Facebook

Archive for 2013

ಲೇಖನಗಳ ಆಹ್ವಾನ…

  ಸಹೃದಯಿಗಳೇ, ಹೊಸ ವರ್ಷ ಎರಡು ಸಾವಿರದ ಹದಿನಾಲ್ಕರ ಮೊದಲ ವಾರ ಬಂದರೆ ಪಂಜುವಿನ 50 ನೇ ಸಂಚಿಕೆ ನಿಮ್ಮ ಮಡಿಲು ಸೇರುತ್ತದೆ. 50ನೇ ಸಂಚಿಕೆ ಪ್ರಕಟಗೊಂಡ ಎರಡು ವಾರಕ್ಕೆ ಅದೇ ಜನವರಿ ತಿಂಗಳಿನಲ್ಲಿ ಪಂಜು ತನ್ನ ಪ್ರಥಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಪಂಜುವಿನ ಈ ಎರಡು ಶುಭ ಸಾಹಿತ್ಯ ಸಂಭ್ರಮಗಳನ್ನು ನಿಮ್ಮ ಬರಹಗಳ ಮೂಲಕ ಇಡೀ ಜನವರಿ ತಿಂಗಳು ಆಚರಿಸುವ ಆಶಯ ಪಂಜುವಿನದು. ತಡವೇಕೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, […]

ಆ ಹಸಿದ ಕಣ್ಣುಗಳಲ್ಲಿ ಉರಿದ ಬೆಂಕಿ: ರೇಷ್ಮಾ ಎ.ಎಸ್.

ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ ಕುಳಿತಿದ್ದೆ. ಆಗೀಗ ಅತ್ತಿತ್ತ ದೃಷ್ಟಿ ಹರಿಯುತ್ತಿತ್ತು. ಒಂದಷ್ಟು ದೂರದಲ್ಲಿ ಒಂದು ಅಲೆಮಾರಿ ಸಂಸಾರ. ಮೈದಾನದ ಒಂದು ಪಕ್ಕಕ್ಕೆ ಇದ್ದ ರಂಗಮಂಟಪವೇ ಅವರ ತತ್ಕಾಲದ ಬಿಡದಿ. ಎಣ್ಣೆ ಕಾಣದ ಕೆದರಿದ ಕೂದಲ, ಪಳಪಳನೆ ಮಿನುಗುವ ಕಂಗಳ, ಹರಕಲು ಬಟ್ಟೆಯಲ್ಲೂ ಗುಂಡುಗುಂಡಾಗಿ ಕಾಣುವ ಮೂವರು ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ […]

ನರಭಕ್ಷಕ ವ್ಯಾಘ್ರ ವರ್ಸಸ್ ವ್ಯಾಘ್ರಭಕ್ಷಕ ನರ: ಅಖಿಲೇಶ್ ಚಿಪ್ಪಳಿ ಅಂಕಣ

ದಿನಾಂಕ:02/12/2013ರ ಒಂದು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಮುಖಪುಟದಲ್ಲಿ “ನರಭಕ್ಷಕ ವ್ಯಾಘ್ರಕ್ಕೆ ಗುಂಡಿಕ್ಕಿ: ಉಲ್ಲಾಸ ಕಾರಂತ” ಹೇಳಿಕೆಯಿತ್ತು. ವನ್ಯಜೀವಿ ಮತ್ತು ಹುಲಿಸಂರಕ್ಷಣೆಯ ಕ್ಷೇತ್ರದಲ್ಲಿ ಉಲ್ಲಾಸರದ್ದು ದೊಡ್ಡ ಹೆಸರು. ಕಡಲತೀರದ ಭಾರ್ಗವ ದಿ.ಶಿವರಾಮ ಕಾರಂತರ ಪುತ್ರರೂ ಆದ ಉಲ್ಲಾಸ ಕಾರಂತರ ಈ ಹೇಳಿಕೆ ಒಂದು ಕ್ಷಣ ದಿಗ್ಭ್ರಮೆ ಮೂಡಿಸಿತು. ಗಾಯಗೊಂಡ ಅಥವಾ ವಯಸ್ಸಾದ ಹುಲಿಗಳು ಸಾಮಾನ್ಯವಾಗಿ ನರಭಕ್ಷರವಾಗಿ ರೂಪುಗೊಳ್ಳುವುದು ಸಹಜ. ಇಡೀ ಘಟನೆಯನ್ನು ಮಾನವ ಹಕ್ಕು ಮತ್ತು ಪ್ರಾಣಿಗಳ ಹಕ್ಕು ಎಂಬಡಿಯಲ್ಲಿ ನೋಡಿದಾಗ, ಕಾರಂತರ ಗುಂಡಿಕ್ಕಿ ಹೇಳಿಕೆ ಮಾನವ ಪಕ್ಷಪಾತಿಯಾಗಿ […]

