Facebook

Archive for 2013

ನೆನೆ ನೆನೆ ಮನವೆ: ಟಿ.ಕೆ.ನಾಗೇಶ್

ತೊದಲು ನುಡಿಯಿಂದ ಮೊದಲುಗೊಂಡು ನನ್ನ ಜೀವನ ರೂಪಿಸಿಕೊಳ್ಳುವವರೆಗೂ ನನ್ನನ್ನು ತಿದ್ದಿ ತೀಡಿ ನನಗೆ ವಿದ್ಯಾದಾನ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೂ ಹಾಗು ತಂದೆ ತಾಯಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನು ಒಬ್ಬ ಶಿಕ್ಷಕನಾಗಿ ಈ ದಿನ ನನ್ನ ನೆಚ್ಚಿನ ಶಿಕ್ಷಕರೊಬ್ಬರನ್ನು ನೆನೆ ನೆನೆದು ನನ್ನ ಪೂಜ್ಯ ಪ್ರಣಾಮಗಳನ್ನು ತಿಳಿಸಲು ಇಚ್ಚಿಸುತ್ತೇನೆ.  ಸಾವಿರದ ಒಂಬೈನೂರ ಎಂಬತ್ತೇಳರಲ್ಲಿ ನಾನು ಶಾಲೆಗೆ ಸೇರಿದ್ದು. ಶಿಕ್ಷಕರು ನಿವೃತ್ತಿಯ ಹಂತ ತಲುಪಿದ್ದರೂ ಬೆಳಿಗ್ಗೆ ನನ್ನ ಸ್ಲೇಟಿನಲ್ಲಿ ಮೂರು ಅಕ್ಷರಗಳನ್ನು ಬರೆದುಕೊಟ್ಟರೆ ಸಂಜೆಯವರೆಗೂ ಅದೇ ಅಕ್ಷರಗಳ […]

ಬಂಗಾರದಕ್ಕಿ ಮತ್ತು ಇತರೆಗಳು:ಅಖಿಲೇಶ್ ಚಿಪ್ಪಳಿ ಅಂಕಣ

 ವಿಟಮಿನ್ ಎ ಕೊರತೆಯಿಂದ ಪ್ರಪಂಚದಲ್ಲಿ ಪ್ರತಿವರ್ಷ ೨೦ ಲಕ್ಷ ಜನ ಸಾಯುತ್ತಾರೆ ಮತ್ತು ೫ ಲಕ್ಷ ಮಕ್ಕಳು ಕುರುಡರಾಗುತ್ತಿದ್ದಾರೆ ಎಂಬುದೊಂದು ಅಂಕಿ-ಅಂಶ. ವಿಟಮಿನ್ ಎ ಮನುಷ್ಯ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವ. ವಿಟಮಿನ್ ಎ ಕೊರತೆಯು ಮುಖ್ಯವಾಗಿ ಕಣ್ಣಿನ ಮೇಲಾಗುತ್ತದೆ ಎಂಬುದು ಆರೋಗ್ಯ ವಿಜ್ಞಾನ ಕಂಡುಕೊಂಡಿರುವ ಸತ್ಯ. ಏರುತ್ತಿರುವ ಜನಸಂಖ್ಯೆ, ಬಡತನ ಇತ್ಯಾದಿ ಕಾರಣಗಳಿಂದಾಗಿ ಬಡವರ ಮಕ್ಕಳಿಗೆ ವಿಟಮಿನ್ ಎ ಕೊರತೆಯಾಗಿ ಕಾಡುತ್ತದೆ ಮತ್ತು ಇದರಿಂದಾಗಿ ಪ್ರಪಂಚದ ಮೇಲೆ ತೀವ್ರವಾದ ಪರಿಣಾಮವಾಗುತ್ತದೆ. ಹೆಚ್ಚಿನ ಬಡ ಮಕ್ಕಳು ದೃಷ್ಟಿಮಾಂದ್ಯರಾದರೆ […]

ರೂಪಾಯಿ, ಪೆಟ್ರೋಲು ಮತ್ತು ಸ್ವದೇಶಿ:ಪ್ರಶಸ್ತಿ ಬರೆವ ಅಂಕಣ

ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? ! ರಫ್ತೆಂದರೆ ಚೀನಾದಂತೆ […]

