Facebook

Archive for 2013

ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ: ನಟರಾಜು ಎಸ್. ಎಂ.

ಇತ್ತೀಚೆಗೆ ಒಂದು ದಿನ ಹಾಸಿಗೆಯ ಮೇಲೆ ಮಲಗಿ ವಿರಮಿಸುತ್ತಿದ್ದಾಗ ಒಂದು ಇರುವೆ ಹಾಸಿಗೆಯ ಸುತ್ತ ಮುತ್ತ ಸುಮ್ಮನೆ ಅಡ್ಡಾಡುತ್ತಿದ್ದುದ ನೋಡಿ ಸುಮ್ಮನಾಗಿದ್ದೆ. ಎಲ್ಲೆಲ್ಲೋ ಅಡ್ಡಾಡಿ ಬಂದ ಆ ಇರುವೆ ಕೊನೆಗೆ ಹಾಸಿಗೆಯ ಮೇಲೆ ಚಾಚಿದ್ದ ನನ್ನ ಕೈ ಬೆರಳ ಮೇಲೆ ಹತ್ತಿ ಹರಿದಾಡುತ್ತಿತ್ತು. ಆ ಇರುವೆಯ ಹರಿದಾಡುವಿಕೆಯನ್ನು ಮುಗುಳ್ನಗುತ್ತಾ ನೋಡಿದ ನಾನು ಅದು ನನ್ನ ಬೆರಳನ್ನು ಕಚ್ಚುವಾಗ "ಇರುವೆ ತಾನೆ ಬಿಡು ಕಚ್ಚಲಿ. ಇರುವೆ ಕಚ್ಚಿದರೆ ಹೆಚ್ಚೆಂದರೆ ಕಚ್ಚಿದ ಜಾಗ ಒಂಚೂರು ಉರಿದು ಕೆಂಪಾಗಿ ಒಂದು ಸಣ್ಣ […]

ನಂಬಿಕೆ, ಮೂಢನಂಬಿಕೆ: ಅಖಿಲೇಶ್ ಚಿಪ್ಪಳಿ ಅಂಕಣ

ಹೊಸದಾಗಿ ಮದುವೆಯಾಗಿದ್ದ ದಂಪತಿಗಳು ಸಿನಿಮಾ ನೋಡಲು ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಹೆಂಡತಿಗೆ ವಿಪರೀತ ತಲೆನೋವು ಶುರುವಾಯಿತು. ಗಂಡನಿಗೆ ಏನು ಮಾಡುವುದು ತಲೆ ಓಡಲಿಲ್ಲ. ಅಷ್ಟರಲ್ಲಿ ಪರಿಚಿತ ಡಾಕ್ಟರು ಅದೇ ಸಿನೆಮಾ ನೋಡಲು ಬಂದ್ದಿದ್ದರು. ಗಂಡ ಹೋಗಿ ಸಂಕೋಚದಿಂದ ಡಾಕ್ಟರಲ್ಲಿ ಅವಲತ್ತುಕೊಂಡ. ಡಾಕ್ಟರ್ ಬುದ್ಧಿವಂತನಿದ್ದ, ಥಿಯೇಟರ್‌ನ ಒಳಗಡೆ ಕತ್ತಲಿತ್ತು, ಗಂಡನಿಗೆ ಗೊತ್ತಾಗದ ಹಾಗೆ ತನ್ನದೆ ಕೋಟಿನ ಒಂದು ಗುಂಡಿಯನ್ನು ಕಿತ್ತು, ಈ ಮಾತ್ರೆಯನ್ನು ಬಾಯಲಿಟ್ಟುಕೊಳ್ಳಲು ಸಲಹೆ ಮಾಡಿದರು. ಹತ್ತು ನಿಮಿಷದಲ್ಲಿ ತಲೆನೋವು ಮಾಯ. ಗಂಡ-ಹೆಂಡತಿ ಸಿನಿಮಾವನ್ನು ಎಂಜಾಯ್ ಮಾಡಿದರು […]

