ಪಂಜು ಚುಟುಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಸುಷ್ಮಾ ಮೂಡುಬಿದರೆ ಅವರ ಹನಿಗವಿತೆಗಳು

ಮೌನ ಮಾತಾಗದ ಹೊರತು ಕಂಬನಿಗಳ ತಡೆಯುವರಿಲ್ಲ ಮಾತು ನೀನಾಗದ ಹೊರತು ದುಮ್ಮಾನಕ್ಕೆ ಅಂತ್ಯವಿಲ್ಲ. ಹುಸಿ ನಿರೀಕ್ಷೆಗಳ  ಜೀವಂತಿಕೆ  ಜೀವಂತ ಕನಸುಗಳಿಗೇಕೆ  ಇರುವುದಿಲ್ಲ.. ?  ಅವಳಿಗೆ ಬೆನ್ನು ಮಾಡಿ  ಈತನೊಂದಿಗೆ ಹೊರಡಲು  ಅಣಿಯಾದಾಗ  ಅಮ್ಮನೆಂಬ ಅವಳ  ಕಣ್ಣಿಂದ ಉದುರಿದ್ದು  ನನ್ನೆಡೆಗಿದ್ದ ಅವಳ ಕನಸುಗಳಾ..?! ಹೆಗಲ ಮೇಲೆ ಮಗಳನ್ನು  ಅಂಬಾರಿ ಕೂರಿಸುವ  ಇವನನ್ನು ನೋಡುವಾಗ  ಮನೆಯ ಮೂಲೆಯ  ಒಂಟಿ ಚಾಪೆಯ ಮುದುಕ, ಅಪ್ಪನ ನೆನಪಾಗುತ್ತದೆ..!  ನಾ ಸಿಕ್ಕಿ ನಿನ್ನ ಕಾಡಿಸುವುದಕ್ಕಿಂತ ಸಿಗದೇ ನೀನೇ ಕಾಡಿಸಿಕ್ಕೊಳ್ಳುವುದು ಚಂದ ಅಲ್ಲವೇನೋ..?! ಕಣ್ಣೋಟಕ್ಕೆ , … Read more

ಇಕ್ಕೇರಿಯಲೊಂದು ಸುತ್ತು: ಪ್ರಶಸ್ತಿ ಪಿ.

'ಪಂಜು' ಬಳಗದವರು ಒಂದಂಕಣ ಬರೀತೀರಾ ಅಂದಾಗ ಒಂಥರಾ ಆಶ್ಚರ್ಯ!  ನಾನೂ ಅಂಕಣ ಬರೀಬೋದಾ ಅಂತ. ಪ್ರಯತ್ನ ಮಾಡಿ ನೋಡಿ ಅಂತ ಮತ್ತೆ ಕಾಲ್ ಮಾಡಿದ್ರು. ಸರಿ ನೋಡೋಣ ಅಂದರೂ ಮತ್ತೆ ಬಂದ ಯೋಚನೆ ಒಂದೇ, ಏನು ಬರ್ಯೋದು ?! ಮುಂಚೆಯಿಂದಲೂ ನಮ್ಮ ಗೆಳೆಯರ ಗುಂಪಿಗೆ 'ಕಾಲಿಗೆ ಚಕ್ರ ಕಟ್ಕೊಂಡೋರಾ ನೀವು' ಅಂತನೇ ತಮಾಷೆ ಮಾಡ್ತಿದ್ರು ಉಳ್ದವ್ರು. ಹಾಗಾಗಿ ಅದ್ನೇ ಯಾಕೆ ಬರೀಬಾದ್ರು ಅನುಸ್ತು. ಇನ್ನು ಹೆಚ್ಗೆ ಮಾತಾಡೋ ಬದ್ಲು ನನ್ನ ಕಾಲಿನ ಚಕ್ರ ನಿಮ್ಗೇ ಕೊಡ್ತೀನಿ. ಬನ್ನಿ, … Read more

