ಮರೆಯಲಾಗದ ಚಿಕ್ಕಾತಿಚಿಕ್ಕ ಪಾತ್ರಗಳು:ವಾಸುಕಿ ರಾಘವನ್

  “ಪೂರೇ ಪಚಾಸ್ ಹಜಾರ್” ಮೂರೇ ಪದಗಳು! ಹೇಳಿದವನು ಮಕಿಜಾನಿ ಮೋಹನ್ ಅಲಿಯಾಸ್ ಮ್ಯಾಕ್ ಮೋಹನ್. ಸಾಮಾನ್ಯವಾಗಿ ಖಳನಾಯಕನ ಚೇಲಾ ಪಾತ್ರಗಳಿಂದ ನಮಗೆ ಪರಿಚಿತನಾಗಿರುವ ಆತ ನಟಿಸಿರುವ ಇನ್ನೂರಕ್ಕೂ ಹೆಚ್ಚು ಚಿತ್ರಗಳ ತೂಕ ಒಂದಾದರೆ, ಈ ಪಾತ್ರದ್ದೇ ಒಂದು. ಇದು ಪೋಷಕ ಪಾತ್ರ ಅಂತಲೂ ಹೇಳಲಾಗದಷ್ಟು ಚಿಕ್ಕಾತಿಚಿಕ್ಕ ಪಾತ್ರ. ಆದರೆ ಇವತ್ತಿಗೂ ಗಬ್ಬರ್ ಸಿಂಗ್ ಎಷ್ಟು ಫೇಮಸ್ ಆಗಿದ್ದಾನೋ ಮೂರೇ ಪದ ಹೇಳಿರುವ ಸಾಂಭಾ ಕೂಡ ಅಷ್ಟೇ ಫೇಮಸ್! “ಮೇರೆ ಸಪ್ಪನೋ ಕೀ ರಾಣಿ ಕಬು ಆಯೇಗಿ … Read more

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಮಾಲಿನಿ ಭಟ್ ರವರ ಚುಟುಕಗಳು

  ೧.)   ಹುಚ್ಚುಮನಸು ಕಂಡೂ ಕಾಣದ ಮನದ ಚಿತ್ತದಲ್ಲಿ ಸುಪ್ತವಾಗಿ ಕದಡಿ ನಿಂತಿದೆ, ಯಾರು ಕೇಳದಂತಹ ಕಲ್ಪನೆ ರೂಪ ನೀಡಲಾಗದೆ ಅವಿತಿದೆ.   ೨.)ಸ್ವಾರ್ಥ ಜೀವನದ ಪ್ರತಿಕ್ಶಣನು ಬಯಸುತ್ತೇವೆ ನಮಗಾಗಿ ಒಂದು ಜೀವ ಇರಬೇಕು ಆದರೆ ಯಾವ ಸಮಯವು ಯೋಚಿಸುವುದಿಲ್ಲ ಬೇರೆಯವರಿಗಾಗಿ ನಾವು ಇರಬೇಕು   ೩) ಬದುಕಲ್ಲಿ ದುಃಖವೋ ಸುಖವೋ ಏನುಂಟು ಏನಿಲ್ಲ ಹೇಳಲಾಗದ ಚಿತ್ರಿಸಲಾಗದ ಒಗಟನ್ನು ಬಿಡಿಸುವ ಪರಿ ಏನು?   ೪) ಕಣ್ಣು ಕಾಣದಾದಾಗ ಎಷ್ಟು ವೈಭವ ಇದ್ದರೇನು ಮನಸು ಸೋತಾಗ … Read more

