ಪಂಜು ಚುಟುಕ ಸ್ಪರ್ಧೆ

ಪಂಜು ಅಂತರ್ಜಾಲ ವಾರಪತ್ರಿಕೆ ಮತ್ತು ಪಂಜು ಪ್ರಕಾಶನದ ವತಿಯಿಂದ ಚುಟುಕ ಸ್ಪರ್ಧೆಗೆ ನಿಮ್ಮ ಚುಟುಕಗಳನ್ನು ಆಹ್ವಾನಿಸಲಾಗಿದೆ. ಒಬ್ಬರು ಕನಿಷ್ಠ 25 ಚುಟುಕಗಳನ್ನು ಕಳುಹಿಸಬೇಕು (ಗರಿಷ್ಠ ಮಿತಿ 30). ಚುಟುಕಗಳು ಸ್ವಂತ ರಚನೆಗಳಾಗಿರಬೇಕು. ಚುಟುಕಗಳನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com   ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಚುಟುಕ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮಿಂಚಂಚೆ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ.. ಚುಟುಕಗಳು ತಲುಪಬೇಕಾದ ಕೊನೆಯ … Read more

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ

    ಕ್ಲಬ್ಬಿನಲಿ ಕವಿದ ಮಬ್ಬು ಬೆಳಕಿನ ಮುಸುಕಿನಲ್ಲಿ ಉನ್ಮಾದದ ಝಲಕು ಮೂಲೆಯಲಿ ಒತ್ತಿ ನಿಂತವರ ಸುತ್ತ ಸೆಂಟಿನ ಘಾಟು ಬಣ್ಣ ಬಣ್ಣದ ಶೀಷೆಗಳಲ್ಲಿ ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ ಬೆಳಕೂ ಕಪ್ಪಿಟ್ಟಿದೆ…   ರಾತ್ರಿ ಪಾಳಿಯ ಬಡ ದೇಹಕ್ಕೂ ದುಬಾರಿ ಸಿಗರೇಟೇ ಬೇಕು ಸುಡಲು ನಗರ ವ್ಯಾಮೋಹದ ಕಿಡಿಯಲ್ಲಿ ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು ಇಲ್ಲ ಶಹರದಲಿ ತಾರೆಗಳ ಹೊಳಪು ಇರುಳೆಲ್ಲ ಕೃತಕ ದೀಪಗಳ ಬಿಳುಪು ನುಗ್ಗಿ ಬರುವ ಪತಂಗಗಳ ಜೀವ ಭಾವ – … Read more

ತಂತ್ರ: ರಾಘವೇಂದ್ರ ತೆಕ್ಕಾರ್

  ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ. ಏನು? ಎಂದಿದ್ದೆ. ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ. ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ. ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ. ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು … Read more

ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್

  ಒಂದು ಹಾಡನ್ನ ಹೀಗೇ ಅಂತ ವಿಂಗಡಿಸೋದು ತುಂಬಾ ಕಷ್ಟ. ಒಬ್ಬರಿಗೆ ಮಜಾ ಕೊಡುವ ಹಾಡು ಇನ್ನೊಬ್ಬರಿಗೆ ಅತಿರೇಕ ಅನ್ನಿಸಬಹುದು. ಒಬ್ಬರ ‘ತುಂಟ’ ಹಾಡು ಇನ್ನೊಬ್ಬರಿಗೆ ಅಶ್ಲೀಲ ಅಥವಾ ‘ಪೋಲಿ ಹಾಡು’ ಅನ್ನಿಸಬಹುದು. ನನಗೆ ಈ ‘ತುಂಟ’ ಹಾಡುಗಳು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗಿವೆ – ಆಯ್ದುಕೊಂಡಿರುವ ವಿಷಯಗಳು, ವಿಷಯವನ್ನು ಹೇಳಿರುವ ರೀತಿ, ಪದಗಳಲ್ಲಿ ಪನ್ ಮಾಡಿರುವುದು, ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಸಾಲುಗಳು ಅಥವಾ “ಹೀಗೂ ಉಂಟೇ” ಅನ್ನುವಂಥ ಅಸಂಬದ್ಧತೆ! ಇಲ್ಲಿದೆ ನೋಡಿ ನನ್ನ ಅಚ್ಚುಮೆಚ್ಚಿನ … Read more

ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್

  "ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?"  ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೋ  ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. … Read more

ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ.

