Facebook

Archive for 2013

‘ಯಂತಿಲ್ಲೆ’:ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕದಿಂದೊಂದು ಕತೆ

ಹಾಸ್ಯಪ್ರಿಯ ಓದುಗರಿಗೆ ಹಿರಿಯ ಸಾಹಿತಿ ಸೂರಿ ಹಾರ್ದಳ್ಳಿ  (ಸೂರ್ಯನಾರಾಯಣ ಕೆದಿಲಾಯ ಎಚ್) ಅವರು ಚಿರಪರಿಚಿತ. ಹಾಸ್ಯವಷ್ಟೇ ಅಲ್ಲ ಕತೆ, ಕಾದಂಬರಿ, ಟಿ.ವಿ.ಧಾರಾವಾಹಿಗಳ ಸಂಭಾಷಣೆ ಹೀಗೆ ಸದಾ ಕ್ರಿಯಾಶೀಲರಾದ ಇವರು ಈವರೆಗೆ ತ್ರಸ್ತ, ವಧುಪರೀಕ್ಷೆ (ಕಥಾಸಂಕಲನ); ಸಿನಿಮಾ ಸಿನಿಮಾ, ಹಿತೈಷಿ, ಗಗನ ಸೌಧ (ಕಾದಂಬರಿ); ಬಾಸನ್ನಿಬಾಯ್ಸೋದ್ಹೇಗೆ?(ಹಾಸ್ಯನಾಟಕ); ಉಪಾಯೋಪಾಯಗಳು, ಉಗಾದಿಸೀರೆ, ಅನಾಮಧೇಯ ಪತ್ರಗಳು, ಹೆಂಡತಿಯನ್ನು ಪ್ರೀತಿಸಿದರೆ, ಸರ್ಕಾರಿ ಹಾಸ್ಯೋತ್ಸವ(ಹಾಸ್ಯ ಸಂಕಲನಗಳು) ಮೊದಲಾದ ಸಮೃದ್ದ ಸಾಹಿತ್ಯವನ್ನ ಓದುಗರಿಗೆ ನೀಡಿದ್ದಾರೆ.  ಪ್ರಕಾಶ ಸಾಹಿತ್ಯ ಪ್ರಕಟಿಸಿರುವ ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕ 'ಸೊಂಡಿಲೇಶ್ವರ'ದಿಂದ ಆಯ್ದ […]

ಸುದೀಪ್ ನಾಯಗನ್, ಇಳಯರಾಜಾ ಟ್ಯೂನುಗಳು ಮತ್ತು ನನ್ನ ಲೈನುಗಳು: ಹೃದಯಶಿವ ಅಂಕಣ

ನನ್ನನ್ನು ಸದಾ ಕಾಡುವ ಅನೇಕ ತಮಿಳು ಚಿತ್ರಗಳಲ್ಲಿ ನಾಯಗನ್ ಚಿತ್ರಕ್ಕೆ ಮೊದಲ ಸ್ಥಾನ ಕೊಡಬಯಸುತ್ತೇನೆ. ೧೯೮೭ರಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು. ಕಮಲಾ ಹಾಸನ್ ಅತ್ಯದ್ಭುತ ಅಭಿನಯವಿತ್ತು. ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆಸ್ಕರ್ಸ್ ವರೆಗೂ ಹೋಗಿತ್ತು. ಸುದೀಪ್ ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಿ, ನಟಿಸುವ ಆಸಕ್ತಿ ತೋರಿದ್ದ ಕಾಲದಲ್ಲಿ ನಾನು ಒಂದೇ ಒಂದು ಚಿತ್ರಗೀತೆ ಬರೆಯುವ ಹೋರಾಟದಲ್ಲಿದ್ದೆ. ಈ ಕಾರಣದಿಂದ ಸುದೀಪ್ ತಂದೆ ಸರೋವರ್ ಸಂಜೀವರನ್ನು ಒಂದೆರಡು ಸಲ ಭೇಟಿಯಾಗಿದ್ದೆ. […]