ನಾಟಕಕಾರರಾಗಿ ಕುವೆಂಪು (ಭಾಗ-3):ಹಿಪ್ಪರಗಿ ಸಿದ್ದರಾಮ್

  ಹೆಣ್ಣಿನ ಆತ್ಮವಿಶ್ವಾಸ, ಛಲ ಮತ್ತು ಅಸಾಧ್ಯವಾದುದನ್ನು ಸಾಧ್ಯಮಾಡುವ ಶಕ್ತಿಯ ದ್ಯೋತಕವಾದ ಮಹಾಕವಿ ಕುವೆಂಪುರವರ ‘ಯಮನ ಸೋಲು’ ರಂಗಕೃತಿಯಲ್ಲಿ ಪ್ರೇಮಾನುರಾಗವು ಧರ್ಮವನ್ನು ಮೀರಿದುದು ಎಂಬ ಮಾತನ್ನು ಸಾಧಿಸುವುದರೊಂದಿಗೆ ಪ್ರೇಮಮಯಿಯಾದ ಸಾವಿತ್ರಿಗೆ ಯಮರಾಯನು ಸೋತಿದ್ದು ಆಶ್ಚರ್ಯಕರ ಸಂಗತಿಯಲ್ಲ ಎನ್ನುವ ಆಶಾಭಾವದ ನುಡಿಯೊಂದಿಗೆ, ಇಲ್ಲಿ ಯಮರಾಯನ ಸೋಲು ಹೆಣ್ಣಿನ ಆತ್ಮವಿಶ್ವಾಸದ ಮೂಲಕ ಸಾಧ್ಯ ಎಂಬ ವಿಚಾರವನ್ನು ಮಹಾಕವಿಗಳು ಪ್ರಸ್ತುತಪಡಿಸಿರುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮಹಾಕವಿಗಳ ರಂಗಯಾತ್ರೆಯಲ್ಲಿಯ ಮತ್ತೊಂದು ಪೌರಾಣಿಕ ರಂಗಕುಸುಮ ಮತ್ತು ಕಳೆದ ಶತಮಾನದಲ್ಲಿ ಅನೇಕ ವೃತ್ತಿನಾಟಕ ಕಂಪನಿಯ … Read more

ಪ್ರೇಕ್ಷಕ-ಪರಿಣಾಮ : ಮಹದೇವ ಹಡಪದ್

ಉಪದೇಶ, ಸಂದೇಶ, ನೀತಿಯನ್ನು ಹೆಳಬೇಕಾದ್ದು ಕಲೆಯ ಉದ್ಧೇಶವೆಂದೂ ಅದೇ ವಿಧಾನದಲ್ಲಿಯೇ ಪ್ರದರ್ಶನಗಳು ಆಸ್ವಾದನೆಗೆ ಸಿಕ್ಕಬೇಕೆಂದು ಬಯಸುವುದು ಸಾಮಾನ್ಯವಾಗಿ ಎಲ್ಲ ವಯೋಮಾನದ ಪ್ರೇಕ್ಷಕರಲ್ಲೂ ಇದ್ದೆ ಇರುತ್ತದೆ. ಈ ಜನಪ್ರಿಯ ಬೇಡಿಕೆಯೂ ಆಯಾ ವಯಸ್ಸಿಗನುಗುಣವಾದ ರೀತಿಯಲ್ಲಿ ವ್ಯಕ್ತಗೊಳ್ಳುತ್ತದೆ. ಹುಸಿ ಮೌಲ್ಯಗಳನ್ನ ಬಿತ್ತರಿಸುವುದನ್ನು ಪ್ರೇಕ್ಷಕ ಬಯಸುತ್ತಾನೆಂದು ರುಚಿ ಬದಲಿಸುವ ಪ್ರಯತ್ನ ಮಾಡದಿರುವುದು ತಪ್ಪು. ಕನ್ನಡದ ಚಿತ್ರರಂಗ ಚರಿತ್ರೆಯಲ್ಲಿ ಹೊಸ ಅಲೆಯ ಸಿನೆಮಾಗಳಲ್ಲಿ ಮೊತ್ತಮೊದಲಿನದು ಎಂದು ಗುರುತಿಸಲಾಗುವ “ಸಂಸ್ಕಾರ”ದ ಯಶಸ್ಸಿಗೆ ಕಾರಣರಾದ ಅದೆ ಜನ ಈಗ ಆ ಶೈಲಿಯ ಸಿನೆಮಾಗಳನ್ನು ನೋಡಲಾರರೆಂದು ಹೇಳುವುದಾದರು … Read more