  ದನಿಯಾಗದ ಹನಿಗಳು  ೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ  ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ  ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…!     ೨. ದುಃಖ ಸತ್ಯಗಳು  ನನ್ನ ನೋಡಿ  ನಗುತಿದೆ; ದುಃಖ ಮರೆಯಲು  ನಾನೂ..!     ೩. 'ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?'  ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ. 'ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!'   ಉತ್ತರಿಸಿತು ಕಣ್ಣು.     ೪. ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ  ಮರದ … Read more

ನನ್ನೊಳಗಿನ ಗುಜರಾತ್ (ಭಾಗ 8): ಚಿನ್ಮಯ್ ಮಠಪತಿ

ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯದ ಹಸ್ತಗಳು ದೊಡ್ಡವು ಅಂತೆ. ನಿಜ ! ಆವತ್ತು ಹಿಂದೆ ಮುಂದೆ ನೋಡದೆಯೇ ಸಮಯಕ್ಕೆ ಗಮನ ಕೊಡದೇ, ಮೆಹಸಾನಾದಿಂದ ಗಾಂಧಿ ನಗರಕ್ಕೆ ಪ್ರಯಾಣ ಬೆಳೆಸಿದ್ದೆ. ಯಾವದೋ ಕೆಲಸದ ಮೇಲೆ  ಮೆಹಸಾನಾ ನಗರಕ್ಕೆ ಹೋಗಿದ್ದ ನಾನು, ಅಲ್ಲಿಂದ ಬಿಡುವಾಗ ಸಮಯ ಸರಿಯಾಗಿ ಏಳು ಗಂಟೆಯಾಗಿತ್ತು. ಸೀದಾ ಗಾಂಧಿ ನಗರಕ್ಕೆ ಬಸ್ಸು ಇರದ ಕಾರಣ ಹಿಮ್ಮತ್ತ ನಗರದವರೆಗೆ ಹೋಗುವ ಬಸ್ಸು ಹಿಡಿದು ಪ್ರಯಾಣ ಬೆಳೆಸಿದೆ. ದಿನವಿಡೀ ಉರಿ ಬಿಸಿಲಲ್ಲಿ ಸುತ್ತಾಡಿ ತುಂಬ ಸುಸ್ತಾಗಿದ್ದೆ. ಅಲ್ಲಿಂದ ಬಸ್ಸು ಹೊರಟ … Read more

ಕೊಂಕು….ಕೊಂಚ ಕಚಗುಳಿಗೆ !: ಸಂತೋಷ್ ಕುಮಾರ್ ಎಲ್ ಎಮ್

  ಕೆಲ ಸುದ್ದಿಗಳು ಟಿವಿಯಲ್ಲಿ ಬಂದಾಗ ಒಮ್ಮೊಮ್ಮೆ ನಾವು ಹೀಗೆ ಮಾತಾಡಿಕೊಳ್ಳುವುದುಂಟು. ಇದು ಆ ಕ್ಷಣದಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆ. ಕೇವಲ ಹಾಸ್ಯದ ದೃಷ್ಟಿಯಿಂದಷ್ಟೇ ಈ "ಕೊಂಕು" ಬರಹ. ಯಾವುದೇ ಕೊಂಕನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿಸಿಕೊಳ್ಳುತ್ತಾ… ಸುದ್ದಿ: ಕೇವಲ ಜನಸೇವೆ ಸಾಕು, ನನಗೆ ಅಧಿಕಾರ ಬೇಡ- ಯೆಡ್ಡಿ ಕೊಂಕು: ಸುಮ್ನಿರಿ ಸಾರ್, ಜನರಿಗೆ ಆಸೆ ತೋರಿಸಬೇಡಿ!! ಸುದ್ದಿ: ಲಾರಿ ಮಗುಚಿ, ತುಂಬಿದ್ದ ನ್ಯೂಸ್ ಪೇಪರ್ ಗಳೆಲ್ಲ ಚೆಲ್ಲಾಪಿಲ್ಲಿ ಕೊಂಕು: ನಾಳೆ ಈ ಸುದ್ದಿ ಜನಗಳಿಗೆ ಹೇಗೆ ತಲುಪುತ್ತೆ … Read more

ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು

  ನಾಲ್ಕು ಗೋಡೆಗಳು ನಾಲ್ಕು ಮೂಲೆಗಳು ಜೇಡರಬಲೆಯೊಳಗಿಂದ ನುಗ್ಗಿದ್ದ ಧೂಳು, ನನ್ನ ಮುಖದ ಮೇಲೊಷ್ಟು ನೋವ ಮುಚ್ಚುವ ಕತ್ತಲು, ಹಿಡಿ ಸುಣ್ಣದ ಪುಡಿ ತೂರಿದಂತೆ ಬೆಳಕು, ಸುತ್ತಲೂ   ನನ್ನನ್ನೇ ದುರುಗುಟ್ಟುತಿದ್ದ ನೆರಳುಗಳೇ ಮೆಲ್ಲಗೆ ಮೂರ್ನಾಲ್ಕು ಬಾರಿ ಪಿಸುನುಡಿದಂತೆ ಧೂಳ ಕಣಗಳ ನಡುವೆ "ಸತ್ತರೆ ಮಣ್ಣ ಸೇರುತ್ತಾನೆ ಕೊಳೆಯದಿದ್ದರೆ ಕೊಳ್ಳಿ ಇಡುವ ಬೂದಿಯಾಗಲಿ ಮೂಳೆ"   ಬಾಗಿಲ ಕಿಂಡಿಯಲ್ಲಿ ತೂರಿ ಬಂದ ತಂಡಿ ಗಾಳಿ ಎದೆಯ ಬೆವರ ಬೆನ್ನ ನೇವರಿಸಿದ ಸಾಂತ್ವಾನ, ಜೊಲ್ಲು ಇಳಿಸುತ್ತಾ ಅಡಗಿದ್ದ ಜೇಡರ … Read more

ವಾರಕೊಮ್ಮೆ ಯಶವಂತಪುರ ಸಂತೆ: ಶಿವು ಕೆ.

