ಪಂಜು ಪ್ರವಾಸ ಕಥನ ಸ್ಪರ್ಧೆ

  ಪಂಜು ಅಂತರ್ಜಾಲ ವಾರಪತ್ರಿಕೆ (https://www.panjumagazine.com/) ಮತ್ತು ಪಂಜು ಪ್ರಕಾಶನದ ವತಿಯಿಂದ ಪಂಜು ಪ್ರವಾಸ ಕಥನ ಸ್ಪರ್ಧೆಗೆ ನಿಮ್ಮ ಪ್ರವಾಸ ಕಥನಗಳನ್ನು ಆಹ್ವಾನಿಸಲಾಗಿದೆ. ಲೇಖನಗಳು ಸ್ವಂತ ರಚನೆಗಳಾಗಿರಬೇಕು. ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನಗಳನ್ನು ಕಳುಹಿಸಬಹುದು (ಗರಿಷ್ಠ ಮಿತಿ 3 ಲೇಖನಗಳು). ಪ್ರತಿ ಲೇಖನಗಳು ಕನಿಷ್ಠ 3000 ಪದಗಳಿಂದ ಕೂಡಿರಬೇಕು (ಗರಿಷ್ಠ ಮಿತಿ 5 ಸಾವಿರ ಪದಗಳು). ಲೇಖನಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರವಾಸಗಳ ವೈವಿಧ್ಯತೆ ಇರಲಿ. ಸಾಧ್ಯವಾದರೆ ಲೇಖನಗಳ ಜೊತೆಗೆ ಲೇಖನಕ್ಕೆ ಹೊಂದುವ ನೀವೇ ತೆಗೆದಿರುವ … Read more

ಕರಿಮುಗಿಲುಗಳ ನಡುವೆ: ಜಯರಾಮ ಚಾರಿ

"ಬೆಳಕಿನ ವೇಗದಲ್ಲಿ ನೀನಿದ್ದಾಗ ಎಲ್ಲವೂ ಶೂನ್ಯವಾದಂತೆ ಭಾಸವಾಗುತ್ತದೆ; ಅಸಲು ಶೂನ್ಯವೇ ಆಗಿರುತ್ತದೆ" ಯಾವುದೋ ಅನಾಮಧೇಯ ವಿಜ್ಞಾನಿಯ ಈ ವಾಕ್ಯ ನನ್ನೊಳಗೆ ಎನನ್ನೋ ಹುಟ್ಟಿಹಾಕಿರಬೇಕು!. ಇಲ್ಲದಿದ್ದರೆ ಇಷ್ಟೊಂದು ಕಾಡುವ ಅಗತ್ಯವೇನಿತ್ತು? ಈ ಪ್ರವಾಹಭರಿತ 'ಜಲಧಾರಿನಿ' ತುಂಬಿ ಹರಿವಾಗ, ಅದರಲ್ಲಿ ಕೊಚ್ಚಿಹೋಗೋ ಸಾವಿರ ಕಲ್ಮಶಗಳ ನಡುವೆ ಇಂತಹುದೊಂದು ಪ್ರಶ್ನೆ ಯಾಕೆ ನನ್ನ ಕಾಡಬೇಕು? ಅದು ನನ್ನದಲ್ಲದ ಪ್ರಶ್ನೆಗೆ!. ಕರಿಮುಗಿಲಕಾಡು; ಈ ಹೆಸರೇ ವಿಚಿತ್ರತೆರನದು ಕರಿಮುಗಿಲೆಂದರೆ ಕಪ್ಪಾದ ಮುಗಿಲುಗಳು. ಮುಗಿಲುಗಳು ಸೇರಿ ಕಾಡಾದೀತೆ? ಕಾದಾಡಿತಷ್ಟೇ. ಇಂತಹುದೊಂದು ವಿಚಿತ್ರ ಊರಿಗೆ ನಾಗರೀಕತೆ ತುದಿಯಲ್ಲಿರೋ … Read more