ಸಾಹಸ-ಸಾವುಗಳ ನಡುವಣ ಚಾರಣ..: ಪ್ರಶಸ್ತಿ ಅಂಕಣ

  ನೀರಿದ್ದಲ್ಲೆಲ್ಲಾ ಹೋಗದಾದ್ರೆ ಹೋಗ್ಲೇಬೇಡ ಅನ್ನೋ ಅಮ್ಮ, ಹುಡುಗ್ರು.. ಏನೋ ಆಸೆ ಪಟ್ತಿದಾರೆ ಸೇಫಾಗಿ ಹೋಗ್ಬರ್ಲಿ ಬಿಡು ಅನ್ನೋ ಅಪ್ಪ, ಹುಚ್ಚುಕೋಡಿ ಮನಸು.. ಇದು ಹದಿನಾರರ ವಯಸು ಎಂಬೋ ಕವಿವಾಣಿಯ ತರಹದ ಹುಚ್ಚು ಮನಸಿನ ಸ್ವಲ್ಪ ಹೆಚ್ಚೇ ಧೈರ್ಯದ , ರೋಚಕ ಕನಸುಗಳ ಹುಡುಗರು… ಯಾವುದೇ ಚಾರಣ ಅಂದಾಗ ಈ ಮೂರು ಚಿತ್ರಗಳು ಮನಸ್ಸಿಗೆ ಬಂದೇ ಬರುತ್ತೆ. ಚಾರಣದಲ್ಲಿ ಸಾಹಸ ಮತ್ತು ಸಾವುಗಳ ನಡುವೆ ಕೂದಲೆಳೆಯ, ಕೆಲವಕ್ಷರಗಳ ವ್ಯತ್ಯಾಸವಷ್ಟೇ. ಕುಮಾರಪರ್ವತದಿಂದ ಕೊಡಚಾದ್ರಿಯವರೆಗಿನ ಚಾರಣಗಳಲ್ಲಿ, ಜಲಪಾತದ ಜಾರುಗಳಲ್ಲಿ, ನೀರ … Read more

ಜಾತಿ! :ಡಾ. ಗವಿ ಸ್ವಾಮಿ

  ನಾಗರಹೊಳೆ ಮತ್ತು ಬಂಡಿಪುರ ರಾಷ್ಟ್ರೀಯ ಉದ್ಯಾನವನಗಳ ನಡುವೆ ಓಂಕಾರ್ ರೇಂಜ್ ಎಂಬ ಅರಣ್ಯ ಇದೆ. ಅದರ ಸೆರಗಿನಲ್ಲಿ ಶಿವಕುಮಾರಪುರ ಎಂಬ ಗ್ರಾಮ ಇದೆ. ಆ ಗ್ರಾಮದ ಜನರಿಗೆ ನಿತ್ಯವೂ ಕಾಡುಪ್ರಾಣಿಗಳೊಂದಿಗೆ ಸಂಘರ್ಷ ನಡೆಸಬೇಕಾದ ಪರಿಸ್ಥಿತಿ . ಇಂಡೋ-ಪಾಕ್ ಗಡಿಗಿಂತ ಒಂದು ಕೈ ಹೆಚ್ಚು ಉದ್ವಿಗ್ನತೆಯನ್ನು ಇಲ್ಲಿ ಕಾಣಬಹುದು. ಕಾಡು ಪ್ರಾಣಿಗಳೇ ಇಲ್ಲಿ ರೈತರ ಪಾಲಿನ terrorist ಗಳು! ರೈತರಿಗೂ ಫಾರೆಸ್ಟಿನವರಿಗೂ ಇಲ್ಲಿ ನಿರಂತರ ತಿಕ್ಕಾಟ. ನಮ್ಮ ದನಗಳನ್ನು ಫಾರೆಸ್ಟಿನ  ಬೌಂಡರಿ ದಾಟಲು ಬಿಡುವುದಿಲ್ಲ; ಹಿಂದೆಲ್ಲಾ ಸಣ್ಣ ಪುಟ್ಟ ಕಟ್ಟಿಗೆ … Read more

ಕನ್ನಡಿಗರ ಬೇಜವಾಬ್ದಾರಿಯಿಂದಲ್ಲವೆ ಕನ್ನಡನಾಡು ಪರಭಾಷಿಕರಿಂದ ತುಂಬುತ್ತಿರುವುದು….? : ನಿಶಾಂತ್ ಜಿ.ಕೆ

