Facebook

Archive for 2013

ಕೋತಿ ಮತ್ತು ಮನುಷ್ಯ: ರೇಷ್ಮಾ ಎ.ಎಸ್.

ಬಣ್ಣದ ಒಂದು ಇಡೀ ಸೀರೆಯನ್ನೇ ತಲೆಗೆ ರುಮಾಲಾಗಿ ಸುತ್ತಿ ಒಂದು ಚುಂಗನ್ನು ಹೆಗಲ ಮೇಲೆ ಬರುವಂತೆ ಇಳಿ ಬಿಟ್ಟಿದ್ದಾನೆ. ದೊಡ್ದ ಪೊದೆ ಮೀಸೆ, ಹಣೆಯಲ್ಲೊಂದು ಹಳದಿ ನಾಮ, ಮಾಸಲು ಕಪ್ಪು ಕೋಟು, ಎಂದೋ ಬಿಳಿಯಾಗಿದ್ದಿರಬಹುದಾದ ಪಂಚೆ, ಹೆಗಲಿಗೆ ಒಂದು ಚಿಂದಿ ಜೋಳಿಗೆ, ಒಂದು ಕೈಯಲ್ಲಿ ಬಣ್ಣದ ಬೇಗಡೆ ಹಚ್ಚಿದ ಕೋಲು, ಇನ್ನೊಂದು ಕೈಯ ದಾರದ ತಿದಿಯಲ್ಲಿ ಕಟ್ಟಿದುದು ಒಂದು ಧಡೂತಿ ಮಂಗ. ಅದೇ ಗಲ್ಲಿಯ ಮಕ್ಕಳಿಗೆಲ್ಲರಿಗೆ ಆಕರ್ಷಣೆಯಾಗಿದ್ದುದುದು. ಆ ಮಂಗಕ್ಕೆ ಬಣ್ಣ ಬಣ್ಣದ ಬಟ್ಟೆಗಳ ಚೂರುಗಳನ್ನು ಚೌಕಚೌಕವಾಗಿ […]

ಚಕ್ರ: ಡಾ. ಗವಿಸ್ವಾಮಿ

''ತಾಯವ್ವಾ'' ''ಇನ್ನೂ ಆಗಿಲ್ಲ ಕ ನಿಂಗಿ ..  ತಿರ್ಗಾಡ್ಕಂಡ್ ಬಾ ಹೋಗು'' ''ಆಗಿದ್ದದೇನೋ ಅಂದ್ಕಂಡು ಕೇಳ್ದಿ ಕನ್ನೆವ್ವಾ … ಇಲ್ಲೇ ಕೂತಿರ್ತಿನಿ ತಕ್ಕಳಿ'' ಒಳಗೆ ಪೇಪರ್ ಒದುತ್ತಾ ಕೂತಿದ್ದವನು ನಿಂಗಿಯ ಸದ್ದು ಕೇಳಿ ಆಚೆ ಬಂದೆ. ಆವತ್ತು ಗೌರಿ ಹಬ್ಬ. ಹಬ್ಬಹರಿದಿನಗಳಂದು ಹೊಲಗೇರಿಯ ನಿಂಗಿ ನಮ್ಮ ಕೇರಿಯ ಮನೆಗಳಿಗೆ ಬಂದು ಊಟ ತಿಂಡಿ ಹಾಕಿಸಿಕೊಂಡು ಹೋಗುವುದು ಮಾಮೂಲು. ಆವತ್ತು ಎಂದಿನಂತೆ ಅದೇ ಹಳೆಯ  ಬಿದಿರಿನ ಪುಟ್ಟಿಯೊಂದಿಗೆ ಪಡಸಾಲೆಯ ಕೆಳಗಿನ ಮೆಟ್ಟಿಲುಗಳ ಮೇಲೆ ಕೂತಿದ್ದಳು. ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟಿದ್ದರಿಂದ […]

ವಾಯೇಜರ್ ಗಗನ ನೌಕೆಗಳು – ೩೬ ವರ್ಷಗಳ ಕಾಲ ೧೯೦೦ ಕೋಟಿ ಕಿ.ಮೀ ದೂರ ಪಯಣ: ಜೈಕುಮಾರ್.ಹೆಚ್.ಎಸ್.

