Facebook

Archive for 2013

ಆಪರೇಷನ್ ಡೆಂಗ್ಯೂ (ಭಾಗ 2): ನಟರಾಜು ಎಸ್ ಎಂ

ಇಲ್ಲಿಯವರೆಗೆ ಸಿಲಿಗುರಿಯನ್ನು ಎರಡನೇ ಕೋಲ್ಕತ್ತಾ ಎನ್ನುತ್ತಾರೆ. ಸಿಲಿಗುರಿ ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲು ಇದ್ದಂತೆ. ಇಂತಹ ಸಿಲಿಗುರಿಯನ್ನು ತಲುಪುತ್ತಿದ್ದಂತೆ ನಾವು ಮಾಡಿದ ಮೊದಲ ಕೆಲಸವೆಂದರೆ ಸಿಲಿಗುರಿಯ ನಕ್ಷೆಯನ್ನು ಒಂದು A4 ಹಾಳೆಯಲ್ಲಿ ಪ್ರಿಂಟ್ ಮಾಡಿಸಿಕೊಂಡೆವು. ಸಿಲಿಗುರಿಯ ನಕ್ಷೆಯನ್ನು ಪ್ರಿಂಟ್ ಮಾಡಿಸಿಕೊಂಡ ಕಾರಣವೇನೆಂದರೆ ಸಿಲಿಗುರಿಗೆ ಸೇರಿದ ಒಟ್ಟು 47 ವಾರ್ಡ್ ಗಳಲ್ಲಿ ನಮ್ಮ ಜಲ್ಪಾಯ್ಗುರಿಗೆ ಸೇರಿದ 14 ವಾರ್ಡ್ ಗಳಲ್ಲಿ ಯಾವ ವಾರ್ಡ್ ಗಳ ಜನರು ಡೆಂಗ್ಯೂ ಜ್ವರದಿಂದ ಹೆಚ್ಚು ಬಳಲುತ್ತಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕಿತ್ತು. ನಮ್ಮ ಬಳಿಯಿದ್ದ ಡಾಟಾ […]

ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಕಗ್ಗೊಲೆ ವೈಚಾರಿಕತೆಯ ಮೇಲಿನ ಧಾಳಿ: ಜೈಕುಮಾರ್

          ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ ೨೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: ೨೦.೦೮.೨೦೧೩ ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ! ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: […]

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 1): ಶಿವು ಕೆ.

ಕೊಲ್ಕತ್ತ ವಿಮಾನ ನಿಲ್ದಾಣದ ೩ಎ ಗಾಜಿನ ಬಾಗಿಲಿಂದ ಹೊರಬರುತ್ತಿದ್ದಂತೆ ಸಣ್ಣಗೆ ಮಳೆ.  ನನಗಾಗಿ ಕಾಯುತ್ತಿದ್ದ "ಅಭಿಜಿತ್ ಡೆ" ಹೆಸರಿನ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಿನ, ಹೆಚ್ಚೇ ಗಾತ್ರದ ಮತ್ತು ಜಾಸ್ತಿ ಬೆಳ್ಳಗಿನ ವ್ಯಕ್ತಿಯೊಬ್ಬ, "ಹಾಯ್ ಶಿವುಜೀ, ಕೆಸಾ ಹೇ, ಪ್ಲೇನ್ ನೇ ಕೊಯಿ ಪ್ರಾಬ್ಲಂ ನಂ ತಾ:  ಸಬ್ ಕುಚ್ ಟೀಕ್ ಹೇನಾ," ಎಂದು ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡನಲ್ಲ, ಅಲ್ಲಿಗೆ ನನ್ನ ಮನಸ್ಸಿನ ಚಿಂತೆಗಳಲ್ಲಿ ಅರ್ಧದಷ್ಟು ದೂರವಾಗಿತ್ತು. ಮೊದಲ ಬಾರಿಗೆ ನನ್ನ ಮಟ್ಟಿಗೆ ತುಂಬಾ  ದೂರದ ಕೊಲ್ಕತ್ತಗೆ […]