ಕೆಂಪು ಹುಂಜ: ಜೆ.ವಿ.ಕಾರ್ಲೊ

ಸೋಂಬಾನ ಆರೂಡುವ ಎತ್ತು ಹೊಟ್ಟೆಯುಬ್ಬರಿಸಿಕೊಂಡು ಸತ್ತು ಬಿದ್ದಿತ್ತು. ಸೋಂಬಾನ ಜಗತ್ತು ತಲೆ ಕೆಳಗಾದುದರಲ್ಲಿ ಆಶ್ಚರ್ಯವಿಲ್ಲ. ಎತ್ತು ಮುದಿಯಾಗಿತ್ತು, ನಿಜ. ನಿತ್ರಾಣಗೊಂಡಿತ್ತೂ ನಿಜವಾದರೂ, ಒಳ್ಳೆಯ ಸಮಯ ನೋಡಿಯೇ ಸೋಂಬಾನಿಗೆ ಕೈ ಕೊಟ್ಟಿತ್ತು… ಒಂದು ಹದವಾದ ಮಳೆ ಉದುರಿ ಭೂಮಿ ಉತ್ತನೆಗೆ ತಯಾರಾದಾಗ! ಎತ್ತು ಯಾಕೆ ಸತ್ತಿತು ಎಂದು ಕಾರಣ ಸೋಂಬಾನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅವನ ಹೊಲದ ಬದಿಯಲ್ಲೇ ಒಂದು ದೈತ್ಯಾಕಾರದ ಆಲದ ಮರವಿತ್ತು. ಅದರಲ್ಲಿ ವಾಸವಿದ್ದ ಚೌಡಿಗೆ, ಪ್ರತಿವರ್ಷ ಕೊಯ್ಲಿನ ನಂತರ ಕೆಂಪು ಹುಂಜನನ್ನು ಬಲಿ ಕೊಡುವುದು ರೂಢಿ. […]

ಮು೦ಜಾವದ ಕಲರ್ ಫುಲ್ ಜಗತ್ತು-ವೆ೦ಡರ್ ಕಣ್ಣು: ವೆಂಕಟೇಶ್ ಪ್ರಸಾದ್

ಸುಮಾರು ೮-೧೦ ವರ್ಷಗಳ ಹಿ೦ದಿನ ಮಾತು, ನಾನಾಗ ೭ನೇ ಇಯತ್ತೆಯಲ್ಲಿ ಓದುತ್ತಿದ್ದೆ. ಒ೦ದು ದಿನ ಶಾಲೆಯಲ್ಲಿ ಕನ್ನಡ ಅಧ್ಯಾಪಕರು ದಿನ ಪತ್ರಿಕೆಗಳ ಬಗ್ಗೆ ಮಾತನಾಡುತ್ತಿದ್ದರು. ಮಾತಿನ ಕೊನೆಯಲ್ಲಿ ಯಾರೆಲ್ಲಾ ಮನೆಯಲ್ಲಿ ದಿನಪತ್ರಿಕೆ ಗಳನ್ನು ಓದುತ್ತೀರಿ ? ಎ೦ಬ ಪ್ರಶ್ನೆ ಕೇಳಿದರು. ಹೆಚ್ಚಿನವರು ಕೈ ಎತ್ತಿ ನಾವು ಓದುತ್ತೇವೆ ಸರ್ ಎ೦ದರು. ನಾನು ಕೈ ಎತ್ತಿರಲಿಲ್ಲ. ಕಾರಣ ನಮ್ಮ ಮನೆಯಲ್ಲಿ ಆಗ ದಿನ ಪತ್ರಿಕೆ ತರಿಸುತ್ತಿರಲಿಲ್ಲ. ಆ ದಿನ ಮನೆಗೆ ಬ೦ದ ನಾನು ದಿನಪತ್ರಿಕೆ ತರಿಸುವ೦ತೆ ಜಗಳ ಮಾಡಿದ್ದೆ […]