ಗೆಜ್ಜೆಪೂಜೆ: ವಾಸುಕಿ ರಾಘವನ್ ಅಂಕಣ

  ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿರುವ ಬಸುರಿ ಪಿಟೀಲಿನಲ್ಲಿ ವಿಷಾದಗೀತೆ ನುಡಿಸುತ್ತಿರುತ್ತಾಳೆ. ಕೆಳಮಹಡಿಯಲ್ಲಿ ಅವಳ  ಅಮ್ಮ ತಲೆಯ ಮೇಲೆ ಕೈ ಹೊತ್ತುಕೊಂಡು “ಅಯ್ಯೋ ಗಂಡು ಮಗು ಹುಟ್ಟಿಬಿಟ್ಟರೆ ಹೆಂಗಪ್ಪಾ?” ಅಂತ ಚಿಂತಾಕ್ರಾಂತಳಾಗಿ ಕುಳಿತಿರುತ್ತಾಳೆ. ಆಗಿನ ಕಾಲದ ಚಿತ್ರಗಳಲ್ಲಿ ಹೆಣ್ಣುಮಗು ಹುಟ್ಟಿದಾಕ್ಷಣ ಕುಟುಂಬದ ಕೆಲವರಾದರೂ ನಿರಾಶರಾಗುವ, ತಾಯಿ ಸಂತಸಗೊಂಡಿದ್ದರೂ ಸಂಭ್ರಮ ಪಡಲಾಗದೆ ಒದ್ದಾಡುವ ಸನ್ನಿವೇಶಗಳು ಅಪರೂಪವೇನಲ್ಲ. ಆದರೆ ಆಶ್ಚರ್ಯ ಅನ್ನುವಂತೆ ಇಲ್ಲಿನ ಸನ್ನಿವೇಶ ಅದಕ್ಕೆ ತದ್ವಿರುದ್ಧ. ನಂತರ ಹೆಣ್ಣುಮಗು ಚಂದ್ರಾ ಹುಟ್ಟಿದಾಗ ಅದರ ಅಜ್ಜಿ ಸಂಭ್ರಮಿಸುತ್ತಾಳೆ, ತಾಯಿ ಬೇಸರದ […]

ಚಿಕ್ಕ ಪುಟ್ಟ ಪದ್ಯಗಳು: ಅಶೋಕ ಶೆಟ್ಟರ್

  ೧. ಚರಿತ್ರೆಯ ತತ್ವವ ತಿಳಿಯ ಹೊರಟು ಜಗದ ಜಟಿಲ ದ್ವಂದ್ವಗಳ ಗೋಜಲಿನಲ್ಲಿ ಸಿಗೆಬಿದ್ದ ತತ್ವಜ್ಞಾನಿ ಹಾಲುಗಲ್ಲದ ಮೊಮ್ಮಗಳ ನಗೆಯ ಮಡುವಿನಲ್ಲಿ ಸುಳಿತಿರುಗಿ ಮುಗುಳ್ನಕ್ಕ   ೨. ಇಂದಿನ ನಡುಹಗಲ ಕಾಡಿನ ಮೌನ ಮನುಕುಲದ ಶೈಶವದ ಸಕಲ ತೊಳಲಾಟ ಕಳವಳ ದಿಗ್ಭ್ರಮೆ ನಲಿವು ಹಸಿ ಹಸಿ ಕಾಮ ಎಲ್ಲ ಮೇಳೈಸಿದ ಆದಿಮ ಸಂಗೀತ   ೩. ಶಬ್ದಗಳ ಭಾಷೆ, ಹೆಜ್ಜೆ – ಗೆಜ್ಜೆಗಳ ಭಾಷೆ ಲಯಗಳ, ರೇಖೆ ಬಣ್ಣಗಳ ಭಾಷೆ ಎಲ್ಲದರ ಹಂಗ ಹರಕೊಂಡು ಎರಡು ಜೋಡಿ […]