ಹೀಗೋರ್ವ ಹಸಿರು ಸ್ವಾಮೀಜಿ:ಪ್ರಸಾದ್ ಎಸ್

  ಒಂದು ಸಮೃದ್ದವಾದ ಅರಣ್ಯವನ್ನು ನಾಶ ಮಾಡಲು ಮಾನವನಿಗೆ ಕೇವಲ ಕೆಲವು ಸಮಯ ಸಾಕು. ಆದರೆ ಒಂದು ಸಮೃದ್ದವಾದ ಅರಣ್ಯ ಬೆಳೆಸುವುದು ಒಂದು ಸಾಧನೆಯೇ ಸರಿ, ಅದಕ್ಕೆ ದಶಕಗಳೇ ಬೇಕು. ಅರಣ್ಯವನ್ನು ಬೆಳೆಸುವುದು ಸುಲಭದ ಮಾತಲ್ಲ. ಅದಕ್ಕೆ ಅಗಾಧವಾದ ಪರಿಶ್ರಮ ಬೇಕು, ಸುಮ್ಮನೆ ಒಂದಷ್ಟು ಜಾಗದಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟು ಬಂದರೆ ಅರಣ್ಯ ಬೆಳೆಯುವುದಿಲ್ಲ.ಅದನ್ನು ಸರಿಯಾಗಿ ಪೋಷಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ .ಈ ಕೆಲಸವನ್ನು ನಮ್ಮ ಸ್ವಾಮೀಜಿ ಅತ್ಯಂತ ಶೃದ್ದೆಯಿಂದ ಮಾಡಿದ್ದಾರೆ. ಆದ್ದರಿಂದಲೇ ಇಂದು ಶಿವನಹಳ್ಳಿಯಲ್ಲಿ ಸಮೃದ್ದವಾದ ನೂರಾರು … Read more

ಎರೆಡು ಕವಿತೆಗಳು:ಅನುರಾಧ ಸಾಮಗ ಹಾಗೂ ಪ್ರೇಮಾಶ್ರೀ

  ಕಣ್ಣೀರಿಗೂ, ಎದೆಯ ಆರ್ದ್ರತೆಗೂ ಒಪ್ಪಿಗೆ ಮುದ್ರೆಯ ಪ್ರಮಾಣ ಪತ್ರವೇ?! ಅವು ತಮ್ಮ ಸಾಬೀತು ಪಡಿಸಬೇಕೇ?.. ಸ್ಪಂದನಕಿಲ್ಲಿ ಜಾತಿಯಗ್ನಿಪರೀಕ್ಷೆಯ ಪಾಡು ನಿಜಭಾವಕೆ ಬಂಜೆಯ ಹೆರಿಗೆಬೇನೆಯ ಪಟ್ಟ   ರಕ್ತಮಾಂಸಗಳೊಂದೇ, ದೇಹಗೂಡೊಂದೇ ವಾಸವಲ್ಲಿ ನೂರಾರು ಹಕ್ಕಿಯಂಥ ಭಾವಗಳಿಗೆ. ಬಣ್ಣ, ಗಾತ್ರ, ಕೂಗಷ್ಟೇ ಬೇರೆಬೇರೆ, ಹಾರಾಟ ಜನ್ಮಸಿದ್ಧಹಕ್ಕು ಹಕ್ಕಿ ಜನ್ಮಕೆ. ನೀ-ನಾನೆಂಬ ನಿರ್ಬಂಧವಿಲ್ಲದ ಸ್ವಚ್ಛಂದ ಚಲನೆ.   ಶೋಷಣೆಗೆದುರು ನಿಂತವರೇ, ಘೋಷಣೆ, ಬಾವುಟದಾಸರೆಯಿರದಲ್ಲೂ, ಯಾವ ಜೀವ-ಬಂಧುವಿನದಾದರೂ, ಹಸಿವೆ-ದಾರಿದ್ರ್ಯಕೆ, ದಮನ-ಅಸಮಾನತೆಗೆ ಸಾವು-ನೋವಿಗೆ ಒಳಗಿಲ್ಲೆಡೆ ಕರಗುತದೆ.. ಅನ್ಯಾಯಕೆ ಒಳಗೆಲ್ಲೆಡೆ ಮರುಗುತದೆ, ದಬ್ಬಾಳಿಕೆಗೆ ಒಳಗೆಲ್ಲೆಡೆ … Read more