ಮಳೆ ಎನ್ನುವುದು ಒಂಥರಾ ಆಕ್ಸಿಡೆಂಟ್!: ಹೃದಯಶಿವ ಅಂಕಣ

  ತುಂಟ ಕವಿಯ ಗಾಂಭೀರ್ಯತೆ   ನವ್ಯ ಕಾಲದಲ್ಲಿ ಹೊಸಕಾವ್ಯವೆಂದರೆ ಕೇವಲ ದುರಂತಮಯವಾದದ್ದು, ಕ್ಲಿಷ್ಟವಾದದ್ದು, ಸಿನಿಕತನದ್ದು ಎಂಬಂತಹ ತಿಳುವಳಿಕೆ ರೂಢಿಯಲ್ಲಿತ್ತು. ಉತ್ಸಾಹದಿಂದ ಜೀವಂತ ಕಾವ್ಯ ರಚಿಸಿದ ಬಿ. ಆರ್. ಲಕ್ಷ್ಮಣ್ ರಾವ್ ಕಳೆದ ಮೂರು ದಶಕಗಳಲ್ಲಿ ತಮ್ಮದೇ ಶೈಲಿಯ ಕಾವ್ಯ ರಚಿಸಿದವರು ಎಂದು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಮ್ಯಂ ಪ್ರಸ್ತಾಪಿಸಿರುತ್ತಾರೆ.   ಹೌದು, ಬಿ.ಆರ್.ಎಲ್. ಮೇರೆಗಳನ್ನು ದಾಟಿ ನಿಂತವರು. ಸಾಹಿತ್ಯ ಸರೋವರದಲ್ಲಿ ತಮ್ಮದೇ ವಿನೂತನ ಶೈಲಿಯ ತರಂಗಗಳನ್ನು ಸೃಷ್ಟಿಸಿದವರು. ಗಂಭೀರ ವಿಷಯಗಳನ್ನು ಸರಳವಾಗಿ ಕಾವ್ಯಕ್ಕೆ ಇಳಿಸಿ ಗಮನ […]

ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್: ವಾಸುಕಿ ರಾಘವನ್ ಅಂಕಣ

  ಆಗಿನ್ನೂ ಅಮೇರಿಕಾದಲ್ಲಿ ವರ್ಣಬೇಧ ಹೆಚ್ಚು ಇದ್ದ ಕಾಲ. ಬಿಳಿಯರು ಮತ್ತು ಕರಿಯರು ಬಸ್ಸುಗಳಲ್ಲಿ ಒಟ್ಟಿಗೆ ಕೂರುವಂತಿರಲಿಲ್ಲ. ಇಬ್ಬರ ನಡುವೆ ಮದುವೆಯಂತೂ ದೂರದ ಮಾತು, ಸುಮಾರು ರಾಜ್ಯಗಳಲ್ಲಿ ಅದು ಶಿಕ್ಷಾರ್ಹ ಅಪರಾಧ ಕೂಡ ಆಗಿತ್ತು. ಅದೇ ಸಮಯದಲ್ಲಿ ಬಿಡುಗಡೆಯಾದ ಸ್ಟಾನ್ಲಿ ಕ್ರೇಮರ್ ನಿರ್ದೇಶನದ “ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್” ಈ ವರ್ಣಬೇಧ ಮತ್ತು ಜನರಲ್ಲಿರುವ ತಾರತಮ್ಯದ ಬಗೆಗಿನ ಚಿತ್ರಣ ಹೊಂದಿದೆ. ಜೋಯೀ ಮುಕ್ತ ಮನಸ್ಸಿನ ಹದಿಹರೆಯದ ಹುಡುಗಿ. ಪತ್ರಿಕೋದ್ಯಮಿ ತಂದೆ ಮ್ಯಾಟ್ ಮತ್ತು ಅಮ್ಮ […]

ಹೀಗೊಂದು ಮಾತು: ಶ್ರೀವತ್ಸ ಕಂಚೀಮನೆ

ಕಳೆದ ಮಹಿಳಾ ದಿನಾಚರಣೆಗಾಗಿ ಒಂದು ಲೇಖನ ಬರೆದಿದ್ದೆ. ಬರೆದ ವಿಷಯ ಸತ್ಯವೇ. ತುಂಬಾ ಜನ ಮೆಚ್ಚಿಕೊಂಡರು ಕೂಡ. ಆದರೆ ನನಗೇ ಯಾಕೋ ಸಂತೃಪ್ತ ಅನ್ನಿಸಿಲ್ಲ. ಬರೆದ ಬರಹದಲ್ಲಿ ದೇಹ ಸದೃಢವಾಗೇ ಇದ್ದರೂ ಯಾಕೋ ಆತ್ಮ ಇಲ್ಲ ಅನ್ನಿಸ್ತಾ ಇತ್ತು. ಕಾರಣ ಇಷ್ಟೇ ನನ್ನ ಮನಸು ಪುರುಷ ಪ್ರಧಾನ ಮತ್ತು ಸ್ತ್ರೀ ಪ್ರಧಾನ ಎಂಬ ಎರಡೂ ವಾದಗಳನ್ನು ಒಪ್ಪಲಾರದು. ನಾನೆನ್ನುತ್ತೇನೆ ನಮ್ಮನೆಲ್ಲ ಸಷ್ಟಿಸಿದ ಪ್ರಕೃತಿ ಮಾತ್ರ ಪ್ರಧಾನ. ಅದರ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳದ ನಾವು, ಅದು ನೀಡಿದ ಮಿತಿಗಳನ್ನು ಮೀರಲು […]

