Facebook

Archive for 2013

ಯುವ ಪ್ರಕಾಶಕನೊಬ್ಬನ ಅಂತರಾಳದ ಮಾತುಗಳು: ನಟರಾಜು ಎಸ್. ಎಂ.

ಒಮ್ಮೆ ಪುಸ್ತಕವೊಂದನ್ನು ಪ್ರಕಟಿಸುವ ಕನಸು ಕಂಡಿದ್ದೆ. ಗೆಳೆಯನೊಬ್ಬ ತಾನೆ ಆ ಪುಸ್ತಕವನ್ನು ತನ್ನ ಪ್ರಕಾಶನದ ಮೂಲಕ ಪ್ರಕಟಿಸುವೆನೆಂದು ಮಾತು ನೀಡಿದ್ದ. ಟೈಪಿಂಗ್ ನಿಂದ ಹಿಡಿದು ಕರಡು ಪ್ರತಿ ತಿದ್ದುವ ಕೆಲಸವನ್ನು ಸಹ ಶ್ರದ್ಧೆಯಿಂದ ಮಾಡಿ ಮುಗಿಸಿ, ಪುಸ್ತಕ ಪ್ರಕಟವಾಗುತ್ತದೆ ಎಂದು ಆಸೆಯಿಂದ ಬರೋಬ್ಬರಿ ಹತ್ತು ತಿಂಗಳು ಜಾತಕ ಪಕ್ಷಿಯಂತೆ ಕಾದಿದ್ದೆ. ಕವರ್ ಪೇಜ್ ಡಿಸೈನ್ ನಿಂದ ಹಿಡಿದು ಸಣ್ಣ ಪುಟ್ಟ ಕೆಲಸಗಳವರೆಗೆ ಎಲ್ಲವೂ ಮುಗಿದು ಆ ಪುಸ್ತಕ ಅಚ್ಚಿಗೆ ಹೋಗುವುದಷ್ಟೇ ಬಾಕಿ ಇತ್ತು. ವಿಪರ್ಯಾಸವೆಂದರೆ ಆ ಗೆಳೆಯ […]

ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’ ಕಾದಂಬರಿ ಪ್ರಾರಂಭ

ಪಂಜುವಿನ ನಲ್ಮೆಯ ಓದುಗರಿಗಾಗಿ ಲೇಖಕ, ಪತ್ರಕರ್ತ ಹನುಮಂತ ಹಾಲಿಗೇರಿಯವರ ಪ್ರಶಸ್ತಿ ವಿಜೇತ ಕಾದಂಬರಿ "ಕೆಂಗುಲಾಬಿ" ಈ ಸಂಚಿಕೆಯಿಂದ  ಪ್ರಾರಂಭ… ಈ ಗರ್ಭ ಹೊತ್ತಾಗಿನ ತಳಮಳ ಹೇಳತೀರದು: ಕೆಂಗುಲಾಬಿಯ ಆತ್ಮ  ನನ್ನ ಮಸ್ತಕದ ಗರ್ಭದಲ್ಲಿ ಮೊಳಕೆ ಮೂಡಿ ಬೆಳೆಯುತ್ತಿರುವಾಗಲೆಲ್ಲಾ ನಾನು ತಳಮಳಕ್ಕೆ ಈಡಾಗುತ್ತ ಖಿನ್ನನಾಗುತ್ತಿದ್ದೆ. ಇದನ್ನು ಬರೆಯಬೇಕಾ ಬೇಡವಾ  ಎಂದು ತಾಕಲಾಟದಲ್ಲಿಯೆ ಬಹಳಷ್ಟು ದಿನಗಳನ್ನು ದೂಡಿದೆ. ನಾನು ಬರೆಸಿಕೊಂಡೆ ತೀರುತ್ತೇನೆ ಎಂದು ಇದು ಹಟ ಹಿಡಿದಂತೆಲ್ಲಾ ನಾನು ಸೋಲುತ್ತ ಹಿಂದೆ ಸರಿಯುತ್ತಲೆ ಇದ್ದೆ. ನನ್ನೊಡನೆ, ಶಾಲಿಗೆ ಬರುತ್ತಿದ್ದ, ರಜೆಯಲ್ಲಿ ಬಾಗಲಕೋಟೆಯ […]

