ಕಂಬಳಿಹುಳದ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

  ಚಿಕ್ಕವನಿದ್ದಾಗ ಎಂದು ಹೇಳಬಹುದು. ಹಲವು ಘಟನೆಗಳು ಕಾಲಾನುಕ್ರಮದಲ್ಲಿ ಮರೆತು ಹೋಗುತ್ತವೆ. ಕೆಲವು ಘಟನೆಗಳು ಮರೆತು ಬಿಡಬೇಕೆಂದರು ಮರೆಯಲಾಗುವುದಿಲ್ಲ. ನಮ್ಮದು ಆವಾಗ ಜೋಡು ಕುಟುಂಬ. ೧೮ ಅಂಕಣದ ಸೋಗೆ ಮನೆಯಲ್ಲಿ ಎಲ್ಲಾ ಒಟ್ಟು ಸೇರಿ ಹತ್ತಾರು ತಿನ್ನುವ ಬಾಯಿಗಳು. ಪ್ರತಿವರ್ಷ ಇಡೀ ಮನೆಯ ಸೋಗೆಯನ್ನು ಬದಲಾಯಿಸಿ ಹೊಸದನ್ನು ಹೊದಿಸಬೇಕು. ಅದೊಂದು ವಾರದ ಕಾರ್ಯಕ್ರಮ. ಹತ್ತಾರು ಆಳು-ಕಾಳುಗಳು ಅವರಿಗೆ ಊಟ-ತಿಂಡಿ, ಬೆಲ್ಲದ ಕಾಫಿ ಇತ್ಯಾದಿಗಳು. ಅದಿರಲಿ ಈಗ ಹೇಳ ಹೊರಟಿರುವ ಕತೆಗೆ ಹಿಂದಿನ ವಾಕ್ಯಗಳು ಪೂರಕವಷ್ಟೆ. ವರ್ಷದಲ್ಲೊಂದು ಬಾರಿ … Read more

ನಾನೇಕೆ ಬರೆಯುವುದಿಲ್ಲ?: ಎಂ. ಎಸ್. ನಾರಾಯಣ

‘ನಾನೇಕೆ ಬರೆಯುವುದಿಲ್ಲ’ ಎಂಬ ಪ್ರಶ್ನೆ ಈ ಹಿಂದೆಯೂ ಕೆಲವೊಮ್ಮೆ ನನ್ನನ್ನು ಕಾಡಿರುವುದು ನಿಜ. ಹೌದು, ಎಲ್ಲರೂ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಅಸಲು, ಕೆಲವರು ಬರೆಯದೇ ಇರುವುದೇ ಕ್ಷೇಮ. ಆದರೆ ಒಂದು ಮಟ್ಟಿಗೆ ಓದಿಕೊಂಡಿರುವ ನನ್ನಲ್ಲಿ ಬರೆಯಬೇಕೆಂಬ ಕಾಂಕ್ಷೆಗೇನೂ ಕೊರತೆಯಿಲ್ಲ. ಸಮಸ್ಯೆ ಏನೆಂದರೆ, ನನ್ನ ತಿಳುವಳಿಕೆಯಂತೆ ನನಗೆ ಸುಮಾರಾಗಿ ಬರುವ ಇಂಗ್ಲೀಷಿನಷ್ಟೂ ಚೆನ್ನಾಗಿ ಕನ್ನಡ ಬರುವುದಿಲ್ಲ. ಜೊತೆಗೆ ಗಣಕಯಂತ್ರದಲ್ಲಿ ಕನ್ನಡ ಬರೆಯುವ ಕೌಶಲ್ಯವೂ ಕಡಿಮೆಯೇ. ಇಷ್ಟೆಲ್ಲಾ ಇತಿಮಿತಿಗಳಿರುವಾಗ, ನಾನು ಬರೆದು ಏನಾಗಬೇಕು? ನಾನು ಬರೆಯದೇ ಇದ್ದಲ್ಲಿ ಸಮಸ್ತ ಕನ್ನಡ … Read more