ಮುಂದಿನ ಪೀಳಿಗೆಗೊಂದು ಪುಟ್ಟ ಪತ್ರ: ಅಖಿಲೇಶ್ ಚಿಪ್ಪಳಿ ಅಂಕಣ

ಭವಿಷ್ಯದ ಪುಟಾಣಿಗಳೆ, ಈ ಭೂಮಿ ಹುಟ್ಟಿ ೪೬೦ ಕೋಟಿ ಅಗಾಧ ವರ್ಷಗಳಾದವು. ನವಮಾಸಗಳು ಹೊತ್ತು-ಹೆತ್ತು ಇವತ್ತು ಜಗತ್ತಿಗೆ ಬಂದು ಕಣ್ಬಿಡುವ ಹೆಚ್ಚಿನ ನೀವುಗಳು ಖಾಸಗಿ-ಸರ್ಕಾರಿ ಆಸ್ಪತ್ರೆಗಳ ಫಿನೈಲ್-ಡೆಟಾಲ್‌ಗಳ ವಾಸನೆಗಳನ್ನೇ ಸೇವಿಸಿ ವಿಸ್ಮಿತರಾಗಿ ಹೊರಜಗತ್ತನ್ನು ಗಮನಿಸುತ್ತೀರಿ. ಕಲುಷಿತ ವಾತಾವರಣ ನಿಮಗೆ ಥಂಡಿ-ಜ್ವರ-ಕಫಗಳನ್ನು ಧಾರಾಳವಾಗಿ ಧಾರೆಯೆರೆಯುತ್ತದೆ. ಗಾಬರಿಗೊಂಡ ತಂದೆ-ತಾಯಿ, ಅಜ್ಜ-ಅಜ್ಜಿಯರನ್ನು ಸಮಾಧಾನ ಮಾಡಲು ಜೊತೆಗೆ ನಿಮಗಾದ ಜಡ್ಡನ್ನು ಹೋಗಲಾಡಿಸಲು ಹಲವಾರು ಮದ್ದುಗಳಿವೆ, ಚುಚ್ಚುಮದ್ದುಗಳಿವೆ, ಸಿರಫ್‌ಗಳಿವೆ ಇತ್ಯಾದಿ ಸಾವಿರಗಳಿವೆ. ಇವುಗಳನ್ನು ಪೂರೈಸಿ ತಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳಲು ಅಂತಾರಾಷ್ಟ್ರೀಯ ಕಂಪನಿಗಳು ತುದಿಗಾಲಲ್ಲಿ […]

ಸಾವಿತ್ರಿ: ಡಾ. ಗವಿಸ್ವಾಮಿ

            ಅದು ಎರಡಂಕಣದ ಗುಡಿಸಲು. ಅಲ್ಲಲಿ ಸುಣ್ಣದ ಚಕ್ಕೆಎಡೆದು  ಕೆಂಪಗೆ ಗಾಯಗೊಂಡಂತೆ ಕಾಣುತ್ತಿದೆ. ಛಾವಣಿಯ ಗರಿಗಳು ಮಳೆ-ಬಿಸಿಲಿನ   ಹೊಡೆತಕ್ಕೆ ಜೀರ್ಣವಾಗಿ ಬೂದಿ ಬಣ್ಣಕ್ಕೆ ತಿರುಗಿದೆ. ಒಂದು ಕೆಂಚಬೆಕ್ಕು ಛಂಗನೆ ಛಾವಣಿ  ಮೇಲೆ ನೆಗೆಯಿತು. ಅದು ನೆಗೆದು ಕೂತ ರಭಸಕ್ಕೆ ಛಾವಣಿ ಮೇಲೆ ಜಲಿಜಿಲಿಜಲಿಜಲಿ ಅಂತಾ ಸದ್ದಾಯಿತು. ''ತತ್ತದ ಇಲ್ಲಿ ಇಟ್ಟನ್ದೊಣ್ಯಾ, ಮನಗಸ್ಬುಡ್ತಿನಿ ಒಂದೇ ಏಟ್ಗಾ.. ಇಲ್ಲ್ಯಾರ್ ಆಟ್ ಇದ್ದದು ಅಂತ್ಯಾಕಣಿ ಗಳ್ಗಸೊತು ಬಂದದು'' ಎಂದು ಬೈಯುತ್ತಾ ಕಾಳಮ್ಮ ಗುಡಿಸಿಲಿನಿಂದ […]