ಸುಸ್ಥಿರ ಅಭಿವೃದ್ಧಿ-ಕೃಷ್ಣಾ ನದಿ: ಅಖಿಲೇಶ್ ಚಿಪ್ಪಳಿ

ಭರತ ಖಂಡ ಎಂದು ಕರೆಸಿಕೊಂಡ ಸಮಗ್ರ ಭಾರತ ಹಲವಾರು ಸಾರಿ ಛಿದ್ರವಾಯಿತು. ಚೀನಾ ಅತಿಕ್ರಮಿಸಿದರೆ, ಪಾಕಿಸ್ತಾನವನ್ನು ನಾವೇ ಕೊಟ್ಟೆವು. ಇಷ್ಟಾಗ್ಯೂ ನೂರಾರು ನದಿಗಳ ಭವ್ಯ ಪರ್ವತಗಳ, ಗಿರಿ ಶಿಖರಗಳ ನಾಡು. ಹೇರಳ ನೈಸರ್ಗಿಕ ಸಂಪತ್ತಿನ ಬೀಡು ಭಾರತ. ಪ್ರಪಂಚದ ಎಲ್ಲಾ ಖಂಡಗಳಲ್ಲೂ ನಾಗರೀಕತೆ ಅರಳಿದ್ದು, ನದಿಗಳ ದಂಡೆಗಳ ಮೇಲೆ. ಪವಿತ್ರ ಗಂಗಾನದಿ ಅದೆಷ್ಟು ಜನರಿಗೆ ಆಧಾರವಾಗಿದೆ. ಅದೆಷ್ಟು ಆಹಾರ ಧಾನ್ಯವನ್ನು ಇದೇ ನದಿಯ ನೀರನ್ನುಪಯೋಗಿಸಿ ಬೆಳೆಯಲಾಗುತ್ತಿದೆ. ಜನಸಂಖ್ಯೆ ಮತ್ತು ಅಭಿವೃದ್ಧಿಯೆಂಬೆರೆಡು ಗಂಗಾನದಿಗೆ ಕಂಟಕವಾಗಿ ಪರಿಣಮಿಸಿದ್ದೊಂತು ದುರಂತವೇ ಸೈ. […]

ನಾಟಕಕಾರರಾಗಿ ಕುವೆಂಪು (ಭಾಗ-9): ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯರೇ, ಈ ಹಿಂದಿನ ಸಂಚಿಕೆಯಲ್ಲಿ ನಾವು ಮಹಾಕವಿಗಳ ‘ಚಂದ್ರಹಾಸ’ ರಂಗಕೃತಿಯ ಕುರಿತು ನೋಡಿದ್ದೇವೆ. ಆ ರಂಗಕೃತಿಯು ಲಕ್ಷ್ಮೀಶನಂತಹ ಪ್ರಾಚೀನ ಕನ್ನಡಕವಿಗಳು ಕಾವ್ಯರೂಪದಲ್ಲಿ (ನಾನು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿದ್ದಾಗ (1986-87) ಚಂದ್ರಹಾಸೋಪಾಖ್ಯಾನದಲ್ಲಿಯ ‘ಚಂದ್ರಹಾಸನ ಬಾಲ್ಯ’ ಭಾಗವು ಪದ್ಯ-ಪಠ್ಯವಾಗಿತ್ತು. ವೈಭವದಿಂದ ಮೆರೆದಾಡಬೇಕಿದ್ದ ಚಂದ್ರಹಾಸನ ದುರ್ದೈವದ ಸ್ಥಿತಿಗೆ, ಆತನನ್ನು ಸಲಹುತ್ತಿರುವ ಮುದುಕಿಯಾಗಿರುವ ರಾಜದಾಸಿಯು ವ್ಯಥೆಪಡುವ ಪ್ರಸಂಗವನ್ನು ದುಃಖಿಸುತ್ತಲೇ ಪಾಠ ಮಾಡಿದ ಗುರುಗಳನ್ನು ಮರೆಯಲಾಗುವುದಿಲ್ಲ) ಚಿತ್ರಿಸಿದ ಕಥಾನಕವನ್ನು ಅದ್ಭುತ ದೃಶ್ಯಾವಳಿಗಳ ಸೃಷ್ಟಿಯೊಂದಿಗೆ ಕಟ್ಟಿಕೊಡುವ ಒಂದು ಪ್ರಯತ್ನವಾಗಿ ಮಹಾಕವಿಗಳು ರಂಗಕೃತಿಯಲ್ಲಿ ಆಕಸ್ಮಿಕಗಳ ಸರಮಾಲೆ, […]

ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ…: ದಿವ್ಯ ಆಂಜನಪ್ಪ

ಹೆಚ್.ಎಸ್. ವೆಂಕಟೇಶ ಮೂರ್ತಿ ರವರ ಕವನ:- ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವಾ… ಕವಿಯು ತಮ್ಮ ಈ ಕವನದಲ್ಲಿ ಮಾನವ ಸಂಬಂಧಗಳ ನಡುವಿನ ಅಂತರವನ್ನು ವಿಶ್ಲೇಷಿಸಿದ್ದಾರೆ. ನಾವು ನಮ್ಮೊಂದಿಗಿರುವ ಜನರೊಂದಿರೆ ಎಷ್ಟೇ ಕಾಲ ಒಟ್ಟಿಗೆ ಕಳೆದರೂ, ಒಬ್ಬರಿಗೊಬ್ಬರು ಅಂತರಾತ್ಮವನ್ನು ತೆರೆದುಕೊಂಡಿರುವುದಿಲ್ಲ ಎಂದು ಕವಿ ಹೇಳುವಾಗ ಹೋಲಿಕೆಗಳನ್ನು ಹೀಗೆ ನೀಡುತ್ತಾರೆ. ಕಡಲ ಮೇಲೆ ಸಾಗುವ ದೋಣಿ ಎಷ್ಟೇ ದೂರ ಸಾಗಿದರೂ ಕಡಲ ಆಳವನ್ನು ತಿಳಿಯುವ ಗೊಡವೆಗೆ ಹೋಗುವುದಿಲ್ಲ. ಸಾಗರಕ್ಕೂ ದೋಣಿಗೂ ತೀರ ಅಂಟಿದ […]

ದದ್ದ ಬೂಗು ಕಟ್ಟಿದಾಗ !: ಪ್ರಜ್ವಲ್ ಕುಮಾರ್

ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ. “ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?” “ಇಲ್ಲಾ ಕಡೋ, ಬೂಗು ಕಟ್ಟಿದೆ” ಅಂದೆ. “ಏನು?! ಏನು ಕಟ್ಟಿದೆ?” ಜೋರಾಗಿ ನಗುತ್ತಾ ಮತ್ತೆ ಕೇಳಿದ. “ಬೂಗು! ಕಡೋ […]

ಪಂಜು ಚುಟುಕ ಸ್ಪರ್ಧೆ: ಅನುಪಮಾ ಎಸ್. ಗೌಡ ಅವರ ಚುಟುಕಗಳು

1) ರಾಮ-ಶಾಮ ಕೃಷ್ಣನನ್ನೇ ಪೂಜಿಸೋ  ಎನ್ನ ಮಡದಿಗೆ  ನಾನೆಂದೂ "ರಾಮ" ಕೈತಪ್ಪಿ ಹೋದ  ನನ್ನ ನನ್ನೊಲವ ರಾಧೆ  ಹೇಳುತಿದ್ದಳು  ನಿನ್ನೊಳಗಿಹನೊಬ್ಬ  "ತುಂಟ ಶಾಮ" …………………… 2) ಹಾಫ್ ಶರ್ಟ್   ಹಾಫ್ ಶರ್ಟ್ ಮೇಲೆ ರಾರಜಿಸುತಿದ್ದ ಹಾರ್ಟ್ ಕಂಡು ಮೌನವಾಗಿ ಕೇಳಿದಳು  ಅರ್ಧಾಂಗಿ  ಯಾರು ಕೊಟ್ಟ  ಗಿಪ್ಟು ಈ ಅಂಗಿ? ………………… 3) ಬಯಕೆ   ಸಿಕ್ಕರೆ ರಾಮನಂಥ ಗಂಡ ಸಿಗಬೇಕೆಂದು ದೇವರಲ್ಲಿ  ಕೋರುವ ಬಯಕೆ..!   ಮೆಲ್ಲೆಗೆ  ಪಿಸುಗುಟ್ಟಿತು ಮನ ಮಾಡ್ಯನು ಶಂಕೆ ಕಾಡಿಗೆ ಅಟ್ಯಾನು  […]

