Facebook

Archive for 2013

ಕೆಂಗುಲಾಬಿ (ಭಾಗ 17): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.   […]

ಪುನರ್ ಮಿಲನ: ಸುಮನ್ ದೇಸಾಯಿ ಅಂಕಣ

ಮದವಿಮನಿ ಅಂದ್ರ ಅದರ ಕಳೆನ ಬ್ಯಾರೆ ಇರತದ. ಹೆಣ್ಣು ಮಕ್ಕಳ ಹರಟಿ, ಸಣ್ಣ ಮಕ್ಕಳ ನಗುವಿನ ಕಲರವ. ಹಸಿರು ತೋರಣ, ಮಂಗಳಕರ ಚಪ್ಪರ. ನಗು, ಹಾಸ್ಯ, ಗಡಿಬಿಡಿಯಿಂದ ತುಂಬಿರತದ. ಅದರೊಳಗಂತು ಹಳ್ಳಿಯೊಳಗಿನ ಮದುವಿ ಸಂಭ್ರಮ ಅಂತು ಒಂಥರಾ ಬ್ಯಾರೆನ ಇರತದ.ಅದೊಂದ ಹಳೆಕಾಲದ್ದ ದೊಡ್ಡಂಕಣದ್ದ ಮನಿ. ಯಾವ ಆಡಂಬರ ಇಲ್ಲದ ಬಿಳಿಸುಣ್ಣದಿಂದ ಸಾರಿಸಿ ಅಲ್ಲಲ್ಲೆ ಇಳಿಬಿಟ್ಟ ಕೆಂಪು ಕ್ಯಾಂವಿ ಮಣ್ಣಿನ ಜೋರು. ಬಾಗಲಿಗೆ ಕಟ್ಟಿದ ಮಾವಿನ ತೊಳಲಿನ ತೊರಣ, ಮನಿಮುಂದ ಓಣಿಯ ತುಂಬ ಹಾಕಿದ ಹಂದರ ಹಂದರದೊಳಗ ಬಳೆಗಾರರು […]

ಮೇರಾ ಲವ್ಲೀ ಕನ್ನಡ…!!: ಸಚಿನ್ ಎಂ. ಆರ್.

 ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)…!! ಪಕ್ಕದಲ್ಲಿ ಮೂವರು ಬುದ್ಧಿಜೀವಿಗಳು (ಬಿಳಿ ಗಡ್ಡ ಇದ್ದಿದ್ರಿಂದ ಹಂಗಂದುಕೊಂಡೆ) ಮಾತಾಡ್ತಾ ನಿಂತಿದ್ರು…!! ಅಷ್ಟರಲ್ಲಿ ಅಲ್ಲೇ ಇದ್ದ ಬಸ್ಸಿನಿಂದ ಇಳಿದುಬಂದ  ಸುಂದರ ಯುವತಿಯೊಬ್ಬಳು ನನ್ನತ್ರ ಅಡ್ರೆಸ್ಸ್ ತೆಲುಗಲ್ಲಿ ಕೇಳಿದ್ಳು..! ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು ಕೂಡಾ.. ನಾನೂ ಒಬ್ಬ ಕನ್ನಡಿಗನಾದ್ದರಿಂದ ಅವಳ ವಿಳಾಸಾನ ತೆಲುಗಲ್ಲೇ ಹೇಳಿದೆ..!! ಇದು ನಮ್ಮ ಕನ್ನಡ ಬುದ್ಧಿಜೀವಿಗಳಿಗೆ ಸ್ವಲ್ಪ ರೇಗಿಸಿತು ಅನ್ಸತ್ತೆ..! “ತಮ್ಮಾ ಬಾ” ಅಂದ್ರು. ಹತ್ತಿರ ಹೋದೆ. “ನೀನ್ ಯಾವೂರು? ನಿನ್ ಭಾಷೆ […]

ನ್ಯಾನೋ ಕತೆಗಳು: ಸುನೀತಾ ಮಂಜುನಾಥ್, ನವೀನ್ ಮಧುಗಿರಿ

ಒಂದಷ್ಟು ವಾಸ್ತವಗಳು ……….!!! ಬೆಳಗು ಬೈಗಿನ ಅನ್ನಕ್ಕೆ ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ ನನ್ನ ಮಗಳ ವಯಸ್ಸೇ ಏನೋ … ಒಂದಷ್ಟು ನೀರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ … ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ …. 'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ 'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ …. !!!!!!! 'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು ಅವನ ಕಣ್ಣಲ್ಲಿ ಖುಷಿ …. […]