Facebook

Archive for 2013

ವಿಶ್ವದೆಲ್ಲೆಡೆ ಹರಡುತ್ತಿರುವ ಅಮೇರಿಕಾ ಬೇಹುಗಾರಿಕೆಯ ಜಾಲಬಂಧ: ಜೈಕುಮಾರ್

ಅಮೇರಿಕಾದ ಕ್ರಮ ಪ್ರಜಾಪ್ರಭುತ್ವಕ್ಕೆ ಅಪಾಯ : ಎಡ್ವರ್ಡ್ ಸ್ನೋಡೆನ್, ಮಾಜಿ ಸಿಐಎ ಉದ್ಯೋಗಿ “ನಾನು ಮತ್ತೆ ಮನೆಗೆ ತೆರಳುತ್ತೇನೆಂಬ ಭರವಸೆಯಿಲ್ಲ. ತಮ್ಮ ಹೆಸರಿನಲ್ಲಿ ಸರ್ಕಾರಗಳು ನಡೆಸುತ್ತಿರುವ ಕೃತ್ಯಗಳನ್ನು ಜನತೆಗೆ ತಿಳಿಸುವುದಷ್ಟೇ ನÀನ್ನ ಉದ್ದೇಶ. ನನಗೆ ರೂ. 1 ಕೋಟಿ ಸಂಬಳ, ಒಳ್ಳೆಯ ಗೆಳತಿ, ಹವಾಯಿ ದ್ವೀಪದಲ್ಲೊಂದು ಐಷಾರಾಮಿ ಮನೆ ಮತ್ತು ಆತ್ಮೀಯ ಬಂಧುವರ್ಗದವರೆಲ್ಲರೂ ಇದ್ದು ಆರಾಮ ಜೀವನ ನಡೆಸಬಹುದು. ಆದರೆ, ಇವೆಲ್ಲವನ್ನೂ ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ಏಕೆಂದರೆ, ಅಮೇರಿಕಾ ವಿಶ್ವದಾದ್ಯಂತ ರಹಸ್ಯವಾಗಿ ನಿರ್ಮಿಸುತ್ತಿರುವ ಬೇಹುಗಾರಿಕಾ ವ್ಯವಸ್ಥೆಯು […]

ಪಂಜು ಚುಟುಕ ಸ್ಪರ್ಧೆ: ಸ್ಫೂರ್ತಿ ಗೌಡ ಅವರ ಚುಟುಕಗಳು

1.ನಿರ್ಲಿಪ್ತತೆ ನಿನ್ನ ನೆನಪಿಲ್ಲ ಗಾಳಿ ಗಂಧವಿಲ್ಲ ನಿದ್ದೆಯಲಿ ಕರಗಿಸುವ ಮೋಹವಿಲ್ಲ ನಿರ್ಲಿಪ್ತತೆ!! ಯಾರೋ ಕೂಗಿದರು ಕಲ್ಲು ಹೃದಯ =========================== 2. ವ್ರತ ಗೆದ್ದ ಸ್ವಯಂವರದಲ್ಲಿ ಹಂಚಿದ ಅಣ್ಣತಮ್ಮಂಗೆ ಸಮಕಾಣವ್ವ ಐದು ಬೆರಳು ನಿನ್ನವೇ ಕುಂತಿಯ ಉಸಿರು ಇದೇ ಗರತಿಯ ವ್ರತವೇ? =========================== 3. ಉಪವಾಸ ಏಕಾದಶಿ ಉಪವಾಸ ದ್ವಾದಶಿ ಉಪವಾಸ ಸಿಕ್ಕಿತೋ ಪುಣ್ಯಫಲ? ಹರಕು ಬಟ್ಟೆ ಮುರುಕು ತಟ್ಟೆ ಪ್ರತ್ಯಹಂ ಉಪವಾಸ ಯಾರಾದರು ಇವನಿಗೆ ಕೊಡಿಸಿ ಆ ನಿಮ್ಮ ಪುಣ್ಯ ಫಲ! =========================== 4. ಉಳುಮೆಯಿಲ್ಲ ಒಲವಿನ […]

ಕಾನು ಕುರಿಮರಿ: ಅಖಿಲೇಶ್ ಚಿಪ್ಪಳಿ

ಫೋಟೊದಲ್ಲಿರುವ ಊರ್ಧ್ವಮುಖಿ ಯಾರೆಂದು ನಿಮಗೆ ಸುಲಭವಾಗಿ ಅರ್ಥವಾಗಿರಬಹುದು. ಅದೇ ಲೇಖನ ಬರೆಯುವ ಮನುಷ್ಯ – ಅಖಿಲೇಶ್ ಚಿಪ್ಪಳಿ. ಆದರೆ, ಎತ್ತಿಕೊಂಡಿರುವ ಆ ಚಿಕ್ಕ, ಸುಂದರ ಪ್ರಾಣಿ ಯಾವುದೆಂದು ಗೊತ್ತಾ? ಇದರ ಹಿಂದಿನ ಕತೆಯೇ ಈ ವಾರದ ಸರಕು. ವನ್ಯಜೀವಿ ಹತ್ಯೆ ಅಂದರೆ ಪ್ರತಿಷ್ಟಿತ ಬೇಟೆ ಎಂಬ ಅಮಾನವೀಯ ಕಾರ್ಯ ಜನಪ್ರಿಯವಾದ ಕಾಲವೊಂದಿತ್ತು. ರಾಜ-ಮಹಾರಾಜರು ತಮ್ಮ ತಿಕ್ಕಲು ತೆವಲಿಗೋಸ್ಕರ ಕಾಡಿನ ಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದರು. ರಾಮಾಯಣದಂತಹ ಪುರಾಣ ಗ್ರಂಥಗಳಲ್ಲೂ ಬೇಟೆಯ ಬಗ್ಗೆ ಉಲ್ಲೇಖಗಳಿವೆ. ಸೀತೆ ಬಂಗಾರದ ಜಿಂಕೆ ಬೇಕು […]

ಚುಕ್ಕಿ-ಚಂದ್ರಮ: ನವೀನ್ ಮಧುಗಿರಿ

ಕನಸಿನಲ್ಲಿ ನಾನು ತುಂಬಾ  ಉದ್ದ ಬೆಳೆದೆನು! ಚುಕ್ಕಿ ಚಂದ್ರರೆಲ್ಲ ನನ್ನ  ಕೈಯ್ಯ ಹತ್ತಿರ!   ಚಂದಮಾಮ ಕೆನ್ನೆ ಸವರಿ  ಮುತ್ತು ಕೊಟ್ಟನು  ಚುಕ್ಕಿ ತಾರೆ ನನ್ನ ಜೊತೆ  ಒಳ್ಳೆ ಗೆಳೆಯರಾದರು    ಅರ್ಧ ಚಂದ್ರನ ಮೇಲೆ ನಾನು  ಜಾರುಬಂಡಿ ಆಡಿದೆ  ಚುಕ್ಕಿ ತಾರೆಗಳ ಜೊತೆ  ತುಂಬಾ ಮಾತನಾಡಿದೆ    ಅಲ್ಲೂ ಒಂದು ಊರು ಇತ್ತು  ಅಲ್ಲಿ ಜಾತ್ರೆ ನಡೀತಿತ್ತು  ಚಂದಮಾಮ ಕೈಯ್ಯ ಹಿಡಿದ  ನಾನು ಊರು ಸುತ್ತಿದೆ    ಕಡಲೆ ಮಿಟಾಯಿ ಕೊಬ್ಬರಿ ಮಿಟಾಯಿ  ಬೆಂಡು ಬತ್ತಾಸು […]