ಸಾಲದ ವಿಷಯ (ಭಾಗ 1): ಸೂರಿ ಹಾರ್ದಳ್ಳಿ

ಕೆಲವರಿದ್ದಾರೆ, ಅವರಿಗೆ ಒಣ ಪ್ರತಿಷ್ಠೆ. ಯಾವುದೇ ಕಿವಿ ಸಿಕ್ಕರೂ, ಅದು ಮರದ್ದೇ ಆಗಿರಬಹುದು, ಮಣ್ಣಿನದ್ದೇ ಆಗಿರಬಹುದು, ಬೊಗಳೆ ಬಿಡುತ್ತಾರೆ: ತಾನು ಯಾವ ಸಾಲವನ್ನೂ ಮಾಡಿಲ್ಲ, ಹಾಲಪ್ಪನಿಂದ ಕೂಡಾ. ಹಾಗಾಗಿ ಸಾಲ ಕೊಟ್ಟವರು ಯಾರೂ ತನ್ನ ಮನೆಯ ಬಾಗಿಲನ್ನು ತಟ್ಟುವಂತಿಲ್ಲ, ಎಂದು, ಎದೆ ತಟ್ಟಿಕೊಂಡು, ತಲೆ ಎತ್ತಿಕೊಂಡು! ಆದರೆ ಹಾಗೆ ಯಾರೂ ಹೇಳುವಂತಿಲ್ಲ. ಯಾಕೆಂದರೆ ಸಿನೆಮಾ ಹಾಡೊಂದು ಹೇಳುತ್ತದೆ, ‘ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯಾ ಜನ್ಮವ ತಳೆದು…’ ಎಂದು. ಸಾಲ ತೀರಿದ ನಂತರವೇ ಮರುಜನ್ಮದ ಸರಣಿಯಿಂದ ಬಿಡುಗಡೆ ಎಂಬುದು … Read more

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಅನುಭವ (ಭಾಗ ೧): ಗುರುಪ್ರಸಾದ ಕುರ್ತಕೋಟಿ

"ಯಾವುದೆ ಪ್ರವಾಸದಲ್ಲಿ ಅನುಭವಿಸುವ ಅನಂದಕ್ಕಿಂತ ಆ ಪ್ರವಾಸಕ್ಕಾಗಿ ಮಾಡುವ ಸಿಧ್ಧತೆ ಹಾಗೂ ಅದರ ಕಲ್ಪನೆಯಲ್ಲಿ ಸಿಗುವ ಮಜವೇ ಅದ್ಭುತ!" ಅಂತ ನಮ್ಮ ಕೃಷ್ಣ ಮೂರ್ತಿ ಅವರ ಅಂಬೋಣ. ಅದು ನಿಜವೂ ಹೌದು. ಹಾಗೂ ಆ ಮಾತು ಪ್ರವಾಸಕ್ಕಷ್ಟೇ ಸೀಮಿತವಲ್ಲ. ಯಾವುದೇ ವಿಷಯದಲ್ಲೂ ಕಲ್ಪನೆಯಲ್ಲಿರುವ ಖುಷಿಯೇ ಬೇರೆ. ಹೀಗೆ ನಮ್ಮ ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಪರಿಕಲ್ಪನೆ ಶುರುವಾದದ್ದು ಮೂರು ತಿಂಗಳ ಹಿಂದೆ. ಎಲ್ಲೆಲ್ಲಿ ಹೋಗುವುದು, ಏನೇನು ಸಿದ್ಧತೆಗಳು, ಎಲ್ಲಿ ಪ್ಲೇನು, ಎಲ್ಲಿ ಟ್ರೇನು ಅನ್ನುವ ಹಲವಾರು … Read more