      ಮೊನ್ನೆ ಧಾರವಾಡದಿಂದ ಬೆಂಗಳೂರಿಗೆ ಹೋಗಿದ್ದೆ ಹಾಗೆ ಕಾರ್ಯ ನಿಮಿತ್ತ ಹೋದವನು ಅಲ್ಲೆ ರಾಜರಾಜೇಶ್ವರಿ ನಗರದಲ್ಲಿರುವ ಅಕ್ಕನ ಮನೆಗೆ ಭೇಟಿ ಇತ್ತೆ, ಹೋದ ಕೂಡ್ಲೆ ಎಲ್ಲಿಲ್ಲದ ಖುಷಿಯಿಂದ ಓಡಿ ಬಂದ ಪುಟ್ಟ ಪ್ರಾರ್ಥನ ಕೈ ಹಿಡಿದು ಒಳಗೆ ಎಳೆದೊಯ್ದು ತನ್ನ ಹೊಸ ಆಟಿಕೆಗಳನ್ನ ತೋರಿಸೋಕೆ ಶುರು ಮಾಡಿದ್ಲು, ಸ್ವಲ್ಪ ಸಮಯ ವಿಶ್ರಾಂತಿ ಬಳಿಕ ಮತ್ತೆ ಅವರು ಕಟ್ಟಿಸುತ್ತಿರುವ ಹೊಸ ಮನೆ ತೋರಿಸೋಕೆ ಇಲ್ಲೆ ವಾಕಿಂಗ್ ಹೋಗೋಣ ಬಾ ಮಾಮ ಅಂತ ಕರೆದುಕೊಂಡ್ ಹೋದ್ಲು. ಹೋದ ಸ್ವಲ್ಪ … Read more

ಅರ್ಥವಾಗದವರು:ಉಮೇಶ್ ದೇಸಾಯಿ

  ವಾಸುದೇವ ಸುಳ್ಳದ ಗಲಿಬಿಲಿಗೊಂಡಿದ್ದ ಅವನ ಸ್ಥಿತಿಗೆ ಕಾರಣ ಬೆಂಗಳೂರಿನ ಗಿಜಿಗುಡುವ ಟ್ರಾಫಿಕ್ ಮಾತ್ರ ಕಾರಣವಾಗಿರದೇ ಅಂದು ಮುಂಜಾನೇ ಅವ್ವ ಮಾಡಿದ ಫೋನೂ ಕಾರಣವಾಗಿತ್ತು. ಅವ್ವ ಫೋನು ಮಾಡಿ ಅಂದು ಸಂಜೆ ಕಲ್ಯಾಣ ಕಾಕಾನಿಗೆ ಭೇಟಿಯಾಗಬೇಕೆಂದೂ ಹೆಚ್ಚಿನ ವಿಷಯ ಅವನಿಂದಲೇ ತಿಳಿಯುವುದಾಗಿ ಹೇಳಿದ್ದಳು. ವಾಸು ಕೆದಕಿ ಕೇಳಿದರೂ ಅವ್ವ ಬಾಯಿ ಬಿಟ್ಟಿರಲಿಲ್ಲ. ಮಧ್ಯಾಹ್ನ ಲಂಚ ನಲ್ಲಿ ಕಲ್ಯಾಣಕಾಕಾನ ಫೋನು ಬಂದಾಗ ವಾಸು ಅಂದಿನ ಸಂಜೆ ಭೇಟಿಯಾಗುವುದಾಗಿ ಹೇಳಿದ್ದ. ಆ ಕಾರ್ಯಕ್ರಮದ ಅನ್ವಯವೇ ಆಫೀಸಿನಿಂದ ಬೇಗನೆ ಹೊರಟವ ಕಾರ್ಪೊರೇಷನ್ … Read more

ಮೂವರ ಕವಿತೆಗಳು

  ಅಮ್ಮ ಲಾಲಿ ಜೋ  ಅಮ್ಮ ನೀನೆ ಬಂದು ನೋಡು  ಬರೆದ ನಾನು ನಿನ್ನ ಮೊಗವ  ನಾ ನಿನಗೆ ತೋರುವ ಮುನ್ನಾ  ಯಾಕೆ ಅಮ್ಮ ದೂರವಾದೆ ಇನ್ನಾ  ಪುಟ್ಟ ಕಂಗಳು ಸುತ್ತ ನೋಡಿ  ಕೇಳುತಿಹವು ನನ್ನಾ … ನೀ ಬಂದು ಲಾಲಿ ಹಾಡೆ  ಅಮ್ಮ  ಲಾಲಿ ಲಾಲಿ ಜೋ ಲಾಲಿ ಹಾಡೆ  ಅಮ್ಮ  ಲಾಲಿ ಲಾಲಿ ಜೋ ಲಾಲಿ ಹಾಡೆ  ಅಮ್ಮ    ಕಣ್ಣೆ ಇರದ ಶಿವನೆ ನೋಡು  ಕರುಳ ಬಳ್ಳಿ ಕತ್ತರಿಸಿ ಕೊಟ್ಟ ಅವಳ  ಎದೆಯ … Read more