ಚೌತಿ ಹಬ್ಬ: ವೆಂಕಟೇಶ್ ಪ್ರಸಾದ್

ಕಳೆದ ನಾಲ್ಕು ದಿನಗಳಿಂದ ಮಳೆಯಿಲ್ಲದೆ ಬೇಸಿಗೆಯಂತಾಗಿದ್ದ ನನ್ನೂರು ಮೊನ್ನೆ ಶನಿವಾರ ಸುರಿದ ಹಠಾತ್ ಮಳೆಗೆ ಮತ್ತೆ ಮಳೆಗಾಲವನ್ನು ನೆನಪಿಸಿತ್ತು. ಚಹಾ ಕುಡಿಯುತ್ತ ಟೆರೆಸ್ನಲ್ಲಿ ಅಡ್ದಾಡುತ್ತಿದ್ದ ನನಗೆ ಪಕ್ಕದ ಶಾಲೆಯಿಂದ ತೇಲಿಬಂದ  ಗಜಮುಖನೇ ಗಣಪತಿಯೇ ನಿನಗೆ ವಂದನೇ ನಂಬಿದವರ ಬಾಳಿನ ಕಲ್ಪತರು ನೀನೇ ……. ಹಿನ್ನೆಲೆ ಸಂಗೀತ  ರಹಿತ ಎಸ್. ಜಾನಕಿ ಹಾಡು ಕ್ಷಣಕಾಲ ಆಶ್ಚರ್ಯವನ್ನುಂಟುಮಾಡಿತ್ತು. ಇದರ ಬೆನ್ನಿಗೆ ಬಂದ ಶರಣು ಶರಣಯ್ಯ …..  ಪಿ. ಬಿ . ಶ್ರೀನಿವಾಸ್ ಹಾಡು ಆಶ್ಚರ್ಯವನ್ನು ಇಮ್ಮಡಿಗೊಳಿಸಿತ್ತು!! ಇದೇನಪ್ಪಾ ನೋಡಿಬಿಡೋಣ ಎಂದು […]

ಅಧ್ಯಾಪಕನಾಗಿ ನನ್ನ ಅನುಭವ…: ಪ್ರಶಾ೦ತ ಕಡ್ಯ

ನನ್ನ ಮನಸ್ಸಿನಲ್ಲಿ ಬಾಲ್ಯದಲ್ಲೇ ನಾನೊಬ್ಬ ಶಿಕ್ಷಕನಾಗುವವನು ಎ೦ದು ಠಸೆ ಒತ್ತಿ ಆಗಿತ್ತು. ಚಿಕ್ಕ೦ದಿನಲ್ಲಿ ನನಗೆ ಗೋವಿ೦ದ ಮಾಸ್ಟರು ಆದರ್ಷರಾಗಿದ್ದರು. ಅವರು ಪಾಠಮಾಡುವ ರೀತಿ, ಬಯ್ಯುವ ರೀತಿ, ಮಕ್ಕಳು ಅವರನ್ನು ಗೌರವಿಸುವ ರೀತಿ ಎಲ್ಲವೂ ನನಿಗೆ ತು೦ಬಾ ಇಷ್ಟವಾಗಿದ್ದವು. ಆಗಲೇ ನಿರ್ಧಾರ ಮಾಡಿ ನಾನು ಅಧ್ಯಾಪಕ ವೃತ್ತಿಯನ್ನು ಆಯ್ಕೆಮಾಡಿದ್ದೆನು. ಬಾಲ್ಯದಿ೦ದಲೇ ಅದಕ್ಕೆ ಅನುಕೂಲವಾಗುವ೦ತೆಯೇ ನನ್ನ ತಯಾರಿಗಳಿದ್ದವು. ಅದಕ್ಕೆ ಸರಿಯಾಗುವ೦ತೆ ಒಳ್ಳೇ ಅ೦ಕಗಳನ್ನು ಪಡೆದು, ಅಧ್ಯಾಪಕನಾಗಲು ಬೇಕಾಗುವ ದಿಶೆಯಲ್ಲೇ ವ್ಯಾಸ೦ಗವನ್ನು ನಡೆಸಿದೆನು.   ವ್ಯಾಸ೦ಗ ಮಾಡಬೇಕಿದ್ದರೆ ಮನದಲ್ಲಿ ತು೦ಬಾ ಅಳುಕಿತ್ತು. […]

