Facebook

Archive for 2013

ನಾಟಕಕಾರರಾಗಿ ಕುವೆಂಪು (ಭಾಗ-7): ಹಿಪ್ಪರಗಿ ಸಿದ್ದರಾಮ್

ಓರ್ವ ವಿದ್ಯಾವಂತ ಘನ ಬ್ರಾಹ್ಮಣೋತ್ತಮನು ಧರ್ಮಭೀರುವಾಗಿದ್ದರೂ ಪರಂಪರೆಯಿಂದ ಬಂದ ಶಾಸ್ತ್ರದ ಕುರಿತ ಶ್ರದ್ಧೆ ಆತನ ವಿಕಾಸವನ್ನು ಮೊಟಕುಗೊಳಿಸುತ್ತಾ ತನ್ನಂತೆ ಇತರರು ಆಗಬಾರದೆನ್ನುವ ಅಸೂಯಾಗುಣ ಅವನನ್ನು ಹೇಗೆ ಕೆಳಮಟ್ಟಕ್ಕೆ ತಳ್ಳುವದರೊಂದಿಗೆ ಆತನನ್ನು ಹಿಂದೆ-ಮುಂದೆ ಗೊತ್ತಿಲ್ಲದೇ ಬೆಂಬಲಿಸಿದವರೂ ಸಹ ಚಿಕ್ಕವರಾಗುತ್ತಾರೆ ಎಂಬುದರಿಂದ ಹಿಡಿದು ಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ವಕ್ರಬುದ್ಧಿಯನ್ನು ತಿದ್ದಿಕೊಂಡು ಪಶ್ಚಾತ್ತಾಪ ಪಡುವುದು, ನಂತರದಲ್ಲಿ ಶ್ರೀರಾಮಚಂದ್ರನು ಆದರ್ಶಪ್ರಾಯನಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುವುದು ಹೀಗೆ ಪೌರಾಣಿಕ ಕಾಲದ ಅಂಧಶ್ರದ್ಧೆಯ ಕಥೆಯೊಂದು, ಮಹಾಕವಿಗಳ ಪ್ರತಿಭಾಲೋಕವನ್ನು ಪ್ರವೇಶಿಸಿ ಹೇಗೆ ಪುನರ್ಜನ್ಮವನ್ನು ಪಡೆದು ಪ್ರಜ್ವಲಿಸುವ ಬೆಳಕನ್ನು […]

ಕಮಲಾದಾಸ್ ರ ಎರಡು ಕವನಗಳ ಕನ್ನಡರೂಪ: ಚಿನ್ಮಯ್ ಎಂ.

( ಕಮಲಾದಾಸ್ ರ ‘My Grandmother’s House’ ಕವನದ ಕನ್ನಡರೂಪ ) ನನ್ನ ಪ್ರೀತಿಯ ಮನೆ ದೂರದಲ್ಲಿದೆ. ಆ ಮುದುಕಿ ಸತ್ತಮೇಲೆ ಅವಳ ಬಿಳಿ ಸೀರೆಯಂತೆ ಮೌನವನ್ನುಟ್ಟ ಮನೆಯ ಪುಟಗಳ ನಡುವೆ, ಗೋಡೆಯ ಬಿರುಕುಗಳಲ್ಲಿ ಹಾವುಗಳು ಹರಿದಾಡಿದವು. ನನ್ನ ಪುಟ್ಟ ಜೀವ ಹೆಪ್ಪುಗಟ್ಟಿತು. ಅದೆಷ್ಟು ಬಾರಿ ಅಲ್ಲಿಗೆ ಹೋಗುವ ಯೋಚನೆ  ಮಾಡಿಲ್ಲ ನಾನು? ಕಿಟಕಿಗಳ ಖಾಲಿ ಕಣ್ಣುಗಳಾಚೆ ಇಣುಕಿ ಹೆಂಚಿನ ಕಾವಿಗೆ ಮೈಯ್ಯೊಡ್ಡಿ ನೀರವದ ಸದ್ದಿಗೆ ಕಿವಿಗೊಟ್ಟು ಅಥವಾ ಕಡೇ ಪಕ್ಷ ಹುಚ್ಚು ನಿರಾಸೆಯಿಂದ ಬೊಗಸೆ ತುಂಬಾ […]

ಅಶೋಕ್ ಫೋಟೋಗ್ರಾಫಿ