ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ (ಭಾಗ-೨):ರುಕ್ಮಿಣಿ ಎನ್.

ಆ ತೆಗ್ಗಿಮನಿ ಸಿದ್ದಕ್ಕನ್ ಹೆಸರ ಎತ್ತುಗೊಡ್ದ, ದೂರ್ನಿಂದ ಅಕಿ ಬರುದ್ ಕಾಣ್ತ್. ಬರಿಮೈ ಮುಕ್ಳಿ ಹುಡುಗನ್ ಬಗಲಾಗ ಕುಂದ್ರಸ್ಕೊಂಡ್, ಹುಡುಗನ ಚಡ್ಡಿ ಸೊಂಟದಾಗ ತುರ್ಕೊಂಡ್, ಇನ್ನೊಂದ್ ಕಡೆ ಹುಡ್ಗಿ ಕೈ ಹಿಡದ್ ದರಾ-ದರಾ ಎಳ್ಕೋತ್ ಬರಾಕತ್ತಿದ್ಳು. ಅಕೀ ಆ ಕೂಸಿನ್ ಕೈ ಎಳಿಯು ಕಡ್ತಕ್ಕ, ಹುಡುಗಿದ್ ರಟ್ಟಿ ನೂಸ್ತಿತ್ತ್ ಯಾಂಬಾಲ್(ಯಾರಿಗೆ ಗೊತ್ತು). ಒಂದ್ ಸವ್ನಿ ರೊಂಯ್ ಅಂತ ಅಳಾಕತ್ತಿತ್ ಹುಡುಗಿ.  ಕಣ್ಣಾಗೀನ್ ನೀರ್ ಕಪಾಳಕ್ಕ್ ಬಂದ್ರ, ಮೂಗನ್ಯಾಗಿನ್ ಸುಂಬಳ್ ಬಾಯಾಗ್ ಇಳ್ಯಾಕತ್ತಿತ್. ದೊಡ್ಡ್  ಗಾಡ್ಯಾಗ್ ಹತ್ತಾಕ್ ಏನರ … Read more

ಮಹಿಳೆ ಮತ್ತು ಸಂಗೀತ: ಅನುರಾಧ ಸಾಮಗ

  ಗೇಯತೆಗೊಳಪಡುವ ಕವನವೊಂದು ಗೀತೆಯಾಗುತ್ತದೆ. ಗೇಯತೆ ಆ ರಚನೆ ಬಿಂಬಿಸುವ ಭಾವವನ್ನು ತೀವ್ರಗೊಳಿಸುತ್ತದೆ. ಆ ಗೀತೆ ಸ್ವರ-ಲಯ, ರಾಗ-ತಾಳಗಳೆಂಬ ನಿರ್ದಿಷ್ಟತೆಗೊಳಪಟ್ಟಾಗ ಅದು ಸಂಗೀತವಾಗುತ್ತದೆ. ಇದು ಭಾವ ಬಿಂಬಿಸುವುದರೊಂದಿಗೆ, ಕೆಲವು ಕಟ್ಟುನಿಟ್ಟಿನ ನಿಯಮಗಳಿಗೊಳಪಡುವ ಶಿಸ್ತಿನೊಡನೆ ಪಾಂಡಿತ್ಯಪೂರ್ಣವೆನಿಸುತ್ತದೆ. ಮನುಷ್ಯ ಹುಟ್ಟಿನಿಂದಲೇ ಭಾವಜೀವಿ.  ಆದಿಮಾನವನ ಕಾಲದಿಂದಲೂ ಮಾತು ಎನ್ನುವುದು ಸಂಜ್ಞೆಗಳ ಮುಂದುವರಿಕೆಯಾಗಿ ಹುಟ್ಟಿದರೆ, ಹಾಡು ಅದೇ ಮಾತಿನ ಮುಂದುವರಿಕೆಯಾಗಿ ಆಂಗಿಕಸಂಜ್ಞೆಗಳು ಕುಣಿತವಾದಾಗ ಅದಕ್ಕೆ ಪೂರಕವಾಗಿ ಹುಟ್ಟಿರುವುದಾಗಿದೆ. ಬಹುಶಃ ಹಾಡು ಮತ್ತು ಕುಣಿತ ದಿನದ ಬೇಟೆಯೇ ಮೊದಲಾದ ಜೀವನೋಪಾಯದ ಕೆಲಸಗಳ ದಣಿವನ್ನು ಕಡಿಮೆಯಾಗಿಸುವ … Read more