ಎತ್ತರದ ಗಡಿಯಲ್ಲಿ..: ಪ್ರಶಸ್ತಿ ಅಂಕಣ

"ಉತ್ತರೇ ಯತ್ಸಮುದ್ರಸ್ಯ, ಹಿಮಾದ್ರೇಶ್ಚೈವ ದಕ್ಷಿಣಾತ್. ವರ್ಷೇ ತದ್ಭಾರತಂ ನಾಮ, ಭಾರತೀಯತ್ರ ಸಂತತಿ:"  ಅಂತೊಂದು ಶ್ಲೋಕ ಇತ್ತು ಹೈಸ್ಕೂಲಲ್ಲಿ. ಹುಟ್ಟುತ್ತಿರೋ ಸೂರ್ಯ ನಿಮ್ಮ ಎಡಭಾಗದಲ್ಲಿರುವಂತೆ ನೀವು ಈ ದೇಶದ ಯಾವುದೋ ಭಾಗದಲ್ಲಿ ನಿಂತಿದ್ದೀರ ಎಂದು ಕಲ್ಪಿಸಿಕೊಂಡರೆ ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳೋದು ಸುಲಭ. ಯಾವ ದೇಶದ ಉತ್ತರದಲ್ಲಿ(ಕೆಳಭಾಗ) ಕಣ್ಣು ಹಾಯಿಸಿದಷ್ಟೂ ಮುಗಿಯದ  ಸಮುದ್ರವಿದೆಯೋ , ದಕ್ಷಿಣದಲ್ಲಿ ಹಿಮಾಲಯದಂತಹ ವಿಶ್ವದ ಅತಿ ಎತ್ತರದ ಪರ್ವತಶ್ರೇಣಿಯಿದೆಯೋ, ಎಲ್ಲಿ ಭಾರತೀಯರೆಂಬ ಸಂತತಿಯಿದೆಯೋ ಆ ದಿವ್ಯ ಭಾರತ ನನ್ನದು ಅಂತ.. ಕೇಳುತ್ತಾ ಇದ್ರೆ ಎಷ್ಟು … Read more

ಕನ್ನಡ ಪ್ರೇಮಿ: ಮಹಾಂತೇಶ್ ಯರಗಟ್ಟಿ

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ ಬಾಯ್ ವೊಲಿಸ್ಯಾರೆದ್ರೊವೆ|| ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ನ ಮನಸನ್ ನೀ ಕಾಣೆ|| ಈ ಮೇಲಿನ ಸಾಲುಗಳನ್ನು ಓದಿದರೆ ತುಂಬಾ ರೋಮಾಂಚನ ಅನಿಸುತ್ತೆ ಅಲ್ವಾ..? ನಮ್ಮ ನಾಡಿನ ಗಡಿ ಜಿಲ್ಲೆಯಾದ ಚಾಮರಾಜನಗರದ, ಗುಂಡ್ಲುಪೇಟೆಯ ಹಿರಿಯ ಸಾಹಿತಿಗಳಾದ ಶ್ರೀ ಜಿ.ಪಿ.ರಾಜರತ್ನಂರವರ ಈ ಸಾಲುಗಳು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನನ್ನು ಬಡಿದ್ದೆಬ್ಬಿಸುತ್ತವೆ. ಅವರ ಅಪ್ಪಟ ಕನ್ನಡಾಭಿಮಾನವನ್ನು ಬಿಂಭಿಸುವ, ಈ ಸಾಲುಗಳಂತೆ ಇದೇ ಗುಂಡ್ಲುಪೇಟೆಯ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ” ದಲ್ಲಿ ಕಂಡಕ್ಟರಾಗಿ ಕೆಸಲನಿರ್ವಹಿಸುತ್ತಿರುವ, ಶ್ರೀ ನಟರಾಜ … Read more