ಮೂಕ ಪ್ರೇಮ: ಮಹಾಂತೇಶ್ ಯರಗಟ್ಟಿ

  ಕೌಸಲ್ಯ ರಾಮ ಪೂಜಾ ಸಂಧ್ಯಾ ಪ್ರವ. . . . .! ಎಂದೂ ಸುಪ್ರಭಾತ ಕಿವಿಗೆ ಕೇಳುತ್ತಲೇ ಕಣ್ಣುತೆರೆದು ಗಡಿಯಾರ ಕೈಗೆತ್ತಿಕೊಂಡು ನೋಡಿದರೆ ಬೆಳಿಗ್ಗೆ ೬.೩೦ರ ಸಮಯ ಹೊದ್ದ ಹಾಸಿಗೆಯಲ್ಲ ಬದಿಗೆ ಸರಿಸಿ ಎದ್ದು ಲೈಟ್ ಆನ್ ಮಾಡಿದರೆ ಕರೆಂಟೇ ಇಲ್ಲಾ. ರಾಜ್ಯಧಾನಿಗೂ ತಗುಲಿದ ವಿದ್ಯುತ್ ಶಾಕ್ ಹಳ್ಳಿಗಳಿಗೆ ಒಂಭತ್ತು ಘಂಟೆಗಳ ಕಾಲ ಮಾತ್ರ ವಿದ್ಯುತ್ ಎಲ್ಲೋ ದಿನ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು ಇದ್ಯಾರಪ್ಪ ಟೇಪರೆಕಾರ್ಡ್‌ರು ಅಂತಾ ಬಾಗಿಲು ತೆರೆದು ನೋಡಿದರೆ – ಗುಳಿಕೆನ್ನೆ ಹುಡುಗಿ, … Read more

ಅಮಲು ಮೋಜಿನ ಜೀವನದಲ್ಲಿ ಬದುಕಿಗೊಂದು ಸಂಕಲ್ಪ ಬೇಕು: ಪ್ರವೀಣ್ ದಾನಗೌಡ

    ಅರೆ ಉಪದೇಶಿಸುತ್ತಿರುವೆ ಎಂದುಕೊಂಡ್ರಾ, ಇಲ್ಲ ಉಪದೇಶವಲ್ಲಾ ಇದು ಒಂದು ಮಸ್ತಿ ಮಜದ ಘಟನೆ !  ಇದಕ್ಕೆ ನೀವು ಒಪ್ಪುತ್ತಿರೊ ಇಲ್ಲವೋ , ಈ ಜಗತ್ತು ಇಂದ್ರ ಲೋಕವನ್ನು ಮೀರಿದ ಸುಖ ಹಾಗೂ ಸೌಂದರ್ಯವನ್ನು ಹೊಂದಿದ ಜಗತ್ತು. ಇಲ್ಲಿ ರಂಬೆ ,ಊರ್ವಶಿ, ಮೇನಕೆಯರನ್ನು ಮೀರಿದ ರೂಪಶಿಯರು ಉಂಟು ಎಂದ ಮೇಲೆ ಈ ಜಗತ್ತು ಅಲ್ಲಿಗಿಂತಲು ಸೌಂದರ್ಯ ಪೂರಿತ ಜಗತ್ತೆ ಸರಿ, ಇನ್ನು ಅಮಲಿಗೆ ಮೋಜಿಗೆ ಸುಖಕ್ಕೆ ಇಂದ್ರನೇ ಇಲ್ಲಿಯ ಅಲ್ಕೋ ಹಾಲ್ ಬ್ರ್ಯಾಂಡ್ ಗಳನ್ನು ಆಮದು … Read more