ಕೋಪಾಗ್ನಿಕುಂಡ: ಪ್ರಶಸ್ತಿ ಬರೆವ ಅಂಕಣ

  ಓದುಗ ಮಿತ್ರರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನೀವು ಈ ಲೇಖನ ಓದೋ ಹೊತ್ತಿಗೆ ನಿಮ್ಮ ಮನೆಗೆ ಗಣಪತಿ ಬಂದಿರಬಹುದು. ಮನೆಯಲ್ಲಿ ಗಣಪತಿ ತರದಿದ್ದರೂ ನೆಂಟರ ಮನೆಯ, ಬೀದಿಯಲ್ಲಿಟ್ಟ ಗಣಪತಿ ಪೆಂಡಾಲಿನ, ಮೈಕಿನ , ಟೀವಿಗಳ ಕಲರ್ ಕಲರ್ ವಾರ್ತೆ, ಶುಭಾಶಯ, ಸ್ನೇಹಿತರ ಶುಭ ಹಾರೈಕೆಗಳಿಂದ, ಮಕ್ಕಳಿಗೆ ಸಿಕ್ಕಿರೋ ಹಬ್ಬದ ರಜೆಯಿಂದ.. ಹೀಗೆ ತರಹೇವಾರಿ ತರದಿಂದ ಹಬ್ಬದ ಕಳೆ ಮೂಡಿರಬಹುದು.ಹಬ್ಬಕ್ಕೆ ಬಸ್ ಬುಕ್ ಮಾಡಲಾಗದೇ, ಸಿಕ್ಕಾಪಟ್ಟೆ ರಶ್ಷಿನ ಬಸ್ಸು, ಟ್ರೈನುಗಳಲ್ಲಿ ಎದ್ದೂ ಬಿದ್ದು ಬೇರೆ ಊರಿನ […]

ಮೌನರಾಗದ ನೆನಪ ಜೋಗುಳದಲಿ: ದಿವ್ಯ ಟಿ.

ಯಾಕೋ ಬೇಸರವಾಗುತ್ತಿದೆ ಎಂದು ರಾತ್ರಿ ಬೇಗ ಮಲಗಿದವಳಿಗೆ ನಿದ್ರೆಯೂ ಬರುತ್ತಿರಲಿಲ್ಲ. ಒಂದೆರೆಡು ಹಾಡು ಕೇಳುತ್ತಾ ಹಾಗೆಯೇ ಮಲಗಿಬಿಟ್ಟಿದ್ದೆ. ಒಂದು ಗಂಟೆಯ ನಂತರ ಸರಿಯಾಗಿ 12.10ಕ್ಕೆ ಎಚ್ಚರಿಕೆಯಾಯಿತು. ನಿಶ್ಚಿಂತೆಯಿಂದ ಮಲಗಿದ ಕೊಠಡಿಯಲ್ಲಿ ಗಡಿಯಾರದ ಟಿಕ್ ಟಿಕ್ ಸದ್ದು, ಫ್ಯಾನ್ ಗಾಳಿಯ ಸದ್ದು ಬಿಟ್ಟರೆ ಬೇರೆನೂ ಇಲ್ಲ. ವಾಹನಗಳ ಸದ್ದಿನಿಂದ ಗಿಜಿ ಗಿಜಿ ಎನ್ನುತ್ತಿದ್ದ ರಸ್ತೆಯೂ ಮೌನವಾಗಿದೆ. ಅಲ್ಲೆಲ್ಲೋ ಇರುವ ರೈಲ್ವೆ ಹಳಿಯ ಮೇಲೆ ಸಂಚರಿಸುತ್ತಿರುವ ರೈಲಿನ ಸದ್ದು ಗಾಳಿಯಲ್ಲಿ ತೇಲಿ ಬರುತ್ತಿದೆ. ಇತ್ತೀಚಿಗೆ ಎಚ್ಚರವಾಗುವುದು ನಿದ್ರೆಯಿಲ್ಲದೆ ಹೊರಳಾಡುವುದು ಸಾಮಾನ್ಯವಾಗಿದ್ದರೂ […]