ಸಸ್ಯಾಹಾರ ವರ್ಸಸ್ ಮಾಂಸಾಹಾರ: ಅಖಿಲೇಶ್ ಚಿಪ್ಪಳಿ ಅಂಕಣ

  ಮೊನ್ನೆ ಪರಿಚಿತರೊಬ್ಬರು ಸಿಕ್ಕಿದ್ದರು. ಮಾತು ದೇಶ-ವಿದೇಶಗಳನ್ನು ಸುತ್ತಿ, ಕಡೆಗೆ ನಾವು ಸೇವಿಸುವ ಆಹಾರದ ಬಗ್ಗೆ ಹೊರಳಿತು. ತಟ್ಟನೆ ಆ ಪರಿಚಿತರು ಪ್ರತಿಕ್ರಯಿಸಿದರು. ಮಾರಾಯ ಈಗಿನ ಪೀಡೆನಾಶಕದ ಹಾವಳಿಯಲ್ಲಿ ತರಕಾರಿಗಿಂತ ಕೋಳಿ ತಿನ್ನೋದೆ ಸ್ವಲ್ಪ ಮಟ್ಟಿಗೆ ಒಳ್ಳೆದು ಅಂತ ಕಾಣ್ತದೆ ಎಂದರು. ಯಾಕೆ ಎಂದೆ. ನೋಡು ತರಕಾರಿಗಳಿಗೆ ಇಂತದೇ ವಿಷ ಹಾಕ್ತಾರೆ ಅಂತ ಹೇಳೊಕಾಗಲ್ಲ. ಪಾದರಸದಿಂದ ಹಿಡಿದು ಎಂಡೋಸಲ್ಪಾನ್‍ವರೆಗೂ ಎಲ್ಲಾ ತರಹದ ಔಷಧ ಹೊಡಿತಾರೆ. ಯಾವುದೇ ನಿಯಮಗಳನ್ನೂ ಪಾಲಿಸೋದಿಲ್ಲ. ಕೋಳಿಯಾದ್ರೆ ಜೀವಂತ ಪ್ರಾಣಿ ಹಾಗಾಗಿ ಅದಕ್ಕೆ ಯದ್ವಾತದ್ವಾ … Read more

“ಬಿಫೋರ್” ಟ್ರೈಲಾಜಿ: ವಾಸುಕಿ ರಾಘವನ್ ಅಂಕಣ

“ಫ್ರಾನ್ಚೈಸೀ” ಚಿತ್ರಗಳಲ್ಲಿ, ಮೊದಲ ಚಿತ್ರದಷ್ಟೇ ಉತ್ತಮವಾಗಿ ನಂತರದ ಚಿತ್ರಗಳು ಬರುವುದು ಬಹಳ ಅಪರೂಪ. ಅದಕ್ಕೆ ಕಾರಣ ಸೀಕ್ವೆಲ್ಲುಗಳನ್ನು ಮಾಡುವ ಹಿಂದಿರುವ ಸಾಮಾನ್ಯ ಮನಸ್ಥಿತಿ – ಮೊದಲ ಚಿತ್ರ ಗೆದ್ದಿತ್ತು, ಆ ಗೆಲುವಿನ ಬೆನ್ನೇರಿ ಇನ್ನೊಂದಷ್ಟು ದುಡ್ಡು ಮಾಡಿಕೊಳ್ಳೋಣ ಅನ್ನುವುದು. ಅದಕ್ಕೆ ಅಪವಾದ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ “ಬಿಫೋರ್” ಟ್ರೈಲಾಜಿ. 1995ರಲ್ಲಿ ಬಂದ “ಬಿಫೋರ್ ಸನ್ರೈಸ್” ಸಾರ್ವಕಾಲಿಕ ಅತ್ಯುತ್ತಮ ರೋಮ್ಯಾನ್ಸ್ ಚಿತ್ರಗಳಲ್ಲಿ ಒಂದು. ಯೂರೋಪಿನ ಟ್ರೈನಿನಲ್ಲಿ  ಪ್ರಯಾಣ ಮಾಡುವಾಗ ಅಮೆರಿಕಾದ ಯಾತ್ರಿಕ ಜೆಸ್ಸಿ ಮತ್ತು ಫ್ರೆಂಚ್ ಯುವತಿ ಸೆಲೀನ್ … Read more