ಪ್ರೀತೀಶನ ಚುಟುಕಗಳು

೧. ಸಾಧ್ಯ ಮರಳುಗಾಡಿನಲೂ  ಹೂದೋಟ ಬೆಳೆಯಬಲ್ಲೆ ನಾನು, ಭಾವಗಳು ಹುಟ್ಟಬೇಕಷ್ಟೇ.   ೨. ಪರಿಹಾರ ಹೃದಯಕೊಂದು  ಒಡೆದ ಗಾಜು ನೆಟ್ಟಿದೆ, ಕಿತ್ತೊಗೆಯಲೊಂದು ಹೂವು ಬೇಕಿದೆ.   ೩. ಅರಿವು ಕೊಳಕು ಮೆತ್ತಿದ್ದು ಬಟ್ಟೆಗೆ ತಿಳಿಯಬೇಕಿಲ್ಲ ಕೊಳೆಗೆ ಗೊತ್ತಾಗಬೇಕು ಇಲ್ಲ ಸಾಬೂನು ಅರಿಯಬೇಕು.   ೪. ತಪ್ಪು ಮಡದಿ ಸಿಟ್ಟಾದರೆ ತಪ್ಪು ಯಾರದ್ದೇ ಆಗಿರಬಹುದು ಮಗ ಕೋಪಿಸಿಕೊಂಡರೆ ಮಾತ್ರ ತಪ್ಪು ನನ್ನದೇ.   ೫. ಗುರಿ ನದಿ ಹುಟ್ಟಿದಾರಭ್ಯ ಸಮುದ್ರ ಹುಡುಕಿ ಹೊರಡುವುದಿಲ್ಲ; ಹರಿಯುತ್ತ ಹೋಗುವುದು ಅನಿವಾರ್ಯ ಕರ್ಮವದಕೆ. […]

ಎದೆಯೊಳಗೆ ನದಿಯೊಂದು ಹರಿಯುತಿದೆ ಪ್ರೀತಿಯ ಹೊತ್ತು: ನಾಗರಾಜ್ ಹರಪನಹಳ್ಳಿ

          * ಆವತ್ತು ಬೆಳದಿಂಗಳ ರಾತ್ರಿ. ಅಕ್ಟೋಬರ್ ತಿಂಗಳ ಒಂದು ದಿನ. ಸರಿಯಾಗಿ ನೆನಪಿಲ್ಲ. ದಂಡೆಯಲ್ಲಿದ್ದ ಜನ ಮನೆಗೆ ಮರಳಿಯಾಗಿತ್ತು. ಕತ್ತಲನ್ನು  ತನ್ನೊಳಗೆ ಹೀರಿದ ಬೆಳದಿಂಗಳು ಮೆರೆಯುತ್ತಿತ್ತು. ಒಂದೊಂದೆ ನಕ್ಷತ್ರಗಳು ಮಿನುಗುತ್ತಿದ್ದವು. ಸಣ್ಣಗೆ ಮೊರೆಯುತ್ತಿತ್ತು ಕಡಲು. ಬೆಳದಿಂಗಳಿಗೆ ನಾದ ಹರಡಿದಂತಿತ್ತು. ರವೀಂದ್ರನಾಥ ಟ್ಯಾಗೋರ ಹೆಜ್ಜೆಯಿಟ್ಟು ಓಡಾಡಿದ ದಂಡೆಯಲ್ಲಿ  ನಾನು ಎಷ್ಟೋ ಗಂಟೆಗಳ ಕಾಲ ಕುಳಿತಿದ್ದವನು ಜನ ಮರೆಯಾಗುತ್ತಿದ್ದಂತೆ, ದಂಡೆಯ ಮೇಲೆ ಒರಗಿಕೊಂಡೆ. ಆಕಾಶಕ್ಕೆ  ಮುಖಮಾಡಿ. ಆಕಾಶವನ್ನ ದಿಟ್ಟಿಸಿ ನೋಡುವುದೇ ಸೊಗಸು. ಅದು […]