ಪ್ರಾಣೇಶ-ಕಲ್ಲೋಳ ಹಾಸ್ಯದ್ವಯರ ಸಂಗಮ:ಗುಂಡೇನಟ್ಟಿ ಮಧುಕರ ಕುಲಕರ್ಣಿ

ಸುಮಾರು ಹತ್ತು ವರ್ಷಗಳ ಹಿಂದೆ ಹಾಸ್ಯಲೇಖಕ ಅನಂತ ಕಲ್ಲೋಳರಿಂದ ಒಂದು ಕಾಗದ ನನಗೆ ಬಂದಿತ್ತು. ನಾನೊಂದು ಕಾರ್‍ಯಕ್ರಮದಲ್ಲಿ ಯುವಕನೊಬ್ಬನ ಹಾಸ್ಯ ಭಾಷಣವನ್ನು ಕೇಳಿದೆ, ತುಂಬಾ ಚನ್ನಾಗಿ ಮಾತನಾಡುತ್ತಾರೆ. ಜನ ಬಿದ್ದು ಬಿದ್ದು ನಕ್ಕರು. ನೀವು ’ಕ್ರಿಯಾಶೀಲ ಬಳಗ’ದಿಂದ ಆ ಯುವ ಹಾಸ್ಯಭಾಷಣಕಾರನ ಕಾರ್‍ಯಕ್ರಮವನ್ನಿಟ್ಟುಕೊಳ್ಳಬೇಕು. ಬೆಳಗಾವಿ ಜನರಿಗೆ ಅವರ ಭಾಷಣವನ್ನು ಕೇಳುವ ಅವಕಾಶ ಮಾಡಿಕೊಡಿ ಎಂದು ಕಾಗದ ಬರೆದಿದ್ದರು. ಅನಂತ ಕಲ್ಲೋಳರ ಪತ್ರದಲ್ಲಿ ಬರೆದಿರುವಂತೆ ಮುಂದೆ ನಗರದ ಸಾಹಿತ್ಯ ಭವನದಲ್ಲಿ ಆ ನಗೆಭಾಷಣಕಾರನ ಭಾಷಣವನ್ನಿಟ್ಟುಕೊಂಡಿದ್ದೆವು. ಅಂದು ಸಾಹಿತ್ಯ ಭವನ […]

ರತ್ನನ ಪರ್ಪಂಚದಲ್ಲಿ ಉಪ್ಪಿ ಚಪ್ಪರಿಸಿದ ಉಪ್ಗಂಜಿ:ಹೃದಯಶಿವ ಅಂಕಣ

ರಾಜರತ್ನಂ ಬೀದಿಯಲ್ಲಿ ಅಡ್ಡಾಡುತ್ತಾ… ಟಿ.ಪಿ. ಕೈಲಾಸಂ ಗ್ರಾಮ್ಯಭಾಷೆಯನ್ನು ನಾಟಕಗಳಲ್ಲಿ ತಂದರೆ ಜಿ.ಪಿ. ರಾಜರತ್ನಂ ರವರು ಕಾವ್ಯಕ್ಕೆ ತಂದವರು. ಬಡತನದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಕಷ್ಟಪಟ್ಟು ಸಾಂಸಾರಿಕ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳನ್ನು ರಚಿಸಿದ ರಾಜರತ್ನಂ 1904ರಲ್ಲಿ ಮೈಸೂರಿನಲ್ಲಿ ಜನಿಸಿ 1938 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಇವರು 1979 ರಲ್ಲಿ ತೀರಿಕೊಂಡರು. ಶಾಂತಿ ಮೊದಲಾದ ಗ್ರಂಥಸ್ಥ ಭಾಷೆಯ ರೀತಿ ರಚನೆಗಳಿಂದ ಹೊರಬಂದು ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಾಜರತ್ನಂ ರಚಿಸಿದ 'ಯೆಂಡ್ಕುಡ್ಕ […]

ಮುಗ್ಧತೆ, ಭೀಕರತೆಯ ನಡುವಿನ ಬೇಲಿ:ವಾಸುಕಿ ರಾಘವನ್ ಅಂಕಣ

ಆರು ಮಿಲಿಯನ್. ಅಂದರೆ ಅರವತ್ತು ಲಕ್ಷ! ಅರವತ್ತು ಲಕ್ಷದಲ್ಲಿ ಎಷ್ಟು ಸೊನ್ನೆ ಎಂದು ಥಟ್ ಅಂತ ಕೇಳಿದರೆ ಒಂದು ಕ್ಷಣ ನೀವೂ ತಡವರಿಸುತ್ತೀರ. ಈ ಸಂಖ್ಯೆಯ ಅಗಾಧತೆ ಗೊತ್ತಾಗಬೇಕಾದರೆ ಅರವತ್ತು ಲಕ್ಷ ಜನರನ್ನು ಊಹಿಸಿಕೊಳ್ಳಿ. ಅದು ಎರಡನೇ ವಿಶ್ವಮಹಾಯುದ್ಧದಲ್ಲಿ ಬರ್ಬರವಾಗಿ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ! ಒಂದು ಅಣುಬಾಂಬು ಹಾಕಿ ಅಷ್ಟೂ ಜನರನ್ನು ಕೊಂದಿದ್ದರೆ ಅದನ್ನು ಯುದ್ಧಕಾಲದ ವಿವೇಚನಾರಹಿತ ನಿರ್ಧಾರ ಅನ್ಕೊಬೋದಿತ್ತು. ಆದರೆ ವ್ಯವಸ್ಥಿತವಾಗಿ ಯಹೂದಿಗಳ ಮನೆ, ಆಸ್ತಿ ಎಲ್ಲವನ್ನೂ ವಶಪಡಿಸಿಕೊಂಡು, ಅವರನ್ನು ಸ್ಥಳಾಂತರಿಸಿ, ಸರಿಯಾಗಿ ಊಟ ಕೊಡದೇ […]