ವಾಯೇಜರ್ ಗಗನನೌಕೆಗಳ ಪಯಣ: ೧೯೭೭ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) ’ವಾಯೇಜರ್ ೧’ ಮತ್ತು ಅದರ ಅವಳಿ ಗಗನನೌಕೆ ’ವಾಯೇಜರ್ ೨’ ಹೆಸರಿನ ಎರಡು ಗಗನನೌಕೆಗಳನ್ನು ೧೬ ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. […]

ಮೂವರ ಕವಿತೆಗಳು: ಮಂಜು ಹಿಚ್ಕಡ್, ಸುನೀತಾ ಮಂಜುನಾಥ್, ದಿಲೀಪ್ ರಾಥೋಡ್

ಮತ್ತೆ ಕಟ್ಟಲಾದಿತೇ ರಾಮರಾಜ್ಯ! ಹುಚ್ಚೆದ್ದು ಕುಣಿಯುತಿದೆ ನಾಡಿನ ಜನತೆ. ಮರೆಯಾಗಿ ಹೋಗುತಿದೆ ಒಲವಿನ ಒರತೆ.   ಇತ್ತ ರೋಡಲಿ ಕಾರು ಅತ್ತ ಬಾರಲಿ ಬೀರು ಎಲ್ಲಿ ನೋಡಿದರಲ್ಲಿ ಹಣದ ಕಾರುಬಾರು.   ಮಾನಕ್ಕೆ ಬೆಲೆಯಿಲ್ಲ ಮಾನವಂತರು ಇಲ್ಲ. ಆಗಿಹುದು ನಾಡು, ಸುಡುಗಾಡು ಎರಡು ಮಾತಿಲ್ಲ.   ಹಣಕಾಗಿ ಜನ ಮರಳು ಹಣಕಾಗಿ ಜಾತ್ರೆ ಮರಳು. ಮರೆತು ಹೋಗಿದೆ ಇಂದು ಮಾನವತೆಯ ತಿರುಳು.   ದ್ವೇಷದ ದಳ್ಳುರಿಯಲ್ಲಿ ಪ್ರೀತಿ ಹೋಗಿದೆ ಸೋತು. ಪ್ರೀತಿ-ಪ್ರೇಮ ಎನ್ನುವುದು ಮರೀಚಿಕೆಯ ಮಾತು.   […]

ಟೆಲಿಪತಿ: ಪ್ರಶಸ್ತಿ ಅಂಕಣ

ಪೀಠಿಕೆ:ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ […]

ಹದಿನೈದು ವರ್ಷದ ಹಳೆಯ ಗೆಳತಿಯೊಂದಿಗೆ ಒಂದು ಸಂಜೆ: ಅಮರ್ ದೀಪ್ ಪಿ. ಎಸ್.

  ಹಿಂದಿನ ದಿನ ಆಕೆ ಒಬ್ಬ ಗೆಳತಿ ಮನೆಗೆ ಹೋಗಿದ್ದಳಂತೆ..  ಮಾತಿನ ನಡುವೆ   "ಮನೆ ಕೆಲಸ, ಮಕ್ಕಳು,  ಟಿ ವಿ. ಸಿರಿಯಲ್ಲು,   ಯಾವುದರಲ್ಲೂ ಮನಸ್ಸು ವಾಲುತ್ತಿಲ್ಲ, ಖುಷಿಯಾಗಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ,  ಯಾಕೋ ಬೇಜಾರೂ, ಲೋನ್ಲಿನೆಸ್ಸ್"  ಅಂದಿದ್ದಾಳೆ.  ಗೆಳತಿ ಒಬ್ಬ ಸಾಹಿತ್ಯಾಸಕ್ತೆ.  ಒಬ್ಬ  ಲೇಖಕನ ಬಗ್ಗೆ ಹೇಳುತ್ತಾ,  ಅವರೂ  ಒಮ್ಮೆ "ಶೂನ್ಯ ಭಾವ"ಕ್ಕೆ ಒಳಗಾಗಿದ್ದ ಸಂಧರ್ಭದಲ್ಲಿ ಒಬ್ಬ ಮನೋ ವೈದ್ಯ ಅವರಿಗೆ ನಾಲ್ಕು ಚೀಟಿಗಳಲ್ಲಿ ಪ್ರಿಸ್ಕ್ರಿಪ್ಷನ್ ಬರೆದು ಬೆಳಿಗ್ಗೆ ೯ಕ್ಕೆ ಮಧ್ಯಾನ್ಹ ೧೨ಕ್ಕೆ, ೩ಕ್ಕೆ ಮತ್ತು […]

