Facebook

Archive for 2013

ಯಾರ್ ಮನ ಮುರ್ದ್ ಬುಟ್ಟು ಬಂದ ಬಡ್ಡೈದ ಇವತ್ತು: ಡಾ. ಗವಿ ಸ್ವಾಮಿ

ವಾರದ ಹಿಂದೆ ಒಬ್ಬ ರೈತ ಬಂದಿದ್ದ. ”ನೆನ್ನ ರಾತ್ರ ಅಸು ಈಯ್ತು.. ಇನ್ನೂ ಮ್ಯಾಲ್ಕೇ ಎದ್ದಿಲ್ಲ.. ತಲ ಇಟ್ಬುಟ್ಟದ ಒಂಚೂರ್ ಬಿರ್ರನ್  ಬನ್ನಿ ಸಾ , ಮನಲಿ ಎಮ್ಕ ಬಾಯ್  ಬಡ್ಕಂಡು ಅಳತ್ ಕೂತರ” ಅವನನ್ನು ಬೈಕಿನಲ್ಲಿ ಕೂರಿಸಿಕೊಂಡು ಅವನ ಊರಿಗೆ ಹೊರಟೆ. ಪೂರ್ತಿ ತೆಂಗಿನ ಗರಿಯಲ್ಲಿ ಕಟ್ಟಿದ ಕೊಟ್ಟಿಗೆ ಅದು. ಹಸು ತಲೆಯನ್ನು ಹೊಟ್ಟೆಯ ಮೇಲೆ ನುಲಿದುಕೊಂಡು ಮಲಗಿತ್ತು. ಮೈ ತಣ್ಣಗಿತ್ತು. ಕರು ಹಾಕಿದ ನಂತರ, ಹಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ  ‘ಮಿಲ್ಕ್ ಫೀವರ್’ ನ ಲಕ್ಷಣಗಳು ಕಾಣುತ್ತಿದ್ದವು […]

ಗುಲಾಬಿ ಟಾಕಿಸ್ – ಅರಕಳಿಯಾದ ಅಂತರಂಗ: ಮಹದೇವ ಹಡಪದ್

ಹೆಣ್ಣಿನ ಸುತ್ತ ಹಾಕಿರುವ ಬೇಲಿಯನ್ನು ಮೀರುವ ಹಂಬಲದ ಕತೆ ಸಿನಿಮಾ ಆಗುವಾಗ ಸಂಕುಚಿತವಾಗಿದೆ. ವ್ಯವಸ್ಥೆಯೇ ಬೇಲಿಯಾಗಿರುವಾಗ ಗುಲಾಬಿ ತನ್ನಿಚ್ಛೆಯಂತೆ ತಾನು ಬದುಕುತ್ತಿದ್ದಳು… ಆಕೆಯೂ ತಲಾಖ್ ಕೊಡಲಾರದ ಗಂಡನಿಗಾಗಿ ಬದುಕಿದ್ದಾಳೆ. ಮಲಮಗನ ಮೇಲಿನ ಹಂಬಲದಲ್ಲಿ ಜೀವಿಸುತ್ತಿದ್ದಾಳೆ. ಹೊಸ ಸಿನಿಮಾಗಳು ಹೇಳುವ ಬಗೆಬಗೆಯ ಕತೆಗಳನ್ನು ನೋಡುವ ಆತುರದಲ್ಲಿದ್ದಾಳೆ. ತೀರ ಸಾಮಾನ್ಯನ ಬದುಕಿನಲ್ಲಿ ಒಂದು ಕಲಾತ್ಮಕ ಆವರಣ ಇದ್ದೆ ಇರುತ್ತದೆ. ಆ ಆವರಣವನ್ನು ಲಿಲ್ಲಿಬಾಯಿಯ ಜೀವನದಲ್ಲಿ ಕಾಣುತ್ತೇವೆ. ಆದರೆ ಗುಲಾಬಿ ಟಾಕೀಸ್ ಸಿನೆಮಾದ ಕೆಲವು (ಶಾಟ್)ಚಿತ್ರಿಕೆಗಳಲ್ಲಿ ಕಾಣಿಸಿದರೂ ಇನ್ನುಳಿದಂತೆ ಅದೊಂದು ಉದ್ಧೇಶಪೂರ್ವಕ […]