ಸಾಮಾನ್ಯ ಜ್ಞಾನ (ವಾರ 6): ಮಹಾಂತೇಶ್ ಯರಗಟ್ಟಿ

1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು? 2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು? 3. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು? 4. ಸಿಂಧೂ ನಾಗರೀಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು? 5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು? 6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ? 7. ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು? 8. ಭಾರತದ ಮೊದಲ ವಾಕ್ ಚಿತ್ರ ಯಾವುದು? 9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ […]

ಸೆವೆನ್: ವಾಸುಕಿ ರಾಘವನ್ ಅಂಕಣ

ಪೋಲಿಸ್ ಡಿಟೆಕ್ಟಿವ್ ಸೊಮರ್ಸೆಟ್ ಇನ್ನೊಂದು ವಾರದಲ್ಲಿ ನಿವೃತ್ತನಾಗಲಿದ್ದಾನೆ. ಅವನಿಗೆ ಆ ಊರು, ಆ ಕೆಲಸ ಸಾಕುಸಾಕಾಗಿಹೋಗಿದೆ. ಅವನ ಜಾಗಕ್ಕೆ ವರ್ಗಾವಣೆಯಾಗಿ ಬರುವ ಮಿಲ್ಸ್ ಅನ್ನುವ ಬಿಸಿರಕ್ತದ ಯುವಕನ ಜೊತೆ ಒಂದು ವಾರದ ಮಟ್ಟಿಗೆ ಕೆಲಸ ಮಾಡಬೇಕಾಗಿದೆ. ತದ್ವಿರುದ್ಧ ವ್ಯಕ್ತಿತ್ವದ ಇವರಿಬ್ಬರಿಗೂ ತಿಕ್ಕಾಟ ಶುರುವಾಗುತ್ತದೆ. ಅದೇ ವೇಳೆಯಲ್ಲಿ ಆ ಊರಿನಲ್ಲಿ ಒಂದು ಭೀಕರ ಕೊಲೆಯಾಗುತ್ತದೆ. ಅನುಭವೀ ಸೊಮರ್ಸೆಟ್ ಈ ಕೊಲೆ ಯಾರೋ ಆತುರದಲ್ಲಿ ಮಾಡಿದ್ದಲ್ಲ ಅಂತ ವಾದಿಸುತ್ತಾನೆ, ಆದರೆ ಮಿಲ್ಸ್ ಅವನ ಮಾತನ್ನು ಒಪ್ಪುವುದಿಲ್ಲ. ಅಷ್ಟರಲ್ಲೇ ಇನ್ನೊಂದು ಭಯಾನಕ […]

ಉಡಪಿ ರಾಯನ್ ಹೋಟೆಲ್: ಸುಮನ್ ದೇಸಾಯಿ ಅಂಕಣ

ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ….. ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ….. ಖಾರಾ ಚಕ್ಕುಲಿ ಶೇವು ಚಿವಡಾ ಗೆಳತನ ಮಾಡಿದ್ವ… ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ….. ಅಂಟಿನ ಉಂಡಿ ಶಟಗೊಂಡ ಹೋಗಿ ಡಬ್ಬ್ಯಾಗ ಕೂತಿತ್ತ…….. ಚಹಾ ಕುಡಿದರ ಪಾನಪಟ್ಟಿ ಓಡೊಡಿ ಬರತಿತ್ತ……. ಇದೇಲ್ಲಾ ಆದಮ್ಯಾಲೆ ನಾಲ್ಕ ರೂಪಾಯಿ ಬಿಲ್ಲ ಆಗಿತ್ತ…. ಅದನ್ನ ನೋಡಿ ನನ್ನ ಎದಿ ಝಲ್ಲ ಅಂದಿತ್ತ………….. ಈ ಹಾಡನ ನಮ್ಮ ಅಮ್ಮ ಸಣ್ಣವರಿದ್ದಾಗ ತಮ್ಮ ವಾರಿಗಿ ಗೇಳ್ತ್ಯಾರ ಜೋಡಿ ಹಾಡತಿದ್ರಂತ… ಆವಾಗಿನ್ನು […]