ಪೌಲ್ ಬುರ್ರೆಲ್ ಎಂಬ ಡಯಾನಾರ ತೆರೆಮರೆಯ ತಾರೆ: ಪ್ರಸಾದ್ ಕೆ.

ಕೆಲವೊಂದು ಮುಖಗಳೇ ಹಾಗಿರುತ್ತವೆ. ವರ್ಷಗಳು ಸಂದು ಹೋದರೂ, ಪೀಳಿಗೆಗಳು ಕಳೆದರೂ "ಐಕಾನ್" ಎನಿಸಿಕೊಳ್ಳುತ್ತವೆ. ವಿನ್ಸ್‍ಟನ್ ಚರ್ಚಿಲ್ ಸಿಗಾರ್ ಸೇದುತ್ತಾ ರಾಜಭಂಗಿಯಲ್ಲಿ ಕುಳಿತ ಕಪ್ಪು ಬಿಳುಪು ಛಾಯಾಚಿತ್ರ ಈಗಲೂ ಆ ದಂತಕಥೆಗೆ ಮೆರುಗನ್ನು ನೀಡುತ್ತದೆ. ಮರ್ಲಿನ್ ಮನ್ರೋರ ಮಾದಕ ನಗುಮುಖಕ್ಕೆ ಮರ್ಲಿನ್ ಮನ್ರೋರೇ ಸಾಟಿ. ಇಂತಹ ವಿಶಿಷ್ಟ ಮುಖಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ಮನಸ್ಸಿನಲ್ಲಿ ಹಾದುಹೋಗುವ ಚಿತ್ರ ಬ್ರಿಟನ್ನಿನ ರಾಜಕುಮಾರಿ ಡಯಾನಾರದ್ದು. ಪ್ರಪಂಚದಲ್ಲೇ ಅತೀ ಹೆಚ್ಚು ಬಾರಿ ಛಾಯಾಚಿತ್ರೀಕರಿಸಲ್ಪಟ್ಟ ಮಹಿಳೆಯೆಂದರೆ ರಾಜಕುಮಾರಿ ಡಯಾನಾ. ತನ್ನ ಜೀವಿತಾವಧಿಯಲ್ಲಿ ವಿಶಿಷ್ಟ ಕಾರ್ಯವೈಖರಿ, […]

ಪುಟ್ರಾಜು ಕತೆ: ಗವಿಸ್ವಾಮಿ

ಮಧ್ಯಾಹ್ನದ ಹೊತ್ತು. ಪಕ್ಕದ ಹಳ್ಳಿಯಲ್ಲೊಂದು ಕೇಸು ಮುಗಿಸಿಕೊಂಡು ವಾಪಸ್ ಬರುತ್ತಿದ್ದೆ. ಹೈವೇ ಬದಿಯಲ್ಲಿರುವ ಪುಟ್ಟರಾಜುವಿನ ಸೂರ್ಯಕಾಂತಿ ಹೊಲದಲ್ಲಿ ಐದಾರು ಮಂದಿ ಟೂರಿಸ್ಟುಗಳು  ಫೋಟೋ  ತೆಗೆಸಿಕೊಳ್ಳುತ್ತಿದ್ದರು. ಬಂಡೀಪುರ – ಊಟಿ ಕಡೆಗೆ ಹೋಗುವ  ಟೂರಿಸ್ಟುಗಳು ದಾರಿಯಲ್ಲಿ  ಎತ್ತಿನಗಾಡಿಯನ್ನು ಕಂಡರೂ ಫೋಟೊ ತೆಗೆಸಿಕೊಳ್ಳುತ್ತಿರುತ್ತಾರೆ. ಗಾಡಿ ಮೇಲೆ ಕೂತ ರೈತನಿಗೆ ಒಂಥರಾ ಬೆರಗು! ಪಾಪ ಅವರ ಕಡೆ ಇದೆಲ್ಲಾ ನೋಡೋದಿಕ್ಕೆ ಸಿಗೋದಿಲ್ವೇನೋ ಅಂದುಕೊಂಡು ಖುಷಿಯಿಂದ ಪೋಸು ನೀಡುತ್ತಾನೆ. ಇನ್ನು ಕೆಲ ಟೂರಿಸ್ಟರು ಆಲದ ಮರದ ಬೀಳಲುಗಳನ್ನು ಹಿಡಿದು ಜೋತಾಡುವ ತಮ್ಮ ಮಕ್ಕಳನ್ನು ನೋಡುತ್ತಾ ರಿಲ್ಯಾಕ್ಸ್ ಆಗುತ್ತಿರುತ್ತಾರೆ. […]