ಅಮೊರೆಸ್ ಪೆರ್ರೋಸ್:ವಾಸುಕಿ ರಾಘವನ್

  "ಅಮೊರೆಸ್ ಪೆರ್ರೋಸ್". ನಾನು ನೋಡಿದ ಮೊದಲ ಆಂಗ್ಲೇತರ ವಿಶ್ವಚಿತ್ರಗಳಲ್ಲಿ ಒಂದು. ಚಿತ್ರದ ಮೊದಲ ದೃಶ್ಯವೇ ಒಂದು ಟೆನ್ಸ್ ಕಾರ್ ಚೇಸ್. ಐದು ನಿಮಿಷದೊಳಗೆ ಒಂದು ಭೀಕರ ಕಾರ್ ಅಪಘಾತ ಆಗುತ್ತೆ. ಇದರಿಂದ ಮೂರು ಜನರ ಬದುಕಿನಲ್ಲಿ ಊಹಿಸಲಾಗದ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಈ ಮೂರು ಜನರ ಬದುಕು ಅಪಘಾತದ ಮುನ್ನ ಹೇಗಿರುತ್ತೆ, ಹೇಗೆ ಮೂರೂ ಜನರು ಅದೇ ಜಾಗದಲ್ಲಿ, ಅದೇ ಸಮಯದಲ್ಲಿ ಬರುವಂತೆ ಆಗುತ್ತೆ ಹಾಗೂ ಅಪಘಾತದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಈ … Read more

ಯಶಸ್ಸಿನ ಬೆನ್ನು ಹತ್ತಿ:ಪ್ರಸಾದ್ ಕೆ.

  ರಿಚರ್ಡ್ ಬ್ರಾನ್‌ಸನ್! ಈ ಶತಮಾನದ ಓರ್ವ ಯಶಸ್ವಿ ಉದ್ಯಮಿ, ಲೇಖಕ, ಸಾಹಸಿ ಮತ್ತು ವರ್ಜಿನ್ ಸಮೂಹ ಸಂಸ್ಥೆಗಳ ಅಧ್ಯಕ್ಷ. ವಿಶ್ವದಾದ್ಯಂತ ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳ ಮಾಲೀಕ. ಸಂಗೀತ, ಏರ್ ಲೈನ್ಸ್, ಮೊಬೈಲ್ಸ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂಧಬಾಹುಗಳನ್ನು ವರ್ಜಿನ್ ಸಮೂಹ ಸಂಸ್ಥೆಗಳು ಹಬ್ಬಿಕೊಂಡಿವೆ. ಇವರ ಆತ್ಮಕಥೆ ’ಲೂಸಿಂಗ್ ಮೈ ವರ್ಜಿನಿಟಿ’ ಜಗತ್ತಿನಾದ್ಯಂತ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬಿಕರಿಯಾದ ಬಹುಚರ್ಚಿತ ಕೃತಿ. ರಿಚರ್ಡ್ ತನ್ನ ಜೀವನದಲ್ಲಿ ಅನುಭವಗಳಿಂದ ಕಲಿತ ಪಾಠಗಳನ್ನು ’ಸ್ಕ್ರ್ಯೂ … Read more

ಗಿಫ್ಟ್ ಶಾಪ್ ನಲ್ಲೊಂದು ದಿನ: ಸಂತೋಷ್ ಕುಮಾರ್ ಎಲ್.ಎಮ್.