ಸಿನಿಮಾ ಪ್ಯಾರಡಿಸೋ: ವಾಸುಕಿ ರಾಘವನ್

ಬಾಲ್ಯದಲ್ಲಿ ಸಿನಿಮಾ ನೋಡುವಾಗಿನ ಅನುಭವವೇ ಬೇರೆ ಇತ್ತು. ನನ್ನ ಬೆರಗುಗಣ್ಣಿಗೆ ಸಾಧಾರಣ ಚಿತ್ರಗಳೂ ಅದೆಷ್ಟು ಅಚ್ಚರಿ ಮಾಡಿಸುತ್ತಿದ್ದವು. ಈಗ ಬಹಳ ಸಿನಿಮಾ ನೋಡಿರುವುದರಿಂದಲೋ ಏನೋ, ಸಿನಿಮಾಪ್ರೇಮಿಯೊಡನೆ ಒಬ್ಬ ಸಿನಿಕನೂ ನನ್ನಲ್ಲಿ ಹುಟ್ಟಿದ್ದಾನೆ. ಈಗ ಬೇಕೆಂದರೂ ಆ ಮುಗ್ಧ ಮನಸ್ಥಿತಿ ಸಿಗುವುದಿಲ್ಲ. ಹಾಗಾಗಿ ಹತ್ತರಲ್ಲಿ ಒಂಭತ್ತು ಚಿತ್ರಗಳು ನಿರಾಶೆ ಮೂಡಿಸುತ್ತವೆ. ಆದರೆ ಆ ಒಂದು ಚಿತ್ರ ಇಷ್ಟ ಆಗುತ್ತೆ ನೋಡಿ, ಆ ಖುಷಿಯ ತೀವ್ರತೆ ಬೇರೆಯವರಿಗಿಂತ ಹೆಚ್ಚಾಗಿ ಅನುಭವಿಸುತ್ತೇನೆ! ಈಗಿನ ವಿಮರ್ಶಾತ್ಮಕ ಮನಸ್ಥಿಯಲ್ಲೂ ಮೆಚ್ಚಿಸುವ ಚಿತ್ರಗಳು ಸಾಕಷ್ಟಿವೆ, ಆದರೇ […]

ನಾಟಕಕಾರರಾಗಿ ಕುವೆಂಪು (ಭಾಗ-8): ಹಿಪ್ಪರಗಿ ಸಿದ್ದರಾಮ್

ಕಾಡಿನ ಸಂಸ್ಕೃತಿಯಲ್ಲಿ ತನ್ನ ಸೃಜಶೀಲತೆಯನ್ನು ಬೆಳೆಸಿಕೊಂಡ, ವಿದ್ಯೆಯನ್ನು ಅರ್ಜಿಸಿಕೊಂಡ ಏಕಲವ್ಯನು ದ್ರೋಣನನ್ನು ಕಲ್ಪಿತ ಗುರುವನ್ನಾಗಿ ಇಟ್ಟುಕೊಂಡು ಏಕಾಗ್ರತೆಯಿಂದ ವಿದ್ಯೆಯನ್ನು ಗಳಿಸಿದರೂ, ವ್ಯವಸ್ಥೆ ಅದಕ್ಕೆ ಪ್ರತಿಫಲವನ್ನು ಕೇಳುವುದರೊಂದಿಗೆ ಬಲಿ ತೆಗೆದುಕೊಳ್ಳ್ಳುತ್ತದೆ. ಆದರೆ ಇಂತಹ ಅಮಾನುಷ ದೌರ್ಜನ್ಯಗಳಿಗೆ ಮುಂದೊಂದು ದಿನ ತನ್ನ ಪ್ರತಿಕಾರವೊಂದು ಕಾದಿದೆ ಎನ್ನುವ ಧ್ವನಿ/ವಿಚಾರ ತುಂಬ ಶಕ್ತಿಶಾಲಿಯಾದದ್ದು. ಹೀಗಾಗಿ ‘ಶೂದ್ರ ತಪಸ್ವಿ’ ರಂಗಕೃತಿಗಿಂತಲೂ ಭಿನ್ನವಾಗಿ ಕೆಳವರ್ಗದ ಪ್ರತಿಭಟನೆಯ ಇನ್ನೊಂದು ಮಾದರಿ ‘ಬೆರಳ್-ಗೆ-ಕೊರಳ್’ ರಂಗಕೃತಿಯ ಸಂದರ್ಭದಲ್ಲಿ ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈ ರಂಗಕೃತಿಯು ಆಗಿನ ಸಂದರ್ಭದಲ್ಲಿ ಆಧುನಿಕ […]