ಮೂವರ ಕವಿತೆಗಳು: ಮಂಜು ಹಿಚ್ಕಡ್, ಚೇತನ್ ಕೆ ಹೊನ್ನವಿಲೆ, ಕಾಜೂರು ಸತೀಶ್

ಹೂ-ದುಂಬಿ  ಹೂಬನದಿ ಆಗತಾನೇ ಅರಳಿದ ಹೂ ಕಾದಿಹುದು ದುಂಬಿ ತನ್ನ ಚುಂಬಿಸಲೆಂದು.   ಮುಂಜಾವಿನ ತಂಗಾಳಿಗೆ ಮೈಯೊಡ್ಡಿ ಕಾದಿಹುದು ಎಂದು ಸೂರ್ಯ, ಉದಯಿಸಿಹೆನೆಂದು.   ಪಕಳೆಗಳ ಅರಳಿಸಿ ಕಾದಿಹ ಸುಮವ ಕಂಡು ತಾ ಮೋಹಗೊಂಡು ಹಾರಿತು ದುಂಬಿ ಆಗತಾನೆ ಅರಳಿನಿಂತ ಆ ಸುಮದೆಡೆಗೆ.   ಝೇಂಕರಿಸಿ ತನ್ನೆಡೆಗೆ ಹಾರಿ ಬಂದ ದುಂಬಿಗೆ ತನ್ನ ಮೈ ಅಲುಗಿಸಿ ಸ್ವಲ್ಪ ಸತಾಯಿಸಿ ಸಹಕರಿಸಿತು ದುಂಬಿಗೆ ತನ್ನ ಮಕರಂದ ಹೀರಲು.   ಮಕರಂದ ಹೀರಿ ತನ್ನಾಸೆ ತೀರಿತೆಂದು ಹಾರಿತು ದುಂಬಿ ಇನ್ನೊಂದರ … Read more

ಸ್ನೇಹ ಭಾಂದವ್ಯ (ಭಾಗ 3): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…)  ಇತ್ತ ಗೆಳತಿಯರಿಬ್ಬರು ಮುಂದೇನು ಎಂದು ಚಿಂತಿಸತೊಡಗಿದರು. ಆಗ ರೇಖಾನೆ ಮೊದಲಿಗಳಾಗಿ ಸುಧಾ ನಾಳೆ ಬೆಳಿಗ್ಗೆ ನಾವಿಬ್ಬರು ಮೊದಲು ಎಲ್ಲಾದರೂ ರೂಮು ಬಾಡಿಗೆಗೆ ಸಿಗುತ್ತದಾ ಅಂತ ನೋಡೋಣಾ ಎಂದಳು. ಗೆಳತಿಯ ಮಾತಿಗೆ ಸುಧಾ ಸಮ್ಮತಿಸಿದಳು. ಅನಂತರ ಪಕ್ಕದ ರೂಮಿನ ಹುಡುಗಿಯೊಬ್ಬಳು ಬಂದು ಊಟಕ್ಕೆ ಬರ್ರಿ ಎಂದು ಹೇಳಿ ಹೋದಳು. ಅದರಂತೆ ರೇಖಾ ಮತ್ತು ಸುಧಾ ಇಬ್ಬರು ಊಟದ ಹಾಲಿಗೆ ಬಂದಾಗ ಕನಿಷ್ಟ ನಲವತ್ತು ಹುಡುಗಿಯರು ಊಟಕ್ಕೆ ಕುಳಿತ್ತಿದ್ದರು. ಇವರು ಹೋಗಿ ಕುಳಿತರು. ಆಗ ಹುಡುಗಿಯರೆಲ್ಲ ಒಬ್ಬೊಬ್ಬರಂತೆ ಇವರ … Read more

ಕೆಂಗುಲಾಬಿ (ಭಾಗ 17): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.   … Read more