ಪಕ್ಷಾಂತರ ಮತ್ತು ಪೂಜಾಯಣ:ವಿಜಯ್ ಹೆರಗು

  ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು..   ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀ ಫ್ಯಾನ್ ಹಿಡ್ಕಂಡು ನೇತಾಡ್ತಾ ಅವಳಂತೆ.!!?? ಕೆಂಚ : ಅಯ್ಯೋ ಬುಡ್ಲಾ ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. … Read more

ಕವನಗಳು:ಪೂರ್ಣಿಮಾ ಹಾಗೂ ಹಿಪ್ಪರಗಿ ಸಿದ್ದರಾಮ್

  ಆಸ್ಪತ್ರೆಯಲ್ಲಿ ಅಮ್ಮ ಖಾಯಿಲೆಯಾದಾಗ ತುತ್ತು ತಿನ್ನಿಸಿದ್ದವಳಿಗೆ ಏಕೋ ತೃಪ್ತಿಯಾಗಲಿಲ್ಲ, ತನ್ನ ಅಮ್ಮ ಚಂದ್ರನ ತೋರಿಸಿ ತಿನಿಸಿದ್ದ ತುತ್ತುಗಳ ನೆನಪಾಗಿ …   ಹತ್ತು ಕಥೆ ಹೇಳು ಎಂದು ಅಜ್ಜನ ಕೈ ಜಗ್ಗಿದಾಗ, ಕೈ ಹಿಡಿದು ಹಳ್ಳಿಯೆಲ್ಲ ಹೆಜ್ಜೆ ಹಾಕಿಸಿದ ಕಣ್ಣ ಮುಂದೆ ನೂರು ಕಥೆಗಳು ಸರಿದಾಡಿದವು…   ಪುಟ್ಟ ಮನೆಯನ್ನು ಹಿಗ್ಗಿಸಲು ತಾನೆ ಬೆಳೆಸಿದ ಅಂಗಳದಲ್ಲಿನ ಮರಗಳನ್ನು ಕೆಡವಿದ, ಅದೊಂದು ದಿನ ತಣ್ಣನೆಯ ವಾತಾವರಣ ಹುಡುಕುತ್ತ ಹೊರಟವನು ಬೇರೆಯವರು ಬೆಳಸಿದ್ದ ಮರಗಿಡಗಳ ಪಾರ್ಕಿನಲ್ಲಿ ಕುಳಿತ…   … Read more

ಕಥಾಸಂಗಮ:ವಾಸುಕಿ ರಾಘವನ್

ಪುಟ್ಟಣ್ಣ ಕಣಗಾಲ್ ಒಬ್ಬ ದೈತ್ಯ ಪ್ರತಿಭೆ. ನಿರ್ದೇಶಕನ ಸ್ಥಾನಕ್ಕೆ ಸಿಗಬೇಕಾದ ಮಾನ್ಯತೆ ತಂದುಕೊಟ್ಟವರು. ಸಾಮಾನ್ಯವಾಗಿ ಹೀರೋಗಳಿಂದ ಚಿತ್ರಗಳನ್ನು ಗುರುತಿಸುವ ವಾಡಿಕೆ ನಮ್ಮಲ್ಲಿ. ಆದರೆ “ಎಡಕಲ್ಲು ಗುಡ್ಡದ ಮೇಲೆ” ಚಂದ್ರಶೇಖರ್ ಪಿಚ್ಚರ್ ಅಂತ ಆಗಲೀ, “ಮಾನಸ ಸರೋವರ” ಶ್ರೀನಾಥ್ ಪಿಚ್ಚರ್ ಅಂತಾಗ್ಲೀ ಯಾರೂ ಹೇಳಲ್ಲ. ಅವೆಲ್ಲ ಗುರುತಿಸಿಕೊಳ್ಳೋದು ಪುಟ್ಟಣ್ಣ ಅವರ ಫಿಲಂಗಳು ಅಂತಲೇ! ಪುಟ್ಟಣ್ಣ ಅವರ ಅತ್ಯುತ್ತಮ ಚಿತ್ರಗಳು ಅನ್ನೋ ವಿಷಯ ಬಂದಾಗ ಸಾಕ್ಷಾತ್ಕಾರ, ಗೆಜ್ಜೆ ಪೂಜೆ, ಶರಪಂಜರ, ರಂಗನಾಯಕಿ, ನಾಗರಹಾವು, ಶುಭಮಂಗಳ, ಮಾನಸಸರೋವರ – ಇವು ಸಾಮಾನ್ಯವಾಗಿ … Read more