ಹಸ್ತ ಬಲಿ: ಚೀಮನಹಳ್ಳಿ ರಮೇಶಬಾಬು

ಹಸ್ತ ಮಳೆ ಕಾಲಿಟ್ಟಾಗಿನಿಂದ ಒಂದು ದಿನವೂ ಮಳೆ ತಪ್ಪಿದ್ದಲ್ಲ. ಮುಂಜಾನೆ ಚಿಕ್ಕ ಚಿಕ್ಕ ಹತ್ತಿಯ ತುಂಡುಗಳಂತೆ ಗಾಳಿಯಲ್ಲಿ ತೇಲುತ್ತಾ ಸಾಗುವ ಮೋಡಗಳು ಬಿಸಿಲು ಏರಿದಂತೆಲ್ಲಾ ಸಾಂದ್ರವಾಗುತಾ, ಸೂರ್ಯ ಪಶ್ಚಿಮದ ಕಡೆ ಜಾರಿದಂತೆಲ್ಲಾ ಹಿಮಾಲಯದ ಬೆಟ್ಟಗಳ ರೀತಿ ಬೃಹದಾಕಾರ ತಳೆದು, ಪಡುವಣದ ಕೆನ್ನೆ ಕೆಂಪಾಗಾಗುತ್ತಿದ್ದಂತೆ ಕನಿಷ್ಠವೆಂದರೆ ಒಂದು ಹದ ಮಳೆಯಾಗುವುದು ಹಸ್ತ ಮಳೆ ಕಾಲಿಟ್ಟ ಗಳಿಗೆಯಿಂದ ನಡೆದು ಬಂದ ಮಾಮೂಲಿ ಕ್ರಿಯೆ. ಇನ್ನು ಅದರ ಸಮಯಪಾಲನೆಯೋ ಖಚಿತವಾಗಿ ಹೆಚ್ಚು ಕಮ್ಮಿ ಅದೇ ವೇಳೆಗೆ ಸುರಿಯುವ ಅದೂ ಕೂಡ ಒಂದು […]

ಪಂಜು ಚುಟುಕ ಸ್ಪರ್ಧೆ: ಹುಸೇನ್ ಎನ್. ಅವರ ಚುಟುಕಗಳು

೧.ಒಳಗೊಳಗೇ ಅತ್ತು ಸತ್ತು ಹೋದ ನನ್ನ ಕನಸುಗಳ ಗೋರಿಗೆ ನಿನ್ನ ಹೆಸರಿಟ್ಟಿದ್ದೇನೆ..! —- ೨.ನಿನ್ನೆದುರು ದನಿಯಾಗಲು ಸೋತ ಮಾತುಗಳು ಕಮ್ಮನೆ ಕುಳಿತಿವೆ.. ಮಡುಗಟ್ಟಿದ ಕಣ್ಣೀರಿಗೆ ಜೊತೆಯಾಗಿ..! —- ೩.ನನಗಸೂಯೆ..! ಅವಳನ್ನು ಸೋಕಿ ಹೋಗುವ ತಂಗಾಳಿ ಮೇಲೆ ಅವಳ ಮೈ ಮೇಲೆರಗುವ ಬಿಸಿಲ ಮೇಲೆ ನನಗೊಂದಿಷ್ಟು ಜಾಗ ನೀಡದ ಅವಳ ಮನಸಿನ ಮೇಲೆ ..!   —- ೪. ನಿನ್ನ ಮಾತಿಗಿಂತ ಮೌನವೇ ಎನಗಿಷ್ಟ.. ಮೌನದೊಳು ನೀನಾಡದ ಅದೆಷ್ಟು ಮಾತುಗಳು…!!   —– ೫. ಶಶಿಯಾಗಮನದಿ ಜಿಲ್ಲೆಂದು ಪುಳಕಗೊಂಡಿದೆ […]