ಪುನರ್ ಮಿಲನ: ಸುಮನ್ ದೇಸಾಯಿ ಅಂಕಣ

ಮದವಿಮನಿ ಅಂದ್ರ ಅದರ ಕಳೆನ ಬ್ಯಾರೆ ಇರತದ. ಹೆಣ್ಣು ಮಕ್ಕಳ ಹರಟಿ, ಸಣ್ಣ ಮಕ್ಕಳ ನಗುವಿನ ಕಲರವ. ಹಸಿರು ತೋರಣ, ಮಂಗಳಕರ ಚಪ್ಪರ. ನಗು, ಹಾಸ್ಯ, ಗಡಿಬಿಡಿಯಿಂದ ತುಂಬಿರತದ. ಅದರೊಳಗಂತು ಹಳ್ಳಿಯೊಳಗಿನ ಮದುವಿ ಸಂಭ್ರಮ ಅಂತು ಒಂಥರಾ ಬ್ಯಾರೆನ ಇರತದ.ಅದೊಂದ ಹಳೆಕಾಲದ್ದ ದೊಡ್ಡಂಕಣದ್ದ ಮನಿ. ಯಾವ ಆಡಂಬರ ಇಲ್ಲದ ಬಿಳಿಸುಣ್ಣದಿಂದ ಸಾರಿಸಿ ಅಲ್ಲಲ್ಲೆ ಇಳಿಬಿಟ್ಟ ಕೆಂಪು ಕ್ಯಾಂವಿ ಮಣ್ಣಿನ ಜೋರು. ಬಾಗಲಿಗೆ ಕಟ್ಟಿದ ಮಾವಿನ ತೊಳಲಿನ ತೊರಣ, ಮನಿಮುಂದ ಓಣಿಯ ತುಂಬ ಹಾಕಿದ ಹಂದರ ಹಂದರದೊಳಗ ಬಳೆಗಾರರು … Read more

ಮೇರಾ ಲವ್ಲೀ ಕನ್ನಡ…!!: ಸಚಿನ್ ಎಂ. ಆರ್.

 ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)…!! ಪಕ್ಕದಲ್ಲಿ ಮೂವರು ಬುದ್ಧಿಜೀವಿಗಳು (ಬಿಳಿ ಗಡ್ಡ ಇದ್ದಿದ್ರಿಂದ ಹಂಗಂದುಕೊಂಡೆ) ಮಾತಾಡ್ತಾ ನಿಂತಿದ್ರು…!! ಅಷ್ಟರಲ್ಲಿ ಅಲ್ಲೇ ಇದ್ದ ಬಸ್ಸಿನಿಂದ ಇಳಿದುಬಂದ  ಸುಂದರ ಯುವತಿಯೊಬ್ಬಳು ನನ್ನತ್ರ ಅಡ್ರೆಸ್ಸ್ ತೆಲುಗಲ್ಲಿ ಕೇಳಿದ್ಳು..! ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು ಕೂಡಾ.. ನಾನೂ ಒಬ್ಬ ಕನ್ನಡಿಗನಾದ್ದರಿಂದ ಅವಳ ವಿಳಾಸಾನ ತೆಲುಗಲ್ಲೇ ಹೇಳಿದೆ..!! ಇದು ನಮ್ಮ ಕನ್ನಡ ಬುದ್ಧಿಜೀವಿಗಳಿಗೆ ಸ್ವಲ್ಪ ರೇಗಿಸಿತು ಅನ್ಸತ್ತೆ..! “ತಮ್ಮಾ ಬಾ” ಅಂದ್ರು. ಹತ್ತಿರ ಹೋದೆ. “ನೀನ್ ಯಾವೂರು? ನಿನ್ ಭಾಷೆ … Read more

ನ್ಯಾನೋ ಕತೆಗಳು: ಸುನೀತಾ ಮಂಜುನಾಥ್, ನವೀನ್ ಮಧುಗಿರಿ

ಒಂದಷ್ಟು ವಾಸ್ತವಗಳು ……….!!! ಬೆಳಗು ಬೈಗಿನ ಅನ್ನಕ್ಕೆ ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ ನನ್ನ ಮಗಳ ವಯಸ್ಸೇ ಏನೋ … ಒಂದಷ್ಟು ನೀರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ … ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ …. 'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ 'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ …. !!!!!!! 'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು ಅವನ ಕಣ್ಣಲ್ಲಿ ಖುಷಿ …. … Read more