ಸ್ನೇಹ ಭಾಂದವ್ಯ (ಭಾಗ 9): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಸುಧಾ ಎಚ್ಚರವಾಗಿದುದ್ದನ್ನು ನೋಡಿದ ರಾಜೇಶ ಅವಳ ಹತ್ತಿರ ಒಂದು ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಿದ್ದ ಕಾವೇರಮ್ಮ ಅವನಿಗೆ ಜಾಗ ಬಿಟ್ಟು ಎದ್ದಳು. ಆಗ ರಾಜೇಶ ಆ ಕುರ್ಚಿಯಲ್ಲಿ ಕೂಡುತ್ತ ಸುಧಾ ಎಂದು ಅವಳ ಕೈಯನ್ನು ಹಿಡಿದ ಆಗ ಸುಧಾಳ ಕಣ್ಣಲ್ಲಿ ನೀರು ಹರಿಯಲಾರಂಭಿಸಿತು. ದಯವಿಟ್ಟು ನನ್ನ ಕ್ಷಮಿಸು ಸುಧಾ. ನಾನು ನನ್ನ ಕೆಲಸದ ಒತ್ತಡದಲ್ಲಿ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಾ ಅವಳ ಕಣ್ಣೀರು ಒರೆಸಿದ. ಇನ್ನು ಮೇಲೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ನಂಬು ಎಂದ. […]

ಹೀಗೊ೦ದು ವಧು ಪರೀಕ್ಷೆ: ಶ್ರೀವಲ್ಲಭ ಆರ್ ಕುಲಕರ್ಣಿ

ಇತ್ತಿತ್ಲಾಗ ಗ೦ಡಿಗೆ ಹೆಣ್ಣು ಹುಡುಕೋದು ಕಷ್ಟ ಆಗೇದ. ಹ೦ತಾದ್ರಾಗ ಗ೦ಡು ಸಾದಾ ಕೆಲಸದಾಗ ಇದ್ರ೦ತೂ ಯಾವ ಕಪಿ (ಕನ್ಯಾ ಪಿತೃ)ಗಳೂ ತಿರುಗಿ ಸುದ್ದಾ ನೊಡ೦ಗಿಲ್ಲ. ಮೊದ್ಲಿನ್ ಕಾಲದಾಗ ಗ೦ಡಿನ ಕಡೆಯ ಜ್ವಾಳದ ಚೀಲಾ ಎಣಿಸಿ ಅವರಿಗೆ ಬಾಳೆ ಮಾಡೋ ಶಕ್ತಿ ಎಷ್ಟರಮಟ್ಟಿಗೆ ಅದ ಅ೦ತ ಲೆಕ್ಕಾ ಹಾಕಿ ಹೆಣ್ಣು ಕೊಡ್ತಿದ್ರ೦ತ. ಗ೦ಡಿನ ಕಡೆಯವರು ರ೦ಗೋಲಿ ಕೆಳಗ ಹೋಗೊ ಮ೦ದಿ, ಅಕ್ಕ ಪಕ್ಕದವರ ಮನ್ಯಾಗಿನ ಜ್ವಾಳದ ಚೀಲಾ ಗುಳೇ ಹಾಕಿ ಮದುವಿ ಮಾಡ್ಕೋತಿದ್ರ೦ತ. ಕಪಿಗಳದೂ ಏನೂ ತಪ್ಪಿಲ್ಲಾ ಬಿಡ್ರಿ […]