ಪ್ರಪಂಚ ಓಡುತ್ತಿದೆ ಅನ್ನುವ ಭ್ರಮೆಯಲ್ಲಿ ನಾವು! ಪ್ರಪಂಚವೇನೂ ಓಡುತ್ತಿಲ್ಲ, ಅದು ಇದ್ದಲ್ಲೇ ಇದೆ. ಆದರೆ ಮನುಷ್ಯನೆಂಬೋ ಈ ಮನುಷ್ಯ ಮಾಮೂಲಿ ಜೀವನವನ್ನು ಸುಖಾಸುಮ್ಮನೆ ಓಡಿಸುತ್ತಿದ್ದಾನೆ ಎನ್ನುವುದು ತಿಳಿದವರ ಮಾತು. ಅದೇನೇ ಇರಲಿ ಈ ಓಡುತ್ತಿರುವ ಜೀವನದ ಮಧ್ಯೆ ಅದೆಷ್ಟೋ ಮುಗ್ಧರು, ಬಡವರು, ಅಸಹಾಯಕ ಪುಟಾಣಿಗಳು ನಮ್ಮ ಕಾಲಿಗೆ ಎಡವಿದರೂ ನಮಗೆ ಗೊತ್ತೇ ಇಲ್ಲದವರಂತೆ ಮುಂದೆ ಹೋಗುತ್ತಿರುತ್ತೇವೆ. ನಮ್ಮ ಪಕ್ಕದಲ್ಲೇ ರಸ್ತೆಯಲ್ಲಿ ಅಪಘಾತವಾಗಿ ನಮ್ಮ ಅಪ್ಪನ ವಯಸ್ಸಿನ ವ್ಯಕ್ತಿಯೊಬ್ಬ ಬಿದ್ದು ಹೊರಳಾಡುತ್ತಿದ್ದರೆ ಆತನ ಕಡೆಗೆ ಕಣ್ಣಾಯಿಸಿಯೂ ನೋಡದೆ ಆಫೀಸಿನತ್ತ … Read more

ತುಮುಲಗಳು ತೀರಿ ಹೋದ ಹೊತ್ತು:ಎಚ್.ಕೆ.ಶರತ್

    ತುಮುಲಗಳು ತೀರಿ ಹೋದ ಹೊತ್ತು… ಭಾವುಕ ಕನ್ನಡಿ ಚೂರಾಯ್ತು. ಮನಸ್ಸು ಮೋಡ ಕವಿದ ಸಂಜೆಯಷ್ಟೇ ನೀರವ. ದೂರದಲ್ಲೆಲ್ಲೋ ಮಳೆ ಹನಿಗಳ ಕಲರವ. ಬರ ಬರಬಾರದಿತ್ತು ಭಾವುಕತೆಗೆ. ಸುಖಾಸುಮ್ಮನೆ ಅಳುವುದರಲ್ಲೂ ಒಂದು ಸುಖ. ಅಕಾರಣವಾಗಿ ನಗೆ ಚೆಲ್ಲಿದಾಗಲೂ ಇಣುಕುವ ದುಃಖ… ಬದುಕು ಕಳೆಗುಂದದಿರಲು ಕಣ್ಣಂಚಲ್ಲಿ ಒಂದಷ್ಟು ನೀರು ಶೇಖರಿಸಿಟ್ಟುಕೊಳ್ಳುವ ಜಾಣ್ಮೆ ಮೊದಲೇ ಮೈಗೂಡಬೇಕಿತ್ತು. ಎರಡು ಬದಿಯ ಮೌನ ಮಾತಾಡುವಷ್ಟು, ಒಂದು ಬದಿಯ ಕದನ ಪದ ಕಕ್ಕಲಾರದು. ಮೌನವಿರಬೇಕಿತ್ತು ಇಬ್ಬರ ನಡುವೆ… ನಮ್ಮಿಬ್ಬರಿಗೂ ಇಷ್ಟವಾದ ಮಾತನಾಡುವ ಸಲುವಾಗಿಯಾದರೂ! … Read more