ಪುಷ್ಪ: ಈಶ್ವರ ಭಟ್ ಕೆ

ಇತ್ತೀಚೆಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬರುತ್ತಿರುವ ಸುದ್ಧಿಗಳನ್ನು ನೋಡುತ್ತಾ, ನಿರೀಕ್ಷೆಗೂ ಮೀರಿ ಜಗತ್ತು ಬೆಳೆದರೂ ವಾಹಿನಿಗಳಲ್ಲಿ ಸುದ್ಧಿಯೇ ಆಗದ ಒಂದು ಕತೆಯಿದೆ. ನಮ್ಮೂರಿನ ಪುಷ್ಪಕ್ಕ ದಿನ ಕಳೆದಂತೆ ಜನರಿಗೆ ಅಚ್ಚರಿಯೂ ಜನರ ಅನುಕಂಪಕ್ಕೂ ಕಾರಣಳಾಗಿ ಉಳಿದ ಕತೆ. ಈ ಕತೆ ಹೇಳುವ ನನಗೆ ಆಗ ಹದಿನೇಳು ವಯಸ್ಸು, ಈಗ ಇಪ್ಪತ್ತೆಂಟು. ಈ ಪುಷ್ಪಕ್ಕ ಎನ್ನುವ ನನ್ನ ಕತೆಯ ನಾಯಕಿಯ ಪೂರ್ಣ ಹೆಸರು ಪುಷ್ಪಲತ. ಊರು ಎರಡು ಮೂರು ಬೆಟ್ಟಗಳ ನಡುವಿನ ಗ್ರಾಮ. ವಿಶಾಲವಾದ ಗ್ರಾಮದಲ್ಲಿ ಸುಮಾರು ನಲುವತ್ತು ಮನೆಗಳಷ್ಟೇ. […]

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಅನುಭವ (ಭಾಗ ೩): ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ಟೈಗರ್ ಹಿಲ್ ನ ಸುರ್ಯೋದಯ ನೋಡಿ ಬಂದು ಒಂಭತ್ತು ಗಂಟೆಗೆಲ್ಲಾ ತಯಾರಾಗಿ ಹೋಟೆಲ್ ಹೊರಗೆ ನಿಂತವರ ಮುಖಗಳು ಲವಲವಿಕೆಯಿಂದ ಕಂಗೊಳಿಸುತ್ತಿದ್ದವು. ಯಾಕಂತೀರಾ? ಬೆಂಗಳೂರು ಬಿಟ್ಟ ಮೇಲೆ ಮೊದಲ ಬಾರಿಗೆ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ಅವತ್ತೇ! ತಾನು ಹೇಳಿದ್ದ ಟೈಮಿಗೆ ನಾವು ಸರಿಯಾಗಿ ಬಂದಿಲ್ಲಾ ಅಂತ ನೀಮಾ ಮುಖ ಸಿಂಡರಿಸಿಕೊಂಡಿದ್ದ. ಮೊದಲೇ ಕೆಂಪಗಿದ್ದವನು ಇನ್ನೂ ಕೆಂಪಾಗಿದ್ದ ಏನೇನೋ ಪ್ರಯತ್ನಗಳನ್ನು ಮಾಡಿ ಅವನ ಮುಖದ ಗಂಟುಗಳನ್ನು ಯಶಸ್ವಿಯಾಗಿ ಬಿಡಿಸಿದೆವು. ನೀ ಮಾ ಮೂಕನಾದರೆ ನಮಗೆ ಮಾಹಿತಿಗಳು […]