                   ಇತ್ತೀಚೆಗೆ ತೇಜಸ್ವಿಯವರ "ಸಂತೆ" ಕಥೆ ಓದಿದಾಗ ನನಗೂ ಸಂತೆಗೆ ಹೋಗಬೇಕೆನಿಸಿತ್ತು.  ನನ್ನ ಮಡದಿ ಪ್ರತಿ ಭಾನುವಾರ  ಸಂಜೆ  ಯಶವಂತಪುರ ಸಂತೆಗೆ ತರಕಾರಿ ಹಣ್ಣು ಹೂಗಳನ್ನು ತರಲು ಹೋಗುತ್ತಿದ್ದಳು.  ಹೋಗುವ ಮೊದಲು ನಾನು ಜೊತೆಯಲ್ಲಿ ಬರಬೇಕೆಂದು ತಾಕೀತು ಮಾಡುತ್ತಿದ್ದಳು.  ಮೊದಮೊದಲು ಅವಳು ಕರೆದಾಗ ನಾನು ಉತ್ಸಾಹದಿಂದ ಹೋಗುತ್ತಿದ್ದೆನಾದರೂ ಅಲ್ಲಿ ಆಗಾಗ ಆಗುವ ಕೆಲವು ಬೇಸರದ ಅನುಭವಗಳು ನೆನಪಾಗಿ,  ನನಗೆ ಬ್ಲಾಗು, ಫೋಟೊಗ್ರಫಿ ಇತ್ಯಾದಿ ಕೆಲಸಗಳಿದೆಯೆಂದು ತಪ್ಪಿಸಿಕೊಳ್ಳುತ್ತಿದೆ. … Read more

ವಿಪರ್ಯಾಸ: ಬದರಿನಾಥ ಪಲವಳ್ಳಿ

  ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ. ಯಜಮಾನರು ತೀರಿಕೊಂಡ ಮೇಲೆ ನಾನು ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ. ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು … Read more

ಡಾ. ಅನಸೂಯಾದೇವಿಯವರ ಕೃತಿ “ಪ್ರಕೃತಿ ಮತ್ತು ಪ್ರೀತಿ”: ಹನಿಯೂರು ಚಂದ್ರೇಗೌಡ

  ಕೃತಿ ವಿವರ: ಪುಸ್ತಕದ ಹೆಸರು        : ಪ್ರಕೃತಿ ಮತ್ತು ಪ್ರೀತಿ- ವೈಚಾರಿಕ ಲೇಖನಗಳ ಸಂಗ್ರಹ ಲೇಖಕಿ                    : ಡಾ.ಅನಸೂಯಾ ದೇವಿ ಬೆಲೆ                        :  ೩೫೦ ರೂ. ಪ್ರಕಾಶನ ಸಂಸ್ಥೆ         : ದೇಸಿ ಪುಸ್ತಕ, ವಿಜಯನಗರ, ಬೆಂ.-೪೦ ಪ್ರಕಟಣೆ … Read more

ಶಾಂತಿ ನಿವಾಸ: ರುಕ್ಮಿಣಿ ಎನ್.

ಎಷ್ಟೋ ದಿನಗಳಿಂದ ತೆರೆದುಕೊಂಡಿದ್ದ ಮನೆ-ಕಿಟಕಿ ಬಾಗಿಲುಗಳು ತೆರೆದುಕೊಂಡತೆಯೇ ಇದ್ದವು. ರಭಸವಾಗಿ ಬಿದ್ದ ಮಳೆಗೆ ಮಣ್ಣಿನ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಕಿಟಕಿ ಬಾಗಿಲುಗಳಲ್ಲಿ ಜೇಡರ ಮಹಾರಾಯ ಸುಖಾಂತವಾಗಿ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ಮನೆ ತುಂಬಾ ಮುತ್ತಿಗೆ ಎಂಬಂತೆ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದ್ದ. ಮನೆಯ ಪಕ್ಕದಲ್ಲಿ ಇದ್ದ ಬೇವಿನ ಮರದ ಫಲ-ಪುಷ್ಪಗಳು ಮನೆಯ ಮೆಟ್ಟಿಲುಗಳನ್ನು ಶೃಂಗರಿಸಿದ್ದವು. ಸಂಜೆಯಾಗುತ್ತಿದ್ದಂತೆ ಕಟ್ಟೆಗೆ ಕೂತು ಹರಟುತ್ತಿದ್ದ ವಯೋವೃದ್ದರ ಬಾಯಲ್ಲಿ ಎದುರಿನಲ್ಲಿದ್ದ ಹಾಳು ಬಿದ್ದ  ಮನೆಯ ಕತೆಯೇ ವಿಷಯ ವಸ್ತುವಾಗಿರುತ್ತಿತ್ತು. ಆ ಮನೆಯ … Read more