ಕಾಣದ ಕರಡಿ: ದೊಡ್ಡಮನಿ.ಎಂ.ಮಂಜುನಾಥ

ನೂರೆಂಟು ತೂತು ಬಿದ್ದು ಹರಿದ ಬನಿಯನ್ ಹಾಕಿಕೊಂಡು, ಕಿತ್ತು ಹೋದ ಹವಾಯಿ ಚಪ್ಪಲಿಗೆ ಪಿನ್ನು ಹಾಕುತ್ತ, ಮನೆಯ ಅಂಗಳದಲ್ಲಿ ಕೂತಿದ್ದ ಬಳೆಗಾರ ಶಿವಪ್ಪನಿಗೆ ಕುಂಟ್ಲಿಂಗ ಒಂದೇ ಉಸಿರಿನಲ್ಲಿ ಕುಂಟಿಕೊಂಡು ತನ್ನತ್ತ  ಓಡಿ ಬರುವುದನ್ನು  ಕಂಡೊಡನೆ ಮನಸಿಗೆ  ಗಲಿಬಿಲಿಯಾಯಿತು. ಎದೆ ಉಸಿರು ಬಿಡುತ್ತ ನಿಂತ ಕುಂಟ ಲಿಂಗನನ್ನು ಎದ್ದು ನಿಂತು ಏನಾಯ್ತೋ ಕುಂಟ್ಯ ಹಿಂಗ್ಯಾಕ್ ಓಡಿ ಬಂದಿ ? ಎನ್ನುವಷ್ಟರಲ್ಲಿ ಸರೋಜಳ ಸಾವಿನ ವಿಷಯವನ್ನು ಸರಾಗವಾಗಿ ಕುಂಟ ಲಿಂಗ ಒದರಿಬಿಟ್ಟ, ಇದನೆಲ್ಲ ಕೇಳುತ್ತಾ ಕುಸಿದು ಬೀಳುವಷ್ಟು ನಿಶ್ಯಕ್ತನಾದರು ತಡ ಮಾಡದೆ ಉಕ್ಕಿ ಬರುವ ದುಃಖವನ್ನು ನುಂಗಿ ಇವ ಹೇಳಿದ್ದೆಲ್ಲಾ ಸುಳ್ಳಾಗಲಿ ಎಂದು ಇದ್ದ ಬದ್ದ ದೇವರನೆಲ್ಲ ನೆನಪಿಸಿಕೊಳ್ಳುತ್ತಾ […]

ಕಣ್ಣಂಚಿನ ಪ್ರೀತಿ:ಸುಮನ್ ದೇಸಾಯಿ ಅಂಕಣದಲ್ಲಿ ಕತೆ

 ನನ್ನ ಮಕ್ಕಳ ಕ್ರಿಸ್ ಮಸ್ ಸೂಟಿ ಶೂರು ಆಗಿದ್ವು. ಹದಿನೈದ ದಿನಾ ರಜಾ ಇದ್ವು. ನನ್ನ ಮಕ್ಕಳಿಬ್ಬರು ಎಲ್ಲೆರೆ ಪ್ರವಾಸಕ್ಕ ಹೋಗೊಣ ಅಂತ ಗಂಟಬಿದ್ದಿದ್ರು. ನನ್ನ ಮಗಳು "ಅಮ್ಮಾ ಗೋವಾಕ್ಕ ಹೋಗೊಣು ಅಲ್ಲೆ ಕ್ರಿಸ್ ಮಸ್ ಹಬ್ಬಾನ ಭಾಳ ಮಸ್ತ ಸೆಲೆಬ್ರೇಟ್ ಮಾಡತಾರಂತ, ಮತ್ತ ಗೋವಾದಾಗ ಬೀಚನ್ಯಾಗ ಮಸ್ತ ಆಟಾನು ಆಡಬಹುದು" ಅಂದ್ಲು. ಪ್ರೀತಿ ಮಗಳು ಕೇಳಿದ್ದನ್ನ ಇಲ್ಲಾ ಅನ್ಲಿಕಾಗ್ಲಿಲ್ಲಾ ನಾ ಯೆಸ್ ಅಂದೆ. ಇನ್ನ ಹೆಂಡತಿ ಡಿಸೈಡ ಮಾಡಿದ್ದನ್ನ ಬ್ಯಾಡ ಅನ್ಲಿಕ್ಕೆ ಸಾಧ್ಯನ ಇಲ್ಲಂತ ನಮ್ಮನಿಯವರನು […]