ದೇವರಿದ್ದಾನೆ: ರಾಶೇಕ್ರ

  ಹಳೇ ಪಿಕ್ಚರಿನ ಕ್ಲೈಮ್ಯಾಕ್ಸು ಸೀನಿನಲಿ ಹೀರೋಯಿನ್ನು ಕಟ್ಟಿದ ಬೇವಿಗೆ ಬೆದರಿ ಅಲ್ಲಾಡುವ ಅದೆಷ್ಟೋ ಗಂಟೆಗಳು ಒಮ್ಮೆಲೇ ಢಣ್ಣೆನ್ನುವಾಗ ದೇವರಿದ್ದಾನೆ.. ಪೂಜಾರಿಯ ಆರತಿ ತಟ್ಟೆಗೆ ಬಿದ್ದ ಒಂದೆರಡು ರೂಪಾಯಿ ಕಾಸು ಠಣ್ಣೆನ್ನುವಾಗ ಕಂಪಿಸಿದ ಕಂಪನದಲಿ ಪೂಜಾರಿಯ ತಮುಲದಲಿ ದೇವರಿದ್ದಾನೆ.. ಬಿಳಿ ಟೊಪ್ಪಿಗೆ ಏರಿಸಿ ಬರಿಗೋಡೆಯ ಎದುರು ಭಕ್ತಿಭಾವದಿಂದ ಇಡೀ ಕಾಯವ ಉಲ್ಟಾ ಮಾಡುವ ಸತತ ಪ್ರಯತ್ನಗಳಲಿ ದೇವರಿದ್ದಾನೆ.. ಧನಾತ್ಮಕ ಚಿಹ್ನೆಯನು ಬರೆಯಲು ಬಾರದವರು ಶಿಲುಬೆಯೆಂದುಕೊಂಡು ದೇವಧೂತನ ಅದಕೆ ಆನಿಸಿ ಮೊಳೆಯೊಡೆವ ಮೂರ್ಖತನದಲಿ ದೇವರಿದ್ದಾನೆ.. ಊರ ನಡುವಿನ ಅರಳೀಕಟ್ಟೆಯ […]

ಪೀಜಿ ಪುರಾಣ: ಪ್ರಶಸ್ತಿ ಅಂಕಣ

  ಅ: ಹಾಯ್, ನೀವೆಲ್ಲಿರೋದು ? ಬ: ಬೆಂಗ್ಳೂರು ಅ: ಓ. ಹೌದಾ.. ಬೆಂಗ್ಳೂರಲ್ಲೇನ್ ಮಾಡ್ಕೊಂಡಿದೀರಿ ? ಬ:ಪೀಜಿ ಅ:ಪೀಜಿ ಅಂದ್ರೆ ಪೋಸ್ಟ್ ಗ್ರಾಜುಯೇಷನ್ನಾ ? ಬ:ಅಲ್ಲ ಮಾರ್ರೆ.ಪೇಯಿಂಗ್ ಗೆಸ್ಟು !:-) ಈ ಬೆಂದಕಾಳೂರಿಗೆ ಬಂದು ಬಾಳ ಬೇಳೆ ಬೇಯಿಸ್ಕೊಳೋಕೆ ಶುರು ಮಾಡಿದಾಗಿನಿಂದ ಮೇಲಿನ ಪೀಜಿ PJ ಬೇಜಾರ್ ಬರೋವಷ್ಟು ಕಾಮನ್ನಾಗಿ ಹೋಗಿದೆ 🙁 ಅಲ್ಲ, ಈ ಕಾಲ ಅನ್ನೋದು ನಮ್ಮ ಕಲ್ಪನೆ, ನಂಬಿಕೆಗಳನ್ನೆಲ್ಲಾ ಎಷ್ಟು ಬದಲಾಯಿಸತ್ತೆ ಅಲ್ವಾ ? ಕೆಲವೊಂದು ಸಲ ನಂಬಿಕೆಗಳನ್ನ  ಬುಡಮೇಲೇ ಮಾಡ್ಬಿಡುತ್ತೆ. ನಾವು ಎಷ್ಟೇ ಅಂದ್ಕೊಂಡ್ರೂ […]