ಸಂಜಯಂತಿಯಲ್ಲೊಂದು ಸುತ್ತು:ಪ್ರಶಸ್ತಿ ಪಿ

  ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ.ಮೀ ಅಂತ. ಅರೆ! ಬನವಾಸಿ ಇಷ್ಟು ಹತ್ರವಾ.. ಹಾಗಾದ್ರೆ ಇವತ್ತು ಅಲ್ಲಿಗೆ ಹೋಗೇ ಊರಿಗೆ ಮರಳ್ಬೇಕು ಅಂದ್ಕೊಂಡೆ. ಆದ್ರೆ  ಮದುವೆ ಊಟ ಮುಗಿಸಿದ ಮೇಲೆ ಸೀದಾ ಸಾಗರದ ಬಸ್ಸು ಹತ್ತಿದ್ದಾಯ್ತು, ಬನವಾಸಿ ಮಿಸ್ಸಾಯ್ತು. ಆದರೆ ಸಿಗಬೇಕೆಂದಿದ್ದದ್ದು ಸಿಕ್ಕೇ ಸಿಗುತ್ತೆ ಅಂತಾರೆ ಹಲವರು. … Read more

ಉಪದ್ವ್ಯಾಪಿ:ಉಮೇಶ್ ದೇಸಾಯಿ

  ಹುಬ್ಬಳ್ಳಿಯಿಂದ ಬಿಟ್ಟ ರಾಜಹಂಸ ಹರಿಹರಕ್ಕ ಬಂದಾಗ ಲೇಟಾಗಿತ್ತು. ಸೀಟ್ ನಂ೭ರಲ್ಲಿ ಕುಳಿತ ನಮ್ಮ ನಾಯಕನಿಗೆ ಎಚ್ಚರವಾಗಿದ್ದು ಅಲ್ಲಿ ಹತ್ತಿದ ಪ್ರಯಾಣಿಕ ಕಂಡಕ್ಟರ್ ಜೋಡಿ ವಾದಕ್ಕಿಳಿದಾಗ. ಪ್ರಯಾಣಿಕ ಮುಂಗಡ ಟಿಕೆಟ್ ಮಾಡಿಸಿದ್ದ. ಯಶವಂತಪುರದಾಗ ಮುಂದ ಹೋಗಲಿಕ್ಕೆ  ಗಾಡಿ ಹಿಡಿಯುವನಿದ್ದ. ಬಸ್ಸು ಹರಿಹರಕ್ಕ ಮುಟ್ಟಿದ್ದು ಒಂದು ತಾಸು ತಡಾ. ಇದು ಅವನ ಕ್ಷೋಭೆಗೆ ಕಾರಣ. ಆ ಪಯಣಿಗನ ಜೋಡಿ ಹೆಂಡತಿ,ಎರಡು ಮಕ್ಕಳು ಇದ್ರು. ಅಕಿನೂ ಚಾಲಕ/ನಿರ್ವಾಹಕರಿಗೆ ಮಂಗಳಾರತಿ ಎತ್ತಿದ್ಲು. ಬಸ್ಸು ಹುಬ್ಬಳ್ಳಿ ಹತ್ತಿರದ ವರೂರ ಹತ್ರ ಊಟಕ್ಕ ನಿಲ್ಸಿದ್ದು … Read more