒದ್ದಾಡಿಕೊಂಡಿದ್ದ. ಮಕ್ಕಳನ್ನು ಚೆನ್ನಾಗಿ ಓದಿಸಿದ್ದ. ಮಗಳಿಗೆ […]

ಸ್ನೇಹ ಭಾಂದವ್ಯ (ಭಾಗ 10): ನಾಗರತ್ನಾ ಗೋವಿಂದನ್ನವರ

ರೇಖಾ ಇನ್ನು ಎರಡು ದಿನಕ್ಕೆ ತಿರುಗಿ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು. ಆದ್ದರಿಂದ ಸುಧಾಳನ್ನು ಇನ್ನೊಂದು ಸಲ ನೋಡಬೇಕು ಎಂದುಕೊಂಡಳು. ಸಾಯಂಕಾಲ ರಾಜೇಶ ಸುಧಾಳನ್ನು ಮನೆಗೆ ಕರೆತಂದ. ಆಗ ಕಾವೇರಮ್ಮ ಬರ್ರಿ ಅಳಿಯಂದ್ರೆ ಎಂದಳು. ಸುಧಾ ಒಳಗೆ ಹೋದಳು. ರಾಜೇಶ ಅತ್ತೆ ನಾನು ಹೋಗ್ತಿನಿ ಅಂದ. ಕಾಫಿ ಕುಡಿದು ಹೋಗುವಿರಂತೆ ಎಂದಳು. ಬೇಡಾ ಅತ್ತೆ ಮನೆಯಲ್ಲಿ ಅಮ್ಮ ಕಾಯ್ತಿರ್‍ತಾಳೆ ಹೋಗ್ತಿನಿ ಎಂದು ಹೋಗಿಯೆಬಿಟ್ಟ. ಮರುದಿನ ರೇಖಾ ಸುಧಾಳ ಮನೆಗೆ ಹೋಗಬೇಕೆಂದು ಕೊಂಡವಳು ಅವಳತ್ತೆಗೆ ನನ್ನ ಕಂಡರೆನೆ ಆಗಲ್ಲಾ ಏನು ಮಾಡೋದು […]