ಓಡಿ ಹೋಗುವ ಮುನ್ನ ಓದಿ ಹೋಗಿ: ಪ್ರವೀಣ್ ಕುಲಕರ್ಣಿ

ಹಲೋ ಹಲೋ ಥೂ ಈ ಹುಡುಗರು ಸರಿಯಾದ ಟೈಮ್ ಗೆ ಬರೋದು ಇಲ್ಲ ಫೋನ್ ಎತ್ತೋದು ಇಲ್ಲ ಹಲೋ …. ಹಾಂ ಹ..ಲೊ ..ಇನ್ನೂ ಎದ್ದಿಲ್ವ ದಂಡ ಪಿಂಡ ನೀನು..? ಇಲ್ಲಿ ನನಗೆ ಒಂದೊಂದು ನಿಮಿಷ ಉಸಿರು ಕಟ್ತಾ ಇದೆ ಏಳೋ ಬೇಗ .. ಅಯ್ಯೋ ಎದ್ದೆ ತಡಿಯೇ… ಮಾತಾಡಿದ ನಿಮ್ಮ ಅಮ್ಮ ಅಪ್ಪನ ಹತ್ತಿರ ಏನಂತೆ ? ಮರ್ಯಾದೆಯಾಗಿ ಮದುವೆ ಮಾಡಿಕೊಟ್ಟು ದೊಡ್ಡವರು ಅನ್ನಿಸಿಕೊಳ್ತಾರೋ  ಇಲ್ವಾ ಫಿಲ್ಮಲ್ಲಿ ತೋರಿಸೋ ಹಾಗೆ ಇಲ್ಲ ಆಗಲ್ಲ ಅಂದ್ಕೊಂಡು ತಲೆ […]

ಬುದ್ಧನ ಬೋಧಿವೃಕ್ಷ ಬಾಡಿದ್ದು: ಅನುರಾಧ ಪಿ. ಸಾಮಗ

ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..   ಮರ ಮರುಗದು ಇರದುದಕೆ ಪ್ರತಿ ಕೇಳದು ತಾನಿತ್ತುದಕೆ. ನರಗರ್ಥವಾಗದು ನಿಸ್ವಾರ್ಥತೆ, ನಿರ್ಲಿಪ್ತತೆ, ನಿರಾಕಾರತೆ ಮತ್ತು ನಿರ್ಮಮತೆ… ಅವ ಬಯಸುತಾನೆ, ಕೀಳಿ, ಕಿತ್ತು, ಕೆತ್ತಿ, ಕೊನೆಗೆ ಕಡಿದೇ ಬಿಡುತಾನೆ ಖಾಲಿಯಾಗಿಸಿ. ಇಲ್ಲ ಅತಿ ನಂಬುತಾನೆ, ಮೆಚ್ಚಿ, ಮೆಚ್ಚಿಸಿ, ಅಪ್ಪಿಒರಗಿ, ಒಳಗಿಳಿದು, ಆವರಿಸಲ್ಪಟ್ಟು ಕೊನೆಗೆ ತಾನಿಲ್ಲವಾಗುತಾನೆ ಖಾಲಿಯಾಗಿ.   ತನ್ನಂತೆ ಪರರ ಬಗೆದ ನರಮನಸು ಮರಕೂ ಈವೆನೆಂದು ಹೊರಟಿದೆ. ಸಿದ್ಧಾರ್ಥ ಬುದ್ಧನಾದೆಡೆಯ ಮಣ್ಣಿಗೆ ತಾನೆರೆಯತೊಡಗಿದೆ, ನೆಲೆಯ ಬೆಳಗತೊಡಗಿದೆ, ಉದ್ಧಾರಕತೃವ ಉಪಕೃತವಾಗಿಸಿ ತಾನೆತ್ತರಕೇರಬಯಸಿದೆ.   ಅಲ್ಲ…… […]