ಕೆಂಗುಲಾಬಿ (ಕೊನೆಯ ಭಾಗ): ಹನುಮಂತ ಹಾಲಿಗೇರಿ

ರಾಜಿಯ ದಾಂಪತ್ಯದ ಬದುಕಿನ ಬಗ್ಗೆ ಶಾರದೆಯ ಮೂಲಕ ದೀಪಾಳಿಗೂ, ದೀಪಾಳ ಮೂಲಕ ನನಗೂ ಗೊತ್ತಾಗುತ್ತಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮತ್ತು ಮುಖದ ಮೇಲಿನ ಕಳೆ ಮಾಯವಾಗುತ್ತಿರುವುದು ಶಾರದೆಯ ಗಮನಕ್ಕೂ ಬಂದಿತಂತೆ. ರಾಜಿಯ ದಾಂಪತ್ಯದೊಳಗೆ ಹೊಗೆಯಾಡಲಿಕ್ಕೆ ಶುರುವಾಗಿದೆ ಎಂಬುದನ್ನು ಅವಳು ಅರಿತುಕೊಂಡಿದ್ದಳು. ಅಳಿಯ ಕೆಲಸಕ್ಕೆ ಹೋಗೋದನ್ನು ಬಿಟ್ಟು ಪೂರ್ತಿಯಾಗಿ ಕುಡಿತಕ್ಕೆ ಅಂಟಿಕೊಂಡಿದ್ದ. ಕೆಲಸಕ್ಕೆ ಹೋಗು ಅಂತ ರಾಜಿ ಗಂಡನನ್ನು ಒತ್ತಾಯಿಸಿದಾಗ ಆತ ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. ‘ನಿಮ್ಮಮ್ಮನ್ನ ತಂದ್ಹಾಕು ಅಂತ ಹೇಳು. ಒಬ್ಬ […]

ಸಾಲದ ವಿಷಯ (ಕೊನೆಯ ಭಾಗ): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈ ಘಟನೆಯ ನಂತರ ನಿಮಗೆ ನನ್ನ ರೂಪ ಅಸಹ್ಯವಾಗಿ ಕಾಣಿಸುತ್ತದೆ. ನಾನು ಎಲ್ಲಾ ದುರ್ಗುಣಗಳ ಘನೀಕೃತ ರೂಪವಾಗಿ, ಕೀಚಕನಾಗಿ, ವೀರಪ್ಪನ್ ಆಗಿ ಕಾಣುತ್ತೇನೆ. ಆದರೆ ಏನೂ ಮಾಡಲಾಗದ ಪರಿಸ್ಥಿತಿ ನಿಮ್ಮದು. ನನ್ನದು ಮೃದು ಹೃದಯ. ಇಲ್ಲ ಎಂದು ಹೇಳಿ ನಿಮ್ಮನ್ನು ಗಾಸಿಗೊಳಿಸಲು ಇಷ್ಟವಿಲ್ಲ. ಅದಕ್ಕಾಗಿ ನಾನು, ’ರೀ, ಗೆಳೆಯನೊಬ್ಬನಿಗೆ ಎರಡು ಲಕ್ಷ ಕೊಟ್ಟಿದ್ದೆ. ಎರಡು ವಾರ ಬಿಟ್ಟು ಕೊಡ್ತೀನಿ ಎಂದು ಹೇಳಿದ್ದಾನೆ. ನೀವು ಎರಡು ವಾರ ಬಿಟ್ಟು ಬನ್ನಿ, ಕೊಟ್ಟರೆ ನಿಮಗೆ ಖಂಡಿತಾ ಹತ್ತು ಸಾವಿರ […]

ಸಾಮಾನ್ಯ ಜ್ಞಾನ (ವಾರ 2) : ಮಹಾಂತೇಶ್ ಯರಗಟ್ಟಿ

೧. ಮಹಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ. ಆ ಚಿತ್ರ ಯಾವುದು? ೨. ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು? ೩. ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ ೨ವರ್ಷಕ್ಕೆ ಹೆಚ್ಚಿಸಲಾಯಿತು? ೪. ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ? ೫. ಕನ್ನಡದ ಮೊದಲ ನಾಟಕ ಯಾವುದು? ೬. ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು? ೭. ಮ್ಯಾಗ್ಸೆಸೆ ಪ್ರಶಸ್ತಿ ಪಡೆದ (ರಂಗಭೂಮಿ ಸೇವೆಗೆ) ಮೊದಲ ಕನ್ನಡಿಗ […]