ಗಡ್ಡ: ಪ್ರಶಸ್ತಿ ಅಂಕಣ

ಹಾಡ್ತಾ ಹಾಡ್ತಾ ರಾಗ, ನರಳತಾ ನರಳಾತಾ ರೋಗ ಅಂದಗೇನೇ ನೆನಿತಾ ನೆನಿತಾ ನೆನಪು ಅಂತನೂ ಹೇಳ್ಬೋದೇನೋ. ಸುಮ್ನೆ ಎಲ್ಲೋ ಹೊಳೆದ ಎಳೆಯೊಂದು ಕತೆಯಾಗಿಯೋ, ಕವಿತೆಯಾಗಿಯೋ ರೂಪುಗೊಳ್ಳಬಹುದು. ಕೆಲವೊಂದು ಎಳೆಗಳು ನೆನಪಿನಾಳಕ್ಕಿಳಿದು ನೋವ ಅಲೆಗಳನ್ನ ಕೆದಕಬಹುದು. ತನ್ನನ್ನೇ ಹಾಸ್ಯವಾಗಿಸಿ ನಗುವ ಕಡಲಲ್ಲಿ ತೇಲಿಸಲೂಬಹುದು. ಆ ಕ್ಷಣಕ್ಕೆ ಅದೇ ದೊಡ್ಡ ಹಾಸ್ಯ. ಮಿಸ್ಸಾದರೆ ಏನೂ ಇಲ್ಲ.  ತೆರೆಗಳು ಸರಿದಾಗ ಮರಳ ತಡಿಯಲ್ಲಿ ಮೂಡೋ ಚಿತ್ರಗಳಂತೆ.. ಮತ್ತೊಂದು ಅಲೆ ಬಂದು ಅದನ್ನು ತೊಳೆದು ಹಾಕೋ ತನಕ.. ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ […]

ಫ್ಲಾಪೀ ಬಾಯ್ ಕಂಡ ಕೆಂಪುತೋಟ: ಸಚಿನ್ ಎಂ. ಆರ್.

ಈ ಫ್ಲಾಪೀ ಬಾಯ್‍ಗೆ ಕೆಲಸ ಇಲ್ಲ. ಇದ್ದರೂ ಅವ ಮಾಡೊಲ್ಲ. ಅಂತಹ ಈ ನಿಮ್ಮ ಹುಡುಗ ಹೀಗೆ ಒಂದು ದಿನ ಎಲ್ಲಾ ಬಿಟ್ಟು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಬೆಂಗಳೂರಿನ ಲಾಲ್‍ಬಾಗ್ ಗೆ ಹೊಂಟ. ಅಲ್ಲಿ ಅವನು ಏನೇನು ನೋಡಿದ, ಏನೇನು ಮಾಡಿದ ಅನ್ನುವ ಕುತೂಹಲವಿದ್ದರೆ ಮುಂದೆ ಒದಿ. ಬೆಳಿಗ್ಗೆ ಹತ್ತು ಮೂವತ್ತರ ಸಮಯ. ಒಳಗೆ ಹೋಗುವಾಗ ಒಬ್ಬನೇ ಏಕಾಂಗಿ ಫ್ಲಾಪೀಬಾಯ್, ಆದರೆ ಹೊರಬರುವಾಗ ಅವನ ತಲೆಯಲ್ಲಿತ್ತು ಏನೇನೋ ಆಲೋಚನೆಗಳು, ವಿಚಾರಗಳು ಅವೆಲ್ಲ ಏನು […]

ಆಸೆಗಳು ನನ್ನವು ಸಾವಿರಾರು: ವಾಸುಕಿ ರಾಘವನ್

ಜವಹರಲಾಲ್ ನೆಹರು ಅವರ “ಟ್ರಿಸ್ಟ್ ವಿತ್ ಡೆಸ್ಟಿನಿ” ನಮ್ಮ ದೇಶದ ಅತ್ಯಂತ ಪ್ರಸಿದ್ಧ ಭಾಷಣ ಅನ್ಸುತ್ತೆ. ಸುಧೀರ್ ಮಿಶ್ರಾ ಅವರ “ಹಜಾರೋ ಖ್ವಾಹಿಷೇ ಏಸೀ” ಚಿತ್ರ ಶುರುವಾಗುವುದೇ ಈ ಭಾಷಣದ ಧ್ವನಿ ಮುದ್ರಿಕೆಯೊಂದಿಗೆ. “ವಿಧಿಯೊಂದಿಗೆ ನಮ್ಮ ಒಪ್ಪಂದ ಯಾವಾಗಲೋ ಆಗಿದೆ, ಅದರೆಡೆಗೆ ಮುನ್ನುಗ್ಗುವ ಪಣವನ್ನು ಇಂದು ತೊಡೋಣ. ಮಧ್ಯರಾತ್ರಿಯ ಈ ಹೊತ್ತಿನಲ್ಲಿ, ಇಡೀ ಪ್ರಪಂಚವೇ ಮಲಗಿರುವಾಗ, ಭಾರತ ಸ್ವಾತ್ರಂತ್ರ್ಯದೆಡೆಗೆ, ಬೆಳಕಿನೆಡೆಗೆ ಸಾಗುತ್ತದೆ”. ದಾಸ್ಯದಲ್ಲಿ ಸಿಕ್ಕಿ ನರಳುತ್ತಿದ್ದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಇಂಥ ಒಂದು ಭಾಷಣ ಕೇಳಿ […]