ಚೈನಾಟೌನ್: ವಾಸುಕಿ ರಾಘವನ್ ಅಂಕಣ

ನಿಜವಾಗಿಯೂ ಒಂದು “ಸಸ್ಪೆನ್ಸ್” ಚಿತ್ರ ಗ್ರೇಟ್ ಅನ್ನಿಸಿಕೊಳ್ಳುವುದು ಯಾವುದರಿಂದ? ಅಂತ್ಯವನ್ನು ನಾವು ಊಹಿಸಲು ಆಗದಿರುವುದೇ ಅತೀ ದೊಡ್ಡ ಮಾನದಂಡವಾ? ಅಥವಾ ಚಿತ್ರದುದ್ದಕ್ಕೂ ಹೆಚ್ಚು ಹೆಚ್ಚು ತಿರುವುಗಳಿದ್ದು ನಮ್ಮನ್ನು ಥ್ರಿಲ್ ಮಾಡಿತ್ತು ಅನ್ನುವುದರ ಮೇಲೆ ನಿರ್ಧಾರವಾಗಿದೆಯಾ? ಹೀಗೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ. ಸುಳಿವುಗಳು ಹೆಚ್ಚಿದ್ದರೆ ನಾವು  ಪರಿಹಾರವನ್ನು ಕಂಡುಹಿಡಿದ ಸಂತೃಪ್ತಿ ಸಿಗುವುದಿಲ್ಲ, ಕಮ್ಮಿ ಇದ್ದರೆ ಚಿತ್ರದೊಂದಿಗೆ ಬಂಧ ಬೆಸೆಯುವುದಿಲ್ಲ. ಈ ಸಂತುಲನವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ನನ್ನ ಪ್ರಕಾರ ಒಂದು ಅತ್ಯುತ್ತಮ “ಸಸ್ಪೆನ್ಸ್” ಚಿತ್ರ ಎರಡನೆಯ […]

ತೇಲಿದ ಹೆಣ: ಸುಮನ್ ದೇಸಾಯಿ

ಮಧ್ಯಾಹ್ನ ಹನ್ನೆರಡು ಗಂಟೆದ ಹೊತ್ತು, ವೈಶಾಖ ಮಾಸದ ಖಡಕ ಬಿಸಿಲಿನ್ಯಾಗ ನಮ್ಮ ಊರಿನ ಬಸ್ಸಿನ್ಯಾಗ ಕೂತು ಯಾವಾಗ ಊರ ಮುಟ್ಟತೇನೊ ಅಂತ ಚಡಪಡಿಸ್ಕೊತ ಕೂತಿದ್ದೆ. ಮುಂಝಾನೆ ಹತ್ತು ಘಂಟೆ ಆಗಿದ್ರು ಬಿಸಲು ಭಾಳ ಚುರುಕ್ಕ ಇತ್ತು. ಹೌದು ಎಷ್ಟ ವರ್ಷ ಆಗಿಹೊದ್ವು ಹಳ್ಳಿಕಡೆ ಹೋಗಲಾರದ, ಒಂದ ಏಳೆಂಟ ವರ್ಷರ ಆಗಿರಬೇಕು. ಖಿಡಕ್ಯಾಗಿಂದ ಬಿಸಿ ಗಾಳಿ ಒಳಗ ಬಂದು ಮಾರಿಗೆ ಬಡಿಲಿಕತ್ತಿತು, ಮನಸ್ಸು ಹಿಂದಿನ ನೆನಪುಗಳ ಹತ್ರ ಓಡಿ ಓಡಿ ಹೊಂಟಿತ್ತು. ಎಂಥಾ ಆರಾಮದ ದಿನಗೊಳವು. ನನ್ನ ಮದುವಿಯಾದ […]

ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ […]

ಸಾಮಾನ್ಯ ಜ್ಞಾನ (ವಾರ 5): ಮಹಾಂತೇಶ್ ಯರಗಟ್ಟಿ

೧. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು? ೨. ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿರುವವರು ಯಾರು? ೩. ಕರ್ನಾಟಕದ ಉದ್ದವಾದ ನದಿ ಯಾವುದು? ೪. ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು? ೫. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು? ೬. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು? ೭. ರೈಡರ್ ಕಫ್ ಯಾವ […]