‘ನಟರಂಗ್’ ಎಂಬ ಅದ್ಭುತ ಮರಾಠಿ ಸಿನಿಮಾ: ಶ್ರೀಧರ ಬನವಾಸಿ

ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಕೆಲವು ಸಿನಿಮಾಗಳಲ್ಲಿ ನನ್ನನ್ನು ಅತ್ಯಂತ ಕಾಡಿದ ಸಿನಿಮಾವೆಂದರೆ ಮರಾಠಿಯ ನಟರಂಗ್’ ಚಿತ್ರ. ಸಿನಿಮಾವನ್ನು ಕಳೆದ ಒಂದು ವಾರದಲ್ಲೇ ನಾಲ್ಕೈದು ಬಾರಿ ನೋಡಿಬಿಟ್ಟೆ. ಚಿತ್ರದ ಒಂದೊಂದು ಸನ್ನಿವೇಶಗಳು, ನಾಯಕನ ಅಭಿನಯ, ಸಂಗೀತವು ನೋಡುಗರನ್ನು ಸೆಳೆದುಕೊಂಡು ನೋಡಿಸಿಕೊಂಡು ಹೋಗುತ್ತದೆ. ಅದ್ಭುತ ಹಾಗೂ ಮನಸ್ಸಿಗೆ ತುಂಬಾ ನಾಟುವಂತಹ, ಬದುಕಿಗೆ ತುಂಬಾ ಹತ್ತಿರವಾದಂತಹ ಸಿನಿಮಾ ಅಂತ ಹೇಳಬಹುದು. ಇಡೀ ಸಿನಿಮಾ ನೋಡಿದ ಮೇಲೆ ಯಾರಿಗೇ ಆಗಲಿ ಒಂದು ಅಮೂರ್ತವಾದಂತಹ ಅನುಭವ ನಿಮ್ಮನ್ನು ಕಾಡದೇ ಬಿಡದು. ‘ನಟರಂಗ್’ ಚಿತ್ರದಲ್ಲಿ […]

ದೀಪಾವಳಿ: ಪ್ರಶಸ್ತಿ ಅಂಕಣ

ಪೀಠಿಕೆ: ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ […]

ಅಂತರಂಗದ ಗೆಳೆಯ: ಸುಮನ್ ದೇಸಾಯಿ ಅಂಕಣ

ಸಂಜಿಮುಂದ ದೇವರಿಗೆ ದೀಪಾ ಹಚ್ಚಿ. ಅಂಗಳದಾಗಿನ ತುಳಸಿ ಕಟ್ಟಿ ಮ್ಯಾಲೆ ಕೂತು ಮಕ್ಕಳಿಗೆ ಸಾಯಂಕಾಲದ ಪೂರೋಚಿ(ಸಾಯಂಕಾಲದ ಸ್ತೊತ್ರಗಳು) ಹೇಳಿಕೊಡಲಿಕತ್ತಿದ್ದೆ. ಮೊಬೈಲ್ ರಿಂಗಾಗಿದ್ದು ಕೇಳಿ ಎದ್ದು ಒಳಗ ಹೋದೆ. ಯಾವದೊ ಅಪರಿಚಿತ ನಂಬರ್ ಇತ್ತು. ಅಂಥಾಪರಿ ಏನು ಕೂತುಹಲ ಇಲ್ಲದ ಫೋನ್ ತಗೊಂಡು ಹಲೊ ಅಂದೆ. ಅತ್ಲಾಕಡೆಯಿಂದ ಬಂದ ಧ್ವನಿ ನನ್ನ ಉಸಿರಿಗೆ ಪರಿಚಿತ ಅದ ಅನ್ನೊ ಭಾವನೆ ಬರಲಿಕತ್ತು. ಕ್ಷಣ ಮಾತ್ರ ಆಧ್ವನಿಯ ಒಡತಿ ನನ್ನ ಬಾಲ್ಯದ ಗೆಳತಿ ಜಾನು ದು ಅಂತ ಗೊತ್ತಾತು. ಎಷ್ಟು ವರ್ಷದ […]