ಸುರಿಯುವ ಫುಕೊಶಿಮ-ಎರವಾಗಲಿರುವ ಕೊಡಂಕುಳಂ: ಅಖಿಲೇಶ್ ಚಿಪ್ಪಳಿ ಅಂಕಣ

ಫುಕೊಶಿಮ ಅಣು ದುರಂತದ ಬೆನ್ನಲ್ಲೆ ಬಹಳಷ್ಟು ಅವಘಡಗಳು ಅಲ್ಲಿ ಸಂಭವಿಸುತ್ತಿವೆ. ಇದೀಗ ಹೊಸದಾಗಿ ಸೇರ್ಪಡೆಯೆಂದರೆ, ಅಣು ರಿಯಾಕ್ಟರ್‍ಗಳ ಬಿಸಿಯನ್ನು ತಣ್ಣಗಾಗಿಸುವ ನೀರಿನ ಭದ್ರವಾದ ಟ್ಯಾಂಕ್‍ಗಳ ಸೋರಿಕೆ. ಬಳಕೆಯಾದ ವಿಕಿರಣಯುಕ್ತ ನೀರಿನ ಟ್ಯಾಂಕ್ ಸೋರಿಕೆಗೊಂಡು ಪೆಸಿಫಿಕ್ ಸಮುದ್ರಕ್ಕೆ ಸೇರಿದೆ. 2011ರ ಬೀಕರ ಸುನಾಮಿ ಮತ್ತು ಭೂಕಂಪ ಜಪಾನಿನ ಪುಕೊಶಿಮಾದ ಅಣು ಸ್ಥಾವರಗಳನ್ನು ಹಾಳುಗೆಡವಿ ಅಂತಾರಾಷ್ಟ್ರೀಯ ಬಿಕ್ಕಟ್ಟನ್ನುಂಟುಮಾಡಿತ್ತು. ಈಗಾಗಲೇ 8 ಟ್ಯಾಂಕಿನಿಂದ ಸುಮಾರು 300 ಟನ್‍ಗಳಷ್ಟು ವಿಕಿರಣಯುಕ್ತ ನೀರು ಸೋರಿಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೋರಿಕೆಯಾದ ಜಾಗದಿಂದ 50 […]

ಕೆಂಗುಲಾಬಿ (ಭಾಗ 10): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ   ಅವತ್ತು ಹಾಗೆ ಆತ್ಮೀಯಳಾದ ಅವಳು ಸ್ವಲ್ಪ ದಿನಗಳವರೆಗೆ ಆಶ್ರಯದಾತಳು ಆದಳು. ತನ್ನ ಕಥೆಯನ್ನೆಲ್ಲ ಹೇಳಿಯಾದ ಮೇಲೆ ನನ್ನ ಕಥೆಯನ್ನು ಕೇಳಿದ ಅವಳು, ನಾನು ಕೂಡ ದಂಧÉಗೆ ಹಳಬಳೇ ಎಂಬುದನ್ನು ಅರ್ಥ ಮಾಡಿಕೊಂಡಾದ ಮೇಲೆ ‘ನಮ್ಮ ರತ್ನಮ್ಮನ ದಂಧೆಮನೆಗೆ ನೀನು ಸೈತ ಬರುವುದಾದರೆ ಬಾ' ಎಂದು ಕರೆದಳು. ಮರುಕ್ಷಣ ‘ಬೇಡ ಬೇಡ ನನ್ನ ಮಗನಿಗಾದ ದುರ್ಗತಿಯೇ ನಿನ್ನ ಮಗಳಿಗೂ ಆಗಬಹುದು, ಇಲ್ಲವೇ ನಿನ್ನ ಮಗಳನ್ನು ಸ್ವಲ್ಪ ದೊಡ್ಡವಳಾದ ತಕ್ಷಣವೆ ದಂಧೆಗೆ ಇಳಿಸಿಬಹುದು. ಈ ಕೂಪದಲ್ಲಿ […]